ಪುಟ:Mysore-University-Encyclopaedia-Vol-4-Part-1.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಾಕ

ಎತ್ತರು ಸು.೧೯೨೭ ಮೀ.ಇದು ರಾಜ್ಯದ ಅತ್ಯಂತ ಎತ್ತರದ ಶಿಖರ.ಕುದುರೆಮುಖ (೧೮೯೨ ಮೀ),ಕೊಡಚಾದ್ರಿ (೧೩೪೪ ಮೀ),ಪುಷ್ಪಗಿರಿ (೧೭೩೧ ಮೀ), ದತ್ತಗಿರಿ (೧೮೯೫ ಮೀ) ಮತ್ತು ಕಲ್ಹತ್ತಗಿರಿ (೧೮೭೭ ಮೀ)- ಇವು ಇತರ ಶಿಖರಗಳು.
  ಸಹ್ಯಾದ್ರಿಯ ಪೂರ್ವಭಾಗಕ್ಕಿಂತ ಪಶ್ಚಿಮಭಾಗ ಹೆಚ್ಛು ಕಡಿದಾದ ಶಿಲಾಮುಖ ಭೂಯಿಷ್ಠವೂ ಆದದ್ದು. ಸಹ್ಯಾದ್ರಿಯ ಎರಡು ಬದಿಗಳಲ್ಲೂ ಅಡಲಾಗಿ ಹಬ್ಬಿದ ಬೆಟ್ಟದಸಾಲುಗಳಿವೆ. ಪಶ್ಚಿಮಸಾಲು ಕ್ರಮಬದ್ದವಗಿಲ್ಲ. ಪಶ್ಚಿಮಘಟ್ಟ್ಗಳು ಕಡಿದಾಗಿದ್ದರೂ ಇವುಗಳು ನಡುವೆ ಇರುವ ಕಣಿವೆ ಮಾರ್ಗಗಳು ಕರ್ನಟಕದ ಪೂರ್ವ ಪಶ್ಚಿಮ ಭಾಗಗಳ ನಡುವಣ ಸಂಪರ್ಕಮಾಧ್ಯಮವಗಿ, ರಾಜ್ಯದ ಸಾಂಸ್ಕೃತಿಕ ಬೆಳೆವಣಿಗೆಗೆ ಸಾಧಕವಾಗಿವೆ ಯೆನ್ನಬಹುದು. ಉತ್ತ್ರ ಕರ್ನಾಟಕದ ಕೊಲ್ಲೂರ್ ಘಾಟಿ, ಶಿವಮೊಗ್ಗ - ಉಡುಪಿಗಳ ನಡುವೆ ಇರುವ ಆಗುಂಬೆ ಘಾಟಿ, ಚಿಕ್ಕಮಗಳೂರು-ಮಂಗಳೂರುಗಳ ನಡುವೆ ಚಾರ್ಮುಡಿ ಘಾಟಿ ಇವು ಪ್ರಮುಖವಾದವು.

ಪಶ್ಚಿಮದಿಂದ ಪೂರ್ವದ ಕಡೆಗೆ ಇಳಿಜಾರಾಗಿರುವ ಪ್ರಸ್ಥಭೂಮಿಯ ಪೂರ್ವದಂಚಿನಲ್ಲಿ, ಈಶಾನ್ಯ ದಿಕ್ಕಿನಿಂದ ನೈಋತ್ಯಾಭಿಮುಖವಾಗಿ ಹಬ್ಬಿ, ನೀಲಗಿರಿಯಲ್ಲಿ ಪಸ್ಚಿಮ ಘಟ್ಟಗಳೊಂದಿಗೆ ಸಂಗಮಿಸುವ ಪೂರ್ವಘಟ್ಟಗಳು ಸಹ್ಯಾದ್ರಿ ಶ್ರೇಣಿಗಳಿಗಿಂತ ತಗ್ಗು, ಕೋಲಾರದಲ್ಲಷ್ಟೇ ಪ್ರದಾನವಾಗಿ ಎದ್ದು ನಿಂತಿರುವ ಈ ಶ್ರೇಣಿಗಳು ಒಟ್ಟಿನಲ್ಲಿ ಪ್ರಸ್ತಭೂಮಿಯ ತಲ್ಲಮಟ್ಟಕ್ಕಿಂತ ಹೆಚ್ಚು ಎತ್ತರವಾಗೇನೂ ಇಲ್ಲ. ಇವುಗಳಂತೂ ಧಾರವಾಡ ಶಿಲಾವರ್ಗದ ರಚನೆ. ಉದ್ದ ಏಣಿನ ಬಂಡೆಗಲ್ಲುಗಳು ಇಲ್ಲಿಯ ವೈಶಿಷ್ಟ್ಯ.

೨. ಮೈದಾನ: ಪೂರ್ವ ಪಸ್ಚಿಮ ಘಟ್ಟಗಳ ನಡವಣ ದಿಣ್ಣೆ ನೆಲವನ್ನು ಮೈದಾನವೆಂದು ವ್ಯವಹರಿಸುವುದು ವಾಡಿಕೆಯಾಗಿದೆ. ತುಂಗಭದ್ರೆಯ ಉತ್ತರಕ್ಕಿರುವ ಪ್ರದೇಶ ಕಪ್ಪುಮಣ್ಣಿನಿಂದ ಕೂಡಿದ. ಅಲ್ಲಲ್ಲಿ ಮರಗಳನ್ನೊಳಗೊಂಡ, ಏಕಪ್ರಕಾರವಾಗಿ ಹಬ್ಬಿರುವ ದಿಣ್ಣೆನೆಲದಂತೆ ಕಾಣುತ್ತದೆ. ಆದರೆ ಈ ಪ್ರದೇಶದಲ್ಲೂ ಭೌತಿಕವಾಗಿ ಭಿನ್ನತೆಗಳಿಲ್ಲ. ಉತ್ತರ ಮೈದಾನದ ಮೂರನೆಯರಡು ಭಾಗ ಸು. 610 ಮೀ ಎತ್ತರವುಂಟು. ನಗ್ನೀಕೃತ ಬೆಟ್ಟಸಾಲುಗಳು ಅಗಲವೂ ಚಪ್ಪಟೆಯೂ ಆದ ಕಣಿವೆಗಳೂ ನದಿವನಗಳು ಇದನ್ನು ಅಲ್ಲಲ್ಲಿ ವಿಭಾಗಿಸಿವೆ.

ಕೃಷ್ಣಾ, ಭೀಮಾ ಮತ್ತು ತುಂಗಭದ್ರ ನದ್ಗಳು ಉದ್ದಕ್ಕೂ ಅಚೀಚೆ ಕನಿಷ್ಟ 16 ಕಿಮೀ ಅಗಲಕ್ಕಿರುವ ನೆಲಪಟ್ಟಿಗಳು ಉಳಿದ ನೆಲಕ್ಕಿಂತ ತಗ್ಗು. ಇವು ಪೂರ್ವದಲ್ಲಿ 365-400ಮೀ ಎತ್ತರ್ದ ವಿಸ್ತಾರವಾದ ಬಯಲಿನಲ್ಲಿ ಸಮಾವೇಶಗೊಳ್ಳುತ್ತವೆ. ಪೂರ್ವಭಾಗದ ಈ ನೆಲ ಅಲ್ಲಲ್ಲಿ ತಟ್ಟನೆ ಕೆಳಕ್ಕೆ ಇಳಿದಿದೆ. ಕಿಲೋಮೀಟರ್ ಗಳಷ್ಟು ಹಬ್ಬಿರುವ ಇಂಥ ಇಳುಕಲುಗಳು ಅಂಚಿನ ಬಂಡೆಗಳು ಯುಗಯುಗಗಳಿಂದ ಮಳೆಗಾಳಿಗೆ ಮೈಯ್ಯೊಡ್ಡಿ ಬೆತ್ತಲೆಯಾಗಿ ನಿಂತಿವೆ. ತುಂಗಭದ್ರೆಗೆ ಉತ್ತರದ ಪ್ರದೇಶದಲ್ಲಿರುವ ಪಾರ್ಯಾಯದ್ವೀಪೀಯ ನೈಸ್ ಶಿಲಾಪದರಗಳಿಗೂ ಇವುಗಳು ನಡುನಡುವೆ ದಕ್ಷಿಣೋತ್ತರವಾಗಿ ಹಬ್ಬಿದ ಬಿನ್ನಸ್ತರಗಳ ಧಾರವಾಡ ಶಿಲೆಗಳಿಗೂ ಮೆತ್ತಿಕೊಂಡಂತೆ ಉತ್ತರದಲ್ಲಿ ಕಡಪ ಕರ್ನೂಲು ಮಾದರಿಯ ಮರಳು ಕಲ್ಲು, ಸುಣ್ಣ ಕಲ್ಲು ಮತ್ತು ಬರುದೆ ಕಲ್ಲುಗಳು ಅಖಂಡ ಪಟ್ಟಿಯೊಂದು ಹಬ್ಬಿದೆ. ರಾಜ್ಯದ ಉತ್ತರದಂಚಿನಲ್ಲಿರುವ ಪ್ರದೇಶ ಜ್ವಾಲಾಮುಖಿಯ ಕಪ್ಪುಶಿಲೆಯಿಂದಲೂ ಘನೀಕೃತ ಶಿಲಾಪ್ರವಾಹಗಳಿಂದಲೂ ಕೂಡಿದೆಯೆನ್ನಬಹುದು.

ದಕ್ಷಿಣ ಮೈದಾನ ಉತ್ತರದ್ದಕ್ಕಿಂತ ಭಿನ್ನ, ಉತ್ತರದ್ದಕ್ಕಿಂತ ಹೆಚ್ಚು ಎತ್ತರ. ಇದರ ರಚನೆ ಗ್ರನೈಟ್ ಮತ್ತು ಶಿಲಾಭಾಗಗಳಿಂದ ಕೂಡಿರುವುದರಿಂದ ಭೂಪ್ರದೇಶ ಹೆಚ್ಚು ವೈವಿದ್ಯಪೂರಿತ. ಊ ಆಕಾರದ ಉಬ್ಬು ನೆಲದಿಂದೊಳಗೂಡಿದಂತೆ ಇದರ ಲಕ್ಷಣ. ಈ ಅಕ್ಷರದ ಪಸ್ಚಿಮದ ಪದ ಮಲೆನಾಡಿನ ಪೂರ್ವತುದಿಯಲ್ಲಿ ಊರಿದಂತಿದೆ. ಅಲ್ಲಿ ಇದರ ಎತ್ತರ 915-975 ಮೀ ಬಿಳಿಗಿರಿರಂಗನ ಬೆಟ್ಟ(1497ಮೀ), ಗೋಪಲಸ್ವಾಮಿ ಬೆಟ್ಟ (1455ಮೀ), ಶಿವಗಂಗ (1387ಮೀ) ಸಾವನದುರ್ಗ