ಪುಟ:Mysore-University-Encyclopaedia-Vol-4-Part-1.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಪ್ರದೇಶದಲ್ಲಿ ಧಾರವಾಡ ಶಿಲಾ ಸರಣಿಯಿಂದ ಕೂಡಿದ, ಅಲ್ಲಲ್ಲಿ ಗ್ರಾನೈಟ್ ಭೂಯಿಷ್ಟವಾದ ಸಮಾಂತರ ಶ್ರೇಣಿಗಳುಂಟು.ಇವು ಅಲ್ಲಲ್ಲಿ ಮುರಿದಿವೆ.ಚಿಕ್ಕನಾಯಕಹಳ್ಲಿಯ ಬಳಿಯಿಂದ ದಾವಣಗೆರೆಯನ್ನು ಹಾದು,ಉತ್ತರ ಮೈದಾನ ಪ್ರದೇಶದಲ್ಲಿ ಮುಂಡರಗಿರಿಯ ಬಳಿಯ ಡಂಬಳ ಬೆಟ್ಟಗಳವರೆಗೆ ಹರಿದಿರುವುದು ಒಂದು ಶ್ರೇಣಿ.ಇದರ ಪಶ್ಚಿಮಕ್ಕೆ ೪೮-೫೬ ಕಿಮೀ ದೂರದಲ್ಲಿ ಹಬ್ಬಿರುವ ಶ್ರೇಣಿ ಹೆಚ್ಛು ಸಂಕೀಣ್ರ.ಇದು ಕೃಷ್ಣರಾಜಪೇಟೆಯ ಬಳಿಯಿಂದ ವಾಯವ್ಯ ದಿಕ್ಕಿನಲ್ಲಿ ಹೊರಟು ಹೊನ್ನಾಳಿಯನ್ನು ದಾಟಿ ಹಬ್ಬಿದೆ.ಈ ಎರಡು ಶ್ರೇಣಿಗಳಲ್ಲೂ ಅನೇಕ ಖನಿಜಗಳುಂಟು.ಎವೆರೆಡರ ನಡುವಣ ನೆಲವನ್ನು ದಕ್ಷಿಣ ಮೈದಾನದ ಉಪಪ್ರದೇಶವೆನ್ನಬಹುದು.ಎಲ್ಲಿಯ ಬೇಸಾಯ ವಿಶಿಷ್ಟವಾದದ್ದು(ತೆಂಗು ಒಂದು ಮುಖ್ಯ ಬೆಳೆ).ದಕ್ಷಿಣ ಮೈದಾನದ ಪೂರ್ವಭಾಗ ಜಗಲಿಯಂತಿದ್ದು ೯೧೫ ಮೀ ಎತ್ತರಕ್ಕೆ ಏರೀದೆ.ಬೆಂಗಳೂರಿನ ಸನಿಯದ ಈ ನೆಲದ ಉತ್ತರದ ಏಣು ಹೆಚ್ಛು ಎತ್ತರ.ಗುಡಿಬಂಡೆಯ ಬಳಿಯಿಂದ ಚಿಕ್ಕಬಳ್ಳಾಪುರದವರೆಗೆ ಹಬ್ಬಿರುವ ಬೆಟ್ಟಗಳಲ್ಲಿ ನಂದಿಬೆಟ್ಟವೂ ಒಂದು.ಈ ಶ್ರೇಣಿಯಿಂದ ಪಶ್ಚಿಮಾಭಿಮುಖವಾಗಿ ಸು.೨೪ ಕಿಮೀ ದೂರ ಸಾಗುವ ಬೆಟ್ಟಸಾಲು ಮೊದಲಿನವಕ್ಕಿಂತ ಕುಳ್ಳು ಬಾಗೆಪಲ್ಲಿಯ ಪೂರ್ವದೆಡೆಯಿಂದ ಬಂಗಾರಪೇಟೆಯವರೆಗೆ ಎನ್ನೊಂದು ಶ್ರೇಣಿ ಹಬ್ಬಿದೆ.ಇಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಬರಡು ಬೆಟ್ಟಗಳುಂಟು.ನಂದಿ ಬೆಟ್ಟದಿಂದ ಉತ್ತರದ ನೆಲ ಥಟ್ಟನೆ ಇಳಿಜಾರಾಗಿ ಸಾಗಿ ಪೆನ್ನಾರ್ ನದಿಯ ಬಳಿ ಎತ್ತರ ೭೦೦-೭೬೦ ಮೀ ಆಗಿದೆ.

  ದಕ್ಷಿಣ ಮೈದಾನದ್ದು ಪ್ರಧಾನವಾಗಿ ಕೆಂಪು ಮಣ್ಣಿನಿಂದ ಕೂಡಿದ ನೆಲ.ಕೆಲವು ಕಡೆಗಳಲ್ಲಿ ಮುಖ್ಯವಾಗಿ ೯೧೫ ಮೀ ಎತ್ತರದಲ್ಲಿ ನೆಲ ಕಬ್ಬಿಣಭರಿತವಾಗಿದೆ.ಭೂಸವೆತದಿಂದಾಗಿ ಬಂಡೆಗಳ ಮಣ್ಣಿನ ಹೊದಿಕೆ ಕಳೆದುಹೂಗೀ ನೆಲ ಬರಡಾಗಿದೆ.ಉಳಿದ ಕಡೆಯ ನೆಲ ಕೂಡ ಅರಣ್ಯವರ್ಜನದ ಪರಿಣಮವಾಗಿಯು ಶತಶತಮಾನಗಳ ಬೇಸಾಯದ ಫಲವಾಗಿಯೂ ತಮ್ಮ ಸಾರವಷ್ಟನ್ನೋ ಕಳೆದುಕೊಂಡಿವೆ.ಹೊಸದಾಗಿ ಬೇಸಾಯಕ್ಕೆ ತಂದ ನೆಲದ ಮಣ್ಣು ಕಪ್ಪಾಗಿರುತ್ತದೆ.ಆದರೆ ಕ್ರಮೇಣ ಅದೂ ಸಾರ ಕಳೆದುಕೊಂಡು ಅಕ್ಕಪಕ್ಕದ ನೆಲದ ಮಣ್ಣಿನಂತೆಯೇ ಪರಿಣಮಿಸಬಹುದು.ಹೊಸ ನೆಲದ ಕಪ್ಪಿಗೆ ಸುಟ್ಟ ಬೇರಿನ ಕರುಕೇ ಕಾರಣವೆಂದು ಕೆಲವರ ಅಭಿಪ್ರಾಯ.ಕಣಿವೆಗಳಲ್ಲಿಯ ನೆಲ ಆಳವಾದ ಸಾರಭೂತ ಮಣ್ಣಿನಿಂದ ಕೂಡಿದ್ದಾಗಿದೆ.
  ೩.ಕರಾವಳಿ:ಸಹ್ಯಾದ್ರಿ ಏಣಿನಿಂದ ಕಡಲ ತಡಿಯವರೆಗು ಇರುವುದು ಕರಾವಳಿ ಎನಿಸುತ್ತದೆ.ಸಹ್ಯಾದ್ರಿಯಿಂದ ಅಡ್ಡ ಹಾಯ್ದಿರುವ ಬೆಟ್ಟಗಳು ಮತ್ತು ಲ್ಯಾಟರೈಟ್ ಸಮಾವಿಷ್ಟ ಪ್ರಸ್ಥಭೂಮಿಗಳಿಂದಾಗಿ ಈ ಪ್ರದೇಶದಲ್ಲಿ ಭಿನ್ನತೆಗಳೇರ್ಪಟ್ಟಿವೆ.ಮರಳು ಗುಡ್ದ್ದೆಗಳಿಂದ್ದ ಕೂಡಿದ ಕಡಲಂಚು.ತೆಂಗು,ಗೇರು,ಹಚ್ಚಹಸುರಿನ ಬತ್ತದಗದ್ದೆ;ಇವಕ್ಕೆ ಹಿನ್ನಲೆಯಾಗಿ ಪಶ್ಚಿಮಕ್ಕೆ ಅರಣ್ಯಾಚ್ಛಾದಿತ ಘಟ್ಟ ಸೋಪಾನ-ಇದು ಈ ಪ್ರದೇಶದ ಸಮಾನ್ಯ ದೃಶ್ಯ.ಈ ಪ್ರದೇಶದ ಉತ್ತರ ಭಾಗವನ್ನು(ಉತ್ತರ ಕನ್ನಡ)ಮಲೆನಾಡೆಂದು ಪರಿಗಣಿಸುವುದೂ ಉಂಟು.ಕಾರವಾರದ ಪೂರ್ವಕ್ಕೂ ದಕ್ಷಿಣಕ್ಕುಇರುವ ಸುಮಾರು ೬೦೦ ಮೀ ಎತ್ತರದ ಪ್ರಸ್ಥಭೂಮಿ ಪ್ರದೇಶ ಸಮುದ್ರದ ಸನಿಯದವರೆಗೂ ಚಾಚಿಕೊಂಡಿದೆ.ಆದರೆ ಇದು ಅಖಂಡವಾಗಿಲ್ಲ.ಅಲ್ಲಲ್ಲಿ ಅಗಲ ಕಣಿವೆಗಳು ಇದನ್ನು ವಿಭಜಿಸುತ್ತವೆ.ಶಂಕುವಿನಂಥ ಬೆಟ್ಟಗಳು ಮಾತ್ರ ೬೦೦ ಮೀ ಎತ್ತರವಿವೆಯೆನ್ನಬಹುದು.
  ಬೈಂದೂರಿನ ಉತ್ತರಕ್ಕೆ ಕಡಲಕರೆಯ ಮೈದಾನ ವಾಸ್ತವವಾಗಿ ಬಲು ಕಿರಿದು;ಅಲ್ಲಲ್ಲಿ ನದೀ ಅಳಿವೆಗಳ ಆಚೀಚೇ ಉದ್ದುದ್ದನೆಯ ಪಟ್ಟೆಗಳಂತೆ ಕಾಣುತ್ತದೆ.ಬೈಂದೂರಿನಿಂದ ಮಂಗಳೂರಿನವರೆಗೆ ಇದರ ಅಗಲ ಸ್ವಲ್ಪ ಹೆಚ್ಚು;೧೩-೧೬ ಕಿಮೀ ಗಳಷ್ಟು ವಿಸ್ತರಿಸಿದೆ.ಅಲ್ಲಲ್ಲಿ ಸು ೬೦ ಮೀ ಎತ್ತರದ ಲ್ಯಾಟೆರೈಟಿಕ್ ಜಗಲಿಗಳನ್ನು ಕೊರೆದಿರುವ ಅಳಿವೆಗಳನ್ನೂ ೧೬ ಕಿಮೀ ಹಬ್ಬಿರುವ ಮರಳಗುಡ್ಡೆಗಳನ್ನೂ ಕಾಣಬಹುದು.ಕೆಲವು ಅಳಿವೆಗಳು ಕಡಲಿಪ್ಪು ನೀರಿನ ಸರೋವರಗಳಂತಿದ್ದು ಕೇರಳದ ಸನ್ನಿವೇಶವನ್ನು ಹೋಲುವುದೂ ಉಂಟು.
  ಕಡಲ ಮಟ್ಟದ ಈ ನೆಲದ ಪೂರ್ವದ ಬದಿಗೆ ಕುಂದಾಪುರದಿಂದ ಮಂಗಳೂರಿನ ದಕ್ಷಿಣದಂಚಿನವರೆಗೆ೧೫-೨೫ ಕಿಮೀ ಅಗಲವೂ,೬೦-೯೦ ಮೀ ಎತ್ತರವೂ ಇರುವ ತಗ್ಗಿನ ಪ್ರಸ್ಥಭೂಮಿಯನ್ನು ಕಾಣಬಹುದು.ಕೆಲವೆಡೆಗಳಲ್ಲಿ ಇದರ ಕಡಿದಾದ ಬಂಡೆಗಳು ಕಡಲವರೆಗೂ ಚಾಚಿರುವುದೂ ನೇತ್ರಾವತಿಯಂಥ ಮುಖ್ಯ ನದಿಕಣಿವೆಗಳಿರುವೆಡೆಯಲ್ಲಿ ಈ ನೆಲ ಪಶ್ಚಿಮದ ಕಡೆಗೆ ಹೆಚ್ಛಾಗಿ ಹಬ್ಬಿರುವುದೂ ಉಂಟು.ಈ ಪ್ರಸ್ಥಭೂಮಿಯ ಪ್ರದೇಶ ಅಷ್ಟೇನು