ಪುಟ:Mysore-University-Encyclopaedia-Vol-4-Part-1.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ನಾಟಕ

ಮಟ್ಟಿಗೆ ಇವು ಇಲ್ಲಿ ಪ್ರಧಾನವಾಗಿಲ್ಲ. ಕೆಲವು ಕಡೆಗಳಲ್ಲಿ ಜೋಳ ಮುಖ್ಯ ಧಾನ್ಯ; ಮತ್ತೆ ಕೆಲವೆಡೆಗಳಲ್ಲಿ ಸಜ್ಜೆ ಮುಖ್ಯ. ಅಲೆಲ್ಲ ರಾಗಿ, ಬತ್ತಗಳನ್ನೂ ಬೆಳೆಯುವುದುಂಟು. ದಕ್ಷಿಣ ಮೈದಾನದ ಉತ್ತರಾಧ೯ದಲ್ಲಿ ಉತ್ತರ ಮೈದಾನದ ಬೆಳೆಗಳು ಮುಖ್ಯ. ಆರಸಿಕರೆ, ಪಾವಗಡ, ಬಾಗೆಪಲ್ಲಿ ಮತ್ತು ಉತ್ತರದ ತಾಲ್ಲೂಕುಗಳಲ್ಲಿ ಜೋಳವು, ಹೊಸದುಗ೯, ಶಿಡ್ಲಘಟ್ಟ, ಚಿಂತಾಮಣಿಗಳಲ್ಲೂ ಅದಕ್ಕೆ ಉತ್ತರದಲ್ಲೂ ಸಜ್ಜೆಯೂ, ಹೊಸದುಗ೯-ಚಳ್ಳಕರೆ-ಪಾವಗಡಗಳ ನೇರಕ್ಕೂ ಉತ್ತರಕ್ಕೂ ಹತ್ತಿಯ ಬೆಳೆಯುತ್ತವೆ. ಇವು ಕಡಿಮೆ ಮಳೆಯ ಪ್ರದೇಶಗಳು.ನೈಋತ್ಯದಲ್ಲಿ ಜೋಳ,ಹತ್ತಿ,ಹೊಗೆಸೊಪ್ಪು ಬೆಳೆಯುವ ಅಖಂಡ ಪ್ರದೇಶ ಇಲ್ಲಿಯಷ್ಟು ವಿಸ್ತಾರವಾಗಿ ಕರ್ನಾಟಕದಲ್ಲಿ ಬೇರೆಲ್ಲೂ ಇಲ್ಲ. ಉತ್ತರ ವಾಯವ್ಯದಿಂದ ದಕ್ಷಿಣ ಆಗ್ನೇಯದವರೆಗೆ ಎರಡು ಮುಖ್ಯ ವೃಕ್ಷಬೆಳೆಗಳ ಪ್ರದೇಶದಳು ಕಾಣಬಹುದು. ಕಡೂರು ಹೊಸದುಗ೯ಗಳಿಂದ ಚನ್ನಪಟ್ಟಣ ಮದ್ದೂರುಗಳವರೆಗೆ ಈ ಪ್ರದೇಶ ವ್ಯಾಪಿಸಿದ್ದು.ಚಿಕ್ಕನಾಯಕನಹಳ್ಳಿಯಿಂದ ದಾವಣಗೆರೆಯವರೆಗೂ ಕೃಷ್ಣರಾಜಪೇಟೆಯಿಂದ ಹೊನ್ನಾಳಿಯವರೆಗೂ ಹಬ್ಬಿರುವ ಬೆಟ್ಟ ಶ್ರೇಣಿಗಳನ್ನೊಳಗೊಂಡಿದೆ. ಇಲ್ಲಿ ತೆಂಗು ಬೆಳೆಯುತ್ತದೆ.ಇದಕ್ಕೆ ಹೊಂದಿಕೊಂಡಂರೆ, ಸ್ವಲ್ಪ ಪೂವ೯ಕ್ಕೆ, ಅಡಕೆಯೂ ಬೆಳೆಯುತ್ತದೆ. ಇದರ ದಕ್ಷಿಣ ಪಾಶ್ವ೯ದಲ್ಲಿ ಗುಂಡ್ಲುಪೇಟೆ ಚಾಮರಾಜನಗರಗಳವರೆಗೆ ಇರುವ ಪ್ರದೇಶದಲ್ಲಿ ಬಾಳೆ ತೋಟಗಳಿವೆ.ಮಂಡ್ಯದ ಬಳಿ ಕಬ್ಬು ಗೌರಿಬಿದನೂರಿನ ಬಳಿ ಮತ್ತು ಶ್ರೀನಿವಾಸಪುರ ಮುಳಬಾಗಿಲುಗಳಲ್ಲಿ ಏತ ಮತ್ತು ಮಿದ್ಯುತ್ ಪಂಪು ಬಾವಿ ನೀರಾವರಿಯಿಂದ ಕಬ್ಬು ಮತ್ತು ಹೊಗೆಸೊಪ್ಪು ಶಿಡ್ಲಘಟ್ಟ ಮತ್ತು ಮಾಗಡಿಯಿಂದ ಕನಕಪುರ ಮತ್ತು ಕೊಳ್ಳೆಗಾಲದವರೆಗಿನ ಪ್ರದೇಶದಲ್ಲಿ ಹಿಪ್ಪುನೇರಳೆಯೂ ದಕ್ಷಿಣ ಮೈದಾನದ ಪೂವ೯ಭಾಗದಲ್ಲಿ ಹಣ್ಣು ತರಕಾರಿಗಳೂ ಬೆಳೆಯುತ್ತವೆ.

ದಕ್ಷಿಣ ಮೈದಾನದ ದಕ್ಷಿಣ, ಮಧ್ಯ ಮತ್ತು ಪೂವ೯ಭಾಗಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಉಳಿದ ಭಾಗಗಳಲ್ಲಿರುವುದಕ್ಕಿಂತ ಹೆಚ್ಚು. ಕೆರೆ ಪ್ರದೇಶದಲ್ಲಿ ದನಗಳ ಮೇವಿಗೆ ಅನುಕೂಲವಾದ ಸ್ಥಳ ಹೆಚ್ಚಾಗಿದೆ. ಹಸು,ಎಮ್ಮೆ, ಕುರಿ ಮತ್ತು ಆಡು ಮುಖ್ಯ. ಉತ್ತರಾಧ೯ದ ಕಪ್ಪು ಮಣ್ಣಿನ ಪ್ರದೇಶದಲ್ಲಿ ಕುರಿ ಕಡಿಮೆ. ಕೊಳ್ಳೆಗಾಲ ಪ್ರದೇಶದಲ್ಲಿ ಕುರಿ ಆಡುಗಳಿಗಿಂತ ದನ ಹೆಚ್ಚು. ಕೋಲಾರದ ಕಡೆ ಕಂಬಳಿ ನೇಯ್ಗೆ ಒಂದು ಮುಖ್ಯ ಕಸಬು.ರಾಗಿ-ಬತ್ತ ಬೆಳೆಯುವ ಪ್ರದೇಶದಲ್ಲಿ ಕೋಳಿ ಸಾಕಣೆಯೂ ಹೆಚ್ಚು.

ತೆಂಗು ಬೆಳೆಯುವ ಪ್ರದೇಶದಲ್ಲೂ ವಿಶ್ವೇಶ್ವರಯ ನಾಲೆಯ ಬಳಿಯಲ್ಲೂ ಕಾವೇರಿ ಕಣಿವೆಯಲ್ಲೂ ವ್ಯವಸಾಯವಲಂಬಿತ ಜನರ ಸಂಖ್ಯೆ ಹೆಚ್ಚು(ಶೇ.84-91)ನಂಜನಗೂಡಿನ ಬಳಿಯೂ ಅಧಿಕ.ಬೆಂಗಳೂರು ಮತ್ತು ಕೋಲಾರ ಚ್ನಿನದಗಣಿ ಪ್ರದೇಶದಲ್ಲೂ ಚಿತ್ರದುಗ೯, ದಾವಣಗೆರೆ,ಚನ್ನಪಟ್ಟಣ-ಈ ಪ್ರದೇಶದಲ್ಲೂ ಮೈಸೂರು ನಗರದಲ್ಲೂ ಬೆಳೆದಿರುವ ಕೈಗಾರಿಕೆಗಳಿಂದಾಗಿ ವ್ಯವಸಾಯಾವಲಂಬಿ ಜನರ ಪ್ರಮಾಣ ಕಡಿಮೆ.

                          ಕರ್ನಾಟಕದ ಕೃಷಿಗೆ ಸಂಬಂಧಿಸಿದ ಕೆಲವಿವರ, 2004-05

ವೆವರ ಕ್ಷೇತ್ರ(೦೦೦ ಹೆ.)

ಭೂ ವಿಸ್ತೀಣ೯ 19049.8 ಕಾಡು 3070.3 ವ್ಯೆವಸಾಯೇತರ ಭೂಮಿ 1331.6 ಕೃಷಿ ಯೋಗ್ಯವಲ್ಲರ ಭೂಮಿ 788.0 ಖಾಯಂ ಗೋಮಾಳ ಇತ್ಯಾದಿ 952.2 ವಿವಿಧ ವೃಕ್ಷಾವೃತ ಭೂಮಿ 304.7 ಕೃಷಿ ಯೋಗ್ಯ ಬರಡು ನೆಲ 421.2 ಪಾಳು ಭೂಮಿ 2344.0 ಬಿತ್ತನೆಯ ಪ್ರದೇಶ 9837.6 ಒಂದಕ್ಕಿಂತ ಹೆಚ್ಚು ಬಿತ್ತನೆಯ ಪ್ರದೇಶ 1674.2 ನಿವ್ವಳ ನೀರಾವರಿ ಪ್ರದೇಶ 2450.4

                 ತೋಟಗಾರಿಕೆ ಬೆಳೆಗಳ ವಿಸ್ತೀಣ೯ ಮತ್ತು ಉತ್ಪಾದನೆ,2004-05

ಬೆಳೆ ವಿಸ್ತೀಣ೯ ಉತ್ಪನ್ನ

                            (ಹೆಕ್ಟೇರು)                   (ಟನ್ನುಗಳು)

ಹಣ್ಣುಗಳು 260,733 416,4611 ತರಕಾರಿಗಳು 377,374 665,4105 ಸಾಂಬಾರು ಬೆಳೆ 244,501 496,933 ತೋಟದ ಬೆಳೆ 625,693 334,005 ವಾಣಿಜ್ಯ ಪುಷ್ಪಗಳು 20890 156,584 ಔಷಧೀಯಗಿಡಗಳು 381 4525 ಸುಗಂಧಿಕ ಗಿಡಗಳು 665 9144

 ಕನಾ೯ಟಕದ ಪ್ರಮುಖ ಬೆಳೆಗಳ ವಿಸ್ತೀಣ೯ ಮತ್ತು ಉತ್ಪನ್ನ, 2004-05

ಬೆಳೆ ವಿಸ್ತೀಣ೯ ಉತ್ಪನ್ನ

                         (೦೦೦ ಹೆಕ್ಟೇರು)                       (೦೦೦ ಟನ್ನು)

ಆಹಾಧಾನ್ಯಗಳು ಬತ್ತ 1,308.2 5,556.5 ಜೋಳ 1,662.8 1,358.6 ಸಜ್ಜೆ 444.7 266.1 ಮುಸುಕಿನ ಜೋಳ 850.4 2,509.3 ರಾಗಿ 892.8 1,613.9 ತೃಣ ಧಾನ್ಯಬೆಳೆ 58.4 30.6 ಗೋದಿ 242.0 206.3 ಒಟ್ಟು ಏಕದಳ ಧಾನ್ಯ 5459.2 9,691.1 ಕಡಲೆ 418.1 230.9 ತೊಗರಿ 562.1 291.1 ಇತರ ದ್ವಿದಳ ಬೆಳೆ 108.7 384.6 ಒಟ್ಟು ದ್ನಿವಳಧಾನ್ಯ ಬೆಳೆ 2,108.0 799.9 ಎಣ್ಣೆ ಬೀಜಗಳು ನೆಲಗಡಲೆ 968.6 684.1 ಸೂಯ೯ಕಾಂತಿ 1135.5 436.8 ಹರಳು 17.3 15.7 ಹುಚ್ಚೆಳ್ಳು 27.4 5.2 ಎಳ್ಳು 58.5 25.9 ಕುಸುಬೆ 98.6 42.3 ಸಾಸಿವೆ,ರೇಷ್ ಬೀಜ 6.1 1.7 ಅಗಸೆ 12.9 1.0 ಒಟ್ಟು 2,267.4 934.1 ಇತರ ಉತ್ಪನ್ನಗಳು ಹತ್ತಿ 968.6 684.1 ಕಬ್ಬು 177.9 13,993.2 ಮಾವು 119.2 109.8 ದ್ರಾಕ್ಷಿ 8.5 150.3 ಹೊಗೆಸೊಪ್ಪು 98.1 50.1 ಅರಿಸಿನ 10.2 65.6 ಆಲೂಗಡ್ಡೆ 44.7 575.8 ತೆಂಗೂ 412.7 38.7 ಗೋಡಂಬಿ 61.5 104.8 ಆಡಕೆ 132.3 169.9 ಕಾಫಿ 204.3 210.8 ಕೋಕೋ 1.9 22.8

ಪಶುಸಂಗೋಪನೆ:ಕರ್ನಾಟಕದಲ್ಲಿ ಪಶುಸಂಗೋಪನೆ ಕೃಷಿಯ ಒಂದು ಭಾಗವಾಗಿ ಪುರಾತನ ಕಾಲದಿಂದಲೂ ರೂಢಿಯಲ್ಲಿದೆ. ಜೌನುವಾರುಗಳನ್ನು ಕ್ಷೀರೋತ್ಪನ್ನ,ತುಪ್ಪಳ,ಚಮ೯,ಗೊಬ್ಬರ,ಮಾಂಸ ಮುಂತಾದ ಉದ್ದೇಶಗಳಿಗಾಗಿ ಸಾಕಿದರೂ ಕೃಷಿ ಕಾಯ೯ಗಳಿಗೆ ಸಾಕುವುದೇ ಹೆಚ್ಚು.ಉದಾ:ಉಳುಮೆ ಮಾಡಲು, ಸರಕು ಸಾಗಿಸಿಲು ಇತ್ಯಾದಿ. ದನ,ಎಮ್ಮೆ,ಕುರಿ,ಮೇಕೆ ಮತ್ತು ಕೋಳಿಗಳನ್ನು ಹೆಚ್ಚು ಸಾಕಲಾಗುವುದು. ಇತರ ಪ್ರಾಣಿಗಳನ್ನು ಸಾಕಿದರೂ ಅವುಗಳ ಸಂಖ್ಯೆ ಕಡಿಮೆ.2003ರಲ್ಲಿದ್ದಂತೆ ಕರ್ನಾಟಕದಲ್ಲಿ ಒಟ್ಟು 283.1 ಲಕ್ಷ ಜೌನುವಾರುಗಳಿದ್ದವು. ಆವುಗಳಲ್ಲಿ 95.4 ಲಕ್ಷ ದನಗಳು, 40 ಲಕ್ಷ ಎಮ್ಮೆ, 72.5 ಲಕ್ಷ ಕುರಿ, 44.8 ಲಕ್ಷ ಮೇಕೆ ಮತ್ತು 3 ಲಕ್ಷ ಹಂದಿಗಳಗಿದ್ದವು.ಬೆಳಗಾಂವಿ ಅಧಿಕ ಜೌನುವಾರುಗಳನ್ನೊಳಗೊಂಡ ಜಿಲ್ಲೆಯಾದರೆ ಕೊಡಗು ಕಡಿಮೆ ಜೌನುವಾರುಗಳನ್ನೊಳಗೊಂಡ ಜಿಲ್ಲೆಯಾಗಿದೆ.