ಪುಟ:Mysore-University-Encyclopaedia-Vol-4-Part-1.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ

ಕೊಳವೆಗಳನ್ನು ಇದು ತಯಾರಿಸುತ್ತದೆ. ಇದು ಭಾರತದ ದ್ಯೆತ್ಯಾಕಾರದ ಉಕ್ಕು ಕಾರ್ಖಾನೆಗಳಲ್ಲೊಂದಾಗುವ ನಿರೀಕ್ಷೆಯಿಲ್ಲ. ವಿಶಿಷ್ಟ ಉಕ್ಕುಗಳನ್ನೊ ಮಿಶ್ರಲೋಹಗಳನ್ನೊ ತಯಾರಿಸುವುದರಲ್ಲಿ ನ್ಯೆಪುಣ್ಯ ಸಂಪಾದಿಸುವುದು ಇದರ ಉದ್ದೇಶ. ಫೆರೊ-ಸಿಲಿಕಾನ್ ಮತ್ತು ಫೆರೊ-ಮ್ಯಾಂಗನೀಸ್ ಉತ್ಪಾದನೆ ಒಂದು ವಿಶಿಷ್ಟ ಬೆಳವಣಿಗೆ. ದಾಂಡೇಲಿಯಲ್ಲಿ ಕಬ್ಬಿಣ ಮಿಶ್ರಲೋಹ ಯಂತ್ರಸ್ಥಾವರವಿದೆ.

ಭದ್ರಾವತಿ ಮತ್ತು ದಾಂಡೇಲಿಗಳ ಕಾಗದದ ಕಾರ್ಖಾನೆಗಳಿಗೆ ಸ್ಥಳೀಯವಾಗಿ ಕಚ್ಚಾಸಾಮಗ್ರಿ ಒದಗುತ್ತವೆ. ಜಲವಿದ್ಯುತ್ತಿಗೊ ಕೊರತೆಯಿಲ್ಲ. ಮೃದುತಿರುಳಿನ ಮರಗಳನ್ನು ಮಲೆನಾಡಿನಲ್ಲಿ ನೆಡುವುದರಿಂದ ಪ್ರಯೋಜನವುಂಟು. ಮುದ್ರಣ ಕಾಗದ ಕ್ಯೆಗಾರಿಕೆಗೊ ಒಳ್ಳೆಯ ಭವಿಷ್ಯವಿದೆ. ಭದ್ರಾವತಿ-ದಾಂಡೇಲಿಗಳೆರಡೂ ಕರ್ನಾಟಕದ ಕ್ಯೆಗಾರಿಕೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬೇಕಾದ ಕೇಂದ್ರಗಳು. ಹಾಸನದ ವ್ಯವಸಾಯೋಪಕರಣ ಕಾರ್ಖಾನೆ ಸನ್ನಿವೇಶ ದೃಷ್ಟಿಯಿಂದ ಉಚಿತವಾದದ್ದು. ಉತ್ತರ ಮಲೆನಾಡಿನ ಪೂರ್ವಭಾಗದಲ್ಲಿ ಕೆಲವು ಹತ್ತಿ ಹಿಂಜುವ ಉದ್ಯಮಗಳಿವೆ. ಆದರೆ ಇವನ್ನು ವಾಸ್ತವವಾಗಿ ಉತ್ತರ ಮೈದಾನದ ಪಶ್ಚಿಮ ಪ್ರದೇಶದ ಜವಳಿ ಕೈಗಾರಿಕೆಗಳ ಗುಂಪಿಗೆ ಸೇರಿಸಬೇಕು.

ವ್ಯವಸಾಯಾಧಾರಿತ ಕೈಗಾರಿಕೆಗಳೆಂದರೆ ಅಕ್ಕಿ ಮತ್ತು ಎಣ್ಣೆಗಿರಣಿಗಳು. ಮೂಡಿಗೆರೆಯಲ್ಲಿ ಕೆಲವು ದೊಡ್ಡ ಅಕ್ಕಿ ಗಿರಣಿಗಳಿವೆ. ಬಹುತೇಕ ಅಕ್ಕಿ ಗಿರಣಿಗಳಿರುವುದು ಅರೆಮಲೆನಾಡಿನಲ್ಲಿ. ತೀರ್ಥಹಳ್ಳಿಯಲ್ಲೂ ಮಲೆನಾಡಿನ ಎಲ್ಲೆಗಿಂತ ಸ್ವಲ್ಪ ಆಚೆಗಿರುವ ಶಿಗ್ಗಾವಿಯಲ್ಲಿ ಹೊಗೆಸೊಪ್ಪಿನ ಸಣ್ಣ ಪರಿಷ್ಕರಣ ಕೇಂದ್ರಗಳಿವೆ. ದಕ್ಷಿಣದಲ್ಲಿ `ಚಿಕ್ಕಮಗಳೂರು, ಹುಣಸೂರು ಮತ್ತು ಮೂಡಿಗೆರೆಗಳಲ್ಲಿ ಕಾಫಿ ಪರಿಷ್ಕರಣ ಕೇಂದ್ರಗಳನ್ನು ಕಾಣಬಹುದು.

ಇವಲ್ಲದೆ ವಿವಿಧ ಬಗೆಯ ಇನ್ನು ಕೆಲವು ದೊಡ್ಡ ಕೈಗಾರಿಕೆಗಳು ಮಲೆನಾಡಿನಲ್ಲಿವೆ. ದಾಂಡೇಲಿಯ ಫ್ಲೈವುಡ್ ಕಾರ್ಖಾನೆ, ಮರ ಕೊಯ್ಯುವ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಕಾರ್ಖಾನೆ ಮುಖ್ಯ ಮರದ ದಿಮ್ಮಿ ಉದ್ಯಮಗಳು ತರೀಕೆರಿ, ಚ್ಚಿಕ್ಕಮಗಳೂರು, ಬೇಲೂರು, ಹಾಸನ, ಹುಣಸೂರುಗಳಲ್ಲೂ ಇವೆ. ಈ ಪ್ರದೇಶದ ಹೊರಗಿರುವ ಅರಸೀಕೆರೆ, ಮೈಸೂರು, ನಂಜನಗೂಡುಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು. ಖಾನಾಪುರ, ಶಿರಾಳಕೊಪ್ಪ, ಸಾಗರ, ಶೆವಮೊಗ್ಗ ಮುಂತಾದೆಡೆಗಳಲ್ಲಿ ಇಟ್ಟಿಗೆ ಮತ್ತು ಹೆಂಚು ತೆಯಾರಿಕೆಯೂ ಶೆವಮೊಗ್ಗದಲ್ಲಿ ಸಾಬೂನು ಮತ್ತು ರಾಸಾಯನಿಕವಸ್ತು ತಯಾರಿಕೆಯೂಲೋಂಡದಲ್ಲಿ ಮೂಳೆ ಗೊಬ್ಬರ ತಯಾರಿಕೆಯೂ ಉಲೇಖನಾರ್ಹ.

ಉತ್ತರ ಮೈದಾನದ ಹತ್ತಿ ಬೆಳೆಯುವ ಪ್ರದೇಶದಲ್ಲೆಲ್ಲ ತಲಾ 30 ರಿಂದ 50 ಜನ ಕೆಲಸ ಮಾಡುವ ಸಣ್ಣ ಹತ್ತಿ ಹಿಂಜುವ ಕಾರ್ಖಾನೆಗಳಿವೆ. ಇವು ಸ್ಥಾಪಿತವಾಗಿರುವುದು ಹತ್ತಿ ಸಂಗ್ರಹ ಕೇಂದ್ರಗಳ ಬಳಿಯಲ್ಲಿ. ಹುಬ್ಬಳ್ಳಿ, ಗದಗ, ಬಿಜಾಪುರ, ಅಣ್ಣಿಗೇರಿ, ನರಗುಂದ, ರೋಣ, ಬೈಲಹೊಂಗಲ ಮತ್ತು ಬಾಗಲಕೋಟೆ. ಈ ಸ್ಥಳಗಳಲ್ಲಿ ದೊಡ್ಡ ಉದ್ಯಮಗಳೂ ಉಂಟು. ತುಂಗಭದ್ರಾ ಹತ್ತಿ ಬೆಳೆಯ ಪ್ರದೇಶಕ್ಕೆ ಮುಖ್ಯವಾಗಿ ರಾಯಚೂರು ಹಿಂಜುವ ಕೇಂದ್ರ ದೊಡ್ಡ ಹತ್ತಿ ಜವಳಿ ಕೈಗಾರಿಕೆ ಗೋಕಾಕ, ಹುಬ್ಬಳಿ, ಗದಗ, ಬೆಳಗಾಂವಿ, ಹೊಸಪೇಟೆ ಮತ್ತು ಗುಲ್ಬರ್ಗಗಳಲ್ಲಿ ಕೇಂದ್ರಿಕೃತವಾಗಿದೆ. ಕೈಮಗ್ಗದ ಕೈಗಾರಿಕೆ ಅನೇಕ ಕಡೆಗಳಲ್ಲಿ ಹರಡಿದೆ. ಗುಳೇದ ಗುಡ್ಡ, ಇಳಕಲ್, ಅಮೀನಗಡ, ಹುನಗುಂದ, ಕಮತಗಿ, ರಬಕವಿ, ಪಾಚ್ಚಾಪುರಗಳಲ್ಲಿ ಇಂದಿಗೂ ಇದನ್ನು ಅಧಿಕವಾಗಿ ಕಾಣಾಬಹುದು. ಬೆಳಗಾಂವಿಯ ಸುತ್ತ ರೇಷ್ಮೆ ಕೈಗಾರಿಕೆಯುಂಟು.

ವ್ಯವಸಾಯೋತ್ಪನ್ನಗಳನ್ನಾಧರಿಸಿದ ದೊಡ್ಡ ಕೈಗಾರಿಕೆಗಳನ್ನು ವ್ಯಾಪಕವಾಗಿ ಕಾಣಬಹುದು. ಎಣ್ಣೆ ಅಕ್ಕಿ ಗಿರಣಿಗಳನ್ನು ಇಲ್ಲಿ ಹೆಸರಿಸಬಹುದು. ಬಾದಾಮಿ, ಯಾದಗಿರಿ ಮುಂತಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಇವು ಹೆಚ್ಚಾಗಿವೆ. ಬಿಜಾಪುರ, ರಾಯಚೂರು, ಬಾಗಲಕೋಟೆಗಳು ಮುಖ್ಯ ಕೇಂದ್ರಗಳು. ತುಂಗಭದ್ರಾ ನಾಲೆ ಬಯಲಿನಲ್ಲಿ ಹೊಸಪೇಟೆ, ಮುನಿರಾಬಾದ್ ಗಳಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಬಾವಿ ನೀರಾವರಿ ಸೌಕರ್ಯವಿರುವ ವಾಯವ್ಯದ ಉಗಾರ್ ಋರ್ದ್ ಮತ್ತು ಕಣಬೂರಗಳು ಇನ್ನೆರಡು ಮುಖ್ಯ ಪ್ರದೇಶಗಳು. ಅಲ್ಲಿ, ಮುಖ್ಯವಾಗಿ ನಿಪ್ಪಾಣಿಯಲ್ಲಿ, ಮಧ್ಯಮಗಾತ್ರದ ಹೊಗೆಸೊಪ್ಪಿನ ಕೇಂದ್ರಗಳಿವೆ. ರಾಣಿಬೆನ್ನೂರು, ಸವಣೂರು, ಯಾದಗಿರಿಗಳಲ್ಲೂ ಹುಬ್ಬಳ್ಳಿಯಲ್ಲೂ ಇವನ್ನು ಕಾಣಬಹುದು. ಹುಬ್ಬಳ್ಳಿ ಒಂದು ಮುಖ್ಯ ಕೈಗಾರಿಕಾ ಕೇಂದ್ರ.

ಹರಿಹರದಲ್ಲಿ ಯಂತ್ತೋಪಕರಣ ಕೈಗಾರಿಕೆಯೂ ಸಣ್ಣ ವ್ಯವಸಾಯೋಪಕರಣ ಕಾರ್ಖಾನೆಯೂ ಇವೆ. ಹುಬ್ಬಳ್ಳಿ ಎಂಜಿನಿಯರಿಂಗ್ ಕೈಗಾರಿಕೆಗೂ ಮುಖ್ಯವಾದದ್ದು. ಅಲ್ಲಿ ರೈಲ್ವೆ ಕಾರ್ಯಾಗಾರವಿದೆ. ಬೆಳಗಾಂವಿಯಲ್ಲಿರುವ ಸಣ್ಣ ಕೈಗಾರಿಕೆಗಳು ಬಗೆಬಗೆಯುವು. ಬಿಜಾಪುರದಲ್ಲೂ ಕೆಲವು ಸಣ್ಣ ಉದ್ಯಮಗಳುಂಟು.

ಬೆಳಗಾಂವಿಯ ಕೈಗಾರಿಕೆಗಳಲ್ಲಿ ಮರದ ದಿಮ್ಮಿ ಉದ್ಯಮ ಮುಖ್ಯವಾದದ್ದು. ಬಾಗಲಕೋಟೆ ಕಲಾದಗಿಗಳಲ್ಲಿ ಸಿಮೆಂಟ್ ಸಂಬಂಧವಾದ ಸಣ್ಣ ಉದ್ಯಮಗಳಿವೆ. ಮೈದಾನದ ಪಶ್ಚಿಮದಂಚಿನಲ್ಲಿ ಚರ್ಮದ ಕೈಗಾರಿಕೆಯೂ ಉಂಟು. ಗುಲ್ಬರ್ಗದ ದಕ್ಷಿಣಕ್ಕೆ ಶಾಹಬಾದಿನ ಸಿಮೆಂಟ್ ಕಾರ್ಖಾನೆ ದೊಡ್ಡದು. ಇದು ಬಹುತೇಕ ಯಾಂತ್ರೀಕೃತ. ಬಳ್ಳಾರಿ, ಬೆಳಗಾಂವಿಗಳಲ್ಲಿ ಸಾಬೂನು ಕೈಗಾರಿಕೆಯೂ ಸಣ್ಣ ಪ್ರಮಾಣದಲ್ಲಿ ನಡೆಯುತ್ತದೆ.

ಬೆಂಗಳೂರು-ಪುಣೆ ರೈಲುಹಾದಿಯ ಉದ್ದಕ್ಕೂ ಅದರ ಸಮೀಪದಲ್ಲೂ ಕೈಗಾರಿಕೆಗಳು ಹೆಚ್ಚಾಗಿ ಗೊಂಚಲುಗಳಂತೆ ಸೇರಿಕೊಂಡಿರುವುದನ್ನು ಕಾಣಬಹುದು. ರಾಯಚೂರು-ಪೋರಾಪುರ ರೈಲೂಮಾರ್ಗಗಳ ಪ್ರದೇಶದಲ್ಲೂ ತಕ್ಕಮಟ್ಟಿಗೆ ಇವು ಕಾಣಬರುತ್ತವೆ. ಪೂರ್ವಮಧ್ಯ ಪ್ರದೇಶದಲ್ಲಿ ಅಳಂದದಿಂದ ಹೊಸಪೇಟೆಯವರೆಗೆ ಇವು ಇಲ್ಲವೇಇಲ್ಲವೆನ್ನಬೇಕು. ಆದರೆ ಇಲ್ಲೆಲ್ಲ ಕೈಮಗ್ಗದಂಥ ಸಣ್ಣ ಕೈಗಾರಿಕೆಗಳು ಹಬ್ಬಿವೆ. ಬೀದರ್ ನಲ್ಲಿ ಬೀದರಿ ಕೆಲಸ ನಡೆಯುತ್ತದೆ.

ಉತ್ತರ ಮೈದಾನ ಪ್ರದೇಶದ ಮುಖ್ಯ ಕೈಗಾರಿಕೆಯೆಂದರೆ ಜವಳಿ ತಯಾರಿಕೆ. ಬಿಜಾಪುರ, ಧಾರವಾಡ, ಬೆಳಗಾಂವಿ ಮತ್ತು ಬಳ್ಳಾರಿಯಲ್ಲಿ ಉಣ್ಣೆ ತಯಾರಿಕೆ, ಅಲ್ಪ ಪ್ರಮಾಣ ಕೇಂದ್ರೀಕರಿಸಿದ ರೇಷ್ಮೆಯ ಸಣ್ಣ ಉದ್ಯಮಗಳು ಬಿಜಾಪುರದಲ್ಲೂ ದೊಡ್ಡವು ಬೆಳಗಾವಿಯಲ್ಲೂ ಉಂಟು.

ಹತ್ತಿ ಹಿಂಜುವಿಕೆ, ಹತ್ತಿ ಮತ್ತು ರೇಷ್ಮೆ ಜವಳಿ ಕೈಗಾರಿಕೆಗಳು ದಕ್ಷಿಣ ಮೈದಾನದ ಕೆಲವು ಮುಖ್ಯ ಕೇಂದ್ರಗಳಲ್ಲಿವೆ. ಹತ್ತಿ ಹಿಂಜುವ ಕೇಂದ್ರಗಳು ಮುಖ್ಯವಾಗಿ ದಾವಣಗೆರೆ ಚಿತ್ರದುರ್ಗಗಳಲ್ಲಿ-ಇವೆ. ಹತ್ತಿ ಜವಳಿಯ ಮುಖ್ಯ ಕೇಂದ್ರಗಳು, ದಾವಣಗೆರೆ, ಮೈಸೂರು, ನಂಜನಗೂಡು ಮತ್ತು ಬೆಂಗಳೂರು. ಅತ್ತಿ ದೊಡ್ಡ ಗಿರಣಿಗಳಿರುವುದು ಬೆಂಗಳೂರಿನಲ್ಲೇ. ಅನೇಕ ಸಣ್ಣ ಉದ್ಯಮಗಳೂ ಅಲ್ಲುಂಟು. ರೇಷ್ಮೆ ಕೈಗಾರಿಕೆಯೂ ಬೆಂಗಳೂರಿನಲ್ಲೇ ಸಾಂದ್ರೀಕೃತವಾಗಿದೆ. ಮೈಸೂರು, ಚನ್ನಪಟ್ಟಣ, ಕನಕಪುರ, ತಿರುಮಕೂಡಲು ನರಸೀಪುರ, ನಂಜನಗೂಡು ಮತ್ತು ಮಾಂಬಳ್ಳಿ ಇತರ ಕೇಂದ್ರಗಳು. ಮೈಸೂರು ಬೆಂಗಳೂರುಗಳಲ್ಲಿ ಈ ಕೈಗಾರಿಕೆಗೆ ಅಗತ್ಯವಾದ ಸಾರಿಗೆ ಮತ್ತು ಕಾರ್ಮಿಕರ ಸೌಲಭ್ಯವುಂಟು.