ಪುಟ:Mysore-University-Encyclopaedia-Vol-4-Part-1.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ತ್ರೀ-ಪುರುಷರ ಸಾಕ್ಷ್ರತೆ ಗಮನಿಸಿದಾಗ ಸ್ತ್ರೀಯರಿಗಿಂತ ಪುರುಷರಲ್ಲಿ ಸಾಕ್ಷರರು ಹೆಚ್ಚು. ರಾಜ್ಯದ ಒತ್ತು ಜನಸಂಖ್ಯೆಯಲ್ಲಿ ಶೇ ೭೬.೩ ಪುರುಷರು ಮತ್ತು ಶೇ. ೫೭.೪೭ ಮಹಿಳೆಯರು ಸಾಕ್ಷರಾಗಿರುತ್ತಾರೆ. ದ.ಕನ್ನಡದಲ್ಲಿ ಪುರುಷ ಸಾಕ್ಷರರು ಪ್ರಮಾಣ ಹೆಚ್ಚು ಇದಕ್ಕೆ ಪ್ರತಿಯಾಗಿ ಚಾಮರಾಜನಗರ, ಕೊಪ್ಪಳ ಮತ್ತು ಗುಲ್ಭರ್ಗ ಗಳಲ್ಲಿ ಕಡಿಮೆ. ಇದೇರೀತಿ ನಗರ-ಗ್ರಾಮೀಣ ಸಾಕ್ಷರತೆ ನೂಡಿದಾಗ ಸ್ವಾಭಾವಿಕವಾಗಿ ನಗರಗಳಲ್ಲಿ ಸಾಕ್ಷಾರತೆ ಜಿಲ್ಲಾ ಸಾಕ್ಷತೆಗಳನ್ನು ತೆಗೆದುಕೊಂಡರೆ ಕೊಡಗಿನಲ್ಲಿ ಹೆಚ್ಚು ಮತ್ತು ರಾಯಚೂರು ಜಿಲ್ಲೆಯಲ್ಲಿ ಅತೀ ಕಡಿಮೆ. ವಯೋರಚನೆ:- ರಾಜ್ಯದ ವಯೋರಚನೆಯಲ್ಲಿ ಮಕ್ಕಳ ಪ್ರಮಾಣ ಹೆಚ್ಚು. ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ ೬.೯ ಭಾಗ ಮತ್ತು ಅದಕ್ಕಿಂತ ಹೆಚ್ಚು ವಯಸಿನ ವೃದ್ದರು. ಉಳಿದವರು ೧೫ ರಿಂದ ೬೦ ವಯಸ್ಸಿನವರು. ಇವರು ದುಡಿಯುವ ವರ್ಗವೆಂದು ಪರಿಗಣಿಸಲಾಗಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ. ೫೬ ರಷ್ಟು ದುಡಿಮೆ ಮಾಡುವರಾಗಿದ್ದು, ಅವನ್ನಾಧರಿಸಿ ಶೇ೩೧.೫ ರಷ್ತು ಮಕ್ಕಳು ಮತ್ತು ವೃದ್ದರು ಬದುಕುವರು. ಕೆಲಸಗಾರರು:- ರಾಜ್ಯದ ಜನ ಸಂಖ್ಯೆಯಲ್ಲಿ ಉದ್ಯೋಗಸ್ಥರು ಮತ್ತು ಉದ್ಯೋಗ ರಹಿತರೆಂದು ಎರಡು ವರ್ಗಗಳಿವೆ. ಮೊದಲ ವರ್ಗದವರು ಉತ್ಪಾದನ ಮತ್ತು ಸೇವಾ ಕಾರ್ಯದಲ್ಲಿ ತೊಡಗಿದ ಕೆಲಸಗಾರರು. ೨೦೦೧ ಜನಗಣ್ತಿಯಂತೆ ೨೩೫೩೪, ೭೯೧ ಜನರು ದುಡಿಯುವರು ಹಾಗೂ ೨೯೩೧೫೭೭೧ ಜನರು ಕೆಲಸಗಾರರಲ್ಲ ದವರು. ಅಂದರೆ ಒಟು ಜನಸಂಖ್ಯೆಯಲ್ಲಿ ಶೇ೫೫. ಭಾಗ ಉದ್ಯೊಗಸ್ಥರಾಗಿರುತ್ತಾರೆ. ದುಡಿಯುವರಲ್ಲಿ ೧೯೩೬೪೭೫೯ ಪೂರ್ಣಕಾಲಿಕ ಕೆಲಸಗಾರರು ಮತ್ತು ೪೧೭೦೦೩೨ ಜನರು ಅರೆಕಾಲಿಕ ಕೆಲಸಗಾರರು. ಇವರು ಆರು ತಿಮ್ಗಳಿಗಿಂತ ಕಡಿಮೆಕಾಲ ಸೇವೆಯಲ್ಲಿರುವಂತಹವರು. ರಾಜ್ಯದಲ್ಲಿ ಒಟ್ಟು ೬೮.೮ ಲಕ್ಷ ಕೃಶಿಗಾರರು ಮತ್ತು ೬೨.೩ ಲಕ್ಷ ಕೃಷಿಕಾರ್ಮಿಕರಾಗಿದ್ದಾರೆ ಒಟ್ಟು ಕೆಲಸಗಾರರಲ್ಲಿ ಶೇ೬೦. ಭಾಗ ಕೃಷಿವಲಯದಲ್ಲಿ ದುಡಿಯುವವರು. ಧರ್ಮ:- ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಹಿಂದು ಧರ್ಮೀಯರು ಮುಸ್ಲೀಮರು ಯೆರಡನೆಯ ಸ್ಥಾನ ಮತ್ತು ಕ್ರೈಸ್ತರು ಮೂರನೆಯ ಸ್ಥಾನದಲ್ಲಿರುವರು. ಇನ್ನುಳಿದವರು ಜೈನರು, ಬೌದ್ದರು, ಸಿಕ್ಕರು ಹಾಗು ಇತರ ಧರ್ಮೀಯರು. ಜೊತೆಗೆ ರಾಜ್ಯದಲ್ಲಿ ವಿವ್ಧ ಜಾತಿ ಮತ್ತು ಉಪಜಾತಿಗಳಿವೆ. ಕರ್ನಾಟಕದಲ್ಲಿ ಸು. ೧೬೬ ಮಾತ್ರುಭಾಷೆಗಳಿದ್ದರೂ ಬಹುಭಾಷಾ ವ್ಯವಸ್ತೆಯನ್ನು ಪ್ರತಿಬಿಂಬಿಸುತ್ತದೆ. ಕನ್ನಡ ಪ್ರಮುಖ ಹಾಗು ಮಾತ್ರು ಭಾಷೆ. ರಾಷ್ಟ್ರಿಯ ಅಧಿಕ ಭಾಷೆಯಲ್ಲಿ ಒಂದಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ. ೬೮ ರಷ್ಟು ಜನರು ಕನ್ನಡ ಮಾತನಾಡುವರು. ಕನ್ನಡ ತರುವಾಯ ಉರ್ದು ಎರಡನೆಯದು. ಇದು ಭಾಷೆ ಮತ್ತು ಧರ್ಮಗಳ ಸಂಬಂಧ ಕಲ್ಪಿಸುತ್ತದೆ. ಮೂರನೆಯಸ್ಥಾನ ತೆಲುಗಿಗೆ ಸೇರುತ್ತದೆ. ಮರಾಠಿ, ತುಳು, ತಮಿಳು, ತುಳು ಕೊಂಕಣಿ, ಮಳಯಾಳಂ ಮತ್ತು ಲಂಬಾಣಿ ಇತರ ಪ್ರಮುಖ ಭಾಷೆಗಳು. ಈ ಒಂಬತ್ತು ರಾಜ್ಯದ ಜನಸಂಕ್ಯೆಯಲ್ಲಿ ಶೇ. ೯೯ ರಷ್ತನ್ನು ಒಳಗೊಂಡಿದೆ. ಒಂದೊಂದು ಭಾಷೆ ಒಂದೊಂದು ಜಿಲ್ಲೆಗಳಲ್ಲಿ ಪ್ರಧಾನ. ಹೆಚ್ಚು ಉರ್ದು ಮಾತನಾಡುವವರು ಬೆಂಗಳೂರು, ಬಿಜಾಪುರ, ಗುಲ್ಭರ್ಗ ಮತ್ತು ಧಾರವಾಡ ಜಿಲ್ಲೆಗಳು ಹಾಗು ಬೆಂಗಳೂರು ಮತ್ತು ಕೋಲಾರಗಳಲ್ಲಿ ತೆಲುಗು, ಬೆಳಗಾಂವಿ ಮತ್ತು ಬೀದರ್ ಗಳಲ್ಲಿ ಮರಾಠಿ, ದ.ಕನ್ನಡ ಜಿಲ್ಲೆಗಳಲ್ಲಿ ಕೊಂಕಣಿ ಬಿಜಾಪುರ, ಬೀದರ್, ಗುಲ್ಬರ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಲಂಬಾಣಿ ಮಾತನಾಡುವವರಿದ್ದಾರೆ. ಇವೆಲ್ಲರ ನಡುವೆ ಆಂಗ್ಲ ಭಾಷೆಯೂ ರೂಢಿಯಲ್ಲಿದೆ. ಪ್ರಮುಖ ಸ್ಥಳಗಳು:- ಬೆಂಗಳೂರು ಕರ್ನಾಟಕದ ರಾಜಧಾನಿ ೧೭ ನೇಯ ಶತಮಾನದಲ್ಲಿ ಸ್ಥಾಪಿತವಾದ ಈ ನಗರದಲ್ಲೂ ಅದರ ಸುತ್ತಮುತ್ತಲೂ ಅನೇಕ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳಿವೆ. ಕರ್ನಾಟಕದ ಆಗ್ನೇಯ ಭಾಗದಲ್ಲಿ ಎತ್ತರದ ನೆಲದ ಮೇಲಿರುವ ಈ ನಗರದ ವಾಯುಗುಣ ವರ್ಷಾದ್ಯಂತ ಹಿತಕರ.ನಗರದಲ್ಲಿ ಒಟ್ಟು ೨೧೮೮ ಕೈಗಾರಿಕೆಗಳಿದ್ದು ಅವುಗಳಲ್ಲಿ ೭೪೨ ಜವಳಿ ,೧೭೬ ರಾಸಾಯನಿಕ ,೧೫೬೨ ಎಂಜಿನೀಯರಿಂಗ್ ಕೈಗಾರಿಕೆಗಳಾಗಿರುತ್ತದೆ .ರಾಜ್ಯದ ಒಟ್ಟು ಕೈಗಾರಿಕೆಗಳಲ್ಲಿ ಶೇ.೩೭ರಷ್ಟುಈ ನಗರದಲ್ಲಿ ಸಾಂದ್ರೀಕರಿಸಿವೆ.ಬಹು ರಾಷ್ಟ್ರೀಯ ಉದ್ಯಮಗಳು ,ಐ.ಟಿ,ಬಿ.ಟಿ,ಸಂಸ್ಥೆಗಳು ಹಲವು ಬಂದಿವೆ..ನಗರದಲ್ಲಿ ಕುಶಲ ಹಾಗೂ ಅಕುಶಲ ಕೆಲಸಗಾರರಿಗೇನೂ ಅಭಾವವಿಲ್ಲ.ಇವರ ದಕ್ಷ್ತತೆ ಶಿಸ್ತುಗಳೆ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಖ್ಯ ಆಕರ್ಷಣೆ.ರಾಜಾಜಿನಗರದ ಕೈಗಾರಿಕಾ ಎಸ್ಟೇಟು ಸರ್ಕಾರದಿಂದ ಪ್ರವರ್ತಿತವಾದ ಈ ಬಗೆಯ ವ್ಯವಸ್ಥೆಗಳ ಪೈಕಿ ಭಾರತದಲ್ಲೇ ದೊಡ್ಡದು ,ಅತ್ಯಂತ ದಕ್ಷವಾದದ್ದು .ಬೆಂಗಳೂರಿನ ಅನೇಕ ಮನೆಗಳಲ್ಲಿ ಪರಂಪರಾಗತವಾಗಿ ಬಂದ ನೇಯ್ಗೆ ಕೆಲಸ ಇಂದಿಗೂ ಪ್ರವರ್ಧಮಾನವಾಗಿದೆ.ಬೆಂಗಳೂರು ಒಂದು ಮುಖ್ಯ ವಾಣಿಜ್ಯ ಕೇಂದ್ರ ,ರೈಲ್ವೆ ಮತ್ತು ವಿಮಾನ ಮಾರ್ಗಗಳ ಸಂಧಿಸ್ಥಳ ,ಸೇನಾಕೇಂದ್ರ ,ಟಿಪ್ಪೂಸುಲ್ತಾನನ ಕೋಟೆ ,ಲಾಲ್ಬಾಗ್ ,ಕಬ್ಬನ್ಪಾರ್ಕ,ಅರಮನೆ,ಸರ್ಕಾರದ ಪೀಠವಿರುವ ವಿಧಾನಸೌಧ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲದೆ ಅನೇಕ ಸಂಶೋಧನಾಗಾರಗಳೂ ವಿದ್ಯಾಸಂಸ್ಥೆಗಳೂ ಬೆಂಗಳೂರು ಮತ್ತು ಕೃಷಿ ವಿಶ್ವವಿದ್ಯಾನಿಲಯಗಳೂ ಇವೆ.ಬೆಂಗಳೂರು ನಗರ ಬೆಳೆಯಲು ಸ್ಥಳದ ಅಡಚಣೆಯೇನೂ ಇಲ್ಲ.ಇರುವ ಮುಖ್ಯ ತೊಂದರೆಯೆಂದರೆ ನೀರಿನದು .ಕಾವೇರಿಯಿಂದ ನೀರು ಸರಬರಾಜು ಮಾಡುವ ಯೋಜನೆ ಪೂರೈಸಿದ ಮೇಲೆ ಈ ತೊಂದರೆಯ ನಿವಾರಣೆಯಾಗುತ್ತದೆ.ಇತ್ತೀಚೆಗೆ ನಿವೇಶನ ,ವಸತಿಗಳ ಕೊರತೆ ತಲೆದೊರಿದೆ.ಕೊಳಗೇರಿಗಳ ಬೆಳೆವಣಿಗೆ ಹಾಗೂ ಪರಿಸರ ಮಾಲಿನ್ಯ ಹೆಚ್ಚುತ್ತಿದೆ.ಸಂಚಾರ ಒತ್ತಡದಿಂದ ಅಪಘಾತಗಳು ಹೆಚ್ಚುತ್ತಿವೆ.ಅಡಳಿತ ನಿರ್ವಹಣೆ ಈ ಬೃಹನ್ನಗರದಲ್ಲಿ ಅಸಾಧ್ಯವಾಗುತ್ತಿದೆ. ಮೈಸೂರು ಭಾರತದ ಉದ್ಯಾನಗಳ ನಗರವೆಂಬ ಹೆಸರು ತಳೆದಿದೆ.ಬೆಂಗಳೂರಿಗೆ ನೈಋತ್ಯದಲ್ಲಿ ೧೪೦ ಕಿಮೀ ದೂರದಲ್ಲಿದೆ.ವಿಶಾಲ ರಸ್ತೆಗಳೂ ಭವ್ಯ ಭವನಗಳೂ ಮನಮೋಹಕ ಉದ್ಯಾನಗಳೂ ತುಂಬಿರುವ ಈ ನಗರದಲ್ಲಿ ಕರ್ನಾಟಕದ ಅತ್ಯಂತ ಹಳೆಯ ಮೈಸೂರು ವಿಶ್ವವಿದ್ಯಾನಿಲಯ ಇದೆ.ವರ್ಷಕ್ಕೊಮೆ ನಡೆಯುವ ದಸರ ಉತ್ಸವ ರಾಷ್ಟೀಯ ಅಂತಾರಷ್ಟ್ರೀಯ ಖ್ಯಾತಿಗಳಿಸಿದೆ.ಇಂಡೊ ಸಾರ್ಸೆನಿಕ್ ಶೈಲಿಯ ಅರಮನೆ ಒಂದು ಆಕರ್ಷಣೆ ,ಜಗನ್ಮೊಹನ ಬಂಗಲೆಯ ಕಲಾವಾಸ್ತು ಸಂಗ್ರಹಾಲಯ,ಲಲಿತಮಹಲ್ ,ಪ್ರಾಣಿ ಸಂಗ್ರಹಾಲಯ ಮುಂತಾದವೂ ನಗರದ ಆಗ್ನೇಯಕ್ಕಿರುವ ಚಾಮುಂಡಿ ಬೆಟ್ಟವೂ ಪ್ರೇಕ್ಷಣೀಯ .ಮೈಸೂರು ನಗರ ರಸ್ತೆ ಮತ್ತು ರೈಲುಮಾರ್ಗಗಳ ಸಂಧಿಸ್ಥಳ .ನಗರಕ್ಕೆ ಸಮೀಪದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ.ಸುಪ್ರಸಿದ್ಧವಾದ ಬಂಡೀಪುರ ಅಭಯಾರಣ್ಯವೂ ವನ್ಯಧಾಮವೂ,ರಂಗನತಿಟ್ಟಿನ ಪಕ್ಷಿಧಾಮವೂ ಇರುವುದು.ಇತಿಹಾಸ ಸುಪ್ರಸಿದ್ಧವಾದ ಪುಣ್ಯ ಕ್ಷೇತ್ರಗಳು,ಶ್ರೀರಂಗಪಟ್ಟಣ ತಲಕಾಡುಗಳು ,ಹೊಯ್ಸಳ ಶಿಲ್ಪಾಗಾರಗಳಾದ ಸೋಮನಾಥಪುರ ಬೇಲೂರು ಹಳೇಬೀಡುಗಳು ಅತ್ಯಂತ ಉನ್ನತ ಏಕಶಿಲಾವಿಗ್ರಹವಾದ ಗೋಮ್ಮಟೇಶ್ವರವಿರುವ ಶ್ರವಣಬೆಳಗೊಳ ,ಶಿವಸಮುದ್ರ ಮತ್ತು ಶಿಂಷ ಹೆಚ್ಚು ಆಕರ್ಷಣೆಗಳು .ಕೈಗಾರಿಕೆಗಳಿಗೆ ಅಗತ್ಯವಾದ ವಿದ್ಯುಚ್ಛಕ್ತಿ,ನೀರಿನ ಸೌಲಭ್ಯ ,ಅಗ್ಗದ ಕಾರ್ಮಿಕ ಸರಬರಾಜು ,ಸ್ಥಳಾನುಕೂಲ ಇವೆಲ್ಲ ಇದ್ದರೂ ಕೈಗಾರಿಕೆಯ ದೃಷ್ಟಿಯಿಂದ ಈ ನಗರ ಅಷ್ಟು ಮುಂದುವರಿದಿಲ್ಲ .ನಗರದಲ್ಲಿ ಕೆಲವು ದೊಡ್ಡ ಕೈಗಾರಿಕೆಗಳಿವೆ.ಇವುಗಳಲ್ಲಿ ನಾಲ್ಕು ಸರ್ಕಾರದವು.