ಪುಟ:Mysore-University-Encyclopaedia-Vol-4-Part-1.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೂರ್ಯನನ್ನು ಇಲ್ಲಿಂದ ವೀಕ್ಷಿಸಲು ಅನೇಕರು ಇಲ್ಲಿಗೆ ಬರುತ್ತಾರೆ. ಸುತ್ತಣ ಸನ್ನಿವೇಶ ರಮ್ಯವಾದುದ್ದು. ಬಂಡೀಪುರ ಮೈಸೂರಿಗೆ ಸು.೮೦ ಕಿಮೀ ದೂರದಲ್ಲಿದೆ. ಬನ್ನೀರುಘಟ್ಟ ಬೆಂಗಳೂರಿಗೆ ಸುಮಾರು ೨೦ ಕಿಮೀ ದೂರದಲ್ಲಿ ಆನೇಕಲ್ಲು ರಸ್ತೆ ಬಳಿ ಇದೆ. ಬೆಟ್ಟದ ಬುಡದಿ ಸಂಪಂಗೀರಾಮಸ್ವಾಮಿ ದೇವಾಲಯ ಪ್ರಕೃತಿ ರಮ್ಯಸ್ಥಳದಲ್ಲಿದೆ. ನಾಗರಹೊಳೆಗೆ ಕೊಡಗಿನ ವಿರಾಜಪೇಟೇಯಿಂದ ಸು. ೨೦ಕಿಮೀ ದೂರ. ಇದು ಅಭಯಾರಣ್ಯ ಬೆಂಗಳೂರಿಗೆ ಹತ್ತಿರದಲ್ಲಿದೆ. ಇದೊಂದು ಚೆಲುವನಾರಯಣ. ವಸಂತಪುರ ಬೆಂಗಳೂರಿನ ಬಳಿಯ ಪುಟ್ಟ ಬೆಟ್ಟ.

 ಅಸಂಖ್ಯಾತ ಜಲಪಾತಗಳು ಕರ್ನಾಟಕದ ಇನ್ನೊಂದು ವೈಶಿಷ್ಟ್ಯ. ಶಿವಮೊಗ್ಗ ಜಿಲ್ಲೆಯ ತಾಳಗುಪ್ಪಕ್ಕೆ ಸು. ೧೬ ಕಿಮೀ ದೂರದಲ್ಲಿ ಶರಾವದಿ ನದಿಯಿಂದಾಗಿರುವ ಜೋಗದ ಜಲಪಾತ. ಮಂಡ್ಯಕ್ಕೆ ಸುಮಾರು ೮೦ ಕಿಮೀ ದೂರದಲ್ಲಿರುವ ಶಿವಸಮುದ್ರದ ಬಳಿ ಕಾವೇರಿ ಎರಡಾಗಿ ಕವಲೊಡೆದು ಧುಮ್ಮಿಕ್ಕುತ್ತದೆ. ಉತ್ತರದ ಕವಲು ಗಗನಚುಕ್ಕಿ, ದಕ್ಷಿಣದ್ದು ಬರಹಚುಕ್ಕಿ. ಭಾರತದಲ್ಲಿ ಮೊತ್ತಮೊದಲ ದೊಡ್ಡ ಪ್ರಮಾಣದಲ್ಲಿ ಜಲವಿದ್ಯುತ್ತಿನ ಉತ್ಪತ್ತಿ ಮಾಡಲಾರಂಬಿಸಿದ್ದು ಇಲ್ಲೆ. ಬೆಳಗಾಂವಿ ಜಿಲ್ಲೆಯ ಗೋಕಾಕದ ಘಟಪ್ರಭಾ ನದಿಯ ಗೋಕಾಕ ಜಲಪಾತ ಗೇರು ಸೋಪ್ಪೆಯಷ್ಟು ದೊಡ್ಡದಲ್ಲ. ಇಲ್ಲಿ ಭಾರತದ ಮೊದಲ ಜಲವಿದ್ಯುತ್ ಜನಕ ಯಂತ್ರ ಸ್ಥಾಪಿತವಾಯಿತು. ಗೋಕಾಕ ಜಲಪಾತವೋಂದು ಸುಂದರ ತಾಣ. ಯಲ್ಲಾಪುರಕ್ಕೆ ಉತ್ತರದಲ್ಲಿರುವ ಕಾಳೀನದಿಯ ಲಾಲ್ಗುಳಿ, ಯಲ್ಲಾಪುರದ ದಕ್ಷಿಣದಲ್ಲಿ ಗಂಗಾವಳಿ ನದಿಯ ಮಾಗೋಡು, ಬೆಳಗಾವಿಗೆ ಈಶಾನ್ಯದಲ್ಲಿರುವ ಮಾರ್ಕಂಡೇಯ, ಶಿರಸಿಯ ಬಳಿ ಶಿವಗಂಗಾ, ಸಿದ್ದಾಪುರದ ಉಂಚಳಿ, ಆಗುಂಬೆಯ ಬಳಿಯ ವರಹಿ- ಇವು ಇತರ ಕೆಲವು ಜಲಪಾತಗಳು. 
 ನದಿಗೆ ಅಡ್ಡಲಾಗಿ ಕಟ್ಟಿದ ಕಟ್ಟೆಗಳಿಂದ ನಿರ್ಮಿತವಾದ ಜಲಾಶಯಗಳೂ ಚೆಲುವುದಾಣಗಳೇ. ಮೈಸೂರಿನ ಹತ್ತಿರ ಇರುವ ಕೃಷ್ಣರಾಜಸಾಗರ ಅತ್ಯಂತ ಪ್ರಸಿದ್ದವಾದ್ದು. ಇಲ್ಲಿರುವ ಬೃಂದಾವನಕ್ಕೆ ಅಂತರಾಷ್ಟ್ರೀಯ ಖ್ಯಾತಿಯಿದೆ. ಪ್ರಾಚೀನ ಸರೂವರಗಳಲ್ಲಿ ರಾಣೆಬೆನ್ನೂರಿನ ಬಳಿಯ ಮದಗಮಸೂರ್ ಸರೋವರ ಪ್ರಸಿದ್ದವಾದದ್ದು. ಇದರ ಶಿಲ್ಪ ವಿಶಿಷ್ಟವಾದ್ದು. ವಿಜಯನಗರ ಕಾಲದಲ್ಲಿ ಕಟ್ಟಿದ ಈ ಸರೋವರದ ಕಟ್ಟೆ ಮಣ್ಣಿನದು.ಒಂದು ಫರ್ಲಾಂಗ್ ಉದ್ದವಿದೆ. ಬೆಂಗಳೂರಿಗೆ ಸನಿಯದಲ್ಲಿ ಅರ್ಕಾವತಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತಿಪ್ಪಗೊಂಡನ ಹಳ್ಳಿ ಜಲಾಶಯಪ್ರದೇಶ ವಿಹಾರಿಗಳಿಗೊಂದು ಆಕರ್ಷಣೆ.
ಮಲಪ್ರಭಾನದಿ ಘಟ್ಟಗಳನ್ನು ಕೊರೆದು ಹರಿದು ಬರುವ ತಾಣ ನವಿಲುತೀರ್ಥ. ವಾಣಿವಿಲಾಸಸಾಗರ ಹಿರಿಯೂರಿನ ಬಳಿಯ ಕೃತಕ ಸರೋವರ. ತುಂಗಭದ್ರಾ ಕಟ್ಟೆಯ ಮೇಲಿನ ವಿಶಾಲಸಾಗರ ಈಚಿನ ಒಂದು ಆಕರ್ಶಣೆ ಯಾಗಿದೆ.
 ಕರ್ನಾಟಕದ ಹಲವಾರು ಎಡೆಗಳಲ್ಲಿರುವ ಐತಿಹಾಸಿಕ ಸ್ಥಳಗಳು ಶಿಲ್ಪಕಲಾಕೃತಿಗಳೂ ಅಸಂಖ್ಯಾತ. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಬಹುದಾಗಿದೆ. ಉತ್ತರ ಕರ್ನಾಟಕದಿಂದ ಆರಂಭ ಮಾಡುವುದಾದರೆ, ಬಿಜಾಪುರ ಮೊದಲನೆಯದು. ಪಟ್ಟಣದ ಸುತ್ತಣ ಕೂಟೆಯ ಉದ್ದ೧೩ ಕಿಮೀ. ಈಗಲೂ ಇದು ಒಳ್ಳೇಯ ಸ್ಥಿತಿಯಲ್ಲಿದೆ. ಇಲ್ಲಿಯ ಗೋಳುಗುಮ್ಮಟ ತುಂಬಾ ಪ್ರಸಿದ್ದವಾದ್ದು. ಇಲ್ಲಿರುವ ಮಸೀದಿ ದಕ್ಷ್ಣಣಭಾರತದಲ್ಲೇ ದೊಡ್ಡದು. ಗುಲ್ಭರ್ಗ ಮತ್ತು ಬಿದರೆ ಇನ್ನೆರಡು ಸ್ಥಳಗಳು. ಗುಲ್ಭರ್ಗ ಕೋಟೆಯ ಬತ್ತೇರಿಗಳು ದೊಡ್ಡ ಆಕರ್ಶಣೆಗಳು. ಇಲ್ಲಿಯ ಶರಣಬಸವ ದೇವಸ್ಥಾನಕ್ಕೆ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ನಿಸರ್ಗದ ಮಡಿಲ್ಲಲ್ಲಿರುವ ಬೀದರ್ ನ ಪುರಾತನ ಕೋಟೆಗಳೂ ಭುವನಗಳೂ ಹಿಂದೂ-ಮುಸ್ಲೀಂ ಕಲೆಗಳ ಸಂಗಮದ ಪ್ರತೇಕಗಳು. ಬದ್ರಿ ಕಲೆಗೆ ಈ ಊರು ಪ್ರಸಿದ್ದ. ಬೀದರ್ ಗೆ ಸು. ೧೧೨ ಕಿಮೀ ದೂರದಲ್ಲಿರುವ ಕಲ್ಯಾಣ ಚಾಳುಕ್ಯರ ರಾಜಧಾನಿಯಾಗಿತ್ತು. ಹಿಂದೂ ಯುದ್ದಶಿಲ್ಪದ ಪರಿಚಯ ಪಡೆಯಬೇಕೆನ್ನುವರು