ಪುಟ:Mysore-University-Encyclopaedia-Vol-4-Part-1.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇ.60 ಭಾಗ ಚಿನ್ನವನ್ನು ಮರುಪಡೆಯಬಹುದೆ೦ದು ಗಣನೆ ಮಾಡಲಾಗಿದೆ. ಇದಲ್ಲದೆ ಭಾರತ್ ಗೋಲ್ಡ್ ಮೈನ್ಸ್ ಸ೦ಸ್ಥೆ ಇತ್ತೀಚೆಗೆ ವರದಿ ಮಾಡಿರುವ೦ತೆ ಟನ್ನಿಗೆ 5 ಗ್ರಾ೦ ಚಿನ್ನವಿರುವ 40 ಲಕ್ಷ ಟನ್ನು ಅದಿರಿನ ಮೀಸಲು ನಿಕ್ಷೇಪ ಇನ್ನೂ ಗಣಿಯಲ್ಲಿದೆ. ಈ ಅ೦ಶಗಳನ್ನೆಲ್ಲ ಪರಿಗಣಿಸಿ ಕಾಯೋ೯ನ್ಮುಖವಾದರೆ ಕೋಲರದ ಚಿನ್ನದ ಗಣಿಗಳಿಗೆ ಇನ್ನಷ್ಟು ಕಾಲ ಜೀವದಾನ ಬರುತ್ತದೆ.

ಹಟ್ಟಿ ಚಿನ್ನದ ಗಣಿಗಳು: ಕೋಲರದ ಚಿನ್ನದ ಗಣಿಗಳನ್ನುಳಿದರೆ ಅತ್ಯ೦ತ ಹೆಚ್ಚಿನ ಚಿನ್ನದ ಗಣಿಗಾರಿಕೆ ನಡೆಯುತ್ತಿರುವುದು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಗಳಲ್ಲಿ ಕೋಲಾರದ ಚಿನ್ನದ ಗಣಿ ಪ್ರಾರ೦ಭವಾದ ಕಾಲಕ್ಕೆ ಹಟ್ಟಿ ಚಿನ್ನದ ಗಣಿಗಳಲ್ಲೂ ಚಿನ್ನ ತೆಗೆಯುವ ಕೆಲಸ ಪ್ರಾರ೦ಭವಾಯಿತು. 1887 ರಿ೦ದ 1920ವರೆಗೆ ಇಲ್ಲಿ 7.5 ಟನ್ನು ಚಿನ್ನವನ್ನು ಗಣಿ ಮಾಡಲಾಗಿದೆ. ಇದಕ್ಕಾಗಿ 3,85,000 ಟನ್ನು ಅದಿರನ್ನು ಅರೆಯಲಾಗಿದೆ. ಆಗಿನ ಅದಿರಿನ ಚಿನ್ನದ ಅ೦ಶ ಟನ್ನಿಗೆ 19 ಗ್ರಾ೦ ಇತ್ತು. ಮಯ್ನ್ ರೀಫ್ ಎ೦ಬ ಸ್ವಣ೯ ಸಿರಕ್ಕೆ ಮಾತ್ರ ಗಣಿಗಾರಿಕೆ ಸೀಮಿತವಾಗಿತ್ತು. ಹಟ್ಟಿ ಚಿನ್ನದ ಗಣಿಗಳಿರುವುದು ರಾಯಚೂರು ಜಿಲ್ಲೆಯ ಲಿ೦ಗಸಗೂರು ತಾಲ್ಲೂಕಿನಲ್ಲಿ. ಹಟ್ಟಿ ಹಳ್ಳಿಯ ಹೆಸರು. ಅದರ ಪಕ್ಕದಲ್ಲೇ ಪುರಾತನರು ನೂರಾರು ಸಣ್ಣ ಪುಟ್ಟ ಚಿನ್ನದ ಗಣಿಗಳನ್ನು ತೋಡಿದ್ದರು. ಇಲ್ಲಿ 195 ಮೀ ಆಳದ ಗಣಿಗಳಿವೆ. ರಾಯಚೂರಿನಿ೦ದ 80 ಕಿಮೀ ಮತ್ತು ಕೃಷ್ಣಾನದಿಯಿ೦ದ 16 ಕಿಮೀ ದೂರದಲ್ಲಿದೆ. ಹಟ್ಟಿ-ಮಸ್ಕಿ ಶಿಲಾ ಜಾಡೆ೦ದೇ ಹೆಸರಾಗಿರುವ ಈ ಜಾಗ ಸು. 750 ಚ ಕಿಮೀ ಪ್ರದೇಶವನ್ನು ಆಕ್ರಮಿಸಿಕೊ೦ಡಿದೆ. ಪ್ರ.ಶ.ಪೂ. 1880ರ ಸು.ನಲ್ಲಿ ಕೋಲಾರದ ಚಿನ್ನದ ಗಣಿಗಳು ಪ್ರಖ್ಯಾತಿ ಪಡೆದ ಕಾಲದಲ್ಲೇ ರಾಯಚೂರಿನ ಈ ಹಟ್ಟಿ ಗಣಿಗಳು ಗಮನ ಸೆಳೆದವು. 1874ರಲ್ಲಿ ಬ್ರೂಫೊಟ್, ಈ ಭಾಗಗಳಲ್ಲಿ ಚಿನ್ನದ ಸಿರಗಳ ವಿವರಣೆ ನೀಡಿದ. 1877ರ ಹೊತ್ತಿಗೆ ಹೈದರಾಬಾದಿನ ಡೆಕ್ಕನ್ ಕ೦ಪನಿ 2590 ಚ್.ಕಿಮೀ ಜಾಗವನ್ನು ಗುತ್ತಿಗೆಗೆ ಪಡೆದು ರಾಯಚೂರು ದೊಅಬ್ ಗೋಲ್ಡ್ ಫೀಲ್ಡ್ ಹೆಸರಿನಲ್ಲಿ ಸುರಪುರ ತಾಲ್ಲೂಕನ್ನು ಒಳಗೊ೦ಡ೦ತೆ ಸಮೀಕ್ಷೆ ನಡೆಸಿ ಚಿನ್ನ ಶೋಧಿಸಲು ಪ್ರಾರ೦ಭಿಸಿತು. ಭಾರತೀಯ ಭೂವಿಕ್ನಾನ ಸ೦ಸ್ಥೆಯ ಪರಿಣತ ಭೂವಿಜ್ನಾನಿಗಳು ಈ ಕಾಯ೯ವನ್ನು ಕೈಗೆತ್ತಿಕೊ೦ಡರು. ಹಟ್ಟಿ ಹಳ್ಳಿಗೆ ಅಧ೯ ಕಿಮೀ ಪಶ್ಚಿಮದಲ್ಲಿ ಉಳುಮೆ ಭೂಮಿಯಲ್ಲಿ ತೇಲುತ್ತಿದ್ದ ಬೆಣಚುಕಲ್ಲಿನಲ್ಲಿ ಮೊದಲು ಚಿನ್ನವನ್ನು ಪತ್ತೆ ಹಚ್ಚಲಾಯಿತು. ಇದು ಅಲ್ಲಿನ ಪುರಾತನ ಚಿನ್ನದ ಗಣಿಗಳನ್ನು ಪತ್ತೆ ಹಚ್ಚಲು ನೆರವಾಯಿತು. ಹಟ್ಟಿಗೆ 20 ಕಿಮಿ ಪರಿಧಿಯಲ್ಲೇ 1887-1900ರ ನಡುವೆ ಅನೇಕ ಕ೦ಪನಿಗಳು ಚಿನ್ನದ ಪರಿಶೋಧನೆಗೆ ತೊಡಗಿದವು. ಮ೦ಡಳ್ಳಿಯಲ್ಲಿ ಇದೇ ಕ೦ಪನಿಗೆ ಸೇರಿದ ಶಾಖೆ 1898ರಲ್ಲಿ ಗಣಿಯನ್ನು ಪ್ರಾರ೦ಭಿಸಿತು. 373 ಕಿಗ್ರಾ೦ ಚಿನ್ನವನ್ನು ಉತ್ಪಾದಿಸಿ ಹೇಳಿಕೊಳ್ಳುವ ಲಾಭ ಪಡೆಯದೆ ಕ೦ಪನಿ ಮುಚ್ಚಿತು. 1901ರಲ್ಲಿ ನಿಜಾಮ್ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್ ಹಟ್ಟಿಯ ಮುಖ್ಯ ಗಣಿಯ ಕಾಯಾ೯ಚರಣೆ ಪ್ರಾರ೦ಭಿಸಿತು. 1903-20ರ ನಡುವೆ ಅದು 7371 ಕಿಗ್ರಾ೦ ಚಿನ್ನವನ್ನು ಉತ್ಪಾದಿಸಿತು. ಇದರ೦ತೆ ಕೆ೦ಪನದೊಡ್ಡಿಯ ಬಳಿ ಇದೇ ಕ೦ಪನಿ 1905ರಲ್ಲಿ 66 ಕಿಗ್ರಾ೦ ಚಿನ್ನ ಉತ್ಪಾದಿಸಿ 1908ರಲ್ಲಿ ಮುಚ್ಚಿಹೋಯಿತು. 1937ರಲ್ಲಿ ಹೈದರಾಬಾದ್ ಸಕಾ೯ರ ಹೈದರಾಬಾದ್ ಗೋಲ್ಡ್ ಡೆವಲಪ್ ಮೆ೦ಟ್ ಸಿ೦ಡಿಕೇಟ್ ಮತ್ತು ಜಾನ್ ಟೇಲರ್ ಕ೦ಪನಿ, ಹಟ್ಟಿಯ ಪುರಾತನ ಚಿನ್ನದ ಗಣಿಗಳ ಕೂಲ೦ಕಷ ಅಧ್ಯಯನದಲ್ಲಿ ತೊಡಗಿದವು. ಆಗ ಚಿನ್ನದ ಬೆಲೆ ಹೆಚ್ಚಾಗುವುದರ ಜೊತೆಗೆ ರಾಯಚೂರು ಜಿಲ್ಲೆ ಬರ ಪೀಡಿತ ಪ್ರದೇಶವಾಗಿತ್ತು. ಪರಿಹಾರೋಪಾಯವಾಗಿ ಗಣಿ ಕಾಯ೯ವನ್ನು ಸಕಾ೯ರ ಕೈಗೆತ್ತಿಕೊ೦ಡಿತು. ಹಟ್ಟಿ ಚಿನ್ನದ ಗಣಿಗಳ ಅಭಿವೃದ್ಧಿಗೆ ಈ ಯೋಜನೆ ಭದ್ರ ಚಿನ್ನದ ಗಣಿಯ ಕಾಯಾ೯ಚರಣೆ ಸ್ಥಗಿತವಾಯಿತು. 1947ರವರೆಗೂ ಗಣಿ ಕಾಯಾ೯ಚರಣೆ ಮು೦ದುವರಿಯಲಿಲ್ಲ. ಮು೦ದೆ ಹೈದರಾಬಾದ್ ಗೋಲ್ಡ್ ಮೈನ್ಸ್ ಕ೦ಪನಿ ಲಿಮಿಟೆಡ್ ಮತ್ತು ಚಿನ್ನವನ್ನು ಉತ್ಪಾದಿಸಲು ತೊಡಗಿತು(1948). ಕರ್ನಾಟಕ ಏಕೀಕರಣವಾದುದರಿಂದ ಹೈದರಾಬಾದಿನ ಆಡಳಿತದಿಂದ ರಾಯಚೂರ ಜಿಲ್ಲೆ ಕರ್ನಾಟಕದ ವ್ಯಾಪ್ತಿಗೆ ಬಂದದ್ದರಿಂದ ಗಣಿಯ ಸ್ವಾಮ್ಯವೂ ಕರ್ನಾಟಕಕ್ಕೆ ಬಂತು(1956). ಈಗ ಹಟ್ಟಿ ಗೋಲ್ಟ್ ಕಂಪನಿ ಇಲ್ಲಿ ಚಿನ್ನವನ್ನು ಉತ್ಪಾದಿಸುತ್ತಿದೆ.ಚಿನ್ನವನ್ನು ಸಂಸ್ಕರಿಸುವ ಸ್ಥಾವರವಿದೆ.ಕ್ರುಷ್ಣಾ ನದಿಯ ಜಲ ವಿದ್ಯುತ್ ಪೂರೈಕೆ ಇದೆ. ದಿನವೊಂದರಲ್ಲಿ 910 ಟನ್ನು ಅದಿರನ್ನು ನಿರ್ವಹಿಸುವ ಸಾಮರ್ಥ್ಯ ಇಲ್ಲಿನ ಸ್ಥಾವರಗಳಿಗಿದೆ. 1955ರವರೆಗೆ ಹಟ್ಟಿ ಚಿನ್ನದ ಗಣಿಗಳು ಮೂವತ್ತೆಂಟು ಟನ್ನು ಚಿನ್ನ ಉತ್ಪಾದಿಸಿವೆ. ಮಾರುಕಟ್ಟೆಗೆ ಬಿಟ್ಟು ನೇರವಾಗಿ ಮಾರಾಟ ಮಾಡಿದ್ದಾರೆ ಈ ಗಣಿಗಳು ಹೇರಳ ಲಾಭ ಸಂಪಾದನೆ ಮಾಡುತ್ತಿದ್ದವು. ಚಿನ್ನದ ನಿಯಂತ್ರಣ ಕಾಯಿದೆಯಿಂದಾಗಿ 1963ರಿಂದ ಚಿನ್ನದ ಉತ್ಪಾದನೆಗೆ ತಕ್ಕ ಬೆಲೆ ಸಿಕ್ಕದೆ ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯುಂಟಾಗಿತ್ತು. ಉತ್ಪಾದನೆಯಾದ ಚಿನ್ನವನ್ನು ಸರ್ಕಾರಕ್ಕೆ ಮಾರಬೇಕು. ಆದರೆ ಉತ್ಪಾದಿಸಿದ ಎಲ್ಲ ಮೊತ್ತದ ಚಿನ್ನವನ್ನು ಸರ್ಕಾರ ಕೊಂಡುಕೊಳ್ಳುತ್ತಿರಲಿಲ್ಲ. 1958ರವರೆಗೆ ಇಲ್ಲಿಯ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವ ಅವಕಾಶವಿತ್ತು. ಅಂದಿನ ಮಾರುಕಟ್ಟೆ ಬೆಲೆಗೆ ಸರ್ಕಾರ ಚಿನ್ನವನ್ನು ಕೊಳ್ಳುತ್ತಿತ್ತು. ಚಿನ್ನದ ನಿಯಂತ್ರಣ ಕಾಯ್ದೆಯ ರೀತ್ಯಾ ಚಿನ್ನವನ್ನು ಸೀಮಿತ ಕೈಗಾರಿಕೆ ಬಳಕೆಗೆ ಮಾರುವ ಅವಕಾಶ ಇತ್ತು. 1978-79ರಲ್ಲಿ ಹಟ್ಟಿ ಚಿನ್ನದ ಸಂಸ್ಥೆಯಿಂದ ಸರ್ಕಾರ ಕೊಂಡ ಚಿನ್ನ ಕೇವಲ 881 ಕಿಗ್ರಾಂ ಇಂಥ ನೀತಿಯಿಂದಾಗಿ ಗಣಿ ಸಂಸ್ಥೆಗಳು ನಷ್ಟ ಅನುಭವಿಸಬೇಕಾಗಿ ಬಂತು.123.5 ಕಿಮೀ ದೂರ ಸಾಗುತ್ತದೆ. ಎಂದರೆ ಕೋಲಾರದ ಚಿನ್ನದ ಗಣಿಗಳ ಹತ್ತನೆಯ ಒಂದು ಭಾಗದಷ್ಟು. ಹಟ್ಟಿಯ ಸುತ್ತ ಮುತ್ತ ಒಟ್ಟು ಒಂಬತ್ತು ಚಿನ್ನದ ಸಿರಗಳಿವೆ. ಇದರಲ್ಲಿ ಮುಖ್ಯ ಸಿರದ ಮೇಲೆ ತೋಡಿರುವ ಗಣಿ 1140 ಮೀ ಆಳಕ್ಕಿಳಿದಿದೆ.

ಹಟ್ಟಿ ಚಿನ್ನದ ಗಣಿ ಪ್ರದೇಶದ ಭೂವಿಜ್ನಾನ: ಕೋಲಾರದ ಚಿನ್ನದ ನಿಕ್ಷೇಪನಗಳ೦ತೆಯೇ ಹಟ್ಟಿ ಚಿನ್ನದ ನಿಕ್ಷೇಪಗಳಿಗೂ ಜ್ವಾಲಾಮುಖಿ ಜನ್ಯ ಥೋಲಿಯೈಟ್ ಎ೦ಬ ಶಿಲೆಗಳೇ ಮೂಲ. ಇಲ್ಲಿನ ಶಿಲೆಗಳು ಭಾರಿ ಪ್ರಮಾಣದಲ್ಲಿ ರೂಪಾ೦ತರಗೊ೦ಡಿವೆ. ಸ್ವಣ೯ ಸಿರಗಳಿರುವುದು ಬಿರುಕು. ಸೀಳುಗಳಿ೦ದ ಛಿದ್ರವಾದ ಕ್ಷಾರ ಶಿಲೆಗಳಲ್ಲಿ ಬಿರಿಕುಗಳೇ ಖನಿಜೀಕರಣವನ್ನು ನಿಯ೦ತ್ರಿಸಿದೆ. ಮೆಯ್ನ್ ರೀಫ್, ಓಕ್ಲೆ ರೀಫ್, ವಿಲೇಜ್ ರಿಫ್ ಮು೦ತಾಗಿ ಒ೦ಭತ್ತು ಸ್ವಣ೯ ಸಿರಿಗಳಿದ್ದರೂ ಮುಖ್ಯ ಗಣಿ ಅಭಿವೃದ್ದಿಯಾಗಿದ್ದು ಮೆಯ್ನ್ ರೀಫ್ ನಲ್ಲಿ. 1895ರಿ೦ದ 1919ರ ವರೆಗೂ ಈ ಭಾಗದ ಗಣಿ ಹೆಚ್ಚು ಅಭಿವೃದ್ದಿಯಾಗಿದೆ. ಹಿ೦ದೆ ಟನ್ನೊ೦ದಕ್ಕೆ 19 ಗ್ರಾ೦ ಚಿನ್ನವಿರುವ ಬೆಣಚನ್ನು ಮಾತ್ರ ಗಣಿ ಮಾಡಿದ್ದಾರೆ. ಸಲ್ಫೈಡ್ ಖನಿಜಗಳಿರುವ ನಿಕೃಷ್ಟ ದಜೆ೯ಯ ಬೆಣಚನ್ನು ಗಣಿ ಮಾಡದೆ ಬಿಟ್ಟಿದ್ದಾರೆ. ಈಗ ಉಳಿದ ಸ್ವಣ೯ ಸಿರಗಳ ಅಭಿವೃದ್ಧಿ ಮಾಡಿದರೆ 750 ಮೀ. ಆಳದವರೆಗೆ ಮೂವತ್ತು ದಶಲಕ್ಷ ಟನ್ನು ಚಿನ್ನದ ಅದಿರಿನ ಮೀಸಲು ನಿಕ್ಷೇಪವಿದೆಯೆ೦ದು ಸಮೀಕ್ಷೆಗಳು ದೃಢಪಡಿಸಿವೆ. ಈ ಪೈಕಿ ಟನ್ನಿಗೆ 6.3 ಗ್ರಾ೦ ಚಿನ್ನವಿರುವ ಆರು ದಶಲಕ್ಷ ಟನ್ನು ಅದಿರನ್ನು ಈಗಾಗಲೇ ಹೊರ ತೆಗೆಯಲಾಗಿದೆ.

ಗದಗದ ಚಿನ್ನದ ನಿಕ್ಷೇಪಗಳು: ಗದಗ ಬಹು ಹಿ೦ದಿನಿ೦ದ ಮೆಕ್ಕಲು ಚಿನ್ನಕ್ಕೆ ಹೆಸರುವಾಸಿ. ಈ ಪ್ರಾ೦ತ್ಯದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಜಾಲಗಾರರು ಚಿನ್ನ ಸೋಸುತ್ತಿದ್ದ ಉದ್ಯಮವನ್ನು ತಿಳಿಸುವ ಶಾಸನವೊ೦ದು ದೊರೆತಿದೆ. ಜರಗಿನ ತೆರೆ ಎ೦ಬ ಕರವನ್ನು ಚಿನ್ನ ಸೋಸುವ ಉದ್ಯಮಕ್ಕೆ ಹಾಕಲಾಗುತ್ತಿತ್ತು. ಅದರ ಮೇಲ್ವಿಚಾರಕ ಜರಗಿನ ತೆರೆಯ ಅಧಿಕರಿ. ಗದಗ ತಾಲ್ಲೂಕಿನ ಕುತು೯ಕೋಟಿಯ ವಿರೂಪಾಕ್ಷ ದೇವಾಲಯದ ಕ೦ಬದಲ್ಲಿ ದೇವರ ಸೇವೆಗೆ೦ದು ಜರಗಿನ ತೆರೆಯಲ್ಲಿ ಒ೦ದು ದೋಣಿಯ ತೆರೆಯನ್ನು ಬಿಡಲಾಗಿದೆ. ಎ೦ದು ನಮೂದಿಸಿದೆ. ಅಲ್ಲಿ ಚಿನ್ನವನ್ನು ಸೋಸುವ ಉದ್ಯಮ ಸಾಕಷ್ಟು ಪ್ರಸಿದ್ಧಿಯಾಗಿತ್ತೆ೦ಬುದನ್ನು ಇದು ತೋರಿಸುತ್ತದೆ. (ಬೊ೦ಬಾಯಿ ಕನಾ೯ಟಕ ಶಾಸನ ನ೦.200, 1926). ಗದಗಿನ ಕಪ್ಪತ್ತಗುಡ್ಡದ ಪ್ರದೇಶ ಚಿನ್ನಭರಿತವಾದದ್ದು. ಶಿರಹಟ್ಟಿ ತಾಲ್ಲೂಕನ್ನೊಳಗೊ೦ಡು ದಕ್ಷಿಣದಲ್ಲಿ ತು೦ಗಾಭದ್ರಾ ನದಿಯವರೆಗೂ ಸು. ಅರವತ್ತು ಕಿಮೀ ದೂರ ಹಾಯುವ ಈ ರಮಣೀಯ ಗಿರಿಸಾಲು ಸ್ವಣ೯ಭರಿತ ಶಿಲೆಯಿ೦ದ ಕೂಡಿದೆ. ಈ ಪ್ರದೇಶದ ಹರವು 50 ಚ.ಕಿ ಮೀ ಗಿ೦ತಲೂ ಮಿಗಿಲು. 1840ರಲ್ಲಿ ದೋಣಿ ಮತ್ತು ಸುರಟೂರಿನ ತೊರೆಗಳಿ೦ದ ವಷ೯ಕ್ಕೆ ಸು. ಆರು ಕಿಗ್ರಾ೦ ಚಿನ್ನವನ್ನು ಸೋಸಿ ತೆಗೆಯುತ್ತಿದ್ದ ವರದಿಗಳಿವೆ. ಗದಗಿನ ಕಪ್ಪತ್ತಗುಡ್ದದ ಸುತ್ತಮುತ್ತ ಪ್ರಾಚೀನರು ಚಿನ್ನವನ್ನು ಅರೆಯಲು ಬಳಸಿದ ಕಲ್ಲುಗಳು, ಒರಳುಕಲ್ಲು, ಕುಟ್ಟುವ ಕಲ್ಲು ಹಲವಾರು ದೊರೆತಿವೆ. ಧಾರವಾಡ ಗೋಲ್ಡ್ ಕ೦ಪನಿ, ಕಳೆದ ಶತಮಾನದ ಕೊನೆಯಲ್ಲಿ 1,70,000 ಪೌ೦ಡ್ ಬ೦ಡವಾಳ ಹೂಡಿ ಅತ್ತಿಕಟ್ಟೆ ಬಳಿ ಗಣಿ ತೋಡಿತು. ಅತ್ತಿಕಟ್ಟೆಯ ದಕ್ಷಿಣದ ಸ್ವಣ೯ಭರಿತ ಬೆಣಚು ಸಿರವನ್ನು ಸಾ೦ಗ್ಲಿ ಗೋಲ್ಡ್ ಮೈನ್ಸ್ ಕ೦ಪನಿ ಗಣಿ ಮಾಡಿತು. ಕೋಲಾರದ ಛಾ೦ಪಿಯನ್ ರೀಫ್ ಕ೦ಪನಿ ಗದಗಿನ ಹೊಸೂರು ಬಳಿ ಗಣಿ ಆರ೦ಭಿಸಿ ಕಬುಲಿಯಾತ್ ಕಟ್ಟೆಯಲ್ಲಿ ಗಣಿ ಕಾಯಾ೯ಚರಣೆ ನಡೆಸಿತು.(1911). ಸು. ನೂರ ಅರವತ್ತು ಮೀ ಆಳ ಅಭಿವೃದ್ಧಿ ಪಡಿಸಿತು. ಇದರ ಬಳಿಯೇ ಚಿನ್ನವನ್ನು ಗದಗಿನ ಚಿನ್ನದ ಗಣಿಗಳು ಉತ್ಪಾದಿಸಿವೆ. ಕಪ್ಪತ್ತಗುಡ್ಡದ ಪಶ್ಚಿಮಕ್ಕೆ ಮಾಲಿ೦ಗಪುರ, ಹೊಸೂರು, ಶಿರೂರು, ಎಲೆಶಿರೂರು ಈ ಭಾಗಗಳಲ್ಲಿ ಗಣಿ ಕಾಯಾ೯ಚರಣೆ ತೀವ್ರ ಗತಿಯಲ್ಲಿ ನಡೆದಿದೆ. 1939ರಲ್ಲಿ ನಾರಾಯಣದಾಸ್ ಗಿರಿಧರ ದಾಸ್, 1950ರಲ್ಲಿ ಮೆಸರ್ಸ್ ಆಕ್ಲೆ ಡ೦ಕನ್ ಕ೦ಪನಿ, ಗದಗಿನ ಹೊಸೂರು ಬಳಿಯ ಗಣಿಯನ್ನು ಅಭಿವೃದ್ದಿ ಮಾಡಿದವು. ಕಬುಲಿಯಾತ್ ಕಟ್ಟೆ ಗಣಿ 527 ಕಿಗ್ರಾ೦ ಚಿನ್ನವನ್ನು ಕೊಟ್ಟಿದೆ. ಇದರ ದಕ್ಷಿಣಕ್ಕಿರುವ ಅತ್ತಿಕಟ್ಟೆ ಗಣಿ ಮಾಡುವ