ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-4-Part-1.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕರ್ನಾಟಕ ಇತಿಹಾಸ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ಶರ್ಮ ಹೆಸರಿನ ಸ್ಥಳದಲ್ಲಿ 'ವರ್ಮ' ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ ಕಾಕುತ್ಸವರ್ಮ, ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ 2ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾಂವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು ಪ್ರಾಕೃತ ಭಾಷೆಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ ಸಂಸ್ಕೃತ ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗರಿಷ್ಠ ವರ್ತಿ ವಿವಾಗಿ ನೆಂದರೆ ಇವರ ಮುಖ್ಯ ಅರಿವಾಗುತ್ತದೆ, ಆವರ್ತಿ 1ನೆಯ ಕುಮಾರಗುಪ್ತನಾಗಿರಬಹುದು. 540ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. 14ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ- ಶೈವಧರ್ಮಗಳು ವೃದ್ಧಿಗೊಂಡುವು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪೂಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್‌ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛಾಯಸ್ಥಿತಿಯನ್ನು ಸೂಚಿಸುತ್ತವೆ. ಸು.636ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಗಂಗವಂಶ : ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು 325ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಮೊದಲಿಗೆ ಇವನ ರಾಜಧಾನಿ ಕೋಲಾರದಲ್ಲಿತ್ತು. ಈ ವಂಶಜರು 10ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರೀ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ ತಲಕಾಡು (ಮೈಸೂರು ಜಿಲ್ಲೆ) ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ 1, ಶ್ರೀ ಪುರುಷ, ಪೃಥ್ವಿಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. 2ನೆಯ ಪುಲಕೇಶಿ 642ರಲ್ಲಿ ಯುದ್ಧದಲ್ಲಿ ಮಡಿದು ಆ ರಾಜ್ಯ ಪಲ್ಲವರ ಕೈಸೇರಿದಾಗ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದ ಈ ವಂಶದ ರಾಜರು 1ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. 2ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. 2ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಡ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ - ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ 2ನೆಯ ಮಾರಸಿಂಹ ಮತ್ತು 4ನೆಯ ರಾಚಮಲ್ಲರ ಮಂತ್ರಿಯಾದ ಗಂಗರಾಜರ ಲಾಂಛನ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. 1004ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ 1116ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧೈಯವನ್ನು ಮುಂದುವರಿಸಿದರು. ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ ಅನಂತಪುರ ಮತ್ತು ಕಡಪ ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ ತುಮಕೂರು, ಬೆಂಗಳೂರು, ಕೊಡಗು, ಮೈಸೂರು ಪ್ರದೇಶಗಳೂ ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳೂ ಅವರ ವಶವಾದುವು. ಕದಂಬರು 4ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಳುಕ್ಯ ರಾಜ್ಯದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಹಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ 16000ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, ಚನ್ನಪಟ್ಟಣದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ, ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ವಿನೀತ ಸ್ವತಃ ವಿ4ಗಿದ್ದುದಲ್ಲದೆ ಸಿದ್ವಜ್ಜನವಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ. ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ತೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ