ಪುಟ:Mysore-University-Encyclopaedia-Vol-4-Part-1.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ನಾಟಕ ಇತಿಹಾಸ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ.ಈತ ಮನ್ಮಥನನ್ನು

ನಾಚಿಸುವಷ್ಟು ಸುಂದರ;ಇವನ ಜ್ವಾಪಕಶಕ್ತಿ ಅಸಾಧಾರಣ ;ಈತ ಕುಶಾಗ್ರಮತಿ

,ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ.ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ.ಇಮ್ಮಡಿ

ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ 

ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ.ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ.ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸದ ಚಾವುಂಡರಾಯ ಅಪ್ರತಿಮ ಸೇನಾನಿ,ಅದ್ವತೀಯ ರಾಜಕಾರಣಿ,ವಿದ್ಯಾಪಕ್ಷಪಾತಿ; ತರ್ಕ,ವ್ಯಾಕರಣ,ಗಣಿತ,ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ,ಚಾವುಂಡರಾಯಪುರಾಣವನ್ನು ರಚಿಸಿದವನೀತನೇ.ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ

   ಬಾದಾಮಿ ಚಳುಕ್ಯರು:ಕದಂಬ-ಗಂಗರ ಅನಂತರ ಕರ್ಣಾಟಕದ ಪ್ರಮುಕ ರಾಜಮನೆತನವೆಂದರೆ ಬಾದಾಮಿ ಚಳುಕ್ಯವಂಶ.ಇವರ ಮೂಲ ಸರಿಯಾಗಿ ಗೊತ್ತಿಲ್ಲ.ಒಂದನೆಯ ಪುಲಕೇಶಿಯ ಕಾಲದಿಂದ 

(ಸ.೫೪೦)ಪ್ರ್ಯಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ

ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು
ಎತ್ತಿಹಿಡಿಯಿತು.ಕೀರ್ತಿವರ್ಮನಿಂದ ವಿಸ್ತೃತವಾದ
ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖರ 

ತಲುಪಿತು.ದಕ್ಷಿಣ ಭಾರತದ

ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರನೆನಿಸಿಕೊಂಡ 

ಈತ ಉತ್ತರಭಾರತದ ಸ್ರಾಮಾಟ ಹರ್ಷನನ್ನು ನರ್ಮಾದಾ ತೀರದಲ್ಲಿ ಸೋಲಿಸಿ ತನ್ನ

ಬಿರುದನ್ನು ಸಾರ್ಥಕಗೊಳಿಸಿಕೊಂಡ.

ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ

ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ.ಆದರೆ
ಈತ ೬೪೨ರಲ್ಲಿ ಪಲ್ಲನ ನರಸಿಂಹವರ್ಮನಿಂದ ಸೋತು
ಮಡಿದ ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ
ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಂ ಸ್ಥಾಪಿತವಾಯಿತು

.ವಿಕ್ರಾಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ

ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ (ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪ)ವರೆಗಿನ ಪ್ರದೇಶವನ್ನೆಲ್ಲಿ ೬೭೪ರಲ್ಲಿ ಜಯಸಿದ.ನಾನಾ ವಿಜಯಗಳಿಂದಲೂ ಸುನ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ.೨ನೆಯ ವಿಕ್ರಮಾದಿತ್ಯನೂ 

ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ್ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗಜರಾತಿನಲ್ಲಿ ಅಧಿಕಾರನನ್ನು ನೆಲೆಗೊಳಿಸಿದ.ಉದರಚರಿತನಾದ ಈತ ಶತ್ರು

ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ 

ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ.ವಿನಯಾದಿತ್ಯ ,ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಚಾಯ ದೆಸೆಯಲ್ಲಿದ್ದ

ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀತರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು.
          ಬಾದಾಮಿ ಚಲುಕ್ಯರ ಕಾಲದಿಂದಲೇ ಕರ್ನಾಟಕದ
ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಱರು ಅಭಿಪ್ರಾಯಪಡುತ್ತಾರೆ.ಆ
ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು 

ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಳುಕ್ಯರ ಕಾಲದಲ್ಲಿ.ಇವರು ಅದರ ಸಾಂಸ್ಕ್ಟ್ತಿಕ ಮೇರೆಗಳನ್ನು ವಿಸ್ತರಿಸಿದರು; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು.ಬಾದಾಮಿ ಇವರ

ರಾಜಧಾನಿ.ಎಲ್ಲ
ದಿಕ್ಕುಗಳಿಗೂ ರಾಜ್ಯ ಹರಡಿತ್ತು.ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ
ಕರ್ನೂಲು,ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು,ದಕ್ಷಿಣದಲ್ಲಿ
ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ-ಇವು ಈ 

ರಾಜ್ಯದ ಉಚ್ಚ್ರಯ ಕಾಲದಲ್ಲಿ ಎಲ್ಲೆಗಳಾಗಿದ್ದುವು.ಇದಲ್ಲದೆ ಈ ವಂಶಜರು ಗುಜರಾತ್ ಮತ್ತು

ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು.ಕ್ರಮೇಣ
ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ‍ ಸಂಸ್ಕ್ರತಿಯ ಹೊರಕೇಂದ್ರ್ಗ

ಳಾದುವು.ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು.ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು.ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ,ಸಾಮಾಜಿಕ,ಭಾಷಾ,ಸಾಹಿತ್ಯ ಮತ್ತು

ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು

.ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು.ಯುವಾನ್ ಚಾಂಗ್ ತಿಳಿಸಿರುವಂತೆ

ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು
ಪಾಲಿಸುತ್ತ ನ್ಯಾಯಪರರಾಗಿದ್ದರು.ಅಬಿಮಾನಿಗಳು,

ಉತ್ಸಾಹಿಗಳು,ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು,ಅನ್ಯಯದ

ದ್ವೇಷಿಗಳು

,ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ.ಸಧುಗೆ ಸಾಧು, ಮಾಧುರ್ಯಂಗೆ ಮಾಧರ್ತಂ,ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ.

            ಶೈವ,ವೈಷ್ಣವ,ಜೈನ ಮತ್ತು

ಬೌದ್ಧಧ್ರ್ಮಗಳಿಗೆ ಸಮಾನಾಶ್ರಯವಿತ್ತು.ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು

ಪ್ರೋತ್ಸಾಹವಿತ್ತು.ಮಂಗಲೀಶನ ಕಾಲದಲ್ಲಿ 

ನಿರ್ಮಿತವಾದ ಮಹಾಕೂಟ ತಿಳಿಸುತ್ತದೆ.೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ .ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ,ದುರ್ಗಾ, ಮಲ್ಲಿಕಾರ್ಜುನ,ವಿರೂಪಾಕ್ಷ,ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ

ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು
ಈ ಮತದ ಜನಪ್ರಿಅಯತೆಗೆ ನಿದರ್ಶನವಾಗಿದೆ.ವಿಕ್ರಮಾದಿತ್ಯ 

ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ)ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ.ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ.ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗಹಾಂತರ್ದೇವಾಲಯ ಇದಕ್ಕೆ

ಮೊದಲ ನಿದರ್ಶನ.ಮಂಗಲೀಶ,ವಿಷ್ಣುವರ್ಧನ,ವಿಕ್ರ್ಮಾದಿತ್ಯ,ವಿಜಯಾದಿತ್ಯ 

ಮುಂತಾದ ಈ ರಾಜರ ನಾಮಧೇಯಗಳು ಪರಮಭಾಗವತ,ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಬ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕ್ರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ

ನಡೆಯುತ್ತಿದ್ದು,ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು.

ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲಿನ ಗುಹಾಮ್ತರ್ದೇವಾಲ್ಯಗಳಿಂದಲೂ ಚಾಳುಕ್ಯರ ಪ್ರಮುಖ

ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ.ಐಹೊಳೆ 

ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ.ಈತ ತನ್ನ್ ಪ್ರತಿಭೆ ವಿದ್ವತ್ತುಹಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ.ಈ ಕಾಲದ ಪ್ರಸಿದ್ಧ ಜೈನ್ಚಾರ್ಯರಲ್ಲಿ ದಂಡಿಕವಿಯ