ಪುಟ:Mysore-University-Encyclopaedia-Vol-4-Part-1.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಾಜಗೊಳಿಸಿದ. ಮೂರನೆಯ ಗೋವಿಂದ ಉತ್ತರಭಾರತದಲ್ಲಿ ಪುನಃ ತಲೆದೋರಿದ್ದ ಪ್ರತೇಹಾರ-ಬಂಗಾಳಗಳ ವಿವಾದದಲ್ಲಿ ಪ್ರವೇಶಿಸಿ ಮೊದಲು ಪ್ರತಿಹಾರ ನಾಗಭಟವನ್ನು ಸೋಲಿಸಿ ಕನೌಜನ್ನು ವಶಪಡಿಸಿಕೊಂಡ. ಬಂಗಾಳದ ಧರ್ಮಪಾಲ ತಾನಾಗಿಯೇ ಶರಣಾಗತನಾದ. ವೆಂಗಿ ರಾಜ್ಯದಲ್ಲಿ ತನ್ನ ಹಸ್ತಕನಿಗೆ ರಾಜ್ಯ ಕೂಡಿಸಿ ಅನಂತರ ದಕ್ಷಿಣದಲ್ಲಿ ಗಂಗ, ಪಲ್ಲವ, ಪಾಂಡ್ಯ ಕೇರಳಗಳ ಒಕ್ಕೊಟನ್ನು ಎದುರಿಸಿ ಸದೆಬಡಿದು, ಕಂಚಿಯನ್ನು ವಶಪಡಿಸಿಕೊಂಡ. ರಾಜ್ಯಾಡಳಿತವೂ ಸುವ್ಯವಸ್ಥಿತವಾಯಿತು. ಮೂರನೆಯ ಕೃಷ್ಣನ ಕಾಲದಲ್ಲಿ ಚೋಳರು ಪ್ರಬಲರಾಗುತ್ತಿದ್ದರು. ಅವರ ಉಪಟಳ ತಪ್ಪಿಸಲು, ಆತ ಆ ವಂಶದ ಪರಾಂತಕನನ್ನು ತಕ್ಕೋಲದಲ್ಲಿ ಸೋಲಿಸಿ ಯುವರಾಜ ರಾಜಾದಿತ್ಯನನ್ನು ಕೊಂದುಹಾಕಿದ. ಕಂಚಿಯೂ ರಾಜಧಾನಿಯಾದ ತಂಜಾವೂರೂ ರಷ್ಟ್ರಕೂಟರ ವಶವಾಯಿತು. ಆತ ರಾಮೇಶ್ವರದವರೆಗೂ ಹೋಗಿ ಅಲ್ಲಿ ತಮ್ಮ ಜಯಸ್ತಂಭ ನಡೆಸಿದ. ಈ ದಂಡಯಾತ್ರೆಯಲ್ಲಿ ಅಮೋಘ ಸೇವೆ ಸಲ್ಲಿಸಿದ ಗಂಗರಸ ಭೂತುಗನಿಗೆ ಬನವಾಸಿ ಮುಂತಾದ ಪ್ರಾಂತ್ಯದಲ್ಲಿ ಕೊಟ್ಟ ಈ ವಿಜಯಗಳಿಂದ ಚೊಳರ ಕ್ಲೈಬ್ಯು ನೂರು ವರ್ಶಗಳವರೆಗೆ ಮುಂದುವರೆಯಿತು. ಮೂರನೆಯ ಕೃಷ್ಣ ಉತ್ತರ ಭಾರತದಲ್ಲೂ ಕೆಲವು ವಿಜಯಗಳನ್ನೂ ಗಳಿಸಿದ. ಈ ರೀತಿಯಾಗಿ ದಕ್ಷಿಣದಲ್ಲಿ ಚೋಳರನ್ನೂ ಉತ್ತರದ ಅನೇಕ ರಜರನ್ನೂ ಸೋಲಿಸಿ ಕನೌಜಿನಿಂದ ಕನ್ಯಾಕುಮಾರಿಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ರಾಷ್ಟ್ರಕೂಟರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ೩ನೇಯ ಕೃಷ್ಣನ ಕಾಲದಲ್ಲಿ ಪರಮಾವಧಿ ತಲುಪಿದ್ದ ಇವರ ರಜಕೀಯ ಪ್ರಭಾವ ಅನಂತರ ಇಲಿಮುಖವಾಯಿತು. ಗಂಗವಂಶದ ಮಾರಸಿಂಹನ ಅಮಿತ ಪ್ರಯತ್ನವೂ ವಿಫಲವಾಗಿ ಕಲ್ಯಾಣ ಚಾಳುಕ್ಯರ ಮನೆತನದ ಇಮ್ಮಡಿ ತೈಲಪನಿಂದ ರಷ್ಟ್ರಕೂಟರ ಮನೆತನ ೯೭೩ರಲ್ಲಿ ಕೊನೆಗೊಂಡಿತು. ರಾಷ್ಟ್ರಕೂಟರ ಕದಂಬ, ಚಾಳುಕ್ಯರಂತೆ ಕರ್ನಾಟಕದವರು. ಅವರು ವಿದರ್ಭ ಪ್ರದೇಶದಲ್ಲಿ ಮೊದಲಿಗೆ ಇದ್ದಿದರಿಂದ ಮತ್ತು ಆ ಪ್ರದೇಶ ಈಗ ಮಹಾರಷ್ಟ್ರಕ್ಕೆ ಸೇರುವುದರಿಂದ ಅವರನ್ನು ಮರಾಠರ ಮೂಲಕ್ಕೆ ನಿರ್ದೇಶಿಸಲಾಗದು. ಆ ರಾಜರ ಹೆಸರುಗಳು, ಅವರ ಕಾಲದಲ್ಲಿ ಕನ್ನಡ ಭಾಶೆ ಸಾಹಿತ್ಯಗಳಿಗೆ ದೊರೆಕಿದ ಪ್ರೋತ್ಸಾಹ, ಆ ಕಾಲದ ಶಾಸನಗಳ ಭಾಷೆ ಮತ್ತು ಲಿಪಿ-ಈ ಅಧಿಕಾರಿಗಳಿಂದ ಅವರ ಕನ್ನಡ ಮೂಲ ಸಂದೇಹಾತೀತವಾಗಿದೆ. ವಿಷ್ಣುವಾಹನ ವಾದ ಗರುಡ ಅವರ ಲಾಂಛನ; ಅವರ ತಾಮ್ರ ಶಾಸನಗಳ ಮುದ್ರೆಯಲ್ಲೂ ಇದು ಕಾಣುತ್ತದೆ. ಈ ದೊರೆಗಳು ವಲ್ಲಭ, ಶ್ರೀ ಪೃಥ್ವೀವಲ್ಲಭ ಮುಂತಾದ ಚಳುಕ್ಯ ಬಿರುದುಗಳನ್ನು ಧರಿಸಲು ಚಾಳುಕ್ಯರಿಂದ ಅಧಿಕಾರ ಪಡೆದು, ಅದೇ ಪದ್ದತಿಯನ್ನು ಮುಂದುವರೆಸಿಕೊಂಡು ಹೋದದ್ದು ಸ್ಪಷ್ಟವಾಗಿದೆ. ಬಹುಶಃ ಲಟ್ಟಲೂರು ಇವರ ಮೂಲಸ್ಟಾನವೂ ಮೊದಲ ರಾಜಧಾನಿಯೂ ಆಗಿತ್ತು ಅನಂತರ ಅಚಲಾಪುರಕ್ಕೆ ಇವರು ಸ್ಟಾನಾಂತರ ಹೊಂದಿದರು. ದಂತಿದುರ್ಗ ಎಲ್ಲೋರವನ್ನು ತನ್ನ ಕೇವನ್ನಾಗಿ ಮಾಡಿಕೊಂಡ. ನೃಪತುಂಗನ ಕಾಲದಲ್ಲಿ ಅನಂತರ ಮಾನ್ಯಖೇಟ ರಾಷ್ಟ್ರಕೂಟರ ರಾಜಧಾನಿಯಾಯಿತು.

  ಅನೇಕ ರೀತಿಯಲ್ಲಿ ರಾಷ್ಟ್ರಕೂಟರ ಕಾಲ ಬಹಳ ಮುಖ್ಯವಾದುದ್ದು. ಬಾದಾಮಿ ಚಾಳುಕ್ಯ ಸಾಮ್ರಾಜ್ಯದ ಉತ್ತರಾಧಿಕಾರರಾದ ಇವರು ತಮ್ಮ ಸಾಮ್ರಾಜ್ಯದ ಗಡಿಗಳನ್ನು ಇವರು ಬಹಳವಾಗಿ ವಿಸ್ಥರಿಸಿದರು. ನರ್ಮದೆಯಿಂದ ಕಾವೇರಿಯವರೆಗಿನ ಭೂಭಾಗ ಇವರ ನೇರ ಆಳ್ವಿಕೆಗೆ ಸೇರಿತ್ತು. ಅಲ್ಲದೆ ದಕ್ಷಿಣ ಗುಜರಾತ , ಮಾಳ್ವ, ಆಂಧ್ರದ ಬಹುಭಾಗ, ಕಂಚಿ ಮತ್ತು ತಂಜಾವೂರು ಪ್ರದೇಶಗಳ ಮೇಲೆ ಅನೇಕ ಬಾರಿ ತಮ್ಮ ಅಧಿಕಾರ ಸ್ಥಾಪಿಸಿದರು. ಮತ್ತೆ ಈ ವಂಶದ ಧೀರೋದಾತ್ತ ಸಾಮ್ರಾಟರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸೌರಾಷ್ಟ್ರದಿಂದ ಕಾಮರೂಪದವರೆಗೂ ತಮ್ಮ ಅಸಮಾನವಾದ ಸೈನ್ಯಗಳೊಂದಿಗೆ ಯುದ್ಧವಿಜಯಿಗಳಾಗಿ ಹಲವಾರು ಬಾರಿ ಸಂಚರಿಸಿದರು. ಪಷ್ಚಿಮ-ಮಧ್ಯಭಾರತಗಳಲ್ಲಿ ಫೂರ್ಜರ ಪ್ರತಿಹಾರರೂ ಪೂರ್ವದಲ್ಲಿ  ಪಾಲರೂ ದಕ್ಷಿಣದಲ್ಲಿ ಚೋಳರೂ ಆ ಕಾಲದ ಪ್ರಮುಖ ರಾಜವಂಶಗಳು. ಅವರೆಲ್ಲರನ್ನೂ ಹಲವಾರು ಬಾರಿ ಹತ್ತಿಕ್ಕಿದ ಸಾಹಸ ರಾಷ್ಟ್ರಕೂಟರಿಗೆ ಸೇರಿದ್ದು. ಈ ಮಹತ್ತರ ಸಾಹಗಳಿಗೆ ಸುಶಿಕ್ಷಿತವಾದ ಕರ್ನಾಟಕ ಬಲ ಮುಖ್ಯ ಕಾರಣವಾಗಿತ್ತು. ರಾಜಕೀಯ ಮತ್ತು ಸೇನಾಬಲಗಳ ಇತಿಹಾಸದಲ್ಲಿ ಸಮಕಾಲಿನ ಭಾರತದ ಅಪ್ರತಿಮ ರಾಷ್ಟ್ರವಾಗಿತ್ತು ಅರಬ್ಬಿ ಇಥಿಹಾಸಕಾರ ಸುಲೇಮಾನ ಆ ಕಾಲದ ವಿಷ್ವದ ನಾಲ್ಕು ಬೃಹದ್ರಾಷ್ಟ್ರಗಳಲ್ಲಿ ಇದೂ ಒಂದೆಂದು ಹೇಳುವುದೆ ಇವರ ಮಹತ್ತ್ವಕ್ಕೆ ಸಾಕ್ಷಿ. ಕರ್ಣಾಟಕರು ಯುದ್ಧವಿದ್ಯೆಯಲ್ಲಿ ಪರಿಣಿತರೆಂದೂ, ಸೇನಾನಿರ್ವಹಣದಲ್ಲಿ ಚತುರರಲ್ಲಿ ಆ ಕಾಲದ ಲೇಖಕರಾದ ರಾಜಶೇಖರ ಹೊಗಳಿದ್ದಾನೆ. ರಾಜರು ಸ್ವತಃ ಯುದ್ಧದಲ್ಲಿ ಭಾಗವಹಿಸಿ ಸೈನಿಕರಿಗೆ ಪ್ರೋತ್ಸಾಹನೀಡುತ್ತಿದ್ದುದ್ದಲ್ಲದೆ ಶೌರ್ಯ ಧೈರ್ಯಗಳನ್ನು ಪ್ರದರ್ಶಿಸಿದ ಸಾಮಂತರಿಗೂ ದಳಪತಿಗಳಿಗೂ ಸೂಕ್ತ ಬಹುಮಾನಗಳನ್ನೂ ಐಶ್ವರ್ಯನಳನ್ನೂ ನೀಡುತ್ತಿದ್ದರು. ಇವರು ನಿರಂಕುಶಾಧಿಕಾರಿಗಳಾದಾಗ್ಯೂ ಅನೇಕ ಭಾರಿ ರಾಜಬಂಧುಗಳ ಮಂತ್ರಿ ಅಮಾತ್ಯರ ಸಲಹೆಗನುಗುಣವಾಗಿ ಯುದ್ಧ ಆಡಳಿತಗಳನ್ನು ನಿರ್ವಹಿಸುತಿದ್ದರು. ಅವಿರತ ಯುದ್ಧಭಾಗಗಳಾಗಿದ್ದರೂ ಸಾಹಿತ್ಯ ಕಲಾ ಪ್ರೋತ್ಸಾಹಗಳಾಗಿದ್ದು ದೇಶದ ಸರ್ವತೋಮುಖ ಪ್ರಗತಿಗೆ ಕಾರಣರಾದರು. ಸಾಮಾಜಿಕ ಜೀವನದಲ್ಲಿ ಬಾದಾಮಿ ಚಾಳುಕ್ಯರ ಸಾಮಾಂತರಾಗಿದ್ದು, ಅನಂತರ ಅವರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರ ಕಾಲದಲ್ಲಿ ಯಾವುದೇ ರೀತಿಯ ಸಾಮಾಜಿಕ ಏರುಪೇರುಗಳಾದಂತೆ ಕಾಣುವುದಿಲ್ಲ. ಆದರೆ ಮತೀಯ, ಧಾರ್ಮಿಕರಂಗಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳೇರ್ಪಟ್ತವು. ಮತೀಯ ಭಾವನೆಗಳಲ್ಲಿ ವಿಶಾಲದೃಷ್ಟಿಯಿಂದ ಕೂಡಿದ್ದ ಈ ಸಾಮ್ರಾಟರು ಸರ್ವಧರ್ಮಸಮತೆಯನ್ನು ಆದರ್ಶವಾಗಿಟ್ಟುಕೊಂಡಿದ್ದರು. ಆದರೆ ಚಾಳುಕ್ಯರ ಆಶ್ರಯದಲ್ಲಿ ರೂಢಿಯಲ್ಲಿದ್ದ ಯಜ್ನಯಾಗಾದಿಗಳು ಈ ಕಾಲದಲ್ಲಿ ಮುಂದುವರೆದುದಕ್ಕೆ ಸಾಕ್ಷ್ಯಗಳು ದೊರಕುವುದಿಲ್ಲ. ಅಹಿಂಸೆಯೀ ಮುಖ್ಯತತ್ತ್ವವಾಗುಳ್ಳ ಜೈನಧರ್ಮ ಇದರ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ರಷ್ಟ್ರಕೂಟ ದೊರೆಗಳು ತಮ್ಮ ವೈಯಕ್ತಿಕ ನಂಬಿಕೆಗನುಸಾರವಾಗಿ ವೈಷ್ಣವ ಅಥವ ಶೈವಧರ್ಮದ ಅನುಯಾಯಿಗಳಾಗುತ್ತಿದ್ದು  ವೈಷ್ಣವಸಂಕೇತವಾದ ಗರುಡ ಮತ್ತು ಶೈವಸಂಕೇತವಾದ ಮಹಾಯೋಗಿ ಶಿವನ ಮೂರ್ತಿಗಳನ್ನು ತಮ್ಮ ಲಾಂಛನವಾಗಿ ಉಪಯೋಗಿಸುತಿದ್ದರು. ಇವರ ಶಾಸನಗಳ ಮಂಗಳಶ್ಲೋಕಗಳಲ್ಲಿ ವಿಷ್ಣುಶಿವರಿಬ್ಬರನ್ನೂ ಸ್ತುತಿಸುತ್ತಾರೆ. ಈ ವಂಶದ ಪ್ರಸಿದ್ದ ದೊರೆಯಾದ ಅಮೋಘವರ್ಷ ನೃಪತುಂಗ ಜೈನದೀಕ್ಷೆ ವಹಿಸಿ ಜೈನಧರ್ಮಕ್ಕೆ ವಿಶೇಶ ಪ್ರೋತ್ಸಾಹ ನೀಡಿದ, ಹಲವರು ಸಮಂತ ದಳಪತಿಗಳು ಜೈನಧರ್ಮೀಯಾಗಿದ್ದರು. ಇವರ ಪೈಕಿ ಬಂಕೇಶ ಮತ್ತು ಲೋಕಾದಿತ್ಯರು ಪ್ರಮುಖರು. ವಿದ್ಯಾನಂದ, ಜಿನಸೇನ, ಗುಣಚಂದ್ರ, ಪಂಪ ಮುಂತಾದ ಅನೇಕ ಜೈನಯತಿಗಳು ಜೈನಶಾಸ್ತ್ರವೇತ್ತರೂ ವಿದ್ಯಾಪಕ್ಷಪತಿಗಳೂ ಸಾಹಿತಿಗಳಾಗಿದ್ದೂ ಜೈನಧರ್ಮದ ಪ್ರಬಲ್ಯಕ್ಕೆ ಕಾರಣರಾಗಿದ್ದರು. ಬೌದ್ದಧರ್ಮ ಕೆಲವು ಕೇಂದ್ರಗಳಲ್ಲಿ ಅಸ್ತಿತ್ವದಲ್ಲಿದ್ದು ಅದಕ್ಕೂ ರಾಜಶ್ರಯವಿದ್ದರೂ ಅದು ಅಷ್ಟು ಪ್ರವರ್ಧಮಾನವಾಗಿರಲಿಲ್ಲ. ಸಮಾನ್ಯಜನ ತಮ್ಮ ಸಹಜಪ್ರವೃತ್ತಿಗನಗುಣವಾಗಿ ಯಾವುದಾದರುವೊಂದು ಧರ್ಮವನ್ನು ಅಥವಾ ಎಲ್ಲಾ ಧರ್ಮವನ್ನೂ ಅನುಸರಿಸುತ್ತಿದ್ದರು. ನೃಪತುಂಗ ಜೈನಧರ್ಮೀಯನಾಗಿದ್ದೂ ಮಹಾಲಕ್ಷ್ಮಿಯ ಭಕ್ತನಾಗಿದ್ದ. ಒಮ್ಮೆ ಕ್ಷಾಮದ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ತನ್ನ ಕೈಬೆರಳುಗಳನ್ನೀ ಕತ್ತರಿಸಿ ದೇವಿಗೆ ಅರ್ಪಿಸಿದನೆಂದು ಪ್ರತೀತಿ. ಈ ರೀತಿ ವಿವಿಧ ಧರ್ಮಗಳ ಸಮಾಗಮದ ಫಲವಾಗಿ ಪರಸ್ಪರ ಗೌರವನಿಷ್ಠೆ ಸಾಮರಸ್ಯಗಳು ಬೆಳೆಯಲು ಸಾಧ್ಯವಾಯಿತು. ದೇವಾಲಯಗಳು ಸಾಮಾಜಿಕ ಕೇಂದ್ರಗಳಾಗಿ, ಭಕ್ತಜನರ ದಾನದತ್ತಿಗಳನ್ನು ಪಡೆದು ಸಂಪದ್ಯುಕ್ತವಾಗಿದ್ದುವು. ದೇವಾಲಯಗಳ ಪ್ರಾಮುಖ್ಯ ಮತ್ತು ಜನರ ಧಾರ್ಮಿಕ ಪ್ರವೃತ್ತಿಗೆ ಉತ್ತಮ ನಿದರ್ಶನವೆಂದರೆ ಎಲ್ಲೋರ ಕೈಲಾಸದೇವಾಲಯ. ಇದು ವಿಶ್ವದ ಅದ್ಭುತಳಲ್ಲೋಂದು. ಇದನ್ನು ನಿರ್ಮಿಸಲು ಆಶ್ರಯ