ಪುಟ:Mysore-University-Encyclopaedia-Vol-4-Part-1.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಟ್ಟ ದೊರೆಗೆ ಗೌರವ ತರುವಂತಿದೆ, ಯಾವ ದೇಶವೂ ಹೆಮ್ಮೆಪಟ್ಟುಕೊಳ್ಳಬಹುದಾದ ಸಾಧನೆಯಿದು-ಎಂದು ವಿನ್ಸೆಂಟ್ ಎ. ಸ್ಮಿತ್ ಈ ದೇವಾಲಯವನ್ನು ಹೊಗಳಿದ್ದಾನೆ.

  ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಗಳಿಗೆ ಅದೊಂದು ಮಹತ್ತೈದ ಯುಗ. ಆ ಕಾಲದಲ್ಲಿದ್ದ ದುರ್ಗಸಿಂಹ ಕಾತಂತ್ರಸೂತ್ರಗಳ ಮೇಲೆ ತನ್ನ ವೃತ್ತಿಯನ್ನೂ ಅದರ ಮೇಲೊಂದು ವ್ಯಾಖ್ಯಾನವನ್ನು ರಚಿಸಿದೆ. ಶಾಕಟಾಯನ ವ್ಯಾಕರಣ ಪ್ರಸ್ತಾನವೂ ಆ ಕಾಲಕ್ಕೆ ಸೇರಿದ್ದು. ಆತ ಶಬ್ಡಾನುಶಾಸನವನ್ನೂ ಅದರ ಮೇಲಣ ವೃತ್ತಿಯನ್ನೂ ರಚಿಸಿ ಅದನ್ನು ಅಮೋಘವೃತ್ತಿಯೆಂದು ಕರೆದ. ಈ ಕಾಲದ ತಾಮ್ರ ಮತ್ತು ಶಿಲಾಶಾಸನಗಳು ಕಾವ್ಯಮಯವಾಗಿವೆ. ಇದುವರೆಗೆ ದೊರೆತಿರುವ ಚಂಪು ಕಾವ್ಯಗಳಲ್ಲಿ ಮೊದಲನೆಯದೆಂದು ಕಾಲನಿರ್ದ್ದಿಷ್ಟ ಮಾಡಬಹುದಾದ ನಳಚಂಪೂ ಕಾವ್ಯದ ನಿರ್ಮಾತೃವಾದ ತ್ರಿವಿಕ್ರಮನೆ ಬೇಗುಮ್ರಾ ತಾಮ್ರಶಾಸನವನ್ನೂ ಮದಾಲಸ ಚಂಪುವನ್ನೂ ರಚಿಸಿದೆ. ನೃಪತುಂಗ ಸಂಸ್ಕೃತದಲ್ಲಿ ಪ್ರಶ್ನೊತ್ತರಮಾಲಿಕ ಎಂಬ ಮಧುರ ವೈರಾಗ್ಯಗೀತೆಯ ಕರ್ತೃ.ಇವನ ಅಶ್ರಿತನಾಗಿದ್ದ ಮಹಾವೀರಾಚಾರ್ಯನ ಕೃತಿ ಗಣಿತಸಾರಸಂಗ್ರಿಹ. ಹಲಾಯುಧಕೊಳವೆಂಬ ನಿಘಂಟು, ಕವಿರಹಸ್ಯ ಮತ್ತು ಮೃತಸಂಜೀವಿಗಳ ಲೇಖಕನಾದ ಹಲಾಯುಧ ೩ನೇಯ ಕೃಷ್ಣ ಸಮ್ರಾಟನ ಆಶ್ರಿತ. ಅದ್ವೈತಮತಸ್ಥಾಪಕರಾದ ಶಂಕರಾಚಾರ್ಯರೂ ಅವರ ಮುಖ್ಯ ಶಿಷ್ಯ ಸುರೇಶ್ವರಾಚಾರ್ಯರೂ ಈ ಕಾಲದವರಾಗಿದ್ದರು. ಇವರಿಬ್ಬರು ಅನೇಕ ಕೃತಿಗಳು ವಿದ್ವತ್ಪೂರಣವಾಗಿಯೂ ಭಾರತೀಯ ದರ್ಶನದ ಅಮೂಲ್ಯ ಕೊಡುಗೆಗಳಾಗಿಯೂ ಇವೆ. ರಾಷ್ಟ್ರಕೂಟರ ಅಶ್ರಿತರಾದ ವೇಮುಲವಾಡ ಚಾಳುಕ್ಯರಾಜರ ಅಶ್ರಿತನಾದ ಜೈನ ಸೋಮದೇವಸೂರಿ, ಯಶಸ್ತಿಲಕವೆಂಬ ವಿಶ್ವಕೋಶಸದೃಶವಾದ ನೀತಿವಾಕ್ಯಾಮೃತವನ್ನು ರಚಿಸಿದ್ದಾನೆ. ವೀರಸೆನರ ಜಿನಸೇನರ ಧವಳಾ ಮತ್ತು ಜಯಧವಳಾ ಎಂಬ ಬೃಹತ್ ಭಾಷ್ಯಾಗಳು ಆ ಕಾಲದವು. ಜಿನಸೇನ ಪ್ರಾರಂಭಿಸಿದ ಭರತ ಬಾಹುಬಲಿಗಳ ಚರಿತ್ರೆ ಆದಿಪುರಾಣವನ್ನು ಗುಣಭದ್ರ ತನ್ನ ಉತ್ತರ ಪುರಾಣದಲ್ಲಿ ಪೂರ್ಣಗೊಳಿಸಿದ. ಆದಿ ಪುರಾಣ ಚಂಪೂಕಾವ್ಯಗಳಿಗೆ ಪ್ರಚೋದನ ನೀಡಿದ ಗ್ರಂಥವೆಂದು ಪರಿಗಣಿತವಾಗಿದೆ. ಜಿನಸೇನನ ಮತ್ತೊಂದು ಕೃತಿ ಪಾರ್ಶ್ವಾಭ್ಯುದಯ(ಸಮಸ್ಯಾಪೂರ್ಣವೆಂಬ ಕಾವ್ಯತಂತ್ರದಲ್ಲಿ ಬರೆಯಲಾದ ಈ ಕೃತಿಯಲ್ಲಿ ಕಳಿದಾಸನ ಮೇಘದೂತದ ಪ್ರತಿ ಪಾದಕ್ಕು ಕವಿ ತನ್ನ ಮೂರು ಪಾದಗಳನ್ನು ಸೇರಿಸಿ ಪಾರ್ಶ್ವನಾಥನ ವರ್ಣನೆ ಬರುವಂತೆ ನಿರ್ಮಿಸಿದ್ದಾನೆ)

) ಅಸಗನ ವರ್ಧಮಾನ ಪುರಾಣ ಈ ಕಾಲದ ಕೃತಿ. ಈತ ಕನ್ನಡದಲ್ಲು ಹೆಸರಾಂತ ಕವಿ. ವಿದ್ಯಾನಂದನೆಂಬ ಜೈನಯತಿ ಸಮಂತಭದ್ರನ ಆಪ್ತಮಿಮಂಸಾ ಗ್ರಂಥದ ಮೇಲೆ ಅಷ್ತಸಾಹಸ್ತ್ರಿ ಎಂಬ ಪ್ರೌಢ ವ್ಯಖ್ಯಾನವನ್ನೂ ಆಪ್ತಪರೀಕ್ಷಾ ಎಂಬ ಕೃತಿಯನ್ನು ರಚಿಸಿದ್ದನೆ. ರಾಷ್ಟ್ರಕೂಟರ ಕನ್ನಡಾ ಸಾಹಿತ್ಯದ ಪರ್ವಕಾಲ. ಇದಕ್ಕು ಮೊದಲೇಕನ್ನಡ ನಾಡನುಡಿಯಾಗಿತ್ತು ೫ನೇ ಶತಮಾನದಿಂದಲೆ ಶಾಸನ ಸಾಹಿತ್ಯವಾಗಿ ಕನ್ನಡ ಬಳಲಿಕ್ಕೆಯಾಗಿತ್ತು. ಅದರ ಆದರೆ ರಾಷ್ಟ್ರಕೂಟರ ಕಾಲಕ್ಕೆ ಮುಂಚಿನ ಯಾವುದೆ ಕನ್ನಡ ಕೃತಿಯು ಈವರೆಗೆ ದೊರೆತಿಲ್ಲ. ಆದರೂ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿತ್ತೆಂಬುದಕ್ಕೆ ಅನೇಕ ಆಧಾರಗಳಿವೆ. ನೃಪತುಂಗ ಕವಿರಾಜಮಾರ್ಗದಲ್ಲಿ ಪ್ರಾಸ್ತಾಪಿಸಿರುವ ಕವಿಗಳಲ್ಲಿ ಕೆಲವರಾದರೂ ರಷ್ಟ್ರಕೂಟರ ಕಾಲಕ್ಕೂ ಹಿಂದಿನವರುಚಾಳುಕ್ಯಕುಲತಿಕೆ ವಿಜ್ಜಿಕೆ ಅಥವ ವಿಜಯ ಭಟಾರಿಕೆ ಕನ್ನಡ ಸರಸ್ವತಿಯೆಂದು ಹೆಸರಾದವಳು. ಕನ್ನಡ ಸಾಹಿತ್ಯದ ಅಗ್ರಮಾನ್ಯರಾದ ಪಂಪ, ಪೊನ್ನ, ಅಸಗ, ಚಾವುಂಡರಾಯರಂಥ ಶ್ರೇಷ್ಠ ಸಾಹಿತಿಗಳದೂ ವಡ್ಡಾರಾಧನೆಯಂಥ ಫ್ರೌಡಗದ್ಯದ ವಿಶಿಷ್ಟ ಕಥಾಸಾಹಿತ್ಯದ್ದೂ ರಾಶ್ಟಕೂಟರ ಕಾಲವೆಂಬುದರಿಂದ ಆ ಯುಗ ಎಷ್ಟೋಂದು ಮಹತ್ತ್ವದೆಂಬುದರ ಅರಿವುಂಟಾಗುತದೆ. ಕನ್ನಡ ಸಾಹಿತ್ಯದಲ್ಲಿ ಈವರೆಗೆ ದೊರೆಕಿರುವುದಲ್ಲಿ ಅತ್ಯಂತ ಪ್ರಾಚೀನವಾದ ಕವಿರಾಜಮಾರ್ಗದ ಕರ್ತೃ ರಾಷ್ಟಕೂಟ ಚಕ್ರವರ್ತಿಯಾದ ನೃಪತುಂಗ ಒಂದನೆಯ ಅಮೂಘವರ್ಷನೆಂದು ಹಲವು ವಿದ್ವಾಂಸರು ತರ್ಕಿಸಿದ್ದಾರೆ.. ಅಥವಾ ಕವೀಶ್ವರ ಇದರ ಕರ್ತೃವಾಗಿದ್ದಾರೆ, ಅದಕ್ಕೆ ನೃಪತುಂಗನ ಅಭಿಮತವಿದೆ. ಕನ್ನಡಿಗರ ಜಾಣ್ಮೆಯ ಬಗೆಗೆ ಇಲ್ಲಿರುವ, ಪದನ ನುಡಿಯಲುಂ ನುಡಿದುದದಾರಯಲು ಮಾರ್ಪರಾ ನಾಡವರ್ಗಲ್ ಚದುರರ್ ನಿಜದಿಂ ಕುರಿತೂದದೆಯುಂ ಕಾವ್ಯಪ್ರಯೂಗ ಪರಿಣತಮತಿಗಳ್ ಎಂಬ ಪದ್ಯ ಉತ್ತಮನಿದರ್ಶನ. ಅಸಗ, ಗುಣನಂದಿ ಮತ್ತು ಗುಣವರ್ಮರು ಈ ಕಾಲದವರಾದರು ಅವರ ಕೃತಿಗಳು ದೊರಕಿಲ್ಲ. ಅನಂತರ ಕಾಲದ ಕವಿಗಳು ಇವರ ಕೃತಿಗಳಿಂದ ಉದ್ದರಿಸುವ ಭಾಗಗಳು ಮಾತ್ರ ನಮಗೆ ಲಭ್ಯ. ವೇಮುಳವಾಡ ಚಾಳುಕ್ಯ ಅರಿಕೇಸರಿಯ ಬಾಲ್ಯದ ಗೆಳೆಯನೂ ಅನಂತರ ಆತನ ಮತ್ರಿ ಸೆನಾನಿಯು ಆಗಿದ್ದ ಪಂಪ ಕವಿಸಾರ್ವಭೌಮ, ಕನ್ನಡದ ಆದಿಕವಿ. ಈತ ಜೈನ ಆತ್ಮೋದ್ದಾರಕ್ಕಾಗಿ ಆದಿಪುರಾಣ ವೆಂಬ ಧರ್ಮಗ್ರಂಥವನ್ನೂ ಲೋಕವ್ಯವಹಾರ ಮತ್ತು ಆಶ್ರಯದಾತನ ಪ್ರೀತಿಗಾಗಿ ವಿಕ್ರಮಾರ್ಜುನ ವಿಜಯವೆಂಬ ಜನಪ್ರಿಯ ಭಾರತವನ್ನೂ ಬರೆದ ೩ನೇ ಕೃಷ್ಣನ ಆಸ್ಥಾನದಲ್ಲಿ ವರಕವಿಯಾಗಿದ್ದ ಪಂಪನ ಸಮಕಾಲಿನ ಉಭಯಕವಿ ಚಕ್ರವರ್ತಿ ಶಾಂತಿ ಪುರಾಣ, ಭುವನೈಕರಾಮಾಭ್ಯುದಯ ಎಂಬ ಗ್ರಂಥಗಳನ್ನೂ ಜಿನಾಕ್ಷರಮಾಲೆ ಎಂಬ ೩೯ಕಂದಗಳ ಕಿರುಕೃತಿಯನ್ನು ರಚಿಸಿದ್ದಾನೆ. ೪ನೇಯ ರಾಚಮಲ್ಲ ಗಂಗರಾಜನ ಮಂತ್ರಿ, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ನಿರ್ಮಾಪಕ ಚಾವುಂಡರಾಯ ಚಾವುಂಡರಾಯಪುರಾಣದ ಕರ್ತೃ. ಆ ಕಾಲದ ಅತ್ಯಂತ ವೈಭವಪೂರ್ಣ ಗ್ರಂಥ ಶಿವಕೊಟಾಚಾರ್ಯನ ವಡ್ದಾರಾದನೆ. ಸುಕುಮಾರಸ್ವಾಮಿ, ನಾಗಶ್ರಿ ಕಥೆಗಳು, ವಿದ್ಯಚ್ಚೋರನಕಥೆ, ಕಾರ್ತಿಕ ಋಷಿಯ ಕಥೆ, ಮಲಯಸುಂದರ ಕಥೆ ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆಗಳು. ಆ ಕಾಲದ ಶಾಸನಗಳ ಕನ್ನಡ ಸಹ ವ್ಯಾಕರಣಬದ್ದವಾಗಿದ್ದುದಲ್ಲದೆ ಭಾಷಾ ಬೆಳೆವಣಿಗೆ, ಸಾಹಿತ್ಯ ಪ್ರಗತಿಗಳ ಅಭ್ಯಾಸಕ್ಕೆ ಪ್ರಯೋಜನಕಾರಿಯಾಗಿದೆ

ಕಲ್ಯಾಣ ಚಾಳುಕ್ಯರು: ರಾಷ್ಟ್ರಕೂಟರ ಅನಂತ ಪ್ರವರ್ಧಮಾನಕ್ಕೆ ಬಂದ ಕಲ್ಯಾಣ ಚಾಳುಕ್ಯವಂಶ ಕರ್ನಾಟಕದ ಕೀರ್ತಿದ್ವಜವನ್ನು ಎತ್ತಿಹಿಡಿದು ದಕ್ಷಿಣದ ಅತಿ ಪ್ರಬಲರಾಗಿದ್ದ ಚೂಳರೊಡನೆ ಸತತ ಹೋರಾಟ ನಡೆಸಿದುದಲ್ಲದೆ ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ತನ್ನ ಬಲವನ್ನು ವಿಸ್ತರಿಸಿತು. ಸತ್ಯಾಶ್ರಯ ಇರಿವ ಬೆಡಂಗ, ಜಯಸಿಂಹ, ಸೋಮೇಶ್ವ ಅಹವಮಲ್ಲ ಮತ್ತು ಇಮ್ಮಡಿ ಸೋಮೇಶ್ವರರಂಥ ಪ್ರಸಿದ್ದ ದೊರೆಗಳ ಅನಂತರ ಸಿಂಹಾಸನವನ್ನೇರಿದ ಆರನೆಯ ವಿಕ್ರಮಾದಿತ್ಯ ಕರ್ನಾಟಕದ ಅತ್ಯಂತ ಪ್ರಸಿದ್ದ ದೊರೆ. ಚಾಳುಕ್ಯ ವಿಕ್ರಮಶಕೆಯ ಮೂಲಪುರುಷನೀತನೆ. ಚೋಳ ಲಾಟ ಮತ್ತು ಉಚ್ಚಂಗಿಯ ಪಾಂಡ್ಯರೆಂದು ಈತ ಸದೆಬಡಿದ. ತನ್ನಣ್ನನಾದ ಎರಡನೆಯ ಸೋಮೇಶ್ವರನನ್ನು ಮೂಲೆಗೊತ್ತಿ ಸಿಂಹಾಸನವನ್ನಾಕ್ರಮಿಸಿ ವಿಕ್ರಮಾದಿತ್ಯ ತನ್ನ ತಮ್ಮ ಜಯಸಿಂಹನ ದಂಗೆಯನ್ನು ಹತ್ತಿಕ್ಕಿದ್ದ. ಮಾಳ್ವವನ್ನು ಮೂರು ಭಾರಿ ಜಯಿಸಿ ನರ್ಮದೆಯ ದಕ್ಶಿಣಕ್ಕಿದ್ದ ಪ್ರದೇಶಗಳನ್ನು ವಶಪಡಿಸಿಕೊಂಡ. ಅನಂತರ ತನ್ನ ಸಾಮಾಂತರ ಪೈಕಿ, ಪುಂಡಾರೆನಿಸಿದ್ದವರನ್ನು ಸದೆಬಡಿದ. ತನ್ನ ಬದ್ದ ವೈರಿಯಾದ ಒಂದನೆಯ ಕುಲೋತ್ತುಂಗ ಚೋಳನ ವಿರದ್ದ ಸಂಚುಹೂಡಿ ವೆಂಗಿಯಲ್ಲಿ ಚೋಳರ ಪ್ರಾಬ್ವಲ್ಯ ಮುರಿದು. ಪೂರ್ವ ಪಶ್ಚಿಮ ಸಮುದ್ರಗಳವರೆಗೂ ಚಾಳುಕ್ಯ ರಾಜ್ಯ ವಿಸ್ತಾರಗೊಂಡಿತು. ಆದರೆ ಇವನ ಆಳ್ವಿಕೆಯ ಕಡೆಗಾಲದಲ್ಲೇ ಚಾಳುಕ್ಯ ರಾಜ್ಯದ ಅವನತಿಯೂ ಪ್ರಾರಂಭವಾಗಿ ಉತ್ತರಭಾಗದಲ್ಲಿ ಕಳಚುರ್ಯರು ದಕ್ಶಿಣದಲ್ಲಿ ಹೊಯ್ಸಳರೂ ಪ್ರಬಲರಾದರು. ಬಿಜ್ಜಳನಿಂದ ಪ್ರಾಮುಖ್ಯ ಪಡೆದ ಕಳಚುರ್ಯರು ೧೧೬೨ ರಿಂದ ೧೧೮೪ರವರೆಗೂ ಸಿಂಹಾಸನವನ್ನು ತಮ್ಮ ವಶಪಡಿಸಿಕೊಂಡಿದ್ದು ಪುನಃ ಚಾಳುಕ್ಯ೪ನೇ ಸೋಮೇಶ್ವರನಿಂದ ಪರಾಭವಕೊಂಡರು. ಬಿಜ್ಜಳನ ಆಳ್ವಿಕೆಯ ಮಹತ್ತ್ವವೆಂದರೆ ಅವನ ಭಂಡಾರಿಯೂ ಅನಂತರ ಮಂತ್ರಿಯೂ