ಪುಟ:Mysore-University-Encyclopaedia-Vol-4-Part-1.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗಿದ್ದರೆಂದು ಹೇಳಲಾದ ವೀರಶೈವ ಧರ್ಮ ಪ್ರವರ್ಧಕ ಬಸವೇಶ್ವರರು ಅವನ ಆಸ್ಥಾನದಲ್ಲಿದ್ದದು. ೪ನೇ ಸೋಮೇಶ್ವರ ೧೧೯೮ರವರೆಗೂ ಆಳುತ್ತಿದ್ದ.

 ಹತ್ತನೆಯ ಶತಮಾನದ ಆದಿಭಾಗದಿಂದ ಹಲವು ಪ್ರದೇಶಗಳಲ್ಲಿ ಅಧಿಕಾರ ಪಡೆದಿದ್ದ ಸೇವುಣ ಅಥವಾ ದೇವಗಿರಿಯ ಯಾದವರು ಕಲ್ಯಾಣ ಚಾಳುಕ್ಯರ ಅನಂತರ ಉತ್ತರಭಾಗದಲ್ಲಿ ಪ್ರಬಲರಾದರು. ಆ ವಂಶದ ೪ನೇ ಸಿಂಘಣ, ೫ನೇಯ ಬಿಲ್ಲಮ, ೨ನೆಯ ಸಿಂಘಣ ಮುಂತಾದ ಶಕ್ತ ದೊರೆಗಳು ತಮ್ಮ ರಾಜ್ಯವನ್ನು ವಿಸ್ತರಿಸಿ, ದಕ್ಷಿಣದಲ್ಲಿ ಪ್ರಬಲರಾಗಿದ್ದ ಹೊಯ್ಸಳರೊಂದಿಗೆ ಕರ್ಣಾಟಕದ ಸ್ವಾಮ್ಯಕ್ಕಾಗಿ ಹೋರಾಡಿದರು. ಆ ವಂಶದ ಕೊನೆಯ ಪ್ರಸಿದ್ದ ದೊರೆಯಾದ ರಾಮಚಂದ್ರ ಮಹಮ್ಮದೀಯ ಆಕ್ರಮಣಕಾರರ ವಿರುದ್ದ ಹೋರಾಡಿದ. ಕೊನೆಗೆ ದಾಳಿಕೋರ ಅಲ್ಲವಿದ್ದೀನನೊಂದಿಗೆ ಸಂಧಿ ಮಾಡಿಕೊಳಬೇಕಾಯಿತು. ಪುನಃ ೧೩೦೭ರಲ್ಲಿ ಅಲ್ಲವುದ್ದೀನ ಸೇನಾನಿ ಮಲಿಕ್ ಕಾಫೂರನಿಂದ ದೇವಗಿರಿ ರಾಜ್ಯ ನಾಶ ಹೊಂದಿತು.
ಹೊಯ್ಸಳರು: ಹೊಯ್ಸಳರು ಇಂದಿನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಅಂಗಡಿ ಗ್ರಾಮದಲ್ಲಿ ಹತ್ತನೆಯ ಶತಮಾನದಲ್ಲಿ ಪ್ರಥಮವಾಗಿ ರಜ್ಯ ಕಟ್ಟಿದರು. ಮುಂದಿನ ದ್ವಾರಸಮುದ್ರ ಅಥವಾ ಇಂದಿನ ಬೇಲೂರು ತಾಲ್ಲೂಕಿನ ಹಳೇಬೀಡನ್ನು ಶಾಶ್ವತ ರಾಜಧಾನಿಯಾಗಿ ಮಡಿಕೊಂಡರು. ಹನ್ನೊಂದನೆಯ ಶತಮಾನದ ಅಂತ್ಯದಲ್ಲಿ ಕರ್ನಾಟಕದ ಅತ್ಯಂತ ಪ್ರಮುಖ ಶಕ್ತಿಯಾಗಿ ಬಾಳಿದರು. ವಿಷ್ಣುವರ್ಧನನ(೧೧೦೮-೧೧೫೨) ತಲಕಾಡು ವಿಜಯದೊಂದಿಗೆ(೧೧೧೬) ಈ ರಾಜವಂಶದ ಉಚ್ಚಾಯ ಕಾಲ ಆರಂಭವಾಯಿತು. ಈ ವಂಶದಲ್ಲಿ ನರಸಿಂಹ, ಇಮ್ಮಡಿ ಬಲ್ಲಾಳ, ಸೋಮೇಶ್ವರ, ರಮನಾಥ ಮತ್ತು ಮುಮ್ಮಡಿ  ಬಲ್ಲಾಳರಂಥ ಮಹಾವ್ಯಕ್ತಿಗಳು ತಲೆದೋರಿ ಉತ್ತರದಲ್ಲಿ ಯಾದವರನ್ನು ದಕ್ಷಿಣದಲ್ಲಿ ಚೋಳಪಾಂಡ್ಯರನ್ನು ಹತೋಟಿಯಲ್ಲಿಟ್ಟುಕೊಂಡು ಕರ್ನಾಟಕದ ಪ್ರಸಿದ್ದಿ ಹೆಚ್ಚಿಸಿದರು. ವಿಷ್ಣುವರ್ಧನ ಚೋಳರಿಂದ ತಲಕಾಡನ್ನು ಗೆದ್ದುಕೊಂಡ ಮೇಲೆ ಕೋಲಾರ ನಂಗಿಲಿಗಳನ್ನು ವಶಪಡಿಸಿಕೊಂಡಿದ್ದಲ್ಲದೆ ಕಂಚಿಯನ್ನೂ ಗೆದ್ದು ರಾಮೇಶ್ವರದವರೆಗೂ ಹೋಗಿ ಪಾಂಡ್ಯರೊಡನೆ ಹೋರಾಡಿದನೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಅನಂತರ ಕೊಂಗಾಳ್ವರನ್ನೂ ನಡುಗಲ್ಲಿನ ಚೋಳರನ್ನೂ ಜಯಿಸಿದ. ಕೊಂಗುದೇಶವನ್ನು ಗೆದ್ದು ರಾಜ್ಯ ವಿಸ್ತರಿಸಿದ. ಅನಂತರ ಉಚ್ಚಂಗಿಯ ಪಾಂಡ್ಯರನ್ನು ಕುಮ್ಮಟವನ್ನೂ ಗೆದ್ದ. ಬೆಳ್ವೋಲನಾಡನ್ನು ಆಕ್ರಮಿಸಿದಾಗ ಚಾಳುಕ್ಯ ಚಕ್ರವರ್ತಿ ೬ನೇಯ ವಿಕ್ರಮಾದಿತ್ಯ ತನ್ನ ಈ ದಂಗೆಕೋರ ಸಾಮಂತನನ್ನೆದುರಿಸಿ ಸೋತುದರ ಫಲವಾಗಿ ಹೊಯ್ಸಳರು ನಿಜಕ್ಕೂ ಸ್ವತಂತ್ರರಾದರು. ಅನಂತರ ಹಾನುಗಲ್ಲಿಯ ಕದಂಬರು ಸೋತರು. ಆದರೆ ಚಾಳುಕ್ಯ ಸಾಮಂತ ಇಮ್ಮಡಿ ಆಚುಗಿ ೧೧೨೨ರಲ್ಲಿ ವಿಷ್ಣುವರ್ಧನನ್ನು ಸೋಲಿಸಿದ. ಹೊಯ್ಸಳರು ಹೆಸರು ಮತ್ರ ಸಾಮಂತರಾಗಿದ್ದರು, ವಾಸ್ತವಾಗಿ ಸ್ವತಂತ್ರವಾಗಿಯೇ ಇದ್ದರು. ವಿಷ್ಣುವರ್ಧನ ೧೧೩೬ರ ಸಮಯಕ್ಕೆ ಬಳ್ಳಾರಿ ಪ್ರದೇಶದ ಅನೇಕ ಭಾಗಗಳನ್ನೂ ಬಂಕಾಪುರವನ್ನೂ ಚಾಳುಕ್ಯರಿಂದ ಗೆದ್ದುಕೊಂಡ. ಹಾನುಗಲ್ಲು ಪುನರ್ವಶವಾಯಿತು. 
 ಇಮ್ಮಡಿ ಬಲ್ಲಾಳನ(೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಅತ್ಯುನ್ನತ ವೈಭವವನ್ನು ತಲುಪಿತು. ಚೆಂಗಾಳ್ವ, ಕೊಂಗಾಳ್ವ, ಉಚ್ಚಂಗಿ ಪಾಂಡ್ಯರನ್ನೂ ಬನವಾಸಿ ಹಾನಗಲ್ಲುಗಳನ್ನೂ ಗೆದ್ದರೂ ಕಳಾಚುರಿ ಸಂಕಮನಿಂದ ಈತ ೧೧೭೯ರಲ್ಲಿ ಸೋತ. 
 ಕೆಲಕಾಲನಂತರ ಬೆಳ್ವೋಲವನ್ನು ಗೆದ್ದ. ಸೇವುಣರೊಂದಿಗೆ ದೀರ್ಘಕಾಲ ಹೋರಡಿ ೧೧೯೦ರಲ್ಲಿ ಸೊರಟೂರು ಕದನದಲ್ಲಿ ಅವರನ್ನೂ ಸೋಲಿಸಿದ. ರಾಯಚೂರು ಬಳ್ಳಾರಿ ಪ್ರದೇಶಗಳೂ ಇವನ ವಶವಾದವು. ೧೨೧೫ರಲ್ಲಿ ಸೇವುಣ ಇಮ್ಮಡಿ ಸಿಂಘಣನಿಂದ ಸೋತು ಶಿವಮೊಗ್ಗಯಾಚೆಯ ಪ್ರದೇಶಗಳನ್ನು ಕಳೆದುಕೊಂಡ. ತನ್ನ ಕೊನೆಗಾಲದಲ್ಲಿ ಕಷ್ಟದಲ್ಲಿದ್ದ ತನ್ನ ಬಂಧುವಾದ ಚೋಳರಾಜ ಮುಮ್ಮಡಿ ಕುಲೋತ್ತುಂಗನ ಸಹಾಯಾರ್ಥವಾಗಿ ಹೋಗಿ ಪಾಂಡ್ಯರನ್ನು ಸೋಲಿಸಿ ಚೋಳರಾಜ್ಯನವನ್ನು ಭದ್ರಗೊಳಿಸಿದ. ಹೊಯ್ಸಳದೊರೆ ಎರಡನೆಯ ನರಸಿಂಹ ಚೋಳಚಕ್ರವರ್ತಿ ಮುಮ್ಮಡಿ ರಾಜನನ್ನು ಕಾಡವ ಕೋಪ್ಪೆರುಜಿಂಗನ ಸೆರೆಯಿಂದ ಬಿಡಿಸಿದುದಲ್ಲದೆ ತನ್ನ ಪ್ರಭುತ್ವವನ್ನು ತಮಿಳುದೇಶದಲ್ಲಿ ಸ್ತಾಪಿಸಿ    , ಕಣ್ಣಾನೂರನ್ನು ಉಪರಾಜಧಾನಿಯಾಗಿ ಮಾಡಿಕೊಂಡ. ಹೊಯ್ಸಳಾರು ದಕ್ಷಿಣ ಭಾರತದ ಅತ್ಯಂತ ಪ್ರಬಲ ರಾಜರಾಗಿದ್ದ ಕಾಲವಿದು. ಎಮ್ಮಡಿ ಬಲ್ಲಳ ಈ ಕಾರ್ಯವನ್ನು ಸಾದಿಸುವುದರ ಜೊತೆಗೆ ಮುಸ್ಲಿಮರ ದಾಳಿಗಳಿಂದ ದಕ್ಷಿಣಭಾರತವನ್ನೂ ಹಿಂದೂ ಧರ್ಮವನ್ನೂ ರಕ್ಷಿಸುವ ಸಲುವಾಗಿ ಹೆಣಗಿದೆ. ಕರ್ನಾಟಕದ ರಾಜರಲ್ಲೆಲ್ಲಾ ಅತ್ಯಂತ ಪ್ರಮುಖರಲ್ಲೊಬ್ಬರೆಂದು ಕರೆಸಿಕೊಮ್ಡಿರುವ ಈತ ತನ್ನ ರಾಜಧಾನಿಯನ್ನು ಬದಲಾಯಿಸುತ್ತ ಮುಸ್ಲಿಮರೊಂದಿಗೆ ಹೋರಡುತ್ತಿದ್ದು ಕಡೆಗೆ ತನ್ನ ೮೦ನೇಯ ವಯಸ್ಸಿನಲ್ಲಿ ೧೩೪೨ರಲ್ಲಿ ತಿರುಚಿರಾಪಳ್ಳಿಯಲ್ಲಿ ಮುಸ್ಲಿಮರ ಕುತಂತ್ರಕ್ಕಾಗಿ ಪ್ರಾಣ ತೆತ್ತ. 
 ಕರ್ನಾಟಕದ ಇತಿಹಾಸದಲ್ಲಿ ಕಲ್ಯಾಣ ಚಾಳುಕ್ಯರ, ದೇವಗಿರಿಯ ಯಾದವರ ಮತ್ತು ಹೊಯ್ಸಳರ ಕಾಲ ಅಮೋಘವಾದುದ್ದು. ಈ ಯುಘದಲ್ಲಿ ಸರ್ವತೋಮುಖ ಪ್ರಗತಿ ಕಂಡುಬಂದು ಕರ್ನಾಟಕದ ಘನತೆ ಹೆಚ್ಚಿತು. ರಾಜಕಾರಣ, ಯುದ್ಧನೀತಿ, ಪ್ರಜಾರಂಜಕ ಆಡಳಿತ, ಸಾಮಾಜಿಕ ಸಮಗ್ರತೆ ಮತಿಯ ಸಮನ್ವಯ, ವಿಧ್ಯಾ ಪ್ರಗತಿ, ಭಾಷಾ-ಸಾಹಿತ್ಯಗಳ ಅಭಿವೃದ್ದಿ, ಕಲಾನೈಪುಣ್ಯಗಳು ಈ ಕಾಲದ ವೈಶಿಷ್ಟ್ಯಗಳು. ರಾಷ್ಟ್ರಕೂಟ ದಂತಿದುರ್ಗ ಯಾವ ಕರ್ನಾಟಕಬಲವನ್ನು ಹತ್ತಿಕ್ಕಿದುದಾಗಿ ಹೇಳಿಕೊಂಡನೋ ಅದೇ  ಕರ್ನಾಟಕಬಲದ ಸಹಾಯದಿಂದ ಅದೇ ಚಾಳುಕ್ಯ ವಂಶೋದ್ಧಾರಕನಾದ ಇಮ್ಮುಡಿ ತೈಲ, ರಾಷ್ಟ್ರಕೂಟರನ್ನೂ ಸೋಲಿಸಿ ಚಾಳುಕ್ಯ ರಾಜ್ಯವನ್ನು ಕರ್ನಾಟಕದಲ್ಲಿ ಪುನಃ ಸ್ಥಾಪಿಸಿದ. ಈ ವಂಶದ ವೀರ ಯೋಧರದ ಸತ್ಯಾಶ್ರಯ ಇಡಿವಬೆಡಂಗ, ಜಯಸಿಂಹ ವಲ್ಲಭ, ೧ನೇಯ ಸೋಮೇಶ್ವರ ಆಹವಮಲ್ಲ ಮತ್ತು ೬ನೇಯ ವಿಕ್ರಮಾದಿತ್ಯರಂಥ ರಾಜರು ಕರ್ನಾಟಕದ ಹಿರಿಮೆ ಯನ್ನು ವೃದ್ದಿಗೊಳಿಸಿದರು. ಇವರ ಯುದ್ದ ವಿಜಯಗಳು ರಾಷ್ಟ್ರಕೂಟರ ವಿಜಯಗಳಷ್ಟು ವ್ಯಾಪ್ತರಾಗಿಲ್ಲವೆಂಬುದೇನೋ ನಿಜ. ಭರತದ ಮರ್ಪಟ್ಟ ರಾಜಕೀಯ ಪರಿಸ್ಥಿತಿ ಇದಕ್ಕೆ ಕಾರಣ. ಪ್ರಭಲರೂ ಸಾರ್ವಭೌಮಾಧಿಕಾರಾಕಾಂಕ್ಷಿಗಳೂ ಆಗಿದ್ದ ಚೋಳರು ದಕ್ಷಿಣದಲ್ಲೂ ಪರಮಾರರು ಉತ್ತರದಲ್ಲೂ ಇವರ ರಾಜ್ಯ ವಿಸ್ತರಣಕ್ಕೆ  ಪ್ರಮುಖ ಅಡಚಣೆಗಳಾಗಿದ್ದರೂ ಇವರು ತಮ್ಮ ರಜ್ಯದ ಸಮಗ್ರತೆಯನ್ನು ರಕ್ಷ್ಸಿಕೊಂಡಿದುದಲ್ಲದೆ ಪೂರ್ವದಲ್ಲಿ ವ್ಯಂಗಿರಾಜ್ಯವನ್ನೂ ಪಶ್ಚಿಮದಲ್ಲಿ ಶಿಲಾಹಾರ ಮತ್ತು ಕದಂಬರನ್ನೂ ತರಿದು,