ಪುಟ:Mysore-University-Encyclopaedia-Vol-4-Part-1.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಕಾಟಕ ಸ೦ಕ್ರಾ೦ತಿ ವೃತ್ತ: ಸಮಭಾಜಕ ವೃತ್ತಕ್ಕೆ(ಭೂಮಧ್ಯರೇಖಾ-ಟೆರ್ರೆಸ್ಟ್ರಿಯಲ್ ಇಕ್ವೇಟರ್)೨೩* 27 ಉತ್ತರದಲ್ಲಿ ಭೂಗೋಳದ ಮೇಲೆ ಎಳೆದ ಸಮಾ೦ತರ ಅಲ್ಪವೃತ್ತ (ಟ್ರಾಪಿಕ್ ಅಫ್ ಕ್ಯಾನ್ಸರ್).ಇದು ಸೂರ್ಯನ ದೈನಂದಿನ ಪಥಗಳ (ಸೂರ್ಯ ಮೂಡುವಲ್ಲಿ೦ದ ಕಂತುವ ತನಕ ಒ೦ದು ಹಗಲು ಆಕಾಶದಲ್ಲಿ ಸಾಗಿದ ದಾರಿಯ

ಹೆಸರು ದೈನಿಕ ಪಥ) ಅತಿ ಉತ್ತರ ಗಡಿ ;ಎ೦ದರೆ ಕರ್ಕಾಟಕ ಸ೦ಕ್ರಾಂತಿ ವೃತ್ತಕ್ಕಿಂತ 

ಉತ್ತರಕ್ಕೆ ಸೂರ್ಯನ ಸಂಚಾರವಿಲ್ಲ. ದೈನಂದಿನ ಪಥಗಳನ್ನು ನೆಲದ ಮೇಲಿನ

ಯಾವುದೇ ಸ್ಥಿರ ನೆಲೆಗಳ ಆದಾರದಿರಿದ ಗುರುತಿಸುತ್ತ

ಹೋಗಬೇಕು.ಆಗ ಒ೦ದು ವಿಶೇಷವನ್ನು ಗಮನಿಸಬಹುದು, ಡಿಸೆಂಬದ್ 21 ರಿಂದ ಜೂನ್

22ರ ತನಕ ಈ ಪಥಗಳು ಕ್ರಾಮೇಣ ಉತ್ತರದೆಡೆಗೆ ಜಾರುತ್ತ ಸಾಗುವುವು;

ಜೂನ್ 22ರ೦ದು ಉತ್ತರ ಎಲ್ಲೆಯನ್ನು ತಲುಪಿ ಮರುದಿನದಿ೦ದ ದಕ್ಷಿಣದೆಡೆಗೆ ಜಾರತೊಡಗುವುವು.ಕಕಾ೯ಟಕ ಸಂಕ್ರಾ೦ತಿ ವೃತ್ತೆವೆ೦ಬ ಹೆಸರು ಉತ್ತರದ ಎಲ್ಲೆಗೆ ಬಂದ ದಿವಸೆಗಳೆಂದು (ಸೆಹಸ್ರಾರು ವರ್ಪಗಳ ಹಿ೦ದೆ) ಕರ್ಕಾಟಕ ರಾಶಿ ಸೊಯ೯ನ ಅತಿ ಉತ್ತರೆಸ್ಥಾನವಾಗಿತ್ತು. ಸೊಯ೯ ಈ ರಾಶಿಗೆ ಬ೦ದ ದಿವಸ ಕಕಾ೯ಟಕ ಸಂಕ್ರಮಣ;ಆ೦ದು ಸೂಯ೯ನದೈನಂದಿನ ಪಥ ವಿಷುವದ್ವೈತದಿ೦ದ (ಸೆಲೆಸ್ಟಿಯಲ್ ಇಕ್ವೇಟರ್)23೦ 27೦ ಉತ್ತರದಲ್ಲಿ ಅದಕ್ಕೆ ಸಮಾ೦ತರವಾದ ಆಲ್ಪ ವೃತ್ತ.

   ಭೂಗೋಳದ ಮೇಲೆ ಇದರ ಸ೦ವಾದಿ ವೃತ್ತೆವೇ ಕರ್ಕಾಟಕ ಸ೦ಕ್ರಾ೦ತಿ ವೃತ್ತ

ಆದರೆ ಈಗ ಪರಿಸ್ಥಿತಿ ಬದಲಾಗಿದೆ.ವಾರ್ಷಿಕ ಚೆಲನೆಯಲ್ಲಿ ಸೊಯ೯ನ ಸಂಚಾರ. ಕರ್ಕಾಟಕ ಸ೦ಕ್ರಮಣ ದಿನದ ದೈನಂದಿನ ಪಥೆಕ್ಕಿಂತಲೂ ಉತ್ತರಕ್ಕೆ ಸಾಗುವುದು.ಆದ್ದರಿರಿದ ಕಕಾ೯ಟಕ ಸ೦ಕ್ರಾ೦ತಿ ವೃತ್ತದ ವಾಖ್ಯೆಯನ್ನು ಈ ಪರಿಚ್ಛೇದದ ಆರಂಭದಲ್ಲಿ ಬರದೆಂತೆ ತೆಗೆದುಕೋಳ್ಳಬೇಕು.(ನೋಡಿ- ಮಕರರಾಶಿ)

  ಕರ್ಕೋಟಕ:ಎ೦ಟು ಮ೦ದಿ ಸಪ೯ರಾಜರಲ್ಲಿ ಒಬ್ಬ.ದಕ್ಷಬ್ರಹ್ಮನ ಮಗಳಾದ

ಕದ್ರು ಹಾಗೂ ಕಶ್ಯಪರ ಮಗ. ನಿಷಧ ದೇಶಾಧಿಪತಿ ನಳ ಚಕ್ರವರ್ತಿ ಪುಷ್ಕರನೊಡನೆ ಜೂಜಾಡಿ ರಾಜ್ಯಭ್ರಷ್ಟನಾಗಿ ಕಾಡು ಸೇರಿ ತನ್ನ ಪತ್ನಿ ದಮಯ೦ತಿಯನ್ನು ಆಗಲಿ ಹೋಗುತ್ತಿದ್ದಾಗ ನಾರದರ ಶಾಪದಿ೦ದ ದಾವಾಗ್ನಿಯಲ್ಲಿ ಬಿದ್ದು ಸುಟ್ಟು ಹೋಗುತ್ತಿದ್ದ ಕರ್ಕೋಟಕ ನಳನನ್ನು ಕಂಡು ತನ್ನನ್ನು ದಾವಾಗ್ನಯಿ೦ದ ತಪ್ಪಿಸಿದರೆ ಪ್ರತ್ಯುಪಕಾರ ಮಾಡುವುದಾಗಿ ತಿಳಿಸಲು ನಳ ಮರಕಗೋ೦ಡು ಕರ್ಕೋಟಕನನ್ನು ಚ್ವಾಲೆಯಿ೦ದ ಹೊರಕ್ಕೆ ತೆಗೆದ.ಕೂಡಲೆ ಕರ್ಕೋಟಕ ನಳನನ್ನು ಕಚ್ಚಿದ. ನಳನಿಗೆ ಆ ವಿಶ್ವದಿ೦ದ ವಿಕಾರರೂಪವು೦ಟಾಯಿತು. ಅಡ್ಡ ಮೋರೆಯ ಗಂಟು ಮೊಗಿನ ಜಡ್ಡು ದೇಹದ ಗುಚ್ಚು ಗೊರಳಿನ- ಎ೦ಬ ಕನ್ನಡ ನಳಚರಿತ್ರೆಯ ನಳನ ವರ್ನನೆಯನ್ನು ಇಲ್ಲಿ ನೆನೆಯೆಬಹುದು. ಆಗ ನಳ ಇದಲ್ಲವೆ ನೀನು ನನಗೆ ಮಾಡಿದ ಪ್ರತ್ಯುಪಕಾರ ಎನಲಾಗಿ ಕರ್ಕೋಟಕ ಇದೇ ನಾನು ನಿನಗೆ ಮಾಡಿದ ಪರಮೋಪಕಾರ. ಈ ರೊಪಿನೆಲ್ಲಿ ನಿನ್ನನು ಯಾರೂ ಗುರುತಿಸಲಾರರು. ನೀನು ಋತುಪರ್ಣ ರಾಜನಲ್ಲಿಗೆ ಕೂಗಿ ಬಾಹುಕನೆಂಬ ಹೆಸೆರಿನಿರಿದ ಆತನ ಸಾರಥಿಯುಗಿದ್ದು ಅನಂತರ ನಿನ್ನ ರಾಜ್ಯವನ್ನೂ ಪತ್ನಿಯನ್ನೂ ಪಡೆಯುವೆ, ನೀನು ಆಷೇಕ್ಷಿಸಿದಾಗ ನನ್ನನ್ನು ಸ್ಮರಿಸಿಕೊ೦ಡು ಈ ವಸ್ತ್ರಗಳನ್ನು ಧರಿಸಿಕೊರಿಡರೆ ನಿಜರೂಪ ಬರುವುದು ಎ೦ದು ಹೇಳಿ ಎರಡು ವಸ್ತ್ರಗಳನ್ನು ಕೊಟ್ಟು ಅ೦ತಧಾ೯ನನಾದ.

  ಕರ್ ಕ್ಯುಮಿನ್:ಇದು ಅರಿಸಿನದ ಬೇರಿನಲ್ಲಿರುವ ವಣ೯ಪದಾಥ೯. ಅರಿಸಿನವನ್ನು

ನೇರವಾಗಿ ಲೀನೆಕಾರಿಗಳಿಂದ ಸಂಸ್ಕರಿಸಿ ಸ್ಟಟಿಕೀಕರಿಸಿಯಾಗಿಲೀ ಕ್ಷಾರಗಳ ಜಲದ್ರಾವಣದಲ್ಲಿ ಸ೦ಸ್ಕರಿಸಿ ಬಳಿಕ ಆಮ್ಲಗಳನು ಪಯೋಗಿಸಿ ಸ್ಫಟಿಕೀಕರಿಸಿಯಾಗಲೀ ಇದನ್ನು ಹೊರತೆಗೆಯೆಬಹುದು. ಆರಿಸಿನ ಬೇರಿನಲ್ಲಿ ಶೇ. 0.5 ರಿಂದ ಶೇ. 2 ಭಾಗ ಕರ್ ಕ್ಯೂಮಿನ್ ಇರುತ್ತದೆ. ಇದರ ರಚನೆ C21 H20 O6 ರಾಸಾಯನಿಕ ಹೆಸರು ಫೆರುಲಾಯಿಲ್ ಮೀಥೇನ್. ಇದರ ಕರಗುವ ಬಿ೦ದು 177°-178° ಸೆಂ. ಇದು ಉತ್ಕಷ೯ಣ ನಿರೊಧಕ ಪದಾರ್ಥ. ಇದರ ಫೀನಾಲಿಕ್ ರಚನೆಯೇ ಇದಕ್ಕೆ ಕಾರಣ. ಈಚಿನ ಸಂಶೋಧನೆಗಳಿಂದ ಇಲಿಗಳಿಗೆ ಕೋಲೆಸ್ಪೆರಾಲ್ ಜೂತೆಯೆಲ್ಲಿ ಕರ್ ಕ್ಯುಮಿನ್ನನು ಅಹಾರದಲ್ಲಿ ಕೊಟಾಗ ಕೋಲೆಸ್ಪೆರಾಲ್ ಹೀರುವಿಕೆ ಬಲುಮಟ್ಟಿಗೆ ನಿ೦ತು ಹೊಯಿತೆ೦ದು ತಿಳಿದುಬ೦ದಿದೆ. (ಎ೦.ಅರ್.ಆರ್.)

 ಕರ್ಕ್ಯೂಲಿಗೊ: ಅಮರಿಲ್ಲಿಡೇಸೀ ಅಥವಾ ಹೈಪಾಕ್ಸಿಡೇಸೀ ಕುಟು೦ಬಕ್ಕೆ ಸೇರಿದ

ಬಹುವಾರ್ಷಿಕ ಸಸ್ಯ ಜಾತಿ. ಈ ಗಿಡಗಳ ಅ೦ಡಾಶಯದ ತುದಿ ಸೊ೦ಡಿಲು ಕೀಟದಂತಿರಿವುದರಿಂದ ಇದಕ್ಕೆ ಈ ಹೆಸರು ಬ೦ದಿದೆ (ಲ್ಯಾಟಿನ್ ಭಾಷೆಯಲ್ಲಿ ಕರ್ ಕ್ಯೂಲಿಯೂ ಎ೦ದರೆ ಸೂ೦ಡಿಲುಕೀಟ-ವೀವಿಲ್ ಎ೦ದು ಅಥ೯). ಇದರಲ್ಲಿ ಸುಮಾರು 12ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಸ್ಪಾಭಾವಿಕವಾಗಿ ಬೆಳೆಯುವುವಾದರೂ ಇನ್ನು ಕೆಲವನ್ನು ಅಲ೦ಕಾರಕ್ಕಾಗಿ ಉದ್ಯಾನಗಳಲ್ಲಿ, ಮನೆಗಳಲ್ಲಿ ಬೆಳೆಸುವುದು೦ಟು. ಇವು ಸುಮಾರು 1'.5' ಎತ್ತರಕ್ಕೆ ಬೆಳೆಯುವ ಮೂಲಿಕೆಗಳು.

  ಭೂಮಿಯಲ್ಲೇ ಹುದುಗಿರುವ ಗಡ್ಡೆಯ೦ಥ ಪ್ರಕ೦ದವೂ (ರೈಜ಼ೋಮ್) ನೆಲದಿಂದ

ಮೇಲಕ್ಕೆ ಕಾ೦ಡವಿಲ್ಲದಿರುವುದೂ ಬೇರಿನಿ೦ದಲೇ ಹೊರಟಿರುವಒಥ ಎಲೆಗಳೂ ಕೆದಿರುಗೊ೦ಚಲು ಮಾದರಿಯ ಹೂಗೊ೦ಚಲೂ ಈ ಸಸ್ಯಗಳ ಮುಖ್ಯ ಹಾಗೂ ವೈಶಿಷ್ಟ ಲಕ್ಷಣಗಳು. ಎಲೆಗಳು ಚಿಕ್ಕವಾಗಿದ್ಧಾಗ ಮಡಚಿಕೊ೦ಡಿರುತ್ತವಲ್ಲದೆ. ನೋಡಲು ತೆಂಗಿನ ಜಾತಿಯ ಸಸ್ಯಗಳ ಎಲೆಗಳಂತೆ ಕಾಣುತ್ತವೆ.ಹೂ ಗುಂಚಲು ಹಲವಾರು ಪ್ರಭೇಧಗಳಲ್ಲಿ ಎಲೆಗಳ ಮಟ್ಟದಿ೦ದ ಕೆಳಗೇ ಇದ್ದು ಗಿಡದ ಬುಡದಲ್ಲಿ ಅಡಗಿಕೊ೦ಡ೦ತಿರುತ್ತದೆ ಹೂಗಳು ಹಳದಿಬಣ್ಣದವು. ನಕ್ಷತ್ರಗಳ೦ತೆ ಕಾಣುತ್ತವೆ. ಪ್ರತಿಯೊ೦ದು ಹೂವಿನಲ್ಲಿ 6 ಭಾಗಗಳುಳ್ಳ ಸಂಯುಕ್ತಮಾದರಿಯ (ಗ್ಯಾಮಾಫಿಲಸ್) ಪೆರಿಯಾ೦ತು. ೬ ಕೇಸರಗಳು. ಮೂರು ಕಾರ್ಪೆಲೂಳನ್ನೊಳಗೊ೦ಡ ನೀಚೆಸ್ಥಾನದ ಆಂಡಾಶಯ ಇವೆ. ಆ೦ಡಕೋಶದಲ್ಲಿ ಮೂರು ಕೋಣೆಗಳಿವೆ. ಒ೦ದೊ೦ದು ಕೊಣೆಯುಸಲ್ಲೂ 12 . 24 ಅ೦ಡಕಗಳಿವೆ . ಉದ್ಯಾನ ಪ್ರಾಮುಖ್ಯವನ್ನು ಪಡೆದಿರುವ ಕರ್ ಕ್ಯೂಲಿಗೊ ಪ್ರಭೇದಗಳಲ್ಲಿ ಮುಖ್ಯವಾದುವು ಕ.ಲ್ಯಾಟಿಫೋಲಿಯ ಮತ್ತು ಕ.ರಿಕರ್ವೆಟ.ಇವುಗಳಲ್ಲಿ ಮೊದಲನೆಯದು ಸುಮಾರು 2'-3' ಎತ್ತರಕ್ಕೆ ಬೆಳೆಯುವ ಬಗೆಯದು.ಇದಕ್ಕೆ ಈಟಿಯಾಕರದ ಎಲೆಗಳಿವೆ. ಕೆ.ರಿಕರ್ವೇಟ ಪ್ರಬೇದ ಹೆಚ್ಚು ಜನಪ್ರಿಯವಾದದ್ದು. ಇದು ಕೂಡ ಸುಮಾರು 2.5. ಎತ್ತರಕ್ಕೆ ಬೆಳೆಯುತ್ತದೆ. ಇದರಲ್ಲಿ ಸು. 1' - 3" ಉದ್ದದ ಹಾಗೂ 2" - 6" ಅಗಲದ ಹಿ೦ದಕ್ಕೆ ಬಾಗಿದ ಎಲೆಗಳಿವೆ. ಈ ಪ್ರಭೇದದಲ್ಲಿ ವೇರಿಗೇಟ ಮತ್ತು ಸ್ಟಯೇಟ ಎ೦ಬ ಎರಡು ಬಗೆ (ತಳಿ) ಗಳಿವೆ. ಮೊದಲನೆಯದರ ಎಲೆಗಳಮೇಲೆ ಬಿಳಿಯ ಬಣ್ಣದ ಹಲವಾರು ಉದ್ದ ಪಟ್ಟಿಗಳೂ ಎರಡನೆಯದರಲ್ಲಿ ಒ೦ದೇ ಒರಿದು ಬಿಳಿಯ ಪಟ್ಟೀಯೂ ಇವೆ. ಎಲ್ಲ ಪ್ರೆಭೇದಗಳನ್ನು ಕು೦ಡಗಳಲ್ಲೊ ನೇರವಾಗಿ ಸಸಿನೆಡುವ ಸ್ಥಳಗಳಲ್ಲೊ ಅಲ೦ಕಾರಸಸ್ಯಗಳನ್ನಾಗಿ ಬೆಳೆಸುತ್ತಾರೆ.