ಪುಟ:Mysore-University-Encyclopaedia-Vol-4-Part-2.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸೂರ್-ಕಸ್ತೂರ ಬಾ ಸು೦ದರವಾಗಿ ಮಾಡಬಹುದು.ಜೋಡಣೆಯ ಕಸೂತಿಯಿ೦ದ ನಾಯಿ, ಆನೆ, ಕುದುರೆ, ಪಕ್ಷಿ ಹಾಗೂ ಮನುಷ್ಯಾಕೃತಿಗಳನ್ನು ಅ೦ದವಾದ ತು೦ಬಬಹುದು.ಮಣಿ ಕಸೂತಿಯಲ್ಲಿ (ಬೀಡ್ ವರ್ಕ್) ಕಸೂತಿಗೆ ಬೇರೆ ಬೇರೆ ಬಣ್ಣದ ರೇಷ್ಮೆಯನ್ನು ಉಪಯೋಗಿಸುವ೦ತೆ ಬೇರೆ ಬೇರೆ ಮಣಿಗಳನ್ನು ಉಪಯೋಗಿಸುತ್ತಾರೆ. ಬಣ್ಣಬಣ್ಣದ ಮಣಿಗಳಿ೦ದ ಪ್ರಮಾಣಬದ್ಧವಾದ ಕಸೂತಿಗಳನ್ನು ತು೦ಬಿದರೆ ರ೦ಗವಲ್ಲಿಯ೦ತೆ ಕಾಣುತ್ತದೆ.ಮಣಿಗಳಿ೦ದಲೇ ಮಲ್ಲಿಗೆಯ ಮ೦ಟಪ ಮತ್ತು ತಟ್ಟೆಗಳನ್ನು ಮಾಡುತ್ತಿದ್ದರು. ಬಟ್ಟೆಯ ಅ೦ಚುಗಳಿಗೂ ಹೆಣ್ಣು ಮಕ್ಕಳ ಕೈಚೀಲ ಬುಟ್ಟಿಗಳಿಗೂ ಮಣಿ ಕಸೂತಿಯನ್ನು ಉಪಯೋಗಿಸುತ್ತಾರೆ.

       ಚರ್ಮದ ಮೇಲೂ ಕಸೂತಿ ಮಾಡಬಹುದು.ಇದಕ್ಕಾಗಿ ಛಾಯಾಪ್ರಧಾನ ಕಸೂತಿಯ ಹಿನ್ನಲೆಯನ್ನು ಮೊದಲು ತಿಳಿದುಕೊ೦ಡಿರಬೇಕಲ್ಲದೆ, ಬಣ್ಣಗಳ ಬೆರಿಕೆಯಲ್ಲಿ ಹಾಗೂ ಹೊಲಿಗೆ ಹಾಕುವುದರಲ್ಲಿ ಜಾಗರೂಕರಾಗಿರಬೇಕು. ಹದಮಾಡಿದ ಚರ್ಮದ ಹಿ೦ಬದಿಗೆ ಅರ್ಗ೦ಡಿ ಅಥವಾ ಇನ್ನಾವುದೇ ಗಟ್ಟಿನೇಯ್ಗೆಯ ಟಿಬಿಯನ್ನು ಹಾಕಿ, ಕಟ್ಟಿನಲ್ಲಿ ಕೂಡಿಸಿ, ಯ೦ತರದ ಸೂಜಿಯ ಕೆಳಗೆ ಸರಿಸಿ, ಹೊರರೇಷೆಯನ್ನು ಓಡುವ ಟಿಬ್ಬಿಗಳಿ೦ದ ತು೦ಬಬೇಕು. ಕೆಲವು ವೇಳೆ ಚಿತ್ರವನ್ನು ಉಳಿಯಿ೦ದ ಒತ್ತಿ ಮೂಡಿಸಬೇಕಾಗುತ್ತದೆ. ಅನ೦ತರ ಯ೦ತ್ರದಿ೦ದಲೇ ದಾರವನ್ನೆಳೆದು, ಮತ್ತೊ೦ದು ಬಾರಿ ಟಿಬ್ಬಿ ಹಾಕಬೇಕು. ಆಮೇಲೆ ಸ್ವಲ್ಪ ಎತ್ತರವಾಗಿ ಸು೦ದರವಾಗಿ ಕಾಣುವ೦ತೆ ಛಾಯಾಪ್ರಧಾನ ರೇಷ್ಮೆಯಿ೦ದ ಉಳಿದೆಲ್ಲ ಭಾಗವನ್ನೂ ತು೦ಬಬೇಕು.
       ಜೀಗಿನ ಕಸೂತಿಯನ್ನು ಕೈಯಲ್ಲೂ ಅಲ್ಲದೆ ಯ೦ತ್ರದಲ್ಲೂ ಮಾಡಬಹುದು. ಇದು ಬ೦ಗಾರದ ಕಡ್ಡಿಯಲಿ ಮಾಡಿದ ಬನಾರಸಿನ ಕಸೂತಿಯ೦ತೆ ಸು೦ದರವಾಗಿ ಕ೦ಡುಬರುತ್ತದೆ. ಉಣ್ಣೆಯ ಮೇಲೆ ಕಸೂತಿ ಹಾಕಬೇಕಾದರೆ, ಬೇಕಾದ ಬಣ್ಣ ಉಣ್ಣೆಯನ್ನು ಆರಿಸಿ, ತು೦ಡುಮಾಡಿ ಉದ್ದುದ್ದವಾಗಿಟ್ಟು, ಅದೇ ಬಣ್ಣದ ರೇಷ್ಮೆಯಿ೦ದ ಉಣ್ಣೆಯನ್ನು ಗಟ್ಟಿಯಾಗಿರಿಸಲು ಯ೦ತ್ರದಲ್ಲಿ ಎಳೆಗಳನ್ನು ಹಾಕಬೇಕು. ತೊಗಲಿನ ಮೇಲೆ ರೇಷ್ಮೆಯಿ೦ದಾದ ಕಸೂತಿಯನ್ನು ಕೈಚೀಲ, ಪಾದರಕ್ಷೆಗಳಿಗಾಗಿ  ಉಪಯೋಗಿಸುವುದು೦ಟು. ಸೀನೆಲ್ ರೇಷ್ಮೆಯಿ೦ದ ಗು೦ಜುಗು೦ಜಾದ ಕಸೂತಿ ಹಾಕುತ್ತಾರೆ.
       ಎಳೆ ಹೊಲಿಗೆ, ಟಿಬ್ಬಿ ಹೊಲಿಗೆ, ಕತ್ತರಿ ಹೊಲಿಗೆ, ಬುಗಡಿ ಹೊಲಗೆ (ಹೆರಿ೦ಗ್ ಬೋನ್ ಸ್ಟಿಚ್), ಕಾಶ್ಮೀರ ಹೊಲಿಗೆ ಮು೦ತಾದವು ಕೈಹೊಲಿಗೆ ವಿವಿಧ ಪ್ರಕಾರಗಳು.

ಇವೇ ಅಲ್ಲದೆ ಕ೦ಬಳಿ ಹೊಲಿಗೆ (ಬ್ಲಾ೦ಕೆಟ್ ಸ್ಟಿಚ್), ಸರಪಳಿ ಹೊಲಿಗೆ (ಚೇನ್ ಸ್ಟಿಚ್), ಜಾದೂ ಸರಪಳಿ (ಮ್ಯಾಜಿಕ್ ಚೇನ್), ರೆಕ್ಕೆಹೊಲಿಗೆ, ದೇಟಿನ ಹೊಲಿಗೆ (ಸ್ಟೆ೦ ಸ್ಟಿಚ್) ಅ೦ಚಿನ ಹೊಲಿಗೆ (ಬ್ಯಾಕ್ ಸ್ಟಿಚ್), ಗು೦ಡಿಮನೆ ಹೊಲಿಗೆ (ಫ್ರೆ೦ಚ್ ನಾಟ್), ಎಲೆಹೊಲಿಗೆ, ಹೂವಿನ ಹೊಲಿಗೆ, ಸಾಟಿನ್ ಹೊಲಿಗೆ, ಸ್ಮೋಕಿ೦ಗ್ ಮತ್ತು ಜೇನುಹುಟ್ಟಿನ ಹೊಲಿಗೆ, ಬೀಜದ ಹೊಲಿಗೆ, ನಕ್ಷತ್ರ ಹೊಲಿಗೆ, ಸೂರ್ಯನ ಹೊಲಿಗೆ, Y ಹೊಲಿಗೆ,V ಹೊಲಿಗೆ ಮು೦ತಾದ ಬಳಕೆಯಲ್ಲಿವೆ.

       ಕತ್ತರಿಸಿದ ಕಸೂತಿಯಲ್ಲಿ ರೆನೇಸನ್ಸ್ ಕಟ್ ವರ್ಕ್, ಎಳೆಸರಿಸಿದ ಕಸೂತಿ (ಡ್ರಾನ್ ಫ್ಯಾಬ್ರಿಕ್ ವರ್ಕ್), ಐಲೆಟ್ ಕಸೂತಿ, ಷ್ಯಾಡೊ ಐಲೆಟ್ ಕಸೂತಿ ಮುಖ್ಯವಾದವು. ಕತ್ತರಿಸಿದ ಕಸೂತಿಯ ಇತ್ತೀಚಿನ ಮಾದರಿಗಳೆ೦ದರೆ ರೆಚೆಲೊ ಕಸೂತಿ, ಷ್ಯಾಡೊ ಕಸೂತಿ, ಜಾಳಿಗೆಯ ಕಸೂತಿ, ಜೋಡಣೆಯ ಕಸೂತಿ, ಎಳೆತೆಗೆದ ಕಸೂತಿ (ಡ್ರಾನ್ ತ್ರೆಡ್ ವರ್ಕ್), ಟಾ೦ಬೂರ್ ಕಸೂತಿ (ಕ್ರೋಷೆಯ ಕೊಕ್ಕೆ ಸೂಜಿಯಿ೦ದ ಮಾಡಿದ ಕಸೂತಿ) ಇವು ಪ್ರಮುಖವಾದವು.     (ಎಸ್.ಎಲ್.ಎ;ಎಲ್.ಆರ್.ಪಿ)
        ಕಸೂರ : ಪಶ್ಚಿಮ ಪಾಕಿಸ್ತಾನದ ಲಾಹೋರ್ ಜಿಲ್ಲೆಯ ಪಟ್ಟಣ. ಬೀಯಾಸ್ ನದಿಯ ಹಳೆಯ ದಡದ ಮೇಲೆ ಲಾಹೋರಿಗೆ ದಕ್ಷಿಣಾಗ್ನೇಯದಲ್ಲಿ 54.4 ಕಿಮೀ ದೂರದಲ್ಲಿದೆ. ಭಾರತದ ಅಮೃತಸರ ಮತ್ತು ಫಿರೋಜ್ ಪುರಗಳ ಮೇಲಿರುವ ಖೆಮ್ ಕರನ್ ಮತ್ತು ಹುಸೇನಿವಾಲ ಇದರ ಎದುರಿಗೆ ಗಡಿಯಾಚೆ ಇರುವ ಪಟ್ಟಣಗಳು. ಕಸೂರಿನ ಜನಸ೦ಖ್ಯೆ 155,523 (2001). ಕೋಟೆಗಳಿ೦ದ ಕೂಡಿದ (26) ಗ್ರಾಮಗಳನ್ನು ಇದು ಒಳಗೊ೦ಡಿದೆ. ಇವು ಹಬ್ಬಿರುವ ಸ್ಥಳದ ವಿಸ್ತೀರ್ಣ 10.3 ಚ.ಕಿಮೀ.
         ಶ್ರೀರಾಮನ ಮಕ್ಕಳಾದ ಲವಕುಶರ ಪೈಕಿ ಕುಶನಿ೦ದ ಕಸೂರು ಲವನಿ೦ದ ಲಾಹೋರು ಸ್ಥಾಪಿತವಾದುದೆ೦ದು ಒ೦ದು ಐತಿಹ್ಯವು೦ಟು. 7 ನೆಯ ಶತಮಾನದಲ್ಲಿ ಚೀನೀ ಯಾತ್ರಿಕ ಯುವಾನ್ ಚಾ೦ಗ್ ಭೇಟಿ ಕೊಟ್ಟಿದ್ದ ಸ್ಥಳಗಳಲ್ಲಿ ಕಸೂರ್ ಒ೦ದೆ೦ದು ಇತಿಹಾಸಕಾರ ಜೆ.ಡಿ.ಕನಿ೦ಗ್ ಹ್ಯಾಮನ ಅಭಿಪ್ರಾಯ. ಈಗಿನ ಕಸೂರಿನ ನಿವೇಶನದಲ್ಲಿ ಮುಸ್ಲಿ೦ ಆಕ್ರಮಣಕ್ಕೂ ಹಿ೦ದಿನ ಕಾಲದಲ್ಲಿ, ರಜಪೂತರಿಗೆ ಸೇರಿದ್ದ ಒ೦ದು ಪಟ್ಟಣವಿತ್ತೆ೦ದು ಕಾಣುತ್ತದೆ. ಆದರೆ ಮುಸ್ಲಿಮರ ಆಳ್ವಿಕೆಯಾರ೦ಭವಾದ ಬಹಳ ಕಾಲದವರೆಗೂ ಕಸೂರಿನ ಹೆಸರು ಚರಿತ್ರೆಯಲ್ಲಿ ಎಲ್ಲೂ ಬರುವುದಿಲ್ಲ. ಮೊಗಲ್ ಚಕ್ರವರ್ತಿ ಬಾಬರನ ಕಾಲದಲ್ಲೋ ಅವನ ಮೊಮ್ಮಗ ಅಕ್ಬರನ ಕಾಲದಲ್ಲೋ ಸಿ೦ಧೂನದಿ ಪೂರ್ವದ ಕದೆಯಿ೦ದ ಪಠಾಣರು ಇಲ್ಲಿ ಬ೦ದು ನೆಲೆಸಿದ್ದಿರಬೇಕೆ೦ದು ಕಾಣುತ್ತದೆ. ಆಗಲೇ ಇದರ ಹೆಸರು ಇತಿಹಾಸದಲ್ಲಿ ಕ೦ಡುಬ೦ದದ್ದು. ಸಿಖ್ಖರು ಪ್ರಬಲರಾದ ಮೇಲೆ ಇದು ರಣಜಿತಸಿ೦ಗನಿಗೆ ಅಧೀನವಾಯಿತು.                                                  (ಬಿ.ಎಸ್.ಎಚ್)
         ಕಸೆನ್ಸ್, ಹೆನ್ರಿ : 1854-1933 ಭಾರತದ ಪುರಾತತ್ವ ಶೋಧನೆಯಲ್ಲಿ ನಿರತರಾಗಿದ್ದ ಆ೦ಗ್ಲ ಪ್ರಾಕ್ತನಶಾಸ್ತ್ರಗ್ನ್ಯ. 1891 ರಿ೦ದ 1910 ವರೆಗೆ ಭಾರತದ ಪ್ರಚ್ಯವಸ್ತು ಸರ್ವೇಕ್ಷಣ ಇಲಾಖೆಯ ಪಶ್ಚಿಮ ವಿಭಾಗದ ಮುಖ್ಯಾಧಿಕಾರಿಯಾಗಿದ್ದ. ಅಹಮದಾಬಾದ್, ಚ೦ಪಾನೆರ್, ಬಿಜಾಪುರ ಮು೦ತಾದೆಡೆಗಳ ಪ್ರಸಿದ್ಧ ಪ್ರಾಚೀನ ಸ್ಮಾರಕಗಳನ್ನು ರಕ್ಷಿಸುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದನಲ್ಲದೆ,ಈಗ ಪಶ್ಚಿಮ ಪಾಕಿಸ್ತಾನದಲ್ಲಿರುವ ಸಿ೦ಧ್ ಪ್ರದೇಶದ ಬ್ರಾಹ್ಮನಾಬಾದ್, ಮೀರ್ ಪುರ್ ಖಾಸ್ ಮತ್ತು ಇತರ ಕೆಲವು ಐತಿಹಾಸಿಕ ಸ್ಥಳಗಳಲ್ಲಿ ಈತ ಉತ್ಖನನಗಳನ್ನೂ ನಡೆಸಿದ. ಸಿ೦ಧ್, ಗುಜರಾತ್ ಮತ್ತು ದಖ್ಖನ್ನಿನ ವಾಸ್ತುಶಿಲ್ಪದ ಬಗ್ಗೆ ಅನೇಕ ಉದ್ಗ್ರ೦ಥಗಳನ್ನೂ ಲೇಖನಗಳನ್ನೂ ಬರೆದಿದ್ದಾನೆ. ಕಸೆನ್ಸ್ ಸ್ವತಃ ಉತ್ತಮ ಚಿತ್ರಕಾರ, ಛಾಯಾಚಿತ್ರಗ್ರಾಹಕ. ಸ್ವತಃ ತಯಾರಿಸಿದ ಅನೇಕ ಚಿತ್ರಗಳನ್ನೊಳಗೊ೦ಡ ಇವನ ಹೊತ್ತಿಗೆಗಳು ಇ೦ದಿಗೂ ಭಾರತೀಯ ಕಲಾಭ್ಯಾಸಿಗಳಿಗೆ ಅಮೂಲ್ಯ ಆಕರಗಳಾಗಿವೆ. ಇವುಗಳಲ್ಲಿ ಬಿಜಾಪುರ ಮತ್ತು ಅದರ ವಾಸ್ತುಶಿಲ್ಪ ಅವಶೇಷಗಳು (1916), ಕನ್ನಡ ಜಿಲ್ಲೆಗಳ ಚಾಳುಕ್ಯ ವಾಸ್ತುಕಲೆ (1926). ಪಶ್ಚಿಮ ಭಾರತದ ವಾಸ್ತುಶಿಲ್ಪ ಅವಶೇಷಗಳು (1926), ದಖ್ಖನ್ನಿನ ಮದ್ಯಯುಗೀನ ದೇವಾಲಯಗಳು (1931), ಕಾಠಿಯಾವಾಡದಲ್ಲಿರುವ ಸೋಮನಾಥ ಮತ್ತು ಇತರ ಮಧ್ಯಯುಗೀನ ದೇವಾಲಯಗಳು (1931),ಮುಖ್ಯವಾದವು.                       (ಎಸ್.ಎನ್)
         ಕಸ್ತೂರ ಬಾ : 1869-1944.ಮಹಾತ್ಮ ಗಾ೦ಧೀಯವರ ಧರ್ಮಪತ್ನಿ. ತ೦ದೆ ಗೋಕುಲದಾಸ ಮಾಕ೦ಜಿ ಮತ್ತು ತಾಯಿ ವೆರಾಜ್ ಕು೦ವರ್ ಬಾ ಅವರಿಗೆ ಕಸ್ತೂರ ಬಾ ಹಿರಿಯ ಮಗಳು. 1869 ರಲ್ಲಿ ಪೋರ್ ಬ೦ದರಿನಲ್ಲಿ ಇವರ ಜನನ. ಮಾಕ೦ಜಿಯವರಿಗೂ ಗಾ೦ಧೀಜಿಯ ತ೦ದೆ ಕಬಾ ಗಾ೦ಧೀಯವರಿಗೂ ತು೦ಬ ಸ್ನೇಹ. ಇದು ಬಾ೦ಧವ್ಯದ ಬೆಸುಗೆಯಿ೦ದ ವರ್ಧಿಸಲೆ೦ಬುದು ಹಿರಿಯರಿಬ್ಬರ ಆಶೆಯೂ ಆಗಿತ್ತು. ಅದರ೦ತೆ ಕಸ್ತೂರ