ಪುಟ:Mysore-University-Encyclopaedia-Vol-4-Part-2.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦೨

                            ಕಾಗದ

ರಾಸಾಯನಿಕ ಕ್ರಿಯೆಗಳ ಸ್ವರೂಪ ಸ್ಪಷ್ಟವಾಗಿಲ್ಲ.ಲಿಗ್ನಿಸುಗಳು ಆಯಾ ಆಲ್ಕೊಹಾಲ್ ಮತ್ತು ಅಮ್ಲಗಳಿಗೆ ಜಲವಿಶ್ಲೇಷಣೆ ಹೊಂದುವುದೆಂದು ಭಾವಿಸಲಾಗಿದೆ.ಪ್ರಾಸಂಗಿಕವಾಗಿ ಮರಕ್ಯಾಪ್ಪನುಗಳು ಮತ್ತು ಸಲ್ಫೈಡುಗಳು ಹುಟ್ಟುವುದರಿಂದ ಸಲ್ಫೇಟ್ ಕಾಗದ ಕಾರ್ಖಾನೆಗಳು ದುರ್ಗಂಧ ಬೀರುವುವು.ಒಂದು ಟನ್ ಸಲ್ಫೇಟ್ ಪಲ್ಪಿನ ಉತ್ಪಾದನೆಗೆ ಅಗತ್ಯವಾದ ವಿವರಗಳು ಕೆಳಗಿವೆ. ಮರ - 42 ಟನ್ನುಗಳು, ಹೊಸ ಸುಣ್ಣ - 325ಪೌಂಡುಗಳು, ಸಾಲ್ಟ್ ಕೇಕ್ - 450 ಪೌಂಡುಗಳು, ಹಬೆ - 10,000ಪೌಂಡುಗಳು, ವಿದ್ಯುಚ್ಛಕ್ತಿ - 250ಕಿಲೊವ್ಯಾಟ್ ಗಂಟೆಗಳು, ಕೈದುಡಿಮೆ - 5 ಆಳು,1 ಗಂಟೆ ಕಾಲ.

ಸಲ್ಫೇಟ್ ಪಲ್ಪಿನ ತಯಾರಿಕೆಯ ವಿವಿಧ ಹಂತುಗಳು ಹೀಗಿವೆ.ಮರದ ದಿಮ್ಮಿಗಳನ್ನು ಕತ್ತರಿಸಿ ತೊಗಟೆ ತೆಗೆದು ಚಕ್ಕೆಯಂತ್ರಕ್ಕೆ(ಚಿಪ್ಪರ್)ಒಡ್ದಲಾಗುವುದು.ಇದರಲ್ಲಿ ಸುತ್ತುತ್ತಿರುವ ತಟ್ಟೆಗಳಿವೆ.ಒಂದೊಂದದೊ ಉದ್ದವಾದ ಮತ್ತು ಭಾರವಾದ 3-4 ಕತ್ತಿಗಳಿಂದ ಸಜ್ಜಾಗಿದೆ.ಇವು ಮರವನ್ನು ಸಣ್ಣ ಚಕ್ಕೆಗಳನ್ನಾಗಿ ಮಡುವುವು.ಚಕ್ಕೆಗಳನ್ನು ತಿರುಗುವ ಅಥವಾ ಅಲ್ಲಾಡುವ ಜರಡಿಗಳ ಮೇಲಿಟ್ಟರೆ ಹೊಟ್ಟು ಮತ್ತು ಸಣ್ಣ ಚಕ್ಕೆಗಳು ಪ್ರತ್ಯೇಕಿಸಲ್ಪಡುತ್ತವೆ.ದೊಡ್ಡ ಚಕ್ಕೆಗಳನ್ನು ಅಪೇಕ್ಷಿತ ಗಾತ್ರಕ್ಕೆ ಪುನಃ ಚೊರು ಮಾಡಿ ಬೇಕಾದಾಗ ಪಾಚಕಕ್ಕೆ (ಡೈಜೆಸ್ಟರ್)ಗುರುತ್ತಾಕರ್ಷಣೆಯಿಂದ ರವಾನಿಸುವುದು.ಇದನ್ನು ಉಕ್ಕಿನಿಂದ ಮಾಡಿರುತ್ತಾರೆ.ಅದರಲ್ಲಿ ಸೋಡಿಯಂ ಸಲ್ಫೈಡ್ ಮತ್ತು ಕಾಸ್ಪಿಕ್ ಸೋಡಾ ಮಿಶ್ರಣವಿದೆ.ಇದನ್ನು ಬೇಗುದಿ ದ್ರಾವಕ(ಕುಕ್ಕಿಂಗ್ ಲಿಕ್ಕರ್)ಎನ್ನುತ್ತಾರೆ.ಹಬೆ ಹಾಯಿಸಿದರೆ ಪಚನ ಕ್ರಿಯೆ ಪ್ರಾರಂಭವಾಗುವುದು.ಒತ್ತಡ ಚದುರಂಗುಲಕ್ಕೆ 110ಪೌಂಡುಗಳಷ್ಟಿರುತ್ತದೆ.ಪಾಚಕಗಳು ಸ್ಥಾಯೀ ಅಥವಾ ಸುತ್ತುವ ಮಾದರಿಯವಾಗಿರಬಹುದು.ಬೇಯಿಸುವ ಅವಧಿ ಸುಮಾರು 3 ತಾಸುಗಳು ಅನಂತರ ಒತ್ತಡವನ್ನು 80 ಪೌಂಡುಗಳಿಗೆ ತಗ್ಗಿಸಿ ಚಾರ್ಜನ್ನು ಮೊಹರಾದ ಕಡಾಯಗಳಿಗೆ ಬಿಡುವರು.ಇವು ಪ್ರತಿಪ್ರವಾಹ ತತ್ತ್ವದ ಪ್ರಕಾರ ಕೆಲಸ ಮಾಡುತ್ತವೆ.ಇಲ್ಲಿ ಶಾಖವಿನಿಮಯ ತೃಪ್ತಿಕರವಾಗಿ ಜರುಗಿ ಸಾಮಾನ್ಯವಾಗಿ ನಷ್ಟವಗುತ್ತಿದ್ದ ಹಬೆ ಉಳಿತಾಯವಾಗುವುದಲ್ಲದೆ ಮಾರ್ಜನವೊ ಚೆನ್ನಾಗಿರುವುದು.ನಿಸ್ಸಾರ(ಸ್ಪೆಂಟ್)ದ್ರಾವಕವನ್ನು ತೊಟ್ಟಿಗಳಲ್ಲಿ ಶೇಖರಿಸುತ್ತಾರೆ.ಆದರಿಂದ ಮುಂದೆ ರಾಸಾಯನಿಕ ವಸ್ತುಗಳನ್ನು ಉದ್ದರಿಸುವ ತನಕ ಅದು ಅಲ್ಲೇ ಉಳಿಯುವುದು.ಇದಕ್ಕೆ ಕಪ್ಪು ದ್ರಾವಕ ಪಲ್ಪನ್ನು ಬೇರ್ಪಡಿಸಿ,ತೊಳೆದು, ಯಂತ್ರಕ್ಕೆ(ನಾಟ್ಟರ್)ಒಡ್ಡುವುದು ಮುಂದಿನ ಕ್ರಮ,ಬೇಯಿಸಿದಾಗ ಬಿಡಿಸಿಕೊಂಡಿರದ ನಾರಿನ ಗಂಟುಗಳನ್ನು ಇದು ತೆಗೆದು ಹಾಕುವುದು.ಅನಂತರ ಜರಡಿ ಹಿಡಿದರೆ ಬೇಯದ ಮರದ ಭಾಗ ಪ್ರತ್ಯೇಕವಾಗುವುದು.ಅಂತಿಮವಾಗಿ ಶೋಧಕಗಳು ಮತ್ತು ಮಂದಕಾರಿಗಳು ನೀರಿನ ಬಹುಪಾಲನ್ನು ನಿವಾರಿಸುವುವು.ಮಂದಕಾರಿಗಳಲ್ಲಿ ಕೊಳವೆಯಾಕಾರದ ಚೌಕಟ್ಟಿಗೆ ತಂತಿಯ ಜಾಲರಿಯಿದೆ.ಇವು ತೆಳುಗೊಳಿಸಿದ ಪಲ್ಪಿನಲ್ಲಿ ಚಲಿಸಿದಾಗ ಜಾಲ್ರಿಗೆ ಪಲ್ಪು ಸುತ್ತಿಕೊಳ್ಳುವುದು.ಎಲ್ಲ ನೀರೊ ಸೋರಿಹೋಗುವುದು.ಮಂದಗೊಳಿಸಿದ ಪಲ್ಪನ್ನು ಆಮೇಲೆ ಚಲುವೆ ಮಾಡಬೇಕು.ಎರಡು ವಿಧವಾದ ಚಲುವೆಯ ಕ್ರಮಗಳು ರೊಢಿಯಲ್ಲಿವೆ.ಒಂದೇ ಹಂತದಲ್ಲಿ ಕ್ಯಾಲ್ಸಿಯಂ ಹೈಪೋಕ್ಲೋರೈಡನಿಂದ ಚಲುವೆ ಮಾಡುವುದು.ಇದರಿಂದ ಕೆನೆಬಣ್ಣದ ಕಾಗದವಾಗುತ್ತದೆ.ಮತ್ತೊಂದು ಮೂರು ಹಂತಗಳ ವಿಧಾನ,ಕ್ಲೋರಿನ್ನಿನ ಪ್ರಯೋಗ ಸುಣ್ಣದ ಹಾಲು ಅಥವಾ ಕಾಸ್ಪಿಕ್ ಸೋಡಾದಿಂದ ತಟಸ್ಥೀಕರಣ ಮತ್ತು ಕ್ಯಾಲ್ಷಿಯಂ ಹೈಪೋಕ್ಲೋರಿಟನಿಂದ ವರ್ತನೆ.ಮರದ್ರವ್ಯದಲ್ಲಿದ್ದ ಟ್ಯಾನಿನುಗಳು ಬಣ್ಣಕಾರಕ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ.ಇವನ್ನು ಉತ್ಕರ್ಷಿಸಿ ನಾಶಪಡಿಸುವುದು ಚಲುವೆ ಮಾಡುವ ಉದ್ದೇಶ,ಚಲುವೆಯಾದ ಅನಂತರ ಪಲ್ಪನ್ನು ತೊಳೆದು ಪುನಃ ಮಂದಗೊಳಿಸಬೇಕು.ಆಗ ಮತ್ತಷ್ಟು ಸೊಕ್ಷ್ಮವಾಗಿ ಹಾಳೆಗಳನ್ನು ಕಂತೆಗಳಾಗಿ ಮಡಿಸಲು ಅನುಕೊಲ.ಈ ಕಂತೆಗಳಿಗೆ ಲ್ಯಾಪ್ ಎಂದು ಹೆಸರು.ಇದ್ದಕ್ಕಾಗಿ ಬಳಿಸುವ ಮಂದಕಾರಿಗಳಲ್ಲಿ ಒಂದು ಕೊಳವೆ ದಾಸ್ತಾನು ದ್ರಾವಣವಿರುವ ಹಂಡೆಯಲ್ಲಿ ತಿರುಗುತ್ತಿರುತ್ತದೆ.ಇದಕ್ಕೊಂದು ಅನಂತವಾದ ಫೆಲ್ಪಿನ ಪಟ್ಟಿ ಇದೆ.ಇದಕ್ಕೆ ಅಂಟಿಕೊಂಡ ಪಲ್ಪಿನ ಹಾಳೆಗಳು ಅನುಕ್ರಮವಾಗಿ ಹಿಂಡುವ ಮತ್ತು ಒತ್ತುವ ರೋಲರುಗಳ ಮೂಲಕ ಹಾದುಹೋದಾಗ ಪಲ್ಪಿನ ನಾರುಗಳಲ್ಲಿ ಶೇ.55-65 ತೇವಾಂಶವಿರುವುದು.ಹೈಡ್ರಾಲಿಕ್ ಪ್ರೆಸ್ಸುಗಳಲ್ಲಿ ಚದರಂಗುಲಕ್ಕೆ3,000 ಪೌಂಡುಗಳಷ್ಟು ಒತ್ತಡ ಬದ್ದಾಗ ತೇವಾಂಶ ಶೇ.40-50 ಆಗುವುದು. ಕೋನಿಫರಸ್ ಮರಗಳಿಂದಾದ ಪಲ್ಪಿನಲ್ಲಿರುವ ನಾರುಗಳು ಅತ್ಯಂತ ಉದ್ದವಾಗಿರುವುವು.ಅಲ್ಲದೆ ಈ ಪಲ್ಪಿನ ತಯಾರಿಕೆಗೆ ಬಳಸುವ ರಾಸಾಯನಿಕ ವಸ್ತುಗಳೊ ಅಷ್ಟು ತೀಕ್ಷ್ಣಸ್ವಬಾವದ ಪದರ್ಥಗಳಲ್ಲ.ಹೀಗಾಗಿ ಇತರ ಎರಡು ರಾಸಾಯನಿಕ ವಿಧಾನಗಳಿಂದ ತಯಾರಿಸಿದ ಕಾಗದಕ್ಕಿಂತ ಇಲ್ಲಿ ಹೆಚ್ಚು ತ್ರಾಣವಿರುವ ಕಾಗದ ದೊರೆಯುತ್ತದೆ.ಹಿಂದೆ ಕ್ರಾಫ್ಟ್ ಕಾಗದದ ಕಪ್ಪು ಛಾಯೆಯಿಂದಾಗಿ ಅದರ ಉಪಯೋಗ ಹೊಂದಿಕೆಗಳನ್ನು,ಚೀಲಗಳು ಮತ್ತು ರಬ್ಬಾಗಳ ತಯಾರಿಕೆಗೆ ಸೀಮಿತವಾಗಿತ್ತು.ನವೀನ ಚಲುವೆ ವಿಧಾನಗಳ ಅನ್ವಯದಿಂದ ತೆಳುಬಣ್ಣದ ಮತ್ತು ಶುಭ್ರವಾದ ಪಲ್ಪಿನ ಉತ್ಪಾದನೆ ಸಾಧ್ಯವಾಗಿದೆ.ಅಲ್ಲದೆ ಈ ಸುದ್ರಢವಾದ ಪಲ್ಪನ್ನು ಇತರ ಪಲುಪ್ಗಲಳೊಂದಿಗೆ ಬೆರೆಸಿ ಕಾಗದದ ತ್ರಾಣವನ್ನು ಹೆಚ್ಚಿಸಬಹುದಾಗಿದೆ. ಕಪ್ಪು ದ್ರಾವಕದ ಗಳಿಕೆ:ಇದನ್ನು ಸಂಪಾದಿಸದಿದ್ದರೆ ಸಲ್ಫೇಟ್ ವಿಧಾನದ ಆರ್ಥಿಕ ಸಮತೋಲನ ಹದಗೆಡುತ್ತದೆ.ಪಾಚಕಕ್ಕೆ ನಾವು ಒದಗಿಸುವ ಕ್ಷಾರದ ಶೇ.95-98 ಭಾಗ ಕಪ್ಪು ದ್ರಾವಣದಲ್ಲಿರುವುದು ಗಮನಾರ್ಹ.ಅದು ಸೋಡಿಯಂ ಕಾರ್ಬೋನೇಟ್ ಅಥವಾ ಅರ್ಗ್ಯಾನಿಕ್ ಸೋಡಿಯಂ ಲವಣಗಳ ರೊಪದಲ್ಲಿದೆ.ಸೋಡಿಯಂ ಸಲ್ಫೈಡಿನೊಂದಿಗೆ ಸಂಯೋಜಿತ ಸ್ಥಿತಿಯಲ್ಲಿ ಗಣನೀಯ ಪ್ರಮಾಣದ ಗಂಧಕಯುಕ್ತ ಅರ್ಗ್ಯಾನಿಕ್ ವಸ್ತುಗಳು ಇರುವುವು. ಜೊತೆಗೆ ಸ್ವಲ್ಪ ಸೋಡಿಯಂ ಸಲ್ಫೇಟ್,ಉಪ್ಪು,ಸಿಲಿಕ ಮತ್ತು ಲೋಕಮಾತ್ರ ಸುಣ್ಣ,ಕಬ್ಬಿಣದ ಅಕ್ಸೈಡ್,ಅಲ್ಯುಮಿನ್ಯಾ ಮತ್ತು ಪೋಟ್ಯಾಶಿಂಗಳಿವೆ.ಒಟ್ಟು ಘನವಸ್ತುಗಳ ಪ್ರಮಾಣ ಸರಾಸರಿ ಶೇ.20ಆಗುವುದು.ಮಲ್ಟಿಪಲ್ ಪರಿಣಾಮದ ಅಥವ ಕ್ಯಾಸ್ಕೇಡ್ ಸಾಂದ್ರೀಕರಿಸಿದರೆ ಶೇ.45-70 ಘನವಸ್ತುಗಳಿರುವ ದ್ರಾವಕ ಉಳಿಯುತ್ತದೆ.ಜಲಾಂಶವನ್ನು ಈ ಮಟ್ಟಕ್ಕೆ ತಗ್ಗಿಸದಿದ್ದರೆ,ಮುಂದೆ ಕುಲುಮೆಗೆ ಎರಚಿದಾಗ ಅದು ಹೊತ್ತಿ ಉರಿಯುವುದಿಲ್ಲ.ಆಧುನಿಕ ಗಳಿಕೆಯ ವಿಧಾನದಲ್ಲಿ ಸಾಂದ್ರೀಕರಿಸಿದ ಬಿಸಿಯಾದ ದ್ರಾವಕ್ಕೆ ಸೋಡಿಯಂ ಸಲ್ಫೇಟ್ ಸೇರಿಸಿ ತಟ್ಟಿ ಬಾಪ್ಪಕಾರಕೆಕ್ಕೆ (ಡಿಸ್ಕ್ ಎವಾಪೊರೇಟರ್)ಒದಗಿಸಬಹುದು.ದ್ರಾವಕ ಇಳಿಯುವ ದಿಕ್ಕಿಗೆ ವಿರುಧ್ಧವಾಗಿ ಅನಿಲ ಪ್ರವಾಹವಿರುವುದು.ದ್ರಾವಕ ಕೆಳೆಗೆ ಇಳಿದೆಂತೆಲ್ಲ ನೀರು ಆವಿಯಾಗಿ ಅರ್ಗ್ಯಾನಿಕ್ ಲವಣಗಳು ವಿಭಜಿಸುವುವು.ಇಂಗಾಲ ಉರಿದು ಹೋಗುವುದು.ಅರ್ಗ್ಯಾನಿಕ್ ವಸ್ತುಗಳು ದ್ರವಿಸುವುವು.ಕೆಳಕಂಡ ಕ್ರಿಯೆ ನಡೆಯುವುದು. Na2so4+2o=Na2s+2oo2 ದ್ರವೀಕರಿಸಿದ ವಸ್ತು ಜ್ವಲನ ಕ್ರಿಯಾಘಟಕದಿಂದ(ಕಾಸ್ಪಿಸೈಸಿಂಗ್ ಪ್ಲಾಂಟ್) ಬರುತ್ತಿರುವ ಲೀನಕಾರಿ ದ್ರಾವಕದ(ಡಿಸಾಲ್ವಿಂಗ್ ಲಿಕ್ಕರ್)ದುರ್ಬಲ ದ್ರಾವಣಕ್ಕೆ ಬೀಳುವಂತೆ ಏರ್ಪಡಿಸಿರುತ್ತಾರೆ.ಆಗ ಹಸುರು ದ್ರಾವಕ ಊಂಟಾಗುವುದು.ಆ ದ್ರಾವ್ಯ ವಸ್ತುಗಳನ್ನು ಒತ್ತರಿಸಲು ಬಿಟ್ಟು ಉಳಿದ ದ್ರಾವಕ್ಕೆ ಅರಳಿದ ಸುಣ್ಣವನ್ನು ಸೇರಿಸಲಾಗುವುದು.ಮುಂದೆ ಒದಗುವ ಕ್ಯಾಲ್ಷಿಯಂ ಕಾರ್ಬೋನೇಟಿನಿಂದ ಇದನ್ನು ಮಾಡಿಕೊಳ್ಳಬಹುದು.ಈ ಸನ್ನಿವೇಶದಲ್ಲಿ ಕೆಳಕಂಡ ಉಷ್ಣಗ್ರಾಹಕ ಕ್ರಿಯೆ ಕ್ಷಿಪ್ತವಾಗಿ ನಡೆಯುತ್ತದೆ. Na2co3+ca(ch2)=2Nach+caco3 AH=2100ಕೆಲೊರಿಗಳು. ಫಲಿತ ಬಗ್ಗಡವನ್ನು ಸೋಸಲು ಮಾನೆಲ್ ಮಿಶ್ರಲೋಹದಿಂದ ತಯಾರಿಸಿದ ಜರಡಿಗಳಿರುವ ನಿರಂತರ ಆವರ್ತ ಸೋಸಣೆಗೆಗಳು(ಕಂಟಿನ್ಯುವಸ್ ರೋಟರಿ ಫಿಲ್ಟರ್ಸ್)ಬಳಕೆಯಲ್ಲಿವೆ.ಕ್ಯಾಲ್ಷಿಯಂ ಕಾರ್ಬೋನೇಟಿನ ಮಡ್ಡಿಯನ್ನು ಸುಣ್ಣದ ಗೊಡಿಗೆ ರವಾನಿಸಿ ಕ್ಯಾಲ್ಷಿಯಂ ಆಕ್ಸೈಡ್ ತಯಾರಿಸಿಕೊಳ್ಳುವರು.ಸೋಸಣೆಗೆಗಳಿಂದ ನಿರ್ಗಮಿಸುವ ದ್ರವವೇ ಶ್ವೇತೋದಕ.ನಾರುಗಳನ್ನು ಬೇಯಿಸಲು ಇದನ್ನು ವಿನಿಯೋಗಿಸುವರೆಂದು ಹಿಂದೆಯೇ ಹೇಳಿದೆ.ಇದರಲ್ಲಿ ಕಾಸ್ಪಿಕ್ ಸೋಡಾ,ಸೋಡಿಯಂ ಸಲ್ಫೈಡ್ ಮತ್ತು ಕೊಂಚ ಸೋಡಿಯಂ ಕಾರ್ಬೋನೇಟ್,ಸಲ್ಫೇಟ್ ಮತ್ತು ಥಯೋಸಲ್ಫೇಟುಗಳಿವೆ. ಕಪ್ಪುದ್ರಾವಕದ ಗಳಿಕೆಯೆ ಕಾಲದಲ್ಲಿ ನೀಳತೈಲವೆಂಬ(ಟಾಲ್ ಆಯಿಲ್)ಉಪವಸ್ತು ದೊರೆಯುವುದು.ಇದು ಸ್ನಿಗ್ಮಾವಾದ ಕಪ್ಪು ಬಣ್ಣದ ಅಂಟುದ್ರವ,ಇದರಲ್ಲಿ ರೆಸಿನ್ ಆಮ್ಲಗಳು ಮತ್ತು ಮಿಥೆನಾಲ್ ಇದೆ.ನೀಳತೈಲದ ಬೇರ್ಪಡೆಗೆ ಕೇಂದ್ರಾವಗಹನ ಯಂತ್ರ ಬೇಕು.ಸಾಬೂನುಗಳು,ಚರಬಿಗಳು(ಗ್ರೀಸಸ್)ಮತ್ತು ಎಮಲ್ಷನುಗಳ ತಯಾರಿಕೆಗೆ ನೀಳತೈಲ ಉಪಯೋಗವಾಗುತ್ತಿದೆ.ಕಪ್ಪು ದ್ರಾವಕವನ್ನು ಬೇರಿಯಂ ಹೈಡ್ರೇಟಿನೊಡನೆ ಹಿಂಗಿಸಿದರೆ ಘನವಸ್ತುವಗುತ್ತದೆ.ಅದನ್ನು ಪುಡಿ ಮಾಡಿ ವಿನಾಶಾಕ ಬಾಷ್ಪೀಬವನಕ್ಕೆ ಗುರಿಪಡಿಸಿದರೆ ಮೆಥನಾಲ್ ದೊರೆಯುವುದು.ಈ ಕ್ರಮ ದುಬಾರಿಯಾಗುವುದರಿಂದ ಅನುಷ್ಯಾನಯೋಗ್ಯವಲ್ಲ.ಪಾಚಕದಿಂದ ಹೊರಬಿದ್ದ ಅನಿಲಗಳಲ್ಲಿ 2-10 ಗ್ಯಾಲನ್ ಟರ್ಪೆಂಟ್ ಎಣ್ಣೆ ಸಿಗಬಹುದು.ಇದನ್ನು ಶುದ್ದಿ ಮಾಡಿದರೆ ಸಲ್ಫೇಟ್ ಟರ್ಪೆಂಟೈನ್ ಆಗುತ್ತದೆ. ಸೋಡಾ ಪಲ್ಪ್:ಇದರ ತಯಾರಿಕೆ ಸಲ್ಫೇಟ್ ಪಲ್ಪಿನಂತೆಯೇ.ಎರಡು ಕ್ಷಾರೀಯ ವಿಧಾನಗಳು. ಇದಕ್ಕೆ ಡೆಸಿಡುಯಸ್ ಮಾದರಿಯ ಅಥವಾ ಅಗಲವಾದ ಎಲೆಗಳುಳ್ಳ ಮರಗಳಾಗಬೇಕು.ಆದ್ದರಿಂದ ಸೋಡಾಪಲ್ಪಿನ ತಯಾರಿಕೆಗೆ ಪಾಪ್ಲರ್ ಮರಗಳಿಗೆ ಪ್ರಾಶಸ್ತ್ಯ ಹೆಚ್ಚು.ಅವನ್ನು ಬೇಯಿಸುವುದು ಸುಲಭ.ಬರ್ಜ್,ಮೇಪಲ್,ಚಿಸ್ಟನೆಟ್ ಇತ್ಯಾದಿ ಮರಗಳನ್ನು ಉಪಯೋಗಿಸುವ ಪರಿಪಾಟವಿದೆ.ಅಗಲವಾದ ಇಲೆಗಳಿರುವ ಮರಗಳು ನೀರಿನಲ್ಲಿ ಮುಳುಗುವುದರಿಂದ ಅವನ್ನು ರೈಲಿನಲ್ಲಿ ಅಥವಾ ಹಡಗುಗಳಲ್ಲಿ ಕಾರ್ಖಾನೆಗೆ ಸಾಗಿಸಬೇಕಾಗುತ್ತದೆ.ಬೇಯಿಸುವ ಮುನ್ನ ಮರವನ್ನು ಸಲ್ಫೇಟ್ ವಿಧಾನದಂತೆಯೇ