ಪುಟ:Mysore-University-Encyclopaedia-Vol-4-Part-2.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಗದ ಸಿದ್ದಗೊಳಿಸುತ್ತಾರೆ.ಬೇಯಿಸುವ ದ್ರಾವಕದಲ್ಲಿ ಶೇ.6.7 ಕಾಸ್ಟಿಕ್ ಸೋಡಾ ಇರುತ್ತದೆ.ಪಾಚಕಗಳ ರಚನೆಯೂ ಅಲ್ಲೆಯಾಂತೆಯೇ ಇದ್ದು ಚದರಂಗುಲಸ್ಯ 110 ಪೌಂಡುಗಳಷ್ಟು ಒತ್ತಡ ಮತ್ತು 173 ಸೆ.ಉಷ್ಣತೆಯಲ್ಲಿ 2-3 ತಾಸುಗಳ ಕಾಲ ಬೇಯಿಸಲಾಗುವುದು. ಲಭ್ಯವಾದ ಪಲ್ಪನ್ನು ತೆರೆದ ತೊಟ್ಟಿಯಲ್ಲಿ ತೊಳೆಯುವರು.ತೊಟ್ಟಿಗೆ ಸರಂಧ್ರವಾದ ಉಕ್ಕಿನ ಹುಸಿತಳವಿದೆ.ರಂಧ್ರಗಳು ಅರ್ಧ ಅಂಗುಲದ ಅಂತರದಲ್ಲಿವೆ.ತಳದಲ್ಲಿ ನವುರಾದ ತಂತಿಯ ಬಲೆ ಇದೆ. ಉಳಿದ ವಿವರಗಳು ಸಲ್ಫೇಟ್ ಪಲ್ಪಿನಂತೆ. ಈ ವಿಧಾನದಲ್ಲಿ ದೊರೆಯುವ ಕಪ್ಪು ದ್ರಾವಕದಲ್ಲಿ ಶೇ.16 ಘನವಸ್ತು ಮತ್ತು ಶೇ4-5ಕ್ಷಾರದ ಬಹುಭಾಗ ಸೋಡಿಯಂ ಕಾರ್ಬೋನೇಟಾಗಿಯೂ ಉಳಿದದ್ದು ಸೋಡಿಯಂ ಹೈಡ್ರಾಕ್ಸೈಡಿನ ರೊಪದಲ್ಲಿಯೊ ಇರುವುದು.ಸಲ್ಫೇಟ್ ವಿಧಾನದಂತೆಯೇ ಸಾಂದ್ರೀಕರಿಸಿದರೊ ದ್ರವೀಕರಣ ಕುಲುಮೆಯ ಅಗತ್ಯವಿಲ್ಲಿಲ್ಲ.ಲಭ್ಯವಸ್ತುವೇ ಕರಿಯ ಬೂದಿ.ಇದರಲ್ಲಿ ಶೇ,20-25 ಇಂಗಾಲವಿರುವುದು.ಹುಸಿತಳಗಳಿರುವ ತೊಟ್ಟಿಗಳಲ್ಲಿ ಪ್ರತಿಪ್ರವಾಹ ತತ್ತ್ವದ ಪ್ರಕಾರ ನೀರು ಅಥವ ದುರ್ಬಲ ಕ್ಷಾರದಿಂದ ಈ ಬೂದಿಯನ್ನು ಅವಶಶೂಷಿಸಲಾಗುವುದು.ದೂರೆತ ದ್ರಾವಣವನ್ನು ಮತೋಂದು ತೊಟ್ಟಿಗೆ ಹರಿಸಿ ಇಅಂಗಲದ ಕಸವನ್ನು ಬಿಸುಡುವರು.ಈಗ ಸುಣ್ಣವನ್ನು ಸೇರಿಸಿದರೆ ಮಡ್ಡಿಯಾಗುವುದು.ಇದನ್ನು ಜ್ವಲನಕೋಶಕ್ಕೆ ಒಯ್ದು ಸೋಡಿಯಂ ಕಾರ್ಬೊನೇಟನ್ನು ಪೊರೈಸುವುದು.ಆಗ ಪರಸ್ಪರ ಪಲ್ಲಟವಾಗಿ ಕ್ಯಾಲ್ಸಿಯಂ ಕಾರ್ಬೊನೇಟು ಒತ್ತರಿಸುತ್ತದೆ.ಇದನ್ನು ಶೋಧಿಸಿ ಸುಣ್ಣದ ಗೊಡಿಗೆ ರವಾನಿಸುವರು. Na2co3+ca(oh)2=2naoh+caco3. ಶೋಧಿತ ದ್ರವವೇ ಬಿಳಿಯ ದ್ರಾವಕ.ಇದು ಮಾಮೂಲಿನಂತೆ ವಿನಿಯೋಗವಾಗುವುದು.ಅಗಲವಾದ ಎಲೆಗಳಿರುವ ಮರದ ನಾರುಗಳು 1.5 ಮಿಲಿಮೀಟರುಗಳಷ್ಟಿದ್ದರೆ,ಕೋನಿಫರಸ್ ಮರದ ನಾರುಗಳು ಇದರ ಎರಡರಷ್ಟು ಉದ್ದವಿರುವುವು.ಆದ್ದರಿಂದ ಸೋಡಾ ಪಲ್ಲಿನಿಂದಾದ ಕಾಗದದ ತ್ರಾಣ ಕಡಿಮೆ. ಇದಕ್ಕೋಸ್ಕರವೇ ಈ ಪಲ್ಪನ್ನು ಇತರ ಪಲ್ಪುಗಳೊಡನೆ ಬೆರೆಸಿ ಉಪಯೋಗಿಸುವುದು.ಪುಸ್ತಕ ಮಯ್ತ್ತು ನಿಯತಕಾಲಿಕೆಗಳ ಮುದ್ರಾಣಕ್ಕೆ ಬೇಕಾದ ಕಾಗದ ಮತ್ತು ಟಿಷ್ಯೂಕಾಗದದ ತಯಾರಿಕೆಗೆ ಇದು ವಿಶೇಷವಾಗಿ ಬಳಸಲ್ಪಡುತ್ತದೆ.ಒಂದು ಟನ್ ಸೋಡಾ ಪಲ್ಪಿನ ಉತ್ಪಾದನೆಯಲ್ಲಿ ಆಗುವ ವಸ್ತು ಮತ್ತು ಶಕ್ತಿಸಂಚಯನದ ವಿವರ ಹೀಗಿದೆ; ಮರ- 1.5-2ಟನ್ನುಗಳು ಹೊಸ ಸುಣ್ಣ- 500ಪೌಂಡುಗಳು ಸೋಡಾಬೂದಿ- 250ಪೌಂಡುಗಳು ಹಬೆ-13,000ಪೌಂಡುಗಳು ವಿದ್ಯುಚಕ್ತಿ-250 ಕಿಲೊವ್ಯಾಟ್ ಗಂಟೆಗಳು ನೇರದುಡಿಮೆ-5 ಆಳುಗಳು,1 ಗಂಟೆ ಕಾಲ ಸಲ್ಫೈಟ್ ಪಲ್ಪ್:ಉತ್ಪಾದನ ಪ್ರಮಾಣದಲ್ಲಿ ಸಲ್ಫೈಟ್ ವಿದಾನವನ್ನು ಬಿಟ್ಟರೆ ಇದೇ ಪ್ರಮುಖವಾದುದು.ಇಲ್ಲಿ ಸಾಮಾನ್ಯವಾಗಿ ಉಪಯೋಗಿಸುವುದು ಸ್ತ್ರೊಸ್ ಮರ.ಆದರೆ ಹೆಮ್ ಲಾಕ್ ಮ್ತ್ತು ಬಾಲ್ಸಂಗಳು ಸಹ ಉಪಯೋಗಿಸುವುದುಂಟು.ಮರದ ತೊಗಟೆ ಬಿಡಿಸಿ ಶುಧ ಮಾಡಿ ಸಲ್ಫೇಟ್ ವಿಧಾನದಂತೆ ಅರ್ಧ ಅಂಗುಲದ ಚಕ್ಕೆಗಳಾಗಿ ಮಾಡುವರು.ಬೇಯಿಸುವುದಕ್ಕೆ ಮುಂಚೆ ಪಾಚಕಗಳ ಮೇಲ್ಭಾಗದಲ್ಲಿರುವ ವಿಶೇಷ ಡಬ್ಬಗಳಲ್ಲಿ ಈ