ಪುಟ:Mysore-University-Encyclopaedia-Vol-4-Part-2.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸಾವ ಪಿಷ್ಟ-ಕಸಿಮಾಡುವಿಕೆ (ಸಸ್ಯಗಳಲ್ಲಿ)

ಕಟ್ಟಾದ ಚರಂಡಿಗಳಿದ್ದಲ್ಲಿ ನೀರು ನಿಲ್ಲದೆ ಹರಿದು ಒಟ್ಟು ವಾತಾವರಣದ ನ ನೈರ್ಮಲ್ಯಕ್ಕೆ ಸಹಾಯಕವಾಗಿರುತ್ತದೆ. ಎಲ್ಲ ಆಧುನಿಕ ಕಸಾಯಿ ಖಾನೆಗಳಲ್ಲೂ ಒಂದು ಸಣ್ಣ ಪ್ರಯೋಗ ಶಾಲೆ ಇರುತ್ತದೆ. ಇಲ್ಲಿ ಮಾಂಸವನ್ನು ರೋಗೋತ್ಪತ್ತಿ ಜೀವಾಣುಗಳ, ಮತ್ತಿತರ ಗುಣಗಳ ಪರೀಕ್ಷೆ ಮಾಡುವುದು ಸಾಧ್ಯ. ತಿನ್ನುವುದಕ್ಕೆ ಯೋಗ್ಯವಲ್ಲದ ಮಾಂಸವನ್ನು ಉತ್ತಮವಾದ ಮಾಂಸದಾಸ್ತಾನು ಮಾಡಿರುವ ಹಜಾರದಔಂದ ದೂರವಾಗಿ ಬೇರೆ ಸ್ಥಳದಲ್ಲಿ ಶೇಖರಿಸಿರುತ್ತಾರೆ. ಸಾಮಾನ್ಯವಾಗಿ ಕಸಾಯಿ ಖಾನೆಗಳು ಊರಿನ ಹೊರಗೆ ಸಾಗಾಣಿಕೆಗೆ ಅನುಕೂಲವಾಗಿ ರೈಲ್ವೆ ನಿಲ್ದಾಣ ಮತ್ತು ಮಾಂಸದ ಮಾರುಕಟ್ಟೆಗಳಿಗೆ ಹಾಗೂ ಅಂಗಡಿಗಳಿಗೆ

ಸಮೀಪವಾಗಿರುತ್ತವೆ. ಇದಲ್ಲದೆ ಪ್ರಾಣಿಗಳನ್ನು ವಧೆ ಮಾಡುವ ಮೊದಲು ಅವುಗಳಲ್ಲಿ

ಮನುಷ್ಯನಿಗೆ ಹಾನಿಕರವಾದ ರೋಗಗಳಿವೆಯೇ ಎಂಬುದನ್ನು ಪರೀಕ್ಷಿಸಲು ಬೇಕಾದ ಸಲಕರಣೆಗಳು ಮತ್ತು ಸಿಬ್ಬಂದಿ, ಆಧುನಿಕ ಕಸಾಯಿ ಖಾನೆಗಳಲ್ಲಿ ಅನಿವಾರ್ಯ. ನೈರ್ಮಲ್ಯದ ದೃಷ್ಟಿಯಿಂದ ಕೊಂದ ಪ್ರಾಣಿಗಳಿಂದ ಓದಗುವ ಮಾ೦ಸ, ಹಾಗೂ ಉಪ ಉತ್ಪನ್ನಗಳಾದ ಚರ್ಮ, ಕೊಂಬು, ಗೊರಸು, ರಕ್ತ, ಗೊಬ್ಬರವಾಗಬಲ್ಲ ಮಾಂಸದ ಕಸ ಇವುಗಳ ವ್ಯವಸ್ಥೆಯ ಕಾರ್ಯ ಶೀಘ್ರವಾಗಿ ಮಾಡುವ ಅನುಕೂಲ ಕಸಾಯಿ ಖಾನೆಗಳಲ್ಲಿ ಅಗತ್ಯ. ಕಸಾಯಿ ಖಾನೆಯ ಕೇಂದ್ರ ಕಟಷ್ಟಡದ ಮಾದರಿ ಎರಡು ತೆರನಾದ್ದು: 1 ಯಾವುದೇ ಆಡ್ಡ ಗೋಡೆಗಳಿಲ್ಲದ ಒಂದು ದೊಡ್ಡ ಹಜಾರ; ಇದರಲ್ಲಿ ಪ್ರಾಣಿಗಳನ್ನು ವಧೆ ಮಾಡುವ ಹಾಗೂ ಮುಂಡದಿಂದ ಮಾಂಸ ಬೇರ್ಪಡಿಸುವ ಉಪಕರಣಗಳನ್ನು ಜೋಡಿಸಿರುತ್ತಾರೆ. 2 ದೊಡ್ಡ ಹಜಾರವನ್ನು ಅರ್ಧ ಎತ್ತರದ ಅಡ್ಡ ಗೋಡೆಗಳಿಂದ ವಿಂಗಡಿಸಿದ 5 ಮಳಿಗೆಯಂಥ ವಿಭಾಗಗಳು. ಪ್ರತಿಯೊಂದರಲ್ಲೂ 4-5 ಕುರಿ ಅಥವಾ ಇತರ ಪ್ರಾಣಿಗಳನ್ನು ಕೊಂದ ಮಾಂಸವನ್ನು ಬೇರ್ಪಡಿಸುವ ಏರ್ಪಾಡಿರುತ್ತದೆ. ಇಂಗ್ಲೆಂಡ್‌ ದೇಶದಲ್ಲಿ ಇಂಥ ಕಸಾಯಿ


ಮಳಿಗೆಗಳು ಸಾಮಾನ್ಯ. ಈ ರೀತಿಯ ವ್ಯವಸ್ಥೆಯಿಂದ ಒಂದು ಪ್ರಾಣಿಯ ವಧೆಯನ್ನು ಇನ್ನೊಂದು ಪ್ರಾಣಿ ನೋಡುವುದು ತಪ್ಪುತ್ತದೆ. ಖಾಸಗೀ ಕಟುಕರು ಒಂದೆರೆಡು ಮಳಿಗೆಗಳನ್ನು


ಬಾಡಿಗೆಗೆ ತೆಗೆದುಕೊಂಡು ಅವರು ತಂದ ಪ್ರಾಣಿಗಳನ್ನು ಇತರರಿ೦ದ ಅಡಚಣೆಗಳಿಲ್ಲದೆ ಕೊಂದು ಮಾಂಸವನ್ನು ಒಪ್ಪ ಮಾಡಿ ತೆಗೆದುಕೊಂಡು ಹೋಗಬಹುದು. ಒಂದೇ ರೀತಿಯ ಕಸಾಯಿಖಾನೆ ಇರುವ ಸ೦ದರ್ಭದಲ್ಲಿ ಕೇಂದ್ರ ಕಟ್ಟಡದಲ್ಲಿ, ದನ, ಕರು, ಕುರಿಗಳ ವಧೆಗೆ

ಕೇಂದ್ರ ಕಟ್ಟಡವನ್ನು ಬಳಸುತ್ತಾರೆ. ಹಂದಿ ಮಾಂಸ ಬೇರ್ಪಡೆಗೆ ಕೊರೆ ಮುಳ್ಳುಗಳನ್ನು

ತೆಗೆಯಬೇಕಾಗಿರುವುದರಿ೦ದ ಅದಕ್ಕೋಸ್ಕರ ಬೇರೆ ಕಟ್ಟಡದ ಏರ್ಪಾಡಿರುತ್ತದೆ.

ಭಾರತದಲ್ಲಿ ಕುರಿ, ಆಡು, ಜಾನುವಾರು, ಹಂದಿ ಮುಂತಾದ ಬೇರೆ ಬೇರೆ ಜಾತಿಯ ಪ್ರಾಣಿಗಳಿಗೆ ಪ್ರತ್ಯೇಕ ಕಸಾಯಿ ಖಾನೆಗಳಿರುತ್ತವೆ. ಗೋಮಾಂಸ ತಿನ್ನದ ಜನಕ್ಕೋಸ್ಕರ ಕೇವಲ ಆಡು ಕುರಿಗಳನ್ನು ಕೊಂದು ಅವುಗಳ ಮಾಂಸವನ್ನೊದಗಿಸಲು ಕಸಾಯಿ ಖಾನೆಗಳಿವೆ. ಹಾಗೆಯೇ ಹಂದಿ ಮಾಂಸವನ್ನು ತಿನ್ನದ ಜನಗಳ ಅನುಕೂಲಕ್ಕೋಸ್ಕರ ಪ್ರತ್ಯೇಕವಾದ ಹಂದಿಗಳ ಕಸಾಯಿ ಖಾನೆಗಳ ವ್ಯವಸ್ಥೆ ಇದೆ.

ಆಧುನಿಕ ಕಸಾಯಿ ಖಾನೆಗಳಲ್ಲಿ ಪ್ರಾಣಿಗಳ ಮುಂಡವನ್ನು ನೆತ್ತಿಯ ಮೇಲ್ಗಡೆ ಹಾಕಿದ ಕಂಬಿಗಳ ಸಹಾಯದಿಂದ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಏರ್ಪಾಟಿರುತ್ತದೆ. ಹಾಗೆಯೇ ಉಪ ಉತ್ಪನ್ನಗಳನ್ನು ತಂತಿ ಬುಟ್ಟಿಗಳು ಇಲ್ಲವೆ ಕಡಾಯಿಗಳ ಮೂಲಕ ಸಾಗಿಸುತ್ತಾರೆ. ಇವುಗಳಲ್ಲದೆ ಬೇಸಗೆಯಲ್ಲಿ ಉಪಯೋಗಕ್ಕೋಸ್ಕರ ಶೀತಾಗಾರದ ವ್ಯವಸ್ಥೆ ಇರುತ್ತದೆ. ಚರ್ಮ ಸುಲಿದ ಮುಂಡಗಳನ್ನು ಒಂದು ಸ್ಥಳದಿ೦ದ ಇನ್ನೊಂದು ಊರಿಗೆ ಸಾಗಿಸುವುದಕ್ಕೂ ಶೀತಳ ವ್ಯವಸ್ಥೆ ಅಗತ್ಯ.

ಉಪೋತ್ಪನ್ನಗಳು: ಆಹಾರಯೋಗ್ಯ ಮಾ೦ಸ ಕಸಾಯಿ ಖಾನೆಯ ಪ್ರಧಾನ ಉತ್ಪನ್ನ. ಉಪೋತ್ಸನ್ನಗಳಲ್ಲಿ ಮುಖ್ಯವಾದವು ತೊಗಲು ಮತ್ತು ಕೊಬ್ಬು ಪ್ರಾಣಿ ರಕ್ತ, ಗಂಥಿಗಳು, ಕರುಳು, ಮೂಳೆ ಇವೆಲ್ಲವುಗಳಿಗೆ ವಿಶಿಷ್ಟವಾದ ಉಪಯೋಗಗಳಿವೆ.

ಕಸಾವ ಪಿಷ್ಟ: ಮ್ಯಾನಿಹಾಟ್‌ ಎಸ್ಕುಲೆಂಟಾ, ವ್ಯಾನಿಹಾಟ್‌ ಯೂಟಿಲಿಸಿಮಾ, ಮ್ಯಾನಿಹಾಟ್‌ ಡಲ್ಲಿಸ್‌ ಎಂಬ ಯುಫೋರ್ಜಿಯೇಸೀ ಜಾತಿಯ ಗಿಡಗಳ ಗೆಡ್ಡೆಯಿಂದ


(ಎಸ್‌.ಎಂ.ಒ.).

ತಯಾರಿಸಿದ ಪಿಷ್ಟ ಲ್ಯಾಟಿನ್‌ ಅಮೆರಿಕ, ಆಫ್ರಿಕ, ಭಾರತ ಮತ್ತು ಇಂಡೊನೇಷ್ಯಗಳಲ್ಲಿ

ಗೆಡ್ಡೆಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಮತ್ತು ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಾರೆ.

ಗೆಡ್ಡೆಗಳು ಎರಡು ಬಗೆ. ಒ೦ದು ಕಹಿ, ಮತ್ತೊಂದು ಕಹಿ ಇರುವುದಿಲ್ಲ. ಕಹಿಗೆಡ್ಡೆಯಲ್ಲಿ

ಪಿಷ್ಟಪ್ರಮಾಣ ಜಾಸ್ತಿ ಇರುವುದರಿಂದ ಪಿಷ್ಟದ ತಯಾರಿಕೆಗೆ ಅದನ್ನೇ ಉಪಯೋಗಿಸುತ್ತಾರೆ.

ತಯಾರಿಸುವ ವಿಧಾನ: ಗಿಡಗಳು 10-12 ತಿಂಗಳು ಬೆಳೆದ ಅನ೦ತರ, ಗೆಡ್ಡೆಗಳನ್ನು

ಕೊಯ್ದುಮಾಡಿ, ಮಣ್ಣು ಇತ್ಯಾದಿ ಕಲ್ಪಷಗಳನ್ನು ಹೋಗಲಾಡಿಸಲು ನೀರಿನಲ್ಲಿ ಚೆನ್ನಾಗಿ ತೊಳೆದು, ಹಾಲಿನಂಥ ದ್ರಾವಣ ಬರುವವರೆಗೆ ನೀರಿನೊಂದಿಗೆ ಜಜ್ಜಿ ಬಟ್ಟೆ ಅಥವಾ ಜರಡಿಗಳಲ್ಲಿ ಶೋಧಿಸಿ ಬ೦ದ ದ್ರಾವಣವನ್ನು ತೊಟ್ಟಿಗಳಲ್ಲಿ ಕೂಡಿಡುತ್ತಾರೆ. ಕೆಲವು ಗಂಟೆಗಳ ಅನಂತರ ಹಿಷ್ಟವೆಲ್ಲ ಕೆಳಗೆ ಶೇಖರಿಸುತ್ತದೆ. ಮೇಲಿನ ತಿಳಿನೀರು ಉಪಯುಕ್ತವಲ್ಲ. ಪಿಷ್ಟವನ್ನು ಕ್ಲೋರಿನ್‌ ಅಥವಾ ಗಂಧಕದ ಡೈಲಕ್ಷೈಡಿನಿಂದ ಜೆಲುವಿಸಿ ನೀರಿನಿಂದ ಪುನಃ ಪುನಃ ತೊಳೆದು ಒಣಗಿಸಿ ಪುಡಿಮಾಡಿ ಜರಡಿಯಾಡಿದ (140-ಮೆಹ್‌) ಅನಂತರ

೩೦೧

ಶುದ್ಧ ವಾದ ಹಿಷ್ಟ ದೊರಕುತ್ತದೆ. ಗಾತ್ರವಿರುತ್ತಪೆ.

ಉಪಯೋಗ: ಆಹಾರಕ್ಕೋಸ್ಕರ ಹೆಚ್ಚಾಗಿ ಗೆಡ್ಡೆಗಳನ್ನು ಉಪಯೋಗಿಸುತ್ತಾರೆ. ಕಸಾವಪಿಷ್ಟವನ್ನು ನೀರಿನಲ್ಲಿ ಕದರಿ ಕುದಿಸಿದರೆ ಸಮರೂಪ ದ್ರಾವಣ ಉಂಟಾಗುತ್ತದೆ. ಇದನ್ನು ಲಾಂಡ್ರಿಗಳಲ್ಲೂ ಅಧಿಕವಾಗಿ ಬಟ್ಟೆ ಕಾಗದ ಗೋಂದುಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ. ಭಾರತದಲ್ಲಿ ತಯಾರಿಸಿದ ಬಹು ಪ್ರಮಾಣವನ್ನು ಬಟ್ಟೆ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. (ಎಂ.ಆರ್‌.ಆರ್‌.)

ಕಿಮಾಡುವಿಕೆ (ಪ್ರಾಣಿಗಳಲ್ಲಿ) : ಅಂಗಾಂಶದ ಮತ್ತು ಅಂಗದ ಕಸಿ ಮಾಡುವಿಕೆ ಅಥವಾ ನಾಟಿ ಹಾಕುವಿಕೆಯಂತೆಯೇ (ಗ್ರಾಪ್ಟಿಂಗ್‌, ಟ್ರಾನ್ಸ್‌ ಪ್ಲಾಂಟೇಷನ್‌) ಕಪ್ಪೆ, ಇಲಿ ಮುಂತಾದವುಗಳಲ್ಲೂ ಒಂದು ಪ್ರಾಣಿಯ ದೇಹದ ಒಂದು ಭಾಗದಿಂದ ಇನ್ನೊಂದಕ್ಕೆ ಅಥವಾ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಗಾಂಶಗಳನ್ನೊ (ಊತಕ). ಅಂಗಗಳನ್ನೊ ತೆಗೆದು ನಾಟಿ ಹಾಕಬಹುದು. ಈ ವಿಧಾನವನ್ನನುಸರಿಸಿ ಮತ್ತೊಂದಕ್ಕೆ ಯಶಸ್ವಿಯಾಗಿ ವಿನಿಮಯ ಮಾಡಲಾಗಿದೆ. ಪ್ರಾಣಿಗಳ ಬೆಳೆವಣಿಗೆಯಲ್ಲಿ ನ್ಯೂಕ್ಷಿಯಸ್‌ ಯಾವ ಪಾತ್ರ ವಹಿಸುವುದೆನ್ನುವುದರ ಬಗ್ಗೆ ಅರಿಯಲು ಈ ಪ್ರಯೋಗ ಸಹಕಾರಿಯಾಗಿದೆ. ಇದರಂತೆಯೇ ಇಲಿಗಳಲ್ಲಿ ಚರ್ಮದ ಕಸಿ ಮಾಡುವಿಕೆಯ ಬಗ್ಗೆ ಅನೇಕ ಪ್ರಯೋಗಗಳು ನಡೆದಿವೆ. ಕಸಿಮಾಡುವಿಕೆಯಲ್ಲಿ ನಾನಾಬಗೆಯ ತೊಂದರೆಗಳು ಹುಟ್ಟುತ್ತವೆ. ಈ ತೊಂದರೆಗಳಲ್ಲಿ ಮುಖ್ಯವಾದುವು ಇವು: 1 ನಾಟಿ ಹಾಕಿದ ಭಾಗ ರಕ್ತನಾಳಗಳನ್ನು ಬೆಳೆಸಿಕೊಂಡು ತನಗೆ ಬೇಕಾದ ಪೋಷಕವಸ್ತು ಹಾಗೂ ಆಮ್ಲಜನಕವನ್ನು ಪಡೆಯಬೇಕಾಗುವುದು. 2 ನಾಟಿ ಹಾಕಿದ ಕೆಲವು ದಿನಗಳಲ್ಲೇ ವಿರೋಧಕ್ರಿಯೆಯೊಂದು ಆರಂಭವಾಗಿ ದಾನ ಪಡೆದ ದೇಹ ಈ ಕಸಿಯನ್ನು ವಿಸರ್ಜಿಸುತ್ತದೆ. ಇದಕ್ಕೆ ಮುಖ್ಯ ಕಾರಣ ದಾನ ಪಡೆದ ಪ್ರಾಣಿಯ ರೋಗರಕ್ಷಣಾಕ್ರಮ: ದೇಹಕ್ಕೆ ಸೇರುವ ಬ್ಯಾಕ್ಟೀರಿಯ ಮುಂತಾದುವುಗಳ ಆಕ್ರಮಣವನ್ನು ಎದುರಿಸಲು ದೇಹ ಪ್ರತಿಕಾಯಗಳನ್ನು (ಆಂಟಿ ಬಾಡೀಸ್‌) ಉತ್ಪತ್ತಿ ಮಾಡುವಂತೆಯೇ ನಾಟಿ ಹಾಕಿದ ಭಾಗದ ವಿರುದ್ಧವಾಗಿಯೂ ದಾನಪಡೆದ ಪ್ರಾಣಿಯ ದೇಹ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವುದು. ಈಗೀಗ ಬೆಳೆವಣಿಗೆ ಮತ್ತು ಜೀವಕೋಶ ವಿಭಜನೆಯನ್ನು ನಿರೋಧಿಸುವ" ಔಷಧಿಗಳಾದ ಇಮ್ಯೂರಾನ್‌, ಆಕ್ಟಿನೋಮೈಸಿನ್‌-ಸಿ ಮತ್ತು ಹಂಚಚಿಸಂಸಥ ಅಂಗವನ್ನು ತ್ಯಜಿಸುವ ಪ್ರತಿಕ್ರಿಯೆಯನ್ನು ನಿರೋಧಿಸುವ ವಸ್ತುವಾದ ಆಡ್ರಿನಲ್‌ ಗ್ರಂಥಿಯ ಕಾರ್ಟಿಕೋಸ್ಟೀರಾಯಿಡ್‌ ಹಾರ್ಮೋನುಗಳನ್ನೂ ಹಾಗೂ ಪ್ರತಿಪಾದಾರ್ಥ ಉತ್ಪತ್ರಿಯಲ್ಲಿ ಮುಖ್ಯ ಪಾತ್ರ ವಹಿಸುವ ಅಂಗಗಳಾದ ಥೈಮಸ್‌, ಗುಲ್ಮ ಮತ್ತು ಪಕ್ಷಿಗಳಲ್ಲಿನ ಬದ್ದ ಫ್ಯಾಬ್ರಿಕಸ್‌ ಮುಂತಾದುವುಗಳನ್ನು ತೆಗೆದು ಸಂಯೋಜಿಸುವುದರಿಂದ ಈ ವಿರೋಧ ಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಕಾರ್ಟಿಕೋಸ್ಟೀರಾಯ್ಡ್‌ ಹಾರ್ಮೋನುಗಳನ್ನು ಉಪಯೋಗಿಸುವ ವಿಧಾನವನ್ನು ಸಿ. ಜುಕೋವಸ್ಥಿ ಮತ್ತು ಸಿ.ಎಂ. ಕ್ಯಾಲೊಷೆ ಅವರು ಪ್ರಾಣಿಗಳಲ್ಲಿಯೂ ಟಿ. ಸ್ಟಾರ್ಸಲ್‌ ಮತ್ತು ಅವರ ಸಂಗಡಿಗರು ಮನುಷ್ಯನಲ್ಲಿಯೂ ಅನುಸರಿಸಿದ್ದಾರೆ. ಅಲ್ಲದೆ ದಾನ ಪಡೆದ ಪ್ರಾಣಿಯ ದೇಹದ ಮೇಲೆ ಅಥವಾ ನಾಟಿ ಹಾಕುವ ಅಂಗಾಂಶದ ಮೇಲೆ ಮಾರಕವಲ್ಲದ ಪ್ರಮಾಣದಲ್ಲಿ ಎಕ್ಸ್‌_ಕಿರಣಗಳನ್ನು ಹಾಯಿಸಿ ಪ್ರತಿಕ್ರಿಯೆ ಪ್ರಚೋದಕ ವಸ್ತುಗಳನ್ನು (ಅ೦ಂಟಿಜೆನ್ಸ್‌) ನಾಶ ಮಾಡಬಹುದು. ಇದರಿಂದ ದಾನಪಡೆವ ಪ್ರಾಣಿಯಲ್ಲಿ ಪ್ರತಿ ಕಾಯಗಳ ತಯಾರಿ ನಿಂತುಹೋಗುತ್ತದೆ. ಆದರೆ ದಾನಪಡೆದ ಪ್ರಾಣಿ ತನ್ನೆಲ್ಲ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವುದೇ ಇದರಲ್ಲಿನ ಒ೦ದು ದೊಡ್ಡ ನ್ಯೂನತೆ. ಸ್ಟಾರ್ಸಲ್‌ ಅವರು ವಿವಿಧ ರಕ್ತಗು೦ಂಪುಗಳ ನಡುವೆ ಪ್ರಯೋಗಗಳನ್ನು ನಡೆಸಿ ೦ ಮತ್ತು 0*ಗುಂಪಿನ ಮನುಷ್ಯರಿಂದ ಬೇರೆ ಯಾವ ಗುಂಪಿನ ಮನುಷ್ಯರಿಗೂ ಹಾಗೆಯೆ ಯಾರಿಂದ ಬೇಕಾದರೂ 4೫ ಗುಂಪಿಗೂ ಕಸಿಮಾಡಬಹುದೆಂದೂ ತಿಳಿಸಿದ್ದಾರೆ. ಇದೇ ದೆಸೆಯಲ್ಲಿ ಕಳೆದ ಮೂರು ದಶಕಗಳಿಂದ ಹೆಚ್ಚಾಗಿ ಪ್ರಯೋಗಗಳನ್ನು ನಡೆಸಿದ ಬ್ರಿಟನ್ನಿನ ಜೀವಶಾಸ್ತ್ರಜ್ಞ ಪಿ.ಬಿ. ಮೆಡಾವರ್‌ ಎ೦ಬುವರಿಗೆ 1960ರಲ್ಲಿ ನೋಜೆಲ್‌ ಪಾರಿತೋಷಕ ಸಿಕ್ಕಿದೆ. ನೋಡಿ- ಕಾಮಾಡುವಿಕೆ,-ಅಂಗಾಂಶದ-ಮತ್ತು-ಅಂಗದ) (ಎಚ್‌.ಬಿ.ಡಿ.)

ಕಸಿಮಾಡುವಿಕೆ (ಸಸ್ಯಗಳಲ್ಲಿ) : ಎರಡು ಬೇರೆ ಬೇರೆ ಸಸ್ಯಗಳ ಭಾಗಗಳನ್ನು ಒಗ್ಗೂಡಿಸಿ ಒಂದಾಗಿ ಬೆಳೆಸುವ ಒಂದು ಕ್ರಮ (ಗ್ರಾಲ್ಟಂಗ್‌). ಅಜೀಜೋತ್ಪಾದನೆಯಂತೆಂಹೀ ಈ ವಿಧಾನದಿಂದಲೂ ಸಸ್ಯಗಳನ್ನು ವೃದ್ಧಿ ಮಾಡಬಹುದಾದರೂ ಇವೆರಡು ಕ್ರಮಗಳಲ್ಲೂ ಆನೇಕ ವ್ಯತ್ಯಾಸಗಳು೦ಟು. (ನೋಡಿ- ಅಬೀಜೋತ್ಪಾದನೆ) ಒ೦ದು ಸಸ್ಯದ ಭಾಗ ಬೇರು ಬಿಟ್ಟು ಸ್ವಂತವಾಗಿ ಬೆಳೆಯುತ್ತಿರುವ ಸಸ್ಯದ ಕಾಂಡ, ಬೊಡ್ಡೆ ಅಥವಾ ತಾಳು. ಇದನ್ನು ಕಸಿತಾಳು (ಸ್ಟಾಕ್‌) ಎನ್ನುತ್ತಾರೆ. ಇದರ ಮೇಲೆ ಕೂರಿಸಿ ಸೇರಿಸುವ ಭಾಗ ಸ್ವಂತವಾಗಿ ಬೆಳೆಯುತ್ತಿರುವ ಉತ್ತಮ ಗುಣಗಳುಳ್ಳ ಮತ್ತೊಂದು ಸಸ್ಯದ್ದು. ಈ ಭಾಗ ಕೊಂಬೆ, ಕುಡಿ, ಕೊನೆ, ಕಣ್ಣು ಅಥವಾ ಅಂಟಾಗಿರಬಹುದು. ಈ ಭಾಗವನ್ನು ಕಸಿ ಕೊಂಬೆ (ಸೈಯನ್‌)

ಎನ್ನುತ್ತಾರೆ. ತಾಳು ಮತ್ತು ಕಸಿಕೊಂಬೆ ಸರಿಕೂಡಿದರೆ, ಕಸಿ ಕೊಂಬೆಯಿ೦ಂದ ಹೊರಡುವ

ಪಿಷ್ಟದ ಹಳಕುಗಳು 5 ರಿಂದ 35 (ಸರಾಸರಿ 15)