ಪುಟ:Mysore-University-Encyclopaedia-Vol-4-Part-2.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಗದ ಹಣ ೪೧೧ ಹಣದ ವಿಳಾಸದಲ್ಲಿ ನಾಲ್ಕು ಹಂತಗಳನ್ನು ಕ್ರೌತರ್ ಗುರುತಿಸಿದ್ದಾನೆ. ವ್ಯಾಪಾರಿಗಳು ಊರಿಂದೂರಿಗೆ ಹೋಗುವಾಗ ಕಳುವಿನ ಭಯದಿಂದ ನಗದನ್ನು ಕೊಂಡೊಯ್ಯುವ ಬದಲಾಗಿ ತಮ್ಮೂರಿನ ಗಣ್ಯವ್ಯಕ್ತಿ ನೀಡಿದ ಹಣ ಪಡೆಯುವ ಹಕ್ಕಿನ ಪತ್ರಗಳನ್ನು ಕೊಂಡು ಹೋಗುತ್ತಿದ್ದದ್ದು ಮೊದಲನೆಯ ಹಂತ. ಪತ್ರದಲ್ಲಿ ನಮೂದಿಸಿರುವ ಹಣವನ್ನು ವ್ಯಾಪಾರಿ ತನ್ನಲ್ಲಿ ಠೇವಣಿ ಇಟ್ಟಿರುವನೆಂದೂ ಈ ಹಣವನ್ನು ವ್ಯಾಪಾರಿಯ ಆದೇಶದ ಮೇರೆಗೆ ಅವನಿಗೆ ಅಥವಾ ಆತ ಸೂಚಿಸಿದವರಿಗೆ ಕೊಡಲು ತಾನು ಬಾಧ್ಯನೆಂದೂ ಆ ಗಣ್ಯವ್ಯಕ್ತಿ (ಈಗಿನ ಬ್ಯಾಂಕರ್ ಎನ್ನಬಹುದಾದ ವ್ಯಕ್ತಿ) ಬರೆದು ಕೊಡುತ್ತಿದ್ದ. ಮುಂದಿನ ಹಂತದಲ್ಲಿ ಒಂದು ಸಣ್ಣ ಬದಲಾವಣೆ ಕಂಡುಬಂತು. ವ್ಯಾಪಾರಿ ಠೇವಣಿ ಇಟ್ಟಿರುವ ಹಣವನ್ನೆಲ್ಲವನ್ನೂ ಪತ್ರದಲ್ಲಿ ನಮೂದಿಸಿ ಅವನ ಹೆಸರಿನಲ್ಲಿ ಪತ್ರ ಬರೆಯುವುದಕ್ಕೆ ಬದಲಾಗಿ ಪತ್ರ ತರುವವನಿಗೆ ಎಂದು ಬರೆದು ಅನುಕೂಲ ಪರಿಮಾಣದ ಹಣಕ್ಕೆ ಪತ್ರವನ್ನು ತಯಾರಿಸುವ ರೂಢಿ ಜಾರಿಗೆ ಬಂದಿತು. ಈಗೆ 1 ಪೌಂ, 10 ಪೌಂ ಅಥವಾ 100 ಪೌಂ ಹಣವನ್ನು ಯಾರು ಆ ಪತ್ರಗಳನ್ನು ತೋರಿಸುತ್ತಾರೋ ಅವರಿಗೆ ಕೊಡುವೆವು ಎಂಬ ವಚನಗಳನ್ನೊಳಗೊಂಡ ಪತ್ರಗಳು ಜಾರಿಯಲ್ಲಿ ಬಂದುವು. ಹೀಗೆ ಎರಡನೆಯ ಹಂತದವರೆಗೂ ವಚನ ಪತ್ರಗಳು ಹಣದ ಪ್ರತಿನಿಧಿ ರೂಪದಲ್ಲಿ ಬಳಕೆಯಲ್ಲಿದ್ದುವು. ಅವನ್ನು ಪಡೆದ ವ್ಯಾಪಾರಿ ಸಾಲಿಗ ಆ ಪತ್ರಗಳನ್ನು ಹೊರಡಿಸಿದ ಬ್ಯಾಂಕರನಿಂದ ಅವನ್ನು ನಗದು ಹಣಕ್ಕ ಪರಿವರ್ತಿಸಿಕೊಳ್ಳಬೇಕಾಗಿತ್ತು.ಆದರೆ ಕಾಲ ಕ್ರಮೇಣ ಪ್ರತಿನಿಧಿರೂಪದ ಹಣವನ್ನೇ ಸ್ವಯಂ ಹಣವಾಗಿ ಬಳಸಲು ಪ್ರಾರಂಭವಾಯಿತು. ಹೀಗೆ ಪತ್ರವನ್ನು ( ನೋಟು) ಒಂದು ವ್ಯವಹಅರಕ್ಕೆ ಉಪಯೋಗಿಸಿ ತತ್ ಕ್ಷಣದ ನಗದು ಹಣಕ್ಕೆ ಪರಿವರ್ತಿಸಿಕೊಳ್ಳುವ ಬದಲು ಅದು ಅನೇಕ ವ್ಯವಹಾರಗಳನ್ನು ತೀರಿಸಲು ಬಳಕೆಗೆ ಬರಲಾಗಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಓಡಾಡಲಾರಂಭಿಸಿತು. ಆದರೆ ಎಲ್ಲ ನೋಟುಗಳೂ ಹೀಗೆ ಚಲಾವಣೆಯಲ್ಲಿಯೆ ಇರುತ್ತಿರಲಿಲ್ಲ. ಅವುಗಳಲ್ಲಿ ಕೆಲವು ನಗದಿಗೆ ಪರಿವರ್ತನೆಗಾಗಿ ಬ್ಯಾಂಕರನ ಬಳಿಗೆ ಬರುತ್ತಿದ್ದವು. ನೀಡಲಾದ ನೋಟುಗಳಲ್ಲಿ ಸಾಮಾನ್ಯವಾಗಿ ಒಂದು ಗೊತ್ತಾದ ಪ್ರಮಾಣದ ನೋಟುಗಳು ಮಾತ್ರ ನಗದಿಗಾಗಿ ವಾಪಸಾಗುವುವೆಂಬುದನ್ನು ಬ್ಯಾಂಕರುಗಳು ಅನುಭವದಿಂದ ತಿಳಿದುಕೊಂಡರು. ಹೀಗೆ ಬ್ಯಾಂಕರುಗಳು ತಾವು ಸ್ವೀಕರಿಸಿದ ಠೇವಣಿಗಿಂತ ಹೆಚ್ಚು ಮೊಬಲಗಿನ ನೋಟುಗಳನ್ನು ಚಲಾವಣೆಗೆ ನೀಡಲು ಸಾಧ್ಯವಾಯಿತು. ಇದು ಮೂರನೆಯ ಹಾಗೂ ಗಮನಾರ್ಹವಾದ ಹಂತ. ಈ ಹಂತದಲ್ಲಿ ಬ್ಯಾಂಕು ನೋಟು ಸ್ವಯಂ ಹಣವಾಗಿ ಪುರಸ್ಕ್ರತವಾಯಿತಲ್ಲದೆ ನಗದಿಗಿಂತ ಅಧಿಕ ಪ್ರಮಾಣದ ನೋಟುಗಳನ್ನು ಹೊರಡಿಸುವ ಅನುಕೂಲವುಂಟಾಯಿತು. ಅಲ್ಲದೆ ಈ ಮಧ್ಯೆ ನೋಟುಗಳನ್ನು ಕಾನೂನಿನ ದೃಷ್ಟಿಯಲ್ಲಿ ಹಣವೆಂದು ಗುರುತಿಸಲಾಗಿ ಅವುಗಳ ಪರಿವತ‍ನೆಗೆ ಸಂಬಂಧಿಸಿದಂತೆ ಒಂದು ಕ್ರಾಂತಿಕಾರಕ ಬದಲಾವಣೆಯುಂಟಾಯಿತು. ಅದೇನೆಂದರೆ, ಹಾಗದ ಹಣ ಸುಭದ್ರವಾಗಿರಬೇಕಾದರೆ ಚಿನ್ನಕ್ಕಾಗಲಿ ಚಿನ್ನದ ನಾಣ್ಯಗಳಿಗಾಗಲಿ ಪರಿವರ್ತನೆಯಾಗುವ ಅವಕಾಶವಿರಬೇಕೆಂಬ ಸಾಮಾನ್ಯ ಭಾವನೆ ಅಲ್ಲಿಯವರೆಗೆ ಬೆಳೆದುಬಂದಿತ್ತು. ಆ ಅವಕಾಶವಿದ್ದುದರಿಂದಲೇ ನೋಟುಗಳು ಜನರ ನಂಬಿಕೆ ಗಳಿಸಿದ್ದುವು. ಆದರೆ ಯಾವಾಗ ನೋಟುಗಳು ಕಾಲಕ್ರಮೇಣ ಕಾನೂನಿನ ಬಲವುಳ್ಳ ಹಣವೆಂದು ಘೋಷತವಾಗಿ ಬಳಕೆಗೆ ಬಂದವೋ ಅಂದಿನಿಂದ ಆಧಾರಭೂತವಾದ್ದೆಂಬ ಭಾವನೆ ಬದಲಾಯಿತು. ಎಂದು ಹಣ ಮಾಡಬೇಕಾದ ಕಾಯ‍ಗಳನ್ನು ನೋಟುಗಳು ಮಾಡುವುವೆಂಬದನ್ನು ಮನಗಾಣಲಾಯಿತೋ ಅಂದಿನಿಂದ ಅವುಗಳ ಮೇಲೆ ಜನರಿಗೆ ನಂಬಿಕೆ ಬಂತು. ಆದ್ದರಿಂದ ನೋಟುಗಳ ಪರಿವರ್ತನೆಯ ಸಾಧ್ಯತೆ ಅನಾವಶ್ಯಕವಾಯಿತು. ವಾಹಕರಿಗೆ (ಬೇರರ್) ಪಾವತಿ ಮಾಡುವುದಾಗಿ ವಚನ ನೀಡುತ್ತೇನೆಂದು ನೋಟಿನ ಮೇಲೆ ಅಚ್ಚಾಗಿರುವ ಒಕ್ಕಣೆಗೆ ಈಗ ಏನೂ ಅರ್ಥವಿಲ್ಲ. ಬ್ಯಾಂಕಿನಲ್ಲಿ ನೋಟನ್ನು ಕೊಟ್ಟರೆ ಚಿಲ್ಲರೆ ನಾಣ್ಯ ಇಲ್ಲವೆ ಸಣ್ಣ ವರ್ಗದ ನೋಟುಗಳನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿ ಚಿನ್ನ ಇಲ್ಲವೆ ಚಿನ್ನದ ನಾಣ್ಯಗಳಿಗೆ ನೋಟನ್ನು ಪರಿವರ್ತಿಸಬಹುದು. ಇದು ಕಾಗದ ಹಣದ ವಿಕಾಸದ ನಾಲ್ಕನೆಯ ಹಾಗೂ ಕೊನೆಯ ಹಂತ. ಕಾಗದದ ಹಣವನ್ನು ಮುದ್ರಿಸಲು ಇರುವ ವಿಧಾನಗಳು : 1. ಸರಳ ಠೇವಣಿ ವಿಧಾನ, 2. ಗರಿಷ್ಠ ನ್ಯಾಸರಕ್ಷಣಾ ವಿಧಾನ ( ಮ್ಯಾಕ್ಸಿಮಂ ಫಿಡ್ಯುಷಿಯರಿ ಸಿಸ್ಟಮ್), 3. ಸ್ಥಿರ ನ್ಯಾಸರಕ್ಷಣಾ ವಿಧಾನ (ಫಿಕ್ಸಡ್ ಫಿಡ್ಯುಷಿಯರಿ ಸಿಸ್ಟಮ್), 4. ಅನುಪಾತೀಯ ಮೀಸಲು ವಿಧಾನ, 5. ಕನಿಷ್ಟ ಮೀಸಲು ವಿಧಾನ, 6. ಶೇಕಡವಾರು ಠೇವಣಿ ವಿಧಾನ, 7. ಹೆಚ್ಚುವರಿ ಲಾಭಾಂಶ ಠೇವಣಿ ವಿಧಾನ. ಕಾಗದ ಹಣ ಮತ್ತು ಉದ್ದರಿ ಹಣ : ಈ ಸಂದರ್ಭದಲ್ಲಿ ನೋಟುಗಳಿಗೂ ಚೆಕ್ಕು ರೂಪದ ಬ್ಯಾಂಕು ಹಣ ಅಥವಾ ಉದ್ದರಿ ಹಣಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬಹುದು. ಚೆಕ್ಕುಗಳ ರೂಪದಲ್ಲಿ ಪ್ರಚಲಿತವಾಗಿರುವ ಹಣ ಪ್ರಭೇದವನ್ನು ನೋಟುಗಳು ಪ್ರಥಮ ಹಂತದಲ್ಲಿದ್ದಂತೆ ಹಣ ಪಡೆಯುವ ಹಕ್ಕಿನ ಪತ್ರಗಳೆನ್ನಬಹುದೇ ಹೊರತು ಸ್ವಯಂ ಹಣವೇನೂ ಅಲ್ಲ. ಚೆಕ್ಕು ಕೊಟ್ಟ ವ್ಯಕ್ತಿಯ ಬ್ಯಾಂಕು ಲೆಕ್ಕದಲ್ಲಿ ಅಷ್ಟೊಂದು ಹಣವಿದೆ ಎಂಬ ನಂಬಿಕೆಯೇ ಸಾಲತೀರುವೆಗಾಗಿ ಚೆಕ್ಕು ಸ್ವೀಕರಿಸಲು ಸಾಲಿಗ ಒಪ್ಪಲು ಕಾರಣ ಎಲ್ಲಿಯವರೆಗೆ ಈ ನಂಬಿಕೆಯಿರುತ್ತದೆಯೋ ಅಲ್ಲಿಯವರೆಗೆ ಚೆಕ್ಕುಗಳು ಹಣದ ಕಾರ್ಯ ಮಾಡುತ್ತವೆ. ಚೆಕ್ಕುಗಳಿಗೆ ಕಾನೂನು ಬಲವಿಲ್ಲದ ಕಾರಣ ಸಾಲತೀರುವೆಯಲ್ಲಿ ಅವನ್ನು ಸ್ವೀಕರಿಸಲೇಬೇಕೆಂಬ ಕಡ್ಡಾಯವೇನೂ ಇಲ್ಲ. ಆದರೆ ಕಾಗದ ಹಣ ರೂಢಿಯಿಂದಲೂ ಕಾನೂನಿನ ಬಲದಿಂದಲೂ ಸ್ವೀಕಾರಾರ್ಹತೆ ಪಡೆದಿದ್ದು, ಅದನ್ನು ಸಾಲತೀರುವೆಯಲ್ಲಿ ಕಡ್ಡಾಯವಾಗಿ ಸ್ವೀಕರಿಸಲೇಬೇಕಂಬ ನಿಯಮವಿದೆ. ಆದರೂ ಉದ್ದರಿ ಹಣದಲ್ಲಿ ಒಂದು ಅನುಕೂಲವುಂಟು. ಒಬ್ಬ ವ್ಯಕ್ತಿಯ ಬಳಿ ಇರುವ ಕಾಗದ ಹಣ ನಾಶವಾದರೆ ಅಷ್ಟು ಹಣ ಹೋದಂತೆಯೇ ಸರಿ. ಆದರೆ ಚೆಕ್ಕು ಕೇವಲ ಹಣ ಪಡೆಯುವ ಹಕ್ಕು ಪತ್ರವಾದ್ದರಿಂದ ಇಲ್ಲಿ ಆ ಭಯವಿಲ್ಲ. ನೀಡಿಕೆ ನಿಯಂತ್ರಣ: ಆರಂಭದಲ್ಲಿ ಅನೇಕ ವಾಣಿಜ್ಯ ಬ್ಯಾಂಕುಗಳು ನೋಟು ನೀಡಿಕೆಯ ಕಾರ್ಯದಲ್ಲಿ ನಿರತವಾಗಿದ್ದುವಾದರೂ ಕ್ರಮೇಣ ಇದು ಸರ್ಕಾರದ ಪರಮಾವಧಿಕಾರವಾಗಿ ಪರಿಣಮಿಸಿರುವುದನ್ನು ಪಾಶ್ಚಾತ್ಯರಾಷ್ಟ್ರಗಳ ಇತಿಹಾಸದಲ್ಲಿ ಕಾಣಬಹುದು. ಸರ್ಕಾರ ನೇರವಾಗಿ ನೋಟು ನೀಡಿಕೆಯ ಕಾರ್ಯದಲ್ಲಿ ನಿರತವಾಗದೆ ಇದನ್ನು ಕೇಂದ್ರೀಯ ಬ್ಯಾಂಕಿಗೆ ವಹಿಸಿಕೊಟ್ಟಿರುತ್ತದೆ. ಈ ಪ್ರವೃತ್ತಿಗೆ ಕಾರಣಗಳು ಮುಖ್ಯವಾಗಿ ಎರಡು : 1 ಸರ್ಕಾರ ತನಗೆ ಅವಶ್ಯವಾದಾಗಲೆಲ್ಲ ನೋಟುಗಳನ್ನು ಸೃಷ್ಟಿಸಿ ಖರ್ಚಿಗೆ ಉಪಯೋಗಿಸಿಕೊಳ್ಳಲು ದುಷ್ಪ್ರೇರಣೆಯಾಗಬಹುದೆಂಬ ಭಯ. 2. ಹಣದ ಸರಬರಾಯಿ ವಾಣಿಜ್ಯ ವಹಿವಾಟುಗಳ ಅವಶ್ಯಕತೆಗೆ ಅನುಗುಣವಾಗಿ ಬದಲಾವಣೆ ಹೊಂದಬೇಕು. ಅರ್ಥವ್ಯವಸ್ಥೆಯ ಹಣದ ಅವಶ್ಯಕತೆಗಳನ್ನೂ ಅದರ ನಾಡಿಯ ಮಿಡಿತವನ್ನು ಸರ್ಕಾರಕ್ಕಿಂತ ಬ್ಯಾಂಕು ಚೆನ್ನಾಗಿ ಅರಿತಿರುತ್ತಿರುತ್ತದೆ ಎಂಬ ನಂಬಿಕೆಯುಂಟು. ಆದರೆ ನೋಟು ನೀಡಿಕೆಯ ಅಧಿಕಾರವನ್ನು ಅನೇಕ ವಾಣಿಜ್ಯ ಬ್ಯಾಂಕುಗಳಿಗೆ ಹಂಚಿಕೊಡುವ ಬದಲು ರಾಷ್ಟ್ರದ ಪರಮೋಚ್ಚದ ಹಣ ಪ್ರಾಧಿಕಾರಿಯಾದ ಕೇಂದ್ರೀಯ ಬ್ಯಾಂಕಿಗೆ ಅದನ್ನು ವಹಿಸಿಕೊಡುವುದು ಅತ್ಯಂತ ಉಚಿತ. ಇದರಿಂದ ಹಣ ಚಲಾವಣೆಯಲ್ಲಿ ಏಕರೂಪತೆ ಸಾಧ್ಯವಾಗುತ್ತದೆ. ಈ ಕಾರಣಗಳಿಂದಾಗಿ ಸಾಮಾನ್ಯವಾಗಿ ನೋಟು ನೀಡಿಕೆಯ ಏಕಸ್ವಾಮ್ಯವನ್ನು ಕೇಂದ್ರೀಯ ಬ್ಯಾಂಕು ಪಡೆದಿರುತ್ತದೆ. ಅದು ಈ ಕಾರ್ಯ ನಿರ್ವಹಣೆಯಲ್ಲಿ ಮುಖ್ಯವಾಗಿ ಅನುಸರಿಸಬೇಕಾದ ನಿಯಮಗಳು ಎರಡು : ಪುಟಿತತೆ ಮತ್ತು ಭದ್ರತೆ. ಯಾವುದೇ ನೋಟು ಪದ್ಧತಿ ವಾಣಿಜ್ಯ ವಹಿವಾಟುಗಳು ಏರಿಳಿತಗಳಿಗೆ ತಕ್ಕಂತೆ ಸ್ವಯಂಚಲಿಯಾಗಿ ಹಿಗ್ಗುವ ಕುಗ್ಗುವ ಅನುಕೂಲ ಪಡೆದಿರಬೇಕೆಂಬುದು ಒಂದನೆಯ ನಿಯಮ. ಹೊರಡಿಸಲಾದ ನೋಟುಗಳಿಗೆ ಬೆಂಗಾವಲಾಗಿ ಆಸ್ತಿಗಳನ್ನಿಡಬೇಕೆಂಬುದು ಎರಡನೆಯದು. ಇದುವರೆಗೆ ನಾನಾ ದೇಶಗಳಲ್ಲಿ ಅನುಸರಿಸಿಕೊಂಡು ಬಂದಿರುವ ಕೆಲವು ನೋಟು ನೀಡಿಕೆ ಪದ್ಧತಿಗಳ ಪರಿಚಯವನ್ನು ಮುಂದೆ ಕೊಡಲಾಗಿದೆ. ಇಂಗ್ಲೆಂಡಿನಲ್ಲಿ ಸ್ಥಿರ ವಿಶ್ವಾಸಾಶ್ರಿತ ನೋಟು ನೀಡಿಕೆ ಪದ್ದತಿ ಜಾರಿಗೆ ಬಂದದ್ದು 19ನೆಯ ಶತಮಾನದ ಮಧ್ಯಾಭಾಗದಲ್ಲಿ. ಈ ಪದ್ಧತಿಯ ಪ್ರಕಾರ ಇಂಗ್ಲೆಂಡಿನ ಕೇಂದ್ರೀಯ ಬ್ಯಾಂಕಾದ ಬ್ಯಾಂಕ್ ಆಫ್ ಇಂಗ್ಲೆಂಡ್ ಒಂದು ನಿಗದಿಯಾದ ಮಿತಿಯವರೆಗೆ ಅಮೂಲ್ಯ ಲೋಹದ ಬೆಂಗಾವಲಿಲ್ಲದೆಯೇ ನೋಟುಗಳನ್ನು ನೀಡಬಹುದೆಂದೂ ಈ ನೋಟುಗಳಿಗೆ ಸರ್ಕಾರಿ ಪ್ರತಿಭೂತಿಗಳನ್ನು (ಸೆಕ್ಯೂರಿಟೀಸ್) ಬೆಂಗಾವಲಾಗಿಟ್ಟುಕೊಂಡರೆ ಸಾಕೆಂದೂ ರೂಢಿಯಾಗಿ ಬಂತು. ನೋಟು ನೀಡಿಕೆಯ ಈ ಮಿತಿಯನ್ನು ವಿಶ್ವಾಸಾಶ್ರಿತ ಮಿತಿ (ಫೆಡ್ಯೂಚಿಯರಿ ಲಿಮಿಟ್) ಎಂದು ಕರೆಯಲಾಯಿತು. ಈ ಮಿತಿಗೆ ಮೀರಿ ಹೊರಡಿಸಲಾದ ಪ್ರತಿಯೊಂದು ನೋಟಿಗೂ ಅದರ ಮೌಲ್ಯಕ್ಕನುಗುಣವಾದ ಅಮೂಲ್ಯ ಲೋಹವನ್ನು ಮೀಸಲಾಗಿಡಬೇಕೆಂದಾಯಿತು. ಇದು ನೋಟುಗಳ ಅತಿಪ್ರಸರಣಕ್ಕೆ ಪ್ರತಿಬಂಧಕವಾಗಿ ಪರಿಣಮಿಸುತ್ತದೆ. ನೋಟು ಪದ್ದತಿಗೆ ಇದರಿಂದ ಒಂದು ಸುಭದ್ರ ಆಧಾರ ಸಿಕ್ಕಿದಂತಾಯಿತು.ಆದರೆ ಅವಶ್ಯವಿದ್ದಾಗ ಹಣ ವಿಸ್ತರಣೆಗೆ ಅವಕಾಶ ನೀಡುವಂತಿರಲಿಲ್ಲವಾದ ಕಾರಣ ಈ ಪದ್ದತಿಯಲ್ಲಿ ಪುಟಿತ ಗುಣವಿಲ್ಲವೆಂಬ ಟೀಕೆಗೆ ಇದು ಗುರಿಯಾಯಿತು. ನೋಟು ನೀಡಿಕೆಗೆ ಪುಟಿತತೆ ದೊರಕಿಸಿಕೊಡುವ ದೃಷ್ಟಿಯಿಂದ ಇಂಗ್ಲೆಂಡಿನ ಸರ್ಕಾರ ಆಗಿಂದಾಗ್ಗೆ ವಿಶ್ವಾಸಾಶ್ರಿತ ಮಿತಿಯನ್ನು ಏರಿಸುತ್ತ ಬಂದಿದೆ. ಜಪಾನ್ ಮತ್ತು ನಾರ್ವೆಗಳು ಈ ಪದ್ದತಿಯನ್ನು ಅನುಸರಿಸುತ್ತಿರುವ ಇತರ ದೇಶಗಳು. ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿರುವುದು ಅನುಪಾತಿ ಸಂಚಿತ ಪದ್ದತಿ (ಪ್ರಫೋರ್ಷನಲ್ ರಿಸರ್ವ್ ಸಿಸ್ಟಂ). ಈ ಪದ್ದತಿಯಲ್ಲಿ ರಕ್ಷೆಯಾಗಿಡುವ ಲೋಹದ ಮೀಸಲು, ಚಲಾವಣೆಗೆ ಬಿಟ್ಟಿರುವ ನೋಟುಗಳ ಮೌಲ್ಯದ ಯಾವುದೋ ಒಂದು ಪ್ರಮಾಣದಷ್ಟಿರಬೇಕು. ಉಳಿದುದಕ್ಕೆ ಸರ್ಕಾರಿ ಪ್ರತಿಭೂತಿಗಳು ಹಿನ್ನೆಲೆಯಾಗಿದ್ದರೆ ಸಾಕು ಎಂಬ ನಿಯಮವುಂಟು. ಉದಾಹರಣೆಗೆ,1956ರ ವರೆಗೆ ಭಾರತದಲ್ಲಿ ಜಾರಿಯಲ್ಲಿದ್ದ ಈ ಪದ್ದತಿಯ ಪ್ರಕಾರ ನೀಡಿಕೆಯಾದ ನೋಟುಗಳಿಗೆ