ಪುಟ:Mysore-University-Encyclopaedia-Vol-4-Part-2.pdf/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವೇರಿನದಿ

ಹರಿಯುವ ಈ ಕವಲು ಪೋರ್ಟೊನೋವೋ ಬಳಿ ಕಡಲು ಸೇರುತ್ತದೆ. ಕಾವೇರಿಯ ಎರಡು ಶಾಖೆಗಳು ಸಮುದ್ರದಲ್ಲಿ ಸಂಗಮವಾಗುವ ಮುನ್ನ ಹಲವಾರು ಕಾವಲುಗಳಾಗಿ ಒಡೆದು ನೀರಾವರಿಯ ಬಲೆಯನ್ನೇ ಹೆಣೆದಿವೆ. ಇದರ ನೀರಿನ ಬಹುಭಾಗವನ್ನು ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಬೇರಾವ ನದಿಯನ್ನು. ಇಷ್ಟೊಂದು ಸಮರ್ಪಕವಾಗಿ ನೀರಾವರಿಗೆ ಉಪಯೋಗಿಸಿಕೊಂಡಿಲ್ಲವೆಂದು ಹೇಳಲಾಗಿದೆ.

ಕೊಡಗಿನ ಪ್ರದೇಶದಲ್ಲಿ ಸಣ್ಣ ತೊರೆಯಾಗಿ ಉಗಮಹೊಂದಿ, ತಾರುಣ್ಯದ ಆರಂಭದಿಂದಲೇ ಸುತ್ತಣ ಸೀಮೆಯ ಸಂಪತ್ತಿಗೆ ಕಾರಣವಾಗಿ ಶಿವನಸಮುದ್ರದಲ್ಲಿ ಪರಿಧಿಯನ್ನು ಲಂಘಿಸುವಾಗ ವಿದ್ಯುತ್ತನ್ನು ಚಿಮ್ಮಿಸಿ ತಮಿಳುನಾಡಿನಲ್ಲಿ ತುಂಬು ಚೆಲುವು ತಳೆದು ಸಮುದ್ರವನ್ನು ಸಂಗಮಿಸಿದ ಕಾವೇರಿಯ ಉಪಯುಕ್ತತೆಯಿಂದಾಗಿ ಅದನ್ನು ಜನರು ಪವಿತ್ರನದಿಯೆಂದಿ ಪೂಜಿಸುತ್ತಾರೆ.

ಪುರಾಣಗಳಲ್ಲಿ: ಕಾವೇರಿ ನದಿಯ ಉಗಮದ ಕತೆ ಅಗ್ನಿಪುರಾಣದಲ್ಲಿ ಬಂದಿದೆ. ಪೂರ್ವಕಾಲದಲ್ಲಿ ಕವೇರನೆಂಬ ಒಬ್ಬ ರಾಜ ಇದ್ದ. ಆತ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನಾಚರಿಸಿದ. ಬ್ರಹ್ಮ ಅವನಿಗೆ ಪ್ರತ್ಯಕ್ಷನಾಗಿ, ಅವನಿಗೆ ಮೋಕ್ಷವುಂಟಾಗಬೇಕಾದರೆ ಇನ್ನು ಸ್ವಲ್ಪ ಕಾಲ ಕಾಯಬೇಕೆಂದು ಅಷ್ಟರ ವರೆಗೆ ಆತ ಬ್ರಹ್ಮನ ಮಗಳಾದ ವಿಷ್ಣುಮಾಯೆಯನ್ನು ತನ್ನ ಮಗಳಾಗಿಟ್ಟುಕೊಂಡು ಸಲಹಬೇಕೆಂದು ಹೇಳಿದ. ಬ್ರಹ್ಮನ ಇಚ್ಛೆಯಂತೆ ಕವೇರ ರಾಜ ವಿಷ್ಣುಮಾಯೆಯನ್ನು ತನ್ನ್ ಅರಮನೆಯಲ್ಲಿ ಸಾಕಿದ. ವಿಷ್ಣುವಿನ ಅಂಶದವಳಾದ ವಿಷ್ಣುಮಾಯೆ ಬೆಳೆದು ದೊಡ್ಡವಳಾದನೇಲೆ ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋದಳು. ಆಗ ಕವೇರ ರಾಜನಿಗೆ ಮೋಕ್ಷ ಲಭ್ಯವಾಯಿತು. ವಿಷ್ಣುಮಾಯೆ ತಪಸ್ಸಿಗೆ ವಿಷ್ಣು ಸಂಪ್ರೀತನಾಗಿ ಅವಳಿಗೆ ಪ್ರತ್ಯಕ್ಷನಾದ. ಅವಳಿಂದ ಜನಕ್ಕೆ ಉಪಯೋಗವಾಗಬೇಕೆಂಬ ಉದ್ದೇಶದಿಂದ ಅವಳು ಎರಡು ರೂಪಗಳನ್ನು ತಳೆಯುವಂತೆ ಒಂದು ರೂಪದಲ್ಲಿ ಅವಳು ಸಹ್ಯ ಪರ್ವತದಲ್ಲಿ ನದಿಯಾಗಿ ಹುಟ್ಟಿ ಹರಿಯುವಂತೆ ಮತ್ತು ಇನೊಂದು ರೂಪದಲ್ಲಿ ಲೋಪಾಮುದ್ರೆಯೆಂಬ ಹೆಸರು ತಳೆದು ಅಗಸ್ತ್ಯ ಋಷಿಯ ಪತ್ನಿಯಾಗುವಂತೆ ವಿಷ್ಣು ಅವಳಿಗೆ ವರ ನೀಡಿದ. ವಿಷ್ಣುಮಾಯೆಗೆ ವಿಷ್ಣು ವರ ನೀಡಿದ ಸಮಯದಲ್ಲಿ ಅಗಸ್ತ್ಯ ಋಷಿ ಬ್ರಹ್ಮಾನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಬ್ರಹ್ಮ ಅಗಸ್ತ್ಯನಿಗೆ ಪ್ರತ್ಯಕ್ಷನಾಗಿ, ಲೋಕಮುದ್ರೆಯನ್ನು ವಿವಾಹವಾಗುವಂತೆ ಅವನಿಗೆ ಹೇಳಿದ. ಬ್ರಹ್ಮನ ಅಣತಿಯಂತೆ ಅಗಸ್ತ್ಯ ಲೋಪಮುದ್ರೆಯ ರೂಪ ತಳೆದಿದ್ದ. ವಿಷ್ಣುಮಾಯೆಯಿದ್ದಲ್ಲಿಗೆ ಬಂದು ಆಕೆಯನ್ನು ವಿವಾಹವಾದ.

ಅಗಸ್ತ್ಯ ಲೋಪಮುದ್ರೆಯನ್ನು ವಿವಾಹವಾದ ಸ್ವಲ್ಪ ಸಮಯದ ಅನಂತರ ಅವನಿಗೆ ದಕ್ಷಿಣಾ ಭಾರತದಲ್ಲಿ ನೀರಿನಿ ಕೊರತೆಯಿದೆಯೆಂದು ತಿಳಿಯಿತು. ಲೋಪಮುದ್ರೆ ನೀರಿನ ರೂಪ ತಾಳಿ ತನ್ನ ಕಮಂಡಲದಲ್ಲಿರುಂತೆ ಅಗಸ್ತ್ಯ ಕೇಳಿಕೊಂಡ. ಲೋಪಾಮುದ್ರೆ ಹಾಗೆಯೇ ಮಾಡಿದಳು.ಅಗಸ್ತ್ಯ ಕಮಾಂಡಲವನ್ನು ಹಿಡಿದುಕೊಂಡು ಸಹ್ಯಪರ್ವತಶ್ರೇಣಿಯ ಬ್ರಹ್ಮಗಿರಿಗೆ ಬಂದ. ಬ್ರಹ್ಮ ಆ ಗಿರಿಯಲ್ಲಿ ವಿಷ್ಣುವನ್ನು ಕುರಿತು ತಪಸ್ಸು ಮಾಡುತ್ತಿದ್ದರಿಂದ ಅದಕ್ಕೆ ಬ್ರಹ್ಮಗಿರಿಯೆಂದು ಹೆಸರು ಬಂದಿದೆ. ಈ ಸ್ಥಳದಲ್ಲಿ ವಿಷ್ಣು ಆಮಲಕ ಅಥವಾ ನೆಲ್ಲಿ ಮರದ ರೂಪ ತಳೆದಿದ್ದ. ಆಮಲಕ ಮರದ ರೂಪದಲ್ಲಿದ್ದ ವಿಷ್ಣುವನ್ನು ಪೂಜಿಸಲು ಕೈಲಾಸದಲ್ಲಿ ಹರಿಯುತ್ತಿದ್ದ ವಿರಾಜಾನದಿಯ ನೀರನ್ನು ಬ್ರಹ್ಮ ತನ್ನ ಶಂಖದಲ್ಲಿ ತಂದು ಅದನ್ನು ಆ ಮರಕ್ಕೆ ಎರೆಯುತ್ತಿದ್ದಾಗ ಅಗಸ್ತ್ಯ ಋಷಿ ಅಲ್ಲಿಗೆ ಬಂದು ತನ್ನ ಕಮಂಡಲವನ್ನು ಒಂದು ದೊಡ್ಡ ಚಪ್ಪಟೆ ಕಲ್ಲಿನ ಮೇಲಿಟ್ಟು ಸ್ನಾನಕ್ಕಾಗಿ ಸ್ವಲ್ಪ ದೂರ ಹೋದ. ಅದೇ ಸಮಯದಲ್ಲಿ ಬಿರುಗಾಳಿ ಬೀಸಿತು. ಕಲ್ಲಿನ ಮೇಲೆ ಇಟ್ಟಿದ್ದ ಕಂಮಡಲ ಮಗುಚಿಕೊಂಡಿತ್ತು. ಅದರಲ್ಲಿದ್ದ ನೀರು ಹರಿದು ವಿರಜಾ ನದಿಯ ನೀರನ್ನು ಸೇರಿಕೊಂಡು ಕಾವೇರಿ ತೀರ್ಥಕುಂಡಿಗೆಯಿಂದ ನದಿಯಾಗಿ ಹರಿಯಿತು. ನದಿಯಾಗಿ ಹರಿದ ಲೋಪಾಮುದ್ರೆ ವಿಷ್ಣುಮಾಯೆಯಾಗಿದ್ದಗ ಕವೇರ ಅವಳನ್ನು ಸಾಕಿದ್ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂತು.