ಪುಟ:Mysore-University-Encyclopaedia-Vol-4-Part-2.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವೇರಿನದಿ

ಸ್ಕಾಂದಪುರಾಣದಲ್ಲಿ ಕಾವೇರಿ ನದಿಯ ಹುಟ್ಟಿನ ಬಗ್ಗೆ ಎರಡು ಕಥೆಗಳುಂಟು. ಮೊದಲನೆಯ ಕಥೆ ಹೀಗಿದೆ: ಭಾತತದ ಮಧ್ಯದಲ್ಲಿರುವ ವಿಂಧ್ಯಪರ್ವತ ಒಮ್ಮೆ ಸೂರ್ಯನ ಎತ್ತರಕ್ಕೇರಬೇಕೆಂದು ಬಯಸಿ ಬೆಳೆಯುತ್ತ ಸಾಗಿತು; ಸೂರ್ಯನ ಮತ್ತು ನಕ್ಷತ್ರಗಳ ದಾರಿಗೆ ಅಡ್ಡ ಬಂದ. ಅವುಗಳಿಂದ ಬರುವ ಬೆಳಕಿಗೂ ಅಡಚಣೆಯುಂಟಾಯಿತು.ಈ ಬೆಳವಣಿಗೆಯನ್ನು ತಡೆಹಿಡಿದು ಅವನನ್ನು ತಗ್ಗಿಸಲು ದೇವತೆಗಳು ಅಗಸ್ತ್ಯನ ಸಹಾಯವನ್ನು ಕೋರಿದರು. ಅಗಸ್ತ್ಯ ಒಪ್ಪಿ ಅದಕ್ಕೆ ಅವಷ್ಯವಿದ್ದ ಆಧ್ಯಾತ್ಮಿಕ ಶಕ್ತಿಯನ್ನು ತನಗೆ ಕೊಡುವಂತೆ ಈಶ್ವರನನ್ನು ಕುರಿತು ತಪಸ್ಸು ಮಾಡಿದ. ಈಶ್ವರನು ಅನುಗ್ರಹ ಲಭ್ಯವಾಯಿತು. ಇಷ್ಟ ಬಂದಲ್ಲಿ ದೇವತಾರ್ಚನೆ ಮಾಡಲು ಅವನೊಡನೆ ನೀರು ಯಾವಾಗಲು ಇರುವಂತೆ ವರ ನೀಡಿ, ಅವನ ಕಮಂಡಲದಲ್ಲಿರುವಂತೆ ಕೈಲಾಸಪರ್ವತದಲ್ಲಿ ಹರಿಯುತಿದ್ದ ಕಾವೇರಿಗೆ ಅಜ್ಞಾಪಿಸಿದ. ಆಗ ಕಾವೇರಿ ನದಿ ಅಗಸ್ತ್ಯನ ಕಮಂಡಲವನ್ನು ಸೇರಿದಳು. ಅಗಸ್ತ್ಯ ಅದನ್ನು ಹಿಡಿದುಕೊಂಡು ಹಿಮಾಲಯ ಪ್ರದೇಶದಿಂದ ಭಾರತಕ್ಕೆ ಹೊರಟು ವಿಂಧ್ಯದ ಹತ್ತಿರ ಬಂದಾಗ ಆ ಪರ್ವತ ಅಗಸ್ತ್ಯನಿಗೆ ಭಕ್ತಿಯಿಂದ ಪೊಡಮುಟ್ಟಿತು. ತಾನು ದಕ್ಷಿಣ ಭಾರತಕ್ಕೆ ಶಾಂತ ಮನಸ್ಸಿನಿಂದ ಹೋಗಾಬೇಕಾಗಿರುವುದರಿಂದ ತಾನು ಹಿಂದಕ್ಕೆ ಬರುವವರೆಗೆ ವಿಂಧ್ಯ ಮೇಲಕ್ಕೇಳದ ನಮಸ್ಕಾರದ ಭಂಗಿಯಲ್ಲೇ ಇರಬೇಕೆಂದು ಅಗಸ್ತ್ಯ ಹೇಳಿ ದಕ್ಷಿಣ ಭಾರತಕ್ಕೆ ಹೋದ. ಅನಂತರ ಆತ ಉತ್ತರಭಾರತಕ್ಕೆ ಹಿಂದಿರುಗಲೇ ಇಲ್ಲ. ಈ ಕಾರಣದಿಂದ ವಿಂಧ್ಯಾ ಪರ್ವತ ಮಲಗಿದ್ದ ಸ್ಥಿತಿಯಲ್ಲೇ ಇದೆಯೆಂದು ಪುರಾಣದಲ್ಲಿ ಹೇಳಿದೆ. ಅಗಸ್ತ್ಯ ದಕ್ಷಿಣ ಭಾರತದಲ್ಲಿ ಸಹ್ಯ ಪರ್ವತದ ಬ್ರಹ್ಮಗಿರಿಗೆ ಬಂದು ಅಲ್ಲಿ ತಪಸ್ಸು ಮಾಡುತ್ತಿದ್ದ. ಆ ಸಮಯದಲ್ಲಿ ಸೂರಪದ್ಮನೆಂಬ ಒಬ್ಬ ಅಸುರ ತನ್ನ ತಪಶ್ಶಕ್ತಿಯಿಂದ ಅಲ್ಲಿ ಮಳೆ ಬೀಳಿವುದನ್ನು ತಡೆ ಹಿಡಿದಿದ್ದ. ಇದರಂದ ಇಂದ್ರನಿಗೆ ಸಂಕಟವಾಯಿತು. ದಕ್ಷಿಣ ದೇಶದಲ್ಲಿ ಯಥೇಚ್ಛವಾಗಿ ನೀರಿರುವಂತೆ ಮಾಡಬೇಕೆಂದು ಮಾಡಬೇಕೆಂದು ಗಣಪತಿಯನ್ನು ಪ್ರಾರ್ಥಿಸಿಕೊಂಡ. ಗಣಪತಿ ಕಾಗೆಯ ರೂಪವನ್ನು ತಾಳಿ ಬಂದು ಅಗಸ್ತ್ಯ ತನ್ನ ಪಕ್ಕದಲ್ಲಿ ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲವನ್ನು ಮಗುಚಿಹಾಕಿದ. ಅದರಲ್ಲಿದ್ದ ಕಾವೇರಿ ನದಿ ಕೂಡಲೇ ಅಲ್ಲಿಂದ ಹರಿಯತೊಡಗಿತು.

ಸ್ಕಾಂದಪುರಾಣದಲ್ಲಿರುವ ಎರಡನೆಯ ಕಥೆ ಹೀಗಿದೆ: ಮಕ್ಕಳಿಲ್ಲದ ತನಗೆ ಮಕ್ಕಳಾಗಏಕೆಂದು ಕಾವೇರ ಮುನಿ ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಆಗ ಬ್ರಹ್ಮ ಅವನ ತಪಸ್ಸಿಗೆ ಮೆಚ್ಚಿ ಅವನಿಗೆ ಪ್ರತ್ಯಕ್ಷನಾಗಿ ತನ್ನ ಸಾಕುಮಗಳಾದ ಲೋಪಾಮುದ್ರೆಯನ್ನು ಅವನಿಗೆ ಕೊಟ್ಟ. ಅಂದಿನಿಂದ ಲೋಪಾಮುದ್ರೆ ಕವೇರನ ಮಗಳಾಗಿ ಕಾವೇರಿಯೆಂಬ ಹೆಸರು ಪಡೆದಳು. ಕಾವೇರಿ ತನ್ನ ಸಾಕು ತಂದೆಗೆ ಮೋಕ್ಷವುಂಟಾಗಬೇಕೆಂದು ಇಚ್ಛಿಸಿ ತಾನು ನದಿಯಾಗಿ ಹರಿಯುವಂತೆ ಮತ್ತು ಆಗ ತನ್ನಲ್ಲಿ ಸ್ನಾನ ಮಾಡಿದವರು ತಮ್ಮ ಎಲಾ ಪಾಪಗಳಿಂದ ಮುಕ್ತರಾಗುಂತೆ ವರವನ್ನು ಕೊಡಬೇಕೆಂದು ಬ್ರಹ್ಮಗಿರಿಯಲ್ಲಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದಳು. ಬ್ರಹ್ಮ ಅವಳ ತಪಸ್ಸಿಗೆ ಮೆಚ್ಚಿ ಅವಳು ಕೇಳಿದ ವರವನ್ನು ನೀಡಿದ.

ಅವಳ ಬ್ರಹ್ಮಗಿರಿಯಲ್ಲಿ ತಪಸ್ಸು ಮಾಡಿತ್ತಿದ್ದಾಗ ಅಲ್ಲಿಗೆ ಅಗಸ್ತ್ಯ ಋಷಿ ಬಂದ. ಕಾವೇರಿಯ ತಪಸ್ಸು ಮುಗಿದ ಮೇಲೆ ಅವಳನ್ನು ಕಂಡು ಅವಳು ತನ್ನ ಪತ್ನಿಯಾಗಬೇಕೆಂದು ಕೇಳಿಕೊಂಡ ಅವಳಿಗೆ ತಾನು ನದಿಯಾಗಿ ಹರಿದು ಜನರ ಪಾಪಗಳನ್ನು ಪರಿಹರಿಸಬೇಕೆಂಬ ಇಚ್ಛೆ ಪ್ರಬಲವಾಗಿದ್ದರೂ ಅಗಸ್ತ್ಯನ ಕೋರಿಕೆಯನ್ನು ನಿರಾಕರಿಸಲಾರದೆ ಒಂದು ಷರತ್ತಿನಿಂದ ಅವನನ್ನು ವಿವಾಹವಾಗಲು ಒಪ್ಪಿದಳು. ಮದುವೆಯಾದ ಮೇಲೆ ಎಂದೂ ಅವಳನ್ನು ಅಗಸ್ತ್ಯ ಒಂಟಿಯಾಗಿ ಬಿಟ್ಟಿರಕೂಡದೆಂದು ತಪ್ಪಿದ್ದಲ್ಲಿ ನದಿಯಾಗಿ ಹರಿದು ಹೋಗಲು