ಪುಟ:Mysore-University-Encyclopaedia-Vol-4-Part-2.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗರೂ ಹೆಗ್ಗಣ-ಕಾಂಗೋ ಗಣರಾಜ್ಯ

  ಸುಮ್ಮರು ೬-೭ ದೂರ ಕ್ರಮಿಸಬಲ್ಲುದು.ಹೀಗೆ ಹಾರುವಾಗ ಸಮತೋಲನವನ್ನು ಕಾಯ್ದಕೊಳ್ಳಲೂ ದಿಕ್ಕನ್ನು ಬದಲಾಯಿಸಲೂ ಚುಕ್ಕಾಣಿಯಂತೆ ತನ್ನ ಬಾಲವನ್ನು ಉಪಯೋಗಿಸುತ್ತದೆ.
 ಕಾಂಗರೂ ಇಲಿ ವರ್ಷಕ್ಕೆ ಎರಡು ಮೂರು ಸಲ ಮರಿ ಹಾಕುತ್ತದೆ.ಒಂದು ಸೂಲಿಗೆ ೩-೫ ಮರಿಗಳನ್ನು ಹೆರುವುದು ವಾಡಿಕೆ.ಹುಟ್ಟಿದಾಗಿನಿಂದ ಸುಮಾರು ೧೫ ದಿವಸಗಳವರೆಗೂ ಮರಿಗಳ ಕಣ್ಣುಗಳು ಮುಚ್ಚಿಕೊಂಡೇ ಇರುತ್ತವೆ.
 ಕಾಂಗರೂ ಹೆಗ್ಗಣ:ದಕ್ಷಿಣ ಆಸ್ಟ್ರೇಲಿಯದ ನಿವಾಸಿಯಾದ ಒಂದು ಪುಟ್ಟದಾದ ಬಿಲವಾಸಿ ಸ್ತನಿ(ಮಾರ್ಸ್ಯೂಪಿಯಲ್ ಮೋಲ್).ಕಾಂಗರೂ ಮುಂತದವುಗಳಲ್ಲಿರುವಂತೆ ಅಪ್ರಬುದ್ದಾವಸ್ಥೆಯಲ್ಲಿ ಹುಟ್ಟುವ ಮರಿಗಳನ್ನು ಸಾಕಲು ಸಹಕಾರಿಯಾದ ಹೊಟ್ಟೆಚೀಲವಿರುವುದರಿಂದಲೂ ನೋಡಲು ಇದು ಮುಖಮಲ್ ಹೆಗ್ಗಣ ಅಥವಾ ನೆಲಗುಮ್ಮದ(ಮೋಲ್) ಹಾಗೆ ಇರುವುದರಿಂದಲೂ ಇದಕ್ಕೆ ಕಾಂಗರೂ ಹೆಗ್ಗಣ ಎಂದು ಹೆಸರು.ಕಾಂಗರೂ,ವಾಲಬೀ ಮುಂತಾದ ಪ್ರಾಣಿಗಳನೊಳಗೊಂಡ ಮಾರ್ಸ್ಯೂಪಿಯೇಲಿಯ ಗಣಕ್ಕೂ ನೋಟೊರಿಕ್ಟಿಡೀ ಕುಟುಂಬಕ್ಕೂ ಸೇರಿದೆ.ಇದರ ಶಾಸ್ತ್ರೀಯನಾಮ ನೋಟೊರಿಕ್ಟೀಸ್ ಟಿಫ್ಲಾಪ್ಸ್.
 ಸುಮಾರು ೯೦-೧೮೦ ಮಿಮೀ ಉದ್ದಕ್ಕೆ ಬೆಳೆಯುವ ಸಣ್ಣಗಾತ್ರದ ಪ್ರಾಣಿಯಿದು.ದೇಹದ ಮೆಲಲ್ಲ ಬಿಳಿಯ ಅಥವಾ ಹೊಂಬಣ್ಣದ ನಿಡಿದಾದ ರೇಷ್ಮೆಯಂಥ ಕೂದಲಿನ ಹೊದಿಕೆಯುಂಟು.ಬಾಲ ತುಂಬ ಚಿಕ್ಕದು;ಕೊಳವೆಯಂತಿದೆ;ಬಲು ಗಟ್ಟಿಯಾದುದೂ ಚರ್ಮಿಲವೂ ಆಗಿದೆ.ಅದರ ತುದಿಯಲ್ಲಿ ಕೊಂಬಿನಂತ ಬುಗುಟಿದೆ.ಮೂಗಿನ ಮೇಲೂ ಕೊಂಬಿನಂಥ ಫಲಕವೊಂದಿದೆ.ಕಾಂಗರೂ ಹೆಗ್ಗಣ್ಣಕ್ಕೆ ಹೊರ ಕಿವಿಗಳೇ ಇಲ್ಲ.ಇದರ ಬದಲು ತಲೆಯ ಮೇಲ್ಭಾಗದ ಎರಡೂ ಪಕ್ಕಗಳಲ್ಲಿ ಬರಿಯ ಎರಡೂ ತೂತುಗಳಿವೆ.ಅಲದೆ ಈ ಪ್ರಾಣಿಗೆ ಬೇರೆ ಸಸ್ತನಿಗಳಲ್ಲಿರುವಂಥ ಕಣ್ಣುಗಳೂ ಇಲ್ಲ, ಹಿಂದೆ ಇದ್ದಿರಬಹುದಾದಂಥ ಕಣ್ಣುಗಳ ಅವಶೇಷವಾಗಿ ಎರಡು ಗುಳಿಗಳು ಮಾತ್ರ ಇದೆ.ಇವಕ್ಕೆ ಕನೀನಿಕೆಗಳು(ಪ್ಯೂಪಿಲ್ಸ್)ಇಲ್ಲ,ಮುಂಗಾಲಿನ ಪಾದಗಳಲ್ಲಿ ಎರಡೆರೆಡು ದೊಡ್ಡ ಪಂಜಗಳಿವೆ.ಇವು ಬಿಲ ತೋಡಲು ಅನುಕೂಲವಾಗಿವೆ.ಹಿಂಗಾಲಿನ ಪಾದಗಳಲ್ಲೂ ಮೂರು ಮೂರು ಪಂಜಗಳಿವೆ.ಕಾಂಗರೂ ಹೆಗ್ಗಣಗಳು ನೆಲದಲ್ಲಿ ಬಿಲ ತೋಡಿ ಅವುಗಳಲ್ಲಿ ವಾಸಿಸುತ್ತವೆ.ಇವುಗಳ ಆಹಾರ ಮುಖ್ಯವಾಗಿ ಎರೆಹುಳುಗಳು,ಕೀಟಗಳು ಇತ್ಯಾದಿ.ಆಹಾರ ತಿನ್ನುವಾಗ ಬಲು ಉದ್ರೇಕಗೊಂಡಂತೆ ಇರುತ್ತವೆ.ತಿನ್ನುತ್ತಿರುವಾಗಲೇ ಹಠಾತ್ತನೆ ನಿದ್ದೆ ಮಾಡುವುದೂ ಅಷ್ಟೇ ಚುರುಕಾಗಿ ಎಚ್ಚೆತ್ತು ಆಹಾರ ಭಕ್ಷಣೆಯನ್ನು ಮುಂದುವರೆಸುವುದೂ ಇದರ ಸೋಜಿಗಗಳು.ಇವು ಬಹಳ ವಿರಳ ಪ್ರಾಣಿಗಳಾದುದರಿಂದ ಇವುಗಳ ಸಂತನೋತ್ಪತ್ತಿಯ ಕ್ರಮದ ಬಗ್ಗೆ ಏನು ಗೊತ್ತಿಲ್ಲ.
  ಕಾಂಗೋ ಕೆಂಪು:ಬಟ್ಟೆಗಳಿಗೆ ಬಣ್ಣ ಹಾಕುವುದಕ್ಕೆ ಮತ್ತು ರಾಸಾಯನಿಕ ವಿಶ್ಳೇಷಣೆಯಲ್ಲಿ ಆಮ್ಲ-ಪ್ರತ್ಯಾಮ್ಲಸೂಚಕವಾಗಿ ಉಅಪಯೋಗಿಸುವ ಆರ್ಗೇನಿಕ್ ವಸ್ತು(ಕಾಂಗೋ ರೆಡ್).೧೮೮೪ರಲ್ಲಿ ಪಿ.ಬಟೆಂಗರ್ ಈ ವರ್ಣವಸ್ತುವನ್ನು ಕಂಡುಹಿಡಿದ.ಇದು ಆಜೋಬಣ್ಣಗಳ ಗುಂಪಿಗೆ ಸೇರಿದೆ.ಅಂದರೆ ಈ ಗುಂಪಿನ ಬಣ್ಣಗಳಲ್ಲಿ ರ್ಯಾಡಿಕಲ್ಲು ಇರುತ್ತದೆ.ಹತ್ತಿ ಬಟ್ಟೆಗಳಿಗೆ ನೇರವಾಗಿ ಈ ಬಣ್ಣಗಳನ್ನು ಲೇಪಿಸಬಹುದು.ವರ್ಣಬಂಧಕದ(ಮಾರ್ಡಂಟ್)ಸಹಾಯವಿಲ್ಲದೆ ಸುಲಭವಾಗಿ ಬಟ್ಟೆಗೆ ಈ ಬಣ್ಣ ಹಿಡಿಯುವುದರಿಂದ ಇದರ ಗುಂಪಿನ ಬಣ್ಣಗಳನ್ನು ನೇರ ಬಣ್ಣಗಳು(ಡೈರಕ್ಟ್ ಡೈಸ್)ಎಂದು ಕರೆಯುವರು.ಈ ಬಣ್ಣಗಳನ್ನೆ ಕೈಗಾರಿಕೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವರು.
   ಕಾಂಗೋ ಕೆಂಪು ಸೂಚಕವು ಆಮ್ಲದಲ್ಲಿ ನೀಲಿ ಬಣ್ಣವನ್ನೂ ಪ್ರತ್ಯಾಮ್ಲದಲ್ಲಿ ಕೆಂಪು ಬಣ್ಣವನ್ನೂ ಕೊಡುತ್ತದೆ.
   ಕಾಂಗೋ ಗಣರಾಜ್ಯ:ಆಫ್ರಿಕದ ಸಮಭಾಜಕ ಪ್ರದೇಶದ ಒಂದು ಗಣರಾಜ್ಯ.ಸ್ವತಂತ್ರವಾಗುವುದಕ್ಕೂ ಮೊದಲು ಇದು ಫ್ರೆಂಚ್ ಸಮಭಾಜಕೀಯ ಆಫ್ರಿಕದ ಮಧ್ಯ ಕಾಂಗೋ ಅಥವಾ ಮೊಯೆನ್-ಕಾಂಗೋದ ಒಂದು ರಾಜ್ಯವಾಗಿತ್ತು.ಗ್ಯಾಬನ್,ಕ್ಯಾಮರೂನ್,ಮಧ್ಯ ಆಫ್ರಿಕ ಗಣರಾಜ್ಯ,ಕಾಂಗೋ ಪ್ರಜಾಸತ್ತತ್ಮಕ ಗಣರಾಜ್ಯ,ಅಂಗೋಲ ಮತ್ತು ಅಟ್ಲಾಂಟಿಕ್ ಸಾಗರ-ಇವು ಇದರ ಮೇರೆಗಳು.ವಿಸ್ತೀರ್ಣ ೩,೪೧,೪೯೯ ಚ.ಕಿಮೀ,ಒಟ್ಟು ವಿಸ್ತೀರ್ಣ ೩,೪೨,೦೦೦ಚ್.ಕಿಮೀ ಜನಸಂಖ್ಯೆ ೩೭,೦೨,೩೧೪(೨೦೦೬ರ ಅಂದಾಜು).ರಾಜಧಾನಿ ಬ್ರ್ಯಾಜವಿಲ್.ಕಾಂಗೋ ಎಂಬ ಹೆಸರಿನ ಇನ್ನೊಂದು ಗಣರಾಜ್ಯ(ನೋಡಿ-ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)ಇರುವುದರಿಂದ ಇದನ್ನು ಬ್ರ್ಯಾಜವಿಲ್ ಕಾಂಗೋ ಎಂದು ಕರೆಯುವ ವಾಡಿಕೆಯಿದೆ.
  ಮೇಲ್ಮೈಲಕ್ಷಣ:ಕಾಂಗೋ ಗಣರಾಜ್ಯ ಕಾಂಗೋ ನದೀ ಕಣೀವೆಯ ಒಂದು ಭಾಗ.ಈ ದೇಶದ ಪೂರ್ವದ ಗಡಿರೇಖೆಯಂತೆ ಹರಿಯುವ ಯುಬಾಂಗ್ ಮತ್ತು ಕಾಂಗೋ ನದಿಗಳ ಬಲದಂಡೆಯ ಬಳಿಯ ಪ್ರದೇಶ ಒಂದು ಮೈದಾನ.ಇದು ನದೀಕಣಿವೆಯ ನಡುಭಾಗದ ಮೆಕ್ಕಲುಮಣ್ಣಿನಿಂದ ಆವೃತ.ಇದರ ಅಗಲಕ್ಕೆ ಅಲ್ಲಲ್ಲಿ ಹಲವಾರು ನದಿಗಳೂ ಹಳ್ಳಗಳೂ ಹಾದುಹೋಗುತ್ತದೆ.ಮೊಟಾಬ ಎಂಬುದು ಇಂಥ ನದಿಗಳ ಪೈಕಿ ಒಂದು.ಅದು ಡಾಂಗೌ ಬಳಿ ಯುಬಾಂಗನ್ನು ಸೇರುತ್ತದೆ.ಲಿಕೌಲ,ಸಾಂಗ ಮತ್ತು ಅಲಿಮ ಇತರ ನದಿಗಳು.ಇವೆಲ್ಲವೂ ಬಹುತೇಕ ಜಲಯಾನ ಯೋಗ್ಯ.ಕಾಂಗೋ ಯುಬಾಂಗ್ಗಳ ಮೇಲೆ ಬ್ರ್ಯಾಜವಿಲ್ನಿಂದ ೨,೪೦೦ ಕಿಮೀ ದೋರ ಯಾನ ಮಾಡಬಹುದು.ಈ ಮೈದಾನ ಪಶ್ಚಿಮದ ಕಡೆಗೆ ಕ್ರಮವಾಚಿ ಎತ್ತರವಾಗಿ ಸಾಗಿ,ಅಂತಿಮವಾಗಿ ಪ್ರಸ್ಥಭೂಮಿಯಲ್ಲಿ ಪರ್ಯವಸಾನವಾಗುತ್ತದೆ.ಇದನ್ನು ಅಲ್ಲಲ್ಲಿ ಕತ್ತರಿಸುವ ಕಣಿವೆಗಳುಂಟು.ಇದರ ಪಶ್ಚಿಮದಲ್ಲಿ ಪರ್ವತಸ್ರೇಣಿಗಳ ಶಿರಃ ಪ್ರದೇಶವಿದೆ.ದಕ್ಷೀಣದ ಕಡಲತೀರವೊಂದು ಕಿರುಮೈದಾನ.
  ವಾಯುಗುಣ,ಸಸ್ಯ:ಗರಿಷ್ಠ ಉಷ್ಣತೆಯಿರುವ ಪ್ರದೇಶದ ಪಟ್ಟಿ ಸ್ವಲ್ಪ ಉತ್ತರದ ಕಡೆಗಿದ್ದರೂ ಸಮಭಾಜಕ ಈ ರಾಜ್ಯದ ನಡುವೆಯೇ ಹಾದುಹೋಗುವುದರಿಂದ ಇಲ್ಲಿಯದು ಬಹುತೇಕ ಸಮಭಾಜಕ ಪ್ರದೇಶದ ವಾಯುಗುಣವೆಂದೇ ಹೇಳಬಹುದು.ವರ್ಷವೆಲ್ಲ ಇಲ್ಲಿ ಸರಾಸರಿ ಉಷ್ಣತೆ ೭೦ ಫ್ಯಾ-೮೦ ಫ್ಯ.(೨೧ಸೆಂ-೨೭ಸೆಂ)ನಡುವೆ ಇರುತ್ತದೆ.ವಾರ್ಷಿಕ ಮಳೆ ೪೮".ಮಳೆಗಾಡಿರುವುದು ಸಮಭಾಜಕದ ದಕ್ಷಿಣದ ಮೈದಾನದಲ್ಲಿ ಮಾತ್ರ ಮಧ್ಯ ಆಫ್ರಿಕ ಗಣರಾಜ್ಯದ ಬಳಿಯಲ್ಲಿರುವ ಪ್ರದೇಶದಲ್ಲಿ ಮಳೆ ಕಡಿಮೆಯಾದ್ದರಿಂದ ಅದು ಮರ ಬೆರೆತ ಹುಲ್ಲುಮೈದಾನ.ಸವಾನ ಕರಾವಳಿ ಮೈದಾನ,ಮೇಯೋಂಬ್