ಪುಟ:Mysore-University-Encyclopaedia-Vol-4-Part-2.pdf/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಹಸ್ತಿ ಶ್ರೀಕಾಳಹಸ್ತಿ ಎಂಬುದು ಹೆಸರಿನ ಶ್ರೀ ಎಂಬುದು ಜೇಡರ ಹೂಳುವಿಗೂ ಕಾಳ ಎಂಬುದು ಕಾಳಾಸರ್ಪಕ್ಕೂ ಹಸ್ತಿ ಎಂಬುದು ಆನೆಗೂ ಸಂಕೇತಗಳೆಂದು ತಿಳಿಸಿ ಅವಕ್ಕೆ ಸಂಬಂಧಿಸಿದಂತೆ ಒಂದೊಂದು ಐತಿಹ್ಯವನ್ನು ನಿರೂಪಿಸಲಾಗಿದೆ.

  ಒಂದು ಜೇಡರ ಹುಳು ಲಿಂಗದ ಸುತ್ತಲೂ ಬಲೆ ಹೆಣೆದು ಲಿಂಗವನ್ನು ಪೂಜಿಸಿತೆಂದು ಒಂದು ಕಾಳಸರ್ಪ ಲಿಂಗದ ಮೇಲೆ ರತ್ನಗಳನ್ನಿಟ್ಟು ಪೂಜಿಸಿತೆಂದು ಆನೆ ತನ್ನ ಸೊಂಡಲಲ್ಲಿ ನೀರು ತಂದು ಅಭಿಷೇಕ ಮಾಡಿ ಪತ್ರಪುಷ್ಪಗಳಿಂದ ಪೂಜಿಸಿಒತೆಂದು ಆ ಮೂರು ಪ್ರಾಣಿಗಳು ತಮ್ಮ ಭಕ್ತಿ ಮತ್ತು ಸೇವೆಗಳಿಂದ ಮೋಕ್ಷ ಪಡೆದುವೆಂದು ಸ್ಥಳಪುರಾಣ ತಿಳಿಸುತ್ತದೆ. ಹೆಚ್ಚು ಜನಜನಿತವಾಗಿರುವ ಮತ್ತೊಂದು ಐತಿಹ್ಯ್ ಬೇಡರ ಕಣ್ಣಪ್ಪನಿಗೆ ಸಂಬಂಧಿಸಿದ್ದು. ಪೆರಿಯ ಪುರಾಣದ ಪ್ರಕಾರ ಬೇಡರ ಕಣ್ಣಪ್ಪ ಕಾಳಹಸ್ತೀಶ್ವರನ ಪರಮ ಭಕ್ತ. ತಾನು ಕೊಂದ ಪ್ರಾಣಿಗಳ ಹಸಿ ಮಾಂಸವನ್ನು ದೇವರಿಗೆ ನೈವೇಧ್ಯಮಾಡುತ್ತಿದ್ದ. ಬಾಯಲ್ಲಿ ನೀರನ್ನು ತುಂಬಿ ತಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದ. ಶಿವಗೋಚರನೆಂಬ ಪೂಜಾರಿ ಒಮ್ಮೆ ಲಿಂಗದ ಮುಂದೆ ಮಾಂಸದ ಚೂರುಗಳನ್ನು ಕಂಡು ತಲ್ಲಣಿಸಿ, ವೈದಿಕ ಸಂಪ್ರದಾಯದಂತೆ ಪ್ರಾಯಶ್ಚಿತ್ತ ಮಾಡಿಕೊಂಡು ಲಿಂಗವನ್ನು ಶುದ್ಧಿಮಾಡಿ ಪೂಜಿಸಿದ. ಆದರೆ ಮರುದಿನವೂ ಮಾಂಸದ ಚೂರುಗಳಿದ್ದವು. ಈ ದೃಷ್ಕೃತ್ಯದ ಮೂಲವನ್ನು ತಿಳಿಯುವ ಸಲುವಾಗಿ ಪೂಜಾರಿ ದೇವಾಲಯದಲ್ಲಿ ಅಡಗಿ ಕುಳಿತ. ಅದೇ ಸಮಯದಲ್ಲಿ ಶಿವನು ಕಣ್ಣಪ್ಪನನ್ನು ಪರೀಕ್ಷ್ಸುವ ಇಚ್ಛೆಯಾಯಿತು. ಪೂಜಾಕಾಲದಲ್ಲಿ ಶಿವಲಿಂಗದ ಕಣ್ಣಿನಿಂದ ನೀರು ಸುರಿಯುತ್ತಿದ್ದುದ್ದನ್ನು ಕಂಡ ಕಣ್ಣಪ್ಪ ದೇವರ ಬಾಧೆಯನ್ನು ಪರಿಹರಿಸಲು ತನ್ನ ಕಣ್ಣನ್ನೇ ಕಿತ್ತು ದೇವರಿಗೆ ಅರ್ಪಿಸಿದ. ಆದರೆ ಮತ್ತೊಂದು ಕಣ್ಣಾಲ್ಲಿ ಸಹ ನೀರು ಸುರಿಯುತ್ತಿದ್ದುದ್ದನ್ನು ಕಂಡ ಕಣ್ಣಪ್ಪ ತನ್ನ ಇನ್ನೊಂದು ಕಣ್ಣನ್ನು ಅರ್ಪಿಸಿದ. ಸಂಪ್ರೀತನಾದ ಶಿವ ಕಣ್ಣಪ್ಪನಿಗೆ ಮತ್ತು ಅಲ್ಲಿ ಉಪಸ್ಥಿತನಾಗಿದ್ದ ಪೂಜರಿಗೆ ಮೋಕ್ಷ ನೀಡಿದನೆಂದು ಪೆರಿಯ ಪುರಾಣ ತಿಳಿಸುತ್ತದೆ. ಕಣ್ಣಾಪ್ಪ ಅರುವತ್ತುಮೂರು ಶೈವ ಪುರಾತನರಲ್ಲೊಬ್ಬ. ದೇವಾಲಯದಲ್ಲಿ ಇಂದಿಗೂ ಕಣ್ಣಪ್ಪನ ವಿಗ್ರಹವೊಂದಿದೆ.

ಕಾಳಹಸ್ತಿಯ ಸ್ಥಳಮಾಹಾತ್ಮ್ಯವೂ ತೆಲುಗು ಕವಿ ಧೂರ್ಜಟಿಯ ಶ್ರೀಕಾಳಹಸ್ತಿ ಶತಕಗಳೂ ಇಂಥ ಅನೇಕ ಐತಿಹ್ಯಗಳನ್ನು ತಿಳಿಸುತ್ತದೆ. ಸುಪ್ರಸಿದ್ದ ತಮಿಳು ಶೈವಸಂತರಾದ ಸಂಬಂಧರ,ಅಪ್ಟರ್,ಸುಂದರಮೂರ್ತಿ ಮೊದಲಾದವತರು ಈ ದೇವಾಲಯಕ್ಕೆ ಆಗಮಿಸಿದ್ದುದಾಗಿ ತಿಳಿದುಬರುತ್ತದೆ. ಶಂಕತರಾಚಾರ್ಯ ಮತ್ತು ತಮಿಲು ಕವಿ ನಕ್ಕೀರರ್ ಇಲ್ಲಿಗೆ ಭೇಟಿ ಕೊಟ್ಟು ಶಿಬವಪೂಜೆ ಮಾಡಿದರೆಂದು ಹೇಳಲಾಗಿದೆ. ರಾಮಾನುಜಚಾರ್ಯರ ತಮ್ಮ (ಚಿಕ್ಕಮ್ಮನ ಮಗ) ಗೋವಿಂದ ತನ್ನ ಗುರುಗಳಾದ ಯಾದವಪ್ರಕಾಶರ ಜೊತೆಯಲ್ಲಿ ಯಾತ್ರೆ ಹೋಗಿದ್ದ ಕಾಲದಲ್ಲಿ ಕಾಶಿಯ ಬಳಿ ಗಂಗೆಯಲ್ಲಿ ಮೀಯೂತ್ತಿದ್ದಾಗ ಅವನ ಆಂಗೈಯಲ್ಲಿ ಶಿವಲಿಂಗ ಪ್ರತ್ಯಕ್ಷವಾಯಿತೆಂದೂ ಅದರೊಂದಿಗೆ ಆತ ಕಾಳಹಸ್ತಿ ಹೋಗಿ ನೆಲಸಿದನೆಂದೂ ಮುಂದೆ ರಾಮಾನುಜರು ಸನ್ಯಾಸ ಸ್ವೀಕಾರಮಾಡಿ ಧರ್ಮಪ್ರಚಾರ ಕಾರ್ಯದಲ್ಲಿ ತೊಡಗಿದಾಗ ಶಿವನ ಅಪ್ಪಣೆ ಪಡೆದು ತನ್ನ ಸೋದರಮಾವ ಶ್ರೀಶೈಲಪೂರ್ಣರೊಂದಿಗೆ ತಿರುಪತಿಯಲ್ಲಿ ವಾಸವಾಗಿದ್ದು ಅನಂತರ ರಾಮಾನುಜರನ್ನು ಸೇರಿದನೆಂದೂ ಒಂದು ಐತಿಹ್ಯವುಂಟು. ಕಾಳಹಸ್ತಿ ಪ್ರಡೆಶ ಸಾತವಾಹನ,ಪಲ್ಲವ,ಜೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಭಾಗವಾಗಿತ್ತು.ಸಾತವಾಹನರ ಆಳ್ವಿಕೆಯ ಕಾಲದಲ್ಲಿ ಬಹುಶಃ ಇಲ್ಲಿ ಮರಮೂಟ್ಟುಗಳಿಂದ ಚಿಕ್ಕ ಗುಡಿಯೊಂದನ್ನು ನಿಲ್ಲಿಸಿ,ಲಿಂಗವನ್ನು ಸ್ಥಾಪಿಸಿದ್ದಿಬಹುದೆಂದು ಊಸಿಸಲಾಗಿದೆ. ಅನಂತರ ಕಾಳಹಸ್ತಿ ತೊಂಡಮಂಡಲದ ಪಲ್ಲವರ ಅಧೀನಕ್ಕೆ ಬಂತು. ವಾಸ್ತು ಮತ್ತು ಶಿಲ್ಪಶೈಲಿಯ ಆಧಾರದ ಮೇಲೆ ಪಲ್ಲವರ ಕಾಲದಲ್ಲಿ ಪ್ರಥಮವಾಗಿ ಶಿಲೆಯಿಂದ ಈ ದೇವಾಲಯದ ಕೆಲವು ಭಾಗಗಳು ನಿರ್ಮೀತವಾಗಿರಬಹುದು. ಪಂಚಮುಖ ದೇವಾಲಯ ಹಾಗು ಶಿವ ಮತ್ತಿತರ ವಿಗ್ರಹಗಳಿಗೂ ಹೆಚ್ಚು ಹೋಲಿಕೆ ಕಂಡುಬರುತ್ತದೆ. ಆದರೂ ಪಲ್ಲವರ ಕಾಲದ ಶಾಸನಗಳು ಇಲ್ಲಿ ದೊರೆತ್ತಿಲ್ಲ. ಜೋಳರ ಕಾಲದಲ್ಲಿ ಕಾಳಹಸ್ತಿ ಪ್ರಸಿದ್ದವಾದ ಯಾತ್ರಾಸ್ಥಳವಾಗಿತ್ತೆಂದು ಅನೇಕ ಶಾಸನಗಳಿಂದ ತಿಳಿದು ಬರುತ್ತದೆ. ಒಂದನೆಯ ಕುಲೋತ್ತುಂಗ ಚೋಳನ ಕಾಲದಾಲ್ಲಿ ಇಲ್ಲಿಯ ಶಿವಾಲಯ ವಿಸ್ತಾರಗೊಂಡಿತು. ಅಲ್ಲದೆ ಅನೇಕ ಚಿಕ್ಕ ದೇವಾಲಯಗಳೂ ನಿರ್ಮಾಣವದವು. ಧನಿಕರಾದ ಭಕ್ತರು ಇಲ್ಲಿ ಮಟಗಳನ್ನು ಕಟ್ಟಿಸಿಕೊಟ್ಟುದಲ್ಲದೆ, ಯೋಗಿಗಳಿಗೆ ಹಾಗೂ ಯಾತ್ರಾರ್ಥಿಗಲಿಗೆ ಅನ್ನ ವಸತಿಗಳ ಏರ್ಪಾಟು ಮಾಡಿದರು.