ಪುಟ:Mysore-University-Encyclopaedia-Vol-4-Part-2.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಕ್ಕೇರಿ

ಮುಂತಾದವು ಹಣದ ಬೆಳೆಗಳು .ಅಲ್ಲದೆ ಈ ಜನ ಅಕ್ಕಪಕ್ಕದ ನಗರಗಳಲ್ಲಿ ಹಣ್ಣು ತರಕಾರಿಗಳನ್ನು ಮಾರಿ ಹಣ ಗಳಿಸುತ್ತಾರೆ.

   ಸಾಮಾಜಿಕ ಜೀವನ:ಬಹುಪತ್ನಿತ್ವ ಕಿಕೂಯೂಗಳಲ್ಲಿ ಜಾರಿಯಲ್ಲಿದೆ ಬಹಳ ಹಿಂದಿನ ಕಾಲದಿಂದಲೂ ಈ ಜನ ಕುರುಚಲ ಬೇಲಿಯಿಂದಲೊ ಕಾಪುಗೋಡೆಗಳಿಂದಲೊ ಆವೃತವಾದ ಗುಡಿಸಲುಗಳಲ್ಲಿ ವಾಸಿಸುತ್ತಾ ಬಂದಿದ್ದಾರೆ. ಕಿಕೂಯೂ ಗಂಡಸಿನ ಪ್ರತಿಯೊಬ್ಬ ಹೆಂಡತಿಗೂ ಒಂದೊಂದು ಪ್ರತ್ಯೇಕವಾದ ಗುಡಿಸಲಿರುತ್ತದೆ. ಸಮಾಜದ ಸ್ಥಳೀಯ ಘಟಕದ ಹೆಸರು ಮ್ಬಾರಿ. ಒಂದೊಂದು ಮ್ಬಾರಿಯಲ್ಲೂ 12ರಿಂದ 100 ಮಂದಿಯವರೆಗೆ ಜನರಿರುತ್ತಾರೆ. ಪುರುಷರೂ ಅವರ ಹೆಂಡತಿಯರೂ ಮಕ್ಕಳೂ ಸೇರಿ ಈ ಘಟಕವಾಗುತ್ತದೆ. ಇದು ಪಿತೃ ಪ್ರಧಾನದ ಸಂಘಟನೆ. ಆಯಾಕುಲಗಳಿಗೆ ಸೇರಿದ ಜನರೇ ಅಲ್ಲದೆ ಮ್ಬಾರಿಯಲ್ಲಿ ರಕ್ತಸಂಬಂಧಿಗಳಲ್ಲದಿದ್ದರೂ ಅತಿಥಿಗಳೂ ಇರುತ್ತಾರೆ. ಇವರನ್ನು ಅಹೋಯಿ ಮತ್ತು ನ್ಡುನ್ಗಾಟಾ ಎಂದು ಕರೆಯುತ್ತಾರೆ. 
  ಕಿಕ್ಕೊಯೂ ಜನ ಉತ್ತರದ ಪ್ರದೇಶಗಳಿಂದ ಇಲ್ಲಿಗೆ ಬಂದಿರಬೇಕೆಂದೂ ಇಲ್ಲಿ ಇವರಿಗಿಂತ ಮುಂಚೆ ವಾಸವಾಗಿದ್ದ ದೊರೋಬೋ ಜನರಿಂದ ಜಮೀನನ್ನು ಕ್ರಮ ಕ್ರಮವಾಗಿ ವಶಪಡಿಸಿಕೊಂಡಿರಬೇಕೆಂದುದೂ ಊಹಿಸಲಾಗಿದೆ. ಇವರಲ್ಲಿ ಪ್ರತಿಯೊಂದು ಮ್ಬಾರಿಗಳ ಮುಖ್ಯಸ್ಥನನ್ನೂ ಮುರಾಮತಿಯೆಂದು ಕರೆಯಲಾಗುತ್ತದೆ. ಇಂಥ ಹಲವಾರು ಮ್ಬಾರಿಗಳ ಸಮುಹ ಸ್ಥೂಲವಾಗಿ ಒಂಬತ್ತು ವಿಭಾಗಗಳಾಗಿಯೂ ಹಲವು ಉಪವಿಭಾಗಗಳಾಗಿಯೂ ವಿಂಗಡತವಾಗಿದೆ. ಅಲ್ಲದೆ ಇಡೀ ಗಣವೇ ಕಿಕೂಯೂ ಮತ್ತು ಮ್ಯಾಸ್ಸೇ ಎಂದು ಎರಡು ಸಮಭಾಗಗಳಾಗಿ ವಿಂಗಡವಾಗಿದೆ. ಕಿಕೂಯೂಗಳ ಆಡಳಿತ ವೈಶಿಷ್ಟವೆಂದರೆ ವಯೋನುಗುಣವಾಗಿ ಅವರ ಸಂಘಟನೆ. ಈ ಸಂಘಟನೆಗಳೇ ಅಲ್ಲಿಯ ಆಡಳಿತ ವ್ಯವಸ್ಥಗಳು ಪ್ರತಿವರ್ಷವೂ ಬಾಲಕರ ಗುಂಪುಗಳನ್ನು ವಿಧಿಪೂರ್ವಕವಾಗಿ ಈ ವಯೋವ್ಯವಸ್ಥೆಗೆ ಸೇರಿಸಿ ದೀಕ್ಷೆ ನೀಡಲಾಗುತ್ತ್ ದೆ. ಒಂದೊಂದು ತಲೆಮೊರೆಯೂ ೨೦-೩೦ ವರ್ಷಗಳ ಕಾಲ ಆಡಳಿತ ನಡೆಸಿ ಅನಂತರ ಮುಂದಿನ ತಲೆಮೊರೆಗೆ ಅಧಿಕಾರ ವಹಿಸಿಕೊಡುತ್ತದೆ. ವಿವಿಧ ಶ್ರೇಣಿಗಳ ಹಿರಿಯರ ನ್ಯಾಯ ಮಂಡಲಿಗಳೂ ಉಂಟು. ಅತ್ಯುನ್ನತ ಶ್ರೇಣಿಯ ಸದಸ್ಯರು ಮತಾಚರಣೆಯ ವಿಚಾರಗಳಲ್ಲಿ ಅಧಿಕಾರ ಚಲಾಯಿಸುತ್ತಾರೆ. ಕಿಕೂಯೂಗಳ ದೇವರು ನ್ಗಾಯಿ. ಇವನು ಸರ್ವಶಕ್ತ, ಸೃಷ್ಟಿಕರ್ತ ,ಪಿತೃಪೊಜೆಯಲ್ಲೂಇವರಿಗೆ ನಂಬಿಯುಂಟು.ಇವರು ದೇವಪಿತೃಗಳಿಬ್ಬರಿಗೂ ಪ್ರಾರ್ಥನೆಗಳನ್ನೂ ಬಲಿಗಳನ್ನೂ ಸಲ್ಲಿಸುತ್ತಾರೆ.

ಐರೋಪ್ಯರಿಂದ ಆಬಾದಿಗೆ ಬಂದ ಜಮೀನುಗಳೂ ನೈರೋಬಿ ನಗರವು ಕಿಕೂಯೂ ವಸತಿಗೆ ಸನಿಯದಲ್ಲಿವೆ ಈ ಸನ್ನೀವೆಶೆದಿಂದಾಗಿ ಇವರಿಗೂ ಐರೋಪ್ಯರಿಗೂ ನಡುವೆ ಘರ್ಷಣೆ ಏರ್ಪಟ್ಟಿತು ಐರೋಪ್ಯ ವಲಸೆಗಾರರನ್ನು ಅಲ್ಲಿಂದ ಹೊರದಬ್ಬಲು ಕಿಕುಯೂಗಳ ಮಾವ್-ಮಾವ್ ಎಂಬ ಕ್ರಾಂತಿಕಾರಿ ರಹಸ್ಯ ಸಂಘವೊಂದು ಏರ್ಪಟ್ಟಿತು ಕೀನ್ಯ ಸರ್ಕಾರ ನೇಮಿಸಿದ ಸ್ಥಳಿಯ ನಾಯಕರಿಗೆ ಸಂಪ್ರದಾಯದ ಅಂಗೀಕಾರ ಮುದ್ರೆ ಬೀಳ್ಲಿಲ್ಲ .ಕ್ರೈಸ್ತಪ್ರಚಾರಕರನ್ನೂ ಇವರು ವಿರೋಧಿಸಿದರು .ನೆಲಕ್ಕಾಗಿ ಸ್ಪರ್ಧೆ,ವರ್ಣೀಯರ ಪ್ರತ್ಯೇಕತೆ-ಮುಂತಾದ ಕಾರಣಗಳಿಂದಾಗಿ ಅಶಾಂತಿ ಹಬ್ಬಿತ್ತು.ಕೀನ್ಯ ಸರ್ಕಾರ ಈ ಜನರ ನೆಮ್ಮದಿ ಪ್ರಗತಿಗಳನ್ನು ಸಾಧಿಸಲು ಶ್ರಮಿಸುತ್ತಿದೆ. ಕಿಕ್ಕೇರಿ :ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಒಂದು ಗ್ರಾಮ ಮತ್ತು ಅದೇ ಹೆಸರಿನ ಹೋಬಳಿಯ ಕೇಂದ್ರ ಕೃಷ್ಣರಾಜಪೇಟೆಗೆ ೧೩ ಕಿಮೀ ಮತ್ತು ಶ್ರವಣಬೆಳಗೊಳಕ್ಕೆ ೧೬ ಕಿಮೀ ದೂರದಲ್ಲಿ ಕೃಷ್ಣರಾಜಪೇಟೆ-ಚೆನ್ನರಾಯಪಟ್ಟಣ ರಸ್ತೆಯಲ್ಲಿದೆ.ಈ ಹೋಬಳಿಯ ಕಿಕ್ಕೇರಿಯೇ ದೋಡ್ಡ ಗ್ರಾಮ. ಕೀಕ ಎಂಬವನ ಹೆಸರಿನಿಂದ ಕಿಕ್ಕೇರಿ ಎಂಬ ಹೆಸರು ಬಂದುದಾಗಿ ಐತೆಹ್ಯವಿದೆ.ಇಲ್ಲಿ ಒಂದು ರಮ್ಯವಾದ ಕೆರೆಯಿದೆ.ಇಲ್ಲಿಯ ಹೊಯ್ಸಳ್ಕಾಲೀನ ದೇವಾಲಯಗಳಲ್ಲಿ ಬ್ರಹ್ಮೇಶ್ವರ ದೇವಾಲಯ ಮತ್ತು ಜನಾರ್ಧನ ದೇವಾಲಯ ಮುಖ್ಯವಾದವು.ಬ್ರಹ್ಮೇಶ್ವರ ದೇವಾಲಯವನ್ನು ಬಮ್ಮರಿ ನಾಯಕಿತ್ತಿ ಎಂಬುವಳು ೧೧೭೧ರಲ್ಲಿ ಹೊಯ್ಸಳರಾಜ ಒಂದನೆಯ ನರಸಿಂಹನ ಕಾಲದಲ್ಲಿ ಕಟ್ಟಿಸಿದಳು ಈ ಕಟ್ಟಡದ ನಿರ್ಮಾಣ ವೈಶಿಷ್ಪ್ಯಪೊರ್ಣವಾಗಿದೆ.ಇದರ ಹೊರವಲಯ ಹೊರಗಡೆಗೆ ೧.೨ಮೀ ಎತ್ತರದ ವಿಷ್ಣುವಿಗ್ರಹ ಉತ್ತಮ ಕುಸುರುಗಾರಿಕೆ ಪ್ರದರ್ಶಿಸುತ್ತದೆ.ನವರಂಗದ ಕಂಬಗಳ ಮೇಲೆ ಕೊರೆದಿರುವ ಮದನಿಕೆ ವಿಗ್ರಹಗಳು ಜೀವಂತವಾಗಿರುವಂತೆ ಕಾಣುವ ಉತ್ತಮ ಕಲಾಕೃತಿಗಳು.ನವರಂಗದ ಚಾವಣಿಯ ತಳಭಾಗದಲ್ಲಿ ೯ ಭುವನೇಶ್ವರಿಗಳಿವೆ.೮ ದಿಕ್ಕುಗಳಲ್ಲಿರುವ ಭುವನೇಶ್ವರಿಗಳು ಮಧ್ಯಭಾಗದ ಚೌಕಕಾರದ ಭುವನೇಶ್ವರಿಯನ್ನು ಸುತ್ತುವರಿದಿವೆ.ಅವುಗಳಲ್ಲಿ ಅಷ್ಟದಿಕ್ಪಾಲಕರ ಮತ್ತು ನವಗ್ರಹಗಳ ಶಿಲ್ಪಗಳನ್ನು ಕೆತ್ತಲಾಗಿದೆ.ಗೋಡೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಅಂದವಾಗಿ ಕೆತ್ತಲಾಗಿದೆ. ಬ್ರಹ್ಮೇಶ್ವರ ದೇವಾಲಯವಲ್ಲದೆ ಎರಡು ನರಸಿಂಹ ದೇವಾಲಯಗಳೂ ಈ ಹಳ್ಳಿಯ ಅರಾಧ್ಯದೇವತೆ ಕಿಕ್ಕೇರಮ್ಮನ ದೇವಾಲಯವೂ ಭವ್ಯ ಕೆತ್ತನೆಗಳಿಂದ ಕೂಡಿವೆ.ಕಿಕ್ಕೇರಮ್ಮನ ಜಾತ್ರೆ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ.ಈ ದೇವತೆಗೆ ಯಾವ ಪ್ರಾಣಿಗಳನ್ನೂ ಬಲಿಕೊಡುವುದಿಲ್ಲ.ಇಲ್ಲಿ ೧೫ ಒಕ್ಕಲಿಗ ಕುಟುಂಬಗಳು ಸರದಿಯ ಪ್ರಕಾರ ಈ ದೇವಸ್ಥಾನದ ಅರ್ಚಕರಾಗಿ ಪೂಜೆ ನಡೆಸುತ್ತಾರೆ.ಜೀರ್ಣವಾದ ಒಂದು ಪುರಾತನ ಕೋಟೆಯೂ ಇಲ್ಲಿದೆ. ಈ ಹೋಬಳಿಯ ಜನರು ಮುಖ್ಯ ಕಸಬು ವ್ಯವಸಾಯ,ಮುಂಗಾರು ಬೆಳೆಗಳಾದ ರಾಗಿ,ಜೊಳಗಳನ್ನು ಬೆಳೆಯುತ್ತಾರೆ.ಕಬ್ಬು ,ತೆಂಗು ಬಾಳೆ ಉಳಿದು ಮುಖ್ಯ ಬೆಳೆಗಳು