ಕಿರುಚಿತ್ರ ಈ ಅರೆಮರೆ ತುಕಡಿ ಕಾಳಗಕ್ಕೆ ಗೆರಿಲ ಯುದ್ಧವೆಂದು ಹೆಸರು. ಗೆರಿಲ ಎಂಬುದು ಸ್ಪೇನ್ ಭಾಷೆಯ ಒಂದು ಶಬ್ದದಿಂದ ಬಂದಿದೆ. ಅದರ ಅರ್ಥ ಚಿಕ್ಕ ಕಾಳಗ. 1809- 13ರಲ್ಲಿ ಸ್ಪೇನ್ ಪೋರ್ಚುಗಲ್ಲಿನ ಗೆರಿಲೆರೋ ತಂಡದವರು ವೆಲಿಂಗ್ಟನ್ನನ ನಾಯಕತ್ವದಲ್ಲಿ ಭಾರಿ ಫ್ರೆಂಚ್ ಸೇನೆಯನ್ನು ಪದೇಪದೇ ಹೆಣಗಾಡಿಸಿ ದೇಶದಿಂದ ಓಡಿಸಿಬಿಟ್ಟರು. ಅಂದಿನಿಂದ ಇಂಥ ಕಿರುಕುಳ ಕಾಳಗಕ್ಕೆ ಗೆರಿಲಯುದ್ಧವೆಂದು ಹೆಸರು ನಿಂತಿದೆ. ಗೆರಿಲಗಳು ಕ್ರಮಬದ್ಧ ಸೈನಿಕರಲ್ಲ. ಸೈನಿಕ ಉಡುಪನ್ನು ಧರಿಸುವುದಿಲ್ಲ. ಅಸೈನಿಕ ಪೌರನಿವಾಸಿಗಳು, ಶಿಸ್ತು, ಕಟ್ಟುಪಾಡಿನಲ್ಲಿ ತರಬೇತಿ ಪಡೆಯುತ್ತಾರೆ. ಭಾರದ ಆಯುಧ, ಉಪಕರಣಗಳನ್ನು ಒಯ್ಯುವುದಿಲ್ಲ. ಅವರಿಗೆ ನಿರ್ದಿಷ್ಟ ನಿವಾಸ, ಸಿಬ್ಬಂದಿ, ಡಿಪೋ, ಪಾಳ್ಯಗಳಿಲ್ಲ. ರಕ್ಷಿಸಿಕೊಳ್ಳಬೇಕಾದ ಸ್ಥಾನಗಳಿಲ್ಲ. ಅತ್ಯಂತ ಅನುಕೂಲವಾದ ಸಂದರ್ಭಗಳಲ್ಲಿ ವಿನಾ ಅವರು ಶತ್ರುಗಳೆದುರಿಗೆ ನಿಂತು ಕಾದಾಡುವುದಿಲ್ಲ. ಕೆಲವು ಸಾರಿ ದರೋಡೆ ಕಳ್ಳರ ತಂಡಗಳೂ ಗೆರಿಲ ಯುದ್ಧವನ್ನು ಮಾಡುತ್ತವೆ. ಗೆರಿಲಗಳಿಗೆ ಧೈರ್ಯ, ಶೀಘ್ರ ಚಲನವಲನ, ಸಹಿಷ್ಣತೆಗಳಿರಬೇಕು. ಸ್ಥಳೀಯ ನಿವಾಸಿಗಳ ಸಹಕಾರ, ಸಹಾನುಭೂತಿಗಳನ್ನು ಗಳಿಸಿದರೆ ಅವರಿಂದ ಅನೇಕ ಸೌಕರ್ಯಗಳನ್ನು ಪಡೆಯಬಹುದು. ಶತ್ರುಗಳಿಗೆ ಗುಟ್ಟು ಕೊಡದೆ, ಅವರ ವಿಷಯಗಳನ್ನು ಚಮತ್ಕಾರದಿಂದ ಸಂಗ್ರಹಿಸಿ, ರಾಷ್ಟ್ರೀಯ ಸೈನ್ಯದೊಡನೆ ಸುಸಂಘಟಿತವಾಗಿರಬೇಕು. ಅಮೆರಿಕದ ಕ್ರಾಂತಿಯಲ್ಲಿ ವಲಸೆಗಾರರು ಗೆರಿಲ ಪಡೆಗಳು ಬ್ರಿಟಿಷ್ ಸೈನ್ಯಗಳ ಮೇಲೆ ಹಾವಳಿಮಾಡಿದವು. ಅಮೆರಿಕದ ರಾಷ್ಟಾಂತಯುದ್ಧದಲ್ಲಿ ಗೆರಿಲ ಚಳವಳಿ ಪ್ರಬಲವಾಗಿತ್ತು. ಇಟಲಿ ದೇಶವನ್ನು ಏಕೀಕರಿಸಲು ಗೈರಿ ಬಾಲ್ಟಿ ಗೆರಿಲ ಕಾಳಗಗಳನ್ನು ನಡೆಸಿದ. ಬೋಆ ಯುದ್ಧದಲ್ಲಿ ಬೋಆರ್ ಗೆರಿಲಗಳು ನಿಪುಣತೆಯಿಂದ ಬ್ರಿಟಿಷ್ ಸೇನೆಗಳನ್ನು ಗೋಳಾಡಿಸಿದರು. ಒಂದನೆಯ ಮಹಾಯುದ್ಧದಲ್ಲಿ ಅರಬ್ಬಿ ಗೆರಿಲಗಳು ಕರ್ನಲ್ ಲಾರೆನ್ಸನ ಮುಂದಾಳ್ತನದಲ್ಲಿ ತಮಗಿಂತಲೂ ಐದರಷ್ಟು ದೊಡ್ಡದಾಗಿದ್ದ ತುರ್ಕಿ ಸೇನೆಗಳ ಮೇಲೆ ಹಾವಳಿಮಾಡಿ 35,000 ತುರ್ಕಿಯವರನ್ನು ಕೊಂದರು ಮತ್ತು ಅಷ್ಟೇ ಮಂದಿಯನ್ನು ಸೆರೆಹಿಡಿದರು. ಫ್ರಾನ್ಸಿನ ಗೆರಿಲಗಳು ದಕ್ಷಿಣ ಕ್ಯಾರೊಲೀನದಲ್ಲಿ ಕಾರ್ನವಾಲಿಸ್ನ ಭಾರಿ ಸೈನ್ಯವನ್ನು ಕಾಡಿದರು. ನೆಪೋಲಿಯನ್ ಮಾಸ್ಕೋದಿಂದ ಹಿಮ್ಮೆಟ್ಟುತ್ತಿದ್ದಾಗ ರಷ್ಯದ ರೈತರು ಫ್ರೆಂಚರನ್ನು ಹೊಡೆದೋಡಿಸಿದರು. ಚೀನದ ತಾಯ್ಪಿಂಗ್ ದಂಗೆಯಲ್ಲಿ ರೈತಾಪಿ ಜನರು, ಕೂಲಿಗಳು ಸಮುದ್ರ ಕಳ್ಳರು ಮೌಚೂ ರಾಜವಂಶಾವಳಿಯ ಮೇಲೆ ಗೆರಿಲ ಕಾಳಗ ಮಾಡಿದಾಗ ಎರಡು ಕೋಟಿ ಜನರು ಮಡಿದರು. ಐರ್ಲೆಂಡಿನ ಸ್ವರಾಜ್ಯ ಚಳವಳಿಯಲ್ಲಿ ಡೀ ವಲೇರನ ಗೆರಿಲಗಳು ಬ್ರಿಟಿಷರನ್ನು ನರಳಾಡಿಸಿ ಭೀಕರ ಕೃತ್ಯಗಳನ್ನು ನಡೆಸಿದರು. ಲೆನಿನ್ನನ ಬೋಲ್ಷೆವಿಕ್ ಕ್ರಾಂತಿಯಲ್ಲಿ ಸೋವಿಯತ್ ಗೆರಿಲಗಳು ಉಗ್ರವಾಗಿ ಹೋರಾಡಿದರು. ಮಾವೋತ್ಸೆಡುಂಗನ ಗೆರಿಲಗಳು ಜಪಾನಿ ಆಕ್ರಮಿಗಳನ್ನೂ ಚಿಯಾಂಗ್-ಕೈ-ಷೆಕ್ನ ಸೇನೆಯನ್ನೂ ಓಡಿಸಿಬಿಟ್ಟರು. ಜರ್ಮನರು ರಷ್ಯವನ್ನು ಮುತ್ತಿದಾಗ ರಷ್ಯನ್ ಗೆರಿಲಗಳು ಜರ್ಮನ್ ಸೈನಿಕರಂತೆಯೂ ಹಳ್ಳಿಗಾಡಿನವರಂತೆಯೂ ವೇಷಬದಲಿಸುತ್ತ ಶತ್ರುಗಳ ಕಣ್ಣಿಗೆ ಮಣ್ಣೆರಚಿ ಮೂರು ಲಕ್ಷ ಜರ್ಮನರನ್ನು ಕೊಂದರು. 500 ವಿಮಾನ, ಸಾವಿರಾರು ಮೋಟರ್ ವಾಹನಗಳಿಗೆ ಗುಂಡಿಕ್ಕಿದರು. 3,000 ರೈಲುಗಳನ್ನು ಉರುಳಿಸಿದರು. 3,300 ಸೇತುವೆಗಳನ್ನು ಮುರಿದರು. 1,200 ಟ್ಯಾಂಕ್, 4.030 ಲಾರಿ, 895 ಮಳಿಗೆಗಳನ್ನು ಹಿಡಿದರು. ಪೈರುಗಳು, ಧಾನ್ಯದವಸಗಳು ಶತ್ರುಗಳಿಗೆ ಸಿಕ್ಕಿದಂತೆ ಸುಟ್ಟುಬಿಟ್ಟರು. ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ, ಹತ್ತು ಲಕ್ಷ ಅಶ್ವಸಾಮರ್ಥ್ಯ ವಿದ್ಯುಚ್ಛಕ್ತಿ ಉದ್ಭವಿಸುತ್ತಿದ್ದ, ನೀಸ ಅಣೆಕಟ್ಟನ್ನು ನಾಶಮಾಡಿದರು. ಡಾನ್ನದಿಯ ಏರಿಗಳನ್ನು ಕೆಡವಿ ದೇಶವನ್ನು ನೀರಿನ ಪ್ರವಾಹದಿಂದ ಹಾವಳಿ ಮಾಡಿದರು. ಭಾರತ, ಆಫ್ರಿಕಗಳಲ್ಲಿ ಬ್ರಿಟಿಷರ ಮೇಲೆ, ಮೊರಾಕೋದಲ್ಲಿ ಫ್ರೆಂಚರು ಸ್ಪೇನಿನವರ ಮೇಲೆ ಬಾಲ್ಕನ್ನಲ್ಲಿ ತುರ್ಕಿಯವರು ಆಸ್ಫೋಹಂಗರಿಯನ್ನರ ಮೇಲೆ ಗೆರಿಲ ಯುದ್ಧಗಳಾದವು. ವರ್ಜಿನಿಯದಲ್ಲಿ ಹತ್ತು ಲಕ್ಷ ಶತ್ರುಗಳು ಮಡಿದರು. ಗ್ರೀಸ್, ಬಲ್ಲೇರಿಯ, ರೊಮೇನಿಯ, ಇಂಡೋನೇಷ್ಯ, ಮಯನ್ಮಾರ್, ಮಲಯ, ಥೈಲೆಂಡ್, ಆಲ್ಲೀರಿಯ, ಲೇ ಆಸ್, ಕೊರಿಯಗಳಲ್ಲಿ ಗೆರಿಲ ಪ್ರಾಬಲ್ಯವಿತ್ತು. ಕೀನ್ಯದಲ್ಲಿ ಮಾವ್-ಮಾವ್, ಫಿಲಿಪೀನ್ಸ್ನಲ್ಲಿ ಹೂಕ್, ವಿಯೆಟ್ನಾಂನಲ್ಲಿ ವಿಯೆಟ್ ಕಾಂಗ್ ಚಳವಳಿಗಳು ಘೋರವಾಗಿದ್ದವು. ಮೊಳೆಗಳಿರುವ ಹಲಗೆಗಳನ್ನು ಮಾರ್ಗಗಳಲ್ಲಿಟ್ಟು ಶತ್ರುಗಳ ಮೋಟರ್ ಟೈರ್ಗಳನ್ನು ಚುಚ್ಚಿಸುವುದು; ಹಾದಿಗಳಲ್ಲಿ ಎಣ್ಣೆಸುರಿದು ಶತ್ರುಗಳನ್ನು ಬೀಳಿಸುವುದು, ಹಂಚ್ ಗಣೇಶ್, ಜಂಗಳನ್ನು ಗುಂಪುಗಳಿಗೆಸೆಯುವುದು, ಮನುಷ್ಯರನ್ನು ಕದ್ದುಕೊಂಡು ಹೋಗುವುದು; ಗುಪ್ತವಧೆ ಮುಂತಾದ ಭಯೊತ್ಪಾದಕ ಕೃತ್ಯಗಳು ನಡೆದವು. ಧೀರ ಸ್ತ್ರೀಯರೂ ಗೆರಿಲಗಳಾದರು. ಸೈಪ್ರೆಸ್ನಲ್ಲಿ ಜನರಲ್ ಗ್ರಿವಾಸ್, ಯೂಗೋಸ್ಲಾವಿಯದಲ್ಲಿ ಮಾರ್ಷಲ್ ಟಿಟೋ, ಬೋಲೀವಿಯದಲ್ಲಿ ಗೈವವಾರ್, ಮಿಂತ್ನಾಂನಲ್ಲಿ ಹೋಚಿಸೋಸ್, ಕಟದಲ್ಲಿ ಕ್ಯಾನ್ಸ್ ಇವರ ಅದ್ಭುತ ಗರಿಡಾ ಸಾಹಸಗಳು ಲೋಕವನ್ನು ಬೆರಗುಗೊಳಿಸಿದವು. (ಎಂ.ಜಿ.ಕೆ.ಎಂ.) ಕಿರು ಚಿತ್ರಣ : ಸಣ್ಣ ಪ್ರಮಾಣದಲ್ಲಿ ವರ್ಣಚಿತ್ರಗಳನ್ನು ನಿರೂಪಿಸುವ ಕಲೆಯೇ ಕಿರುಚಿತ್ರಣ (ಮೀನಿಯೇಚರ್ ಪೇಂಟಿಂಗ್), ಸಾಮಾನ್ಯವಾಗಿ ಕಿರುಚಿತ್ರಗಳಿಗೆ ವ್ಯಕ್ತಿಗಳೇ ವಸ್ತುಗಳಾಗಿರುವ ಕಾರಣದಿಂದ ಇದನ್ನು ವ್ಯಕ್ತಿಚಿತ್ರಣದ (ಪೋರ್ ಟ್ರೇಚರ್) ಒಂದು ಪ್ರಕಾರವೆಂದು ಭಾವಿಸುವುದುಂಟು. ಆದರೆ ಇದು ಸರಿಯಲ್ಲ. ಪಕೃತಿದೃಶ್ಯಗಳನ್ನು ಕಿನ್ನರ : ರೂಪಾನ್ವೇಲಿ, ಅನುರಾಧಮರ (ಶ್ರೀಲಂಕ) ಕಿರುಚಿತ್ರಣದಲ್ಲಿ ರೂಪಿಸುವ ಪದ್ಧತಿ ಪ್ರಾಚೀನ ಭಾರತ ಮತ್ತು ಜಪಾನುಗಳಲ್ಲಿ ರೂಢಿಯಲ್ಲಿತ್ತು. ಆದರೆ ಅಲಂಕರಣ ಪಟ್ಟಿಕೆಗಳ ಅಂಗವಾಗಿ ಆದರೂ ಸ್ವತಂತ್ರವಾಗಿ ಚಿತ್ರಿತವಾದ ವರ್ಣಚಿತ್ರಗಳೂ ಈ ಗುಂಪಿಗೆ ಸೇರಬಹುದಾಗಿವೆ. ಈ ಶೈಲಿಗೆ ಪೂರ್ವರಂಗವಾಗಿ ಪ್ರಾಚೀನ ಕಾಲದ ತಾಳಪತ್ರ ಗ್ರಂಥಗಳಲ್ಲಿ ಬಿಡಿಸುತ್ತಿದ್ದ ಚಿತ್ರಗಳಿದ್ದುವು; ಲೋಹಪದಕಗಳ ಅಜಂತ ಮೊದಲನೆಯ ಗುಹೆಯಲ್ಲಿನ ಚಿತ್ರ ಮೇಲೆ, ರಾಜ್ಯಗಳ ಮೇಲೆ ಮೂಡಿಸುತ್ತಿದ್ದ ವ್ಯಕ್ತಿಚಿತ್ರಗಳಿದ್ದುವು, ಕುಷಾಣರ ಕಾಲದಲ್ಲೇ ಬುದ್ಧ, ಶಿವ, ಸ್ಕಂಧ ಮುಂತಾದ ದೇವತೆಗಳ ಚಿತ್ರಗಳನ್ನು ಹೊತ್ತ ಸಣ್ಣ ನಾಣ್ಯಗಳು ಚಲಾವಣೆಯಲ್ಲಿದ್ದುವು. ಜೈನರ ಕಲ್ಪಸೂತ್ರಗಳಲ್ಲಿ ತೀರ್ಥಂಕರರ, ಜಿನರ, ಮುನಿಗಳ ಚಿತ್ರಗಳಲ್ಲದೆ ಹಲವಾರು ಪ್ರಸಂಗಗಳೂ ನಿರೂಪಿತವಾಗಿವೆ. ಪರ್ಷಿಯನ್ ಗ್ರಂಥಗಳನ್ನೂ ಕಿರುಚಿತ್ರಗಳನ್ನು ಬಿಡಿಸುವ ಪದ್ಧತಿಯಿದ್ದಿತು. ಹೀಗೆ ಪೂರ್ವಕಾಲದಲ್ಲಿ ಅಲಂಕರಣಕ್ಕಾಗಿ ಉಲ್ಲೇಖಕ್ಕಾಗಿ ಮೂಡಿಸುತ್ತಿದ್ದ ಕಿರು ಚಿತ್ರಣಗಳು ಕಾಲಕ್ರಮದಲ್ಲಿ ವಿಶಿಷ್ಟ ಸ್ಥಾನವನ್ನು
ಪುಟ:Mysore-University-Encyclopaedia-Vol-4-Part-2.pdf/೩೯೬
ಗೋಚರ