ಪುಟ:Mysore-University-Encyclopaedia-Vol-4-Part-2.pdf/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

"ಕಿರುಚಿತ್ರಣ"

ಪಡೆದುವು. ಪ್ರಾಚೀನ ಭಾರತದಲ್ಲಿ ಅಜಂತದಲ್ಲಿ ಕೆಲವು ಕಿರುಚಿತ್ರಣಳು ರಚಿತವಾಗಿವೆ. ಇವುಗಳಲ್ಲಿ ಪ್ರಾಣಿ, ವ್ಯಕ್ತಿ, ಪಕ್ಶಿ,ಪುಷ್ಪ, ಫಲಗಳನ್ನು ಚಿತ್ರಿಸಲಾಗಿದೆ. ಸಿಂಹದಳದಲ್ಲೂ ಇಂಥ ಕೆಲವು ಚಿತ್ರಗಳು ರಚಿತವಾಗಿದ್ದರೂ ಅವುಗಳ ಕಾಲವನ್ನು ನಿರ್ದಿಶ್ಟವಾಗಿ ತಿಳಿಸಲಾಗುವುದಿಲ್ಲ. ಇವಲ್ಲದೆ ಭಾರತದ ಚಿತ್ರಕಲೆಯಲ್ಲಿ ಇಂಥ ಕಿರುಚಿತ್ರಣಗಳು ಅನೂಚಾನವಾಗಿ ನಡೆದುಬಂದಿದ್ದರೂ ಹಲವಾರು ಕಾರಣಗಳಿಂದ ಬಹಳಷ್ಟು ನಾಶವಾಗಿವೆ. 11 ನೆಯ ಶತಮಾನದಲ್ಲಿ ಬಂಗಾಲದ ಪಾಲವಂಶದ ರಾಜರ ಆಶ್ರಯದಲ್ಲಿ ರಚಿತವಾದ ತಾಳೆಗರಿಯ ಹಸ್ತಪ್ರತಿಗಳ ಮೇಲಿನ ಚಿತ್ರಗಳನ್ನು ಇಲ್ಲಿ ಹೆಸರಿಸಬಹುದು. 12ರಿಂದ 14 ನೆಯ ಶತಕಗಳಲ್ಲಿ ಪಶ್ಚಿಮ ಭಾರತದಲ್ಲಿ ತಾಳೇಗರಿಗಳ ಹಸ್ತಪ್ರತಿಗಳ ಮೇಲೇ ಪುನಹ ತಲೆದೋರುತ್ತವೆ. 15ನೆಯ ಶತಕದಲ್ಲಿ ತಾಳೆ ಗರಿಯ ಬದಲು ಅದರ ಆಕಾರದಲ್ಲಿದ್ದ ಕತ್ತರಿಸಿದ ಕಾಗದದ ಮೇಲೆ ಈ ಚಿತ್ರಣಗಳಾ ರಚಿತವಾಗುತ್ತಿದ್ದು, ಕಾಲಕ್ರಮದಲ್ಲಿ ರಜಪೂತ ಚಿತ್ರಕಲೆಗೆ ಕಾರಣವಾದುವು. 16- 17 ನೆಯ ಶತಮಾನದಲ್ಲಿ ರಾಜಸ್ತಾನ, ಬುಂದೇಲ ಖಂಡ, ಪಂಜಾಬ್, ಹಿಮಾಲಯ ಮತ್ತು ಕಾಶ್ಮೀರಗಳಲ್ಲಿ ವಿಶೇಶವಾಗಿದ್ದ ಭಾಗವತ ಮತ್ತಿತರ ಪುರಾಣದೃಶ್ಯಗಳ ಚಿತ್ರಗಳಲ್ಲಿ ಕಿರುಚಿತ್ರಣಗಲೂ ಹೆಚ್ಚು ಸಂಖ್ಯೆಯಲ್ಲಿವೆ.

ಹದಿನೈದನೆಯ ಶತಮಾನದಲ್ಲಿ ಸಾದಿಯ ಬುಸ್ತನ್ ಎಂಬ ಪರ್ಶಿಯನ್ ಗ್ರಂಥದ ಪ್ರತಿಯೊಂದರಲ್ಲಿ ಹೆರಾತ್ ಶಾಖೆಗೆ ಸಂಬಂಧಿಸಿಧ ಕಿರುಚಿತ್ರಗಳಿವೆ. ಇಬ್ಬರು ಸಂತರ ಸಂಧಿಸುವ ದೃಶ್ಯವನ್ನು ಸ್ವಾರಸ್ಯವಾಗಿ ನಿರೂಪಿಸಿರುವ ಚಿತ್ರವೊಂದು ಪ್ರಸಿದ್ಧವಾಗಿದೆ. ಕಿರುಚಿತ್ರಗಳ ಸಂಪ್ರದಾಯ ಪರ್ಶಿಯ ದೇಶದಲ್ಲಿ ಮೊದಲಿಗೆ ಅವತರಿಸಿ ಕಾಲಕ್ರಮದಲ್ಲಿ ಭಾರತಕ್ಕೆ ಬಂದಿತು ಎಂಬ ವಾದವಿದೆ. ಜೈನರ ತಾಳಕಾಚಾರ್ಯ ತಾಳಗ್ರಂಥದಲ್ಲಿ ಈ ಸಂಪ್ರದಾಯ ಆರಂಭವಾಯಿತೆಂದರೆ ಉತ್ಪ್ರೇಕ್ಷೆಯಲ್ಲ. ಮೊಗಲ್ ಕಾಲದ ಕಿರುಚಿತ್ರಗಳು ಜಗತ್ಪ್ರಸಿದ್ದವಾಗಿವೆ. ರಾಜರ ಅಧಿಕಾರಿಗಲ ಶ್ರೀಮಂತರ ನೈಜಮೂರ್ತಿಗಳನ್ನು ಸೊಗಸಾದ, ಸೂಕ್ಶ್ಮವಾದ ವರ್ಣವಿನ್ಯಾಸದಲ್ಲಿ ನಿರ್ಮಿಸಿದ ಸಾವಿರಾರು ನಿದರ್ಶನಗಳು ಇಂದಿಗೂ ಉಲಿದಿವೆ. ಪದ್ಧತಿ ಬಂದಿತು. ಮುಮ್ಮಡಿ ಕೃಷ್ಣರಾಜ ಒಡೆಯಾರ್ ಯದುರಾಜರ ಸಂತತಿಯನ್ನು ನಿರೂಪಿಸುವ ಪದ್ಧತಿಯನ್ನು ವಂಶವೃಕ್ಷವನ್ನು ಬರೆಸಿ ಅದರಲಿ ತಮ್ಮ ಪೂರ್ವಜರ ಚಿತ್ರಗಳನ್ನೆಲ್ಲ ಅಳವಡಿಸಿದ್ದರು.

ಹೊರದೇಶಗಳಲ್ಲಿ ಶ್ರೀಮಂತರು ತಮಗೆ ಬೇಕಾದವರ ವ್ಯಕ್ತಿ ಚಿತ್ರಗಳನ್ನು ಬರೆಸಿ ಅವನ್ನು ತಮ್ಮ ಕೊರಳಿನಲ್ಲಿ ಪದಕಗಳಂತೆ ಧರಿಸುವ ಸಂಪ್ರದಾಯವಿದ್ದಿತು. ಲಾಕೇಟುಗಳು, ಮೆಡಲ್ಗಲು ಪಾಕ್ಗಳು ಇವುಗಳಿಗೆ ಅಡಕವಾಗಿ ಕಿರುಚಿತ್ರಗಳು ಕಾಣಿಸಿಕೊಂಡವು. ವರ್ತುಲಾಕಾರದ ಕಿರುಚಿತ್ರಗಳ ಶೈಲಿ ಹೀಗೆ ಮೊದಲಾಯಿತು. ಬ್ರಿಟನಿನಲ್ಲಿ ಈ ಶೈಲಿಗೆ ವಿಶೇಷವಾದ ಪುರಸ್ಕಾರ ದೊರೆಯಿತು. ಇಲ್ಲಿ ಜರ್ಮನ್ ಸ್ವಿಸ್ ಜನಾಂಗದವನಾದ ಹಾನ್ಸ್ ಹೋಲ್ಬ್ರಎನ್ ಕಿ ಎಂಬಾತ ಸೃಷ್ಟಿಸಿರುವ ಕಿರುಚಿತ್ರಗಳು ಜಗತ್ತಿನ ಕಲಾಕೃತಿಗಳಲ್ಲೆ ಶ್ರೇಸ್ಟವೆಂದು ಪರಿಗಣಿತವಾಗಿದೆ. ಹದಿನಾರನೆಯ ಶತಮಾನದಲ್ಲಿ ಬ್ರಿಟಿಶ್ ಜನಾಂಗದ ನಿಕೊಲಸ್ ಹಿಲಿಯರ್ಡ್ (1547-1619) ಕೂಡ ಉತ್ತಮ ಕಿರುಚಿತ್ರಗಾರ. ಮೂರನೆಯ ವಯಸ್ಸಿನಲ್ಲಿ ಈ ಕಲೆಯನ್ನು ಕೈವಶಮಾಡಿಕೊಂಡ ಈತ ಹಲವು ಶೈಲಿಗಳನ್ನು ಸೇರಿಸಿ ರಮ್ಯವಾದ ಅಲಂಕರಣಗಳಿಂದ ಕೂಡಿದ ಸಹಜವ್ಯಕ್ತಿ ಚಿತ್ರಗಳನ್ನಿ ಕಿರುಪ್ರಮಾಣಾದಲ್ಲಿ ಬಿಡಿಸಿದ್ದಾನೆ. ಎಲಿಜಿಬೆತ್ ರಾಣಿಯದೇ ಒಂದು ಕಿರುಚಿತ್ರವಿದೆ. ಹಿಲಿಯ್ರ್ಡನ ಶಿಷ್ಯ ಒಲಿವರ್ ಕೂಡ ಉತ್ತಮ ಕಿರುಚಿತ್ರ್ಕಾರ. ಮುಂದಿನ ತಲೆಮಾರಿನಲ್ಲಿ ಸ್ಯಾಮ್ಯುಅಲ್ ಕೂಪರ್ ಈ ಕಲೆಯನ್ನು.