ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-4-Part-2.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

250 ಕಿರುನಾಟಕ ತುಂಬ ಜನಪ್ರಿಯವನ್ನಾಗಿ ಮಾಡಿದ. ಹೀಗೆ ಉಜ್ವಲವಾಗಿ ಬೆಳೆದ ಕಲೆ ಸರ್ ವಿಲಿಯಂರಾಸ್ (1794-1860) ಎಂಬ ಕಲಾವಿದನ ಕಾಲದವರೆಗೂ ನಿಂತು, ಅನಂತರ ಕಳೆಗುಂದಿತು. ಛಾಯಾಚಿತ್ರದ ಉಗಮದಿಂದ ಕಿರುಚಿತ್ರಗಳಿಗೆ ಪ್ರಾಶಸ್ಕೃ ತಪ್ಪಿತು. ಕಿರುಚಿತ್ರಗಳನ್ನು ದಂತದ ಹಲಗೆಗಳ ಮೇಲೆ ಮೂಡಿಸುವುದು ಕಷ್ಟಸಾಧ್ಯವಾದ ಕಲೆ. ನುಣುಪಾದ ಮೈಮೇಲೆ ವರ್ಣಗಳು ನಿಲ್ಲುವುದಿಲ್ಲ; ನೀರಿನಲ್ಲಿ ಕಲೆಸಿದ ಬಣ್ಣಗಳು ಉಳಿಯುವಂತೆ ಮಾಡಲು ವಿಶೇಷವಾದ ವಿಧಾನವನ್ನು ಮೊಗಲ್ ಕಲಾವಿದರು ಅಜಂತ ಮೊದಲನಯ ಗುಹೆಯಲ್ಲಿನ ಚಿತ್ರಗಳು ಕಂಡುಹಿಡಿದು ಪ್ರಯೋಗ ಮಾಡಿದರು. ಇವರಿಂದಾಗಿ ದಂತ ಕಿರುಚಿತ್ರಗಳು ಹೆಚ್ಚು ಪ್ರಚಲಿತವಾದುವು. ಪಾಶ್ಚಾತ್ಯದೇಶದಲ್ಲಿ ಸು. 18ನೆಯ ಶತಮಾನದಲ್ಲಿ ಈ ಕಲೆಗೆ ಪುರಸ್ಕಾರ ದೊರೆಯಿತು. ಇಟಲಿದೇಶದ ಮಹಿಳೆ ರೋಸಲ್ಫಾ ಕೆರೀರಾ (1675-1757) ಈ ಕ್ಷೇತ್ರದಲ್ಲಿ ತುಂಬ ದುಡಿದಳು. ಹದಿನೆಂಟನೆಯ ಶತಮಾನದ ಪರಾರ್ಧದಲ್ಲಿ ಬ್ರಿಟನ್ ಯಕ್ಷ : ರೊವಾನ್‌ವೇಲಿ, ಅನುರಾಧಪುರ (ಶ್ರೀಲಂಕ) ದೇಶದ ಉತ್ತಮ ಕಲೆಗಾರರಾಗಿದ್ದ ಜಾನ್ ಸ್ಮಾರ್ಟ್(1741-1811), ಜಾರ್ಜ್ ಎಂಜಲ್ ಹಾರ್ಟ್(1750-1829), ರಿಚರ್ಡ್ ಕೊಜ್ಜೆ (1742-1821) ಮುಂತಾದವರು ಈ ದಂತಕಿರುಚಿತ್ರಕಲೆಯನ್ನು ನಿರ್ಮಿಸಿದ. ಭಾರತದಲ್ಲಿ ಬಹುಕಾಲದಿಂದ ಇರುವ ಈ ಕಲೆಯನ್ನು ಅಭ್ಯಾಸಮಾಡಿ ಸಿದ್ಧಿಸಿಕೊಂಡವರೆಂದರೆ ಕೆ. ವೆಂಕಟಪ್ಪ. ಇವರು ದಂತದ ಸಣ್ಣಹಲಗೆಗಳ ಮೇಲೆ ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ತಮ್ಮ ಗುರು ಅವನೀಂದ್ರನಾಥಠಾಕೂರರ ಚಿತ್ರಗಳನ್ನು ಅತ್ಯಂತ ಸುಂದರವಾಗಿ, ಅದ್ಭುತವರ್ಣ ವಿನ್ಯಾಸದಲ್ಲಿ ಬಿಡಿಸಿದ್ದಾರೆ. ಪ್ರಾಚೀನಕಾಲದ ಸಂಸ್ಕೃತಿಗಳಿಗೆ ಸೇರಿದ ಮಣ್ಣಿನ ಕಲಶಗಳ ಮೇಲೆ ಅನೇಕ ದೇಶಗಳವರು ಕಿರುಚಿತ್ರಗಳನ್ನು ಮೂಡಿಸುತ್ತಿದ್ದರು. ಭಾರತದ ಪ್ರಾಚೀನ ಸಂಸ್ಕೃತಿಗಳಿಗೆ ಸೇರಿದ ಮಣ್ಣುಪಾತ್ರೆಗಳ ಮೇಲೆ ಇಂಥ ವರ್ಣಚಿತ್ರ ಅನೇಕವಾಗಿವೆ. ಮಧ್ಯಯುಗದಲ್ಲಿ ಚೀನ, ಜಪಾನ್‌ಗಳಲ್ಲಿ ಕುಡಿಯುವ ಬಟ್ಟಲುಗಳ ಮೇಲೆ, ಬಡಿಸುವ ತಟ್ಟೆಗಳ ಮೇಲೆ, ಹೂವಿಡುವ ಕೂಜಗಳ ಮೇಲೆ ಚಿತ್ರಗಳನ್ನು ಬಿಡಿಸುವ ಕಲೆಯನ್ನು ಮುಗಿಲು ಮುಟ್ಟಿಸಿದರು. ಇದಕ್ಕಾಗಿಯೇ ಮನ್ನು ಹದಮಾಡಿಕೊಳ್ಳುತ್ತಿದ್ದರು, ಈಗ ಚೀನ ಮಣ್ಣು ಎಂದು ಪ್ರಖ್ಯಾತವಾಗಿರುವ ಪದಾರ್ಥದ ಮೇಲೆ ಚಿತ್ರಗಳನ್ನು ಬಿಡಿಸದಿದ್ದರೆ ಅದೊಂದು ನ್ಯೂನತೆಯೆನ್ನುವಷ್ಟು ಈ ಮಣ್ಣಿಗೂ ಚಿತ್ರಣಕ್ಕೂ ಬಾಂಧವ್ಯ ಬೆಳೆಯಿತು. ಹದಿನೇಳನೆಯ ಶತಮಾನದಿಂದಾಚೆ ಲೋಹಗಳ ಮೇಲೂ ಕಿರು ಚಿತ್ರಗಳನ್ನು ಮೂಡಿಸುವ ಶೈಲಿ ಆರಂಭವಾಯಿತು. ಎನ್ಯಾಮಲ್ ಕಿರುಚಿತ್ರಗಳು ಪ್ರಚಲಿತವಾದವು. ಫ್ರೆಂಚ್ ಕಲಾವಿದ ಜೆ. ಪಿಟಿಟೊ (1607-91) ಮತ್ತು ಜರ್ಮನ್ ದೇಶೀಯನಾದ ಸಿ.ಎಫ್. ಸಿಂಕೆ (1683-1767) ಇವರು ವಿಶ್ವವಿಖ್ಯಾತರಾದ ಎನ್ಯಾಮಲ್ ಕಿರುಚಿತ್ರಗಾರರು. 1770-1840ರ ವರೆಗೆ ಐರೋಪ್ಯ ದೇಶಗಳಲ್ಲಿ ಕಿರುಪ್ರಮಾಣದ ಛಾಯಾಚಿತ್ರಗಳೂ (ಮೀನಿಯೇಚರ್ ಸಿಲ್ಯೂಟ್ಸ್) ತುಂಬ ಜನಪ್ರಿಯವಾಗಿದ್ದವು. ಇವನ್ನು ಬಡವರ ಕಿರುಚಿತ್ರಗಳೆಂದು ಬಣ್ಣಿಸುತ್ತಿದ್ದರು. ಕಾರಣವೇನೆಂದರೆ ಬಲು ಬೇಗ, ಕಡಿಮೆ ಬೆಲೆಯಲ್ಲಿ ಬೀದಿಯಲ್ಲೇ ಕಲಾವಿದರು ಈ ಚಿತ್ರಗಳನ್ನು ಬಿಡಿಸಿಕೊಡುತ್ತಿದ್ದರು. ಫ್ರೆಂಚ್ ಸರ್ಕಾರದ ಆರ್ಥಿಕ ಮಂತ್ರಿಯಾಗಿದ್ದ ಡೀ ಸಿಲ್ಯೂಟ್ಸ್ ತುಂಬ ಜಿಪುಣನಾಗಿದ್ದು ಇಂಥ ಚಿತ್ರಗಳನ್ನೇ ಮನೆ ತುಂಬ ಅಲಂಕಾರಕ್ಕಾಗಿ ಇಟ್ಟಿದ್ದುದರಿಂದ ಈ ಚಿತ್ರ ಶೈಲಿಗೆ ಅವನ ಹೆಸರೇ ಬಂದಿತು. ಹತ್ತೊಂಬತ್ತನೆಯ ಶತಮಾನದ ಆಗಸ್ಟಿನ್ ಎಡ್ವುಆರ್ಟ್ ಈ ಛಾಯಾ ಕಿರುಚಿತ್ರ ಕ್ಷೇತ್ರದಲ್ಲಿ ದೊಡ್ಡ ಕಲೆಗಾರನಾಗಿದ್ದ. ಪೋಟೋಗ್ರಫಿ ಬಳಕೆಗೆ ಬಂದಾಗ ಈ ಛಾಯಾಚಿತ್ರಗಳು ಹಿಂದುಳಿದವು. ವ್ಯಕ್ತಿಯನ್ನು ಅಲೆಯಲ್ಲಿ ಸ್ಥಿರಗೊಳಿಸಲೂ ಕಿದಂತಿಗಳನ್ನು ಬರೆಯುವರೆಂದ ಮೇಲೆ ವ್ಯಕ್ತಿನಿರ್ದೆಶಕ್ಕಿಂತ ಹಿನ್ನೆಲೆಯಲ್ಲಿರುವ ಮನೋಧರ್ಮ ಪ್ರಮುಖವಾಗುತ್ತದೆ. ವ್ಯಕ್ತಿಯ ಬಾಹ್ಯ ಸ್ವರೂಪವೇ ಮುಖ್ಯವೆಂದು ನಮ್ಮವರು ಎಣಿಸಲಿಲ್ಲ. ಚಿತ್ರಣದಲ್ಲಿ ಮೂಡಿ ಬರಬೇಕಾದುದು ಆ ವ್ಯಕ್ತಿಯ ಸ್ವಭಾವ, ಸಂಕೇತ, ಪಾತ್ರ ನಿದರ್ಶನಕ್ಕೆ ಜೈನರ ಗ್ರಂಥವಾದ ಕಲ್ಪಸೂತ್ರದ ಪ್ರತಿಗಳಲ್ಲಿ ಹಲವಾರು ಜೈನಮುನಿಗಳ, ಸಾಧುಗಳ ಕಿರುಚಿತ್ರಗಳಿವೆ, ರಾಜರ ಚಿತ್ರಣಗಳೂ ಇವೆ. ಸ್ಕೂಲ ವಿವರಗಳಲ್ಲಿ ಎಲ್ಲ ಮುನಿಗಳೂ ಒಂದೇ ತೆರನಾಗಿದ್ದಾರೆ, ಎಲ್ಲ ರಾಜರೂ ಒಂದೇ ತೆರನಾಗಿದ್ದಾರೆ. ಮುಖದ ಮಾಟ. ಮೈಯ ರೇಖೆಯಿಂದ ವ್ಯಕ್ತಿಯನ್ನು ನಿರೂಪಿಸುವ ಸಂಕಲ್ಪ ಇಲ್ಲಿ ಇಲ್ಲ; ಸಂದರ್ಭವನ್ನು ಅರಿತು ಅದರ ಬಲದಿಂದ ಆಯಾಯಾ ವ್ಯಕ್ತಿಗಳನ್ನು ನಿರ್ದೇಶಿಸಬೇಕೆಂಬ ಆಗ್ರಹ ಇಲ್ಲಿ ಕಾಣುತ್ತದೆ. ಕಿರುಚಿತ್ರಣ ಸಹಜಪ್ರತಿಕೃತಿಗಳಾಗಿರಬೇಕೆಂಬ ದೃಷ್ಟಿ ಅರ್ವಾಚೀನವಾದುದು. ಈಗ ಕಿರುಚಿತ್ರವೆಂದರೆ ಯಥಾರ್ಥವಾದ ಸ್ವರೂಪ ನಿರೂಪಣೆಯೆಂದೇ ಅರ್ಥ. ಇದೇ ಕಾರಣದಿಂದ ಛಾಯಾಚಿತ್ರ ಕಲೆಯಾಗಿ ಪ್ರಬುದ್ಧವಾದೊಡನೆ ಕಿರುಚಿತ್ರಗಳ ಪ್ರಚಾರ ಕುಗ್ಗಿತು. ಪರ್ಷಿಯನ್ ಗ್ರಂಥಗಳಲ್ಲಿ ವ್ಯಕ್ತಿಸಿದ ಹವ್ಯಾಸವಿಲ್ಲದಿದ್ದುದರಿಂದ ಅಕ್ಷದ ವಿನ್ಯಾಸದೊಂದಿಗೆ (ಕ್ಯಾಲಿಗ್ರಫಿ) ಲತಾವಿನ್ಯಾಸ, ಪುಷ್ಪವಿನ್ಯಾಸಗಳನ್ನೂ ಮೂಡಿಸುತ್ತಿದ್ದರು. ಇಂಥ ಅಲಂಕರಣಗಳಲ್ಲಿ ಕೂಡ ಪ್ರಕೃತಿ ಸಹಜವಾಗಿರಬೇಕೆಂಬ ನಿಷ್ಠೆ ಕಾಣಿಸುವುದಿಲ್ಲ. ಇಲ್ಲಿ ಕಲ್ಪನಾತಂತ್ರದ ವಿನ್ಯಾಸಗಳೇ ಹೆಚ್ಚು, ಸೂಕ್ಷ್ಮ ಪರಿಧಿಯೊಳಗೆ ವ್ಯಕ್ತಿಯನ್ನೂ ಸಂದರ್ಭವನ್ನೂ ನಿರೂಪಿಸುವುದು ಸುಲಭ ಸಾಧ್ಯವಲ್ಲ ರೇಖೆಗಳಲ್ಲಿಯೇ ಸ್ವಭಾವವನ್ನು ನಿರ್ದೆಶಿಸುವುದು ಕಷ್ಟ ವಿವರಗಳನ್ನು ನೈಜವಾಗಿ ಬಿಡಿಸಬೇಕೆಂದರೆ ಅವಕಾಶವಿರಬೇಕು. ಈ ಎಲ್ಲ ಕಾರಣಗಳಿಂದಾಗಿ ಕಿರುಚಿತ್ರಗಳಲ್ಲಿ ಘನದೃಷ್ಟಿಯಿರದೆ ಸಂಕೇತ ಪ್ರಮುಖವಾದ ದೃಷ್ಟಿ ಕಾಣಬರುತ್ತದೆ. ಇದಕ್ಕೆ ಅತ್ಯುತ್ತಮ ನಿದರ್ಶನವೆಂದರೆ ಟಿಬೆಟನ್ ಗ್ರಂಥಗಳಲ್ಲಿ ಮತ್ತು ಸ್ಟೋರಿ ಚಿತ್ರಗಳಲ್ಲಿ ಪ್ರತೀಕ್ಷೆ ಸಮುತ್ಪಾದತತ್ತ್ವದ ಐಐಧ ಪ್ರಕಾರಗಳನ್ನು ಚಿತ್ರಿಸಿರುವ ಬಗೆ, ಅವರ ಮತ್ತು ಚೀನದೇಶದ ಮಂಡಲ ನಿರೂಪಣೆಗಳಲ್ಲಿಯೂ ಕಿರುಚಿತ್ರಗಳು ಇವೆ. ಇತ್ತೀಚೆಗೆ ಮೈಸೂರಿನ ರಘುಪತಿಭಟ್, ಶ್ರೀಹರಿ ಮತ್ತು ಮೈಸೂರಿನ ಮಹಿಳೆಯೊಬ್ಬರು ಈ ಕಲೆಯಲ್ಲಿ ತಮ್ಮ ಪ್ರತಿಫಲವನ್ನು ತೋರಿದ್ದಾರೆ. (ಎಸ್.ಕೆ.ಆರ್.) ಕಿರುನಾಟಕ : ಕಿರುನಾಟಕವೆಂದರೆ ನಾಟಕಕ್ಕಿಂತ ಚಿಕ್ಕದು; ಆದರೆ ಏಕಾಂಕ ನಾಟಕಕ್ಕಿಂತ ದೊಡ್ಡದು (ಷಾರ್ಟ್ ಪ್ಲೇ), ಏಕಾಂಕ ನಾಟಕವು ಕಿರುನಾಟಕವು ಹುಟ್ಟಿ ಬೆಳೆದು ರೂಢಿಗೆ ಬಂದ ಮೇಲೆ ಹಿಂದಿನಿಂದಲೂ ಇದ್ದ ನಾಟಕಕ್ಕೆ ಹೊಸದಾಗಿ ಪೂರ್ತಿ ಉದ್ದದ ನಾಟಕ (ಫುಲ್‌ಲೆಂತ್‌ ಪ್ಲೇ) ಅಥವಾ ಪೂರ್ಣ ನಾಟಕ ಎಂಬ ಅಂಕಿತವನ್ನು ಅಂಟಿಸುವ ವಿದ್ಯಮಾನ ನಡೆಯಿತು. ಆದರೆ ಹಾಗೆ ಮಾಡುವುದಕ್ಕೆ ಯಾವ ಅಗತ್ಯವೂ ಇರಲಿಲ್ಲ. ಪ್ರಾಚೀನರ ಶಿಷ್ಟ ನಾಟಕವಾಗಲಿ ಹೊಸ ಹುಟ್ಟಿನವರ ರೊಮ್ಯಾಂಟಿಕ್ ನಾಟಕವಾಗಲಿ