ಪುಟ:Mysore-University-Encyclopaedia-Vol-4-Part-2.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸೂತಿ

ವಿವಿಧ ಜನಾಗಗಳಲ್ಲಿ ಕಸೂತಿ ಕೆಲಸ ರೀತಿಗಳಲ್ಲಿ ಪ್ರಾರರಭವಾದುವು,ಉತ್ತರ ಅಮೆರಿಕದ ಇಂಡಿಯನರು ಗರಿಯಿಂದ ಕುಶಲಕಲೆಗಾರಿಕೆ ಮಾಡುತಿದ್ದರು.ಆ ಪ್ರಕಾರ ಮೂಲನಿವಾಸಿಗಳು ನಾರುಬಟ್ಟೀಗಳು ಮೇಲೆ ಬಗೆಬಗೆಯಾದ ಚಿತ್ರಗಳನು ಹೆಣೆಯುತ್ತೀದ್ದರು.ಪ್ರಪಂಚದ ಬೇರೆಬೇರೆ ಭಾಗಗಳಿಲಿ ಆಯಾ ಸಂಸ್ಕತಿ ಮತ್ತು ಅಗತ್ಯವಸ್ತುಗಳ ಸ್ಯ್ಯೌಲಭ್ಯಳನಾಧರಿಸಿ ಕಸೂತಿ ಕಲೆಯ ವಿವಿಧ ನಮೂನೆಗಳನು ಕಾಣಬಹುದು. ಭಾರತದಲ್ಲಿ:ಭಾರತದಲ್ಲಿ ಈ ಕಲೆಗೆ ಸಂಬಂಧಿಸಿದ ದೀಘನಾದ ಇತಿಹಾಸವನೇ ಕಾಣಬಹುದು.ಮೊಹೆಂಜೊದಾರೊದಲ್ಲಿ ಪ್ರಶ.ಪೂ.೩೦೦೦ ದ್ದೆನ್ನಲಾದ ಕಂಚಿನ ಸೂಜಿಗಳನ್ನು ಬಹುಶಃ ಕಸೂತಿಗಾಗಿಯೇ ಉಪಯೋಗಿಸುತ್ತಿದ್ದಿರಬಹುದು.ಸಿಂಧೂನದಿಯ ನಾಗರಿಕತೆ ಹಾಗೂ ತತ್ತ್ಕಾಲೀನ ನಾಗರಿಕತೆಗಳ ಶೋಧನೆಯಲ್ಲಿ ಸಿಕ್ಕಿರುವ ಆನೇಕ ಉಡುಪುಗಳಲ್ಲಿ ಉತ್ಕ‍‍ವಾದ ಕಸೂತಿಯ ನಮೂನೆಗಳಿವೆ.ಪ್ರಚೀನ ಭಾರತದ ಹಳ್ಳಿಹಳ್ಳಿಯಲ್ಲು ಈ ಪ್ರಚಲಿತವಾಗಿತ್ತು.ವಿವಿಧ ಪ್ರಾಂತ್ಯಗಳ ಜನ ವಿವಿಧ ರೀತಿಯ ಕಸೂತಿ ಮಾದರಿಗಳಿಗೆ ಮನಸೋತಿದ್ಧರು.ಚಿಕ್ಕಚಿಕ್ಕ ಕನ್ನಡಿಗಳನ್ನು ಆಳನಡಿಸಿ ತಂತಿಯಾಕಾರದ ವಸ್ತುಗಳಿಂದ ಕಸೂತಿ ಮಾಡುತ್ತಿದ್ದ ಕಚ್ ಮತ್ತು ಕಾಟೀಯಾನಾಡಗಳಲ್ಲಿ ದೊರಕಿರುವ ಮಾದರಿಗಳು ಕಣ್ಣು ಸೆಳೆಯುವಂಥವಾಗಿದ್ದುವು.ಹದಿನಾರನೆಯ ಶತಮಾನದಿಂದೀಚೆಗೆ ಪಶ್ರಿಯನ್ನರ ಪ್ರಭವ ಭಾರತದ ಕಲೆ ಮತ್ತು ಜನಜೀವನದ ಮೇಲೆ ಬಿದ್ದಿತು. ಕಸೂತಿ ಕಲೆಯೂ ಈ ಪ್ರಭಾವಕ್ಕೆಹೊರತಾದುದೇನಾಗಿರಲಿಲ್ಲ. ಕಚ್ ಮತ್ತು ಕಾಠಿಯಾವಾಡದ ಕಸೂತಿಗಳಲ್ಲೂ ಇದು ಎದ್ದುಕಾಣುತ್ತದೆ.

ಋಗ್ವೇದದಲ್ಲಿ ಬರುವ ಹಿರಣ್ಯಪೇಶಸ್ ಎಂಬ ಶಬ್ದವನ್ನಾಧರಿಸಿ, ಆ ಕಾಲದಲ್ಲೂ ಭಾರತದಲ್ಲಿ ಚಿನ್ನದಕಸೂತಿಯಿತ್ತೆಂಬ ನಿರ್ಣಯಕ್ಕೆ ಬರಬಹುದು. ಪ್ರ. ಶ. ಪೂ. ೬ನೆಯ ಶತಮಾನದಲ್ಲಿಯ ಭಾರತದ ವಾಣಿಜ್ಯವಸ್ತುಗಳ ಪೈಕಿ ಕಸೂತಿ ಮಾಡಿದ ವಸ್ತ್ರಗಳೂ ಇತರ ಪದಾರ್ಥಗಳೂ ವಿದೇಶದಲ್ಲಿ ಬಹಳವಾಗಿ ಜನಪ್ರಿಯವಾಗಿದ್ದುವೆಂಬ ಆಂಶ ವಿದಿತವಾಗುತ್ತದೆ ಪ್ರ. ಶ. ಪೂ. ೩೨೦ರ ಸುಮಾರಿನಲ್ಲಿ ಭಾರತಕ್ಕೆ ಭೇಟಿಕೊಟ್ಟ ಮೆಗಾಸ್ತನೀಸ್ ಭಾರತದಲ್ಲಿ ಕಸೂತಿಯಲ್ಲಿ ಅನೇಕ ರೀತಿಯ ಚಿನ್ನದ ಎಳೆಗಳನ್ನೂ ಉಪಯೋಗಿಸುತ್ತಿದ್ದರು ಎಂಬ ಹೇಳಿದ್ದಾನೆ. ಗುಪ್ತರ ಕಾಲ ಭಾರತದ ಸುವರ್ಣಯುಗವೆಂದೆನಿಸಿಕೊಂಡಿದೆಯಲ್ಲಿದ್ದ ಅಪ್ರತಿಮ ಕಸೂತಿಕಲೆಯ ಬಣ್ಣನೆ ಕಾಳಿದಾಸನ ಕಾವ್ಯಗಳಲ್ಲಿ ಅಲ್ಲಲ್ಲಿ ಮೂಡಿಬರುತ್ತದೆ. ಬಾಣಭಟ್ಟನ ರಚನೆಗಳಲ್ಲೂ ಭಾರತದ ಗತಕಲಾವೈಭವವನ್ನು ಹಾಡಿ ಹೊಗಳಲಾಗಿದೆ. ಮೊಗಲರ ಕಾಲದಲ್ಲೂಕಸೂತಿಕಲೆಗೆ ಸಾಕಷ್ಟು ಪ್ರೋತ್ಸಾಹವಿತ್ತು. ೧೭ನೆಯ ಮತ್ತು ೧೮ ನೆಯ ಶತಮಾನಗಳಲ್ಲಿ ಕಸೂತಿ ಮಾಡಿದ ಉತ್ತಮ ವಸ್ತ್ರಗಳು ಭಾರತದಿಂದ ವಿದೇಶಗಳಿಗೆ ಭಾರಿ ಪ್ರಮಾಣದಲ್ಲಿ ಹೋಗುತ್ತಿದ್ದುವು. ಯುರೋಪ್ ಮತ್ತು ಪಶ್ಚಿಮ ಏಷ್ಯಗಳಲ್ಲಿ ಭಾರತದ ವಸ್ತುಗಳಿಗೆ ಬಹಳವಾಗಿ ಬೇಡಿಕೆಯಿತ್ತು.

ಭಾರತದ ಹಳ್ಳಿಗಲ್ಲೂ ಈ ಕಲೆ ವಿಶೇಷವಾಗಿತ್ತು . ಪಂಚಾಬಿನ ಹೂ ಕಕಸೂತಿಯೂ ಸಿಂಧುದೇಶ ಕಚ್ ಮತ್ತು ಕಾಠಿಯಾವಾಡಗಳ ಸರಪಳಿಯ ಮತ್ತು ಕಸೂತಿಯೂ ಬಂಗಾಳದ ಕಾಂಥೆ ಮಾದರಿಯೂ ಭಾರತದ ಜಾನಪದ ಕೊಡುಗೆಗಳು. ಲಖನೌವಿನ ಚಿಕನ್ ಕಾರಿ ಮಾದರಿ ಮತ್ತು ದೆಹಲಿ, ಕಾಶಿ, ಆಗ್ರ ,ಸೂರತ್ ಮತ್ತು ಹೈದರಾಬಾದ್ ಗಳಲ್ಲಿಯ ಕಾರ್ಚೋಟಿ ಕಸೂತಿ ಶ್ರೀಮಂತರ ಕಲಾಭಿರುಚಿಯ ನಿರ್ದೆಶನಗಳಾಗಿದ್ದವು. ಇವುಗಳಲ್ಲಿ ದಕ್ಷತೆ ಮತ್ತು ನೈಪುಣ್ಯ ಬಹಳ ವಾಗಿದ್ದು,ಹಳ್ಳಿಗರ ಹಾಗು ವನವಾಸಿಗಳ ಕಸೂತಿಯಲ್ಲಿ ಸೌಂದರ್ಯಾಭಿವ್ಯಕ್ತಿ ಬಹಳ ಸರಳವಾಗಿತ್ತು.

ಭಾರತದ ಕಸೂತಿಯ ಮೇಲೆ ವಿದೇಶಿಯರ ಪ್ರಭಾವವು ಅಲ್ಪವಲ್ಲ ಕಾಶ್ಮೀರದ ಕಸೂತಿ ಟಿಬೆಟಿನ ಮೂಲಕ ಚೀನಾದ ಕಸೂತಿಯಿಂದ ಪ್ರಭಾವಿತವಾಯಿತು.ಇದೇ ರೀತಿಯಲ್ಲಿ ಪಂಜಾಬಿನ ಹೂ ಕಸೂತಿ ಬಲೂಚಿಸ್ತಾನದಿಂದ ಪ್ರಭಾವಿತವಾದುದಾಗಿಯೂ ಸಿಂಧೂದೇಶ ಕಚ್ ಕಾಠಿಯಾವಾಡಗಳ ಶೈಲಿಗಳು ಸ್ಪೇನ್ ಜರ್ಮನಿಗಳಿಂದ ಪ್ರಭಾವಗೊಂಡಿರುವುದಾಗಿಯೂ ತೋರುತ್ತದೆ. ಕರ್ಣಾಟಕ ಮತ್ತು ಬಿಹಾರಗಳ ಕಸೂತಿಯ ಮೇಲೆ ಸ್ಲಾವ್ ದೇಶಗಳ ಕಸೂತಿಯ ಪ್ರಭಾವವಿರುವುದಾಗಿ ಕಂಡುಬರುತ್ತದೆ. ಮೊಗಲರ ಕಾಲದಿಂದ ಮೊದಲುಗೊಂಡು ಇರಾನಿನ ಪ್ರಭಾವ ಭಾರತದ ಕಸೂತಿಕಲೆಯ ಮೇಲೆ ಬೀಳುತ್ತಿಲೇ ಇದೆ. ಆದರ, ಈ ಎಲ್ಲ ಶೈಲಿಗಳನ್ನೂ ಒಟ್ಟಾಗಿ ಮೈಗೂಡಿಸಿಕೂಂಡು ಭಾರತ ತನ್ನದೇ ಆದ ವಿಶಿಷ್ಟ ರೀತಿಯ ಶೈಲಿಗಳನ್ನು ರೂಪಿಸಿಕೂಂಡಿರುವುದನ್ನು ಗಮನಿಸಬೇಕು.

ಕಾಲ , ದೇಶ ಹಾಗೂ ಪ್ರಭಾವಗಳಿಗನುಗುಣವಾಗಿ ಭಾರತದಲ್ಲಿಯ ವಿವಿಧ ಪ್ರಾಂತ್ಯಗಳಲ್ಲಿ ಕಸೂತಿಯ ವಿವಿಧ ನಮೂನೆಗಳಿವೆ. ಕಾಶ್ಮೀರದ ಕಸೂತಿಯಲ್ಲಿ ಸೋಜನಕಾರಿ, ಗಬ್ಬಾ ಮತ್ತು ಸರಪಳಿ ಕಸೂತಿಗಳು ಮುಖ್ಯವಾದವು. ಕಾಶ್ಮೀರದ ಶಾಲುಗಳು ಮೇಲೆ ಕಂಡುಬರುವ ಹೂಬಳ್ಳಿಗಳು, ಪಕ್ಷಿಗಳು ಮತ್ತು ಮನುಷ್ಯಾಕೃತಿಗಳು ಬಹು ಸೂಕ್ಷ್ಮವಾಗಿ ಮಾಡಿದ ಸೋಜನಕಾರಿ ಮಾದರಿಗಳು. ಬಣ್ಣಬಣ್ಣದ ಪರದೆಗಳು , ಪೀಠೋಪಕರಣಗಳು ಮತ್ತು ಹಾಸಿಗೆ ಬಟ್ಟೆಗಳ ಮೇಲೆ ಗಬ್ಬಾ ಮಾದರಿಯ ಕಸೂತಿಯನ್ನು ಬಳಸಲಾಗುತ್ತದೆ.ಪಂಜಾಬಿನ ಹೂ ಕಸೂತಿಯಲ್ಲಿ ಹತ್ತಿಯ ಬಟ್ಟೆಗಳು ಮತ್ತು ಹೊದಿಕೆಗಳ ಮೇಲೆ ಹೂವಿರುವ ಬಳ್ಳಿಗಳನ್ನು ಹೊಲಿಯುತ್ತಾರೆ. ಈ ಕೆಲಸವನ್ನು ಚಾಟರು ವಿಶೇಷವಾಗಿ ಮಾಡುತ್ತಾರೆ. ಇವುಗಳಲ್ಲೂ ಮೂರು ವಿಧಾನಗಳಿವೆ: ಫುಲ್ ಕಾರಿ ಮಾದರಿಯಲ್ಲಿ ಬಳ್ಳಿಗಳು ದೂರದೂರವಾಗಿರುತ್ತವೆ;ಬಾಗ್ ಮಾದರಿಯಲ್ಲಿ ಎಲ್ಲ ಸ್ಥಳವನ್ನೂ ಜ್ಯಾಮಿತಿಯ ಆಕಾರಗಳಿಂದ ತುಂಬಲಾಗುತ್ತದೆ;ಜೋಪ್ ಮಾದರಿಯಲ್ಲಿ ಅಂಚಿನಲ್ಲೇ ಕೆಲಸ ಮಾಡಲಾಗುತ್ತದೆ. ಪಂಜಾಬಿನಲ್ಲಿ ಫುಲ್ ಕಾರಿ ಕಸೂತಿ ಕಲೆ ತಾಯಿಯಿಂದ ಮಗಳಿಗೆ ಪರಂಪರೆಯಾಗಿ ಮುಂದುವರಿಯುತ್ತದೆ. ಕಚ್ ಮತ್ತು ಕಾಠಿಯಾವಾಡಗಳ ಶೈಲಿಗಳಲ್ಲಿ ವ್ಯತ್ಯಾಸ ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಈ ಕಲೆಯನ್ನು ಕನಬಿ ಅಥವಾ ಭರತ್ ಎಂದು ಕರೆಯಲಾಗುತ್ತದೆ. ಸಾಟಿನ್, ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ಮೇಲೆ ಈ ಕಸೂತಿಯನ್ನು ಮಾಡಿ ಕನ್ನಡಿಯ ಚೂರುಗಳನ್ನು ತುಂಬುತ್ತಾರೆ. ಬಿಳಿ, ಕೇಸರಿ, ಕಪ್ಪು ಅಥವಾ ಕೆಂಪು ಹಿನ್ನಲೆಗಳಲ್ಲಿ ಇವು ನಯನಮನೋಹರವಾಗಿ ಕಾಣುತ್ತವೆ.ಕಾಠಿಯಾವಾಡದ ಶೈಲಿ ಕಚ್ಚಿನ ಶೈಲಿಗಿಂತ ಅಧಿಕ ಸ್ಥೂಲವಾದುದು. ಉತ್ತರಪ್ರದೇಶದಲ್ಲಿ ಚಿಕನ್ ಕಾರಿ ಎಂದು ಕರೆಯುವ ಕಸೂತಿ ಕಲೆ ಲಖನೌ, ರಾಮಪುರ ಮತ್ತು ಬನಾರಸ್ ಗಳಲ್ಲಿ ಅಧಿಕವಾಗಿದೆ. ಇಲ್ಲಿ ಅಂಗಿ, ಟೋಪಿ, ಲಂಗ, ಸೀರೆಗಳೇ ಮೊದಲಾದವುಗಳ ಮೇಲೆ ಬಹಳವಾಗಿ ಬಿಳಿಯ ದಾರದಿಂದ ಕಸೂತಿ ಮಾಡುತ್ತಾರೆ. ಮಣಿಪುರದ ಸ್ತ್ರೀಯರು ಮಾಡುವ ರೇಷ್ಮೆ ಕಸೂತಿ ತುಂಬ ಆಕರ್ಷಕವಾಗಿರುತ್ತದೆ. ಶಾಮಿಯಾನ, ಕುದುರೆ ಆನೆಗಳ ಮೇಲಿನ ವಸ್ತ್ರಗಳು,ಉಡುಪು,ಪಾದರಕ್ಷೆ ಮೊದಲಾದ್ ವಸ್ತುಗಳ ಮೇಲೆ ಕಾರ್ ಚೋಟ ಶೈಲಿಯಲ್ಲಿ ಕಲಾಬತು, ಸಲ್ ಮಾ, ಬಾದ್ ಲಾ ಮೊದಲಾದವುಗಳ ಕಸೂತಿ ಮಾಡುತ್ತಾರೆ. ಕಾರ್ ಚೋಟಿಕೆಲಸ ಮುಖ್ಯವಾಗಿ ದೆಹಲಿ.ಲಖನೌ, ಹೈದರಾಬಾದ್, ಬನಾರಸ್(ವಾರಣಾಸಿ), ಪಾಟಲಿಪುತ್ರ ಮತ್ತು ಸೂರತ್ ಗಳಲ್ಲಿ ಪ್ರಚುರವಾಗಿದೆ. ಇವೇ ಅಲ್ಲದೆ ಬಂಗಾಳದ ಕಾಂಥಾ,ಬಿಹಾರದ ದೋಮುಹಾ ಮುಂತಾದ ಶೈಲಿಗಳು ಮತ್ತು ಬಿಹಾರ, ಒರಿಸ್ಸ ಮುಂತಾದ ರಾಜ್ಯಗಳಲ್ಲಿಯ ಜಾಳಿಗೆ ಕಸೂತಿ(ಆಪ್ಲಿಕೇ)ಮಹತ್ವಪೋರ್ಣವಾದವು. ಪಂಜಾಬಿನ ಸ್ತ್ರೀಯರು ಸಾಮಾನ್ಯವಾಗಿ ಧರಿಸುತ್ತಿದ್ದ ಫುಲ್ ಕಾರಿ ಕಸೂತಿಗಳಲ್ಲಿ ಮೊಗಲರ ಪ್ರಭಾನ ಬೀಳುವ ಮೊದಲು ಈ ಕಲೆಯ ಮಾದರಿ ಹೇಗಿತ್ತೆಂಬುದನ್ನು ಕಾಣಬಹುದು. ಇವುಗಳಿಗೆ ವಿಶಿಷ್ಟ ಜ್ಯಾಮಿತಿಯ ಆಕಾರಗಳಿರುತ್ತಿದ್ದವು