ಪುಟ:Mysore-University-Encyclopaedia-Vol-4-Part-2.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರು ನಿದರ್ಶನ ಸಿಧ್ಧಾಂತ ಕಡಿಮೆಯಾಗಿಯೂ ಆವೇಕ್ಷಿತ ಬೆಲೆ ಇದ್ದರೆ ಆಗ ಅದು ಶೇ.೫ ಮಟ್ಟದಲ್ಲಿ ಆರ್ಥವತ್ತಾಗಿದ್ದು ಶೇ.೧ ಮಟ್ಟದಲ್ಲಿ ಅರ್ಥವತ್ತಾಗಿರುವುದಿಲ್ಲ.ಶೇ.೧ ಬೆಲೆಗಿಂತ ಹೆಚ್ಚಾಗಿದ್ದರೆ ಆದು ಹೆಚ್ಚು ಅರ್ಥವತ್ತಾಗಿದೆ. ಆರ್ಥವತ್ತಾದ ಎಫ಼್ ನಿಷ್ಪತ್ತಿಯ ಬೆಲೆ ದೊರಕಿತೆಂದರೆ ಆಧಾರಕಲ್ಪನೆ ಸ್ವೀಕಾರಯೋಗ್ಯವಲ್ಲ ಎಂದು ತೀರ್ಮಾನಿಸುತ್ತೇವೆ.ಈ ಪರೀಕ್ಷಣ ಬಲು ಮುಖ್ಯವಾದದ್ದು.ವಿಚಲನೆ ವಿಶ್ಲೇಷಣದ ಮೂಲಕ ಪ್ರಯೋಗಗಳ ಫಲಿತಾಂಶಗಳನ್ನು ಅರ್ಥ ನಿಷ್ಪನ್ನ ಮಾಡುವಲ್ಲಿ ಈ ಪರೀಕ್ಷಣವನ್ನು ಸರ್ವೇಸಾಮಾನ್ಯವಾಗಿ ಬಳಸುತ್ತೇವೆ. ದೃಷ್ಪಾಂತಕ್ಕೆ,ಗಾತ್ರ ೧೦ ಮತ್ತು ೮ ಇರುವ ನಿದರ್ಶನಗಳಿಂದ ದೊರೆವ ವಿಚಲನೆಯ ಅಂದಾಜುಗಳು ೬.೪ ಮತ್ತು ೩.೮ ಎಂದಿರಲಿ.ಆಗ ವಿ೧=೯,ವಿ೨=೭ ಮತ್ತು ಎಫ಼್=೬.೪/೩.೬=೨.೩೩ ಕೋಷ್ಟಕದಿಂದ ೫% ಮಟ್ಟದಲ್ಲಿ ೯ ಮತ್ತು ೭ ಸ್ವಾತಂತ್ರ್ಯಾಂಕಗಳಿಗೆ ಸರಿಯಾದ ಬೆಲೆ ೩.೬೮; ಮತ್ತು ಶೇ.೧ ಮಟ್ಟದಲ್ಲಿ ೬.೭೧ ಆದ್ದರಿಂದ ಶೆ.೫ ಮಟ್ಟದಲ್ಲಿ ಎಫ಼್ ನ ಆವೇಕ್ಷಿತ ಬೆಲೆ ಅರ್ಥವತ್ತಾಗಿಲ್ಲ.ಅಂದರೆ ದತ್ತ ಎರಡು ನಿದರ್ಶನಗಳೂ ಒಂದೆ ಪ್ರಸಾಮಾನ್ಯ ವಿಶ್ವದಿಂದ ಬಂದಿವೆ ಎಂಬ ಆಧಾರಕಲ್ಪನೆಯನ್ನು ಅಸ್ವೀಕಾರ ಮಾಡಲು ತಕ್ಕ ಆಧಾರಗಳಿಲ್ಲ ಎಂದು ತೀರ್ಮಾನಿಸುತ್ತೇವೆ. ಅವೇಕ್ಷಿತ ಸಹಸಂಬಂಧ ಗುಣಾಂಕದ ಅರ್ಥವತ್ತತೆಯ ಪರೀಕ್ಷಣ: ದ್ವಿವಿವರ್ತ ಪ್ರಸಾಮಾನ್ಯ ಅಥವಾ ದ್ವಿಚರ ವಿಶ್ವವನ್ನು ಪರಿಶೀಲಿಸೋಣ. ಶಿಷ್ಟಭ್ರಂಶ ಇರಲಿ ಮತ್ತು ಇವುಗಳ ಸಹಸಂಬಂಧ ಇರಲಿ. ಹಾಗೂ ಗಳನ್ನು ಅವುಗಳ ಮಧ್ಯಕಗಳಿಂದ ಅಳತೆ ಮಾಡೋಣ. ಈ ವಿಶ್ವದಿಂದ ತೆಗೆದ