ಪುಟ:Mysore-University-Encyclopaedia-Vol-4-Part-2.pdf/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೀಟೊ ಆಮ್ಲಗಳು

ಪುಂಜ ಅಥವಾ ಜಲಜನಕದ ಪರಮಾಣಗಳಾಗಿರಬಹುದು.ಈ ವರ್ಗದ ಅತಿಸರಳಯುಕ್ತವಾದ ವನ್ನು ಕೇವಲ ಕೀಟೀನ್ ಎಂದು ಕರೆಯುತ್ತೇವೆ. ವರ್ಣರಹಿತವಾದ ಮತ್ತು ಬಹು ಘಾಟು ವಾಸನೆಯ ಅನಿಲವಿದು. ಇದನ್ನು ಆಸಿಟೋನ್ ಅಸಿಟಿಕ್ ಆಮ್ಲ ಅಥವಾ ಡೈಕೀಟಿನನ್ನು ಉಷ್ಣ ವಿಭಜನೆಗೆ ಒಳಪಡಿಸಿ ತಯಾರಿಸಬಹುದು. ಮುಂದೆ ತೋರಿಸಿರುವ ಸಮೀಕರಣಕ್ಕೆ ಅನುಗುಣವಾಗಿ ಆಲ್ಫಬ್ರೋಮೋ ಆಮ್ಲ ಬ್ರೋಮೈಡ್ಗಳನ್ನು ಸತುವಿನೊಡನೆ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಎಲ್ಲಾ ಬಗೆಯ ಕೀಟೀನುಗಳನ್ನು ತಯಾರಿಸಬಹುದು.

ಎಲ್ಲಾ ಕೀಟೀನುಗಳೂ ತೀವ್ರ ಪ್ರತಿಕ್ರಿಯೆ ಇರುವ ಸಂಯುಕ್ತಗಳು ಕೀಟೀನುಗಳು ಎರಡು ಅಣುಗಳು ಸುಲಭವಾಗಿ ಒಂದಾಗಿ ಡೈಕೀಟೀನುಗಳೆಂಬ ಹೊಸ ಮತ್ತು ಹೆಚ್ಚು ಸ್ಥಿರವಾದ ಸಂಯುಕ್ತಗಳ ಸೃಷ್ಟಿಯಾಗುತ್ತದೆ. ಡೈಕೀಟೀನುಗಳು ದಾಸ್ತಾನುಮಾಡಿ ಕೀಟೀನುಗಳ ಆಕಾರಗಳಾಗಿ ಉಪಯೋಗಿಸಬಹುದು. ಕೀಟೀನುಗಳು ಅನೇಕ ಇತರ ವರ್ಗಗಳ ಸಂಯುಕ್ತಗಳೊಡನೆ ರಾಸಾಯನಿಕ ಕ್ರಿಯೆಗಳಲ್ಲಿ ಸುಲಭವಾಗಿ ಭಾಗವಹಿಸಬಲ್ಲುವಾದ್ದರಿಂದ ವಿವಿಧ ಸಾವಯವ ಸಂಯೋಜನೆಗಳಲ್ಲಿ ಇವುಗಳ ಉಪಯೋಗವನ್ನು ಪಡೆಯುವ ಸಾಧ್ಯತೆಯಿದೆ.

ಕೀಟೊ ಆಮ್ಲಗಳು: ಕೀತೊ ಮತ್ತು ಆಮ್ಲೀಯ ಗ್ರೂಪುಗಳ್ಖನ್ನು ಹೊಂದಿರುವ ಸಂಯುಕ್ತಗಳು, ಪರಿನಾಮವಾಗಿ ಈ ಎರಡು ವರ್ಗದ ಸಾವಯವ ವಸ್ಥುಗಳ ಲಕ್ಷಣಗಳನ್ನೂ ಪಡೆದಿವೆ. ಆಮ್ಲೀಯ ಗುಂಪಿನ ಪಕ್ಕದಲ್ಲಿ ಕೀಟೊ ಗುಂಪು ಇದ್ದರೆ ಆಲ್ಫಾ ಕೀಟಾನಿಕ್ ಆಮ್ಲವಾಗುತ್ತದೆ. ಆಮ್ಲೀಯ ಗುಂಪಿನಿಂದ ಎರಡನೆಯ ಸ್ಥಾನದಲ್ಲಿ ಕೀಟೊ ಗುಂಪಿದ್ದರೆ ಬೀಟಾಕೀಟಾನಿಕ್ ಆಮ್ಲವೆಂದೂ ಮೂರನೆಯ ಸ್ಥಾನದಲ್ಲಿರುವ ಗ್ಯಾಮಾ ಕೀಟಾನಿಕ್ ಆಮ್ಲವೆಂದು ಕರೆಯಲಾಗುವುದು. ಇವಿಗಳಿಗೆ ಉದಾಹರಣೆಯಾಗಿ ಪೈರೊವಿಕ್ ಅಸಿಟೊ ಅಸೆಟಿಕ್ ಮತ್ತು ಲೆವುಲೀನಿಕ್ ಆಮ್ಲಗಳನ್ನು ಹೆಸರಿಸಬಹುದು. ಈ ಆಮ್ಲಗಳ ರಚನಾ ಸೂತ್ರಗಳು ಹೀಗಿವೆ.

ಪೈರೊವಿಕ್ ಆಮ್ಲ: ಅತೀ ಸರಳ ಕೀಟೊ ಆಮ್ಲವಿದು. ಶರ್ಕರ ಪಿಷ್ಟಾದಿಗಳು ಮತ್ತು ಪ್ರೋಟೀನುಗಳು ಅತೀಮಯವಾಗಿ ಜೀವದ್ರವ್ಯವಾಗುವಾಗ ಪೈರೊವಿಕ್ ಆಮ್ಲ ಮಧ್ಯಂತರ ವಸ್ಥುವಾಗಿ ಉತ್ಪತ್ತಿಯಾಗುವುದೆಂದು ನಂಬಲಾಗಿದೆ. ಹಣ್ಣುಗಳಿಂದ ತಯಾರಿಸಬಹುದು. ಇದನ್ನು ಏಕಾಂಗಿಯಾಗಿಯೋ ಪೊಟ್ಯಾಸಿಯಂ ಬೈ ಸಲ್ಫೇಟಿನೊಂದಿಗೋ 210 220 ಸೆಂ. ಉಷ್ಣತಾಮಿತಿಯಲ್ಲಿ ಕಾಯಿಸಿದಾಗ ಪೈರೋವಿಕ್ ಆಮ್ಲ ಕೆಳಕಂಡಂತೆ ಉಂಟಾಗುತ್ತದೆ.

ಇದಕ್ಕೆ ಪೈರೊವಿಕ್ ಆಮ್ಲವೆಂದು ಹೆಸರಾಗಳು ಮೇಲ್ಖಂಡ ತಯಾರಿಕೆಯ ವಿಧಾನವೇ ಕಾರಣ (ಗ್ರೀಕ್ ನಲ್ಲಿ ಎಂದರೆ ಬೆಂಕಿ, ಎಂದರೆ ದ್ರಾಕ್ಷಿ) ಡೈಬ್ರೋಮೊ ಪ್ರೋಪಿಯೋನಿಕ್ ಆಮ್ಲವನ್ನು ಜಲವಿಶ್ಲೇಷಣೆ ಮಾಡಿದ್ದಾಗಲೂ ಪೈರೊವಿಕ್ ಆಮ್ಲ ಬರುತ್ತದೆ.

ಪೈರೊವಿಕ್ ಆಮ್ಲ ಬಣ್ಣವಿಲ್ಲದ ದ್ರವವಸ್ಥು.165 ಸೆಂ. ಉಷ್ಣತೆಯಲ್ಲಿ ಕುದಿಯುತ್ತದೆ. ನೀರು, ಆಲ್ಕೊಹಾಲ್ ಮತ್ತು ಈಥರುಗಳಲ್ಲಿ ಸರಾಗವಾಗಿ ಬೆರೆಯುವುದು. ಕೀಟೊ ಗುಂಪಿರುವ ಪ್ರಯುಕ್ತ ಆಕ್ಸೀಮ್ ಫೀನೈಲ್ ಹೈಡ್ರಜೋನುಗಳನ್ನು ಕೊಡುವುದು. ಹಡ್ರೊಸಯನಿಕ್ ಆಮ್ಲವನ್ನು ಕೂಡಿಸಿಕೊಳ್ಳುವುದು. ಜಲಮಧ್ಯಮದಲ್ಲಿ ಸೋಡಿಯಂ ಆಮಾಲ್ಗಂನಿಂದ ಅಪಕರ್ಷಿಸಿದಾಗ ಲ್ಯಾಕ್ಟಿಕ್ ಆಮ್ಲವಾಗುತ್ತದೆ.

ಆಮ್ಲೀಯ ಗುಂಪಿನ ದೆಸೆಯಿಂದ ಲವಣಗಳು, ಎಸ್ಟರುಗಳು ಮತ್ತು ಇತರ ಆಮ್ಲೀಯ ವ್ಯುತ್ಪನ್ನಗಳು ಉಂಟಾಗುವುವು. ಶೇ.10 ಸಲ್ಫ್ಯೂರಿಕ್ ಆಮ್ಲದೊಡನೆ ಮೊಹರಾದ ನಳಿಗೆಯಲ್ಲಿ ಕಾಯಿಸಿದಾಗ ಅಸಿಟಾಲ್ಡಿಹೈಡ್ ಮತ್ತು ಇಂಗಾಲದ ಡೈ ಆಕ್ಸೈಡುಗಳು ದೊರೆಯುವುವು.

ಬೀಟಾ ಕೀಟಾನಿಕ್ ಆಮ್ಲಗಳನ್ನು ಕಾಯಿಸಿದಾಗ ಕೀಟಾನುಗಳು ಉಂಟಾಗುವುವು. ಆದ್ದರಿಂದ ಆಲ್ಫಾ ಮತ್ತು ಬೀಟಾ ಕೀಟಾನಿಕ್ ಆಮ್ಲಗಳನ್ನು ಈ ಕ್ರಿಯೆಯ ಸಹಾಯದಿಂದ ಗುರುತಿಒಸಬಹುದು. ಆದರೆ ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ಸ್ವಲ್ಪ ಕಾಯಿಸಿದಾಗ ಅಸಿಟಿಕ್ ಆಮ್ಲ ಮತ್ತು ಇಂಗಾಲದ ಮಾನಾಕ್ಸೈಡ್ ಬರುತ್ತವೆ.

ಈ ವಿಧಾನವನ್ನು ಅನುಸರಿಸಿ ಸಾವಯವ ಆಮ್ಲದ ಅನುವಿನಲ್ಲಿರುವ ಇಂಗಾಲದ ಪರಮಾಣುಗಳನ್ನು ಒಂದೊಂದಾಗಿ ಹಂತಹಂತವಾಗಿ ಕಡಿಮೆ ಮಾಡಬಹುದು. ಉದಾಹರಣೆಗೆ

ಅಸಿಟೊ ಅಸಿಟಿಕ್ ಆಮ್ಲ; ಅತಿ ಸರಳ ಬೀಟಾ ಕೀಟಾನಿಕ್ ಆಮ್ಲವಿದು. ಆರೋಗ್ಯವಂತನಾದವನ ಮೂತ್ರದಲ್ಲಿ ಅಲ್ಪ ಪ್ರಮಾಣದ ಅಸಿಟೊ ಅಸಿಟಿಕ್ ಆಮ್ಲ ಇರುತ್ತದೆ. ಇದು ಅಸ್ಥಿರ ವಸ್ಥು. ಬೀಟಾ ಹಡ್ರಾಕ್ಸಿ ಬ್ಯುಟಿರಿಕ್ ಆಮ್ಲವನ್ನು ಉತ್ಕರ್ಷಿಸಿ ಅಥವಾ ಅಸಿಟೊ ಅಸಿಟಿಕ್ ಎಸ್ಟರನ್ನು ತಣ್ಣಗಿರುವ ದುರ್ಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದೊಡನೆ ವರ್ತಿಸುವಂತೆ ಮಾಡಿ ಇದನ್ನು ಪಡೆಯಬಹುದು. ಕ್ರಿಯಾಶೀಲ ಮೆಥಿಲೀನ್