ಪುಟ:Mysore-University-Encyclopaedia-Vol-4-Part-2.pdf/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುಂಪಿರುವುದರಿಂದ(CH2) ಈ ಆಮ್ಲದ ಎಸ್ಟರು ಸಂಯೋಜನ ರಸಾಯನವಿಜ್ಞಾನದಲ್ಲಿ ಪ್ರಸಿದ್ಧವಾಗಿದೆ. ಪಾಕದಂತಿರುವ ದ್ರವವಸ್ತುವಿನ ರೂಪದಲ್ಲಿ ಈ ಆಮ್ಲ ಪರಿಚಿತವಾಗಿದೆ. ಅದರ ಹರಳುಗಳು 36 ಸೆಂ. ಉಷ್ಣತೆಯಲ್ಲಿ ದ್ರವೀಕರಿಸುತ್ತವೆ. ನೀರಿನೊಡಣೆ ಸರಾಗವಾಗಿ ಬೆರೆಯಬಲ್ಲದು. ಫೆರಿಕ್ ಕ್ಲೋರೈಡ್ ದ್ರಾವಣದ ಸಂಪರ್ಕದಲ್ಲಿ ದಟ್ಟಕೆಂಪು ನೇರಿಳೆ ಬಣ್ಣ ಕೊಡುವುದು ಅಯೋಡೊಫಾರಂ ಪರೀಕ್ಷೆಯನ್ನು ಉತ್ತರಿಸುತ್ತದೆ. ಕಾಯಿಸಿದಾಗ ಸುಲಭವಾಗಿ ವಿಭಜಿಸುವುದು.

ಮಧುಮೇಹ ರೋಗಿಗಳಲ್ಲಿ ತಲೆದೋರುವ ಅಸಿಟೋನೂರಿಯ ಸ್ಥಿಥಿಯಲ್ಲಿ ಅಸಿಟೋನು ಉತ್ಪತ್ತಿಯಾಗುವುದು ಹೀಗೆಯೇ. ಅಸಿಟೊ ಅಸಿಟಿಕ್ ಅಮ್ಲ ಬೀಟಾಹೈಡ್ರಾಕ್ಸಿಕ್ ಬ್ಯೂಟರಿಕ್ ಅಮ್ಲ ಮತ್ತು ಅವುಗಳ ಎಸ್ಟರುಗಳನ್ನು ಅಸಿಟೋನ್ ಕಾಯಗಳೆಂದು ಕರೆಯುತ್ತಾರೆ. ಪ್ರ್ರಣಿದೇಹದಲ್ಲಿ ಕೊಬ್ಬು ಜಲವಿಶ್ಲೇಷಿತವಾಗಿ ಆಮ್ಲಗಳು ಹುಟ್ಟುತ್ತವೆ. ಇವು ದಹಿಸಿದಾಗ ಪ್ರತಿ ಹಂತದಲ್ಲೂ ಇಂಗಾಲದ ಎರಡು ಪರಮಾಣುಗಳನ್ನು ಕಳೆದುಕೊಂಡು ಬೀಟಾ ಹೈಡ್ರಾಕ್ಸಿಕ್ ಮತ್ತು ಬೀಟಾ ಕೀಟಾನಿಕ್ ಆಮ್ಲಗಳನ್ನು ಕೊಡುವುವು. ಅಂತ್ಯಪೂರ್ವಹಂತದಲ್ಲಿ ಅಸಿಟೊ ಅಸಿಟಿಕ್ ಆಮ್ಲ ಅಸಿಟಿಕ್ ಆಮ್ಲವಾಗುವುದು. ಹೀಗಾಗಲು ಏಕಕಾಲದಲ್ಲಿ ಶರ್ಕರ ಪಿಷ್ಟಾದಿಗಳು ದಹನವಾಗಬೇಕು. ಇದಕ್ಕೆ ಇನ್ಸುಲಿನ್ ಎಂಬ ಹಾರ್ಮೋನ್ ಅಗತ್ಯ. ಮಧುಏಹ ರೋಗಿಯಲ್ಲಿ ಇನ್ಸುಲಿನ್ ಕೊರತೆಯಿರುವುದರಿಂದ ಶರ್ಕರ ಪಿಷ್ಟಾದಿಗಳು ಗ್ಲೂಕೋಸ್ ರೂಪದಲ್ಲಿ ಮೂತ್ರದಲ್ಲಿ ವಿಸರ್ಜಿತವಾಗುತ್ತವೆ. ರಕ್ತದಲ್ಲಿ ಆಸಿಟೊ ಅಸಿಟಿಕ್ ಆಮ್ಲದ ಪ್ರಮಾಣ ಹೆಚ್ಚು ಅಸಿಟೋನಿನ ಉತ್ಪತ್ತಿ ಅನಿವಾರ್ಯವಾಗುತ್ತದೆ.

ಲೆವುಲೀನಿಕ್ ಆಮ್ಲ: ಲೆವುಲೋಸ್ (ಫ್ರಕ್ಟೋಸ್) ಅಥವಾ ಸುಕ್ರೋಸ್ (ಕಬ್ಬಿನ ಸಕ್ಕರೆ) ಸಕ್ಕರೆಯನ್ನು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಕಾಯಿಸಿ ಈ ಗ್ಯಾಮಾ ಕೀಟಾನಿಕ್ ಆಮ್ಲಾವನ್ನು ತಯಾರಿಸಬಹುದು.

ಆಸಿಟೊ ಅಸಿಟಿಕ್ ಎಸ್ಟರಿನಿಂದಲೂ ಈ ಆಮ್ಲವನ್ನು ಪಡೆಯಬಹುದು. ಇದೊಂದು ಹರಳು ರೂಪದ ಘನ ವಸ್ತು. 34 ಸೆಂ. ಉಷ್ಣತೆಯಲ್ಲಿ ದ್ರವಿಸುತ್ತದೆ. ನೀರು ಆಲ್ಕೋಹಾಲ್ ಮತ್ತು ಈಥರಿನಲ್ಲಿ ದ್ರಾವ್ಯ. ಇದರ ಎಸ್ಟರಿನಲ್ಲಿ ಕ್ರಿಯಾಶೀಲ ಮೆಥಿಲೀನ್ ಗುಂಪಿಲ್ಲ. ಅದರಿಂದ ರಾಸಾಯನಿಕ ಸಂಯೋಜನೆಯಲ್ಲಿ ಆಸಿಟೋ ಅಸಿಟಿಕ್ ಎಸ್ಟರಿನಂತೆ ಪ್ರಮುಖ ಪಾತ್ರ ವಹಿಸಲಾರದು. ಸಾಮನ್ಯ ಉಷ್ಣತೆಯಲ್ಲಿ ವಿಭಜಿಸದಿರುವು ಇದರ ವೈಶಿಷ್ಟ್ಯ.

ಕೀಟೋನುಗಳು: ಕಾರ್ಬೋನಿಲ್ ಪುಂಜವನ್ನುಳ್ಳ ಸಾವಯವ ಸಂಯುಕ್ತಗಳ ಒಂದು ವರ್ಗ ಸಮನ್ಯ ಅಣುಸೂತ್ರವನ್ನುಳ್ಳ (ಮುಂದಿನ ಚಿತ್ರ) ಈ ಸಂಯುಕ್ತಗಳಲ್ಲಿ R ಮತ್ತು R ಗಳು ಆಲ್ಕೈಲ್, ಆರೈಲ್ ಅಥವಾ ಹೆಟೆರೋಸೈಕ್ಲಿಕ್ ಪರಮಾಣು ಪುಂಜಗಳಾಗಿರಬಹುದು. R ಅಥವಾ R ಹೆಟೆರೋಸೈಕ್ಲಿಕ್ ಪುಂಜವಾಗಿದ್ದಲ್ಲಿ ಕಾರ್ಬೊನಿಲ್ ಪುಂಜದ ಇಂಗಾಲದ ಜೋಡಣೆಯಾಗಿರುವ ಹೆಟೆರೋಸೈಕ್ಲಿಕ್ ಪುಂಜದ ಪರಮಾಣು ಇಂಗಾಲವೇ ಆಗಿರಬೇಕು. R ಮತ್ತು R ಪುಂಜಗಳ ಒಂದೇ ಅಗಿದ್ದಲ್ಲಿ ಅಂಥ ಕೀಟೋನನ್ನು ಸರಳ ಕೀಟೋನ್ ಎಂದೂ ಅವು ಭಿನ್ನವಾಗಿದ್ದಲ್ಲಿ ಮಿಶ್ರಕೀಟೋನ್ ಆಲಿಫ್ಯಾಟಿಕ್ ಕೀಟೊನ್ R ಮತ್ತು ಗಳಾಲ್ಲಿ ಒಂದಾದರೂ ಅರ್ಮೈಲ್ ಪುಂಜವಾಗಿದ್ದಲ್ಲಿ ಅರೋಮ್ಯಾಟಿಕ್ ಕೀಟೋನುಗಳು ಲಭಿಸುತ್ತವೆ. ಕಾರ್ಬೋನಿಲ್ ಪುಂಜ ಪರಮಾಣುವೃತ (ರಿಂಗ್ ಆಫ್ ಎ ಸೈಕ್ಲಿಕ್ ಕಾಂಪೌಂಡ್) ಒಂದರ ಭಾಗವಾಗಿದ್ದಲ್ಲಿ ಅದನ್ನು ಸೈಕ್ಲಿಕ್ ಕೀಟೋನ್ ಎನ್ನುತ್ತೇವೆ. ಕೀಟೋನುಗಳನ್ನು ತಯಾರಿಸಲು ಉಪಯೋಗಿಸುವ ಹಲವಾರು ವಿಧಾನಗಳಲ್ಲಿ ಕೆಲವು ಮುಖ್ಯವಾದ್ದುವನ್ನು ಕೆಳಗೆ ವಿವರಿಸಲಾಗಿದೆ.

1. ಉತ್ಕರ್ಷಣ (ಆಕ್ಸಿಡೇಷನ್) ಅಥವಾ ಡೀಹೈಡ್ರೋಜನೀಕರಣಾದಿಂದ ದ್ವಿತೀಯಕ ಆಲ್ಕೋಹಾಲುಗಳನ್ನು ಕೀಟೋನುಗಳಾಗಿ ಪರಿವರ್ತಿಸಬಹುದು. ವೇಗವರ್ಧಕಗಳ ಸಾನ್ನಿಧ್ಯದಲ್ಲಿ ಆಮ್ಲಜನಕದ ನೆರವಿನಿಂದ ಕೆಳಗೆ ತೋರಿಸುವ ಸಮೀಕರಣಾಕ್ಕೆ ಅನುಗುಣವಾಗಿ ಉತ್ಕರ್ಷಣವನ್ನು ಸಾಧಿಸಿ ಕೀಟೋನುಗಳಾನ್ನು ತಯಾರಿಸಬಹುದು.

ಆಮ್ಲಾಜನಕವನ್ನು ಒದಗಿಸದೆಯೂ ವೇಗವರ್ಧಕಗಳ ಸಹಾಯದಿಂದ ಕೀಟೋನುಗಳನ್ನು ತಯಾರಿಸಬಹುದು. ಈ ಬಗೆಯ ಕ್ರಿಯೆಯಲ್ಲಿ ನೀರಿಗೆ ಬದಲಾಗಿ ಜಲಜನಕದ ಬಿಡುಗಡೆಯಾಗುತ್ತದೆ. 

ಪೊಟ್ಯಾಸಿಯಂ ಡೈ ಕ್ರೋಮೇಟಿನಂಥ ರಾಸಾಯನಿಕ ಉತ್ಕರ್ಷಣಕಾರಿಗಳ ನೆರವಿನಿಂದಲೂ ಈ ಡೀಹೈಡ್ರೋಜನೀಕರಣವನ್ನು ಸಾಧಿಸಬಹುದು. ಅದನ್ನೇ ಇಲ್ಲಿರುವ ಸಮೀಕರಣದಲ್ಲಿ ತೋರಿಸಲಾಗಿದೆ.

2. ಅಪರ್ಯಾಪ್ತ ಸಂಯುಕ್ತಗಳನ್ನು ಓಜೋನಿನೊಡನೆ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಿದಾಗ ಓಜೋನೈಡುಗಳ ಸೃಷ್ಟಿಯಾಗುತ್ತದೆ. ಇವನ್ನು ವೇಗವರ್ಧಕವೊಂದರ ಸಾನ್ನಿಧ್ಯದಲ್ಲಿ ಜಲಜನಕದೊಡನೆ ಸಂಯೋಗಿಸಿದಾಗ ಓಜೋನೈಡ್ ವಿಭಜನೆಯಾಗಿ ಆಲ್ಡಿಹೈಡ್ ಮತ್ತು ಅಥವಾ ಕೀಟೋನುಗಳ ಉತ್ಪತ್ತಿಯಾಗುತ್ತದೆ. ಉತ್ಪತ್ತಿಯಾಗುವ ಕಾರ್ಬೋನಿಲ್ ಸಂಯುಕ್ತಗಳು ಮೂಲ, ಅಪರ್ಯಾಪ್ತ ಸಂಯುಕ್ತವನ್ನು ಅವಲಂಭಿಸಿರುತ್ತವೆ. ಈ ಬಗೆಯ ಕೀಟೋನ್ ಸಂಯೋಜನೆಯನ್ನು ಕೆಳ್ಗೆ ತೋರಿಸುವ ಸಮೀಕರಣದಿಂದ ನಿದರ್ಶಿಸಬಹುದು.