ಪುಟ:Mysore-University-Encyclopaedia-Vol-4-Part-2.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್,ಭಾರತ ರಾಷ್ಟ್ರೀಯ ಪ್ರಶ್ನಿಸುವಂತಿದ್ದ ಈ ನಿರ್ಣಯವನ್ನು ಸರ್ಕಾರ ಸ್ವಾಗತಿಸಲಿಲ್ಲ. ಕಾಂಗ್ರೆಸಿನ ಮುದಾಳುಗಳಿಂದ ಸೆರೆಮನೆಗಳು ತುಂಬತೊಡಗಿದವು. ಆಂದೋಲನವನ್ನು ನಿಗ್ರಹಿಸಲು ಬ್ರಿಟಿಷರು ಕ್ರೂರನೀತಿಯನ್ನನುಸರಿಸಿದರು.ಇದಾವುದಕ್ಕೂ ಅಂಜದೆ ಕಾಂಗ್ರೆಸಿಗರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ೧೯೨೪ ರಲ್ಲಿ ಕಾಂಗ್ರೆಸ್ ಅಧಿವೇಶನ ಬೆಳಗಾಂವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಸೇರಿತು.ಈ ಅಧಿವೇಶನದಲ್ಲಿ ಅಸ್ಪೃಶ್ಯತಾ ನಿವಾರಣೆ,ನಿರುದ್ಯೋಗ ಪರಿಹಾರ, ಪಾನನಿರೋಧ ಮುಂತಾದ ಮಹತ್ತ್ವದ ವಿಷಯಗಳ ಬಗ್ಗೆ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು.ತರುವಾಯ ೧೯೨೭ರಲ್ಲಿ ಬ್ರಿಟಿಷ್ ಸರ್ಕಾರ ಸೈಮನನ ನೇತೃತ್ವದಲ್ಲಿ ಒಂದು ಆಯೋಗ ನೇಮಿಸಿತು. ಭಾರತೀಯರ ಬೇಕು ಬೇಡುಗಳನ್ನು ವಿಚಾರಿಸಿ, ಭಾರತದ ರಾಜ್ಯಾಡಳಿತದಲ್ಲಿ ಕೈಕೊಳ್ಳಬೇಕಾದ ಬದಲಾವಣೆಯ ಬಗ್ಗೆ ಶಿಫಾರಸು ಮಾಡುವುದು ಈ ಆಯೋಗದ ಕಾರ್ಯ, ಯಾವ ಭಾರತೀಯನೂ ಇಲ್ಲದ ಆ ಆಯೋಗದ ಬಗ್ಗೆ ಸಂಶಯಪಟ್ಟು ಕಾಂಗ್ರೆಸ್ ಹಾಗೂ ಇನ್ನುಳಿದ ಸಂಸ್ಥೆಗಳು ಅದನ್ನು ಬಹಿಷ್ಕರಿಸದುವು. ೧೯೨೮ರಲ್ಲಿ ಕಾಂಗ್ರೆಸು ಮೋತಿಲಾಲ್ ನೆಹರು ಹಾಗು ಇನ್ನುಳಿದ ಮುಖಂಡರ ನೇತೃತ್ವದಲ್ಲಿ ಭಾರತಕ್ಕೆ ಒಂದು ಹೊಸ ರಾಜ್ಯಘಟನೆ ನಿರ್ಮಿಸಿತು. ಇದು ಕಾಂಗ್ರೆಸ್ ಪಕ್ಷದ ರಚನಾತ್ಮಕ ಕಾರ್ಯನೀತಿಗೆ ಉತ್ತಮ ಉದಾಹರಣೆಯೆಂದು ಹಲವಾರು ಬ್ರಿಟಿಷ್ ರಾಜಕಾರಣಪಟುಗಳೇ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಗಿನ ಸರ್ಕಾರ ನೆಹರು ಸಮಿತಿಯ ಬೇಡಿಕೆ ಅತಿಯಾಯಿತೆಂಬ ಆಪಾದನೆ ಹೊರಿಸು ಅದನ್ನು ತಿರಸ್ಕರಿಸಿತು. ರಾಷ್ಟ್ರದ್ವಜ,ರಾಷ್ಟ್ರಗೀತೇ: ಭಾರತ ಸ್ವತಂತ್ರವಾಗಲೇಬೇಕೆಂಬ ಬಲವಾದ ಬೇಡಿಕೆಯನ್ನು ಕಾಂಗ್ರೆಸ್ ೧೯೩೦ರಲ್ಲಿ ಮುಂದಿರಿಸಿತಲ್ಲದೆ,ಪ್ರತಿಯೊಂದು ರಾಷ್ಟ್ರಕ್ಕೂ ಒಂದು ದ್ವಜ ಅವಶ್ಯಕವೆಂದು ಭಾವಿಸಿ ತನ್ನದೇ ರಾಷ್ಟ್ರಧ್ವಜವನ್ನು ಏರ್ಪಡಿಸಿಕೊಂಡಿತು. ಕಾಂಗ್ರೆಸಿನ ಚಟುವಟಿಕೆಗಳಿಗೆ ನಾಂದಿಯಾಗಿ ಧ್ವಜಾರೋಹಣ ವಂದನೆಗಳು ಜನಪ್ರಿಯ ಕಾರ್ಯಕ್ರಮಗಳಾದುವು. ಮುಖಂಡರು ರಾಷ್ಟ್ರಧ್ವಜದ ಮಹತ್ತ್ವದ ಬಗ್ಗೆ ಜನತೆಗೆ ತಿಳಿವಳಿಕೆ ಕೊಡುತ್ತಿದ್ದರು. ಅದನ್ನು ಕುರಿತು ಹಿಂದಿ ಮತ್ತು ಇತರ ದೇಶಭಾಷೆಗಳಲ್ಲಿ ಹಾಡುಗಳನ್ನು ಕೂಡ ರಚಿಸಲಾಹಿತು. ತ್ರಿವರ್ಣಗಳಿಂದ ಕೂಡಿದ ಧ್ವಜದ ಮಧ್ಯೆ ಚರಕದ ಚಿತ್ರವನ್ನು ಸೇರಿಸಿ, ಭಾರತದ ಆರ್ಥಿಕ ಅಭಿವೃದ್ದಿಯಾಗಬೇಕಾದರೆ ಮನೆಮನೆಗೂ ನೂಲುವ ಕಾಯಕ ಪ್ರಸಾರವಾಗಬೇಕೆಂಬ ಸಂದೇಶವನ್ನು ರಾಷ್ರೀಯ ಕಾಂಗ್ರೆಸ್ ಸಂಸ್ಥೆ ಸಾರಿತು. ರಾಷ್ಟ್ರಧ್ವಜವನ್ನು ಹಾರಿಸಲು ಸರ್ಕಾರ ಪ್ರತಿಬಂಧಿಸಿದಾಗ ಕಾಂಗ್ರೆಸ್ ಸಂಸ್ಥೆ ಧ್ವಜಸತ್ಯಾಗ್ರಹವನ್ನು ಕೂಡ ಕೈಕೊಂಡ ಪ್ರಸಂಗಗಳುಂಟು. ಕಾಂಗ್ರೆಸು ಜನತೆಯನ್ನು ಆಕರ್ಷಿಸಲು ಹಾಗು ಅವರಲ್ಲಿ ಏಕತೆ ಬೆಳೆಸಲು ಏರ್ಪಡಿಸಿದ ಇನ್ನೊಂದು ಸಾಂಕೇತಿಕ ಅಂಶವೆಂದರೆ ರಾಷ್ಟ್ರಗೀತೆ. ಬಂಕಿಂ ಚಂದ್ರ ವಿರಚಿತ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಸಂಸ್ಥೆ ರಾಷ್ಟ್ರಗೀತೆಯೆಂದು ಅಂಗೀಹಕರಿಸಿತು. ಇದರ ಜೊತೆಗೆ ರವೀಂದ್ರನಾಥ ಕೂರರ ಜನಗಣಮನ ಗೀತೆಯೂ ಜನಪ್ರಿಯವಾಯಿತು. ವಂದೇ ಮಾತರಂ ಗೀತೆ ನಾಡಿನ ಮನೆಮನೆಗೂ ಮುಟ್ಟಿ ರಾಷ್ಟ್ರೀಯತ್ವದ ಸಂದೇಶ ಸಾರಿತು. ಭಾವೈಕ್ಯದ ಈ ಕ್ರಮಗಳನ್ನು ಬ್ರಿಟಿಷ್ ಸರ್ಕಾರ ನಿರೀಕ್ಷಿಸಿರಲಿಲ್ಲ. ಹೇಗಾದರೂ ಭಾರತೀಯರಲ್ಲಿ ಒಡಕು ಹುಟ್ಟಿಸಬೇಕೆಂಬುದು ಅದರ ಆಗಿನ ನಿರ್ಧಾರ. ಬ್ರಿಟಿಷರ ಈ ಧೋರಣೆ ಪ್ರಕಟವಾದದ್ದು ಅವರು ಕರೆದ ದುಂಡುಮೇಜಿನ ಪರಿಷತ್ತಿನಲ್ಲಿ (೧೯೩೦-೩೨). ಭಾರತ ಮತ್ತು ಬ್ರಿಟಿಷ್ ಪ್ರತಿನಿಧಿಗಳ ಆ ಸಭೆಗಳಿಂದ ಯಾವ ಪ್ರಯೋಜನವೂ ಆಗಲಿಲ್ಲ. ಬ್ರಿಟಿಷ್ ಸರ್ಕಾರ ಹೊತ್ತಿಸಿದ ಜಾತೀಯತೆಯ ಬೆಂಕಿ ಮಾತ್ರ ಅಪಾಯಕಾರಿಯಾಗಿ ಪರಿಣಮಿಸಿತು. ದೇಶದಲ್ಲಿ ಅನೇಕ ಗಲಭೆಗಳಾದುವು. ಕೊಲೆಸುಲಿಗೆಗಳು ನಡೆದುವು. ನೂರಾರು ಭಾರತೀಯರು ಗುಂಡಿನೇಟಿಗೆ ತುತ್ತಾದರು. ಪರಕೀಯ ಸರ್ಕಾರ ಎಂಥ ಕಠಿಣ ಕ್ರಮಗಳನ್ನು ಕೈಗೊಂಡರೂ ಕಾಂಗ್ರೆಸಿನ ಚಳವಳಿ ನಿಲ್ಲಲಿಲ್ಲ: ಆದ್ದರಿಂದ ಬ್ರಿಟಿಷ್ ಸರ್ಕಾರ ೧೯೩೩ರಲ್ಲಿ ಶ್ವೇತಪತ್ರವೊಂದನ್ನು ಹೊರಡಿಸಿ ಭಾರತದ ಭಾವೀ ಆಡಳಿತದಲ್ಲಿ ಮಹತ್ತರವಾದ ಸುಧಾರಣೆ ಮಾಡುವ ಇಚ್ಚೆಯನ್ನು ಪ್ರಕಟಪಡಿಸಿತು. ಆಮೇಲೆ ೧೯೩೪ರಲ್ಲಿ ಕಾಂಗ್ರೆಸ್ ಸಂಸ್ಥೆಯೇ ಈ ಅಸಹಕಾರ ಹಾಗೂ ಕಾನೂನು ಭಂಗ ಚಳವಳಿಗಳನ್ನು ಹಿಂತೆಗೆದುಕೊಂಡಿತು. ದೇಶದಲ್ಲಿ ಶಾಂತಿ ಸುವ್ಯವಸ್ಥೆಗಳು ಕಾಣಿಸಿಕೊಂಡುವು. ಪ್ರಾಂತೀಯ ಸ್ವಯಮಾಡಳಿತ:೧೯೩೫ರ ಕಾಯಿದೆ ಪ್ರಾಂತ್ಯಗಳಿಗೆ ಸ್ವಯಮಧಿಕಾರ ಕೊಟ್ಟಿತು.ಆದರೆ ಈ ಪ್ರಾಂತೀಯ ಸ್ವಯಮಧಿಕಾರ ಕೊಟ್ಟಿತು.ಆದರೆ ಈ ಪ್ರಾಂತೀಯ ಸ್ವಾಯತ್ತೆ ಹಲವಾರು ಪರಿಮಿತಿಗಳಿಗೊಳಗಾಗಿತ್ತು.ಗವರ್ನರ್ ಅನೇಕ ವಿಚಾರಗಳಲ್ಲಿ ನಿರಂಕುಶ ಅಧಿಕಾರ ಪಡೆದಿದ್ದ. ಹೀಗಿರುವಾಗ ಅಧಿಕಾರ ಸ್ವೀಕರಿದರೆ ಹಗ್ಗಕೊಟ್ಟು ಕೈ ಕಟ್ಟಿಸಿಕೊಂಡಂತೆ ಎಂದು ಕಾಂಗ್ರೆಸ್ ಬಗೆದು, ಮಂತ್ರಿಮಂಡಲಗಳನ್ನು ರಚಿಸಲು ಹಿಂಜರಿಯಿತು.ಈ ಬಿಕ್ಕಟ್ಟು ಬಹಳ ದಿನಗಳ ವರೆಗೆಸಾಗಿ ಸರ್ಕಾರರಚನೆ ಹಾಗೆಯೇ ಉಳಿಯಿತು.ಕೊನೆಗೆ ವೈಸ್ ರಾಯಿಯ ಪ್ರಾರ್ಥನೆಯಂತೆ ಕಾಂಗ್ರೆಸ್ ಇದಕ್ಕೆ ಒಡಂಬಟ್ಟಿತು. ಸುಧಾರಣಾ ಕಾಯಿದೆಗನುಗುಣವಾಗಿ, ಚುನಾವಣೆಗಳು ನಡೆದುವು. ಸಿಂಧ್ ಪ್ರಾಂತ್ಯವೂ ಸೇರಿ ಒಟ್ಟು ಎಂಟು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತ ಗಳಿಸಿ ಆರಿಸಿ ಬಂತು. ಆದರೆ ಸರ್ಕಾರದ ರಚನೆಗೆ ಅಡ್ಡಿಯಾದ ಇನ್ನೊಂದು ಅಂಶವೆಂದರೆ ಮುಸ್ಲಿಂ ಲೀಗು.ಪ್ರತಿಯೊಂದು ಪ್ರಾಂತ್ಯದಲ್ಲೂ ಸಂಮಿಶ್ರ ಸರ್ಕಾರವಿರಬೇಕೆಂಬ ಬೇಡಿಕೆಯೊಂದನ್ನು ಅದು ಸರ್ಕಾರದ ಮುಂದಿರಿಸಿತು.ಆ ನಿರ್ಣಯಕ್ಕೆ ಕಾಂಗ್ರೆಸ್ ಹಾಗೂ ಸರ್ಕಾರ ಒಪ್ಪಲಿಲ್ಲ. ಗವರ್ನರರ ಅಧಿಕಾರಗಳ ಬಗ್ಗೆ ಸರ್ಕಾರದಿಂದ ನಿರ್ದಿಷ್ಟ ಭರವಸೆಗಳನ್ನು ಪಡೆದ ಮೇಲೆ ಪ್ರಾಂತ್ಯಗಳಲ್ಲಿ ಮುಂತ್ರಿಮಂಡಲ ರಚಿಸಲು ಕಾಂಗ್ರೆಸ್ ಒಪ್ಪಿಕೊಂಡಿತು.ಸಿಂಧನ್ನೂ ಒಳಗೊಂಡು ಒಟ್ಟು ೮ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಪಿತವಾದುವು(೧೯೩೭). ಮಂತ್ರಿಮಂಡಲಗಳ ಕಾರ್ಯಕ್ರಮಗಳಿಗೆ ಮೇಲಿಂದ ಮೇಲೆ ಆತಂಕ ಒಡ್ಡಲು ಗವರ್ನರರಿಗೆ ರ್ಯವಿರದಿದ್ದರೂ ಎಷ್ಟೋ ಮುಖ್ಯ ಸಂದರ್ಭಗಳಲ್ಲಿ ಅವರು ಮಂತ್ರಿಗಳ ಸಲಹೆಗಳನ್ನು ತಳ್ಳಿಹಾಕುತ್ತಿದ್ದರು.ಆದರೂ ಪ್ರಾಂತ್ಯಗಳ ಜನರ ಮೇಲ್ಮೆಗಾಗಿ ಕಾಂಗ್ರೆಸ್ ಸರ್ಕಾರ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಕೊಂಡಿತು.ಕಾಂಗ್ರೆಸಿನ ಚುನಾವಣಾ ಘೋಷಣೆಯಲ್ಲಿ ನೀಡಿದ್ದ ವಾನಗಳನ್ನು ಪೂರೈಸಲು ಕಾಂಗ್ರೆಸ್ ಸರ್ಕಾರ ಕೈಲಾದಷ್ಟು ಪ್ರಯತ್ನಿಸಿತು. ವರ್ಧಾ ಶಿಣ ಯೋಜನೆ, ರಾಷ್ಟ್ರೀಯ ಯೋಜನಾ ಸಮಿತಿ ಇವು ಕಾಂಗ್ರೆಸ್ ಸರ್ಕಾರ ದೇಶಕ್ಕೆ ಸಲ್ಲಿಸಿದ ಕಾಣಿಕೆಗಳು.ಇವಲ್ಲದೆ