ಪುಟ:Mysore-University-Encyclopaedia-Vol-4-Part-2.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಗ್ರೆಸ್ ಸಂದೇಶ- ಕಾಂಚನಗಂಗ

ವರ್ಷ ಅಧಿವೇಶನದ ಸ್ಥಳ ಅಧ್ಯಕ್ಷರು 1912 ಪಾಟ್ನ ಆರ್.ಎನ್.ಮುಧೋಳ್ಕರ್ 1913 ಕರಾಚಿ ನವಾಬ್ ಸೈಯದ್ ಮಹಮ್ಮದ್ ಬಹಾದರ್ 1914 ಮದರಾಸು ಭೂಪೇಂದ್ರನಾಥ ಬೋಸ್ 1915 ಬೊಂಬಾಯಿ ಎಸ್.ಪಿ.ಸಿನ್ಹ್ 1916 ಲಕ್ನೊ ಎ.ಸಿ. ಮಂಜುದಾರ್ 1917 ಕಲ್ಕತ್ತಾ ಆನಿ ಬೆಸೆಂಟ್ 1918 ಬೊಂಬಾಯಿ

           (ವಿಶೇಷಾಧಿವೇಶನ)   ಸೈಯದ್ ಹಸನ್ ಇಮಾಂ

1918 ದೆಹಲಿ ಮದನ ಮೋಹನ ಮಾಳವೀಯ 1919 ಅಮೃತಸರ ಸಿ. ವಿಜಯರಾಗವಾಚಾರಿಯರ್ 1921 ಅಹಮದಾಬಾದ ಹಕೀಂ ಅಜ್ಮಲ್ ಖಾನ್ 1922 ಗಯಾ ಸಿ.ಆರ್.ದಾಸ್ 1923 ಕಾಕಿನಾಡ ಮೌಲಾನ ಮಹಮ್ಮದ್ ಆಲಿ 1923 ದೆಹಲಿ

            (ವಿಶೇಷಾಧಿವೇಶನ)   ಅಬುಲ್ ಕಲಂ ಅಜಾದ್

1924 ಬೆಳಗಾಂವಿ ಮಹಾತ್ಮ ಗಾಂಧಿ 1925 ಕಾನ್ ಪುರ ಸರೋಜಿನಿ ನಾಯ್ಡು 1926 ಗೌಹಾತಿ ಶ್ರೀನಿವಾಸ ಅಯ್ಯಂಗಾರ್ 1927 ಮದರಾಸು ಎಂ.ಎ. ಅನ್ಸಾರಿ 1928 ಕಲ್ಕತ್ತಾ ಪಂಡಿತ ಮೋತೀಲಾಲ್ ನೆಹರು 1929 ಲಾಹೋರ್ ಜವಹಾರ್ ಲಾಲ್ ನೆಹರೂ 1930 ಅಧಿವೇಶನ ಜರುಗಲಿಲ್ಲ 1931 ಕರಾಚಿ ವಲ್ಲಭಭಾಯಿ ಪಾಟೇಲ್ 1932 ದೆಹಲಿ ಸೇಠ್ ರಣಚೋಢ್ ಲಾಲ್

                            ದಾಸ್ ಅಮೃತ್ ಲಾಲ್

1933 ಕಲ್ಕತ್ತ ನೆಲ್ಲಿ ಸೇನ್ ಗುಪ್ತ್ 1934 ಬೊಂಬಾಯಿ ರಾಜೇಂದ್ರ ಪ್ರಸಾದ್ 1935 ಅಧಿವೇಶನ ಜರುಗಲಿಲ್ಲ 1936 ಲಕ್ನೋ ಜವಹಾರ್ ಲಾಲ್ ನೆಹರೂ 1937 ಫೈಜ್ ಪುರ ಜವಹಾರ್ ಲಾಲ್ ನೆಹರೂ 1938 ಹರಿಪುರ ಸುಭಾಷ್ ಚಂದ್ರ ಬೋಸ್ 1939 ತ್ರಿಪುರ ಸುಭಾಷ್ ಚಂದ್ರ ಬೋಸ್ 1940 ರಾಂಘರ್ ಮೌಲಾನ ಅಬುಲ್ ಕಲಂ ಆಜಾದ್ 1941-45 ಅಧಿವೇಶನ ಜರುಗಲಿಲ್ಲ. 1946 ಜವಹಾರ್ ಲಾಲ್ ನೆಹರೂ 1946 ಮೀರತ್ ಜೆ.ಬಿ. ಕೃಪಾಲನಿ 1948-49 ಜೈಪುರ ಡಾ. ಪಟ್ಟಾಭಿಸೀತಾರಾಮಯ್ಯ 1951 ನಾಸಿಕ್ ಪುರುಶೋತ್ತಮ ದಾಸ್ ಟಂಡನ್ 1951-52 ದೆಹಲಿ ಪಂಡಿತ್ ಜವಹಾರ್ ಲಾಲ್ ನೆಹರೂ 1953 ಹೈದ್ರಾಬಾದ್ ಪಂಡಿತ್ ಜವಹಾರ್ ಲಾಲ್ ನೆಹರೂ 1954 ಕಲ್ಕತ್ತ ಪಂಡಿತ್ ಜವಹಾರ್ ಲಾಲ್ ನೆಹರೂ 1955 ಆವಡಿ ಯು.ಎನ್.ದೆಬರ್ 1956 ಅಮೃತಸರ ಯು.ಎನ್.ದೆಬರ್ 1957 ಇಂದೋರ್ ಯು.ಎನ್.ದೆಬರ್ 1958 ಗೌಹಾತಿ ಯು.ಎನ್.ದೆಬರ್ 1959 ನಾಗ್ ಪುರ್ ಯು.ಎನ್.ದೆಬರ್ 1959 ದೆಹಲಿ ಇಂಧಿರಾಗಾಂಧಿ 1959 ಬೆಂಗಳೂರು ನೀಲಂ ಸಂಜೀವ ರೆಡ್ಡಿ 1961 ಭಾವನಗರ ನೀಲಂ ಸಂಜೀವ ರೆಡ್ಡಿ 1962-63 ಪಾಟ್ನಾ ನೀಲಂ ಸಂಜೀವ ರೆಡ್ಡಿ 1964 ಭುವನೇಶ್ವರ ಕೆ.ಕಾಮರಾಜ್ 1965 ದುರ್ಗಾಪುರ ಕೆ.ಕಾಮರಾಜ್ 1966-67 ಜೈಪುರ ಕೆ.ಕಾಮರಾಜ್ 1968 ಹೈದರಾಬಾದ್ ಎಸ್.ನಿಜಲಿಂಗಪ್ಪ 1969 ಫರೀದಾಬಾದ್ ಎಸ್.ನಿಜಲಿಂಗಪ್ಪ 1970-71 ಬೊಂಬಾಯಿ ಜಗಜೀವನ್ ರಾಮ್ 1972-74 ಕಲ್ಕತ್ತ ಡಾ.ಶಂಕರದಯಾಳ್ 1975-77 ಚಂದಿಸ್ ಘರ್ ದೇವ್ ಕಾಂತ್ ಬರೂವ 1978-83 ದೆಹಲಿ ಇಂಧಿರಾಗಾಂಧಿ 1983-84 ಕಲ್ಕತ್ತ ಇಂಧಿರಾಗಾಂಧಿ 1985-91 ಬೊಂಬಾಯಿ ರಾಜೀವ್ ಗಾಂಧಿ 1992-96 ತಿರುಪತಿ ಪಿ.ವಿ.ನರಸಿಂಹರಾವ್ 1997-98 ಕಲ್ಕತ್ತ ಸೀತಾರಾಮ್ ಕೇಸರಿ 1998 ರಿಂದ ಇಲ್ಲಿಯವರೆಗೆ(2012) ಕಲ್ಕತ್ತ ಸೋನಿಯಾಗಾಂಧಿ

ಕಾಂಗ್ರೇಸ್ ಸಂದೇಶ; ಭಾರತ ರಾಷ್ಟ್ರೀಯ ಕಾಂಗ್ರೇಸ್ಸಿನ ಧ್ಯೇಯ ಧೋರಣೆಗಳನ್ನು ಜನತೆಗೂ, ಮುಖ್ಯವಾಗಿ ಕಾಂಗ್ರೇಸ್ ಸದಸ್ಯರಿಗೂ ತಿಳಿಯ ಹೇಳುವ ದೃಷ್ಟಿಯಿಂದ 1960ರಲ್ಲಿ ಮಾಸಿಕವಾಗಿ ಆರಂಭವಾಗಿ ಅನಂತರ ಸಾಪ್ತಾಹಿಕವಾಗಿ ಪರಿವರ್ತನೆಗೊಂಡ ಪತ್ರಿಕೆ. ರಾಜಕೀಯ ಸಂಸ್ಥೆಯ ಪತ್ರಿಕೆಯಾದರಿಂದ ಆರಂಭದಿಂದಲೂ ಪ್ರಧೇಶ ಕಾಂಗ್ರೇಸ್ ಸಂಸ್ಥೆಯ ಪ್ರಾಧಾನ ಕಾರ್ಯದರ್ಶಿಗಳಲೊಬ್ಬರು ಅದರ ಸಂಪಾದಕರಾಗಿ ಪ್ರಕಾಶಕರಾಗಿ ನೇಮಕವಾಗುತ್ತಳಿದ್ದಾರೆ. ರಾಮಕೃಷ್ಣ ಹೆಗಡೆ, ಕೆ.ವಿ. ಶಂಕರ್ ಗೌಡ ಮತ್ತು ವೈ.ರಾಮಚಂದ್ರ ಇವರು ಕ್ರಮವಾಗಿ ಪತ್ರಿಕೆಯ ಸಂಪಾದಕರಾಗಿದ್ದರು. ಮಾಸಪತ್ರಿಕೆಯಾದರೂ ಕುಂಟುತ್ತ ಸಾಗಿದ್ದ ಇದು 1961ರಲ್ಲಿ ಮರುವರ್ಷ ನಡೆಯಲಿದ್ದ ಚುನಾವಣೆಗಳ ಪ್ರಚಾರದ ದೃಷ್ಟಿಯಿಂದ ವಾರಪತ್ರಿಕೆಯಾಗಿ ಬದಲಾಯಿತು. ಕುಮಾರ ವೆಂಕಣ್ಣ ಇದರ ಕಾರ್ಯನಿರತ ಸಂಪಾದಕರಾದರು.

1962 ರಿಂದ ಪತ್ರಿಕೆ ಅನೇಕ ಬದಲಾವಣೆಗಳನ್ನು ಕಂಡಿದೆ. ಮೊದಲ ಬಾರಿಗೆ ಪಂಚತಂತ್ರದ ಕಥೆಗಳ ಮೂಲಕ ರಾಜಕೀಯ ಸಮಸ್ಯೆ, ಪ್ರಶ್ನೆ, ವಿವಾದಗಳಿಗೆ ಉತ್ತರ ನೀಡುವ ಲೇಖನ ಮಾಲೆ ಇದರಲ್ಲಿ ಆರಂಭವಾಗಿ, ಅದು ಜನ ಸಾಮಾನ್ಯರಿಗೆ ರಾಜಕೀಯ ವಿಚಾರ ವಿವರಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. ಹಾಗೆಯೆ ಭಾರತದ ಸ್ವಾತಂತ್ರ್ಯ ಇತಿಹಾಸದ ಪ್ರಮುಖ ಘಟನೆಗಳು, ಸ್ವಾತಂತ್ರ್ಯ ಯೋಧರ ಕಥೆಗಳು, ಕ್ರಾಂತಿಕಾರರ ಸಾಹಸಗಳು ಮತ್ತು ಸಾಮಾಜಿಕ ಲೇಖನಗಳು ಪ್ರಕಟವಾಗಿ ಇದು ದೇಶದ ಸ್ವಾತಂತ್ರ್ಯ ಹೋರಾಟ, ಸಾಧನೆ ಹಾಗು ಸ್ವಾತಂತ್ರ್ಯ ಭಾರತದ ಪ್ರಗತಿಯ ಬಗ್ಗೆ ಜನತೆಗೆ ತಿಳಿಯ ಹೇಳುತ್ತ ಬಂದಿದೆ. ಕನ್ನಡ ನಾಡಿನಲ್ಲಿ ಪ್ರಕಟವಾಗುತ್ತಿರುವ ರಾಜಕೀಯ ವಾರ ಪತ್ರಿಕೆ( ಪೊಲಿಟಿಕಲ್ ವೀಕ್ಲಿ) ಇದು.

ಕಾಂಚನಗಂಗ; ಪ್ರಪಂಚದ ಅತ್ಯುನ್ನತ ಪರ್ವತಶೃಂಗಗಳಲ್ಲಿ ಮೂರನೆಯದು. ಹಿಮಾಲಯ ಪರ್ವತ ಶ್ರೇಣಿಯಲ್ಲಿ, ನೇಪಾಲ್, ಸಿಕ್ಕಿಂ ಗಡಿಯ ಮೇಲೆ, ಉತ್ತರ ಆಕ್ಷಾಂಶ 27 42 ಮತ್ತು ಪೂರ್ವರೇಖಾಂತ 88 11 ನಲ್ಲಿ ಡಾರ್ಜೀಲಿಂಗ್ ನ ವಾಯವ್ಯಕ್ಕೆ 73 ಕಿಮೀ ದೂರದಲ್ಲಿದೆ. ಇದರ ಎತ್ತರ 8536 ಮೀ.

ಕಾಂಚನಗಂಗವೆಂಬ ಹೆಸರು ಇದಕ್ಕೆ ಪ್ರಾಪ್ತವಾದ್ದು ಟಿಬೆಟನ್ ಮೂಲದ ಕಾಂಗ್-ಚೆನ್-ಡ್ಜೋ-ನ್ಗ ಅಥವಾ ಯಾಂಗ್-ಛೆನ್-ಡ್ಜೋ-ನ್ಗ ಎಂಬ ನಾಲ್ಕು ಶಬ್ದಗಳಿಂದ. ಸಿಕ್ಕಿಂನಲ್ಲಿ ಇದಕ್ಕೆ ಪಂಚ ಮಹಾ ಹಿಮ ಸಂಚೆಯ ಎಂದು ಅರ್ಥ ಆ ಸುತ್ತಿನ ಜನರ ಪುರಾಣ ಮತ್ತು ಧಾರ್ಮಿಕ ಆಚಾರಗಳಲ್ಲಿ ಈ ಪರ್ವತ ಶೃಂಗ ಬಹ ಮುಖ್ಯ ಪಾತ್ರವಹಿಸಿದೆ. ಪರಿಶೋಧಕನ ದೃಕ್ಪಥದಲ್ಲಿ ಬೀಳುವುದಕ್ಕೂ ಬಲು ಹಿಂದೆಯೆ ಇದರ ಇಳಿಜಾರುಗಳು ವ್ಯಾಪಾರಿಗಳಿಗೂ ಧನ ಕಾಯುವವರಿಗೂ ಪರಿಚಿತವಾಗಿದ್ದವು.

ಇದು ಕರ್ನಾಟಕ ಸಂಕ್ರಾತಿ ವೃತ್ತದಿಂದ ಕೇವಲ ಸು.0.4 ಉತ್ತರದಲ್ಲಿರುವುದರಿಂದ ಉಷ್ಣವಲಯಕ್ಕಿಂತ ಬಲುದೂರ ಇದ್ದಹಾಗೇನಲ್ಲ. ಆದರೆ ಔನ್ನತ್ಯದಿಂದಾಗಿ ಇದರ ತುದಿಬಾಗ ಬಲು ಶೀತ. ಸನಿಯದ ಡಾರ್ಜಲಿಂಗ್ನಿಂದ ಇದು ಹಿಮ ಹೊದೆದ ಮಹಾ ಗುಡಾರದಂತೆ ಕಾಣುತ್ತದೆ.

ಕಾಂಚನಗಂಗ ಪರ್ವತಪುಂಜದ್ದು ಬೃಹತ್ ಸಿಲುಬೆಯ ಆಕಾರ. ಉತ್ತರ ದಕಿಣ ಪೂರ್ವ ಪಶ್ಚಿಮವಾಗಿ ಇದರ ದೈತ್ಯಾಕಾರದ ಚತುರ್ಭುಜಗಳು ಚಾಚಿವೆ. ದಕಿನ ಭುಜದ ಮೇಲಿರುವ ಕಾಂಚನಗಂಗದ ಎರಡನೆಯ ಶಿಖರ (8437 ಮೀ) ಮೊದಲನೆಯ ಶಿಖರಕ್ಕೂ ಎರಡನೆಯದಕ್ಕೂ ನಡುವೆ ಇರುವುದು ಮೂರನೆಯ ಶಿಖರ.