ಪುಟ:Mysore-University-Encyclopaedia-Vol-4-Part-2.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಸೂತಿಯನ್ನು ಎಳೆತುಂಬುವ ಹೊಲಿಗೆಗಳಿಗಾಗಿ ಉಪಯೋಗಿಸುತ್ತಿದ್ದರು.ಇವುಗಳಲ್ಲಿ ಹೊಲಿಗೆಗಳು ಬಹಳ ಚಿಕ್ಕವಾಗಿದ್ದು.ಹತ್ತಿರಹತ್ತಿರವಿರುತ್ತಿದ್ದುವು;ಹೊಲಿಗೆಯ ಮನೆಗಳನ್ನೋ ಸಾಲುಗಳನ್ನೋ ಎಣಿಕೆ ಮಾಡಿ ಅವುಗಳ ನಿರ್ದುಷ್ಟ್ತತೆಯನ್ನು ಪರೀಕ್ಷಿಸಲಾಗುತ್ತಿತ್ತು.ಅಮೆರಿಕನ್ ಮತ್ತು ಐರೋಪ್ಯ ಮಾದರಿಗಳನ್ನು ಅನುಸರಿಸಿ ಒ೦ದು ರೀತಿಯ ಕತ್ತರಿ ಹೊಲಿಗೆ ಕೂಡ ಪ್ರಚಲಿತವಾಗಿತ್ತು.ಇವುಗಳಲ್ಲಿ ಜಮದಾನಿ, ಚಿಕನ್ ಮೆತ್ತು ಕೆಸೀದಾ ಮಾದರಿಗಳು ಪ್ರಮುಕಖವಾಗಿದ್ದವು. ಕಸೀದಾ ಮಾದರಿಯಲ್ಲಿ ಚಿನ್ನದ ಬಣ್ಣದ ರೇಷ್ಮಯನ್ನು ಎಳೆತು೦ಬಲೂ ಸಾಟಿನ್ ಹೊಲಿಗೆಗಳಿಗಾಗಿಯೂ ಉಪಯೋಗಿಸುತ್ತಿದ್ದರು. ಸಾ೦ಪ್ರದಾಯಿಕ ಸಮಾರಂಭಗಳಲ್ಲಿ ಚೆನ್ನೆಬೆಳ್ಳಿಗಳಿ೦ದ ಕಸೂತಿ ಮಾಡಲಾದ ವಸ್ತ್ರಗಳನ್ನು ಬಹುತೇಕ ಉಪಯೋಗಿಸುತ್ತಿದ್ದರು. ಜೊತೆಗೆ ಮಖಮಲ್ಲು ಮೊದಲಾದ ವಸ್ತ್ರಗಳನ್ನು ಉಪಯೋಗಿಸಿದಾಗ ಅವುಗಳ ಸೌ೦ದಯ೯ ಇನ್ನೂ ಹೆಚ್ಚುತ್ತಿತ್ತು. ಕರ್ನಾಟಕದಲ್ಲಿ ಆಶ್ರಯದಲಿ ೧೭ನೆಯ ಶತಮಾನದಲ್ಲಿದ್ದ ಸಂಚಿಯ ಹೊನ್ನಮ್ಮ ಆಗ ಅರವತ್ತನಾಲ್ಕು ಕಲೆಗಳನ್ನು ತಿಳಿದಿದ್ದ ಮಹಿಳೆಯರೂ ಇದ್ದರೆಂದು ಹೇಳಿದ್ಧಾಳೆ.ಪುರುಷ ಕಲಾವಿದರು ಕಲ್ಲಿನ ಮೂರ್ತಿಗಳನ್ನು ಪ್ರಮಾಣ ಬದ್ದವಾಗಿ ಕಡೆಯಲೆತ್ನಿಸುತ್ತಿದ್ದಾಗ,ಸ್ತ್ರಿಯರು ತಮ್ಮ ಕಲಾಕೌಶಲವನ್ನು ಬಟ್ಟೆಯ ಮೇಲೆ ಸೂಜಿದಾರಗಳಿ೦ದ ತೋರಿಸುತ್ತಿದ್ದರು. ನಿರ್ದಿಷಟ್ಟ ಸಹಿತ್ಯದ ಆಭಾವದಿ೦ದಾಗಿ ಈ ವಿದ್ಯೆ ಕೈಯಿ೦ದ ಕೈಗೆ ಸಾಗುತ್ತಿತ್ತು.ನಾಡಿನ ಪ್ರತಿಯೊಬ್ಬ ಹೆಣ್ಣು ಮಗಳೂ ತನ್ನ ಸೀರೆ ಕುಪ್ಪುಸಗಳನ್ನು ಮಕ್ಕಳ ಬಟ್ಟೆಗಳನ್ನು ಕಸೂತಿಯಿ೦ದ ಆಲ೦ಕರಿಸುತಿದ್ದಳು.ನೆಲ ಉಳುವ ಬಸವಣ್ಣನೂ ಕಸೂತಿ ವಸ್ತ್ರದಿ೦ದ ವ೦ಚಿತನಾಗುತ್ತಿರಲಿಲ್ಲ.ಕರ್ನಾಟಕದಲ್ಲಿ ಕಸೂತಿಯಿ೦ದ ಜೀವನ ಸಾಗಿಸುತ್ತಿದ್ದ ನಿದರ್ಶಗಳಿದ್ದುವು. ದೇವಾಲಯಗಳಲ್ಲಿ ಆನೇಕ ಗೋಪುರ , ಕಲಶ. ತುಳಸಿಕಟ್ಟೆ ಇತ್ಯಾದಿ ಆಕೃತಿಗಳು ಕಸೂತಿಯಲ್ಲೂ ಮೂಡಿಬಂದುವು. ತಾಯಿ ತನ್ನ ಮಗುವಿಗೆ ಪ್ರಿಯವಾದ ಹೂಬ್ಬಳ್ಳಿಗಳಣನ್ನೂ ಗಿಳಿ, ಆನೆ, ತೊಟ್ಟಿಲು. ಹಸು ತುಂತಾದವನ್ನೊ ಕಸೂತಿಂರುಲ್ಲಿ ರೂಪಿಸುತ್ತಿದ್ದಳು. ಕನ್ನಡ ನಾಡಿನ ಕೆಸುಂಯಲ್ಲಿ ಬಿಳಿ, ರಂದು. ಹಳದಿ ಮತ್ತು ಹಗುಂ ಬಣ್ಣಗಳು ಮುಖ್ಯವಾದವು. ಮೊದಲಿಗೆ ಕಲ್ಕತ್ತದಿರಿದ ಕರ್ನಾಟಹ್ನ ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆ ಬರುತ್ತಿತ್ತು ಬಿಜಾಪುರದಲ್ಲಿ ಅದನ್ನು ತೊಳೆದು ಒಣಗಿಸುತ್ತಿದ್ಧರಂತೆ. ಆದರೆ. ಈಚೆಗೆ ಮೈಸೂರಿನ ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆ ಕಸೂತಿಗೆ ಉತ್ತಮವಾಗಿವೆ. ರೇಹ್ಮಯಲ್ಲಿ ಹಾಕಿದರೆ ಕಸೂತಿ ಬಹಳ ಎತ್ತರವಾಗಿರದೆ. ಅಂದವಾಗಿರುತ್ತದೆ, ಕನ್ನಡ ನಾಡಿನಲ್ಲಿ ಸಾಮಾನ್ಯವಾಗಿ ತಯಾರಿಸುತ್ತಿದ್ದ ಕರಿಯ ಚಂದ್ರಕಾಳಿ ಸಿರೇಯ ಮೇಲೆ ಕನ್ನಡ ಕಸೂತಿಯ ಎಲ್ಲ ನಮೂನೆಗಳನ್ನು ನೋಡಬಹುದಾಗಿತ್ತು. ಎರಡೂವರೆ ಮೊಳ ಸೆರಗಿರುವ ಹದಿನೆಂಟು ಮಳ ಸಿರೆಯ ಮೇಲೆ, ಬಿಳಿ ಮತ್ತು ಕೆಂಪು ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆ ಎಳೇಗಳಿಂದ ಕೊಡಿದ ಸರಗಿನ ಮೇಲಂಚಿಗೆ ಹೊವಿನ ಸಾಲು, ಗೋಡಂಬಿಯ ಪಟ್ಟಿ ಗೋಪುರಗಳು, ಗಿಳಿಗಳು ಮೊದಲಾದವನ್ನು ಹಾಕುತ್ತಿದ್ದರು.ಸೀರೆಯ ಉದ್ದಕ್ಕೂ ನೀಲಗಗನದಲ್ಲಿಯ ನಕ್ಷತ್ರಗಳಂತೆ ಬಿಳಿಯ ಚಿಕ್ಕೆಗಳು ಹಾರಡಿದ್ದು, ಮಧ್ಯ ಮಧ್ಯ ದೊಡ್ಡ ದೊಡ್ಡ ನಮೊನೆಗಳು (ಡಿಸೈನ್)ಇರುತ್ತಿದ್ದವು. ಬನಾರಸಿನ ಬಂಗಾರದ ಕಡ್ಡಿಯ ನಮೂನೆಗಳು ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆ ಸೀರೆ ಮತ್ತು ಖಣಗಳಲ್ಲಿ ಮೂಡಿ ಮನ ತಣಿಸುತ್ತಿದ್ದವು.

  ಕನ್ನಡ ನಾಡಿನಲ್ಲಿ ಮೆಂಥೆ,ನೇಗಿ ಗಾಂವಟಿ ಮತ್ತು ಮುರಿಗೆ ಎಂಬ ನಾಲ್ಕು ಮಾದರಿಗಳು ಖ್ಯಾತವಾಗಿವೆ.ಮೆಂಥೆ ಕಸೂತಿ ಮೆಂತ್ಯೆದ ಕಾಳಿನ ಸಾಲೆಂಬಂತೆ ಕಂಡು ಬರುವುದು. ಸ್ವಲ್ಪ ಸ್ಥೂಲವಾದ  ಈ ಕಸೂತಿಯನ್ನು ಹಿನ್ನೆಲೆಯನ್ನು ತುಂಬಲು ಬಳಸುತ್ತಾರೆ.ಎಳೆಗಳನ್ನೆಣಸಿಯೇ ಇದ್ದನ್ನು ಹಾಕುವುದರಿಂದ, ನೂಲಿನ ಬಟ್ಟೆಯೇ ಮೆಂಥೆಯ ಮಾದರಿಗೆ ಉತ್ತಮವಾದುದು. ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆಯನ್ನು ಇದಕ್ಕೆ ಉಪಯೋಗಿಸುವುದುಂಟು ನೇಗಿ ಕಸೂತಿಯನ್ನು ಬಟ್ಟೆಯ  ಆಡ್ಡ ಎಳೆಗಳೊಡನೆ ನೇಯ್ದಂತೆಯೇ ಹಾಕುತ್ತಾರೆ.ಆದ್ದರಿಂದ ಮೇಲೆ ಹಾಕಿದ ಆಕೃತಿ ಕೆಳಗೂ ಮಾಡುವುದು.

ಅದರೆ ಎಳೆಗಳು ಮೇಲೆ ಉದ್ದವಾಗ, ಕೆಳಗೆ ಸಣ್ಣವಾಗಿರುವುವು. ಗಾವಂಟಿ ಹಳ್ಳಿಗಳಲ್ಲಿ ಹಾಕುವ ಕಸೂತಿ. ನಾಡಿನಲ್ಲಿಯೇ ಅತ್ಯಂತ ಸುಂದರವಾದ ಕಸೂತಿಯೆಂದರೆ ಇದೇ. ಗಾವಂಟಿಯನ್ನು ಹಾಕಿದ ಬಟ್ಟೆಯ ಮೇಲೆ ಎಲ್ಲಿ ಪ್ರಾರಂಬಿಸಿದರು ಎಲ್ಲಿ ಮುಗಿಸಿದರು ಎಂಬುದು ಹೊರನೋಟಕ್ಕೆ ತಿಳಿಯುವುದಿಲ್ಲ. ಆಲ್ಲದೆ,ಕೆಳಗೆ ಮತ್ತು ಮೇಲೆ ಈ ಕಸೂತಿ ಒಂದೇ ರೀತಿಯಲ್ಲಿ ಬರುವುದು. ಇದರಲ್ಲಿ ಪದ್ಯ.ಕಲಶ ಮೊದಲಾದವನ್ನು ಅತ್ಯುತ್ತಮವಾಗಿ ಮೂಡಿಸಬಹುದು.ಮುರುಗೆಮುರಿಗೆಯಾಗಿರುವುದರಿಂದ ಮುರುಗೆ ಕಸೂತಿಯನ್ನು ಕಂಬಳಿಗಳ ಮೇಲೆ ಸಾಮಾನ್ಯವಾಗಿ ಹಾಕುವದು. ಆನೆ ಅಂಬಾರಿ ಈ ಕಸೂತಿಯಲ್ಲಿ ಬಹಳ ಚೆನ್ನಾಗಿ ಕಾಣುತ್ತೆದೆ.ಕಂಬಳಿಗಳಿಗಾಗಿ ನೇಗಿ ಕಸೂತಿಯನ್ನೂ ಉಪಯೋಗಿಸುವುದುಂಟು. ಗುಡಿಗೋಪುರ,ಬಸವಣ್ಣ ಲಿಂಗ,ಎಳ್ಳು ಹೂವು,ತೆನೆ,ತೊಟ್ಟಿಲು ಮಂಟಪ-ಮುಂತಾದ ಚಿತ್ರಗಳನ್ನೊಳಗೊಂಡ ಸಿರೆಗಳು ಕರ್ನಾಟಕದ ವೈಶಿಷ್ಪ್ಯ.

  ಕನ್ನಡ ನಾಡಿನ ಕೆಳವರ್ಗದ ಸ್ತ್ರೀಯತಲ್ಲಿ ಬಗೆಬಗೆಯ ಕಸೂತಿಗಳನ್ನು ಕಾಣಬಹುದು. ಲಂಬಾಣಿ ಸ್ತ್ರೀಯರು ಸಣ್ಣ ಸಣ್ಣ ಕನ್ನಡಿಯ ತುಂಡುಗಳನ್ನು ಸೇರಿಸಿ ಸರಪಳಿ ಹೊಲಿಗೆ ಹಾಕುತ್ತಾರೆ. ಇದು ವಂಶಪಾರಂಪರ್ಯವಾಗಿ ಹರಿದು ಬಂದಿರುವ ಕಲೆ. ಕರ್ನಾಟಕದಲ್ಲಿ 

ಜಾತಿಕುಲ ಭೇದಗಳಿಲ್ಲದೆ ಎಲ್ಲ ಹೆಣ್ಣುಮಕ್ಕಳೂ ಕಸೂತಿ ಕಲೆಯ ಅಭಿಮಾನಿಗಳಾಗಿದ್ದಾರೆ.

     ಪುರಾತನ ನಾಗರಿಕತೆಗಳಲ್ಲಿ: ಪ್ರಪಂಚದ ಅನೇಕ ನಾಗರಿಕತೆಗಳಲ್ಲಿ ಕಸೂತಿ ಕಲೆಯ ಉತ್ಕೃಷ್ಟ ನಮೂನೆಗಳು ದೊರೆಯುತ್ತವೆ. ಈಜಿಪ್ಟಿನಲ್ಲಿ ಬಟ್ಟೆಗಳ,ರಥಗಳ ಮೇಲಿನ ಹೊದಿಕೆಗಳು, ಗುಡಾರಗಳು ಇತ್ಯಾದಿಗಳೆಲ್ಲದರ ಮೇಲೂ ಕಸೂತಿಯ ಚಿತ್ರಗಳನ್ನು ಬಿಡಿಸಲಾಗುತ್ತಿತ್ತೆಂಬುದು ಸಮಾಧಿಗಳ ಮೇಲಿರುವ ಚಿತ್ರಗಳಿಂದ ತಿಳಿದು ಬರುತ್ತದೆ. ವಿದೇಶಿಯರು ಆಕೃತಿಗಳ ಉಡುಗೆತೊಡುಗೆಗಳ ಮೇಲೂ ಚಿತ್ರಗಳಿರುವುದರಿಂದ ಕಸೂತಿ ಕಲೇ ತತ್ಕಾಲೀನ ನಾಗರಿಕತೆಗಳಲ್ಲಿ ಇತ್ತೆಂಬುದು ಸ್ಪಷ್ಟವಾಗುತ್ತದೆ.ದೋಣಿಗಳ ಮತ್ತು ಹಡಗುಗಳ ಹಾಯಿಗಳ ಮೇಲು ಚಿತ್ರಗಳನ್ನು ಬಿಡಿಸಲಾಗುತ್ತಿತ್ತು, ಹಳೆಯ ಒಡಂಬಡಿಕೆಯ ಎಕ್ನೋಡಸ್ ಮತ್ತು ಎಜ್ಲೀಕಿಯಲ್ ಗಳ ಪ್ರಕಾರ ಹೀಬ್ರುಗಳ ಸಹ ಸಂಪ್ರದಾಯಿಕ ಪೂಜೆಗಾಗಿ ಉಪಯೋಗಿಸುತ್ತಿದ್ದ ವಸ್ತ್ರಗಳ ಮೇಲೆ ಚಿನ್ನ ಹಾಗು ಬೇಳ್ಳಿಯ ಎಳೆಗಳಿಂದ ಚಿತ್ರ ಬಿಡಿಸುತ್ತಿದ್ದರಂತೆ.ಪ್ರ.ಶ.ಪೂ.ಸು.೧೦೦೦ದ ಹೊತ್ತಿಗೆ ಚೀನದಲ್ಲಿ ಕಸೂತಿ ಕಲೆಯುದ್ದುದರ ಕುರುಹುಗಳು ದೊರೆಯುತ್ತವೆ.ಚೀನಾಂಬರ ಭಾರತವೇ ಮುಂತಾದ ದೇಶಗಳಲ್ಲು ಖ್ಯಾತವೆತ್ತಿದುದಾಗಿತ್ತು.ಪ್ರ.ಶ.ಪೂ.ಸು. ೬ನೇ ಶತಮಾನದ ಪಂಚಿಂಗ್ ಗ್ರಂಥದಲ್ಲಿರುವ ಅನೇಕ ಸಂಪ್ರದಾಯಿಕ ವಸ್ತುಗಳ ವರ್ಣನೆಯಲ್ಲಿ ಕಸೂತಿಯ ಬಗ್ಗೆ ಕೆಲವು ವಿವರಗಳು ದೊರೆಯುತ್ತವೆ.
         ಆಲ್ಟಾಯ್ ಪರ್ವತ ಪ್ರದೇಶದಲ್ಲಿಯ ಶೋಧನೆಗಳಲ್ಲಿ ಮಂಗೋಲಿಯವರು ಉಪಯೋಗಿಸುತ್ತಿದ್ದ ಸ್ಟೈಥಿಯನ್ ಮಾದರಿಯ ಉಣ್ಣೆಯ ನಿಲುವಂಗಿಗಳೇ ಮೊದಲಾದ ಉಡುಪುಗಳು ದೊರೆತ್ತಿವೆ. ಸ್ತ್ರೀಯರ ಉಡುಪುಗಳು, ಪಟ್ಟಿಗಳು, ಚೀಲಗಳು,ಜೀನುಗಳು ಇತ್ಯಾದಿಗಳ ಮೇಲು ಸುಂದರವಾಗಿ ಕಸೂತಿ ಮಾಡಲಾಗಿದೆ,ಸುಮಾರು ೬ನೇ ಶತಮಾನದಲ್ಲಿ ಅನೇಕ ಕ್ರೈಸ್ತ ಚಿಹ್ನೇಗಳನ್ನು ನಿಲುವಂಗಿಗಳ ಮೇಲೆ ಚಿತ್ರಿಸಲಾರಂಬಿಸಿದರು. ಇದಕ್ಕೆ ಸಾಮಾನ್ಯವಾಗಿ ಬಣ್ಣ ಹಾಕಲಾಗುತ್ತಿತ್ತು, ೪-೫ನೆಯ ಶತಮಾನಗಳ ಹೊತ್ತಿಗೆ ಈ ಕಲೆ ಇನ್ನೂ ಅಭಿವೃದ್ದಿಗೊಂಡು ನಸುಗೆಂಪು,ಹಳದಿ ಮತ್ತು ಹಸಿರು ಬಣ್ಣಗಳು ಮೇಲೆ ಮೆರಗು ಕೊಡುವಂತೆ ಮಾಡಲು ಉಪಯೋಗಕ್ಕೆ ಬಂದವು.
        ಪಾಶ್ಚಾತ್ಯ ರಾಷ್ಟ್ರಗಳಲ್ಲಿ: ಪುರಾತನ ಗ್ರೀಸಿನ ಕಸೂತಿ ವಸ್ತುಗಳು ಯಾವುವೂ ಉಳಿದಿಲ್ಲ.ಅದರ ಉಗಮ ಎಂದಾಯಿತೆಂಬುದನ್ನು 

ಖಚಿತವಾಗಿ ಹೇಳುವಂತಿಲ್ಲ. ೨೦ನೆಯ ಶತಮಾನದ ಮಧ್ಯಬಾಗದ ಅನಂತರ ಇಲ್ಲಿ ಈ ಕಲೆ ಸಾಂಪ್ರದಾಯಕವೆಂಬ ದೃಷ್ಟಿಯಲ್ಲಿ ಆಳಿಸಿಹೋಯಿತು.೧೨-೧೫ ನೆಯ ಶತಮಾನಗಳ ನಡುವೆ ಇವುಗಳ ಉಗಮವಾಗಿದ್ದರಬಹುದು,ಇವರು ಹೊಸೆಯದ ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆಯ ಎಳೆಗಳಿಂದ ಲಿನೆನ್ ಬಟ್ಟೆಗಳ ಮೇಲೆ ಕಸೂತಿ ಹಾಕುತ್ತಿದ್ದರು. ಇವರ ಕಸೂತಿಗಳು ಸಾಮಾನ್ಯವಾಗಿ ಹಸಿರು ಮತ್ತು ತಿಳಿನೀಲಿ ಬಣ್ಣಗಳವು. ಇವು ೨೦ ಇಂಚುಗಳಿಗಿಂತ ಅಗಲವಾಗಿರುತ್ತಿರಲಿಲ್ಲ.ನೆಪೋಲಿಯಾನಿಕ್ ಯುದ್ದಗಳ ಕಾಲದಲ್ಲಿ ಉಪ್ಪುನೇರಳೆ ಗಿಡಗಳನ್ನು ಕಡಿದುಹಾಕಿ ಆಮೇಲೆ ಅವುಗಳ ಸ್ಥಳದಲ್ಲಿ ಅಲಿವ್ ಗಿಡಗಳನ್ನು ನೆಟ್ಟುದುದರಿಂದ ಒಂದು ರಿತಿಯಲ್ಲಿ ಗ್ರೀಕ್ ಕಸೂತಿ ಕಲೆಗೆ ಕೊಡಲಿಯೇಟು ಬಿದ್ದಿತೆನ್ನಬಹುದು. ಅಯೋನಿಯನ್ ದ್ವಿಪಸಮೂಹ ವ್ಯಾಪಾರ ಮಾರ್ಗದಲ್ಲಿದ್ದುದರಿಂದ, ವ್ಯಾಪಾರ ಸಂಪರ್ಕದಿಂದ ಪರ್ಷಿಯನರ ಮತ್ತು ಇಟಾಲಿಯನರ ಪ್ರಭಾವ ಗ್ರೀಕರ ಕಸೂತಿ ಕಲೆಯ ಮೇಲೆಯೂ ಬಿತ್ತು ವಸ್ತ್ರಗಳ ಮೇಲೆ ಅಗಲವಾದ ನಮೋನೆಗಳನ್ನು ತೆರೆ ಮತ್ತು ಪೀಟೋಪಕರಣಗಳಿಗೆ ಉಪಯೋಗಿಸಲಾಗುತ್ತಿದ್ದ ಡಮಾಸ್ಯ್ ಬಟ್ಟೆಯ ಮೇಲೆ ಹೂಕುಂಡಗಳ ಚಿತ್ರಗಳನ್ನು ಬಿಡಿಸುತ್ತಿದ್ದರು.ಇವರಲ್ಲಿ ಅನೇಕ ಮಾದರಿಯ ಹೊಲಿಗೆಗಳಿದ್ದವು.ಕ್ರಿಟ್ರಾನ್ ಮಾದರಿಯ ಹೊಲಿಗೆಯಲ್ಲಿ ಗಾಡ ಹಳದಿ ಮತ್ತು ಕಪು ಬಣ್ಣಗಳನ್ನು ಕುಡಿಸಲಗುತ್ತಿತ್ತು. ಸೈಕ್ಲೇಡಿನಲ್ಲಿಯ ಸಮ್ರಾಟ್ ಮಾದರಿಯ ಕಸೂತಿಗಳನ್ನು ಷಟ್ಕೋಣಾಕೃತಿ ಪ್ರಾದನ.ಇವೇ ಅಲ್ಲವೇ ರಾಣಿ ಮಾದರಿ,ನಕ್ಷತ್ರ ಮಾದರಿ ಇತ್ಯಾದಿಗಳು ಪ್ರಚಲಿತವಾಗಿದ್ದವು. ರೋಡ್ಸ್ ಕಸೂತಿಯ ಕಲೇಯ ಮೇಲೆ ಐರೋಷ್ಕರ ಪ್ರಭವದಿಂದಾಗಿ ಮಂಚದ ತೆರೆಗಳಿಗೆ ಬಾಗಿಲನ್ನು ಇಡಲಾಗಿದೆಯೆಂದು ತೋರುವಂತೆ ಗುಡಾರಗಳ ಬಾಗಿಲಿನ ರೀತಿಯ ಆಕೃತಿಗಳನ್ನು ಹೊಲಿಯುತ್ತಿದ್ದರು. ದಿಂಬುಗಳಿಗೆ ಅಂಚುಗಳನ್ನು ಹೊಲಿಯಲಾಗುತ್ತಿತ್ತು. ಸ್ಕೈರೋಸ್ ಕಲೆಯ ಮೇಲೆ ತುರ್ಕರ ಪ್ರಭಾವದಿಂದ ಅರ್ಧ ಪೂರ್ವದ ಮತ್ತು

ಅರ್ಧ ಪಶ್ಚಿಮದ ರೀತಿಯ ಕಲೇಗಳ ಸಂಯೋಗವಾಗಿತ್ತು. ಸ್ಕೈರೋಸರು ಹೂ ಬಿಡುತ್ತಿರುವ ಗಿಡಗಳು, ಚಿಲಿಪಿಲಿಗುಟ್ಟುತಿರುವ ಪಕ್ಷಿಗಳು,ಹಾಯಿತೆರೆದು ಹೊರಡಲೆತ್ನಿಸುತ್ತಿರುವ ಹಡಗುಗಳ ಮುಂತಾದವನ್ನೇ ಹೆಚ್ಚಾಗಿ ಕಸೂತಿಯ ಉತ್ಕೃಷ್ಟತೆ ಇರುವುದು ಅವುಗಳ ಶ್ರೀಮಂತಿಕೆಯಲ್ಲಿ ಬಣ್ಣಬಣ್ಣದ ರೇ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಷ್ಮೆ ಬಟ್ಟೆಗಳ ಮೇಲೆ ಚಿನ್ನ ಮತ್ತು ಬೆಳ್ಳಿಯ ದಾರಗಳಿಂದ ಈ ಜನ ಕಸೂತಿ ಮಾಡುತ್ತಿದ್ದರು.ಹಬ್ಬ ಹರಿದಿನಗಳಲ್ಲಿ ಉಪಯೋಗಿಸಲಾಗುತ್ತಿದ್ದ ಸ್ತ್ರೀಯರ ಕುಪ್ಪಸಗಳಿಗೆ ಉದ್ದುದ್ದವಾಗಿ ಬಿಡಿಬಿಡಿಯಾದ ಹೂಗಳ ಮತ್ತು ಎಲೆಗಳ ಚಿತ್ರಗಳನ್ನು ಚಿನ್ನದ ಎಳೆಯಿಂದ ಮಾಡುತ್ತಿದ್ದರು. ಕೆಂಪು ಮತ್ತು ಊದಾ ಬಣ್ಣಗಳ ಬಟ್ಟೆಗಳನ್ನು ಇದೇ ರೀತಿಯಾಗಿ ಸಜ್ಜುಗೊಳಿಸುತ್ತಿದ್ದರು.