ಪುಟ:Mysore-University-Encyclopaedia-Vol-4-Part-2.pdf/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೂಕ್ಷ್ಮವೇದಿಯೂ ಬಳಕುವ ರಚನೆಯವೂ ಆದ ಟೆಂಟಕಲ್ ಎಂಬ ಸ್ಪರ್ಶತುಂತುಗಳೂ,ಬಾಹ್ಯಚರ್ಮದಲ್ಲಿ ಕುಟುಕುಕಣಗಳೂ(ನಿಮ್ಯಾಟೊಸಿಸ್ಟ್)ಇರುವುದು,ಈ ವಂಶದ ಪ್ರಾಣಿಗಳು ವಿಶಿಷ್ಟ ಲಕ್ಷಣಗಳು.ದೇಹ ಸಾಮಾನ್ಯವಾಗಿ ತ್ರಿಜ್ಯ ಸಮ್ಮಿತಿಯನ್ನು(ರೇಡಿಯಲ್ ಸಿಮೆಟ್ರಿ)ಪ್ರದರ್ಶಿಸುತ್ತದೆ.ಕೆಲವು ಪ್ರಾಣಿಗಳಲ್ಲಿ ದ್ವಿಪಾರ್ಶ್ವಸಮ್ಮಿತಿ(ಬೈಲ್ಯಾಟರಲ್ ಸಿಮೆಟ್ರಿ)ಕಂಡುಬರುತ್ತದೆ.ಗಾತ್ರದಲ್ಲಿ ೧/೨೫" ದಷ್ಟು ಸಣ್ಣದಾದ ಪಾಲಿಪ್ ಗಳಿಂದ ಹಿಡಿದು ಮೂರಡಿ ವ್ಯಾಸವುಳ್ಳ ಪಾಲಿಪ್ ಗಳ ವರೆಗೂ ಇರುವುದುಂಟು.ಹಾಗೆಯೆ,ಅಷ್ಟಾಗಿ ಕಣ್ಣಿಗೆ ಬೀಳದ ಬಹು ಸಣ್ಣ ಅಂಬಲಿಮೀನುಗಳಿಂದ ಹಿಡಿದು ಆರಡಿ ವ್ಯಾಸದ ದೈತ್ಯಾಕಾರದ ಅಂಬಲಿ ಮೀನುಗಳವರೆಗೂ ಇರುವುದುಂಟು.

ಪರ್ಯಾಯ ಸಂತತಿ ಕ್ರಮ:ಬಹುತೇಕ ಪ್ರಾಣಿಗಳ ಜೀವನಚರಿತ್ರೆಯಲ್ಲಿ ಪಾಲಿಪ್ ಮತ್ತು ಮೆಡೂಸ ಎಂಬ ಎರಡು ಅವಸ್ಥೆಗಳು ಪರ್ಯಾಯವಾಗಿ ಬರುವುದು ಕುಟುಕುಕಣವಂತಗಳ ಮತ್ತೊಂದು ಲಕ್ಷಣ.ಪಾಲಿಪ್ ರೂಪ ವಸ್ತುವೊಂದಕ್ಕೆ ಅಂಟಿಕೊಂಡು ನೆಟ್ಟಿಗೆ ಓಲಾಡುತ್ತಿರುತ್ತದೆ.ಅದರ ತುದಿಯಲ್ಲಿ ಬಾಯಿಯೂ ಬಾಯಿಯ ಸುತ್ತ ಸ್ಪರ್ಶತಂತುಗಳೂ ಇರುತ್ತವೆ.ಇದು ಆ ಪ್ರಾಣಿಯ ಸ್ಥಾವರರೂಪ ಮೆಡೂಸ ಆ ಪ್ರಾಣಿಯ ಚಲಿಸುವ ರೂಪ ಸಾಮಾನ್ಯವಾಗಿ ಇದನ್ನು ಅಂಬಲಿ ಮೀನು(ಜೆಲ್ಲಿ ಫಿಷ್)ಎಂದು ಕರೆಯುವರು.ಅದರ ಕೊಡೆಯಾಕೃತಿಯ ದೇಹವನ್ನು ಗಂಟೆ(ಬೆಲ್)ಎಂದು ಕರೆಯುವರು.ಅದರ ಮೇಲ್ದವಡೆಯ ಮಧ್ಯದಿಂದ ದೇಹದೊಳಕ್ಕೆ ಇಳಿಯುವ ಮೆನೂಬ್ರಿಯಂ ಎಂಬ ನಾಳವಿದೆ.ಆ ನಾಳದ ತುದಿಯಲ್ಲಿ ಬಾಯಿಯಿದೆ.ಗಂಟೆಯ ಸುತ್ತಣ ಅಂಚಿನಲ್ಲಿ ಸ್ಪರ್ಶತುಂತುಗಳಿವೆ.(ಟೆಂಟಕಲ್ಸ್)ಈ ವಂಶದ ಹೈಡೋಜ಼ೋವ ಮತ್ತು ಸ್ಕೈಫೊಜ಼ೋವ ಎಂಬ ಎರಡು ವರ್ಗಗಳ ಕುಟುಕುಕಣವಂತಗಳಲ್ಲಿ ಲಿಂಗರೀತಿಯ ವಂಶಾಭಿವೃದ್ದಿಯಿಂದ ಪ್ಲಾನುಲ ಎಂಬ ಲಾರ್ವ ಉಧ್ಭವಿಸುತ್ತದೆ.ಇದು ಯಾವುದಾದರೂ ವಸ್ತುವಿಗೆ ಕಚ್ಚಿಕೊಂಡು ವೃದ್ಧಿಯಾಗಿ ಪಾಲಿಪ್ ರೂಪವನ್ನು ತಾಳುತ್ತದೆ.ಇದು ಏಕಾಂಗಿಯಾಗಿ ಉಳಿಯಬಹುದು ಅಥವಾ ಆಲಿಂಗರೀತಿಯಿಂದ ಕವಲೊಡೆದ ಆ ಮೂಲಕ ವಂಶಾಭಿವೃದ್ಧಿಮಾಡಿ ಸಾಂಘಿಕ ಸ್ವರೂಪವನ್ನು ತಾಳಬಹುದು.ಸ್ಥಾವರ ಜೀವನವನ್ನು ನಡೆಸುವ ಪಾಲಿಪ್ ಆ ಪ್ರಾಣಿಯ ಕಿಶೋರಾವಸ್ಥೆ ಮಾತ್ರ.ಕೊನೆಗೆ ಅದು ಆಲಿಂಗರೀತಿಯಿಂದ ಮೊಗ್ಗೊಡೆದು ಮೆಡೂಸಗಳನ್ನು ಉತ್ಪತ್ತಿಮಾಡುತ್ತದೆ.ಅವು ನೀರಿನಲ್ಲಿ ಚಲಿಸುತ್ತ ಬೆಳೆದು ಲೈಂಗಿಕವಾಗಿ ಪ್ರೌಢಾವಸ್ಥೆಗೇರುತ್ತವೆ.ಎಂದರೆ,ಕುಟುಕು ಕಣವಂತಗಳ ಜೀವನ ಚರಿತ್ರೆಯಲ್ಲಿ ವಂಶಾಭಿವೃದ್ಧಿ ಮಾಡುವ ಪಾಲಿಪ್ ರೂಪವೂ ಆನಂತರ ಅದರಿಂದ ಲಿಂಗರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಮೆಡೂಸ ರೂಪವೂ ಬರುವುದರಿಂದ ಇಲ್ಲಿ ಪರ್ಯಾಯ ಸಂತಾನೋತ್ಪತ್ತಿ(ಆಲ್ಟರ್ನೇಷನ್ ಆಫ್ ಜನರೇಷನ್ಸ್)ಕಂಡುಬರುತ್ತದೆ.

ದೇಹರಚನೆ:ಕುಟುಕುಕಣವಂತಗಳ ದೇಹ ಒಂದೇ ದ್ವಾರವಿರುವ ಕೋಶದಂತಿರುತ್ತದೆ.ಈ ದ್ವಾರವೇ ಬಾಯಿ ಅದು ಆಹಾರಸೇವನೆಗೂ ಮಲವಿಸರ್ಜನೆಗೂ ಇರುವ ಏಕೈಕ ಮಾರ್ಗ.ಬಾಯಿಯ ಸುತ್ತಲೂ ಸ್ಪರ್ಶತುಂತುಗಳಿವೆ.ಇವು ಪ್ರಾಣಿಯ ಆತ್ಮರಕ್ಷಣೆಗೂ ಸ್ವಲ್ಪ ಮಟ್ಟಿಗೆ ಅದರ ಚಲನೆಗೂ ನೆರವಾಗುವ ಅಂಗಗಳು.ಈ ತುಂತುಗಳ ಮೇಲಿರುವ ಕುಟುಕು ಕನಗಳು ಮೊದಲೆರಡು ಕಾರ್ಯಗಳಿಗೆ ನೇರವಾಗಿ ಪಾತ್ರವಹಿಸುತ್ತವೆ.ದೇಹದಲ್ಲಿ ಎರಡು ಪದರದ ಕೋಶಗಳ ಕವಚ ಮಾತ್ರ ಇದೆ.ಹೊರಮೈಯನ್ನು ಆವರಿಸಿರುವ ಹೊರಚರ್ಮದ ವರಿಸೆಯಲ್ಲಿ ಹಲವು ಬಗೆಯ ಕೋಶಗಳಿವೆ.ಕುಟುಕುಕಣಗಳನ್ನು ರೂಪಿಸುವ ನೈಡೋಬ್ಲಾಸ್ಟ್ ಗಳು,ಸಂವೇದಿ ಕಣಗಳು,ನರಕೋಶಗಳು(ನ್ಯೂರಾನ್ಸ್),ರಸಸ್ರಾವಕ ಕೋಶಗಳು,ಅಂತರಾಳದ ಕೋಶಗಳು(ಇಂಟರ್ ಸ್ಟಿಷಿಯಲ್ ಸೆಲ್ಸ್),ಹೊರತಕ್ಕಿನ ಕೋಶಗಳು ಇವೇ ಮುಂತಾದ ಕಣಗಳನ್ನು ಅದರಲ್ಲಿ ಕಾಣಬಹುದು.ಹೊರತಕ್ಕಿನ ಕೋಶಗಳು ರೋಮಗಳನ್ನು(ಸೀಲಿಯ)ತಳೆದಿರಬಹುದು.ಅವುಗಳ ತಳದಲ್ಲಿ ಆಕುಂಚಕ ಕಣಗಳ ಅಥವಾ ಸ್ನಾಯುವಿನ ರಚನೆಗಳಿರುತ್ತವೆ.ದೇಹದ ಒಳಮೈಯನ್ನು ಇನ್ನೊಂದು ವರಸೆ ಕಣಗಳು ಆವರಿಸಿರುವ ತೊಕ್ಕಿನಲ್ಲಿರುವಂಥ ವಿವಿಧ ರೀತಿಯ ಕಣಗಳಿರುತ್ತವೆ.ಜಠರಾವಕಾಶಗಳನ್ನು ಆವರಿಸಿರುವ ತೊಕ್ಕು ಜೀರ್ಣಕೋಶಗಳ ವರಸೆಯಾಗಿ ಮಾರ್ಪಟ್ಟಿದೆ.ಇವು ಸ್ರವಿಸುವ ಜೀರ್ಣರಸದಲ್ಲಿರುವ ಕಿಣ್ವಕ್ಕೆ ಸಸಾರಜನಕಾದಿವಸ್ತುಗಳನ್ನು(ಪ್ರೋಟಿನ್ಸ್)ವಿಭಜಿಸುವ ಶಕ್ತಿಯಿದೆ.ಅದು ಆಹಾರವನ್ನು ಅಣುರೂಪಕ್ಕೆ ಒಡೆಯುತ್ತದೆ.ಜಠರಾವಕಾಶವನ್ನು ಆವರಿಸಿರುವ ಆ ಕೋಶಗಳು ಆನಂತರ ಅದನ್ನು ಅಂತರ್ಗತಮಾಡಿಕೊಳ್ಳುತ್ತವೆ.ಆಹಾರದ ಅಂತಿಮ ಜೀರ್ಣಕಾರ್ಯವೂ ಆ ಕೋಶಗಳೊಳಗೇ ನಡೆಯುತ್ತದೆ.ಹಾಗೆ ಜೀರ್ಣವಾದ ಪೋಷಾಕಾಂಶಗಳು ದೇಹದ ಬೇರೆ ಬೇರೆ ಭಾಗಗಳಿಗೆ ಪ್ರಸರಿಸುವುವು.ಹೊರ ಮತ್ತು ಒಳವರಸೆಗಳ ನಡುವೆ ಇರುವ ಆಮೀಬೊಸೈಟ್ಸ್ ಎಂಬ ಎಂಬ ಸಂಚಾರಿಕೋಶಗಳೂ ಪೋಷಕಾಂಶಗಳನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಕೊಂಡೊಯ್ಯಲು ನೆರವಾಗುತ್ತವೆ.ಸಾಮಾನ್ಯವಾಗಿ ಜಠರ ಸರಳವಾದ ಒಂದೇ ಕೋಶದ ರೂಪದಲ್ಲಿರಬಹುದು ಅಥವಾ ಮಧ್ಯದಲ್ಲಿ ಗೋಡೆಗಳಂಥ ರಚನೆಯಿದ್ದು ಹಲವು ಭಾಗಗಳಿರಬಹುದು.

ಚಲನೆ:ಹೈಡ್ರೋಜ಼ೋವ ವರ್ಗದ ಪಾಲಿಪ್ ಗಳಂಥ ಸೂಕ್ಷ್ಮ ರೂಪದ ಕುಟುಕು ಕಣವಂತಗಳಲ್ಲಿ ಚಲನೆಗೆ ನೆರವಾಗತಕ್ಕ ವಿಶಿಷ್ಟ ರಚನೆಗಳಾಗಲೀ,ನಿರ್ದಿಷ್ಟ ಸ್ನಾಯುಗಳಾಗಲೀ ಇರುವುದಿಲ್ಲ.ಆದರೆ ಹೊರತೊಕ್ಕಿನಲ್ಲೂ ಜಠರಾವಕೋಶದ ಒಳಪೊರೆಯಲ್ಲೂ ಎಪಿಥೀಲಿಯಲ್ ಸ್ನಾಯುಕೋಶಗಳುಂಟು.ಅವುಗಳ ತಳಭಾಗ ಮೀಸೊಗ್ಲಿಯಕ್ಕೆ ಬಂಧಿಸಿದೆ.

ಅವು ಹೊರಚರ್ಮದಲ್ಲಿ ನೀಳವಾಗಿಯೂ ಜಠರಾವಕಾಶದ ಒಳಪೊರೆಯಲ್ಲೂ ವರ್ತುಲಾಕಾರದ ಪಟ್ಟಿಯಂತೆ ಅಡ್ಡಡ್ಡಲಾಗಿಯೂ ಜೋಡಿಸಿಕೊಂದಿರುತ್ತವೆ.ವೃತ್ತಸ್ನಾಯುಕೋಶಗಳ ಸಂಕೋಚದಿಂದ ದೇಹ ನೀಳವಾಗುತ್ತದೆ.ನೀಳಸ್ನಾಯು ಕೋಶಗಳ ಸಂಕೋಚದಿಂದ ದೇಹ ಕಿರಿದಾಗುತ್ತದೆ.ದೇಹವನ್ನು ಬಾಗಿಸುವುದಕ್ಕೂ ಇದರಿಂದ ಸಾಧ್ಯವಾಗುತ್ತದೆ.ಕಡಲ ಹೂವಿನಂಥ ದೊಡ್ಡ ಪಾಲಿಪ್ ಗಳಲ್ಲಿ ಸ್ನಾಯುಕೋಶಗಳಿಲ್ಲದಿದ್ದರೂ