ಪುಟ:Mysore-University-Encyclopaedia-Vol-4-Part-2.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂತ ಮುದ್ರಣ (ಮ್ಯಾಗ್ನೆಟಿಕ್ ಹೆಡ್)ಒಂದು ಸುರುಳಿಯೊಳಗೆ ಕಬ್ಬಿಣದ ತಳ್ಳನೆಯ ಪದರಗಲಳು(ಲ್ಯಾಮಿನೇಷನ್ಸ್)ಇದ್ದುವು.ಪೀಪಾಯಿಗೆ ಸಮಾಂತರವಾಗಿ ಶಿರ ಚಲಿಸುತ್ತಿತ್ತು ಸೂಕ್ಷ್ಮ ಧ್ವನಿರೂಪದ ವಿದ್ಯುತ್ಪ್ರವಾಹ ಸುರುಳಿಯಲ್ಲ್ಲಿ ಹರಿದಾಗ ಅದಕ್ಕನುಗುಣವಾಗಿ ಪದರಗಳಿಗೆ ಅಂದರೆ ಪಟಲ ಬಂಧನಕ್ಕೆ ತಗಲಿಕೊಂಡಿದ್ದ ಉಕ್ಕಿನ ತಂತಿ ಕಾಂತೀಕೃತವಾಗುತ್ತಿತ್ತು.ಪೀಪಾಯಿಸುತ್ತಿದಾಗ ಶಿರವೂ ಮುಂದೆ ಚಲಿಸುತ್ತಿತ್ತು.ಧ್ವನಿಯನ್ನು ಪುನಃ ಕೇಳಬೇಕಾದಾಗ ಅದೇ ಸುರುಳಿಗೆ ಒಂದು ಹೆಡ್ಫ಼ೋನನ್ನು ಜೋಡಿಸಲಾಗುತ್ತಿತ್ತು.ಈ ಯಂತ್ರ ನಯವಾಗಿರಲ್ಲಿಲ್ಲ .ಇದರಲ್ಲಿ ಆಧುನಿಕ ಕಾಮ್ತಧ್ವನಿಮುದ್ರನದಲ್ಲಿರುವ ತತ್ತ್ವದ ಉಪಯೋಗವನ್ನು ಕಾಣಬಹುದು. ಜರ್ಮನಿಯ ಮಿಕ್ಸ್ ಮತ್ತು ಗೆನೆಸ್ಪ್ ಎಂಬುವದು(೧೯೦೦)ರಲ್ಲಿ ಕಾಂತ ಧ್ವನಿಮುದ್ರಕವನ್ನು (ಮ್ಯಾಗ್ನೆಟಿಕ್ ವಯರ್ ರೆಕಾರ್ಡರ್)ತಯಾರಿಸಿದರು.ಇದರಲ್ಲಿ ತಂತಿ ಸೆಕೆಂಡಿಗೆ ೨೦೦ ಸೆಮೀ ವೆಗದಲ್ಲಿ ಚಲಿಸುತ್ತಿತ್ತು. ಧ್ವನಿಮುದ್ರಣವಾಗುತ್ತಿದ್ದ ಕಾಲ ಬಹಳ ಕಡಿಮೆ.ಸುಮಾರು ಒಂದು ಮಿನಿಟ್ ಕಾಲ ಮಾತ್ರ ಅನಂತರ ಉಕ್ಕಿನ ತೆಳ್ಳಗಿನ ಪಟ್ಟಿಯನ್ನು ಉಪಯೊಗಿಸಿ ಸುಮ್ಮರು ಅರ್ಧಗಂಟೆಯ ಕಾಲ ಧ್ವನಿಮುದ್ರಣ ಮಾಡಬಹುದಾಗಿತ್ತು.ರೇಡಿಯೋ ಕವಾಟಗಳ ಉಪಯೋಗ ಹೆಚ್ಚಾಗಿ ಬಳಕೆಗೆ ಬಂದ ಮೇಲೆ(೧೯೧೯)ಇವುಗಳ ಪ್ರಭಾವ ಕಾಂತ ಧ್ವನಿಮುದ್ರಣದ ಮೇಲೆಯೂ ಆಯಿತು.ಈ ಕವಟಗಳ ಸಹಾಯದಿಂದ ಅತಿ ಸೂಕ್ಷ್ಮ ಶಬ್ದವನ್ನೂ ಪ್ರವರ್ಧಿಸುವುದು ಸಾದ್ಯ.ಮುಂದೆ ಹಲವು ವಿಧದ ಧ್ವನಿಮುದ್ರಕಗಳು ತಯಾರದುವು.ಗ್ರಾಮಾಫ಼ೋನ್ ತಟ್ಟೆಯ ಆಕಾರದ(೧೨೧/೨)ಸೆಂಮೀ.ಅಗಲದ ಉಕ್ಕಿನ ತಟ್ಟೆಯೊಂದನ್ನು ಉಪಯೋಗಿಸಿದ ಯಂತ್ರವೊಂದಿತ್ತು.ಅಮೆರೀಕದ ಕಾರ್ಲಸನ್ ಮತ್ತು ಕಾರ್ಪೆಂಟರ್ ಎಂಬುವರು ಹೆಚ್ಚಿನ ಅವೃತ್ತಿ ಸಂಖೆಯ ಒಂದು ವಿದ್ಯುತ್ಪ್ರವಾಹವನ್ನು ಮೊದಲು ಪಟ್ಟಿಯ ಮೇಲೆ ಪ್ರಯೋಗಿಸಿದರೆ ಹಿನ್ನೆಲೆಯ ಇತರ ಸದ್ದು ಅಡಗಿ ಸ್ಫುಟವಾದ ಧ್ವನಿಮುದ್ರಣ ದೊರೆಯುವುದೆಂದು ಕಂಡುಹಿಡದರು(೧೯೨೭).ಈ ತತ್ತ್ವ ಇಂದು ಸಾರ್ವತ್ರಿಕವಾಗಿ ಉಪಯೋಗದಲ್ಲಿದೆ.ಎರಡನೆಯ ಮಹಾಯುದ್ಧದ ಆನಂತರ ಪ್ಲಾಸ್ಟಿಕಿನ ಪಟ್ಟಿಗಳು ಉಪಯೋಗಕ್ಕೆ ಬಂದವು.ಉಕ್ಕಿನ ತಂತಿ ಮತ್ತು ಪಟ್ಟಿಗಳ ಉಪಯೋಗ ಈಗ ನಿಂತೇ ಹೋಗಿದೆ ಎನ್ನಬಹುದು. ಕಾಂತ್ತಿಕರಣ(ಮ್ಯಾಗ್ನೆಟೈಸೇಷನ್):ಮುದ್ರಿಸಬೇಕಾದ ಧ್ವನಿಯನ್ನು ಮೊದಲು ಒಂದು ವಿದ್ಯುತ್ಪ್ರವಾಹವನ್ನಗಿ ರೂಪಾನಂತರಿಸಿಕೊಂಡು ಅನಂತರ ಅದನ್ನು ಒಂದು ತಾಮ್ರದ ತಂತಿಯ ಸುರುಳಿಯಲ್ಲಿ ಹರಿಸಲಾಗುತ್ತದೆ.ಸುರುಳಿಯ ಮಧ್ಯಭಾಗದಲ್ಲೆ ಮೆದು ಕಬ್ಬಿಣದದಿಂಡು ಇದೆ.ದಿಂಡು ಉಂಗುರದ ಆಕಾರದಲ್ಲಿದೆ.ಅದರ ಒಂದು ಭಾಗವನ್ನು ಕತ್ತರಿಸಿದೆ.ವಿದ್ಯುತ್ಪ್ರವಾಹದ ಪ್ರಭಾವದಿಂದ ಕಬ್ಬಿಣ ಕಾಂತವಾಗಿ ಮಾರ್ಪಡುತ್ತದೆ.ಕತ್ತರಿಸಿದ ಭಾಗದಲ್ಲೆ ಅಮ್ದರೆ ಗಾಳಿಯ ಸಂಧಿಯಲ್ಲಿ ಪ್ರವಾಹದ ಬಲಕ್ಕೆ ಅನುಗುಣವಾಗಿ ಒಂದು ಕಾಂತಕ್ಷೇತ್ರ ಏರ್ಪಡುತ್ತದೆ.ಧ್ವನಿಯನ್ನು ಅನುಸರಿಸಿ ಎರಳಿದ ಹಾಗೆಲ್ಲ ಕಾಂತಕ್ಷೇತ್ರ ಸಹ ಅದೇ ರೀತಿಯಲ್ಲಿ ಏರಿಳಿಯುತ್ತದೆ.ಹೀಗೆ ಧ್ವನಿ ವಿದ್ಯುತ್ಪ್ರವಾಹವನ್ನು ಕಾಂತಕ್ಷೇತ್ರವನ್ನಾಗಿ ಪರಿವರ್ತಿಸುವ ಈ ಉಪಕರಣವೇ ಮುದ್ರಣ ಶಿರ(ರೆಕಾರ್ಡಿಂಗ್ ಹೆಡ್) ಬಿ-ಎ‍ಚ್ ರೇಖೆ: ಕಾಂತಕ್ಷೇತ್ರ ಎಚ್ ಬದಲಾದಂತೆ ಉಂಟಾದ ಕಾಂತಿಕಿರಣ ಬೀ ಹೇಗೆ ಬದಲಾಗುತ್ತದೆ ಎನ್ನುವುದನ್ನು ಬೀ ಎಚ್ ನಕ್ಷೆಯ(ಗ್ರಾಫ಼್)ಮೂಲಕ ಅರಿತುಕೊಳ್ಳಬಹುದು.ಮೊದಲು ಕಾಂತಕ್ಷೇತ್ರವಿಲ್ಲದಿದ್ದಾಗ ಎ‍ಚ್=೦ ಆಗಿರುತ್ತದೆ. ಆಗ ಬೀ ಕೂಡ ೦ ಆಗಿರುವುದು.ಕ್ಷೇತ್ರವನ್ನು ೦ ಯಿಂದ +ಹೆಚ್೧ ಹೆಚ್ಚಿಸಿದಾಗ ಬೀ ಯ ಬೆಲೆ ಕ್ರಮವಾಗಿ ೦ ಯಿಂದ ಎ ವರೆಗೆ ಹೆಚ್ಚುತ್ತದೆ.ಈಗ ಎ‍‍ಚ್ ನ ಬೆಲೆಯನ್ನು +ಎ‍ಚ್ ನಿಂದ ಮತ್ತೆ ೦ಗೆ ತಂದಾಗ ಬೀ ತನ್ನ ಮೊದಲಿನ ದಾರಿಯನ್ನು ಪುನಃ ಕ್ರಮಿಸುವುದರ ಬದಲು ಎ ಯಿಂದ ಬೀ ಗೆ ಬರುತ್ತದೆ.ಹೀಗೆಯೆ BCDEFAB ದಾರಿ ಮುಂದುವರಿಯುತ್ತದೆ.ABCDEFA ಸುತ್ತಿಗೆ ಜಡತ್ವ ಕುಣಿಕೆ(ಹಿಸ್ಟರಿಸಸ್ ಲೂಪ್)ಎಂದು ಹೆಸರು.ಇದರ ರೂಪದಿಂದ ಒಂದು ಪದಾರ್ಥದ ಕಾಂತೀಕರಣ ಸ್ವಭಾವ ನಮಗೆ ಚೆನ್ನಾಗಿ ಗೊತ್ತಾಗುತ್ತದೆ. (ನೋಡಿ-ಕಾಂತೀಯ್-ವಸ್ತುಗಲಳು) ಪಕ್ಷಪಾತ(ಬಯಾಸ್):ಕಾಂತಧ್ವನಿಮುದ್ರಣ ಮಾಡುವ ಮೊದಲು ಕಾಂತಪದಾರ್ಥವನ್ನು ಇರಿಸಿದ ಕಾಂತೀಕರಣ ಸ್ಥಿತಿಗೆ ಪಕ್ಷಪಾತ ಎಂದು ಹೆಸರು.ಮೊದಮೊದಲು ಇದನ್ನು ಏಕಮುಖ ವಿದ್ಯುತ್(ಡೈರೆಕ್ಟ್ ಕರೆಂಟ್-ಡಿ.ಸಿ.)ಅತ್ವಾ ಶಾಶ್ವತ ಕಾಂತದ ಸಹಾಯದಿಂದ ಮಾಡಲಾಗುತ್ತಿತ್ತು.ಇದಕ್ಕೆ ಡಿ.ಸಿ. ಪಕ್ಷಪಾತ ಎಂದು ಹೆಸರು.ಬೀ-ಎಚ್ ಸುತ್ತಿನ ಯಾವುದಾದರು ನೆರವಾದ ಭಾಗದ ಮದ್ಯದಲ್ಲಿ ಬರುವಂಥ ಬೀ ಬೆಲೆಯನ್ನು ಪಕ್ಷಪಾತವನ್ನಾಗಿ ಮಾಡಬೇಕು.ಇಲ್ಲದಿದ್ದರೆ ಧ್ವನಿಮುದ್ರಣ ವಿಕೃತರೂಪವನ್ನು ತಾಳುವುದು. ಪರ್ಯಾಯ ವಿದ್ಯುತ್ ಪ್ರವಾಹದ ಪಕ್ಷಪಾತ(ಆಲ್ಟರ್ ನೇಟಿಂಗ್ ಕರೆಂಟ್-ಎ.ಸಿ.ಬಯಾಸ್):ಡಿ.ಸಿ.ಪಕ್ಷಪಾತವನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡುವುದು ಸ್ವಲ್ಪ ಕಷ್ಟವಾದುದು.ಅದ್ದರಿಂದ ಪರ್ಯಯ ವಿದ್ಯುತ್ ಪ್ರವಾಹದ ಪಕ್ಷಪಾತವನ್ನು ಬಳಸಲಾಗುತ್ತದೆ. ಚಿತ್ರ ೧ರ ತಂತಿಯಲ್ಲಿ ಪರ್ಯಯ ವಿದ್ಯುತ್ಪ್ರವಾಹವನ್ನು ಹರಿಸಿದಾಗ ಕಾಂತಕ್ಷೇತ್ರ ಎಚ್+ ಮತ್ತು ದಿಶೆಗಳ ನಡುವೆ ಬದಲಾಗುತ್ತ ಇರುತ್ತದೆ.ಇದನ್ನೇ ಅನುಸರಿಸಿ ಬೀ ಸಹ+ ಮತ್ತು-ದಿಶೆಗಳ ನಡುವೆ ಓಲಾಡುತ್ತದೆ. ಈ ಪರ್ಯಾಯ ವಿದ್ಯುತ್ಪ್ರವಾಹದ ಆವೃತ್ತಿಗಳು ಶ್ರವಣಾತ್ತಿತವಗಿವೆ:ಸೆಕೆಂಡಿಗೆ ೩೫೦೦೦ ದಿಂದ ೧೦೦೦೦೦ ಆವೃತ್ತಿ ಸಂಖ್ಯೆಗಳನ್ನುಳ್ಳದ್ದು.ಪರ್ಯಯ ವಿದ್ಯುತ್ಪ್ರವಾಹದ ಪಕ್ಷಪಾತದಿಂದ ಧ್ವನಿಮುದ್ರಣದ ಕೆಲಸ ಚೆನ್ನಾಗಿ ನಡೆಯುತ್ತದೆ ಇದನ್ನು ಉಪಯೋಗಿಸುವುದು ಸುಲಭ ಅಳಿಸುವಿಕೆ(ಇರೇಸಿಂಗ್):ಹೊಸ ಶಬ್ದವನ್ನು ಧ್ವನಿಮುದ್ರಿಸುವ ಮೊದಲು ಹಿಂದಿದ್ದ ಶಬ್ದವನ್ನು ಅಳಿಸಬೇಕು.ಈ ಕಾರ್ಯಕ್ಕೆ ಡಿ.ಸಿ.ವಿದ್ಯುತ್ಪ್ರವಾಹವನ್ನು ಉಪಯೊಗಿಸುವುದು ಬಲು ಕಷ್ಟ ಬದಲು,ಎ.ಸಿ(ಪರ್ಯಯ)ವಿದ್ಯುತ್ತನ್ನು ಉಪಯೋಗಿಸಿ ಅಳಿಸಲಾಗುತ್ತದೆ.ಸಾಮಾನ್ಯವಾಗಿ ಅಳಿಸಲಾಗುತ್ತದೆ.ಸಾಮನ್ಯವಾಗಿ ಅಳಿಸುವುದಕ್ಕೆ ಬೇರೊಂದು ಅಳಿಸುವಶಿರ(ಇರೇಜ಼ಿಂಗ್ ಹೆಡ್)ಇರುವುದು.ಇದರ ತಂತಿಯಲ್ಲಿ ಪಕ್ಷಪಾತ ಆವರ್ತ ಸಂಖ್ಯೆಯದೇ ಪ್ರವಾಹವನ್ನು(ಸೆಕೆಂಡಿಗೆ ೩೦೦೦೦-೧೦೦೦೦೦)ಹರಿಸಲಾಗುತ್ತದೆ.ಆನಂತರ ಇದನ್ನು ಟೇಪಿನ ಗಾಳಿಯ ಸಂದಿಯ ಮುಲಕ ಹಾಯಿಸಲಾಗುತ್ತದೆ. ಆಗ ಅದರ ಮೇಲೆ ಪರ್ಯಯ ಕಾಂತಕ್ಷೇತ್ರ ಎಚ್ ನ ಪರಿಣಾಮ ಕಡಿಮೆಯಾಗಿದ್ದು ಆನಂತರ ಹೆಚ್ಚಾಗಿ ಪುನ್ಃ ಕಡಿಮೆಯಾಗುತ್ತದೆ ಪಟ್ಟಿಯ ತೆರಪಿನ ಮುಂದೆ ಹಾಯುವಾಗ ಅದರ ಬೆಲೆ ಹಲವು ಸಲ ಖಣಧನ ಚಿಹ್ನೆಗಳನ್ನು ಬದಲಿಸುವಷ್ಟು ಹೆಚ್ಚಿನ ಅವೃತ್ತಿನ ಪ್ರವಾಹವನ್ನು ಉಪಯೋಗಿಸಬೇಕು.ಎಚ್ ಕಡಿಮೆಯಾಗುವಾಗ ಕಾಂತೀಕರಣವೂ ಕಡಿಮೆಯಾಗುತ್ತ ಬಂದು ಕೊನೆಗೆ ಎಚ್ ಮತ್ತು