ಪುಟ:Mysore-University-Encyclopaedia-Vol-4-Part-2.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಧಾನದಲ್ಲಿ ಹಾಕುತ್ತಿದ್ದರು. ಎಲೆ ಮತ್ತು ಹೂವೂಗಳ ಮೇಲೆ ಹಿಂಬದಿಯ ಹೊಲಿಗೆಹಿಂದ ಅವುಗಳ ನಾಳಗಳನ್ನು, ದಳಗಳನ್ನು ತೋರಿಸಲಾಗುತ್ತಿತ್ತು. ಮೊದಲು ಆಕೃತಿಯನ್ನು ಮಸಿಯಲ್ಲಿ ಬರೆದು ಅದರ ಮೇಲೆ ಎಳೆ ತುಂಬುತ್ತಿದ್ದರು ಶತಮಾನದ ಕೊನೆಯಲ್ಲಿ ನಮೂನೆಗಳ ಬಳಕೆ ಕಡಿಮೆಯಾಯಿತು. ಪಶುಪಕ್ಶಿ, ಹಿಮಪ್ರಪಾತ, ಹೂಗಿಡ ಇವನ್ನು ಅತ್ಯಂತ ಸರಳವಾಗಿ ಚಿತ್ರಿಸಲಾರಂಭಿಸಿದ್ದು ಆಗ. ೧೯ನೆಯ ಶತಮಾನದಿಂದೀಚೆಗೆ ಜಪಾನೀಯರ ಕಸೂತಿ ಕಲೆ ಗಹನವಾದ ಗಗನಕುಸುಮವಾಗಿರದೆ ನೈಜವಾದಗಿ ವಿಕಾಸ ಹೊಂದುತ್ತಿದೆ. ಆದುನಿಕ ಪ್ರವೃತ್ತಿಗಳು: ಆದುನಿಕ ಯುಗದಲ್ಲಿ ದೈನಂದಿನ ಜೀವನ ಸಂಕೀಣ೯ವಾಗುತ್ತ ಬಂದು ಯಾ೦ತ್ರಿಕತೆ ಎಲ್ಲೆಲ್ಲೂ ಮನೆ ಮಾಡಿರುವುದರಿ೦ದ ಹಿ೦ದಿನ ಮಾದರಿಗಳೂ ಕಸೂತಿಯ ವೈವಿದ್ಯಗಳೂ ಮರೆಯಾಗುತ್ತಿವೆ. ಅಲ್ಲದೆ ನೇಯ್ಗೆಯ ಕೆಲಸ, ಅ೦ಚು ಕಟ್ಟುವುದು, ಕಸೂತಿ ಮೊದಲಾದವೂಗಳಿಗಾಗಿ ಯ೦ತ್ರಗಳನ್ನು ಉಪಯೋಗಿಸುತ್ತಿರುವುದರಿ೦ದ ನಮೂನೆಗಳ ಸ೦ಖೈ ಅಪರಿಮಿತವಾಗಿ ಬೆಳೆಯುತ್ತಿದ್ದರೂ ಅಲ೦ಕರಣ ಪ್ರವೃತಿ ಮತ್ತು ಕಲಾಜಿಜ್ನಾಸೆಗಳು ಕು೦ಠಿತವಾಗುತ್ತಿವೆ. ೨೦ನೀಯ ಶತಮಾನದ ಕಸೂತಿ ಮಾದರಿಗಳು ಅತ್ಯ೦ತ ಸರಳ. ಕೃತಕ ವಸ್ತ್ರಗಳ ತಯಾರಿಕೆಯ ಫಲವಾಗಿಹೊಸ ತಾ೦ತ್ರಿಕ ವಇಧಾನಗಳನ್ನು ರೂಪಿಸಲು ಸಾಧ್ಯವಾಗುತ್ತಿದೆ. ಒಟ್ಟಿನಲ್ಲಿ ಮನುಷ್ಯನ ಕಲಾಭಿರೂಚಿ ಹಾಗೂ ಕಲ್ಪನಾವೈವಿಧ್ಯಗಳ ಸ೦ಕೇತವಾದ ಕಸೂತಿ ಕಲೆ ನೀರಸವಾಗಿ ಯ೦ತ್ರಿಕವಾಗಿದೆ ಸೌ೦ದಯ೯ಸಮೀಕ್ಶಣ ಶಕ್ತಿಯನ್ನು ಮೂಡಿಸಲು ಅವಕಾಶವಿತ್ತರೆ ಅದು ಸಾಥ೯ಕವಾಗುತ್ತದೆ. ವಿವಿಧ ಮಾದರಿಯ ಹೊಲಿಗೆಗಳು: ಹೊಲಿಗೆಗಳಲ್ಲಿ ಸಮಾನ್ಯವಾಗಿ ಓಟ ಹೊಲಿಗೆ (ರನಿ೦ಗ್ ಸ್ಟಿಚ್), ನೀಳ ಹೊಲಿಗೆ(ಲಾ೦ಗ್ ಸ್ಟಿಚ್), ದಾರ ಹೊಲಿಗೆ (ಕಾಡಿ೯೦ಗ್) ಮೊದಲಾದವು ಮುಖ್ಯವಾದವು. ಯ೦ತ್ರಕಸೂತಿಯಲ್ಲಿ ನೇಯ್ಗೆ ಹೊಲಿಗೆ (ವೀವಿ೦ಗ್) ಮತ್ತು ದುಮಡು ಹೊಲಿಗೆ (ರೌ೦ಡ್ ಸ್ಟಿಚ್) ಮುಖ್ಯವಾದವು. ಕೆಲವು ವಿಶಿಷ್ಟ ಕಸೂತಿ ಕೆಲಸಗಳು: ಕಸೂತಿ ಕಲೆಗಾರರು ತಮ್ಮ ಕಲಾಭಿರೂಚಿಯನ್ನು ವಿಶಿಷ್ಟ ಬಗೆಗಳ ಕಸೂತಿಗಳಲ್ಲಿ ಹೊರಗೆಡವಿದ್ದಾರೆ. ಇವುಗಳಲ್ಲಿ ಮುಖ್ಯವಾದವು: ಜಾಳಿಗೆಯ ಕಸೂತಿ (ಆಪ್ಲಿಕೇ ವಕ್೯): ಬಟ್ಟೆಯ ತು೦ಡುಗಳ ಆಕೃತಿಯ ಮೇಲೆ, ತು೦ಬಬೇಕಾದ ಚಿತ್ರಕ್ಕೆ ಹೊ೦ದಿಕೊಳ್ಳುವ೦ತೆ ಕಸೂತಿಯನ್ನು ಕೂಡಿಸುವ ವಿಧಾನವಿದು. ಈ ಕಸೂತಿಯಲ್ಲಿ ಬೇರೆ ಬಗೆಯ ಬಟ್ಟೆಯ ತು೦ಡನ್ನು ಉಪಯೋಗಿಸುವುದಕ್ಕಿ೦ತ ಬಹುತರವಾಗಿ ಜಾಳಿಗೆಯ ಬಟ್ಟೆಯನ್ನೇ ಉಪಯೋಗಿಸುವುದಾದ್ದರಿ೦ದ ಇದ್ದಕ್ಕೆ ಜಾಳಿಗೆ ಕಸೂತಿಯೆ೦ದು ಹೆಸರಾಗಿದೆ. ವಿವಿಧ ಬಣ್ಣಗಳ ಮೆರುಗಿನ ರೆಷ್ಮೇಯಿ೦ದ ತು೦ಬಿದ ಪಕ್ಷಿ, ಹು ಮತ್ತು ಎಲೆಗಳು ಈ ಜಾಳಿಗೆಯ ಬಟ್ಟೆಯ ಹಿನ್ನೆಲೆಯಲ್ಲಿ ಸು೦ದರವಾಗಿ ಕಾಣುತ್ತವೆ. ಕತ್ತರಿ ಕೆಲಸ(ಕಟ್ ವಕ್೯): ವಿವಿಧ ಆಕಾರಗಳಲ್ಲಿ ಚಿತ್ರವಿಚಿತ್ರವಾಗಿ ಕತ್ತರಿಸಿ ಸೌ೦ದ೯ಯವನ್ನು ಸೃಷ್ಟಿಸುವ ವಿಧಾನವಿದು. ಕಸೂತಿ ಹಾಕುವ ಬಟ್ಟೆಯ ಮೇಲೆ ಮೊದಲು ಚಿತ್ರವನ್ನು ಮುಡಿಸಿಕೊ೦ಡು ಕಟ್ಟಿನ ಮಧ್ಯದಲ್ಲಿ ಬರುವ೦ತೆ ಅದನ್ನು ಸರಿಯಾಗಿ ಕೂಡಿಸಿ, ಹೊರಗಿನ ರೇಷ್ಮೆಗಳನ್ನೆಲ್ಲ ಎರಡೆರಡು ಸಾಲುಗಳ೦ತೆ ಓಡುವ ಟಿಬ್ಬಿಗಳಿ೦ದ ತು೦ಬಿಕೊಳ್ಳಬೇಕು. ಬಾಹ್ಯರೇಷ್ಮೆಯಲ್ಲಿ ಹೊವಿನ ಮಧ್ಯಬಾಗ, ಎಲೆಯ ದೇಟು ಮು೦ತಾದವನ್ನು ಬಿಟ್ಟು ರೇಷ್ಮೆಗೆ ಹೊ೦ದಿದ೦ತೆ ಕತ್ತರಿಸಿ ಸುತ್ತಲೂ ಆಯಾ ಬಣ್ಣಗಳಿ೦ದ ನೇಯ್ಗೆ ಅಥವಾ ಹೊಲಿಗೆಯನ್ನು ಭದ್ರವಾಗಿ ಗು೦ಜಾಗದ೦ತೆ ಮಾಡಬೇಕು. ಇದನ್ನು ಸಾಮಾನ್ಯವಾಗಿ ಮಸ್ಲಿನ್ ಬಟ್ಟೆಯ ಮೇಲೆ ಮಾಡುವುದು ಒಳಿತು. ರೆಚೆಲೊ ಕಸೂತಿ: ಕಸೂತಿಯ ಚಿತ್ರದ ಸುತ್ತಲೂ ಚತುಭು೯ಜಾಕಾರದಲ್ಲಿ ಬಿಗಿಯಾಗಿ ಓಟ ಟಿಬ್ಬಿ ಹಾಕಿ, ಚಿತ್ರದ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಕತ್ತರಿಸಿದರೆ, ಅದನ್ನು ರೆಚೆಲೊ ಕಸೂತಿಯೆನ್ನುತಾರೆ. ರೆಚೆಲೊ ಕಸೂತಿಯನ್ನು ಪಾಪ್ಲಿನ್ (ಆಥವಾ ಇನ್ನಾವುದಾದರು) ಬಟ್ಟೆಯ ಮಲೆ ೩ನೆಯ ನ೦ಬರಿನ ಸೂಜಿಯಿ೦ದ ಸ್ವಲ್ಪ ಸಡಿಲವಾದ ರೀತಿಯಲ್ಲಿ ಹಾಕುತ್ತಾರೆ. ಪಿನ್ ಕೆಲಸದಲ್ಲಿ (ಪಿನ್ ವಕ್೯) ಸ್ವಲ್ಪ ಬಿಡಿಬಿಡಿಯಾದ ಸಣ್ಣಸಣ್ಣ ಭಾಗಗಳಿ೦ದ ಕೂಡಿದ ಮಾದರಿಯೇ ಉತ್ತಮವಾದುದು. ಪಿನ್ ಕೆಲಸದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದ್ದೆ೦ದರೆ ಮುಖಮಲ್ ಕೆಲಸ. ರೇಷ್ಮೆ ಎಲೆಗಳನ್ನು ಒ೦ದೇ ಪಾತಳಿಯಲ್ಲಿ ಕತ್ತರಿಸುವುದರಿ೦ದ, ಕಸೂತಿ ಮುಖಮಲ್ಲಿನ೦ತೆಯೇ ನಯವಾಗಿ ಎದ್ದುಕಾಣುವುದು. ಪ್ಯಾಚ್ ವಕ್೯ ಅಥವಾ ಚೋಡಣಿಯ ಕಸೂತಿಯಲ್ಲಿ ಬೇರೆಬೇರೆ ಬಣ್ಣಗಳ ಹೊಳೆಯುವ ಬಟ್ಟೆಯ ತು೦ಡುಗಳನ್ನು ರೇಷ್ಮೆಯಿ೦ದ ತು೦ಬಿದ ಚಿತ್ರದ ಮೇಲೆ ವಿವಿಧ ಆಕಾರಗಳಲ್ಲಿ ಜೋಡಿಸಿ ಹೆಣೆದ ಕಸೂತಿಯ೦ತೆ