ಪುಟ:Mysore-University-Encyclopaedia-Vol-6-Part-1.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

C ಮತು D ನಡುವೆ ಪ್ರವಾಹದ ಹರಿವಿನ ನಿರ್ಬ‌ಂಧವನ್ನು ಪರಿಣಾಮಕಾರಿಯಾಗಿ ವಿವರಿಸಬಲ್ಲುದು.ಆರ್ಥಾತ್ ಆ ಮತ್ತು ಆ ನಡುವಿನ ಈ ಸಮಾಂತರ ಸಂಯೊಜನೆಯನ್ನು p+q ಚರ ವಿವರಿಸುವ ಒಂದು ಒಂಟಿ ಸ್ವಿಚ್ಚಿನಿಂದ ಪ್ರತಿಸ್ತಾಪಿಸಬಹುದು.ಇದೇ ಪ್ರಕಾರ r ಮತ್ತು ಗಳನ್ನು r+s ಆಗಿ ಸಂಯೋಜಿಸಬಹುದು. ಚಿತ್ರ ೨೨(b)ಯಲ್ಲಿ ಈ ಸರಳೀಕ್ರುತ ಸಮಾನ ಜಾಲವನ್ನು (ಈಕ್ವಿವಲೆಂಟ್ ನೆಟ್ವರ್ಕ್) ಕಾಣಿಸಿದೆ.ಚಿತ್ರ ೨೨(b)ಯಲ್ಲಿರುವ ಶಾಖೆಗಳಲ್ಲಿನ ಮೊದಕಲಿನದರಲ್ಲಿ ಎರಡು ಸ್ವಿಚ್ಚುಗಳು ಶ್ರೇಣಿಯಲ್ಲಿವೆ. ಅವನ್ನು ತಾರ್ಕಿಕ ಗುಣಾಕಾರದಿಂದ ಒಂದು ಒಂಟಿ ಸ್ವಿಚ್ಚಿಗೆ ಪರಿವರ್ತಿಸಬಹುದು. ಇದು (p+q),(r+s)ಉತ್ಪನ್ನ.ಇದೇ ಪ್ರಕಾರ ಎರಡನೆಯ ಶಾಖೆಯನ್ನು (t,u) ಉತ್ಪನ್ನದಿಂದ ವಿವರಿಸಬಹುದು.ಈ ಸರಳೀಕರಣದಿಂದ ಪಡೆಯುವ ಸಮಾನ ಜಾಲವನ್ನು ಚಿತ್ರ ೨೨(c)ತೋರಿಸುತ್ತದೆ. ಈಗ ಚಿತ್ರದಲ್ಲಿನ ಮೂರು ಸಮಾಂತರ ಶಾಖೆಗಳಲ್ಲಿ ತಲಾ ಒಂದು ಸ್ವಿಚ್ಚ್ ಇರುವುದರಿಂದ ಅದನ್ನು ತಾರ್ಕಿಕ ಸಂಕಲನದಿಂದ ಒಂದು ಒಂಟಿ ಸ್ವಿಚ್ಚಾಗಿ ಸಂಯೋಜಿಸಬಹುದು. ಅದನ್ನು ಕೆಳಗೆ ತೋರಿಸಲಾಗಿದೆ. ಫಲಿತ ಉತ್ಪನ್ನವೀಗ x=v+t.u+(p+q).(r+s) x2=a Xಉತ್ಪನ್ನ A ಮತ್ತು B ನದುವಿನ ಸ್ವಿಚ್ಚಿಕೆಯ ನಿರ್ಬಂಧಗಳನ್ನು ವಿವರಿಸುವ ಬೂಲಿಯನ್ ಉತ್ಪನ್ನವೆಂದು ಹೆಸರು. ಇದನ್ನೇ ಪ್ರತೀಕಗಳ ರೀತೆಯಲ್ಲಿ ಚಿತ್ರದಲ್ಲಿ ತೋರಿಸಿದೆ. ಸಂಕಲಕ (ಆಯ್ದರ್):ಮೇಲೆ ಬರೆದಿರುವ ಸಂಕಲನ ಕೋಷ್ಟಕವನ್ನು ಈಗ ಪುನರವಲೋಕಿಸೋಣ. ಇದನ್ನು ಮೊತ್ತ (ಸಮ್) ಮತ್ತು ಸಾಗು (ಕ್ಯಾರಿ) ಪದಗಳಲ್ಲಿ ಈ ಕೆಳಗಿನಂತೆ ಪುನರ್ನೀರೂಪಿಸಬಹುದು. s ಮತ್ತು c ಗಳಿಗೆ ಪ್ರತ್ಯೇಕವಾಗಿ p ಮತ್ತು q ದ್ವಿಮಾನ ಚರಗಳಲ್ಲಿ ಬೂಲಿಯನ್ ಉತ್ಪನ್ನ್ಗಳನ್ನು ರಚಿಸಬಲ್ಲೆವು. ಮೇಲಿನ ಕೋಷ್ಟಿಕ ೧ ಮತ್ತು ೦ ಗಳನ್ನು ಸಂಯೋಜಿಸಿ ಈ ಉತ್ಪನ್ನಗಳು. S=p'.q+p.q' c=p.q ಎಂದು ತಾಳೆ ಮಾಡಬಹುದು.ಆದ್ದ್ರಿಂದ ಮೇಲಿನ ಉದಾಹರಣೆಯ ದಾರಿಯಲ್ಲಿ ಪ್ರತೀಕಗಳ ಒಂದು ಚಿತ್ರ ೨೪ರಲ್ಲಿ ತೋರಿಸಿದೆ.ಚಿತ್ರದಲ್ಲಿನ ಜಾಲ ಸಂಕಲನ ಕೋಷ್ಟಕವನ್ನು ಪ್ರತಿನಿಧಿಸುತ್ತದೆ. ಎರಡು ದ್ವಿಮಾನ ಸಂಖ್ಯೆಗಳನ್ನು ಸಂಕಲಿಸಲು ಒಂದು ನೀಟಿಸಾಲಿನಲ್ಲಿನ ಅನುರೂಪ ಅಂಕಗಳನ್ನು ಜೊತೆಯಲ್ಲಿ ತಂದು ಮೇಲಿನ ಜಾಲದಿಂದ ಕೂಡಿಸಲಾಗುತ್ತದೆ.ಬಳಿಕ ಇದರ ಮೊತ್ತವನ್ನು ಸಾಗು ವಿಗೆ ಹಿಂದಿನ ನೀಟಿಸಾಲಿನಿಂದ ಇಂಥ ಇನ್ನೊಂದು ಜಾಲವನ್ನು ಉಪಯೊಗಿಸಿಕೊಂಡು ಕೂಡಿಸಲಾಗುತ್ತದೆ. ಈ ಎರಡು ಫಲಿತ ಸ್ಂಖ್ಯೆಗಳನ್ನು ತಾರ್ಕಿಕವಾಗಿ ಕೂಡಿಸಿ ಪರಿಶೀಲನೆಯಲ್ಲಿರುವ ನೀಟಿಸಾಲಿನ ಅಂತಿಮ ಫಲಿತ ಅಂಖ್ಯೆಯನ್ನು ಪಡೆಯಲಾಗುತ್ತದೆ

ಮೇಲಿನ ವಿವರಣೆಯಲ್ಲಿಯ ಸ್ವಿಚ್ಚಿಕೆಯ ಜಾಲಗಳ ಅಲೇಖ್ಯದ ಒಂದು ಲಾಕ್ಶಣಿಕ ಉದಾಹರಣೆಯಾಗಿ ಸಂಕಲನ ಪರಿಕರ್ಮವನ್ನು ಮಾತ್ರ ನಿರೂಪಿಸಿದೆ. ಒಂದು ಅಂಕಗಣಕದ ಅಂಕಗಣಿತಾಂಗದ ವಾಸ್ತವ ಮುಖ್ಯ ಭಾಗಗಳೆಂದರೆ ಸ್ವಿಚ್ಚುಗಳೇ.