ಪ್ರವಾಹ ನಕ್ಷೆಗೂ ಮೇಲಿನ ಫೋರ್ಟಾನ್ ನಿರ್ದೆಶನಗಳಿಗೂ ನಡುವೆ ಇರುವ ಸಾದೃಶ್ಯವನ್ನು ಸುಲಭವಾಗಿ ಗಮನಿಸಬಹುದು. ಜ್ಞಾಪಕಕೋಶದಲ್ಲಿ X(1), X(2)..... X (100) ಗಳಿಗೆ ಒಂದು ನೂರು ವಿಳಾಸವನ್ನು ಮೀಸಲಿಡುವುದು ಆಯಾಮ ಹೇಳಿಕೆಯ ಉದ್ದೇಶ. ಓದು ಹೇಳಿಕೆ A, N ಮತ್ತು X (0) ಸಂಖ್ಯೆಗಳನ್ನು ನಿರ್ದೇಶನ ಚೀಟಿ II ನಿರ್ದಿಷ್ಟಗೊಳಿಸಿರುವ ಒಂದು ವಿಶಿಷ್ಟ ರೂಪಾಂಶದ (ಫಾರ್ಮೆಟ್) ಅನುಸಾರ ಓದುತ್ತದೆ. ಆದರೆ ಕೆಲವು ಯಂತ್ರಗಳು X (0) ಯಲ್ಲಿನಂತೆ ಒಂದು ಉಪಾಕ್ಷರ (ಸಬ್ ಸ್ಕ್ರಿಪ್ಟ್) 0ಗೆ ಪ್ರವೇಶಗೊಡುವುದಿಲ್ಲ. ಈ ಸಂದರ್ಭದಲ್ಲಿ 1 ಯ ಆರಂಭ ಬೆಲೆ 0 ಯ ಬದಲು 1 ಆಗಿರಬೇಕು. ಪ್ರವಾಹನಕ್ಷೆಯಲ್ಲಿನ ಎಂಟನೆಯ ಆಯ ಒಂದು ನಿರ್ಧಾರ ಪೆಟ್ಟಿಗೆ (ಡಿಸಿಷನ್ ಬಾಕ್ಸ್), ಇದನ್ನು ಈ ಕೆಳಗಿನ ನಿರ್ದೇಶನದಿಂದ ಪ್ರತಿಸ್ಥಾಪಿಸುತ್ತೇವೆ; (I, GE.N ) ಆಗಿದ್ದರೆ 21 ಕ್ಕೆ ಹೋಗು ಅಂದರೆ, I N ಹೇಳಿಕೆ ನಿಜವಾಗಿದ್ದರೆ ಅದು ಗಣಕಕ್ಕೆ 21 ಎಂಬ ಗುರುತಿನ ನಿರ್ದೇಶನಕ್ಕೆ ಹಿನ್ನೆಗೆಯಬೇಕೆಂದು ವಿಧಿಸುತ್ತದೆ. ಇಲ್ಲವಾದರೆ ಮುಂದಿನ ನಿರ್ದೇಶನವನ್ನು ತೆಗೆದುಕೊಳ್ಳಲಾಗುವುದು. ಸಂಗ್ರಹಣ ಕ್ರಮವಿಧಿಗಳು (ಕಂಪೈಲರ್ ಪ್ರೋಗ್ರಾಂಸ್) : ಮೇಲಿನ ಫೋಟ್ರ್ರಾನ್ ಯೋಜನೆಯನ್ನು ಪರೀಕ್ಷಿಸಿದರೆ ಅದರಲ್ಲಿರುವ ನಿರ್ದೇಶನಗಳು ವ್ಯಾವಹಾರಿಕ ಇಂಗ್ಲಿಷ್ ಭಾಷೆಯಲ್ಲಿವೆ ಎಂದು ತಿಳಿಯುತ್ತದೆ. Go To (ಇಂಥಲ್ಲಿಗೆ ಹೋಗು), If (ಆಗಿದ್ದರೆ), ಇತ್ಯಾದಿ. ಇವುಗಳ ಅರ್ಥ ಮಾನವ ಕ್ರಮವಿಧಾಯಕನಿಗೆ ಸ್ಪಷ್ಟ ಉಂಟು. ಆದರೆ ಒಂದು ಗಣಕವನ್ನು ಕುರಿತು ಪ್ರಸ್ತಾವಿಸುವಾಗ ಅದಕ್ಕೆ ತಿಳಿಯುವ ದೃಷ್ಟಿಯಿಂದ ಇಂಥ ಪದಗಳು ಅನುಕೂಲವಾಗಿಲ್ಲ. ಗಣಕಕ್ಕೆ ಅರ್ಥವಾಗುವ ಭಾಷೆಗೆ ಮೇಲೈಸಿದ ಭಾಷೆ (ಅಸೆಂಬಲ್ ಲ್ಯಾಂಗ್ರೇಜ್) ಎಂದು ಹೆಸರು. ಫೋರ್ಟಾನಿನಲ್ಲಿ ನಿರ್ದೇಶನಗಳನ್ನು ಬರೆಯುವಲ್ಲಿ ಮಾನವ ಕ್ರಮವಿಧಾಯಕನಿಗೆ ಒದಗುವ ಸೌಕರ್ಯ ಅಪಾರ. ಆದ್ದರಿಂದ ಆಧುನಿಕ ಗಣಕವೊಂದು ವಿಧಾಯಕನಿಗೂ ಅದಕ್ಕೂ ಸಮಾನ ಸೌಕರ್ಯವನ್ನು ಒದಗಿಸುವಂತೆ ರಚಿಸಲ್ಪಟ್ಟಿರುತ್ತದೆ. ಆ ಗಣಕದೊಳಗೆ ಫೋಟ್ರ್ರಾನನ್ನು ಮೇಲ್ಮಸಿದ ಭಾಷೆಗೆ ಅನುವಾದಿಸಲು ಒಂದು ಏರ್ಪಾಡು ಉಂಟು. ಪೋರ್ಟಾನಿನಂಥ ಮೇಲು ಮಟ್ಟದ ಭಾಷೆಗಳಿಗೂ ಯಂತ್ರ ಭಾಷೆಯಂಥ ಕೆಳಮಟ್ಟದ ಭಾಷೆಗಳಿಗೂ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ಗಣಕ ದಾಸ್ತಾನಿಸಿರುವ ನಿರ್ದೇಶನಗಳಲ್ಲಿ ಪ್ರತಿಯೊಂದಕ್ಕೂ ವಿಧಾಯಕ ಒಂದೊಂದು ನಿರ್ದೇಶನವನ್ನು ಬರೆಯುವುದು ಕೆಳಮಟ್ಟದ ಭಾಷೆಯಲ್ಲಿ ಮೂಲಭೂತವಾಗಿ ಅವಶ್ಯ. ಮೇಲುಮಟ್ಟದ ಭಾಷೆಗಳಲ್ಲಿ ಏಕಮಾನ ಕ್ರಮವಿಧಿ (ಯೂನಿಟ್ ಪ್ರೋಗ್ರಾಂ) ಶಬ್ದಗಳಲ್ಲಿರುವ ಒಂದು ಹೇಳಿಕೆಯಾಗಿರಬಹುದು. ಇಲ್ಲವೇ ಗಣಿತೀಯವಾದ ಒಂದು ಹೇಳಿಕೆಯಾಗಿರಬಹುದು. ಗಣಕ ಇದನ್ನು ಪರೀಕ್ಷಿಸಿ ಯಂತ್ರ ಸಂಕೇತ ನಿರ್ದೇಶನಗಳ ಗಣವಾಗಿ (ಸೆಟ್ ಆಫ್ ಮಶೀನ್ ಕೋಡ್ ಇನ್ಸ್‌ಟ್ರಕ್ಷನ್) ಅನುವಾದಿಸುತ್ತದೆ. ಹೀಗೆ ಒಂಟಿ ಹೇಳಿಕೆಯೊಂದು ಗಣಕದಿಂದ ಬಲು ದೊಡ್ಡ ಸಂಖ್ಯೆಯ ಯಂತ್ರಸಂಕೇತ ನಿರ್ದೇಶನಗಳಾಗಿ ಒಡೆಯಲ್ಪಟ್ಟು ತತ್‌ಕ್ಷಣದ ಉಪಯೋಗುಸ್ಕರ ದಾಸ್ತಾನಿಸಲ್ಪಟ್ಟಿರಬಹುದು, ಮೇಲುಮಟ್ಟದ ಭಾಷೆಯಲ್ಲಿ ಲಿಖಿತವಾಗಿರುವ ಕ್ರಮವಿಧಿಯನ್ನು ಓದಿದ ಒಡನೆ ವಿಶೇಷವಾದ ಒಂದು ಅನುವಾದ ಕ್ರಮವಿಧಿಯನ್ನು ಗಣಕ ಉಪಯೋಗಿಸಿಕೊಳ್ಳುತ್ತದೆ. ಅದಾವುದೆಂದರೆ ಪ್ರತಿಯೊಂದು ನಿರ್ದೇಶನವನ್ನು ಕೆಳಮಟ್ಟದ ಕ್ರಮವಿಧಿಯಲ್ಲಿನ ನಿರ್ದೇಶನಗಳ ಒಂದು ಗಣವಾಗಿ ಪರಿವರ್ತಿಸಲು ಒಂದು ಸಂಗ್ರಹ ಕ್ರಮವಿಧಿ (ಕಂಪೈಲರ್ ಪ್ರೋಗ್ರಾಂ), ಗಣಕದ ಮುಂದಿನ ಯಾವುದೇ ಪರಿಕರ್ಮ ಈ ಕೆಳಮಟ್ಟದ ಕ್ರಮವಿಧಿಯ ನಿರ್ದೇಶನಗಳ ಸರಣಿಯನ್ನು ಅನುಸರಿಸುವುದರ ಮೂಲಕ ನೆರವೇರುತ್ತದೆ. ಗಣಕಗಳ ಅನ್ವಯಗಳು : ಗಣಕಗಳ ಅನ್ವಯಗಳನ್ನು ವರ್ಗಿಕರಿಸುವುದೆಂದರೆ ಮಾನವ ಪ್ರಯತ್ನವನ್ನು ವರ್ಗಿಕರಿಸಿದಷ್ಟೇ ಸಿಕ್ಕುಸಿಕ್ಕಾದದ್ದು. ನಮಗೆ ತಿಳಿದಿರುವ ಪ್ರತಿಯೊಂದು ಜ್ಞಾನಪ್ರಕಾರವನ್ನು ಗಣಕವಿಜ್ಞಾನ ಒಳಪ್ರವೇಶಿಸಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಉಪಯುಕ್ತವಾಗುವಂಥ ಗಣಕಗಳ ಅನ್ವಯಗಳು ಇರುವ ಕ್ಷೇಪಗಳನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನು ಸಂಯುಕ್ತರಾಷ್ಟ್ರಗಳ ಸಂಸ್ಕೃ ನೇಮಿಸಿತು. ಸ್ಕೂಲವಾದ ಒಂದು ವರ್ಗಿಕರಣವನ್ನು ಈ ಸಂಸ್ಥೆ ಮಾಡಿದೆ. ಇಂಥ ಒಂದು ವರ್ಗಿಕರಣವನ್ನು ಚಿತ್ರದಲ್ಲಿನ ಮರ ತೋರಿಸುತ್ತದೆ, ಕೆಲವು ಪ್ರಾತಿನಿಧ್ಯಾತ್ಮಕ ಅನ್ವಯಗಳನ್ನು ವಿವರಿಸಲು ಇಲ್ಲಿ ಪ್ರಯತ್ನಿಸಿದೆ. 1. ಲೇಖಾರೇಖನ (ಅಕೌಂಟಿಂಗ್): ಲೇಖಾರೇಖನ ವಿಧಾನವನ್ನು ಯಾಂತ್ರೀಕರಿಸಿದ್ದು ಗಣಕದ ಪ್ರಮುಖ ಅನ್ವಯಗಳಲ್ಲಿ ಒಂದು. ಸಾಮಾನ್ಯವಾಗಿ ಹೇಳುವುದಾದರೆ ಲೇಖಾರೇಖನ ಖಚಿತ ಲಕ್ಷಣದಿಂದ ಕೂಡಿರುವ ಸೂತ್ರವಿಧಿಗಳ ಹಾಗೂ ಮಟ್ಟಗಳ ಒಂದು ಗಣದ ಮೇಲೆ ಆಧರಿತವಾಗಿದೆ. ಆದ್ದರಿಂದ ಅದು ಗಣಕ ಯಾಂತ್ರೀಕರಣಕ್ಕೆ ಸುಲಭವಾಗಿ ಒಗ್ಗುವುದು. ಒಂದು ಕ್ರಮವಿಧಿ ಹಲವಾರು ವಿಶಿಷ್ಟ ಸಂದರ್ಭಗಳನ್ನೂ ಸಾಮಾನ್ಯ ಮಟ್ಟಗಳಿಂದ ವಿಚಲನೆಗಳನ್ನೂ, ಇಂಥವುಗಳ ಸಂಖ್ಯೆ ಮಿತಿಮೀರುವಷ್ಟು ದೊಡ್ಡದಾಗಿಲ್ಲದಿದ್ದರೆ, ಒಳಗೊಳ್ಳಬಹುದು. ಉದಾಹರಣೆಗೆ ಸಂಬಳಯಾದಿಯ ಪರಿಷ್ಕರಣದ ಯಾಂತ್ರೀಕರಣ. ಪ್ರತಿಯೊಬ್ಬ ಕೆಲಸಗಾರನ ದೈನಂದಿನ ವರದಿಯಲ್ಲಿ ಇರುವ ಮಾಹಿತಿಯನ್ನು ಪತ್ರಗಳ ಮೇಲೆ ರಂಧಿಸಲಾಗುವುದು. ಅವನ್ನು ಕುರಿತ ಮಾಹಿತಿಗಳ ಒಂದು ಸಮುದಾಯವೇ - ಉದಾಹರಣೆಗೆ ಅವನ ಹೆಸರು, ಸಂಕೇತ ಸಂಖ್ಯೆ, ವೃತ್ತಿ ನಾಮ, ಪ್ರತಿತಿಂಗಳೂ ಮಾಡಬೇಕಾದ ಸ್ಥಿರ ವಜಾಗಳು (ಡಿಡಕ್ಷನ್ಸ್) ಶಾಶ್ವತವಾಗಿ ಭೂತಕಾಲ ವನ್ನು ಪ್ರತಿನಿಧಿಸುವ ಒಂದು ಕಾಂತ ಪಟ್ಟಿರದಲ್ಲಿ ದೊರೆಯುತ್ತದೆ. ಸಂಬಳಯಾದಿಯ ಯೋಜನೆಯಲ್ಲಿ ಸಂಕೇತ ಸಂಖ್ಯೆಯಿಂದ ಮತ್ತು ಸಂಬಳ ವಿವರಗಳಿಂದ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಬೇಕಾಗುವ ಸೂತ್ರಗಳಿವೆ. ಪ್ರಚಲಿತ ತೆರಿಗೆಗೂ ಹಿಂದಿನ ತಿಂಗಳಿನದಕ್ಕೂ ಇರುವ ವ್ಯತ್ಯಾಸ ಈ ತಿಂಗಳು ವಜಾಮಾಡಬೇಕಾದ ತೆರಿಗೆಯನ್ನು ನಿರ್ಧರಿಸುತ್ತದೆ. ಸಂಬಳದ ಎಲ್ಲ ವಿವರಗಳ ಲೆಕ್ಕಾಚಾರವೂ ಮುಗಿದ ಬಳಿಕ ಒಂದು ಸಂಬಳಚೀಟಿ ಮುದ್ರಿಸಲ್ಪಡುತ್ತದೆ ಮತ್ತು ಪ್ರಸಕ್ತ ತಾರೀಖಿನವರೆಗೆ ಸಂಸ್ಕೃತವಾದ ಮಾಹಿತಿಯನ್ನು ಒಂದು ಭೂತಸ್ಥಾವಕದಲ್ಲಿರುವ ಹೊಸ ಕಾಯಕದವರದ (ಮಾಸ್ಪರ್‌ಫೈಲ್) ಬರೆಯಲ್ಪಡುತ್ತದೆ. ಆ ಬಳಿಕ ಗಣಕದ ಪರಿಕರ್ಮ ಮುಂದಿನ ಕೆಲಸಗಾರನೆಡೆಗೆ ಸಾಗುವುದು. ಲೇಖಾರೇಖನದ ಇತರ ಪ್ರರೂಪಗಳನ್ನು ಸಹ- ಉದಾಹರಣೆಗೆ ಮಾರಾಟದ ಲೆಕ್ಕಾಚಾರ, ಗಿರಾಕಿಗಳಿಂದ ಬರಬೇಕಾದ ಬಾಕಿಯ ವಿವರ, ಆರ್ಥಿಕ ಲೆಕ್ಕಾಚಾರ ಮತ್ತು ಆಕ್ಷುಯರಿ ವಿಧಾನ ಲೇಖಾರೇಖನ-ಗಣಕಗಳ ನೆರವಿನಿಂದ ಯಾಂತ್ರೀಕರಿಸಬಹುದು. 2. ಬ್ಯಾಂಕ್ ವ್ಯವಹಾರ: ವ್ಯಾಪಕವಾದ ಅಚ್ಚಕಾಳು (boiler) ಬೇಕಾಗಿರುವಂಥ ಬ್ಯಾಂಕಿಂಗಿನ ಕೆಲವು ಪಕ್ರಮಗಳನ್ನು ಸ್ವಯಂಚಾಲಿತಗೊಳಿಸಬಹುದು. ಚೆಕ್ ವ್ಯವಹಾರಗಳನ್ನು ಗಣಕೀಕರಿಸಿ ನಿಭಾಯಿಸುವುದು ಇವುಗಳ ಪೈಕಿ ಒಂದು. ಬ್ಯಾಂಕಿನ ಒಂದು ಶಾಖೆಗೆ ಇಂದು ಚೆಕ್ ಬಂದಾಗ ಅದರ ವಿವರಗಳನ್ನು ಒಂದು ಟೆಲಿಪ್‌ರೈಟರ್ ಮುದ್ರಿಸುತ್ತದೆ. ಪ್ರತಿದಿನವೂ ಆಯು ದಿವಸದ ಬೆಟ್ಟಗಳನ್ನು ಕ೦ಗದ ಪತ್ರಗಳನ್ನೂ ಗಣಕಕ್ಕೆ ಉಜಿಸಿ ಪ್ರತಿಯೊಂದು ಖಾತೆಯನ ಅಧುನಾತನಗೊಳಿಸಲಾಗುವುದು (ಅಪ್‌ಡೇಟೆಡ್). ಹೀಗೆ ಅಧುನಾತನಗೊಳಿಸಲ್ಪಟ್ಟ ಖಾತೆಯನ್ನು ಗಣಕದ ಜ್ಞಾಪಕದಲ್ಲಿರುವ ಒಂದು ದಫ್ತರದಲ್ಲಿನ ಅಂಕಿಅಂಶಗಳೊಡನೆ ಹೋಲಿಸಿ ಪ್ರತಿಯೊಂದು ಖಾತೆಯನ್ನೂ ಅಡ್ಡತಾಳೆ ನೋಡಲಾಗುವುದು. ಬಾಕಿನಿಂತ ಪಾವತಿಗಳು (ಔಟ್‌ಸ್ಟ್ಯಾಂಡಿಂಗ್ ಪೇಮೆಂಟ್ಸ್) ಮೀರೆಳೆತಗಳು (ಓವರ್ ಡ್ರಾಪ್ಸ್ ) ಇವೇ ಮೊದಲಾದವುಗಳ ವರದಿಗಳು ಈ ದಫ್ತರದಲ್ಲಿ ಇವೆ. ಯಾವುದೇ ಖಾತೆಯಲ್ಲಿ ನಿರ್ದಿಷ್ಟ ಸಂಖ್ಯೆಯ ವ್ಯವಹಾರಗಳು ವರದಿಯಾದಾಗ ಅವುಗಳ ಒಂದು ಪಟ್ಟಿಯನ್ನೂ ಸಂದಾಯವಾಗಬೇಕಾದ ಬಡ್ಡಿಯನ್ನೂ ಆ ಖಾತೆದಾರನ ಹೆಸರು ವಿಳಾಸ ಸಮೇತ ಒಂದು ಲೆಕ್ಕ ತಃಖೆಯಲ್ಲಿ (ಸ್ಟೇಟ್‌ಮೆಂಟ್ ಆಫ್ ಅಕೌಂಟ್ಸ್) ಮುದ್ರಿಸಲಾಗುವುದು. ಗಣಕದಲ್ಲಿ ಈ ಪ್ರಕಾರ ದೊರೆಯುವ ಮಾಹಿತಿಯನ್ನು ಬ್ಯಾಂಕಿನ ಪ್ರತಿಯೊಂದು ಶಾಖೆಯ ಹಾಗೂ ಶಾಖೆಗಳ ಜಾಲದ ಸಂಖ್ಯಾಕಲನೀಯ (ಸ್ಟ್ಯಾಟಿಸ್ಟಿಕಲ್) ಮತ್ತು ಲೇಖಾವಿಶ್ಲೇಷಣೆಗೆ ಬಳಸಬಹುದು. ಇಂದು ರಾಷ್ಟ್ರದ ಬಹುತೇಕ ಬ್ಯಾಂಕಿಂಗ್ ವ್ಯವಸ್ಥೆ ಗಣಕಗಳ ಮೂಲಕವೇ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಬಹುದು. 3. ತಪಶೀಲುಪಟ್ಟಿ ನಿಯಂತ್ರಣ (ಇನ್ವೆಂಟರಿ ಕಂಟ್ರೋಲ್: ಭಾರತದ ವಾರ್ಷಿಕ ಕೈಗಾರಿಕಾ ಸಾಮಗ್ರಿಗಳ ಮೌಲ್ಯ ಸಾವಿರ ಕೋಟಿ ರೂಪಾಯಿಗಳಷ್ಟಾಗುವುದು. ಇಷ್ಟೊಂದು ಮೌಲ್ಯದ ಸಾಮಗ್ರಿಗಳನ್ನು ಭರಿಸಲು ತಾಗುವ ವೆಚ್ಚ ಕೆಲವು ನೂರು ಕೋಟಿ ರೂಪಾಯಿಗಳೇ ಆಗಬಹುದು. ನಷ್ಟವಾದ ಬಡ್ಡಿ, ಬಂಧಿತವಾದ ಬಂಡವಾಳ, ಸವಕಳಿ, ಪ್ತತಿ, Ass, Ving ಶುಲ್ಕ ಇವೇ ಮೊದಲಾದವು ಈ ವೆಚ್ಚದ ಕಾರಣಗಳು ನಾಶ, ಉಗ್ರಾಣ ವಿದೇಶೀ ವಿನಿಮಯ ಪ್ರವೇಶಿಸದ ಬಾಬುಗಳಲ್ಲಿ ಗಣಕನಿಯಂತ್ರಿತ ತಪಶೀಲು ಪಟ್ಟಿ ಸಾವುಗಳ ಸಂಖ್ಯೆಯನ್ನೂ ನಿರ್ವ ಹಣ ವೆಚ್ಚವನ್ನೂ ಶೇ. 25ರಷ್ಟು ಕಡಿಮ ಸಾಮಗ್ರಿಗಳ ಮಾಡಬಲ್ಲುದು. ಗಿರಾಕಿಯ ಖಾತೆ ಪುಸ್ತಕ, ಸಾಮಗ್ರಿಗಳ ಉತ್ಪನ್ನಮಟ್ಟದ ವಿವರಗಳು, ಉತ್ಪನ್ನದ ವದ್ಯ ಕಾಪಾಡುಗಳ ಕಪುಪಟ್ಟಿಗಳ ಖಾತೆ ಮುಸ್ತಕ, ಸಾಮಗ್ರಿಗಳ ಕಚ್ಚಾಸಾಮಗ್ರಿಗಳ ಪೂರೈಕೆ ಮಾಡುವವರ ಖಾತೆ ಪುಸ್ತಕ ಇವೇ ಮುಂತಾದವುಗಳಲ್ಲಿ ಆಗುವ ಬದಲಾವಣೆಗಳ ಜಾಡನ್ನು ಒಂದು ಗಣಕ ಗಮನಿಸಬಲ್ಲುದು. ಆ ಬಳಿಕ ಅದು ತಪಶೀಲುಪಟ್ಟಿಯ ಮಟ್ಟದಲ್ಲಿ ತೋರುವ ಏರಿಳಿತಗಳನ್ನೂ ಬೇಡಿಕೆ ಮತ್ತು ಪೂರೈಕೆಗಳನ್ನು ಗಣನೆ ಮಾಡಿ ಅವುಗಳಿಗೆ ಅನುಕೂಲತಮವಾಗಿ ನಿರ್ದೇಶಕಗಳನ್ನು (Lessಟ್) ಒದಗಿಸುತ್ತದೆ: ಯಾವ ಯಾವ ಸಾಮಗ್ರಿಗಳನ್ನು ಎನ್ನಷ್ಟು ಗಾತ್ರದಲ್ಲಿ -
ಪುಟ:Mysore-University-Encyclopaedia-Vol-6-Part-1.pdf/೧೬
ಗೋಚರ