ಪುಟ:Mysore-University-Encyclopaedia-Vol-6-Part-1.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ ಪರಿಕರ್ಮಗಳ ಸಂಶೋಧನೆ ಹಾಗೂ ಯೋಜನೆ(ಆಪರೇಷನ್ಸ್ ರಿಸರ್ಚ್ ಅಂಡ್ ಪ್ಲಾನಿಂಗ್):೧೯೭೦ರಲ್ಲಿ ಭಾರತ ಸರ್ಕಾರ ಗಣಕ ಉಪಯೋಗದಿಂದ ಪಡೆದ ಶಿಫಾರಸ್ಸುಗಳ ಮೇಲೆ ಆಧಾರಿತವಾದ ಒಂದು ಇತಿಹಾಸ ಪ್ರವರ್ತಕ ನಿರ್ಧಾರವನ್ನು ಕೈಗೊಂಡಿತು.ಅದರ ಪ್ರಕಾರ ೭೦೦ ಕೋಟಿಯಷ್ಟು ಬಂಡವಾಳವನ್ನು ಯೋಜನೆಯ(ಪ್ಲಾನಿಂಗ್) ಮೇಲೆ ಹೂಡುವುದೆಂದಿತ್ತು.ಉತ್ತರಭಾರತದ ವಿದ್ಯುತ್ಜಾಲದ ವ್ಯಾಪ್ತಿಯಲ್ಲಿ ಬರುವ ಪಂಜಾಬ್,ರಾಜಸ್ಥಾನ,ಹರಿಯಾಣ,ಉತ್ತರ ಪ್ರದೇಶ,ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ಇಲ್ಲಿನ ವಿದ್ಯುದುತ್ಪಾದನಾಗಾರಗಳಲ್ಲಿ ಜಲವಿದ್ಯುತ್,ಉಷ್ಣ ವಿದ್ಯುತ್ ಹಾಗೂ ನ್ಯೂಕ್ಲಿಯರ್ ವಿದ್ಯುತ್ ಯೋಜನೆಗಳನ್ನು ಯಾವ ಪ್ರಮಾಣದಲ್ಲಿ ಸ್ಥಾಪಿಸಿದರೆ ಅತ್ಯಂತ ಲಾಭದಾಯಕವಾಗುತ್ತದೆಯೆಂಬುದು ಇಲ್ಲಿ ಎದುರಾದ ಸಮಸ್ಯೆ.ಇದಕ್ಕೆ ಅನಿಕೂಲಕರ ಪರಿಹಾರವನ್ನು ಗಣಕಾಧಾರಿತವಾಗಿ ಶೋಧಿಸುವ ಒಂದು ತಂತ್ರವನ್ನು ರೂಪಿಸಲಾಯಿತು.ಎನ್.ಶೇಷಗಿರಿಯವರು ಈ ಕಾರ್ಯದಲ್ಲಿ ಉದ್ಯುಕ್ತರಾದ ತಂಡದ ನಾಯಕರಾಗಿದ್ದರು,ಇಲ್ಲಿ ಆ ತಂಡ ಪರಿಶೀಲಿಸಬೇಕಾಗಿ ಬಂದುದು ಆರುನೂರರಷ್ಟು ಚರಗಳ-ಅವುಗಳಿಗೆ ಹೋಲಿಸುವಾಗ ಬಹುದೊಡ್ದ ಸಂಖ್ಯೆಯ ನಿರ್ಭಂಧಗಳಿಂದ ಪ್ರಭಾವಿತವಾದ-ನಡುವಿನ ಅಂತರಪ್ರಭಾವವನ್ನು.ಈ ಗಣಕ ಕ್ರಮವಿಧಿಯನ್ನು ಟಾಟಾ ಇನ್ಸ್ಟಿಟ್ಯೂಟ್ ಆಫ಼್ ಫ಼ಂಡಮೆಂಟಲ್ ರಿಸರ್ಚ್ನ CDC-3600 ಗಣಕದ ಮೇಲೆ ನಡೆಸಲಾಯಿತು.ಇಲ್ಲಿ ದೊರೆತ ಫಲಿತಾಂಶಗಳು ಒಂದು ಆರ್ಥಿಕ ಪರಿಹಾರವನ್ನು ನೀಡಿದವು.ಇದರ ಪ್ರಕಾರ ಪ್ರತಿಭಾನದಿಂದ ನಿರ್ಧರಿಸಿದ ಯಾವುದೇ ಮಿಶ್ರಕ್ಕಿಂತ ವಾರ್ಷಿಕವಾಗಿ ೪೦ ಕೋಟಿ ರೂಪಾಯಿಗಳನ್ನು ರಾಷ್ಟ್ರಕ್ಕೆ ಉಳಿಸುವಂತಹ ಪರಿಹಾರ ದೊರಕಿತು.ಇದೂ ಇದರಂತೆ ಆಡಳಿತದ ಸಮಸ್ಯೆಗಳ ನೂರಾರು ವಿಶ್ಲೇಷಣೆಗಳೂ ಕ್ರಾಂತಿಕಾರೀ ಶಾಖೆಯಾದ ಪರಿಕರ್ಮಗಳ ಸಂಶೋಧನೆಯ ಉಪಶಾಖೆಗಳು.ಇದರ ಸಂಕ್ಷೇಪ ರೂಪ OR.ಇದೊಂದು ಅಂತರ ಪ್ರಕಾರ(ಇಂಟರ್ ಡಿಸಿಪ್ಲನರಿ) ಲಕ್ಷಣವಿರುವ ವಿಭಾಗ.ಗಣಿತ,ಅರ್ಥಶಾಸ್ತ್ರ,ಸಮಾಜ ವಿಜ್ನ್ಯಾನ,ಮನೋ ವಿಜ್ನ್ಯಾನ ಹಾಗೂ ಇತರ ಹಲವು ಪ್ರಕಾರಗಳನ್ನು OR ಆಡ್ಡ ಹಾಯ್ದಿದೆ.ಇಲ್ಲವೇ ಒಂದು ಪುಟ್ಟ ಕೈಗಾರಿಕೆಯ ಮಟ್ಟದಲ್ಲಿ ಆಗಲಿ ಭಾರೀ ಕೈಗಾರಿಕೆಗಳ ಜಾಲದ ಮಟ್ಟದಲ್ಲೇ ಆಗಲಿ ಎದುರಾಗುವ ಹಲವಾರು ಆಡಳಿತದ ಸಮಸ್ಯೆಗಳನ್ನುOR ಅನ್ವಯಗಳು ಒಳಗೊಳ್ಳುತ್ತವೆ.ಒಂದು ಸ್ಥೂಲ ಅಂದಾಜನ್ನು ಮಾಡಬಹುದಾದರೆ ಕಳೆದ ಒಂದು ದಶಕದಲ್ಲಿ ಯು.ಎಸ್.ಎ,ಯು.ಎಸ್.ಎಸ್.ಆರ್,ಯು.ಕೆ ಹಾಗೂ ಜರ್ಮನ್ ರಾಷ್ಟ್ರಗಳಲ್ಲಿನ ORನ ಎಲ್ಲ ಮುಖಗಳ ಅನ್ವಯದ ಪರಿಣಾಮವಾಗಿ ಸಾಧಿಸಲಾದ ಉಳಿತಾಯ ಭಾರತದ ಪಂಚ ವಾರ್ಷಿಕ ಯೋಜನೆಗಳ ಅಂದಾಜು ವೆಚ್ಚದ ಮೊತ್ತಕ್ಕಿಂತಲೂ ಹೆಚ್ಚು.ಆದ್ದರಿಂದ ರಾಷ್ಟ್ರದಲ್ಲಿರುವ ವ್ಯವಸ್ಥಾಪಕರಲ್ಲೂ(ಮ್ಯಾನೇಜರ್ಸ್) ಯೋಜಕರಲ್ಲೂ(ಪ್ಲಾನರ್ಸ್) ORನಲ್ಲಿ ಅಡಕವಾಗಿರುವ ವಿಭಿನ್ನತೆಗಳನ್ನು ಕುರಿತ ಅರಿವು ರಾಷ್ಟ್ರದ ಆರ್ಥಿಕತೆಯನ್ನು ಗಮನಾರ್ಹವಾಗಿ ಎತ್ತರಿಸಬಲ್ಲುದು ಎಂಬುದು ಸ್ಪಷ್ಟ. ಪರಿಕರ್ಮಗಳ ಸಂಶೋಧನೆಯ(OR) ಇತಿಹಾಸ,ತಾಂತ್ರಿಕವಾಗಿ ಹೇಳುವುದಾದರೆ ವ್ಯವಸ್ಥಾಪನಾ ಶಾಸ್ತ್ರ(ಸೈನ್ಸ್ ಆಫ಼್ ಮ್ಯಾನೇಜ್ ಮೆಂಟ್)-ಇದರ ಜನಪ್ರಿಯ ಹೆಸರು.ಪರಿಕರ್ಮಗಳ ಸಂಶೋಧನೆ-ಮೊದಲು ಉಗಮಿಸಿದ ಸ್ಥಳಗಳಲ್ಲಿ ಭಾರತವೂ ಒಂದು.೧೯೨೨ರಲ್ಲಿ ಬಂಗಾಳದ ಉತ್ತರ ಭಾಗ ತೀವ್ರ ಪ್ರವಾಹ ಪೀಡಿತವಾಗಿತ್ತು.ಪ್ರವಾಹ ವೇಗವನ್ನು ತಡೆ ಹಿಡಿದಿಡಬಲ್ಲ ಹಲವಾರು ಬೋಗುಣಿಗಳ ನಿರ್ಮಾಣವನ್ನು ಸರ್ಕಾರ ನೇಮಿಸಿದ ಒಂದು ಸಮಿತಿ ಸಲಹೆ ಮಾಡಿತು.ಇದು ಅತಿ ಖರ್ಚಿನ ಬಾಬ್ತು.ಈ ಸಮಸ್ಯೆಯನ್ನು ಆಗ ಕೇವಲ ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ತರುಣ ವಿಜ್ಣ್ಯಾನಿಯಾಗಿದ್ದ ಪಿ.ಸಿ.ಮಹಲನೋಬಿಸ್ ಅವರಿಗೆ ಸಹ ಒಪ್ಪಿಸಲಾಯಿತು.(ಇವರೇ ಮುಂದೆ ಭಾರತವನ್ನು ಸಂಖ್ಯಾಕಲನೀಯ ಅಧ್ಯಯನಗಳಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿಸರೆನ್ನುವುದನ್ನು ಇಲ್ಲಿ ಸ್ಮರಿಸಬಹುದು).ಅವರು ಇಡೀ ಪ್ರದೇಶದ ಮೇಲೆ ಬೀಳುವ ಮಳೆಯ ವಿಚಾರ ವ್ಯಾಪಕವಾದ ಅನ್ವೇಷಣೆಯನ್ನು ನಡೆಸಿ ಹಲವಾರು ಪರಿಹಾರಗಳನ್ನು ಶಿಫಾರಸ್ಸು ಮಾಡಿದರು.ಇವುಗಳಲ್ಲಿ ಕೆಲವನ್ನು ಕಾರ್ಯಗತಗೊಳಿಸಲಾಯಿತು.ಅಂತೂ ತಲೆಹಿಡಿದ ಬೋಗುಣಿಗಳ ನಿರ್ಮಾಣ ಮಾಡಲಿಲ್ಲ.ಮಹಲನೋಬಿಸ್ ಅವರು ಮಾಡಿದ ನಿದಾನ(ಡಯಗ್ನೋಸಿಸ್) ಸರಿಯಾದದ್ದೆಂದು ಮುಂದೆ ಸಿದ್ದವಾಯಿತು.ಈ ತರಹದ ಸನ್ನಿವೇಶಗಳನ್ನು ಎದುರಿಸಲು ಅವರು ಕೆಲವು ವಿಧಾನಗಳನ್ನು ರೂಪಿಸಿದರು.ಪೂರ್ವೇಕ್ಷಣೆ(ರಿಟ್ರಾಸ್ಪೆಕ್ಟ್) ಮಾಡಿದಾಗ ಈ ವಿಧಾನಗಳು ಯುದ್ದೋತ್ತರ ದಿವಸಗಳಂದು OR ನಲ್ಲಿ ಆದ ಬೆಳವಣಿಗೆಗಳ ಸ್ವಭಾವದ್ದೇ ಎಂದು ವೇದ್ಯವಾಯಿತು. ೧೯೨೮ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಫಾನ್ ನ್ಯೂಮನ್ ಎಂಬಾತ ಯುದ್ದ ಕೌಶಲವನ್ನು ಅಧ್ಯನ ಮಾಡುತ್ತಿದ್ದಾಗ ಕೆಲವು ವಿಧಾನಗಳನ್ನು ಅಭಿವೃದ್ಧಿ ಪಡಿಸಿದ.ಇವನ್ನು ಮುಂದೆ ರೇಖೀಯ ಕ್ರಮವಿಧಾನ (ಲೀನಿಯರ್ ಪ್ರೋಗ್ರಾಮಿಂಗ್) ಎಂಬ ಹೆಚ್ಚು ವ್ಯಾಪಕವಾದ ಒಂದು ಪ್ರಕಾರದೊಂದಿಗೆ ಹೊಂದಿಸಲಾಯಿತು.೧೯೪೭ರ ಬಳಿಕ ರೇಖೀಯ ಕ್ರಮವಿಧಾನ ಒಂದು ಪ್ರತ್ಯೇಕ ವಿಷಯವಾಗಿ ವಿಕಸಿಸಿದೆ.ಎರಡನೆಯ ಮಹಾಯುದ್ದದ ಮೊದಲ ವರ್ಷಗಳಲ್ಲಿ ಯು.ಕೆ ಯಲ್ಲಿ ಸೇನಾಬಲಗಳ ಮೂರು ವಿಭಾಗಗಳಲ್ಲೂ ಸೈಂಟಿಫಿಕ್ ಮ್ಯಾನೇಜ್ ಮೆಂಟ್ ಪಿ.ಎಂ.ಎಸ್.ಬ್ಲ್ಯಾಕೆಟ್ಟನ ಪ್ರಯತ್ನಗಳ ಫಲವಾಗಿ ಪ್ರಾರಂಭಿಸಲಾಯಿತು. ಐತಿಹಾಸಿಕವಾಗಿ ಹೇಳುವುದಾದರೆ ರೇಖೀಯ ಕ್ರಮವಿಧಾನಕ್ಕೂ ಆ ಕಾರಣದಿಂದ ಸ್ವಂತ ಹಕ್ಕುಗಳ ಮೇಲೆಯೇ OR ಒಂದು ಪ್ರಕಾರವೆಂದು ಪಡೆದ ಪರಿಗಣನೆಗೂ ಕಾರಣರು ಜಾರ್ಜ್.ಬಿ.ಡಾಂಟ್ಸಿಗ್ ಹಾಗೂ ಯು.ಎಸ್.ವಾಯುಸೇನಾ ವಿಭಾಗದ ಆತನ ಸಹೋದ್ಯೋಗಿಗಳು.ಈ ತಂಡಕ್ಕೆ ೧೯೪೭ರಲ್ಲಿ ಸೇನಾ ವ್ಯವಸ್ಥಾಪನೆಗೆ (ಮಿಲಿಟರಿ ಮ್ಯಾನೇಜ್ಮೆಂಟ್) ಗಣತೀಯ ವಿಧಾನಗಳನ್ನು ಅನ್ವಯಿಸುವ ವಿಧಾನಗಳನ್ನು ಅನ್ವೇಶಿಸಲು ಆದೇಶ ನೀಡಲಾಯಿತು.ಇದರ ಪರಿಣಾಮವಾಗಿ ಆ ತಂಡದವರು ರೇಖೀಯ ಕ್ರಮವಿಧಿಯನ್ನು ಪ್ರತ್ಯೇಕವಾದ ಒಂದು ಪ್ರಕಾರವಾಗಿ ಬೆಳೆಸಿದರು.ಅವರಿಗೆ ಈ ದಿಶೆಯಲ್ಲಿ ಲಭಿಸಿದ ಯಶಸ್ಸಿನಿಂದ ಉತ್ತೇಜಿತರಾದ ಯು.ಎಸ್.ವಾಯುಸೇನಾ ವಿಭಾಗ ಸಂಶೋಧಕರ ಒಂದು ತಂಡವನ್ನೇ ಸಂಘಟಿಸಿತು.ಅದಕ್ಕೆ ಪ್ರಾಜೆಕ್ಟ್ ಸ್ಕೂಪ್(ಸೈಂಟಿಫಿಕ್ ಕಂಪ್ಯುಟೇಷನ್ ಆಫ್ ಆಪರೇಶನಲ್ ಪ್ರೋಗ್ರಾಮ್ಸ್ ಎಂಬುದರ ಪ್ರಥಮಾಕ್ಷರ ಸಂಕಲಿತ ರೂಪ) ಎಂದು ಹೆಸರಿಟ್ಟರು.ಇದರಿಂದ ಹಳೆಯ ಶಾಸ್ತ್ರಕ್ಕೆ ಹೊಸ ನೋಟ ಹಾಗೂ ಗೌರವ ಪ್ರಾಪ್ತವಾದವು.ಹೀಗೆ ರಕ್ಷಣಾ ವ್ಯವಸ್ಥಾಪನೆಗೋಸ್ಕರ ತಯಾರಾದ ತಂತ್ರಗಳನ್ನು ಯುದ್ದೋತ್ತರ ದಿವಸಗಳಲ್ಲಿ ವಾಣಿಜ್ಯ ವ್ಯವಸ್ಥಾಪನೆಗೂ ಆರ್ಥಿಕ ಯೋಜನೆಗಳಿಗೂ ಒಯ್ಯಲಾಯಿತು.ORಗೆ ಹೆಚ್ಚಿನ ಕುಮ್ಮಕ್ಕು ದೊರೆತದ್ದು ಬಹುಶಃ ಅಂಕ ಗಣಿಕಗಳ ಬೆಳವಣಿಗೆಯಿಂದ.ಪ್ರಾರಂಭದ ದಿನಗಳಲ್ಲಿ OR ಅನ್ನು ಯು.ಎಸ್.ಎ ಮತ್ತು ಯು.ಕೆ ರಾಷ್ಟ್ರಗಳು ಮಾತ್ರ ತಮ್ಮ ಅನುಕೂಲತೆಗೋಸ್ಕರ ಉಪಯೋಗಿಸಿಕೊಂಡಿದ್ದರೂ ಗಣಕಗಳು ಪ್ರಬುದ್ದಾವಸ್ಥೆಗೆ ಬಂದ ಬಳೀಕ ಅನ್ವಯದ ವ್ಯಾಪ್ತಿ ಮತ್ತಷ್ಟು ದೊಡ್ಡದಾಡ ಆರ್ಥಿಕ ಸಮಸ್ಯೆಗಳೀಗೆ ವಿಸ್ತರಿಸಿತು.ಅದು ಶಿಖರಾಗ್ರವನ್ನು ತಲುಪಿದ್ದು ೧೯೬೧ರಲ್ಲಿ.ಆ ವರ್ಷ ರಷ್ಯಾದ ಮೂರು ಪಂಡಿತರು ಬರ್ಗ್ ಕಿಟಾಫ್ ಮತ್ತು ಲ್ಯಾಪುನಾಫ್ ಗಲಭೆಯಿಲ್ಲದೆ ಒಂದು ಹೊಸ ಅಂದೋಳನವನ್ನು ಪ್ರಾರಂಭಿಸಿದರು.ಇದರಿಂದ ಪರಿಕರ್ಮಗಳ ಸಂಶೋಧನೆಯು ಯು.ಎಸ್.ಎಸ್.ಆರ್ ನ ಆರ್ಥಿಕ ರಚನೆಗೆ ಹೇಳೀದ್ದಲ್ಲ ಎಂಬ ಪ್ರಚಲಿತ ಭಾವನೆ ನಿರ್ಮೂಲವಾಯಿತು.ಇಂದು ಯು.ಎಸ್ ಮತ್ತು ಯು.ಎಸ್.ಎಸ್.ಆರ್. ರಾಷ್ಟ್ರಗಳೆರಡೂ ತಮ್ಮ ಆರ್ಥಿಕ ರಚನೆಗಳನ್ನು ORನ(ಅದರ ಎಲ್ಲಾ ನಿಯಮಗಳು ಮತ್ತು ವಿಧಾನಗಳ ಸಮೇತ) ಅಡಿಪಾಯಗಳ ಮೇಲೆ ಭದ್ರವಾಗಿ ನೆಲೆಗೊಳಿಸಿವೆ.ಈ ಪ್ರಕಾರವಾಗಿ ಗಣಕಸಜ್ಜಿತ ವ್ಯವಸ್ಥಾಪನೆಯಿರುವ ಮತ್ತು ಅದರೊಂದಿಗೆ ಹೊಸ ದೃಷ್ಟಿಕೋನದ ವ್ಯವಸ್ಥಾಪಕರ ಒಂದು ಸಮುದಾಯವಿರುವ ನೂತನ ಯುಗ ಆವಾಹಿಸಲ್ಪಟ್ಟಿತು.ಇವರಿಗೆ ಲಭಿಸಿದ ಯಶಸ್ಸುಗಳು ವ್ಯವಸ್ಥಾಪನೆಯನ್ನು ಕುರಿತ ಅವೈಜ್ನ್ಯಾನಿಕ ನಿಲುವನ್ನು ನಿಧಾನವಾಗಿ,ಆದರೂ ಖಂಡಿತವಾಗಿ,ನಿರ್ನಾಮಗೊಳಿಸಿದವು. ಹೊಸ ವ್ಯವಸ್ಥಾಪಕರು:ದಕ್ಷರೆನಿಸಿಕೊಂಡ ಎಲ್ಲಾ ವ್ಯವಸ್ಥಾಪಕರು ವ್ಯವಸ್ಥಾಒಅನೆಯಲ್ಲಿ ಎದುರಾಗುವ ಸಮಸ್ಯೆಗಳೀಗೆ ಆಧುನಿಕ ವಿಶ್ಲೇಷಣೆಯ ನಾಜೂಕು ವಿಧಾನಗಳನ್ನು ಬಳಸದೆ ಇದ್ದರೂ ಆ ಸಮಸ್ಯೆಗಳನ್ನು ವೈಜ್ನ್ಯಾನಿಕವಾಗಿ ವಿಶ್ಲೇಷಿಸಿ ಅವುಗಳೀಗೆ ತರ್ಕ ಸಮ್ಮತ ಪರಿಹಾರವನ್ನು(ರ್ಯಾಷನಲ್ ಸೊಲ್ಯೂಷನ್ಸ್) ಮುಂದೊಡ್ಡಿದವರೇ ಎಂಬುದು ಸ್ಪಷ್ಟವಾದ ಸಂಗತಿ.ಪ್ರತಿಯೊಬ್ಬ ಯಶಸ್ವೀ ವ್ಯವಸ್ಥಾಪಕನೂ ಅನುಭವದಿಂದ ವ್ಯವಸ್ಥಾಪನೆಯ ಪಂಚ ಪ್ರಜ್ನ್ಯೆಗಳನ್ನು ಉಪಯುಕ್ತತೆಯ ಭಿನ್ನ ಮಟ್ಟಗಳವರೆಗೆ ಬೆಳೆಸಿಕೊಂಡಿರುತ್ತಾನೆ;ವ್ಯವಸ್ಥಾಪನೆ,ಅಂಕ ಗಣತೀಯ,ಅಂಕಿ ಅಂಶಗಳ,ಅನುಕೂಲತಮ ಗ್ರಹಣ(ಅಪ್ತಿಮಾಲಿಟಿ ಪರ್ಸೆಪ್ಷನ್) ಹಾಗೂ ವ್ಯವಸ್ಥಾಗ್ರಹಣ(ಸಿಸ್ಟಮ್ ಪರ್ಸೆಪ್ಷನ್) ಪ್ರಜ್ನ್ಯೆ. ಸಮಗ್ರವಾಗಿ ನೋಡೀ ಹೇಳುವುದಾದರೆ OR ಎಂದರೆ ಈ ಪ್ರಜ್ನ್ಯೆಗಳನ್ನು ರಾಶ್ಯಾತ್ಮಕ ಪದಗಳಲ್ಲಿ ಮಾರ್ಗದರ್ಶಿಸುವ ತತ್ವವನ್ನು ನಿರೂಪಿಸಲು,ಈ ತತ್ವದ ಹಿನ್ನಲೆಯಲ್ಲಿರುವ ನಿಯಮಗಳನ್ನು ಅನ್ವೇಶಿಸಲು ಮತ್ತು ಈ ನಿಯಮಗಳಾ ಮೇಲೆ ಇಚ್ಚಾಪೂರ್ವಕವಾಗಿ ಕೈವಾಡ ನಡೇಸುವ ವಿಧಾನಗಳನ್ನು ಅಭಿವೃದ್ದಿ ಪಡಿಸಲು ಇರುವ ಒಂದು ವಿಧಾನವೆಂದು ವರ್ಣಿಸಬಹುದು. ಪಂಚ ಪ್ರಜ್ನ್ಯೆಗಳಲ್ಲಿ ಮೊದಲನೆಯದನ್ನು ಪರಿಶೀಲಿಸೋಣ.ಭಾರತದಲ್ಲಿರುವ ವ್ಯವಸ್ಥಾಪಕರಲ್ಲಿ ಅತ್ಯುತ್ತಮವಾಗಿ ಅಭಿವೃದ್ದಿಗೊಂಡಿರುವ ಪ್ರಜ್ನ್ಯೆ ಎಂದರೆ ಪ್ರಾಯಶಃ ಇದೇ.ಇದರಲ್ಲಿ ಧುರೀಣತ್ವ,ಸಂಘಟನಾ ಸಾಮರ್ಥ್ಯ,ಚಟೂವಟಿಕೆಗಳನ್ನು ಸರಿ ಹೊಂದಿಸುವ ಸಾಮರ್ಥ್ಯ,ಮಾನವಾಕಾರಗಳನ್ನು ಕುರಿತು ಭಾವಾತಿರೇಕರಹಿತ