ಪುಟ:Mysore-University-Encyclopaedia-Vol-6-Part-1.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ

1959ರ ಪ್ರರಂಭದಲ್ಲಿ ಇದರ ರಚನೆ ಪೂರ್ಣಗೊಂಡಿತ್ತು ಇದನ್ನು ಪರಿಪೂರ್ಣ ಪರೀಕ್ಷೆಗೆ ಒಳಪಡಿಸಿ ಬಳಿಕ ಭಾರತದಲ್ಲಿ ನಿರ್ಮಿಸಲಾದ ಪ್ರಥಮ ಗಣಕವನ್ನು ಫೆಬ್ರುವರಿ 1960ರಲ್ಲಿ ಬಿಡುಗಡೆ ಮಾಡಾಲಾಯಿತು. ಇದರ ಹೆಸರು ಟಿಫ್ರಾಕ್ (TIFRAC)






           ಭಾರತ ನಿರ್ಮಿಸಿದ ಮೊತ್ತಮೊದಲ ಗಣಕ - (TIFRAC)
          
       ಪ್ರಪಂಚದಲ್ಲಿ ಗಣಕ ತಂತ್ರವಿಜ़್ನಾನದ ಕಲೆಯ ಸ್ಥಿತಿಯೊಡನೆ ಭಾರತದ ಪ್ರಯತ್ನವನ್ನು ಹೋಲಿಸುವಾಗ ಭಾರತ ಈ ತಂತ್ರವಿಜ़್ನಾನದಲ್ಲಿ ಅಷ್ಟೇನೂ ಹಿಂದೆ ಯುಳಿದಿಲ್ಲ ಎಂದು ವೇದ್ಯವಾಗುವುದು. 1945-55ರ ದಶಕದ ನಿರ್ವಾತ ನಳಿಕೆಗಳು. ಅರೆವಾಹಕಡಯೋಡುಗಳು ಮತ್ತು ಫೆರೈಟ್ ಕೋಶಜ़್ನಾಪಕಗಳು ಇವುಗಳಿಂದ ರಚಿಸಲಾದ 








LDC-3600 ಗಣಕ KANNADA ಎಂಬ ಪದವನ್ನು ಉಚ್ಚರಿಸಿದಾಗ ಮೂಡುವ ವಾಗ್ರೋಹಿತಲೇಖ

ಗಣಕಗಳು ಮೊದಲ ತಲೆಮಾರನ್ನು ಪರಿಪೂರ್ಣ ಸ್ಥಿತಿಗೆ ತರಲಾಯಿತು IBM-701 ಯಂತ್ರಗಳ ಉತ್ಪಾದನೆಯೊಡನೆ 1953ರಲ್ಲಿ ಗಣಕಗಳ ತಯಾರಿಕೆ (ಮ್ಯಾನುಫಾಕ್ಟರ್)ಆರಂಭವಾಯಿತು. ಈ ಯಂತ್ರಗಳೊಡನೆ ಟಿಫ್ರಾಕನ್ನು ಯಶಸ್ವಿಯಾಗಿ ಹೋಲಿಸಬಹುದು.

       1960ರಿಂದ 1964ರವರೆಗೆ ನಾಲ್ಕು ವರ್ಷಗಳ ಕಾಲ ಟಿಫ್ರಾಕ್ ಕಾರ್ಯೋದ್ಯುಕ್ತವಾಗಿತ್ತು. ಭಾರತದಲ್ಲಿ ಹಲವಾರು ಗಣಕೋಪಯೋಗಕಾರರಿಗೆ ಪ್ರಥಮವಾಗಿ ಕ್ರಮವಿಧಾಯಕ್ಕೆ ಪ್ರವೇಶ ದೊರೆತದ್ದು ಇದೇ ಯಂತ್ರದಿಂದ. ಇದರಿಂದಾಗಿ ಸಂಶೋಧಕ ವಿಜ़್ನಾನಿಗಳಲ್ಲಿ ಗಣಕ ಪ್ರಜ़್ನೆ ಬೆಳೆಯಿತು. ಗಣಕದ ಯಂತ್ರಾಂಶಗಳ ತಯಾರಿಕೆಯಲ್ಲಿ ನಿಪುಣರಾದ ತಂತ್ರ ವಿಜ़್ನಾನಿಗಳ ಒಂದು ಬಲಿಷ್ಟ ತಂಡವನ್ನೇ (ಹಾರ್ಡ್ ಕೋರ್) ಟಿಫ್ರಾಕ್ ಸೃಜಿಸಿತು. ತಕ್ಕಪ್ಪು ಆರ್ಥಿಕ ಸೌಲಭ್ಯವಿದ್ದರೆ ಇವರು ಗಣಕವನ್ನು ರಚಿಸಬಲ್ಲ ಸಮರ್ಥರು.
     ಹೆಚ್ಚು ಸಾಮರ್ಥ್ಯವಿರುವ ಯಂತ್ರದ ಅವಶ್ಯಕತೆ ಉತ್ಕಟವಾದಂಥ ಘಟ್ಟಕ್ಕೆ ಟಿಫ್ರಾಕ್ 1964ರ ವೇಳೆಯಲ್ಲಿ ಮುಟ್ಟಿತ್ತು. ಅದೇ ವರ್ಷ ಭಾರತ ಸರ್ಕಾರ ಟಾಟಾ ಇನಿಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಎರಡನೆ ತಲೆಮಾರಿನ ಟ್ರಾನ್ಸಿಸ್ಟರೀಕೃತ ಗಟಕವನ್ನು (ಎಂದರೆ CDC-3600 ಗಣಕ) ಸ್ಥಾಪಿಸುವುದರ ಮೂಲಕ ರಾಷ್ಟ್ರೀಯ ಗಣಕೇಂದ್ರವನ್ನು (ನ್ಯಾಷನಲ್ ಕಂಪ್ಯೂಟರ್ ಸೆಂಟರ್) ಪ್ರಾರಂಭಿಸಿದರು. ಈ ವ್ಯವಸ್ಥೆಯ ಸಂಪೂರ್ಣ ಪೋಷಣೆ ಹಾಗೂ ದುರಸ್ಥಿ ಕೆಲಸಗಳನ್ನು ಭಾರತೀಯ ಎಂಜಿನಿಯರುಗಳೇ ವಹಿಸಿಕೊಂಡರು. ಅಲ್ಲಿಂದೀಚೆಗೆ ಈ ಕೇಂದ್ರದಿಂದ ಉಪಯೋಗ ಪಡೆದವರು ಸಾವಿರರು ಮಂದಿ. ಹೀಗೆ ಭಾರತ ಗಣಕಯುಗಕ್ಕೆ ಅದರ ಸರ್ವಮುಖಗಳಲ್ಲೂ ಪ್ರವೇಶ ಮಾಡಿದೆ.
      1966ರಲ್ಲಿ ಓಲ್ಡ್ಯಾಪ್ (OLDAP) ಎಂಬ ಹೆಸರಿನ ಸಂಪರ್ಕರಹಿತ (ಆನ್-ಲೈನ್)ಗಣಕದ ಆಲೇಖ್ಯ ಹಾಗೂ ನಿರ್ಮಾಣದ ಪ್ರಾರಂಭದೊಡನೆ ದೇಶೀಯ ಯಂತ್ರಾಂಶಗಳ ತಯಾರಿಕೆಯಲ್ಲಿ ಇನೋಂದು ಚಟುವಟಿಕೆ ತಲೆದೋರಿತು. ಇದೇ ಸುಮಾರಿಗೆ ಸಂಪೊರ್ಣವಾಗಿ ಟ್ರಾನ್ಸಿಸ್ಟರೀಕೃತವಾದ ಐಸಿಜು (ISIJU) ಎಂಬ ಹೆಸರಿನ ಒಂದು ಗಣಕವನ್ನು ಜಾದವಪುರ ವಿಶ್ವವಿದ್ಯಾಲಯದ ಸಿಬ್ಬಂದಿ ಕೊಲ್ಕತದ ಇಂಡಿಯನ್ ಸ್ಪ್ಯಾಟಿಸ್ಟಿಕಲ್ ಇನ್ ಸ್ಟಿಟ್ಯೂಟಿನವರ ಸಹಾಯದಿಂದ ರಚಿಸಿದವರು. ಹಲವಾರು








              ಭಾರತದ ಮೊಟ್ಟಮೊದಲ ಸಂಪರ್ಕಸಹಿತ ಗಣಕ - OLDAP

ತಂಡಗಳವರು ಸಹ ಸಾಕಷ್ಟು ಗಣಕ ನಿರ್ಮಾಣ ಕ್ರಿಯೆಯಲ್ಲಿ ಉದ್ಯುಕ್ತರಾಗಿದ್ದರು. ಇಂಟರ್ ನ್ಯಾಶನಲ್ಲ್ ಬಿಸಿನೆಸ್ ಮಶೀನ್ಸ್ ಕಾರ್ಪೋರೇಷನ್ (IBM) ಎಂಬ ಸಂಸ್ಥೆ ಭಾರತದಲ್ಲಿ ಐಬಿಎಂ - 141 ಪ್ರರೂಪದ ಗಣಕಗಳನ್ನು, ಅವುಗಳಿಗೆ ಬೇಕಾಗುವ ಯಂತ್ರಾಂಶದ ಸಾಕಷ್ಟು ಘಟಕಗಳನ್ನು ಯು.ಎಸ್.ಎ.ಯಿಂದ ತರಿಸಿಕೊಂಡು, ನಿರ್ಮಿಸುತ್ತಿದೆ. ಮುಂಬಯಿಯಲ್ಲಿರುವ ಭಾಭಾ ಪರಮಾಣು ಸಂಶೋದನ ಕೇಂದ್ರ (ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್) ಮತ್ತು ಮುಂದಕ್ಕೆ ಹೈದರಾಬಾದಿನಲ್ಲಿರುವ ಅದರ ಶಾಖೆ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯ ಲಿಮಿಟೆಡ್ (ECIL) ಪಿಡಿಪಿ-ಪ್ರರೂಪದ ಗಣಕಗಳು ಉತ್ಪಾದನೆಯನ್ನು ಪ್ರಾರಂಭಿಸಿದವು. ಮೂರನೆಯ ಪೀಳಿಗೆಯ ಗಣಕಗಳನ್ನು ಸೂಕ್ಷ್ಮ ಎಲೆಕ್ಟ್ರಾನಿಕ್ ಮಂಡಲಗಳಿಂದ ಕಟ್ಟಲು ಯೋಜನೆಗಳು ಭರದಿಂದ ನಡೆದವು. ಎಲೆಕ್ಟ್ರಾನಿಕ್ಸ್ ಕಾರ್ಪೂರೇಶನ್ ಆಫ್ ಇಂಡಿಯ ಲಿಮಿಟೆಡ್ ಮತ್ತು ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಇವೆರೆಡು ಸಂಸ್ಥೆಗಳೂ ಸೌಕರ್ಯಗಳನ್ನು ಬೆಳೆಸಿ ಭಾರತದಲ್ಲೇ ಪೂರ್ಣ ಪ್ರಮಾಣದ ಗಣಕ ತಯಾರಿಕಾ ಕಾರ್ಖಾನೆಗೆ ಬೇಕಾಗುವ ಅಧೋರಚನೆ (ಇನ್ಫ್ರಾಸ್ಟ್ರಕ್ಚರ್) ಸಿದ್ಧವಾದ ಹಾಗಾಯಿತು. ಒಂದು ಮುಖ್ಯ ವಿಷಯವೆಂದರೆ ಭಾರತದಲ್ಲಿರುವ ಐಬಿಂ ಸಂಸ್ಥೆ ಗಣಕ ಸಂಸ್ಥಾಪನೆಗಾಗಿ ಕೀಲಿರಂಧ್ರಿಸುವ ಯಂತ್ರವನ್ನು (ಕೀ ಪಂಚ್ ಮಷೀನ್ಸ್) ತಯಾರಿಸುತ್ತದೆ; ಅಲ್ಲದೇ ಅವನ್ನು ಆಗ್ನೇಯ ಏಷ್ಯದಲ್ಲಿನ ರಾಷ್ಟ್ರಗಳಿಗೆ ನಿರ್ಯಾತ ಮಾಡಿ ಗಮನಾರ್ಹ ಮಟ್ಟದ ವಿದೇಶೀವಿನಿಮಯವನ್ನು ಕೂಡ ಗಳಿಸುತ್ತಿದೆ. ಐ ಬಿ ಎಂ ಇಗ ಒಮ್ಮೆ ಭಾರತದಿಂದ ಹೊರಹೋಗಿ ಪುನಃ ಬಂದು ದೊಡ್ಡ ಸಂಸ್ಥೆಯಾಗಿ ಇಲ್ಲಿ ನೆಲೆಗೊಂಡಿದೆ ಎಂಬುದನ್ನು ಗಮನಿಸಬೇಕು.

          ಸ್ಥಳ್ಳೀಯ ಸಾಮರ್ಥ್ಯ ಹಾಗೂ ವಸ್ತುಗಳಿಂದ ಈ ದೇಶದಲ್ಲಿಯೇ ಗಣಕಗಳನ್ನು ತಯಾರಿಸಲು ಮಾಡಿರುವ ಮೇಲಿನ ಪ್ರಯತ್ನಗಳು ಆವಷ್ಟೇ ಇದ್ದರೂ ಗಣಕಗಳಿಗೆ ಬೇಡಿಕೆ ಅದೆಷ್ಟು ತ್ವರಿತಗತಿಯಿಂದ ಏರುತ್ತಿದೆ ಎಂದರೆ ನಮ್ಮ ಎಲ್ಲ ಅವಶ್ಯಕತೆಗಳನ್ನೂ ಇವುಗಳಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ; ವಿದೇಶದಿಂದ ಗಣಕಗಳನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಸಂದರ್ಭದಲ್ಲಿ ಇಂದು ವಿಚಾರ