ಪುಟ:Mysore-University-Encyclopaedia-Vol-6-Part-1.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆ

ಇದರ ಮುಖ್ಯ ಉಪಯೋಗಗಳು ಹೀಗೆ ಇವೆ; ೧.ನೆಲದ ಕೆಳಗೆ ಉಂಟಾಗಬಹುದಾದ ಭೂಕುಸಿತ ಅಥವಾ ಬಂಡೆ ಸಿಡಿತ ಇವು ಯಾವೂವೂ ಇಲ್ಲಿಲ್ಲ; ೨.ಕೃತಕ ವಾಯುಸಂಚಾರ ಇಲ್ಲಿ ಅನಾವಶ್ಯಕ; ೩.ಹಗಲು ಹೊತ್ತಿನಲ್ಲಿ ಕೃತಕ ಬೆಳಕು ಇಲ್ಲಿ ಅನಾವಶ್ಯಕ; ೪.ಸಾಮಾನ್ಯವಾಗಿ ಭೂಗತ ಕಲ್ಲಿದ್ದಲು ಗಣಿಯಲ್ಲಿ ಕಂಡುಬರುವ ಮಿಥೇನ್ ಅಥವಾ ಕಲ್ಲಿದ್ದಲು ದೂಳಿನ ಆಸ್ಪೋಟನೆ ಇಲ್ಲಿಲ್ಲ; ೫.ಪ್ರಕೃತಿಯ ಒಳ್ಳೆಯ ವಾಯು ಮತ್ತು ಬೆಳಕಿನ ಪರಿಣಾಮವಾಗಿ ಹೆಚ್ಚಿನ ಕಾರ್ಯಾಚರಣೆ ಇಲ್ಲಿ ಸಾಧ್ಯ.

ಮಳೆಗಾಲದಲ್ಲಿ ತೆರೆದ ಗಣಿಗಳಲ್ಲಿ ಸರಿಯಾದ ಕೆಲಸ ನಡೆಸಲಾಗದಿರುವುದು ಒಂದು ಮುಖ್ಯ ಅನನುಕೂಲ.

ತೆರೆದ ಗಣಿ ಕಾರ್ಯಾಚರಾಣೆಯನ್ನು ಸಾಮಾನ್ಯವಾಗಿ ತೋಳುಬಲ ಎಂದರೆ ಕರಚಲ (ಮ್ಯಾನುವಲ್) ಮತ್ತು ಯಂತ್ರಚಲ (ಮೆಕಾನಿಕಲ್) ಎಂಬುದಾಗಿ ವಿಭಾಗಿಸಬಹುದು. ಅನಾವಶ್ಯಕ ವಸ್ತುಗಲ ವಿನಿಯೋಗ,ಖನಿಜವನ್ನು ಹೊರತೆಗೆಯುವುದು ಸುರಂಗ ರಂಧ್ರ ಕೊರೆಯುವುದು ಇವೇ ಮುಂದಾದ ಕೆಲಸಗಳನ್ನು ಕರಚಲವಾಗಿಯೇ ನಡೆಸಲಾಗುವುದು. ಇಂಥ ಗಣಿಯಲ್ಲಿ ಅದಿರಿನ ಉತ್ಪಾದನೆ ಬಹಳ ಕಡಿಮೆ ಮತ್ತು ಇದು ಅಷ್ಟು ಲಾಭದಾಯಕವಲ್ಲ. ಪೂರ್ಣ ಯಂತ್ರಚಲ ಅನಾವೃತಗಣಿಯಲ್ಲಿ ಸುರಂಗರಂಧ್ರ ಕೊರೆಯುವುದರಿಂದ ಆರಂಭವಾಗಿ ಖನಿಜವನ್ನು ರೈಲು ಅಥವಾ ಹಡಗಿಗೆ ತುಂಬುವವರೆಗಿನ ಪ್ರತಿಯೊಂದು ಕೆಲಸವೂ ಯಂತ್ರಗಳಿಂದಲೇ ಆಗುತ್ತದೆ.

ಈ ಕೆಲಸಕ್ಕಾಗಿ ಉಪಯೋಗಿಸುವ ಮುಖ್ಯ ಯಂತ್ರಗಳೆಂದರೆ ಡ್ರ್ಯಾಗ್ ಲೈನ್ಸ್, ವ್ಯಾಗನ್ ಡ್ರಿಲ್ಸ್, ಡಂಪಿಂಗ್ ಟ್ರಕ್ಸ್, ಬಕೆಟ್ ವೀಲ್ ಎಕ್ಸ್ ಕವೇಟರ್ಸ್ ಇತ್ಯಾದಿ. ಒಂದು ತೆರೆದ ಗಣಿಯಲಿ ಸಮಗ್ರ ಖನಿಜ ನಿಕ್ಷೇಪವನ್ನು ಒಂದೇ ಬಾರಿಗೆ ತೆಗೆಯುವುದು ಅಸಾಧ್ಯ.

ಸುರಕ್ಷಿತತೆಯ ದೃಷ್ಟಿಯಿಂದ ಈ ನಿಕ್ಷೇಪವನ್ನು ಹಲವು ಬೆಂಚುಗಳನ್ನಾಗಿ (ಬೆಂಚಿಂಗ್) ವಿಂಗಡಿಸಿದ ಬಳಿಕ ಆ ಬೆಂಚುಗಳಲ್ಲಿ ಖನಿಜವಮನ್ನು ಏಕಕಾಲದಲ್ಲಿ ತೆಗೆಯಲಾಗುವುದು. ಈ ಕಾರಣಕ್ಕಾಗಿ ಇದನ್ನು ಬೆಂಚಿನ ಗಣಿ ಎಂದು ಸಹ ಕರೆಯುವುದುಂಟು.

ಸುರಂಗ ಪದ್ದತಿ : ತೆರೆದ ಗಣಿಗಳಲ್ಲಿ ಸುರಂಗ ಪದ್ದತಿ ಬಹಳ ಬಿರುಸು. ಇಲ್ಲಿ ಭೂಗತ ಗಣಿಯಲ್ಲಿ ಇರುವ್ಂತೆ ಅಡ್ಡಿ ಆತಂಕಗಳು ಇಲ್ಲ. ಬಾವಿ ಕೊರೆಯುವ ಬೈರಿಗೆಯನ್ನು ಉಪಯೋಗಿಸಿ ಅತಿ ದೊಡ್ಡ ವ್ಯಾಸವುಳ್ಳ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ತುಂಬಿ ಹೊಡೆಯುತ್ತಾರೆ. ಇದಕ್ಕೆ ಪ್ರಾಥಮಿಕ ಸುರಂಗ ಪದ್ದತಿ ಎಂದು ಹೆಸರು. ಇಂಥ ಸುರಂಗ ಪದ್ದತಿಯಲ್ಲಿ ಒಂದು ಬಾರಿಗೆ ೫೦೦ ರಿಂದ ೧೦೦೦ ಟನ್ ಖನಿಜವನ್ನು ಬೇರ್ಪಡಿಸಬಹುದು. ಇದರಲ್ಲಿ ದೊರೆಯುವ ಬಲು ದೊಡ್ಡ ಶಿಲಾಖಂಡಗಳನ್ನು ಸಣ್ಣ ಸಿಡಿಮದ್ದನ್ನು ಇಟ್ಟು ದ್ವಿತೀಯಕ ಸುರಂಗ ಪದ್ದತಿಯಿಂದ ಸಣ್ಣ ಚೂರುಗಳನ್ನಾಗಿ ಮಾಡುತ್ತಾರೆ.

ಲೋಹಾಂಶ ಕಡಿಮೆ ಇರುವ ಖನಿಜಗಳಿಂದ ಲೋಹವನ್ನು ಲಾಭದಾಯಕವಾಗಿ ಪಡೆಯಬೇಕಾದರೆ ಅಗಾಧ ಗಾತ್ರದಲ್ಲಿ ಕೆಲಸ ಮಾದಬೇಕಾಗುತ್ತದೆ. ಹೇರಳವಾಗಿ ಖನಿಜಗಳನ್ನು ಸುಲಭ ವೆಚ್ಚದಲ್ಲಿ ತೆಗೆಯಲು ತೆರೆದ್ ಗಣಿ ವಿಧಾನದಿ೦ದ ಮಾತ್ರ ಸಾಧ್ಯ.ಇ೦ಥ ಗಣಿಗಳಲ್ಲಿ ಕೆಲಸ ನಡೆಯುವ ವಿಧಾನವನ್ನು ಮುಂದೆ ವಿವರಿಸಿದೆ.

ಗುಂಡಿಗಳು,ಟ್ರೆಂಚುಗಳು : ಭೂಮಿಯ ಮೇಲು ಭಾಗದಲ್ಲಿಯೇ ಸ್ವಲ್ಪ ಮೊತ್ತದಲ್ಲಿ ಸಿಕ್ಕುವ ಖನಿಜಗಳನ್ನು ತೆಗೆಯಲು ಸಣ್ಣ ಗುಂಡಿಗಳನ್ನೂ ಅಡ್ಡ ಕಾಲುವೆಯಂಥ ಟ್ರೆಂಚುಗಳನ್ನೂ ತೋಡುತ್ತಾರೆ. ಈ ಕಾರ್ಯಕ್ಕೆ ಅಂಥ ಯಂತ್ರೋಪಕರಣಗಳು ಬೇಕಿಲ್ಲ.


ಕಲ್ಲರೆ ಅಥವಾ ಕ್ವಾರಿ : ಕಲ್ಲುಬಂಡೆಗಳನ್ನು ತೆಗೆಯಲು ದೊಡ್ಡದಾದ ಬಂಡೆಯನ್ನು ಹಂತಹಂತವಾಗಿ ಕಡೆಯುತ್ತರೆ. ಈ ಹಂತಗಳನ್ನು ಬಿಡಿಸುವುದಕ್ಕೆ ಸಿಡಿ ಮದ್ದಿನ ಉಪಯೋಗ ಉಂಟು. ಬೆಂಗಳೂರಿನ ಸುತ್ತಮುತ್ತ ಸುಟ್ಟಕಲ್ಲಿಗಾಗಿ ತೆಗೆದಿರುವ ಕ್ವಾರಿಗಳು ಈ ರೀತಿಯವು. ಇವು ಸಣ್ಣ ಗಾತ್ರದವಾಗಿರಬಹುದು,ಅಥಾವಾ ರೈಲು ಮಾರ್ಗಗಳನೊಳಗೊಂಡು ಭೂತಾಕಾರದ ಕ್ರೇನುಹಗಳು ಮತ್ತು ಷೊವೆಲ್ಲುಗಳ ಸಹಾಯದಿಂದ ಕಲ್ಲು ಮಣ್ಣನ್ನು ದೂರ ಸಾಗಿಸುವ ಬೃಹದಾಕಾರದ ಗಣಿಗಳಾಗಿಯೂ ಇರಬಹುದು. ಬಾಬಾಬುಡನ್ ಶ್ರೇಣಿಯ ಕೆಮ್ಮಣ್ಣು ಗುಂಡಿಯಲ್ಲಿನ ಕಬ್ಬಿಣದ ಗಣೀ,ಹೊಸಪೇಟೆಯ ಬಳಿಯ ಕಬ್ಬಿಣದ ಗಣಿ ಷಹಬಾದ್ ಮತ್ತು ದಾಡಿ ಬಳಿ ಇರುವ ಸುಣ್ಣ ಕಲ್ಲಿನ ಗಣಿ ಈ ಬಗೆಯವು.

ಭೂಮಿಯ ಮೇಲು ಪದರದಲ್ಲಿ ಸಿಕ್ಕುವ ಕಲ್ಲಿದ್ದಲು ಅಲ್ಯೂಮಿನಿಯಂ ಲೋಹದ ಅದಿರಾದ ಬಾಕ್ಸೈಟ್ ಇವೇ ಮುಂತಾದವನ್ನು ತೆಗೆಯಲು ಖನಿಜ ಪದರದ ಮೇಲಿರುವ ಕಳಪೆ ಕಲ್ಲಿನ ಹೊದಿಕೆಯನ್ನು ತೆಗೆದು ಹೊರಹಾಕಬೇಕಾಗುತ್ತಗದೆ. ಇದಕ್ಕೆ ಉದ್ದದ ತೋಳುಳ್ಳ ಷೊವೆಲ್ಲುಗಳನ್ನು ಉಪಯೋಗಿಸುತ್ತಾರೆ. ಮೊದಲಿಗೆ ಈ ಷೊವೆಲ್ಲು ಕಾಲುವೆಯ ತರಹದ ಒಂದು ಟ್ರೆಂಚನ್ನು ತೋಡುತ್ತದೆ, ಆಮೇಲೆ ಅದೇ ಷೊವೆಲ್ಲಿನ ಸಹಾಯದಿಂದ ಕಾಲುವೆಯ ಗೋಡೆಗಳನ್ನು ಹಿಂದೆ ಸರಿಸುತ್ತಾ ಹೋಗುತ್ತಾರೆ. ಈ ರೀತಿ ಮೇಲಿನ ಪದರವನ್ನು ತೆಗೆದಾಗ ಬಳಿಕ ಕೆಳಗಿರುವ ಕಲ್ಲಿದ್ದಲಿನ ಪದರವನ್ನು ಷೊವೆಲ್ಲಿನ ಮೂಲಕ ತೋಡಿ ರೈಲು ಬಂಡಿಗಳಿಗೆ ತುಂಬಿ ಹೊರಗಡೆ ಕಳಿಸುತ್ತಾರೆ.ಷೊವೆಲ್ಲುಗಳ ತೋಳಿನ ತುದಿಯಲ್ಲಿರುವ ಬಾಲ್ದಿಗಳು ಒಂದು ಸಲ ಹಲ್ಲೂರಿದರೆ ಹತ್ತು ಟನ್ನುಗಳವರೆಗೂ ತೆಗೆಯಬಲ್ಲವು. ಮದರಾಸಿನ ದಕ್ಷಿಣಕ್ಕಿರುವ ನೈವೇಲಿಯಾ ಬಳಿ ಕಂದು ಬಣ್ಣದ ಇದ್ದಲನ್ನು ತೆಗೆಯುವ ಬೃಹದಾಕಾರದ ಬಯಲು ಗಣಿ ಇದೆ. ಕಬ್ಬಿಣದ ಗಣಿಯಲ್ಲಿ ಮೇಲಿನ ಹೊರಹೊದಿಕೆಯನ್ನು ತೆಗೆದು ಹಾಕುವ ಬೇರೆ ಬೇರೆ ಹಂತಗಳನ್ನು ಚಿತ್ರ ೧ ರಲ್ಲಿ ತೋರಿಸಿದೆ.