ಪುಟ:Mysore-University-Encyclopaedia-Vol-6-Part-1.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆ ಬಯಲು ಗಣಿಗಳು:ಭೂಮಿಯ ಮೇಲೆ ವಿಶಾಲವಾದ ಪ್ರದೇಶದಲ್ಲಿ ಹರಡಿರುವ ಸುಲಭ ಬೆಲೆಯ ಕಬ್ಬಿಣದ ಅದಿರು ಅಥವಾ ತೀರ ಅಲ್ಪ ಲೋಹಾಂಶವಿರುವ ತಾಮ್ರದ ಅದಿರು ಮುಂತಾದವನ್ನು ಪಡೆಯಲು ಬ್ರುಹದಾಕಾರದ ಗಣಿಗಳನ್ನು ತೋಡಬೇಕಾಗುತ್ತದೆ.ಇಂಥ ಗಣಿಗಳು ಸಾವಿರಾರು ಮೀಟರು ಉದ್ದ ಅಗಲವಿರುತ್ತವೆ.ಇವು ಹಂತ ಹಂತವಾಗಿ ಕೆಳಗೆ ಇಳಿದಿರುತ್ತವೆ.ದಿನಂಪ್ರತಿ ಇಂಥ ಗಣಿಗಳಿಂದ ೨೦,೦೦೦ ಟನ್ನುಗಳಿಗೂ ಹೆಚ್ಚು ಆದಿರನ್ನು ಪಡೆಯಲಾಗುವುದು.ಪ್ರಪಂಚದಲ್ಲಿ ಅತಿದೊಡ್ಡ ಬಯಲುಗಣಿಯಾದ ಯೂಟಾದಲ್ಲಿನ ಬೆಂಗಾಮ್ ಗಣಿ ಪ್ರತಿ ದಿವಸ ಒಂದೂವರೆ ಲಕ್ಷ ಟನ್ನಿಗೂ ಮೀರಿದ ಕಳಪೆ ಕಲನ್ನು ಕಿತ್ತೆಸದು ದೂರ ಒಗೆಯುತ್ತದೆ.ತಾತಾ ಕಂಪನಿಯ ಕಬ್ಬಿಣದ ಗಣಿಗಳು,ಅಸೋಸಿಯೇಟೆಡ್ ಸಿಮೆಂಟ್ ಕಂಪನಿಯ ಸುಣ್ಣಾ ಕಲ್ಲಿನ ಗಣಿಗಳು ಈ ಬಗೆಯ ಬಯಲು ಗಣಿಗಳಿಗೆ ಉತ್ತಮ ನಿದರ್ಶನಗಳು. ಬಯಲು ಗಣಿ ನೆಲ ಮಟ್ಟದಿಂದ ನೂರಿನ್ನೂರು ಮೀಟರು ಆಳಕ್ಕೂ ಇಳಿದಿರಬಹುದು. ಹಂತ ಹಂತವಾಗಿ ಮೆಟ್ಟಲಾಕಾರದಲ್ಲಿ ಗಣಿ ಕೆಳಗೆ ಇಳಿದಿರುತ್ತದೆ. ಒಂದೊಂದು ಹಂತವೂ ೬-೯ ಮೀ. ಎತ್ತರವಿರಬಹುದು. ಒಂದು ಹಂತದಿಂದ ಮೇಲಿನ ಹಂತಕ್ಕೆ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಇಳಿದಾರಿಗಳಿರುತ್ತವೆ. ಕಲ್ಲುಗಳನ್ನು ಹೊತ್ತಿರುವ ಟ್ರಕ್ಕುಗಳು ಈ ಇಳಿದಾರಿಗಳ ಮೂಲಕ ಅವನ್ನು ಮೇಲಕ್ಕೆ ಒಯ್ಯುತ್ತವೆ. ಭೂಗತ ಗಣಿ:ಹೆಸರೇ ಸೂಚಿಸುವಂತೆ ಈ ಗಣಿ ಭೂಮಿಯೊಳಗೆ ವ್ಯಾಪಿಸಿರುತ್ತದೆ.ಇದರ ಒಳಗೆ ಇಳಿಯುವುದಕ್ಕೆ ಹತ್ತು ಹನ್ನೆರಡ್ಡು ಅಡಿ ವ್ಯಾಸವಿರುವ ಕೂಪ ಉಂಟು.ಇದು ನೇರವಾಗಿಯಾದರೂ ಇರಬಹುದು.ಇಳಿಕಲಾಗಿಯಾದರೂ ಇರಬಹುದು.ಇಂಥ ಒಂದು ಕೂಪದಿಂದ ನೂರು ಅಥವಾ ಇನ್ನೂರು ಅಡಿ ಅಂತರದಲ್ಲಿ ಮಟ್ಟಗಲನ್ನು ಕೊರೆದಿರುತ್ತಾರೆ.ಈರೀತಿಯಾಗಿ ಸಾವಿರಾರು ಮೀಟರುಗಳವರೆಗೂ ಗಣಿಯನ್ನು ಬೆಳೆಸಿ ಎರಡು ಮಟ್ಟಗಳ ನಡುವಿರುವ ಲೋಹಮಯ ಕಲ್ಲನ್ನು ತೆಗೆದು ಕೂಪದ ಹತ್ತು ಸಾವಿರ ಅಡಿಗಳವರೆಗೂ ಗಣಿಯನ್ನು ಬೆಳೆಸಿ ಎರಡು ಮಟ್ಟಗಳ ನಡುವಿರುವ ಲೋಹಮಯ ಕಲ್ಲನ್ನು ತೆಗೆದು ಕೂಪದ ಮೂಲಕ ಮೇಲಕ್ಕೆ ಸಾಗಿಸುತ್ತಾರೆ.ಕಲ್ಲನ್ನು ಮೇಲಕ್ಕೆ ಒಯ್ಯುವುದಕ್ಕೆ ಪಂಜರಗಳಿರುತ್ತವೆ.ಇವುಗಳಲ್ಲಿ ಒಂದರಿಂದ ಐದು ಟನ್ ತೂಕದಷ್ಟು ಕಲ್ಲನ್ನು ಮೇಲಕ್ಕೆ ರವಾನಿಸಬಹುದು .ರಾಟೆ ಯಂತ್ರಗಳು ಪಂಜರವನ್ನು ಮಿನಿಟಿಗೆ ೩೦೩ ಮೀ. ಮೇಲಕ್ಕೆ ಎತ್ತುತ್ತಲೊ ಇಳಿಸುತ್ತಲೊ ಇರುತ್ತವೆ.ಗಣಿ ಸುರಂಗಗಳಿಗೆ ಸರಿಯಾಗಿ ವಾಯು ಆಡುವಂತೆ ಮೇಲಿನಿಂದ ತಣ್ಣನೆಯ ವಾಯುವನ್ನು ವಿದ್ಯುತ್ ಬೀಸಣಿಗೆಗಳ ಮೂಲಕ ಒಳಗೆ ರವಾನಿಸುತ್ತಾರೆ.ಅದಿರನ್ನು ತೆಗೆದಾದ ಮೇಲೆ ಗೋಡೆ ಕುಸಿಯದಂತೆ ಮರದ ತೊಲೆಗಳನ್ನು ಕೊಟ್ಟು ಇಲ್ಲವೇ ಕಲ್ಲುಗೋಡೆಗಲನ್ನು ಅಥವಾ ಕಾಂಕ್ರೀಟು ಕಂಬಗಳನ್ನು ಕಟ್ಟಿ ಭದ್ರಪಡಿಸುತ್ತಾರೆ. ನೆಲದಲ್ಲಿ ಹುದುಗಿರುವ ಅಗಲ ಕಿರಿದಾದ ಖನಿಜ ಸಿರಿವನ್ನು ಯಾವ ರೀತಿ ಗಣಿ ತೋಡಿ ಪಡೆಯುತ್ತಾರೆನ್ನುವುದನ್ನು ಚಿತ್ರದ (೨)ರಿಂದ(೫)ರವರೆಗೆ ತೋರಿಸಿದೆ.ಈ ಚಿತ್ರದಲ್ಲಿ ಮುಖ್ಯ ಕೂಪವೊಂದನ್ನು ಅದರ ಮೂಲಕ ಮೂವತ್ತು ಮೀಟರುಗಳ ಅಂತರದಲ್ಲಿ ಅಡ್ಡ ಸುರಂಗಗಳನ್ನು ತೋಡಿ ಖನಿಜರ ಸಿರಿ ಮುಟ್ಟಿರುವುದನ್ನೂ ತೋರಿಸಿದೆ. ಚಿತ್ರ(೩)ರಲ್ಲಿ ಗಾಣಿಯ ಸೀಳು ನೋಟ ಕೊಟ್ಟಿದೆ.ನೂರು ಅಡಿ ಅಂತರದಲ್ಲಿ ಅನೇಕ ಮಟ್ಟಗಳನ್ನು ಕಾಣಬಹುದು.ಒಂದು ಮಟ್ಟದಿಂದ ಇನ್ನೊದು ಮಟ್ಟಕ್ಕೆ