ಪುಟ:Mysore-University-Encyclopaedia-Vol-6-Part-1.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಿಗಾರಿಕೆ

ಸಂಬಂಧ ಕಲ್ಪಿಸುವ ಕೂಪಕ್ಕೆ ವಿನ್ಸ್ ಎಂದು ಹೆಸರು.ದಟ್ಟ ಚುಕ್ಕೆಗಳಿಂದ ತೋರಿಸಿರುವ ಭಾಗದಲ್ಲಿ ಲೋಹಾಂಶ ಹೆಚ್ಚು ಇಂಥವುಗಳಿಗೆ ಕುಡಿಗಳೆಂದು (ಶೂಟ್ಸ್)ಹೆಸರು.ಈ ರೀತಿ ಗಣಿಯನ್ನು ಅನೇಕ ಖಂಡಗಳಾಗಿ ವಿಂಗಡಿಸುತ್ತ ಹೋಗುತ್ತಾರೆ.ಹೀಗೆ ಗಣಿಯನ್ನು ಸಿದ್ಧಪಡಿಸಿದೆ ಮೇಲೆ ಅದಿರನ್ನು ತೆಗೆಯುವ ಮುಖ್ಯ ಕೆಲಸ ಮೊದಲಾಗುತ್ತದೆ.ಇದರಲ್ಲಿಯೂ ಸಿರದ ಆಕಾರ ಯಾವ ರೀತಿ ಇದೆ ಎನ್ನುವುದನ್ನು ಅನುಸರಿಸಿ ನಾನಾತರದ ವಿಧಾನಗಳು ಬಳಕೆಯಲ್ಲಿವೆ.ಯಾವ ವಿಧಾನವನ್ನು ಬಳಸಿದರೂ ಕೆಲಸ ಮಾಡುವವರಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕಾದದ್ದು ಮುಖ್ಯ ಎಲ್ಲ ರಾಜ್ಯಗಳಲ್ಲಿಯೂ ಗಣಿ ಕೆಲಸಗಾರರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕಾಗಿ ಕಟ್ಟುನಿಟ್ಟಾದ ನಿಯಮಗಳಿವೆ.ಯಾವ ಗಣಿ ಮಾಲೀಕನೂ ಅವನ್ನು ಉಲ್ಲಂಘಿಸುವಂತಿಲ್ಲ. ಎರಡು ಮಟ್ಟಗಳ ನಡುವಿನ ಕಲ್ಲನ್ನು ತೆಗೆಯಲು ಸ್ಪೋಪಿಂಗ್ ಎನ್ನುವ ವಿಧಾನವನ್ನು ಬಳಸುತ್ತಾರೆ .ಇಂಥ ವಿಧಾನವನ್ನು ಚಿತ್ರ(೬)ರಲ್ಲಿ ತೋರಿಸಿದೆ.ಇಲ್ಲಿ ಹಂತ ಹಂತವಾಗಿ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ಉಪಯೋಗಿಸಿ ಅದಿರನ್ನು ತೆಗೆಯುವ ವಿಧಾನವನ್ನು ಗುರುತಿಸಬಹುದು.ಈ ರೀತಿ ಒಡೆದು ತೆಗೆದು ಕಲ್ಲನ್ನು ಮುಖ್ಯ ಕುಪಗಳ ಮೂಲಕ ಮೇಲಕ್ಕೆ ಸಗಿಸುತ್ತರೆ.ಕಲ್ಲು ಮೇಲಕ್ಕೆ ಬಂದು ಅಲ್ಲಿ ನಿಂತಿರುವ ಬಂಡಿಗಳಿಗೆ ಸುರಿಯುವಂತೆ ಅನುಕೂಲಿಸಲು ಕೂಪಗಳ ಮೇಳೆ ಉಕ್ಕಿನಿಂದ ತಯಾರಾದ ಒಂದು ಗೋಪುರಗಳನ್ನು ಭೂಗತ ಗಣಿಗಳಿರುವ ಎಲ್ಲ ಪ್ರದೇಶಗಳಲ್ಲಿಯೂ ಗುರುತಿಸಬಹುದು. ಅಮೇರಿಕ ಮತ್ತು ರಷ್ಯ ದೇಶಗಳು ಗಣಿಗಾರಿಕೆಯಲ್ಲಿ ಬಹು ಮುಂದುವರಿದ ದೇಶಗಳಾಗಿವೆ.ಅತ್ಯಂತ ಆಧುನಿಕ ಬಳಸಿ ಹೇರಳವಾಗಿ ಅದಿರನ್ನು ನೆಲದಿಂದ ತೆಗೆಯುವ ಕೆಲೆಯಲ್ಲಿ ಆ ದೇಶಿಗರು ಪರಿಣತರಾಗಿದ್ದಾರೆ.ಪ್ರಪಂಚದ ಮುಖ್ಯ ಗಣಿಗಳಿರುವುದೆಲ್ಲ ಈ ದೆಶಗಳಲ್ಲಿ ಈಚಿನ ವರ್ಷಗಳಲ್ಲಿ ದಕ್ಷಿಣ ಆಫ್ರಿಕ,ಆಸ್ಟ್ರೇಲಿಯ,ಜರ್ಮನಿ,ಇಂಗ್ಲೆಂಡ್ ಈ ರಾಜ್ಯಗಳಲ್ಲಿ ಗಣಿಗಾರಿಕೆ ಏಳ್ಗೆ ಹೊಂದುತ್ತಿದೆ.ಪ್ರಾಚೀನ ಕಾಲದಲ್ಲಿ ಭಾರತ ಗಣಿಗಾರಿಕೆಗೆ ಹೆಸರಾಗಿದ್ದರೂ ಈಗ ಇನ್ನೂ ಹಿಂದುಳಿದಿದೆಯೆಂದೇ ಹೇಳಬೇಕು ಪ್ರಪಂಚದ ಮುಖ್ಯ ಗಣಿಗಳ ಸಾಲಿಗೆ ಸೇರುವಂಥ ಗಣಿ ಎಂದರೆ ಕೋಲಾರದ ಚಿನ್ನದ ಗಣಿ ಒಂದೇ ಇಲ್ಲಿನ ಗಣಿ ೩೬೬೦ ಮೀ ಆಳದವರೆಗೂ ಇಳಿದು ಪ್ರಪಂಚದಲ್ಲೆಲ್ಲ ಅತ್ಯಂತ ಆಳವಾದ ಗಣಿಯೆಂದು ಹೆಸರು ಗಳಿಸಿಕೊಂಡಿದೆ.ಇತ್ತೀಚಿನ ವರ್ಷಗಳಲ್ಲಿ ಆಧೂನಿಕ ವಿಧಾನಗಳನ್ನು ಬಳಸಿ ದೊಡ್ಡ ಗಾತ್ರದಲ್ಲಿ ಕಬ್ಬಿಣ ಅದಿರು ಮತ್ತು ಕಲ್ಲಿದ್ದಲಿನ ಗಣಿಗಳು ಕೆಲಸ ಮಾಡುತ್ತಿವೆ. ಗಣಿಗಾರಿಕೆಯಲ್ಲಿ ಭಾರತ ಇನ್ನೂ ಪ್ರಗತಿ ಸಾಧಿಸಬೇಕಾಗಿದೆ. ಮಿತ್ರ ವಿಧಾನಗಳು: ಬಹಳ ದೊಡ್ದ ಗಾತ್ರದಲ್ಲಿ ಗಣಿಗಳನ್ನು ತೋಡುವಾಗ ಸಂದರ್ಭವನ್ನು ಅನುಸರಿಸಿ ತೆರೆದ ಮತ್ತು ಭೂಗತ ವಿಧಾನಗಳೆರಡನ್ನೂ ಸೂಕ್ತವಾಗಿ ಆರಿಸಿಕೊಂಡು ಕೆಲಸ ನಡೆಸುತ್ತಾರೆ. ಸಮೂದ್ರ ತೀರದಲ್ಲಿ ಕೊಲ್ಲಿ ಖಾರಿಗಳ ಬಳಿ ಬೆಟ್ಟಗಳ ಪಕ್ಕದಲ್ಲಿ ತಪ್ಪಲಿನಲ್ಲಿ ಮತ್ತು ನದೀಮುಖಜ ಹತ್ತಿರ ಮತ್ತು ಭೂಮಿಯ ಮೇಲೆ ಆದಿರು ಎಲ್ಲಿ ಗೋಚರವಾಗುವುದೋ ಅಲ್ಲೆಲ್ಲ ತೆರೆದ ಗಣಿ ವಿಧಾನದಿಂದ ಕೆಲಸ ಮಾಡಬಹುದು. ಬಹಳ ಆಳವಾಗಿ ಹಬ್ಬಿರುವ ನಿಕ್ಷೇಪಗಳಿಗೂ ಕಡಿದಾಗಿರುವ ಲೋಹಸಿರಗಳಿಗೂ ಭೂಗತಗಣಿವಿಧಾನಗಳನ್ನು ಬಳಸಬೇಕು. ಖನಿಜ ನಿಕ್ಷೇಪಗಳನ್ನು ಪರಿಶೀಲಿಸಿ, ಬಹಳ ಎತ್ತರವಾದ ಮೇಲು ಹೊದಿಕೆಯಿಲ್ಲದೆ ಇರುವ ಪದರಗಳ ರೂಪದಂತಿರುವ ನಿಕ್ಷೇಪಗಳಿಗೆ (ಕಬ್ಬಿಣದ ಅದಿರುಗಳು, ಕಲ್ಲಿದ್ದಲು ಇತ್ಯಾದಿ,) ತೆರೆದ ಗಣಿ ವಿಧಾನಗಳೇ ಆತ್ಯುಪಯುಕ್ತವಾದವು. ಬೈರಪುರ ಕ್ರೋಮಿಯಂ ಗಣಿಗಳಲ್ಲಿ ಮೊದಲು ಈ ವಿಧಾನಗಳಿಂದಲೇ ಅದಿರನ್ನು ತೆಗೆಯುತ್ತಿದ್ದರು. ಈಚಗೆ ನಡೆಸಿದ ಸಂಶೋಧನೆಗಳಿಂದ ಒಳ್ಳೆಯ ಅದಿರು ಹೇರಳವಾಗಿ ಆಳದಲ್ಲಿದೆ ಎಂದು ತಿಳಿದು ಬಂದ ಮೇಲೆ ಭೂಗತ ಗಣಿ ವಿಧಾನಗಳನ್ನು ಬಳಸುತ್ತಿದ್ದಾರೆ. ಸಣ್ಣ್ ಗಣಿಗಳಲ್ಲಿ, ಕೆಲಸವನ್ನು ಆರಂಭಿಸುವಾಗ ಅಲ್ಲದೇ, ಮೇಲು ಹೊರೆ ಬಹಳ ಗಟ್ಟಿಯಾಗಿಲ್ಲದೆ ಮರಳು, ಮಣ್ಣು, ಗರಸು, ಮರಳುಕಲ್ಲು ಸ್ಲೇಟ್ ಮೊದಲಾದ ವಸ್ತುಗಳಿಂದ ನಿರ್ಮಿತವಾಗಿದ್ದರೆ ಮನುಷ್ಯರೇ ಹಾರೆ ಪೆಕಾಸಿಗಳಿಂದ ಕಡಿದು ಗುದ್ದಲಿಯಿಂದ ಬಾಣಲೆಗಳಲ್ಲಿ ತುಂಬಿ ಕೈಗಾಡಿಗಳ ಮೂಲಕ ಸಾಗಿಸಬಹುದು. ಗಟ್ಟಿಯಾದ ಗ್ರಾನೈಟ್, ನೀಸ್, ಬೆಸಾಲ್ಟ್ ಮೊದಲಾದ ಶಿಲೆಗಳಿದ್ದರೆ ರಂಧ್ರಗಳನ್ನು ಕೊರೆದು ಸಿಡಿಮದ್ದನ್ನು ಬಳಸಿ ಗಟ್ಟ್ ಕಲ್ಲನ್ನು ಒಡೆಯಬೇಕು.

ಉತ್ಖ್ಹನ ವಿಧಾನಗಳು: ದೊಡ್ಡ ದೊಡ್ಡ ಗಣಿಗಳಲ್ಲಿ ದಿನಕ್ಕೆ ಸಾವಿರಾರು ಟನ್ ಮೇಲ್ಮಣ್ಣನ್ನು ಅಧಿರನ್ನು ತೋಡಿ ತೆಗೆಯಬೇಕಾಗಿರುವುದರಿಂದ ಆಧುನಿಕ ಉತ್ಕನನ ಯಂತ್ರೋಪಕರಣಾಗಳಾನ್ನು ಬಳಸುತ್ತಾರೆ. ಕ್ರಮಬದ್ಧವಾಗಿ ನಡೆಸುವ ದೊಡ್ಡ ಗಣಿಗಳಲ್ಲಿ ತೋಡುವುದಕ್ಕೆ ಬಳಸಲು, ತೋಡಿದ ಮಣ್ಣನ್ನು ತುಂಬಲು ಮತ್ತು ಅದನ್ನು ದೂರ ಸಾಗಿಸಲು ಬೇರೆಬೇರೆ ಯಂತ್ರಗಳಿವೆ. ಇವುಗಳ ಸಹಾಯದಿಂದ, ಮೊದಲಿಗೆ ಸಾಧ್ಯವೆಂದು ಊಹಿಸಲು ಆಗದಷ್ಟು ಎತ್ತರವಾಗಿರುವ ಮೇಲ್ಮಣ್ಣನ್ನು ಬಹಳ ಬೇಗ ಕಡಿದು ಸಾಗಿಸಬಹುದು. ಅನೇಕ ಕೆಲಸಗಾರರ ಗುಂಪುಗಳು ಬಹಳ ಕಾಲದಲ್ಲಿ ಮಾಡುತ್ತಿದ್ದ ಕೆಲಸವನ್ನು ಎಕ್ಸ್ಕವೇಟರ್, ಬುಲ್ಡೋಜರ್, ಡಂಪರ್ ಎಂಬ ನವೀನ ಯಂತ್ರೋಪಕರಣಗಳು ಅತ್ಯುಲ್ಪಕಾಲದಲ್ಲಿ ಮುಗಿಸುತ್ತವೆ. ಎಕ್ಸ್ಕವೇಟರ್ ನ ಬಾಲ್ದಿಯಲ್ಲಿ ಒಂದು ಮೋಟರ್ ಕಾರಿನಲ್ಲಿ ತುಂಬುವಷ್ಟು ಸಾಮಾನನ್ನು ತುಂಬಬಹುದು ಮತ್ತು ದಾರಿಮಾಡಿಕೊಂಡು ಮುಂದೆ ನುಗ್ಗಬಹುದು. ಈಗ ಕಲ್ಲಿದ್ದಲು ಕಬ್ಬಿಣ ಮ್ಯಾಂಗನೀಸ್ ಮೊದಲಾದ ಅದಿರುಗಳನ್ನು ತೆಗೆಯಲು ರಷ್ಯಾದಲ್ಲಿ ವೆಶೇಷವಾಗಿ ತೆರೆದ ಗಣಿ ವಿಧಾನಗಳನ್ನು ಬಳಸುತ್ತಿದ್ದಾರೆ. ಅರ್ಷಕ್ಕೆ ಒಂದು ಕೋಟಿ ಟನ್ ಶಿಲೆ ಜಲ್ಲಿಕಲ್ಲು ಮರಳು ಮತ್ತು ಕಟ್ಟಡದ ಕಲ್ಲು ದೊರೆಯುತ್ತಿವೆ. ಗಯಾನಾ ಬಾಕ್ಸೈಟುಗಳಲ್ಲಿ ವರ್ಷಕ್ಕೆ 30 ಲಕ್ಷ ಘನಮೀಟರುಗಳಿಗಿಂತ ಹೆಚ್ಚು ಗಾತ್ರದಲ್ಲಿ ಮೇಲ್ಮಣ್ಣನ್ನು ಡ್ರಾಗ್ ಲೈನ್ ಎಕ್ಸಕವೇಟರ್ ಸಹಾಯದಿಂದ ತೆಗೆಯುತ್ತಾರೆ. ಪುಡಿ ಮಾಡಿದ ಶಿಲೆ ಅಥವ ಅಧಿರನ್ನು ವಾಹನಗಳಲ್ಲಿ ತುಂಬಿ ಬೇರೆ ಕಡೆ ಸಾಗಿಸಿ ರಾಶಿ ಮಾಡಲು ಬೇಕಾಗುವ ಕಾಲ ಸರಾಸರಿ ವೇಗ ಇದೆಲ್ಲವನ್ನು ನಿರ್ಧರಿಸಿ ಎಲ್ಲದರ ಕರ್ಚನ್ನು ವಿಮರ್ಶಿಸಿ ಮೇಲು ಹೊದಿಕೆಯನ್ನು ಕಡೆದು ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಾರೆ.

ಗಣಿ ಕೆಲಸಗಾರರಿಗೆ ಬೇಕಾದ ಸೌಲಭ್ಯಗಳು: ಕೆಲಸ ಮಾಡುವಾಗ ತಲೆಗೂ ಕಾಲಿಗೂ ಅಪಾಯವಾಗದಂತೆ ರಕ್ಷಣೆಯನ್ನು ನೀಡುವ ಟೋಪಿ ಮತ್ತು ಪಾದರಕ್ಷಣೆಗಳನ್ನು ಕೆಲಸಗಾರರಿಗೆ ಒದಗಿಸಬೇಕು. ಸಿಡಿಮದ್ದನ್ನು ಬಳಸುವಾಗ ನಾನಾ ಅನಿಲಗಳು ಉತ್ಪನ್ನವಾಗುತ್ತವೆ. ಅವುಗಳಿಂದಲೂ ಗಣಿಯೊಳಗೆ ಇರುವ ಕೆಟ್ಟ ವಾಯುವಿನಿಂದಲೂ