ಪುಟ:Mysore-University-Encyclopaedia-Vol-6-Part-1.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಣಕ.ಗಣಕದಲ್ಲಿ ನಿದಿ೯ಷ್ಟವಾದ ಎಲೆಷ್ಟ್ರನಿಕ್ ಯಲತ್ತಾಲಶಗಳಿವೆ (ಎಲೆಷ್ಟ್ರನಿಕ್ ಹಾಡ೯ವೇರ್ಸ್). ವಿವಿಧ ಪ್ರಾಥಮಿಕ ಪರಿಕಮ೯ಗಳಲ್ಲಿ ನಿರ್ದೇಶನ ಯಾವುವುಗಳನ್ನು ಮತ್ತು ಯಾವ ಅನುಕ್ರೆಮದಲ್ಲಿ ಉದ್ದೇಶಿಸಿದ ವಿಂಬುದನ್ನು ನಿಯಂಅತ್ರಣ ಜನಕ ವಾಸ್ತೆಏಕವಾಗಿ ಅರಿತುಕೊಳ್ಳುತ್ತದೆ. ಬಳಿಕ ಅದು ಸಂಕೇತಿಕೃತ ಸಂಜ್ಞೆಗಳನ್ನು (ಕೋಡೆಡ್ ಸಿಗ್ನಲ್ಸ್) ಉತ್ಪಾದಿಸುವುದು. ಇವು ದತ್ತ ಅನುಕ್ರೆಮದಲ್ಲಿ ನಿನಿಧ ಅಂಕಣಿತ ಪರಿಕರ್ಮಗಳಿಗೆ ಪಥಗಳನ್ನು ತೆರೆಯುತ್ತವೆ. ನಿಯಂತ್ರಣಜನಕ ಜಾಪಕನೆಲೆಗಳನ್ನು ಕುರಿತ ಏಳಾಸಗಳನ್ನು ಸಂಜ್ಜೆಗಳ ರೂಪದಲ್ಲಿ ಉತ್ಪಾದಿಸುತ್ತದೆ ಕೂಡ. ಇವು ಅನುರೂಪ ಜಾಆಶಗಳಿಂದ ಗಣನಾಂಗಕ್ಕೆ ಇಲ್ಲವೇ ವಿಪರ್ಯವಾಗಿ (ವೈಸಿ ವರ್ಸ) ಪಥಗಳನ್ನು ತೆರೆಯುತ್ತವೆ. ಮುಂದಿನ ನಿರ್ದೇಶಮ್ನವನ್ನು ನಿಯಂತ್ರಣಾಂಗಕ್ಕೆ ಯಾವಾಗ ಒಯ್ಯಬಹುದೆಂಬುದನ್ನು. ಸಹ ನಿಯಂತ್ರಣಜನಕ ಅರಿಯಬಲ್ಲುದು ಪರಿಕಮ೯ದಲ್ಲಿನ ಈ ವ್ಯತ್ಯಾಸಗಳನ್ನು ಸೂಚಿಸುವ ಸ್ಥೂಲನಕ್ಷೆಯನ್ನು ಚಿತ್ರದಲ್ಲಿ ಕಾಣಿಸಿದೆ.


ಹಂತ ೫; ಹಂತ ೪ ಒಂದು ಅಂಕಗಣಕದ ಹೊರವಲಯದ ಹೊರವಲಯದ ಅಂಗಗಳನ್ನುಳಿದು(ಎಂದರೆ ನಿವೇಶಾಂಗ ಮತ್ತು ನಿರ್ಗಮಾಂಗಗಳನ್ನುಳಿದ) ಮಿಕ್ಕ ಎಲ್ಲ ಆಧಾರಾಂಗ ಗಳನ್ನೂ ಏವರಿಸುತ್ತೆದೆ.

ಗೂಡುಯಂತ್ರದಲ್ಲಿ ಬಿಯ ಕಾರ್ಯದರ್ಶಿ ಹಸರು ಮತ್ತು ಕೆಂಪು ಪತ್ರಗಳನ್ನು ಸೂಕ್ತ ಗೊಡುಗಳಲ್ಲಿ ಇಡುವಾಗ ಮಾಡುವ ಕ್ರಿಯೆಗೆ ಸಂವಾದಿಯಾಗಿ ಗಣಕದಲ್ಲಿ ಸೂಕ್ತ ಗೂಡುಗಳಲ್ಲಿ ಇಡುವಾಗ ಮಾಡುವ ಕ್ರಿಯೆಗೆ ಸಂವಾದಿಯಾಗಿ ಗಣಕದಲ್ಲಿ ನಿವೇಶಾಂಗ ಉಂಟೆಂಬುದನ್ನು ಇಲ್ಲಿ ನೆನೆಯಬಹುದು. ವ್ಯಕ್ತಿ ಎಉತ್ತರವನ್ನು ತನ್ನ ಟಿಪ್ಪಣಿ ಮಸ್ತೆಕದ ಒ೦ದು ಹಾಳೆಯ ಮೇಲೆ ಬರೆದು ಅದನ್ನು ಬಿಗೆ ಕೊಡುವ ಕ್ರಿಯೆಗೆ ಸಂವಾದಿಯಾಗಿ ನಿರ್ಗಮಾಂಗ ಉಂಟು. ಎಷ್ಟು ಸಾಧ್ಯವೋ ಅಷ್ಟೊಪರಿಕರ್ಮ ಗಳನ್ನು ಯಾಂತ್ರಿಕವಾಗಿ ನಡೆಸಬೇಕಾಗಿರುವುದರಿಂದ ಮೇಲಿನ ಕ್ರಿಯೆಗಳನ್ನು ಕೂಡ ಯಂತ್ರಗಳೇ ಸ್ವತಃ ನಿವ೯ಹಿಸುವುದು ಯೋಗ್ಯ. ನಿರ್ದೇಶನಗಳನ್ನೊ ನಿವೇಶಸಂಖ್ಯೆ ಗಳನ್ನೂ ಒಳಗೊಂಡಿರುವ ರಂಧ್ರಿತ ಪತ್ರಗಳನ್ನು ತಯಾರಿಸಿದ ಬಳಿಕ ಮಾಹಿತಿಯ ಪ್ರೇಷಣೆ (ಟ್ರಾನ್ಸ್ ಮಿಶನ್ ಅಫ್ ಇನ್ಫಮೆರ್ಲಷನ್) ಗಣಕಕ್ಕೂ ಗಣಕದಿಂದ ಹೊರಕ್ಕೂ ವಿದ್ಯುದ್ಯಾಂತ್ರಿಕ ಯಂತ್ರಗಳಿಂದ ನಿವ೯ಹಿಸಲ್ಲಡುತ್ತದೆ.

ಮೇಲೆ ವಿವರಿಸಿದ ಮಾದರಿಯ ಯಂತ್ರಸಂಘಟನೆಯ ಪ್ರಕಾರ ಒಂದು ನಿರ್ದೇಶನ ನಿರ್ವಹಿಸಲ್ಪಡುವಾಗ ಪರಿಕರ್ಮದ ಪ್ರಾವಸ್ಥೆಗಳನ್ನು (ಫೇಸಸ್ ಆಫ್ ಆಪರೇಷನ್) ಗುರುತಿಸುವುದು ಉಪಯುಕ್ತ. ಇದನ್ನು ವಿಶಾಲವಾಗಿ ಐದು ಬಗೆಗಳಾಗಿ ವರ್ಗೀಕರಿಸಬಹುದು. ಪ್ರಾವಸ್ಥೆ 1 : ಜ್ಞಾಪಕಾಂಗದಿಂದ ಭಿನ್ನವಾದ ಒಂದು ಪುಟ್ಟ ತಾತ್ಕಾಲಿಕ ಜ್ಞಾಪಕ ಗಣನಾಂಗದಲ್ಲಿ ಉಂಟು. ಇದರ ಹೆಸರು ನಿರ್ದೇಶನ ರಿಜಿಸ್ಟರ್ (ಇನ್ಸ್‍ಟ್ರಕ್ಷನ್ ರಿಜಿಸ್ಟರ್). ನಿರ್ದೇಶನ ಈ ರಿಜಿಸ್ಟರಿಗೆ ಪ್ರೇಷಿಸಲ್ಪಡುತ್ತದೆ.

ಪ್ರಾವಸ್ಥೆ 1 : ಜ್ಞಾಪಕಾಂಗದಿಂದ ಭಿನ್ನವಾದ ಒಂದು ಪುಟ್ಟ ತಾತ್ಕಾಲಿಕ ಜ್ಞಾಪಕ ಗಣನಾಂಗದಲ್ಲಿ ಉಂಟು. ಇದರ ಹೆಸರು ನಿರ್ದೇಶನ ರಿಜಿಸ್ಟರ್ (ಇನ್ಸ್‍ಟ್ರಕ್ಷನ್ ರಿಜಿಸ್ಟರ್). ನಿರ್ದೇಶನ ಈ ರಿಜಿಸ್ಟರಿಗೆ ಪ್ರೇಷಿಸಲ್ಪಡುತ್ತದೆ.

ಪ್ರಾವಸ್ಥೆ 2 : ಮೊದಲಿನ ವಾದ ಜ್ಞಾಪಕಾಂಗದಿಂದ ಒಂದು ಪದದಷ್ಟು ಉದ್ದವಿರುವ ಇನ್ನೊಂದು ತಾತ್ಕಾಲಿಕ ಜ್ಞಾಪಕಕ್ಕೆ ಪ್ರೇಷಿಸಲ್ಪಡುತ್ತದೆ. ಇದಕ್ಕೆ ಸಂಗ್ರಾಹಕ (ಅಕ್ಯುಮ್ಯುಲೇಟರ್) ಎಂದು ಹೆಸರು. ಈ ಪ್ರೇಷಣೆ ನಿರ್ದೇಶನ ವಿಸಂಕೇತದಿಂದ (ಇನ್ಸ್‍ಟ್ರಕ್ಷನ್ ಡೀಕೋಡರ್) ಸಾಧ್ಯವಾಗುತ್ತದೆ. ನಿರ್ದೇಶನ ವಿಸಂಕೇತಕ ನಿರ್ದೇಶನ ರಿಜಿಸ್ಟರಿನಲ್ಲಿ ದಾಸ್ತಾನಿಸಲ್ಪಟ್ಟ ನಿರ್ದೇಶನದಿಂದ ಮೊದಲಿನ ವಾದದ ವಿಳಾಸವನ್ನು ನಿರ್ಧರಿಸುತ್ತದೆ. ಆಗ, ಈ ವಿಳಾಸವನ್ನು ಒಳಗೊಂಡಿರುವ ಜ್ಞಾಪಕಕೋಶದ ಒಳಪಿಡಿಗಳನ್ನು (ಕಂಟೆಂಟ್ಸ್) ಸಂಗ್ರಾಹಕಕ್ಕೆ ಪ್ರೇಷಿಸುವ ನಿಯಂತ್ರಣ ಸಂಜ್ಞೆಗಳನ್ನು ನಿಯಂತ್ರಣಜನಕ ಉತ್ಪಾದಿಸುವುದು.

ಪ್ರಾವಸ್ಥೆ 3 : ಎರಡನೆಯ ವಾದವನ್ನು ಅಂಕಗಣಿತಾಂಗಕ್ಕೆ ತರಲಾಗುತ್ತದೆ ಮತ್ತು ನಿರ್ದಿಷ್ಟವಾದ ಅಂಕಗಣಿತ ಪರಿಕರ್ಮವನ್ನು ಈ ಎರಡನೆಯ ವಾದ ಬಂದ ಒಡನೆ ಮಾಡಲಾಗುತ್ತದೆ. ಅಂದರೆ, ಎರಡನೆಯ ವಾದವನ್ನು ಮೊದಲಿನ ವಾದದಂತೆ ದಾಸ್ತಾನಿಸುವುದಿಲ್ಲ. ನಿರ್ದೇಶನ ವಿಸಂಕೇತದಿಂದ ಇದು ಸಾಧ್ಯವೆನಿಸುತ್ತದೆ. ಈ ವಿಸಂಕೇತ ನಿರ್ದೇಶನದಿಂದ ಎರಡನೆಯ ವಾದದ ವಿಳಾಸವನ್ನೂ ನಿರ್ವಹಿಸಬೇಕಾದ ಪರಿಕರ್ಮದ ಪ್ರರೂಪವನ್ನೂ (ಟೈಪ್) ಕಂಡುಕೊಳ್ಳುತ್ತದೆ. ಆಗ ನಿಯಂತ್ರಣಜನಕ ಸಂಜ್ಞೆಗಳನ್ನು ಉತ್ಪಾದಿಸುವುದು. ಇವು ಅಂಕಗಣಿತಾಂಗವನ್ನು ಪರಿಕರ್ಮ ಮಾಡಲು ಸಿದ್ಧಗೊಳಿಸುತ್ತವೆ. ಆ ಬಳಿಕ ಅದು ಎರಡನೆಯ ವಾದದ ಒಳಪಿಡಿಗಳನ್ನು ಅಂಕಗಣಿತಾಂಗಕ್ಕೆ ಪ್ರೇಷಿಸುತ್ತದೆ. ಮುಂದಕ್ಕೆ ಅಂಕಗಣಿತಾಂಗ ಪರಿಕರ್ಮವನ್ನು ತನಗೆ ದೊರೆತ ನಿರ್ದೇಶನಾನುಸಾರ ನಡೆಸುತ್ತದೆ. ಫಲಿತಾಂಶವನ್ನು ಸಂಗ್ರಾಹಕದ ಒಳಪಿಡಿಯಾಗಿ ಬಿಡಲಾಗುವುದು.

ಪ್ರಾವಸ್ಥೆ 4 : ಫಲಿತಾಂಶ ಎಲ್ಲಿಗೆ ಹೋಗಬೇಕೆನ್ನುವುದನ್ನು ಕೂಡ ನಿರ್ದೇಶನ ನಿರ್ದಿಷ್ಟಗೊಳಿಸಬಹುದು. ನಿರ್ದೇಶನ ಇದನ್ನು ಜ್ಞಾಪಕಕೋಶದ ವಿಳಾಸವಾಗಿ ಕೊಡುತ್ತದೆ. ನಿಯಂತ್ರಣಜನಕ ಈ ವಿಳಾಸಕ್ಕೆ ಫಲಿತಾಂಶದ ಪ್ರೇಷಣೆಯನ್ನು ಹೋಗಬಿಡುತ್ತದೆ.

ಪ್ರಾವಸ್ಥೆ 5 : ಮುಂದಿನ ನಿರ್ದೇಶನವಿರುವ ಜ್ಞಾಪಕನೆಲೆಯ ವಿಳಾಸವನ್ನು ಕಂಡುಕೊಳ್ಳಬೇಕು. ಒಂದು ಪದದಷ್ಟು ಉದ್ದದ ಇನ್ನೊಂದು ತಾತ್ಕಾಲಿಕ ಜ್ಞಾಪಕ ಉಂಟು. ಇದರ ಹೆಸರು ಪ್ರಚಲಿತ ವಿಳಾಸ ರಿಜಿಸ್ಟರ್ (ಕರೆಂಟ್ ಅಡ್ರೆಸ್ ರಿಜಿಸ್ಟರ್). ವರ್ತಮಾನ ನಿರ್ದೇಶನವನ್ನು ಎಲ್ಲಿಂದ ಪಡೆಯಲಾಯಿತೋ ಆ ಪ್ರಧಾನ ಜ್ಞಾಪಕ ನೆಲೆಯ ವಿಳಾಸವನ್ನು ಈ ರಿಜಿಸ್ಟರ್ ಸದಾ ದಾಸ್ತಾನಿಸಿರುತ್ತದೆ. ಪ್ರಾವಸ್ಥೆ 5 ರಲ್ಲಿ ಹಳೆಯ ವಿಳಾಸವನ್ನು ಅಳಿಸಿ ಮುಂದಿನ ನಿರ್ದೇಶನದ ವಿಳಾಸವನ್ನು ದಾಸ್ತಾನಿಸಲಾಗುವದು.

ಬಳಿಕ ಹೊಸ ವಿಳಾಸದ ಒಳಪಿಡಿಗಳನ್ನು ನಿರ್ದೇಶನ ರಿಜಿಸ್ಟರಿಗೆ ಈ ಹಿಂದಿನಂತೆ ಒಯ್ಯಲಾಗುತ್ತದೆ. ಮತ್ತು ಈ ಐದು ಪ್ರಾವಸ್ಥೆಗಳ ಚಕ್ರ (ಫೈವ್-ಫೇಸ್ ಸೈಕಲ್) ಪುನರಾವರ್ತಿಸುತ್ತದೆ.

ಅಂಕಗಣಕದ ಭಾಷೆ: ಗಣಕಕ್ಕೆ ಒಂದು ಕ್ರಮವಿಧಿಯನ್ನು ನಿರ್ದೇಶನಗಳ ಸರಣಿಯ ರೂಪದಲ್ಲಿ ಒಬ್ಬ ವ್ಯಕ್ತಿ ಉಣಿಸಿದಾಗ ಮಾತ್ರ ಅದು ಕೆಲಸ ಮಾಡಬಲ್ಲುದು ಎಂದು ಹಿಂದಿನ ಎರಡು ಖಂಡಗಳಲ್ಲಿ ನೋಡಿದ್ದೇವೆ. ನಾವು ಯಾರಿಗಾದರೂ ಒಂದು ಆಜ್ಞೆ ನೀಡುವಾಗ ಅದು ಆತನಿಗೆ ಅರ್ಥವಾಗುವ ಭಾಷೆಯಲ್ಲಿ ಇರಬೇಕೆಂದು ಅಪೇಕ್ಷಿಸುವುದು ಸಹಜ. ಇದೇ ಪ್ರಕಾರ ಒಂದು ಗಣಕಕ್ಕೆ ಕೊಡುವ ನಿರ್ದೇಶನ ಅದಕ್ಕೆ ಅರ್ಥವಾಗುವ ಒಂದು ಭಾಷೆಯಲ್ಲಿ ಇರಬೇಕಾದದ್ದು ಅನಿವಾರ್ಯ. ಈ ಭಾಷೆಗೆ ದ್ವಿಮಾನಭಾಷೆ (ಬೈನರಿ ಲ್ಯಾಂಗ್ವೇಜ್) ಎಂದು ಹೆಸರು.

ಒಂದು ವಿಧದ ದ್ವಿಮಾನಭಾಷೆ ನಮಗೆ ಪರಿಚಿತವಾಗಿದೆ-ಮಾರ್ಸ್ ಸಂಕೇತ (ಮಾರ್ಸ್ ಕೋಡ್). ಟೆಲಿಗ್ರಾಫಿಕ್ ಸಂಪರ್ಕದಲ್ಲಿ (ಟೆಲಿಗ್ರಾಫಿಕ್ ಕಮ್ಯುನಿಕೇಶನ್) ಉಪಯೋಗಿಸುವ ಮಾರ್ಸ್ ಸಂಕೇತದಲ್ಲಿ ಗೀಟು (ಡೇಷ್) ಮತ್ತು ಚುಕ್ಕಿ (ಡಾಟ್) ಎಂದು ಎರಡು ಪ್ರತೀಕಗಳನ್ನು (ಸಿಂಬಲ್ಸ್) ಯಾವುದೇ ಸಂಕೇತೀಕೃತ ಮಾಹಿತಿಯನ್ನು ಸೂಚಿಸಲು ಬಳಸುತ್ತೇವೆ. ಗಣಕ ಉಪಯೋಗಿಸುವುದು ಇಂಥದೇ ಒಂದು ಭಾಷೆಯನ್ನು. 0 ಮತ್ತು 1 ಇದರಲ್ಲಿನ ಎರಡು ಪ್ರತೀಕಗಳು. ಇಂಗ್ಲಿಷ್ ಅಕ್ಷರಮಾಲೆಯ ಯಾವುದೇ ಅಕ್ಷರವನ್ನು ಇಲ್ಲವೇ ಯಾವುದೇ ಸಂಖ್ಯೆಯನ್ನು ದ್ವಿಮಾನಭಾಷೆಯ ಸೊನ್ನೆಗಳಿಗೂ ಒಂದುಗಳಿಗೂ ಭಾಷಾಂತರಿಸಬಹುದು. ನಮ್ಮ ದೈನಂದಿನ ವ್ಯವಹಾರದ ಸಂಖ್ಯೆಗಳು ದಶಮಾನ ಪದ್ಧತಿಯಲ್ಲಿವೆ. ನಮಗೆ ಹತ್ತು ಬೆರಳುಗಳಿರುವುದರಿಂದ ಇದು ಒದಗಿದೆ ಎಂಬುದನ್ನು ಗಮನಿಸಬೇಕು. ನಮ್ಮ ಬ್ರಹ್ಮಾಂಡದಲ್ಲಿಯೇ ಇರುವ, ದೂರದ ಯಾವುದೋ ಒಂದು ನಕ್ಷತ್ರವನ್ನು ಸುತ್ತುತ್ತಿರುವ, ಒಂದು ಗ್ರಹದಲ್ಲಿ ತಮ್ಮ ಒಂದೊಂದು ಕೈಯಲ್ಲೂ ನಾಲ್ಕು ಬೆರಳುಗಳಿರುವಂಥ ಬುದ್ಧಿಜೀವಿಗಳಿದ್ದರೆ ಅವರ ಅಂಕಗಣಿತದ ಆಧಾರ ಸಂಖ್ಯೆ ಎಂಟಾಗಬಹುದು. ತಂತ್ರವಿಜ್ಞಾನದ ಕಾರಣಗಳಿಂದ ಹಾಗೂ ಅವಶ್ಯಕತೆಗಳಿಂದ ಗಣಕದ ಅಂಕಗಣಿತದ ಆಧಾರಸಂಖ್ಯೆ ಎರಡು. ಗಣಕ ಅದೆಷ್ಟೇ ನಾಜೂಕಾಗಿದ್ದರೂ ಅದೊಂದು ಬಹು ದೊಡ್ಡ ಸಂಖ್ಯೆಯ ಸ್ವಿಚ್ಚುಗಳ ಸಂಗ್ರಹ. ಒಂದು ಸ್ವಿಚ್ಚಿನಲ್ಲಿ ಎರಡೇ ಸ್ಥಿತಿಗಳಿರುವುದು-ನಂದಿಸು (ಆಫ್), ಹೊತ್ತಿಸು (ಆನ್). ಆದ್ದರಿಂದ ದ್ವಿಮಾನ ಭಾಷೆಯಲ್ಲಿ ನಂದಿಸು 0 ಗೂ ಹೊತ್ತಿಸು 1 ಕ್ಕೂ ಸಂವಾದಿಯಾಗಿದೆ.

ಒಂದು ದಶಮಾನ ಸಂಖ್ಯೆಯನ್ನು ಈ ಕೆಳಗಿನಂತೆ ಬರೆಯುತ್ತೇವೆ; 45319=4.104+5.103+3.102+1.101+9.100

ಇಲ್ಲಿ ಆಧಾರ ಸಂಖ್ಯೆ ಹತ್ತು ಎಂದು ಅಂಗೀಕರಿಸಿದ್ದೇವೆ. ಈಗ 0, 1, 2, 3, 4, 5, 6, 7, 8, 9 ಈ ಹತ್ತು ಪ್ರತೀಕಗಳ ಬದಲು ನಮಗೆ 0 ಮತ್ತು 1 ಎಂಬ ಎರಡೇ ಎರಡು ಪ್ರತೀಕಗಳು ಇವೆಯೆಂದು ಭಾವಿಸೋಣ. ಶೂನ್ಯವನ್ನು 0 ಯಿಂದಲೂ ಒಂದು ವಸ್ತುವನ್ನು 1 ರಿಂದಲೂ ಪ್ರತಿನಿಧಿಸಬಹುದು. ಆಗ ಎರಡು ವಸ್ತುಗಳ ವಿಚಾರ ಏನು? ದಶಮಾನ ಪದ್ಧತಿಯಲ್ಲಿ ಪ್ರತೀಕಗಳು ಮುಗಿದುಹೋದ ಬಳಿಕ ಹತ್ತನ್ನು ಸೂಚಿಸಲು ಯಾವ ಕ್ರಮವನ್ನು ಅನುಸರಿಸಿದೆವೋ ಅದೇ ಕ್ರಮವನ್ನು ಇಲ್ಲಿ ಅನುಸರಿಸಬೇಕಾಗುತ್ತದೆ. ಅವೇ ಪ್ರತೀಕಗಳನ್ನು ಒಂದು ಕ್ರಮದಲ್ಲಿ ಜೋಡಿಸುವುದು ೧೦=೧*೧೦೧+೦*೧೦೦

ಇಲ್ಲಿನ ಪದ್ಧತಿ. ಅಂದರೆ ಇದೇ ಕ್ರಮವನ್ನು ದ್ವಿಮಾನಪದ್ಧತಿಯಲ್ಲೂ ಅನುಸರಿಸುತ್ತೇವೆ. ಆಧಾರ ಸಂಖ್ಯೆ ಎರಡಾಗಿರುವಾಗ ಸಂಖ್ಯೆಗಳನ್ನು ಹೀಗೆ ಬರೆಯಬಹುದು.