ಪುಟ:Mysore-University-Encyclopaedia-Vol-6-Part-10.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆಡ್ಡೆ - ಗೆಡ್ಡೆಕೋಸು ನಿಧನವಾದ ಸುದ್ದಿ ತಿಳಿದು ಮನಸ್ಸಿನ ಖಿನ್ನತೆಯಿಂದ ೧೯೨೬ ಜುಲೈ ೧೨ ರಂದು ಅಧಿಕವಾಗಿ ನಿದ್ರೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು.ಇವಳು ನಡೆಸಿದ ಪುರಾತ್ತ್ವ ಸರ್ವೇಕ್ಷಣೆ ಸಾಕಷ್ಟು ವೈಜ್ಙಾನಿಕ ಮಹತ್ತ್ವ ಉಳ್ಳವಾಗಿವೆ.ಇವಳ ಮೆಸಪೊಟೇಮಿಯದ ಸರ್ವೇಕ್ಷಣೆ ವರದಿಗಳು ಅಧುನಿಕ ಪುರಾತತ್ತ್ವ ಸಂಶೋಧನೆಗೆ ರಕ್ಷಣೆ ಭದ್ರ ಬುನಾದಿ ಹಾಕಿದೆ. ಗೆಡ್ಡೆ: ಕಾಂಡದ ಒಂದು ಬಗೆಯ ಮಾರ್ಪಾಟು: ನೆಲದೊಳಗೇ ಹುದುಗಿ ಬೆಳೆಯುತ್ತದೆ. ಅಹಾರ ಸಂಗ್ರಹಣೆ ಇದರ ಮುಕ್ಯಕಾರ್ಯ .ಇದರಿಂದಾಗಿ ಇದು ಸಾಮಾನ್ಯವಾಗಿ ದಪ್ಪವಾಗಿಯೂ ರಸಭರಿತವಾಗಿಯೂ ಇರುತ್ತದೆ. ಸಸ್ಯಗಳ ಸಂತಾನಾ ಭಿವೃದ್ಧಿಯಲ್ಲೂ ಇದು ಪಾಲುಳ್ಳುತ್ತದೆ.ಗೆಡ್ಡೆಯ ಬಾಹ್ಯ ರೂಪ ಕಾಂಡದ ರಚನೆಗಿಂತ ಎಷ್ಟು ಭಿನ್ನವಾಗಿರುತ್ತದೆಂದರೆ ಇದನ್ನು ಕಾಂಡ ಎಂದು ಹೇಳಲು ಎದರ ಒಳರಚನೆಯನ್ನು ಪರೀಕ್ಷಿಸ ಬೇಕಾಗುತ್ತದೆ. ಗೆಡ್ಡೆಯಲ್ಲಿ ಹಲವಾರು ರೂಪಗಳಿವೆ. ಇವುಗಳಲ್ಲಿ ಮುಖ್ಯವಾದವು ಪ್ರಕಂದ(ರೈಜೋಮ್), ಟ್ಯೂಬರ್, ಬ ಲ್ಬ್ ಮತ್ತು ಕಂದುಗಳು(ಕಾರ್ಮ್). ಅಲೂಗೆಡ್ಡೆ ಪ್ರಕಂದ: ನೆಲದ ಒಳಗಡೆ ಭೂಮಿಗೆ ಸಮಾಂತರವಾಗಿ ಬೆಳೆ ಯುವ ಗೆಡ್ಡೆಯಿದು. ಇದರ ಮೇಲೆ ಗೆಣ್ಣು ಮತ್ತು ಆಂತರ್ಗೆಣ್ಣುಗಳಿವೆ.ಗೆಣ್ಣುಗಳು ಸುತ್ತ ಸಣ್ಣ ಸಣ್ಣ ಹುರುಪೆ ರೂಪದ ಎಲೆಗಳಿವೆ.ಎಲೆಗಳ ಕಂಕುಳುಗಳಲ್ಲಿ ಕಂಡುಬರುವ ಕಂಕುಳು ಮೊಗ್ಗುಗಳು ಬೆಳೆದು ಹೊಸ ಕಾಂಡವನ್ನು ಉತ್ಪತ್ತಿ ಮಾಡಬಹುದು.ಉದಾಹರಣೆ: ಅರಿಸಿನ,ಶುಂಠಿ ಇತ್ಯಾದಿ. ಟ್ಯೂಬರ್: ಇದು ಕೂಡ ಭೂಮಿಗೆ ಸಮಾಂತರವಾಗಿ ನೆಲದ ಒಳಗೆ ಬೆಳೆಯುವ ಗೆಡ್ಡೆ. ಆಲೂಗೆಡ್ಡೆ ಉತ್ತಮ ಉದಾಹರಣೆ .ಆಲೂಗೆಡ್ಡೆ ಗಿಡ ಬೆಳೆಯುತ್ತಿರುವಾಗ ಗಿಡದ ತಳಭಾಗದ ಕಾಂಡದ ಕೆಲವು ಕವಲುಗಳು ತುದಿಯಲ್ಲಿ ಸ್ವಲ್ಪ ಉಬ್ಬಿರುತ್ತವೆ.ಇವೇ ಮುಂದೆ ಟ್ಯೂಬರುಗಳಾಗುತ್ತವೆ.ಗೆಡ್ಡೆಯ ಮೇಲ್ಭಾಗದಲ್ಲಿ ಹಲವಾರು ಕಂಕುಳು ಮೊಗ್ಗುಗಳಿರುತ್ತವೆ. ಇವಕ್ಕೆ ಕಣ್ಣುಗಳು ಎನ್ನುತ್ತಾರೆ . ಇವು ಗೆಡ್ಡೆಯ ಮೇಲೆ ವರ್ತುಲಾಕಾರವಾಗಿ ಜೋಡಣೆಗೊಂಡಿದ್ದು,ಸಹಜ ಕಾಂಡದ ಮೇಲಿನ ಎಲೆಗಳು ಜೋಡಣೆಯನ್ನು ಹೋಲುತ್ತವೆ. ಪ್ರತಿಯಂದು ಕಣ್ನಿನಲ್ಲೂ ಸಣ್ಣ ಸಣ್ಣ ಎಲೆಗಳ ಮತ್ತು ಅವುಗಳ ಹತ್ತಿರ ಪಾರ್ಶ್ವ‍ ಮೊಗ್ಗುಗಳು ಇರುತ್ತವೆ.ಆಲೂಗೆಡ್ಡೆಯನ್ನು ನೆಡುವಾಗ ಕೊನೆಯ ಪಕ್ಷ ಒಂದೊಂದು ಕಣ್ಣಿರುವ ಚೂರುಗಳಾಗಿ ಕತ್ತರಿಸಿ ನೆಡುತ್ತಾರೆ. ಈ ಚೂರುಗಳಿಂದ ಒಂದು ಅಥವಾ ಹೆಚ್ಚು ಕಾಂಡಗಳು ಹೊರಡುತ್ತವೆ. ಪೂರ್ತಿಯಾಗಿ ಒಂದು ಗೆಡ್ಡೆಯನ್ನೇ ನೆಟ್ಟಾಗ ತುದಿಮೊಗ್ಗಿನಿಂದ ಮಾತ್ರ ಕಾಂಡ ಹೊರಡುತ್ತದೆ. ಆಲೂಗಡ್ಡೆಯ ಒಳರಚನೆಯಲ್ಲಿ ಮೆಡ್ಯುಲ, ಪ್ರೋಕೇಂಬಿಯಮ್ ಮತ್ತು ಕಾರ್ಟೆ‍ಕ್ರ್ ಎಂಬ ಮೂರು ಭಾಗಗಳನ್ನು ಗುರುತಿಸಬಹುದು . ಎಳೆಯ ಆಲೂಗೆಡ್ಡೆಯಲ್ಲಿ ಕಾಂಡದ ಒಳರಚನೆಯಿದ್ದರೂ ಇ ದು ಬಲಿಯತ್ತ ಹೋದಂತೆ ಎಂಡೋಡರ್ಮಿಸ್ ಪದರ ಕಾಣಿಸದಾಗುತ್ತದೆ.ಗೆಡ್ಡೆಯ ಎಪಿಡರ್ಮಿಸಿನ ಆಯುರ್ಷವೂ ಬಹಳ ಕಡಿಮೆ. ಗೆಡ್ಡೆ ದೊಡ್ಡದಾದಂತೆಲ್ಲ ಎಪಿಡರ್ಮಿಸಿನ ಕೋಶಗಳು ಕೆಳಭಾಗದಲ್ಲಿ ಫೆಲೊಜನ್ ಎಂಬ ಪ್ದರವನ್ನು ಉತ್ಪತ್ತಿ ಮಾಡುತ್ತದೆ. ಫೆಲೊಜನ್ ಪದರದಿಂದ ೧೦-೧೫ ಕೋಶಗಳಷ್ಟು ದಪ್ಪದಾದ ಪೆರಿಡರ್ಮ್ ಅಂಗಾಂಶ ಹುಟ್ಟುತ್ತದೆ. ಹೀಗೆ ಫೆಲೊಜನ್ ಪದರ ಗೆಡ್ಡೆಯ ಆಯುಷ್ಯ ಪೂರ್ತಿ ಬದುಕಿದ್ದು, ಗೆಡ್ಡೆ ಬೆಳೆದಂತೆಲ್ಲ ಹೊರಗಡೆ ಹರಿದು ಹೋಗುವ ಕೋಶಗಳ ಬದಲಿಗೆ ಹೊಸ ಪೆರಿಡರ್ಮ್ ಕೋಶಗಳನ್ನು ಉತ್ಪತ್ತಿಮಾಡಿ ಗೆಡ್ಡೆ ಬೆಳೆಯಲು ಸಹಾಯಕವಾಗುತ್ತದೆ. ಬಲ್ಬ್: ರಸಭರಿತ ಎಲೆಗಳಿಂದ ಆವೃತವಾಗಿರುವ ಒಂದು ಕುಳ್ಳಕಾಂಡ. ಇದು ಕಾಂಡದ ಮೇಲಿರುವ ಎಲೆಗಳಂತೆ ರಸಭರಿತ ಎಲೆಗಳಾಲ್ಲಿ ಕೂಡ ಕಂಕುಳು ಮೊಗ್ಗುಗಳು ಇರುತ್ತವೆ. ಈ ಬಗೆಯ ಗೆಡ್ಡೆ ಏಕದಳ ಸಸ್ಯಗಳಲ್ಲಿ ಮಾತ್ರ ಕಾಣಬರುತ್ತದೆ.ಉದಾಹರಣೆಗೆ: ಈರುಳ್ಳಿ, ಬೆಳ್ಳುಳ್ಳಿ, ಲಿಲಿ, ಟ್ಯುಲಿಪ್ ಮುಂತಾದವು. ಈರುಳ್ಳಿ ಗೆಡ್ಡೆಯ ಒಳಚರನೆಯನ್ನು ಗಮನಿಸಿದರೆ ಕಾಂಡ ಬಲು ಚಿಕ್ಕದಾಗಿದ್ದು ಅದರ ಸುತ್ತ ಎಲೆಗಳು ವರ್ತುಲಾಕಾರವಾಗಿ ಜೋಡಣೆಗೊಂಡಿರುವುದನ್ನು ಕಾಣಬಹುದು. ಕಾಂಡದ ಕೆಳಭಾಗದಲ್ಲಿ ಕೆಲವು ಆಗಂತುಕ ಬೇರುಗಳು ಇವೆ.ಗೆಡ್ಡೆ ಬಲಿತಂತೆಲ್ಲ ಹೊರಗಿನ ಎಲೆಗಳು ಒಣಗಿ ಒಳಗಿನ ರಸಭರಿತ ಎಲೆಗಳನ್ನು ಸಂರಕ್ಷಿಸುತ್ತದೆ. ಕಂದು: ಇದು ಪ್ರಕಂದವನ್ನು ಹೋಲುವ ಗೆಡ್ಡೆ. ಪ್ರಕಂದ ಸಮಾಂತರವಾಗಿ ಬೆಳೆದರೆ ಇದು ಮೇಲ್ಮುಖವಾಗಿ ಬೆಳೆಯುತ್ತದೆ. ಇದರ ಒಳ ರಚನೆಯನ್ನು ಪರೀಕ್ಷಿಸಿದರೆ ಕಾರ್ಟಿಕಲ್ ಪದರದಲ್ಲಿ ನಾಳಕೂರ್ಚ‍ಗಳು ಹರಡಿರುವುದನ್ನು ಗಮನಿಸಬಹುದು ಆಗಂತುಕ ಬೇರುಗ/ಲು ಕಂದಿನ ತಳಭಾಗದಲ್ಲಿರುತ್ತವೆ. ಹೊರಗಡೆ ಪೊರೆಯಂತಿರುವ ಎಲೆಗಳಿವೆ. ಎಲೆಗಳು ಕಂದಿನ ಮೇಳೆ ವರ್ತುಲಾಕಾರವಾಗಿ ಜೋಡಣೆಗೋಡಿರುತ್ತವೆ. ಬಲ್ಬಿಗೂ ಕಂದಿಗೂ ಒಂದು ಮುಖ್ಯ ವ್ಯತ್ಯಸವೆಂದರೆ, ಕಂದುಗಳಲ್ಲಿ ಕಾಂಡದ ಭಾಗ ಹೆಚ್ಚು ಎಲೆಗಳ ಸಂಖ್ಯೆ ಕಡಿಮೆ ಮತ್ತು ಅಂತರ್ಗೆ‍ಣ್ಣುಗಳ ಉದ್ದ ಹೆಚ್ಚು. ಆರ್ಕಿಡೇಸೀ ಕುಟುಂಬದ ಸಸ್ಯಗಳಲ್ಲಿ ಕಂದನ್ನು ಕಾಣಬಹುದು. ಎಲ್ಲ ರೀತಿಯ ಗೆಡ್ಡೆಗಳೂ ಆಹಾರವನ್ನು ಶೇಖರಿಸುವುದರಿಂದ ಇವನ್ನು ಆಹಾರವಾಗಿ ಉಪಯೋಗಿಸುವರು. ಉದಾ: ಆಲೂಗಡ್ಡೆ. ಕಾಯಜ ಪ್ರಜನನದ (ವೆಜೆಟೇಟಿವ್ ರಿಪ್ರೊಡೆಕ್ಷನ್) ಮುಖ್ಯ ಸಾಧನಗಳಾಗಿಯೂ ಇವನ್ನು ಬಳಸಬಹುದು. ಗೆಡ್ಡೆಕೋಸು: ವಿಷೇಶವಾಗಿ ಬಳಕೆಯಲ್ಲಿರುವ ಒಂದು ಜನಪ್ರಿಯ ತರಕಾರಿ ಸಸ್ಯ. ನವಿಲು ಕೋಸು ಪರ್ಯಾಯ ನಾಮ. ಬ್ರ್ಯಾಸಿಕೇಸೀ ಕುಟುಂಬಕ್ಕೆ ಸೇರಿದ ಇದರ ಇಂಗ್ಲಿಷ್ ಹೆಸರು ನೋಲ್ ಕೋಲ್; ವೈಜ್ಞಾನಿಕ ಹೆಸರು ಬ್ರ್ಯಾಸಿಕ ಓಲೆರೆಸಿಯ ವೆರೈಟಿ ಗಾಂಗೈಲಾಡಿಸ್ ಅಥವಾ ಬ್ರ್ಯಾಸಿಕ ಕಾಲರೇಪ.ಇದರಲ್ಲಿ ಸುಮಾರು ನೂರೈವತ್ತು ಬಗೆಗಳಿವೆ . ಇವುಗಳಲ್ಲಿ ಕೆಲವು ಬಗೆಗಳು ಏಕವಾರ್ಷಿಕಗಳಾದರೆ ಇನ್ನು ಕೆಲವು ದ್ವೈವಾರ್ಷಿಕಗಳು. ಕೆಲವನ್ನು ಎಣ್ಣೆಬೀಜಗಳಿಗಾಗಿಯೂ ಇನ್ನು ಕೆಲವನ್ನು ಕಾಯಿಪಲ್ಯಗಳಿಗಾಗಿಯು ಬೆಳೆಸುತ್ತಾರೆ. ಬ್ರ್ಯಾಸಿಕ ಓಲರೆಸಿಯ ಎಂಬ ಪ್ರಭೇದದಲ್ಲಿಯೇ ಹಲವಾರು ಬಗೆಗಳಿವೆ. ಉದಾಹರಣೆ ಎಲೆಕೋಸು ಮತ್ತು ಹೂಕೋಸು ಮುಂತಾದವು.ಇವು ತಮ್ಮಕಾಂಡ ಎಲೆ ಮತ್ತು ಹೂಗೊಂಚಲುಗಳ ಗುಣಲಕ್ಷಣಗಳಲ್ಲಿ ವ್ಯತ್ಯಾಸವನ್ನು ತೋರಿಸುತ್ತವೆ. ಗೆಡ್ಡೆಕೋಸು ಪ್ರಧಾನವಾಗಿ ಉತ್ತರ ಸಮಶೀತೋಷ್ಣವಲಯದ ಬೆಳೆ. ಉತ್ತರ ಯುರೋಪಿನ ಕರಾವಳಿ ಪ್ರದೇಶಗಳು ಇದರ ತೌರು ಎಂದು ಅಭಿಪ್ರಾಯ ಪಡಲಾಗಿದೆ.ಆದರೆ ಚಳಿಗಾಲದ ಬೆಳೆಯಾಗಿ ಉಷ್ಣವಲಯದಲ್ಲೂ ಬೆಳೆಸಬಹುದು.ಭಾರತದಲ್ಲಿ