ಪುಟ:Mysore-University-Encyclopaedia-Vol-6-Part-10.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೆಣಸಿ ಕುಟುಂಬ - ಗೆಣಸು ದ್ರಾವಣ, ಪಾದರಸದ ಕೋರೈಡ್ ,ಆಲಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಸಿಂಪಡಿಸುವುದರಿಂದ ಈ ಕೀಟಗಳನ್ನು ನಾಶಪಡಿಸಬಹುದು. ಎಸಿಯ ರೇಪ ಎಂಬ ಕೀಟ ಗೆಡೆಕೋಸಿನ ಎಲೆಗಳನ್ನು ತಿಂದು ಜೀವಿಸುತ್ತದೆ.ಡಿ ಡಿ ಟಿ ಮತ್ತು ಎಂಡೆಕ್ಸ್ ಎಂಬ ಕೀಟನಾಶಕ ವಸ್ತುಗಳನ್ನು ಚಿಮುಕಿಸುವುದರಿಂದ ಈ ಕೀಟವನ್ನು ನಾಶಪಡಿಸಬಹುದು. ಎಫಿಡ ಬ್ರಾಸಿಕೆ ಎಂಬ ಕೀಟ ಇನ್ನೊಂದು ಮುಖ್ಯ ಪಿಡುಗು. ಎಲೆಗಳು ಸುರುಟ್ತಿಕೊಂಡು ಬೆಳೆವಣಿಗೆ ಕುಂತವಾಗುವುದು ಈ ರೋಗದ ಮುಖ್ಯ ಲಕ್ಶಣ. ಫಾಲಿಡಾಲನ್ನು ಚಿಮುಕಿಸುವುದರಿಂದ ಇದನ್ನು ನಿವಾರಿಸಬಹುದು. ಮುರ್ಗನಿಯ ಹಿಸ್ತ್ರಿಯಾನಿಕ ಎಂಬ ಇನೂಂದು ಕೀಟ ಗೆಡೆಕೋಸಿ ತಗಲುತ್ತದೆ.ಇದರ ನಿವಾರಣೆ ಪ್ರಯಾಸದ ಕೆಲಸ. ಸಸಿಗಳು ಎಳೆಯವಾಗಿದ್ದಾಗಲೇ ಡಿ.ಡಿ.ಟಿ.ಯನ್ನು ಸಿಂಪಡಿಸುವುದರ ಮೂಲಕ ಕೀಟವನ್ನು ನಾಶಪಡಿಸಬಹುದು. ಆದರೆ ಗಿಡ ಬಲಿಯುತ್ತ ಬಂದಂತೆ ಈ ಕ್ರಮವನ್ನು ಅನುಸರಿಸುವುದು ಯೂಗ್ಯವಲ್ಲ. ಗೆಣಸಿ ಕುಟುಂಬ : ಸಿಂಪೆಟಲಿ ಗುಂಪಿಗೆ ಸೇರಿದ ಒಂದು ಕುಟುಂಬ(ಕನ್ ವಾಲ್ವಿವ್ಯುಲೇಸೀ). ಇದರಲ್ಲಿ ಸುಮಾರು 50 ಜಾತಿಗಳಿವೆ. ಸುಮಾರು 21 ಜಾತಿಗಳು ದಕ್ವಣ ಭಾರತದ ವನ್ಯ ಪ್ರದೇಶಗಲಿ ಬೆಳೆಯುತ್ತವೆ.ಇವುಗಳಲ್ಲಿ ಕೆಲವನ್ನು ಉದ್ಯಾನಗಳಲ್ಲಿ ಬೆಳೆಸುವುದುಂಟು. ಇವು ಸಾಮಾನ್ಯವಾಗಿ ಎಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯಗಳು ಈ ಕುಟುಂಬದ ಸಸ್ಯಗಳಲ್ಲಿ ಕಾಂಡ ಬಹಳ ದುರ್ಬಲವಾಗಿರುವುದರಿಂದ ಅವೆಲ್ಲ ಬಹುಮಟ್ಟಿಗೆ ಹಂಬುಗಳಾಗಿ ಅಥವಾ ಅಡರುಬಳಿಗಳಾಗಿ ಬೆಳೆಯುತ್ತವೆ. ಒಮ್ಮೊಮ್ಮೆ ಮೂಲಿಕೆಗಳಾಗಿ ಬೆಳೆಯುವುದುಂಟು.ಕೆಲವು ವಿಜ್ಗ್ಯನಿಗಳ ಅಭಿಪ್ರಾಯದಲ್ಲಿ ಅಡರುಬಳ್ಲಿಯಂತೆ ಬೆಳೆಯುವ ಸಸ್ಯಗಳು ಬಹುಮುಂದುವರಿಂದವು. ಕೆಲವು ಸಸ್ಯಗಳು ಬದನಿಕೆಗಳಾಗಿರುತ್ತವೆ. ಉದಾಹರಣೆಗೆ ಕಸ್ ಕ್ಯುಟ ಎಂಬ ಸಸ್ಯ ತನ್ನ ಕಾಂಡದಿಂದ ಆಶ್ರದಾತ ಸಸ್ಯವನ್ನು ಬಳಸಿಕೊಡಿದ್ದು, ಹೀರುನಬೇರುಗಳ ಸಹಾಯದಿಂದ ಆಶ್ರದಾತ ಸಸ್ಯದ ಕಾಂಡವನ್ನು ಪ್ರವೇಶಿಸಿ, ನಾಳಕೂರ್ಚಗಳೊಂದಿಗೆ ನೇರವಾದ ಸಂಪರ್ಕವನ್ನು ಇಟ್ಟುಕೊಂಡು ಸ್ವಂತ ಬೆಳೆವಣೆಗೆಗೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಪಡೆಯುತ್ತದೆ.