ಪುಟ:Mysore-University-Encyclopaedia-Vol-6-Part-10.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊಡೀಷಿಯ ಆಟದಲ್ಲೂ ಬಳಕೆಯಲ್ಲಿವೆ. ಅನೇಕ ವೇಳೆ ಬೊಂಬೆಯ ತಲೆ, ಎದೆ, ಕೈ ಕಾಲುಗಳು ಬೇರೆಬೇರೆಯಾಗಿದ್ದು ಅವನ್ನು ದಾರಗಳಿಂದ ಜೋಡಿಸಲಾಗಿರುತ್ತದೆ. ಕೈ, ಕಾಲು, ದೇಹ, ತಲೆ ಸರಿದಾಡುವ ಅವುಗಳಿಗೆ ಬಿದಿರಿನ ಅಥವಾ ಈಚಲ ಕಡ್ಡಿಗಳನ್ನು ಜೋಡಿಸಿರುತ್ತಾರೆ.

ಸೂತ್ರದ ಗೊಂಬೆ (ಪುತಲಿ ಗೊಂಬೆ) ಆಟವೂ ಬಹಳ ಹಿಂದಿನಿಂದಲೂ ಬೆಳೆದು ಬಂದು ಒಂದು ಅಪೂರ್ವ ಜನಪದ ಕಲೆ. ಈ ಆಟ ಚಕ್ಕಳ ಗೊಂಬೆಯಾಟದಿಂದ ಕೆಲವು ರೀತಿಯಲ್ಲಿ ಬೇರೆಯಾಗಿದೆ. ಈ ಗೊಂಬೆಗಳು ಮರದಲ್ಲಿ ತಯಾರದವು. ಉದ್ದ 2'-3' ಕೈ, ಕಾಲು, ಮೂಗು, ಕಣ್ಣು, ತಲೆ, ಎದೆ ಎಲವನ್ನು ನಯವಾಗಿ ಮಾಟವಾಗಿ ಕಡೆದಿರುತ್ತಾರೆ. ಆಯಾ ಗೊಂಬೆಗೆ ತಕ್ಕಂತೆ ಬಣ್ಣಗಳನ್ನು ಲೇಪಿಸಿರುತ್ತಾರೆ. ಪಾತ್ರಕ್ಕೆ ತಕ್ಕಂತೆ ಉಡುಪು, ಒಡವೆ, ಸರ, ಸೊಂಟಕ್ಕೆ ವಡ್ಯಣ, ಪಾದಕ್ಕೆ ನೂಪುರ, ಕಾಲುಂಗುರ, ತಲೆಗೆ ಜಡೆಬಿಲ್ಲೆ, ಕೆನ್ನೆಸರ ಮುಂತಾದವುನ್ನು ಬೇರೆಬೇಗರೆಯಾಗಿ ತೊಡಿಸಿರುತ್ತಾರೆ. ಗೊಂಬೆಯ ಎಲ್ಲ ಭಾಗಗಳೂ ಸುಲಭವಾಗಿ ಚಲಿಸುವಂತಿರುತ್ತವೆ.

ಆಟ ಆಡಿಸುವವರು ನೂಲು ಅಥವಾ ಸಲಾಕಗಳಿಂದ ಗೊಂಬೆಗಳ ಮೇಲೆ ಹತೋಟಿಯನ್ನಿಟ್ಟುಕೊಂಡಿರುತ್ತಾರೆ. ಆಟದಲ್ಲಿವರು ತಮ್ಮ ಕಲಾವಂತಿಕೆಯನ್ನು ಮೆರೆಯೂತ್ತಾರೆ. ಪ್ರಪಂಚದ ಎಲ್ಲೆಡೆಯೂ ಈ ಸೂತ್ರದ ಬೊಂಬೆ ಆಟ ಇದ್ದಂತೆ ತೋರುತ್ತದೆ. ಗ್ರೀಕರು ಈ ಆಟಗಳಿಂದ ಮನೋರಂಜನೆ ಪಡೆಯುತ್ತಿದ್ದರು. ಚೇನ, ಇಂಗ್ಲೆಂಡ್ ಗಳಲು ಈ ಕಲೆ ಇತ್ತೆಂದು ಹೇಳಲಾಗಿದೆ. ಫ್ರನ್ಸ್ ನಲ್ಲಿ ಈಗಲೂ ಈ ಆಟಗಳನ್ನು ನಡೆಸಲಾಗುತ್ತಿದೆ. ಆಮೆರಿಕ, ಲ್ಯಾಟಿನ ಆಮೆರಿಕ ಭಾಗಗಳಲ್ಲಿ ಇಟಲಿ ಜನ ಆಗಾಗ ಹೊಗಿ ಈ ಆಟ ಪ್ರದರ್ಶಿಸಿ ಬರುವುದುಂಟು. ಭಾರತದಲ್ಲಿ ಈ ಆಟ್ಟಕೆ ಹಿಂದಿದ್ದ ಪುರಸ್ಕಾರ ಈಗ ದೊರಕದ ಕಾರಣ ಈ ಒಂದು ಕಲೆ ಅಳಿಸಿ ಹೋಗುವ ಭಯ ಉಂಟಾಗಿದೆ.

ಗೌರಿಗೊಂಬೆಗಳೂ ದಸರೆ ಗೊಂಬೆಗಳೂ ಭಾರತದಲ್ಲಿ ಈಗಲೂ ಅನೇಕ ನಗರಗಳ, ಪಟ್ಟಣಗಳ, ಗ್ರಾಮಗಳ ಮನೆಮನೆಗಳಲ್ಲಿ ಉಳಿದು ಬಂದಿವೆ. ಹಬ್ಬಗಳಲ್ಲಿ ಅವನ್ನು ಓರಣವಾಗಿ ಕೂರಿಸಿ ಪೂಜಿಸುವುದು ಮೂಂದುವರಿದಿದೆ. ಈ ಗೊಂಬೆಗಳನ್ನು ಮರದ ಹೊಟ್ಟಿನಲ್ಲಿ ಇಲ್ಲವೆ ಜೀಡಿಮಣ್ಣಿನಲ್ಲಿ ಮಾಡಿರುತ್ತಾರೆ. ಚಂದನದ ಗೊಂಬೆಗಳೂ ಉಂಟು. ಈ ಗೊಂಬೆಗಳಿಗೆ ಬಟ್ಟೆ. ಆಭರಣನಗಳನ್ನು ತೊಡಿಸಿ ಆಲಂಕರಿಸಿ ಪ್ರದರ್ಶನ ಮನೆಯವರಿಗೊಂದು ಕಲಾ ಪ್ರದರ್ಶನಾವಕಾಶವನ್ನು ಒದಗಿಸುತ್ತದೆ. ಜೊತೆಗೆ ಗೊಂಬೆಯ ಎದುರು ಹೆಣ್ಣುಮಕ್ಕಳು ಕೋಲಾಟವಾಡುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ.

ಗ್ರಾಮದಿಂದ ಗ್ರಾಮಕ್ಕೆ ಸಾಗುವ ಮಾರಮ್ಮ, ಉಡುಗೋಲಜ್ಜಿಗಳ ಮರದ ವಿಗ್ರಹಗಳನ್ನು ಇಂದಿಗೂ ನೋದಬಹುದಾಗಿದೆ. ಒಂದು ಊರಿನ ಗಡಿಗೆ ಮಾರಮ್ಮನ ವಿಗ್ರಹವನ್ನು ಆಯಾ ಊರಿನ ಜನ ಸಾಗಿಸಿಕೊಂಡು ಹೋಗುತ್ತಾರೆ. ಹೀಗೆ ನೂರಾರು ಮೈಲ್ಲಿಗೆಳ ಆಚೆ ಪ್ರಯಾಣ ಬೆಳೆಸಿ ಕೊನೆಗೆ ಸಮೂದ್ರದಲ್ಲೊ ಕೆರೆಯಲ್ಲೊ ಅದನ್ನು ವಿಸರ್ಜನೆ ಮಾಡುತ್ತಾರೆ. ಊರಿಗೆ ಬರುವಂಥ ಪ್ಲೇಗು, ಕಾಲರ ಮುಂತಾದ ರೋಗರುಜಿನಗಳು ಸಾಮೂಹಿಕವಾಗಿ ಈ ದೇವತೆಯ ಮೂಲಕವಾಗಿ ಸಾಗಿ ಹೋಗಲಿ ಎಂಬರ್ಥದಲ್ಲಿ ಈ ದೈವವನ್ನು ರಚಿಸಿ, ಪೂಜಿಸಿ, ಸಾಗಿಸುವ ಜನಪದ ನಂಬಿಕೆ ನಮ್ಮಲ್ಲಿ ಬಹಳ ಹಿಂದಿನಿಂದಲೂ ಬೆಳೆದುಬಂದಿದೆ.

ಗ್ರಾಮಗಳ ದೇವಾಲಯಗಳಲ್ಲಿ ತಲೆಭೂತ ಕೈಭೂತ ಸೋಮ ಮುಂತದ ದೈವದ ಮೂರ್ತಿಗಳನ್ನು ಕಾಣಬಹುದಾಗಿದೆ. ಆಯಾ ಗ್ರಾಮಗಳಲ್ಲಿ ಇರುವ ಕುಶಲಕರ್ಮಿಕವಾಗಿ ರಚಿಸಿಕೊಡುತ್ತಾರೆ. ಸಿರಿಯಾಳ ಗೋಕುಲಾಮಿ, ಗಣಪತಿ ಮಹೋತ್ಸವ ಮೊದಲಾದ ಹಬ್ಬಗಳಲ್ಲಿ ಮನೆಯವರೇ ಎರೆಯ ಮಣ್ಣಿನಿಂದ ಆಯಾ ವಿಗ್ರಹಗಳನ್ನು ಮಾಡುವು ಮತ್ತು ಜಾತ್ರೆಗಳ ಸಮಯದಲ್ಲಿ ಹಳ್ಳಿಯ ಕಸಬುದಾರರು ಬೊಂಬೆಗಳನ್ನು ಮಾಡಿ ಬಣ್ಣ ಕಟ್ಟಿ ಮಾರಾಟಕ್ಕೆ ಇಡುವುದನ್ನು ಇಲ್ಲಿ ನೆನೆಯಬಹುದು, ಬಹುಮಟ್ಟಿಗೆ ಹಳ್ಳಿಯ ಮಕ್ಕಳೆಗೆ ಇಲ್ಲಿ ಸಿಗುವ ರಾಟೆ, ಕಿಸಗಾಲು ಗೊಂಬೆ, ಅಂಬೆಗಾಲು ಕೃಷ್ಣ, ಪೀಪಿ, ಕುದುರೆ, ಗಿಣಿ, ಗುಬ್ಬಿ, ರಾಜ, ರಾಣಿ-ಈ ವಸ್ತುಗಳೇ ಬಹು ಪ್ರಿಯವಾದ ಆಟದ ಸಾಮಾನುಗಳು.

ಬಿದಿರ ಬೊಂಬಿನಿಂದ, ಅರಗಿನಿಂದ, ಬಟ್ಟೆಗಳಿಂದ, ಕಪ್ಪೆಚಿಪ್ಪಿನಿಂದ ನಾನಾ ನಮೂನೆಯ ಗೊಂಬೆಗಳನ್ನು ರಚಿಸಲಾಗುತ್ತಿದೆ. ಭಾರತದ ಸರ್ಕಾರ ಈ ಗೊಂಬೆಗಳಿಗೆ ಬಹಳ ಪ್ರೋತ್ಸಾಹ ನೀಡಿ ಈ ಕಲೆಯ ಉಳಿವಿಗೆ ನೆರವಾಗಿದೆ.

ವಿಜಾನ ಬೆಳೆದಂತೆಲ್ಲ ಕೈಕೆಲಸ ಹಿಂದಾಗಿ ಯಂತ್ರಗಳು ಪ್ರಾಮುಖ್ಯಕ್ಕೆ ಬರುತ್ತಿದೆ. ಅದರ ಪರಿಣಾಮವಾಗಿ ಪ್ಲಾಸ್ಟಿಕ್, ರಬ್ಬರ್ ಮೊದಲಾದವನ್ನು ಬಳಸಿಕೊಂಡು ಯಂತ್ರದಿಂದ ತಯಾರಿಸಿದ ಬಹು ಮುದ್ದಾದ ಗೊಂಬೆಗಳು ಈಗ ಜನಪ್ರಿಯವಾಗಿವೆ.

ಗೊಡೀಷಿಯ : ಉದ್ಯಾನಗಳಲ್ಲಿ ಅಂದಕ್ಕಾಗಿ ಬೆಳೆಸಲಾಗುವ ಒಂದು ಏಕವಾರ್ಷಿಕ ಸಸ್ನಜಾತಿ. ಆನಗ್ರೇಸೀ ಕಟುಂಬಕ್ನೆ ಸೇರಿದೆ. ಸ್ವಿಟ್ಜರ್ಲೆಂಡಿನ ಪ್ರಸಿದ್ದ ಸಸ್ಯಶಾಸ್ತ್ರಜ ಸಿ.ಎಚ್.ಗೊಡೆಟ್ ಎಂಬವನ ಗೌರವಾರ್ಥವಾಗಿ ಗಿಡಕ್ಕೆ ಈ ಹೆಸರನ್ನು ಇಡಲಾಗಿದೆ.

ಗೊಡೀಷಿಯ ಸುಮಾರು 15 ಪ್ರಭೇದಗಳನ್ನೊಳಗೊಂಡಿದೆ. ಎಲ್ಲವೂ ಅಮೆರಿಕದ ಪಶ್ಚಿಮ ಪ್ರದೇಶಗಳ ಮೂಲ ನಿವಾಸಿಗಳು. ಇವುಗಳಲ್ಲಿ ಕೆಲವು 3/4-1 ಮೀ ಎತ್ತರಕ್ಕೆ ಬೆಳೆಯುವ ಪೊದೆಸಸ್ಯಗಳು, ಇನ್ನು ಕೆಲವು 1/4 ಮೀ ಮೂಲಿಕೆಗಳು. ಪೊದೆ ಬಗೆಯವನ್ನು ಅಂಚು ಇಲ್ಲವೆ ಕಲ್ಲೇರಿ ಸಸ್ಯಗಳನ್ನಾಗಿಯೂ ಬೆಳೆಸಲಾಗುತ್ತದೆ. ವಿವಿಧ ಬಗೆಗಳು ಚೆಲುವಾದ ಮತ್ತು ಬಿಳಿ, ಗುಲಾಬಿ, ಕಡುಗೆಂಪು, ಕೆನ್ನೀಲಿ ಮುಂತಾದ ವರ್ಣ ವೈವಿಧ್ಯವನ್ನು ತೋರುವ ಹೂಗಳನ್ನು ಬಿಡುತ್ತವೆ. ಕೆಲವಲ್ಲಿ ದಳಗಳ ಮೇಲೆ ಬಣ್ಣಬಣ್ಣದ ಮಚ್ಚೆಗಳಿರುವುದುಂಟು. ಬಹು ಪಾಲು ಬಗೆಗಳಲ್ಲಿ ಹೂಗಳು ಒಂಟಿಸುತ್ತಿನ ದಳ ಉಳ್ಳವು. ಅಡ್ಡ ತಳಿಯೆಬ್ಬಿಕೆಯ ಒರತೋಗಗಳ ಮೂಲಕ ಹಲವಾರು ಸುತ್ತಿನ ದಳ್ಗಳುಳ್ಳ