ಪುಟ:Mysore-University-Encyclopaedia-Vol-6-Part-10.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೃಹಪದ್ಧತಿ - ಗೃಹರಕ್ಷಕ ದಳ ಕೇಂದ್ರಸಂಸ್ಥೆಯಾಗಿದೆ. ಈ ಸಂಸ್ಥೆಗೆ ಸಕಾ‌ದಿಂದ ಹಣ ದೊರೆಯುತ್ತದೆ. ಸಕಾ‍ರ ಅಲ್ಪ ವರಮಾನ ಮತ್ತು ಮಧ್ಯಮ ವರಮಾನದವರ ವಸತಿ ಯೋಜನೆಯನ್ನು ಆರಂಭಿಸಿದಾಗ ಸಹಕಾರ ಕ್ಷೇತ್ರಗಳಲ್ಲಿ ಈ ಕಾಯ‍ ನಿವ‍ಹಿಸುವ ಹೊಣೆಯನ್ನು ಈ ಕಾಪೋ‍ರೇಷನ್ ಗೆ ವಹಿಸಿಕೊಡಲಾಯಿತು. ಇವಲ್ಲದೆ ರಾಜ್ಯದಲ್ಲಿ ಹರಿಜನ-ಗಿರಿಜನ ವಸತಿ ನಿಮಾ‍ಣ ಕಾಪೋ‍ರೇಷನ್ ಕೊಡ ಇದೆ. ಅದು ಹರಿಜನ-ಗಿರಿಜನ ಗೃಹನಿಮಾ‍ಣ ಸಹಕಾರ ಸಂಘಗಳಿಗೆ ಹಣ ಒದಗಿಸುತ್ತದೆ. ಕಳೆದರೆಡು ದಶಕಗಳಿಂದ ಹಲವಾರು ಸಕಾ‍ರಿ ಸಂಸ್ಥೆಗಳನ್ನು ಬ್ಯಾಂಕುಗಳು, ವಿಶ್ವವಿದ್ಯಾನಿಲಯಗಳು ತಮ್ಮ ಉದ್ಯೋಗಗಳಿಗೆ ಗೃಹಾವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ತಮ್ಮದೇ ಆದ ಗೃಹ ನಿಮಾ‌‌‍ಣ ಸಂಘಗಳನ್ನು ಸ್ಥಾಪಿಸಿಕೊಂಡು ಬಡಾವಣೆಗಳನ್ನು ನಿಮಿ‍ಸುತ್ತಿವೆ. ಅಲ್ಲದೆ ಖಾಸಗಿ ಗೃಹನಿಮಾ‍ಣ ಸಂಸ್ಥೆಗಳೂ ಇಂದು ಭಾರತಾದ್ಯಂಥ ವ್ಯಾಪಿಸಿದ್ದು ನಿಮಾ‌ಣದಲ್ಲಿ ನಿರತವಾಗಿದೆ (ಪಿ.ಎಸ್.ಐ) ಗೃಹ ಪದ್ದತಿ : ಇಂಗ್ಲೆಂಡಿನ ಪಬ್ಲಿಕ್ ಶಾಲೆಯಲ್ಲಿ ಚಟುವಟುಕೆಗಳಿಗಾಗಿ ಇರುವ ಒಂದು ಸಮಾಜಿಕ ವ್ಯವಸ್ಥ (ದಿ ಹೌಸ್ ಸಿಸ್ಟಮ್). ಇದನ್ನು ಯುವಜನರ ಅವಶ್ಯಕತೆಗಳಿಗಾಗಿ ಹೊಂದಿಸಿಕೊಳ್ಳುವಂತೆ ನಿದಿ‍ಷ್ಠವಾಗಿ ಅಳವಡಿಸಲಾಗಿದೆ. ಇದರ ಉಪಯುಕ್ತತೆಯನ್ನತು ಇದನ್ನು ಇತರ ವಸತಿ ಫ್ರೌಢಶಾಲೆಗಳಲ್ಲೂ ಸಾಮಾನ್ಯ ಪ್ರೌಢಶಾಲೆಗಳಲ್ಲೂ ಅಳವಡಿಸಿಕೊಳ್ಳಲಾಗಿದೆ. ಪಬ್ಲಿಕ್ ಶಾಲೆಯ ಪ್ರತಿ ವಿದ್ಯಾಥಿ‍ಯೂ ಎರಡು ಗುಂಪುಗಳ ಸದಸ್ಯನಾಗಿರುತ್ತಾನೆ. ಪಾಠಪ್ರವಚನಗಳು ನಡೆಯುವಾಗ ಆತ ತನ್ನ ತರಗತಿಗೆ ಸೇರಿರುತ್ತಾನೆ. ಪಾಠಪ್ರವಚನಗಳ ಅನಂತರ ಆತ ತನ್ನ ಗೃಹಕ್ಕೆ ಸೇರಿರುತ್ತಾನೆ. ಇಲ್ಲಿ ಗೃಹವೆಂದರೆ ವಿದ್ಯಾಥಿ‍ಯ ಸ್ವಂತ ಮನೆಯಲ್ಲ, ಶಾಲೆಯಲ್ಲಿ ಆತನ ಊಟೋಪಚಾರ, ಕ್ರೀಡೆ, ವ್ಯಾಸಂಗಾದಿಗಳಿಗಾಗಿ ಗುತ್ತುಪಡಿಸಿದ ಜಾಗ, ಅಷ್ಟೇ. ಇಂತರ ಗೃಹದಲ್ಲಿ ಸಾಮಾನ್ಯವಾಗಿ ೫೦ ವಿದ್ಯಾಥಿ‍ಗಳಿರುತ್ತಾರೆ. ಶಾಲೆಯ ವಿದ್ಯಾಥಿ‍ಗಳ ಸಂಖ್ಯೆಗನುಗುಣವಾಗಿ ಒಂದು ಶಾಲೆಯಲ್ಲಿ ಐದೋ ಹತ್ತೋ ಹನ್ನರೆಡೋ ಗೃಹಗಳಿರಬಹುದು. ಪ್ರತಿ ಗೃಹದ ಮೇಲ್ವಿಚಾರಣೆಯನ್ನು ಒಬ್ಬ ಉಪಾಧ್ಯಾಯ ನೊಡಿಕೊಳ್ಳುತ್ತಾನೆ. ವಿದ್ಯಾಥಿ‍ ಶಾಲೆಯ ಹೊರಗೆ ಹೇಗೆ ಕ್ರಮ ಬದ್ದ ಜೀವನವನ್ನು ನಡೆಸಬೇಕೆಂಬ ವಿಷಯದಲ್ಲಿ ಈ ಗೃಹ ವ್ಯವಸ್ಥೆ ಮಾಗ‍ದಶ‍ನ ನೀಡುತ್ತದೆ. ಗೃಹಾಧಿಪತಿ ತನ್ನ ಕಿರಿಯ ಸ್ನೇಹಿತರಲ್ಲಿ ವೈಯಕ್ತಿಕವಾಗಿ ಆಸಕ್ತಿಯುಳ್ಳವನಾಗಿದ್ದು ಅವರಲ್ಲಿರುವ ಅತಿ ತೀವ್ರ ಸಾಂಗಿಕ ಶಕ್ತಿಗಳನ್ನು ಹೊರಹೊಮ್ಮಿಸಿ ಅವರ ಅನೇಕ ಸಾಮಾಜಿಕ ಚಟುವಟುಕೆಗಳಿಗೆ ಬಹಿದ್ವಾರಗಳನ್ನು ಸೃಷ್ಠಿಸಿ ತನ್ಮೂಲಕ ಅವರನ್ನು ಒಂದು ಸ್ತಿಮಿತಕ್ಕೆ ತರಲು ಪ್ರಯತ್ನಿಸುತ್ತಾನೆ. ಪ್ರತಿ ಗೃಹದಲ್ಲೂ ಸದಸ್ಯರ ಅನೂಕೂಲಕ್ಕಾಗಿ ಆಟೋಟಗಳನ್ನು, ವ್ಯಾಯಾಮ, ಸಂಗೀತ ಮತ್ತು ಚಚಾ‍ಕೂಟಗಳೇ ಹಾದಿಯಾಗಿ ಎಲ್ಲಾ ತರಹದ ಸಮಾಜಿಕ ಸಟುವಟುಕೆಗಳಿಗೂ ಅವಕಾಶವಿದೆ. ಗೃಹ ಪದ್ದತಿಯ ಮಾನಸಿಕ ಮೌಲ್ಯವನ್ನು ಕಂಡುಕೊಂಡು ಅಭಿವೃದ್ದಿ ಪಡಿಸುವಲ್ಲಿ ಥಾಮಸ್ ಅನ‍ಲ್ಡ್ ಮತ್ತು ಅವನ ಸಮಾಕಾಲೀನರು ಮುಖ್ಯರು. ಗೃಹ ಗೃಹಗಳ ನಡುವೆ ಕಾಲಕಾಲಕ್ಕೆ ಸ್ಪಧೆ‍ಗಳು ಏಪ‍ಡುವುದರಿಂದ ವಿದ್ಯಾಥಿ‍ಗಳ ಪ್ರತಿಭೆಗೆ ಕೈಚಲಕ್ಕೆ ವ್ಯಾಸಂಗಕ್ಕೆ ಸದಾವಕಾಶ ಒದಗಿದ್ದಂತಾಗುತ್ತದೆ. ಅತಿ ಚತುರರೆನಿಸಿದ ವಿದ್ಯಾಥಿ‍ಗಳನ್ನೆಲ್ಲಾ ಒಂದೇ ಗೃಹಕ್ಕೆ ಸೇರಿಸುವ ಬದಲು ಅವರನ್ನು ಎಲ್ಲಾ ಗೃಹಗಳಿಗೂ ಸಮಾನವಾಗಿ ಹಂಚುತ್ತಾರಾಗಿ ಈ ವ್ಯವಸ್ಥೆ ಇನ್ನೂ ಚೆನ್ನಾಗಿ ಕಲಸ ಮಾಡಲು ಅವಕಾಶ ದೊರೆಕಿದೆ. ತನ್ನ ಒಟ್ಟಾರೇ ಕೀತಿ‍ಗೆ ಗಮನಕೊಡುವ ರೀತಿಯಲ್ಲಿ ಪ್ರತಿಯೊಂದು ಗೃಹವೂ ತನ್ನದೇ ಆದ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಪಬ್ಲಿಕ್ ಶಾಲೆಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯವಿದೆಯಾಗಿ ಗೃಹಗಳು ತಮ್ಮ ತಮ್ಮಲ್ಲೇ ಸ್ಪಧಿ‍ಸುವಂತೆ ಕ್ರೀಡಾ ಚಟುವಟುಕೆಗಳನ್ನು ಏಪ‍ಸಿಸಲಾಗುತ್ತದೆ. ನ್ಯಾನ ನಿಷ್ಠೆ, ಒಳ್ಳೆಯ ನಡೆತೆ, ತನ್ನ ಗುಂಪಿನ ಅಭಿಮಾನ ಮುಂತಾದ ಉತ್ತಮ ಗುಣಗಳನ್ನು ವಿದ್ಯಾಥಿ‍ ವೃದ್ದಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಗೃಹರಕ್ಷಕ ದಳ : ದೇಶದ ಆಂತರಿಕ ಭದ್ರತೆಯನ್ನು ರಕ್ಷಿಸಲು ನೆರವಾಗುವ ನಾಗರೀಕರ ಸುಂಸಘಟಿತ ಸ್ವಯಂ ಸೇವಕ ದಳ (ಹೋಂ ಗಾಡ್ ). ರಾಜಕೀಯ, ಕೊಮುವಾರು, ಭಾಷವಾರು ಪಂಗಡಗಳಿಂತ ದೂರವಿದ್ದು, ತಮ್ಮ ನಿತ್ಯದ ಉದ್ಯೋಗ ಮತ್ತು ದಿನಚರಿಯ ಜೊತೆಗೆ ದೇಶಸೇವೆಗೆ ಕೊಂಚ ಕಾಲವನ್ನು ಮೀಸಲಿಡುವ ರಾಷ್ಟ್ರಕರ ಸೇವಾ ದಳವಿದು. ನಾಡಿನ ಶಾಂತಿ ಪಾಲನೆ ಇದರ ಮುಖ್ಯ ಕತ‍ವ್ಯ. ಕೇಂದ್ರ ಮತ್ತು ರಾಜ್ಯ ಸಕಾ‍ರಗಳ ಸೂಚನೆಯಂತೆ ಹೊಣೇಯಾದ ಕತ‍ವ್ಯವನ್ನು ಮತ್ತೊಬ್ಬರಿಗೆ ಹೊರ ಆಗದಂತೆ ನೆರವೇರಿಸುತ್ತದೆ. ಮಹಿಳೆಯರೂ ಗೃಹರಕ್ಷಕ ದಳದಲ್ಲಿ ಉತ್ತಮ ಸೇವೆ ಸಲ್ಲಿಸಬಹುದೆಂದು ಮನಗಂಡು ಮಹಿಳಾ ಗೃಹರಕ್ಷಕ ದಳವನ್ನು ಸಹ ಜಾರಿಗೆ ತರಲಾಗಿದೆ. ಇಂದು ಭಾರತದ್ಯಾಂತ ಎಲ್ಲಾ ರಾಜ್ಯಗಳಲ್ಲೂ ಗೃಹರಕ್ಷಕ ದಳವಿದೆ ೧೯೪೬ರ ಡಿಸೆಂಬರ್ ನಲ್ಲಿ ಗೃಹರಕ್ಷಕ ದಳದ ಬೀಜಾಂಕುವಾಯಿತೆನ್ನಬಹುದು. ಮುಂಬಯಿ ಪ್ರಾಂತ ಕೊಮುಗಲಭೆಯಿಂದ ತತ್ತರಿಸುತ್ತಿದ್ದಾಗ ಕೆಲವು ಮಂದಿ ಸಮಾಜ ಸೇವಕರೂ ನಾಗರೀಕ ಪ್ರಜ್ಞೆಯುಳ್ಳ ಯುವಕರ ನಾಡಿನ ಶಾಂತಿ ಪಾಲನೆಗೆ, ಜನರ ಮಾನ, ಪ್ರಾಣ ಮತ್ತು ಆಸ್ತಿ ರಕ್ಷಣೆಗೆ ಮುಂದೆ ಬಂದರೂ. ಮುಂಬಯಿ ಸಕಾ‍ರ ಇಂತಹ ಒಂದು ಸ್ವಯಂ ಸೇವಕ ದಳದ ಅಗತ್ಯತೆಯನ್ನು ಮನಗೊಂಡು ಮುಂಬಯಿ ಗೃಹರಕ್ಷಕ ದಳದ ಕಾಯ್ದೆಯನ್ನು ಜಾರಿಗೆ ತಂದು (೧೯೪೭) ಗೃಹರಕ್ಷಕ ದಳವನ್ನು ಶಾಸನಬದ್ದ ದಳವನ್ನಾಗಿ ಪರಿವತಿ‍ಸಿತು. ಇತರ ರಾಜ್ಯ ಸಕಾ‍ರಗಳು ಕ್ರಮೇಣ ಮಾಗ‍ವನ್ನು ಅನುಸರಿಸುದವು. ಮೊದಲು ಪೋಲಿಸರ ಜೊತೆ ತುತು‍ ಪರಿಸ್ಥಿಯಲ್ಲಿ ಮಾತ್ರ ಇದರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಬರಬರುತ್ತಾ ಗೃಹ ರಕ್ಷಕ ದಳ ಸೇವೆಯನ್ನು ರಾಷ್ಟ್ರದ ಎಲ್ಲಾ ರೀತಿಯ ಪರಿಸ್ಥಿತಿಗಳಲ್ಲೂ ಪೋಲಿಸರ ಮತ್ತು ರಾಷ್ಟ್ರ ರಕ್ಷಣಾ ಪಡೆಗಳ ಜೊತೆ ಉಪಯೋಗಿಸಿಕೊಳ್ಳಾಲಾಗುತ್ತಿದೆ. ಗೃಹ ರಕ್ಷಕ ದಳ ಕೇಂದ್ರ ಸಕ‍ರದ ಗೃಹಮಂತ್ರಾಲಯ ವಿಭಾಗಕ್ಕೆ ಸೇರಿದೆ. ನಾಗರೀಕ ರಕ್ಷಣಾ ಪ್ರಧಾನ ಕಾಯ‍ನಿವ‍ಹಣ ಅಧಿಕಾರಿಳು (ಡೈರೆಕ್ಟರ್-ಜನರಲ್, ಸಿವಿಲ್ ಡಿಫೇನ್ಸ್) ಕೇಂದ್ರದಿಂದ ಇಡೀ ರಾಷ್ಟ್ರದ ಗೃಹರಕ್ಷಕ ದಳವನ್ನು ನಿಯಂತ್ರಿಸುತ್ತಾರೆ. ಪ್ರತಿ ರಾಜ್ಯದ ರಾಜಧಾನಿಯಲ್ಲಿ ರಾಜ್ಯ ಗೃಹರಕ್ಷದ ದಳದ ಕೇಂದ್ರ ಕಛೇರಿಯಿದ್ದು ಒಬ್ಬ ಐ.ಪಿ.ಎಸ್, ಗ್ರೇಡಿನ ಕಮಾ‍ಡೆಂಟ್ ಜನರಲ್ ಅದರ ಮುಖ್ಯಸ್ಥರಾಗಿರುತ್ತಾರೆ. ಇವರು ಇಡೀ ರಾಜ್ಯದ ಗೃಹ ರಕ್ಷಕ ದಳದ ತರಬೇತಿ, ಆಡಳತ ಮುಂತಾದ ಕಾಯ‍ವನ್ನು ನಿವ‍ಹಿಸುತ್ತಾರೆ. ರಾಜ್ಯಗಳ ಪ್ರಮುಖ ಜಿಲ್ಲೆಗಳಲ್ಲಿ ಜಿಲ್ಲಾ ಕಮಾಂಡೆಟ್ ರವರು ಇದ್ದು, ಡೆಪ್ಯೂಟಿ ಕಮಾಂಡೆಂಟ್, ಅಡ್ಯೂಟೆಂಟ್ ಸ್ಟಾಪ್ ಆಫೀಸರ್ ಇವರುಗಳ ನರೆವಿನಿಂದ ಜಿಲ್ಲಾ ಗೃಹ ರಕ್ಷದ ದಳದ ತರಬೇತಿ, ನಿಯಂತ್ರಣ ಮತ್ತು ಆಡಳಿತವನ್ನು ನೋಡಿಕೊಳ್ಲೂತ್ತಾರೆ. ಇವರೆಲ್ಲದೆ ಡಿವಿಜನಲ್ ಕಂಪನಿ ಮತ್ತು ಪ್ಲಟೂನ್ ಕಮ‍ಂಡ್ಸ್, ಸಾಜೆಂಟ್ ಮೇಯರ್, ಪ್ಲಟೂರ್ ಸಾಜೆಂಟ್ ಮತ್ತು ಸಕ್ಷೆನ್ ಲೀಡರ್ಸ್ ಎಂಬ ಕಿರಿಯ ಗೃಹರಕ್ಷಕ ಅಧಿಕಾರಿಗಳು ಸಹ ಇರುತ್ತಾರೆ. ಇವರರೆಲ್ಲರೂ ಗೃಹರಕ್ಷಕ ದಳಕ್ಕೆ ತರಬೇತು ಪಡೆದು ಮುಂದೆ ಆಯ್ಕೆಯಾಗಿ ಬಂದರು. ಇವರಿಗೆ ಗೊತ್ತಾದ ಸಕಾರಿ ಸಂಬಳವಿಲ್ಲ. ನಿಗಧಿಯಾದ ಇತರ ಭತ್ಯೆಗಳು ಮಾತ್ರ ದೊರೆಯುತ್ತವೆ. ಸೇನಾದಳಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದಂಥವರಿಗೂ ಮಧ್ಯದಲ್ಲೇ ಸೇನೆಯಿಂದ ನಿವೃತ್ತಗೊಂಡ ಸೈನಿಕರಿಗೂ ಗೃಹರಕ್ಷಕ ದಳದಲ್ಲಿ ವಿಶೇಷ ಸ್ಥಾನಮಾನ ಕೊಡಲಾಗುವುದು. ಅಹ‍ತೆಗಳೂ : ಆಯಾ ಜಿಲ್ಲಾವಾಸಿಗಳಾದ ಭಾರತೀಯ ನಾಗರೀಕರೂ ಈ ದಳವನ್ನು ಸೇರಬಹುದು. ಅಂಥವರ ವಯಸ್ಸು ೨೦ ರಿಂದ ೫೦ರ ಅಂತರದಲ್ಲಿರಬೇಕು. ಯಾವರೀತಿಯಿಂದಲೂ ನ್ಯಾಯಲಯದಿಂದ ಅವರು ಶಿಕ್ಷೆಗೆ ಒಳಗಾಗಿರಬಹುದು. ಸಮಾಜ ಕಂಠಕ ವ್ಯಕ್ತಿಗಳಿರಬಾರದು. ಅಂಟು ರೋಗ - ರುಚುನೆಗಳೂ ಅಂಗ್ಯೂನತೆಯೂ ಇರಬಾರದು. ನಿದಿ‍ಷ್ಠ ದೇಹದ ಅಳತೆಯಿಂದ ಕೂಡಿ ದೃಢಕಾಯರಾಗಿರಬೇಕು. ಓದು ಬರಹ ತಿಶಿದಿರಬೇಕು. ಒಮ್ಮೆ ಸೇರಿದ ಬಳಿಕ ಆ ವ್ಯಕ್ತಿಗೆ ವಯಸ್ಸು ೫೫ ತುಂಬುವವರೆಗೂ ಆತನ ಸೇವೆಯನ್ನು ಬಳಸಿಕೊಲ್ಲಾಳಗುವುದು ಮತ್ತು ಮುಂದುವರೆಸಬೇಕಾದರೆ ವ್ಯಕ್ತಿಯ ಘನೆತೆ, ದೇಹದೃಢತೆ ಆತನ ಸೇವೆ ಮುಂತಾದವನ್ನು ಪರಿಗಣಿಸಲಾಗುವುದು. ಸಕಾ‍ರ ವಿಧಿಸಿರುವ ನಿಯಮಾನುಸಾರ ಅಭ್ಯಥಿಗಳನ್ನು ಆಯ್ಕೆ ಮಾಡಲಾಗುತ್ದೆ. ಇಂಥವರಿಗೆ ಸಮವಸ್ತ್ರ, ಭುಜಕೀತಿ‍ ಮುಂತಾದುವುಗಳನ್ನು ಉಚಿತವಾಗಿ ಒದಗಿಸಿ ಯುಕ್ತಿ ಶಿಕ್ಷಣವನ್ನು ನೀಡಿ ತರಬೇತು ಮಾಡುತ್ತಾರೆ. ಭಾರತಾದ್ಯಾಂತ ಸಮವಸ್ತ್ರ ಒಂದೇ ರೀತಿ ಇರುವುದರಿಂದ ಹಾಗೂ ಒಂದೇ ರೀತಿಯ ಶಿಕ್ಷಣ ನೀಡುವುದರಿಂದ ಗೃಹ ರಕ್ಷಕ ದಳ ನಿಜಕ್ಕೂ ಇತರ ರಾಷ್ಟ್ರೀಯ ಬಳಗಗಳಾದ ರಕ್ಷಣಬಲಗಳು ಮತ್ತು ಪ್ರದೇಶಿಕ ಸೇನೆಗಳಂತೆ ಅಖಿತ ಭಾರತೀಯವಾಗಿ ಇರುವುದು.