ಪುಟ:Mysore-University-Encyclopaedia-Vol-6-Part-11.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗೊರಿಲ 2. ಗೊರಸಿನ ಅಂಗಾಲಿನ ಹುಣ್ಣು: ಸ್ಫೀರೊಫೋರಸ್ ನೆಕ್ರೊಫೋರಸ್ ಜೀವಿಯಿಂದ ಉಂಟಾಗುವ ರೋಗ ಇದು. ಬರಿಯ ಅಂಗಾಲು ಮಾತ್ರವಲ್ಲದೆ ಗೊರಸಿಗಪ್ಪೆಗೂ ಇದು ಹರಡಬಹುದು. ಗೊರಸಿನಿಂದ ಒಂದು ರೀತಿಯ ದುರ್ವಾಸನೆ ಹೊರಡಬಹುದು ಮತ್ತು ಕಪ್ಪುಬಣ್ಣದ ಕೀವು ಸುರಿಯುವುದು ಈ ರೋಗದ ಮುಖ್ಯ ಲಕ್ಷಣಗಳು. ತೇವಪೂರಿತವಾದ ಮತ್ತ ಮಲಮೂತ್ರಗಳಿಂದ ಗಲೀಜಾದ ಲಾಯಗಳಲ್ಲಿ ಈ ರೋಗ ಹೆಚ್ಚಾಗಿರುವುದರಿಂದ ಅಂಥ ಪ್ರದೇಶಗಳನ್ನು ಶುಚಿಯಾಗಿಡುವುದರಿಂದಲೂ ಗೊರಸನ್ನು ಕ್ರಿಮಿನಾಶಕಗಳಿಂದ ತೊಳೆಯುವುದರಿಂದಲೂ ರೋಗವನ್ನು ತಡೆಯಬಹುದು. 3. ಗೊರಸುತ್ತು: ಅತಿ ಹೆಚ್ಚು ಕೆಲಸ ಮಾಡುವ ಕುದುರೆಗಳಲ್ಲಿ ಈ ರೋಗ ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ಅಂಗಾಲು, ಗೊರಸುಗಪ್ಪೆಯನ್ನು ಆವರಿಸುವುದಲ್ಲದೆ ಗೊರಸಿನ ಅಂಗಾಂಶ ಹೆಚ್ಚು ಹೆಚ್ಚು ಬೆಳೆಯುತ್ತ ಹೋಗುತ್ತದೆ. ರೋಗಪೀಡಿತ ಕುದುರೆಗಳ ಬಳಿ ಸಾಮಾನ್ಯವಾಗಿ ಕೆಟ್ಟ ವಾಸನೆ ಇರುತ್ತದೆ. ದಿನಗಳೆದಂತೆ ಗೊರಸಿನ ಮುಚ್ಚಳ ಸಡಿಲವಾಗಿ ಕೋರಿಯಮ್ ಭಾಗ ಎದ್ದು ಕಾಣತೊಡಗುತ್ತದೆ. ಕೋರಿಯಮಿನ ಮೇಲ್ಮೈ ಮುಳ್ಳುಗಳಿಂದ ಕೂಡಿದಂತಿರುತ್ತದೆ. ಒತ್ತಡದ ಬ್ಯಾಂಡೇಜ್ ಕಟ್ಟುವುದರಿಂದ ಈ ರೋಗವನ್ನು ಹತೋಟಿಯಲ್ಲಿಡಬಹುದು. ಇವುಗಳಲ್ಲದೆ ಕುದುರೆಗಳಲ್ಲಿ ಆಣಿ, ಗೊರಸಿನ ಪಾರ್ಶ್ವದ ಮೃದ್ವಸ್ತಿಯ ಉರಿಯೂತ ಮತ್ತು ಗೊರಸೀಳುಗಳು ಉಂಟಾಗಬಹುದು. ಗೊರಸಿನ ದುರಸ್ತಿ: ಅನೇಕ ಸಾಕುಪ್ರಾಣಿಗಳಲ್ಲಿ ರೋಗಗಳಿಂದ ಆಕಸ್ಮಿಕವಾಗಿ ಬೀಳುವ ಏಟುಗಳಿಂದ, ಇಲ್ಲವೇ ಗೊರಸಿನಲ್ಲಿ ಸ್ವಾಭಾವಿಕವಾಗಿಯೇ ಕಾಣಬರುವ ಊನಗಳಿಂದ ಗೊರಸಿನ ಆಕಾರ ಕೆಟ್ಟು ಹೋಗಬಹುದು. ಆಗ ಪ್ರಾಣಿಗಳು ನಿಷ್ಪ್ರಯೋಜಕವಾಗುತ್ತವೆ. ಇಂಥ ಪ್ರಾಣಿಗಳ ಗೊರಸನ್ನು ಸರಿಪಡಿಸಿ ಮೊದಲಿನ ಸ್ಥಿತಿಗೆ ತರಬಹುದು ಮತ್ತು ವಿಕಾರಗಳನ್ನು ಸರಿಪಡಿಸಬಹುದು. ಹೀಗೆ ಗೊರಸನ್ನು ದುರಸ್ತು ಮಾಡಲು ಆಕ್ರಿಲಿಕ್ ಅಂಶವನ್ನುಳ್ಳ ಒಂದು ರೀತಿಯ ಪ್ಲಾಸ್ಟಿಕನ್ನು ಬಳಸುವ ರೂಢಿಯಿದೆ. ಇದು ಬಿಳಿಯ ಬಣ್ಣದ್ದೂ ಗಾಳಿಗೆ ಒಡ್ಡಿದಾಗ ಬೇಗ ಗಟ್ಟಿಯಾಗುವ ಗುಣವುಳ್ಳದ್ದೂ ಆಗಿದೆ. ಗಟ್ಟಿಯಾದಾಗ ಗೊರಸಿನ ಅಂಗಾಂಶದಂತೆಯೇ ಶಕ್ತಿಯುತವಾಗುತ್ತದೆ. ಗೊರಸು ಸೀಳುಗೊಡಿದ್ದರೆ ಈ ವಸ್ತುವಿನ ಪುಡಿಯನ್ನು ಹಾಕುವಾಗ ಅದರ ಪರಿಮಾಣ ಆಕಸ್ಮಿಕವಾಗಿ ಕೊಂಚ ಹೆಚ್ಚಾಗಬಹುದು. ಹೀಗೆ ಹೆಚ್ಚಾದ ಪ್ಲಾಸ್ಟಿಕನ್ನು ಅರದಿಂದ ಉಜ್ಜಿ ಇಲ್ಲವೆ ಚಾಕುವಿನಿಂದ ಕತ್ತರಿಸಿ ತೆಗೆಯಬಹುದು. (ಜಿ.ಆರ್.ಆರ್.ಎಸ್) ಗೊರಿಲ : ಮ್ಯಾಮೇಲಿಯ ವರ್ಗ ಹಾಗೂ ಪ್ರೈಮೇಟ್ ಗಣಗಳ ಪಾಂಗಡೀ ಕುಟುಂಬಕ್ಕೆ ಸೇರಿದ ಒಂದು ವನ್ಯವಸಿ ವಾನರ. ಇದರ ತವರು ಆಫ್ರಿಕದ ಉಷ್ಣವಲಯ. ಚಿಂಪ್ಯಾಂಜ಼ಿ ಮತ್ತು ಒರಾಂಗೂಟಾನ್ ಗಳ ಸಂಬಂಧಿ. ಇದಕ್ಕೂ ಅವುಗಳಂತೆ ಬಾಲವಿಲ್ಲ. ಒರಾಂಗೂಟಾನ್ ಗಿಂತ ಚಿಂಪ್ಯಾಂಜ಼ಿಯೊಂದಿಗೇ ಇದರ ಸಂಬಂಧ ಹೆಚ್ಚು. ಗೊರಿಲವೂ ಚಿಂಪ್ಯಾಂಜ಼ಿಯೂ ಒಂದೇ ಪೂರ್ವಜ ಕಪಿಯಿಂದ ಉದ್ಭ್ವಿಸಿದವು ಎಂದು ಹೇಳಲಾಗಿದೆ. ಗೊರಿಲದಲ್ಲಿ ಒಂದೇ ಒಂದು ಪ್ರಭೇಧ ಉಂಟು. ಈ ಪ್ರಭೇದದ ವೈಜ್ಞಾನಿಕ ನಾಮ ಗೊರಿಲ ಗೊರಿಲ. ಇದರಲ್ಲಿ ಎರಡು ಉಪಪ್ರಭೇದಗಳಿವೆ: 1. ಸಮತಟ್ಟಾದ ಕಾಡು ಪ್ರದೇಶಗಳಲ್ಲಿ ವಾಸಿಸುವ ಗೊರಿಲ ಗೊರಿಲ ಗೊರಿಲ (ಲೋಲ್ಯಾಂಡ್ ಗೊರಿಲ). 2. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಗೊರಿಲ ಗೊರಿಲ ಗೊರಿಲ ಬೆರಿಂಗೈ (ಮೌಂಟನ್ ಗೊರಿಲ). ಮೊದಲನೆಯ ಉಪಪ್ರಭೇದ ಆಫ್ರಿಕದ ಸಮಭಾಜಕವೃತ್ತ ಪ್ರದೇಶಗಳ ಪಶ್ಚಿಮ ಭಾಗದಲ್ಲೂ(ಗಿನಿ ಖಾರಿಯ ಪ್ರದೇಶದ ದಟ್ಟಕಾಡುಗಳಲ್ಲಿ) ಎರಡನೆಯ ಉಪಪ್ರಭೇದ ಮಧ್ಯ ಆಫ್ರಿಕದಲ್ಲಿರುವ ಎಡ್ವರ್ಡ್ ಮತ್ತು ಕೀವಿ ಸರೋವರಗಳ ನಡುವೆ ಇರುವ ವಿರುಂಗ ಅಗ್ನಿಪರ್ವತಗಳ 3500 ಮೀ (11550 ಅಡಿ) ಎತ್ತರದವರೆಗಿನ ಪ್ರದೇಶಗಳಲ್ಲೂ ಕಾಣದೊರೆಯುತ್ತವೆ. ದೈಹಿಕ ಲಕ್ಷಣಗಳು: ಗೊರಿಲ ವಾನರಗಳಲ್ಲೆಲ್ಲ ಅತ್ಯಂತ ದೊಡ್ಡ ಪ್ರಾಣಿ. ಅಷ್ಟೇ ಅಲ್ಲ, ಇಂದು ಜೀವಿಸಿರುವ ಪ್ರೈಮೇಟುಗಳಲ್ಲೆ ಇದು ಅತ್ಯಂತ ಭಾರಿಯಾದುದು. ಪೂರ್ಣ ಬೆಳೆದ ಗಂಡು ಗೊರಿಲದ ಎತ್ತರ 1.25-1.75 ಮೀ (4-6 ಅಡಿ). ಮಂಡಿಯನ್ನು ನೆಟ್ಟಗೆ ಮಾಡಿದರೆ ಎತ್ತರ ಇನ್ನೂ ಹೆಚ್ಚಬಲ್ಲುದು (ಸು. 2.30 ಮೀ ವರೆಗೆ 7.5ಅಡಿ). ಗೊರಿಲದ ಕೈ ಹರವು 2.0-2.75 ಮೀ(6.6-9 ಅಡಿ), ಎದೆಯ ಸುತ್ತಳತೆ 1.75 ಮೀ (5.75 ಅಡಿ). ದೇಹದ ತೂಕ ಗಂಡಿನಲ್ಲಿ ೧೩೫-೨೭೫ ಕಿಗ್ರಾಂ. ಹೆಣ್ಣಿನಲ್ಲಿ 70-140 ಕಿಗ್ರಾಂ. ಪ್ರಾನಿಸಂಗ್ರಹಾಲಯಗಳಲ್ಲಿನ ಗೊರಿಲಗಳಲ್ಲಿ 350 ಕಿಗ್ರಾಂ. ವರೆಗೂ ಇರಬಹುದು. ಗೊರಿಲದ ಮೈಮೇಲೆ ಕಪ್ಪುಬಣ್ಣದ ಇಲ್ಲವೆ ಬೂದುಮಿಶ್ರಿತ ಕಪ್ಪುಬಣ್ಣದ ದಟ್ಟವಾದ ಕೂದಲುಗಳಿವೆ. ನೆತ್ತಿಯ ಮೇಲೆ ಕೆಳ್ಪು ಬಣ್ಣದ ಕೂದಲುಗಳಿರುವುದುಂಟು. ಗಂಡು ಗೊರಿಲಗಳಿಗೆ ಸುಮಾರು 10 ವರ್ಷ ವಯಸ್ಸಾದಾಗ ಅವುಗಳ ಬೆನ್ನಮೇಲಿನ ಕೂದಲುಗಳು ಬಿಳಿಯ ಬಣ್ಣಕ್ಕೆ ತಿರುಗುತ್ತವೆ. ಮುಖ, ಮುಂಗೈ ಮತ್ತು ಪಾದಗಳ ಮೇಲೆ ಕೂದಲಿರುವುದಿಲ್ಲ. ಹೆಚ್ಚು ವಯಸಾದ ಗಂಡುಗಳ ಎದೆಯೂ ರೋಮರಹಿತವಾಗಿರುತ್ತದೆ. ಗೊರಿಲಗಳ ಕಿವಿಗಳ ಅಲೆಗಳು ಬಲು ಚಿಕ್ಕವು. ಮೂಗಿನ ಹೊಳ್ಳೆಗಳ ಸಿತ್ತ ಉಬ್ಬುಗಳಿವೆ. ಕಣ್ಣುಗಳು ಚಿಕ್ಕವು: ಚೆನ್ನಾಗಿ ಉಬ್ಬಿಕೊಂಡಿರುವ ಹಣೆಯ ಮೂಳೆಗಳ ಕೆಳಗೆ ಹುದುಗುದಂತಿವೆ. ಗೊರಿಲ ಸಸ್ಯಹಾರಿ. ಹಲವಾರು ಬಗೆಯ ಗಿಡಗಳ ಎಳೆಯ ಕಾಂಡ, ಎಲೆ, ಬಲಿತ ಕಾಂಡಗಳ ತಿರುಳು, ತೊಗಟೆ ಮುಂತಾದವೇ ಇದರ ಪ್ರಧಾನ ಆಹಾರ. ಹಣ್ಣು, ಬೀಜ ಇತ್ಯಾದಿಗಳನ್ನು ತಿನ್ನುವುದಿದೆಯಾದರೂ ಇವು ಗೊರಿಲಕ್ಕೆ ಅಷ್ಟಾಗಿ ಅಚ್ಚುಮೆಚ್ಚಿನ ಆಹಾರಗಳಲ್ಲ. ಪ್ರಾಣಿಸಂಗ್ರಹಾಲಯಗಳಲ್ಲಿ ಗೊರಿಲ ಮಾಂಸವನ್ನು ತಿನ್ನುತ್ತದೆ. ಗೊರಿಲದ ಇನ್ನೊಂದು ವಿಚಿತ್ರ ಲಕ್ಷಣವೆಂದರೆ ನೀರೇ ಕುಡಿಯದಿರುವುದು. ಗೊರಿಲ ಸಮಾಜಜೀವಿ : ಗೊರಿಲ ೫-೨೦ ಪ್ರಾಣಿಗಳನ್ನೊಳಗೊಂಡ ಸಣ್ಣ ಕುಟುಂಬ ಇಲ್ಲವೆ ಗುಂಪುಗಳಲ್ಲಿ ವಾಸಿಸುತ್ತವೆ. ಪ್ರತಿಯೊಂದು ಗುಂಪಿಗೆ ಬಿಳಿಯ ಬಣ್ಣದ ಬೆನ್ನಿನ(ಸಿಲ್ವರ್ ಬ್ಯಾಕ್) ಗಂಡು ಗೊರಿಲವೇ ನಾಯಕ. ನಾಯಕನಿಗೆ ಗುಂಪಿನ ಎಲ್ಲ ಗೊರಿಲಗಳೂ ಅತ್ಯಂತ ವಿಧೇಯವಾಗಿ ನಡೆದುಕೊಳ್ಳುತ್ತವೆ. ತನಗೆ ಯಾವ ಬಗೆಯ ವಿರೋಧವಿಲ್ಲದಿದ್ದರೂ ನಾಯಕ ಮಾತ್ರ ಎಂದೂ ತನ್ನ ದರ್ಪವನ್ನು ಒರಟಾಗಿ ತೋರ್ಪಡಿಸುವುದಾಗಲೀ ಅಧಿಕಾರವನ್ನು ಚಲಾಯಿಸುವುದಾಗಲೀ ಇಲ್ಲ. ಯಾವಾಗಲೂ ಶಾಂತವಾಗಿ ತಾಳ್ಮೆಯಿಂದ ಇರುತ್ತದೆ. ಹೀಗಾಗಿ ಗುಂಪಿನ ಇತರ ಪ್ರಾಣಿಗಳಿಗೆ ಅದು ಬಲು ಅಚ್ಚುಮೆಚ್ಚಾಗಿರುತ್ತದೆ. ಮರಿಗಳಂತೂ ನಾಯಕನ ಮೇಲೆ ಹತ್ತುವುದು, ಅದರ ತೊಡೆಯ ಮೇಲೆ ಕುಳಿತುಕೊಳ್ಳುವುದು ಮುಂತಾದವನ್ನೆಲ್ಲ ಮಾಡುತ್ತದೆ. ಇವೆಲ್ಲವನ್ನೂ ತಾಳ್ಮೆಯಿಂದ ಸಹಿಸುವ ಗಂಡು ಗಲಾಟೆ ವಿಪರೀತವಾದಾಗ ಮಾತ್ರ ಪ್ರತಿಕ್ರಿಯೆಯನ್ನು ತೋರುತ್ತದೆ. ಆಗಲೂ ಹೊಡೆಯುವುದಾಗಲೀ ಬಡಿಯುವುದಾಗಲೀ ಮಾಡದು; ಒಂದು ಸಲ ಮರಿಗಳನ್ನು ದುರುಗುಟ್ಟಿ ನೋಡುತ್ತದೆ ಅಷ್ಟೆ. ಮರಿಗಳ ಚೇಷ್ಟೆ ನಿಲ್ಲುತ್ತದೆ. ಗುಂಪಿನ ಮುಂದಾಳು ಇಷ್ಟು ಶಾಂತಸ್ವಭಾವದ್ದಾದರೂ ಗುಂಪಿಗೆ ಅಪಾಯವೊದಗಿದಾಗ, ಚಿರತೆ ಮುಂತಾದ ಶತ್ರುಗಳು ಮುತ್ತಿದಾಗ ರಕ್ಷಣೆಗೆ ಸಿದ್ಧವಾಗುತ್ತದೆ. ತನ್ನ ಎದೆಯನ್ನು ಬಲವಾಗಿ ಬಡಿದುಕೊಳ್ಳುತ್ತ, ಕೂಗುತ್ತ ಶತ್ರುಗಳನ್ನು ಹೆದರಿಸುತ್ತದೆ. ಒಂದೊಂದು ಗುಂಪಿನಲ್ಲಿ ಒಬ್ಬ ನಾಯಕ, ಕೆಲವು ಷ್ರೌಢ ವಯಸ್ಸಿನ ಗಂಡುಗಳು, ಹೆಣ್ಣುಗಳು ಮತ್ತು ಮರಿಗಳು ಇರುತ್ತವೆ. ಕೆಲವೊಮ್ಮೆ ಬರಿಯ ಮುಣ್ದಾಳು, ಹೆಣ್ಣುಗಳು ಮತ್ತು ಮರಿಗಳು ಮಾತ್ರ ಇರಬಹುದು. ಗುಂಪಿನ ಪ್ರತಿಯೊಂದು ಗೊರಿಲಕ್ಕೂ ಅದರದೇ ಆದ ಸ್ಥಾನಮಾನ ಇರುತ್ತದೆ. ಯಾವ ಪ್ರಾಣಿಯೂ ತನ್ನ ಸ್ಥಾನವನ್ನು ಮೀರಿ ವರ್ತಿಸುವುದಿಲ್ಲ. ಪ್ರತಿಯೊಂದು ಗುಂಪಿಗೂ ಅದರದೇ ಆದ