ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-6-Part-11.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೬ ಗೋಟ್ಯಾ, ತೌಫಿಲ್-ಗೋಡಂಬಿ ಆಧಾರ ಮಾಡಿಕೊಂಡು ತಮ್ಮ ಈ ಮಸೂದೆಯನ್ನು ಇವರು ರಚಿಸಿದ್ದರು. ಅದರ ಪ್ರತಿಯನ್ನು ಮೊದಲು ಸದಸ್ಯರ ಅಭಿಪ್ರಾಯಕ್ಕಾಗಿ ಹಂಚಲಾಯಿತು. ಅನಂತರ 1912ರ ಮಾರ್ಚ್ 17ರಂದು ಸಭೆಯಲ್ಲಿ ಅದು ಚರ್ಚೆಗೆ ಬಂತು. ಗೋಖಲೆಯವರು ಮಸೂದೆಯ ಆವಶ್ಯಕತೆಯನ್ನು ಕುರಿತು ಯುಕ್ತವಾಗಿ ವಾದಿಸಿದರು. ಅದನ್ನು ತಜ್ಞರ ಸಮಿತಿಗೆ ವರದಿಗಾಗಿ ಒಪ್ಪಿಸುವ ಬಗ್ಗೆ ಮತ ತೆಗೆದುಕೊಂಡಾಗ ಸಭೆಯಲ್ಲಿ ಅಧಿಕಾರಿ ಸದಸ್ಯರೇ ಹೆಚ್ಚಾಗಿದ್ದುದರಿಂದ ಅದಕ್ಕೆ ವಿರುದ್ಧವಾಗಿ ಹೆಚ್ಚು ಮತಗಳು ಬಂದು ಅದರ ಮುಂದಿನ ನಡಾವಳಿಕೆಗೆ ಅವಕಾಶವಾಗಲಿಲ್ಲ. ಆದರೂ ಗೋಖಲೆಯವರು ಉತ್ಸಾಹಗುಂದಲಿಲ್ಲ. ಮತ್ತೆ ಮತ್ತೆ ಅದಕ್ಕಾಗಿ ಶ್ರಮಿಸುವುದಾಗಿ ಪಟ್ಟರು. ಭಾರತದ ಶಿಕ್ಷಣದ ಇತಿಹಾಸದಲ್ಲಿ ಗೋಖಲೆಯವರ ಈ ಮಸೂದೆ ವಿಶಿಷ್ಟ ಸ್ಥಾನ ಪಡೆದಿದೆ. ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಲ್ಲಿ ಅದೇ ಮೊದಲ ಯತ್ನವಾಯಿತು. ಅದು ಬಿದ್ದುಹೋದರೂ ಇವರ ಯತ್ನ ಪೂರ್ಣವಾಗಿ ವಿಫಲವಾಗಲಿಲ್ಲ. ಜನತೆಯ ಆಶೋತ್ತರವನ್ನು ಸರ್ಕಾರ ಅರಿತುಕೊಂಡಿತು; ಶಾಸನಬದ್ಧವಾಗಿ ಮುಂದುವರಿಯಲು ಅಂದು ಇದ್ದ ಅಡಚಣೆಗಳ ಕಡೆ ಬೆರಳು ತೋರಿದರೂ ಪ್ರಾಥಮಿಕ ಶಿಕ್ಷಣದ ವಿಸ್ತರಣಕ್ಕೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿತು. ಪ್ರಾಂತೀಯ ಸರ್ಕಾರಗಳನ್ನು ಆ ಬಗ್ಗೆ ವಿಚಾರಿಸಲಾಯಿತು. ವಿಸ್ತರಿಸುತ್ತಿದ್ದ ಆ ಕ್ಷೇತ್ರದ ಆಡಳಿತಕ್ಕಾಗಿ ಕೇಂದ್ರ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಲಾಯಿತು. 1912ರಿಂದ 1917ರ ವರೆಗೆ ಆ ಕ್ಷೇತ್ರದಲ್ಲಿ ಸರ್ಕಾರ ತೋರಿದ ಆಸಕ್ತಿಗೆ ಆ ಮಸೂದೆ ನೀಡಿದ ಪ್ರಚೋದನೆಯೇ ಕಾರಣವೆಂದು ಹೇಳಬಹುದು. 1913ರ ಫೆಬ್ರುವರಿ 21ರಂದು ಹೊರಡಿಸಿದ ಸರ್ಕಾರದ ಶೈಕ್ಷಣಿಕ ನೀತಿಯ ನಿರೂಪಣೆಯಲ್ಲೂ ಆ ಮಟ್ಟದ ಶಿಕ್ಷಣ ಸೌಲಭ್ಯವನ್ನು ಹೆಚ್ಚಿಸುವ ಬಗ್ಗೆ ಅಗತ್ಯ ಆಶ್ವಾಸನೆಯನ್ನು ನೀಡಲಾಯಿತೆಂಬುದು ಮುಖ್ಯ ಸಂಗತಿ. ಗೋಟ್ಯಾ, ತೌಫಿಲ್ : 1811-72. ಫ್ರೆಂಚ್ ಕವಿ, ಕಾದಂಬರಿಕಾರ, ವಿಮರ್ಶಕ, ಪ್ರವಾಸ ಲೇಖಕ. ತಾರ್‌ಬೆಸ್ಸಿನಲ್ಲಿ ಹುಟ್ಟಿದ ಈತ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ತಾಳಿದ್ದ. ಚಿತ್ರಕಲೆಯನ್ನು ಆಳವಾಗಿ ಅಭ್ಯಸಿಸಿ ಪರಿಣತಿ ಪಡೆದರೂ ಸ್ವಲ್ಪಕಾಲದ ಅನಂತರ ಅದನ್ನು ಬಿಟ್ಟು ಲೇಖನವೃತ್ತಿಯನ್ನು ಅವಲಂಬಿಸಿದ. ಫ್ರಾನ್ಸಿನಲ್ಲಿ ರೊಮ್ಯಾಂಟಿಕ್ ಪಂಥ ಗರಿಗೆದರಿ ಹಾರುತ್ತಿದ್ದ ಕಾಲದಲ್ಲಿ ಈತ ಬಹುಬೇಗ ಅದರ ಪ್ರಭಾವಕ್ಕೆ ಒಳಗಾಗಿ ಹೂಗೋ, ನೆರ್ವಲ್ ಮುಂತಾದವರ ಜೊತೆ ಸೇರಿದ. ಸ್ವತಃ ರೊಮ್ಯಾಂಟಿಕ್ ಪಂಥದ ಅನುಯಾಯಿಯಾದರೂ ಸಾಹಿತ್ಯದಲ್ಲಿ ರೂಪಕ್ಕೆ (ಫಾರಂ) ಹೆಚ್ಚು ಪ್ರಾಧಾನ್ಯವಿರಬೇಕು, ಕವಿ ತನ್ನ ಕೃತಿಯನ್ನು ತಿದ್ದಿ ಹಸನುಗೊಳಿಸಿ, ನುಣುಪಾಗಿಸಬೇಕು ಎಂದು ವಾದಿಸಿದ. ರೊಮಾಂಟಿಕ್ ಮತ್ತು ಕ್ಲಾಸಿಕಲ್ ತತ್ರಗಳಿರದನ್ನೂ ಸುರಂಗಗೊಳಿಸ ಹೊರಟ ಹೊಸ ವಿಚಾರ ಪರಂಪರೆಯನ್ನೇ ಪ್ರತಿಪಾದಿಸಿದ. ಕಲೆಗಾಗಿ ಕಲೆ ಎಂಬ ಚಳವಳಿಯನ್ನು ಫ್ರಾನ್ಸಿನಲ್ಲಿ ಬಿತ್ತಿದವ ಈತನೇ. ತನ್ನ ಕೃತಿಗಳಿಂದಾಗಿ ಅನಂತರ ಬಂದ ಫಾರ್ಮಲಿಸ್ಟ್ ಪಂಥದವರಿಗೂ ಸ್ಫೂರ್ತಿ ನೀಡಿದ. ಗೋಟ್ಯಾ ಮೊದಲು ಬೆಳಕಿಗೆ ಬಂದದ್ದು ತನ್ನ ಎರಡು ಕವನ ಸಂಗ್ರಹಗಳ ಮೂಲಕ. ಈ ಸಂಗ್ರಹಗಳಲ್ಲಿ ಇಂಗ್ಲಿಷ್ ಕವಿ ಬೈರನನ ಪ್ರಚಂಡ ರೊಮ್ಯಾಂಟಿಕ್ ಕಾವ್ಯಶೈಲಿಯನ್ನು ಅನುಸರಿಸಿದ ಕವನಗಳಿವೆ. 1835ರಲ್ಲಿ ಬರೆದ ಮ್ಯಾಡಮ್ಯಾಸಲ್ ಮೋಪಿನ್ ಎಂಬ ಕಾದಂಬರಿ ಈತನ ಹೆಸರು ಯುರೋಪಿನಲ್ಲಿ ಮನೆಮಾತಾಗುವಂತೆ ಮಾಡಿತು. ಇಂದಿಗೂ ಲಕ್ಷಾಂತರ ಜನ ಈ ಕಾದಂಬರಿಯನ್ನು ಓದುತ್ತಿದ್ದಾರೆ. ವಿಷಯಲಾಂಪಟ್ಯದ ವಿವರವಾದ ವಿಶ್ಲೇಷಣೆ ಇದೆ ಎಂಬುದೂ ಈ ಕಾದಂಬರಿಯ ಜನಪ್ರಿಯತೆಗೆ ಇರಬಹುದಾದ ಒಂದು ಕಾರಣ. ಈ ಗ್ರಂಥದ ಮುನ್ನುಡಿ ಕಲೆಗಾಗಿ ಕಲೆ ಎನ್ನುವ ಪಂಥದವರ ಘೋಷಣೆಯಂತಿದೆ. ಇದರಲ್ಲಿ ಗೋಟ್ಯಾ ಪತ್ರಿಕೋದ್ಯಮಿ ಲೇಖಕರ ಮೌಡ್ಯವನ್ನೂ ನಿಯೋಕ್ಲಾಸಿಕಲ್ ಕಲಾತತ್ತ್ವಗಳ ಜಡತ್ವವನ್ನೂ ಮಧ್ಯಮವರ್ಗದವರ ಹುಸಿ ನೀತಿ-ನೇಮಗಳ ಠಕ್ಕುಗಾರಿಕೆಯನ್ನೂ ನಿರ್ದಾಕ್ಷಿಣ್ಯವಾಗಿ ಹಂಗಿಸಿದ್ದಾನೆ. ಕಲೆಗಾರನ ಅನನ್ಯ ಸ್ವಾತಂತ್ರ್ಯವನ್ನು ಸಮರ್ಥಿಸುವ ಈ ಮುನ್ನುಡಿ ಸಾಹಿತ್ಯ ವಿಮರ್ಶೆಯಲ್ಲಿ ಒಂದು ಮಹತ್ತ್ವದ ಕೃತಿ ಎನ್ನುವುದುಂಟು. ಪತ್ರಿಕೋದ್ಯೋಗಿ ಲೇಖಕರನ್ನು ಂದ ಗೊಟ್ಯಾ ಸ್ವತಃ ಪತ್ರಿಕೋದ್ಯಮದ ವ್ಯವಸಾಯದಿಂದ ಬದುಕಬೇಕಾಗಿ ಬಂತು. ಸಂಪಾದಕನಾಗಿ ನಾಟಕ ಮತ್ತು ಕಲಾ ವಿಮರ್ಶಕನಾಗಿ, ಲಘು ಪ್ರವಾಸ ಕಥನಗಳನ್ನೂ ಸಾಮಯಿಕವಾದ ನೂರಾರು ಲೇಖನಗಳನ್ನೂ ಗೀಚಿ ಸಂಸಾರ ನಡೆಸಬೇಕಾಯಿತು. ಹೀಗೆ ಬಹು ಕಷ್ಟಕೋಟಲೆಗೆ ಸಿಕ್ಕಿದ ಈತನ ಜೀವನದಲ್ಲಿ ಚಾರ್ಲೆಟ್ ಗ್ರಿಸಿ ಎಂಬ ನಟಿಯನ್ನು ಪ್ರೀತಿಸುತ್ತಿದ್ದ ಕಾಲವೇ ಅತ್ಯಂತ ಸುಖಕರ ಗಳಿಗೆಗಳಾದುವು. ಗೋಟ್ಯಾಗೆ ನಿಜವಾದ ಖ್ಯಾತಿ ದೊರಕಿದ್ದು ಈತ ಬರೆದ ಕಾವ್ಯದಿಂದ, ಈತನಿಗಿಂತ ಉನ್ನತ ಮಟ್ಟದ ಕವಿ ಎನಿಸಿಕೊಂಡ ಷಾರ್ಲ್ ಬೋಡ್‌ಲಾ‌ ಈತನನ್ನು ಬಹಳವಾಗಿ ಪ್ರಶಂಸಿಸಿ ತನ್ನ ಮಾರ್ಗದರ್ಶಕನೆಂದು ಗೌರವಿಸಿದ್ದಾನೆ. ಗೋಟ್ಯಾನ ಕವನಗಳು ಕಿಂಚಿತ್ತೂ ಊನವಿಲ್ಲದ ಮುತ್ತಿನಂಥ ಉತ್ಕೃಷ್ಟ ರಚನೆಗಳು, ಎನಾಮೆಲ್ಸ್ ಅಂಡ್ ಕೇಮಿಯೋಸ್ (1852) ಎನ್ನುವ ಕವನಗುಚ್ಛದಲ್ಲಿ ಈತನ ಮಹತ್ತ್ವಪೂರ್ಣ ಕವನಗಳೆಲ್ಲವೂ ಇವೆ. ಮ್ಯಾಡ್ ಮ್ಯಾಪಲ್ ಮೋಸಿನ್ ಗ್ರಂಥದ ಮುನ್ನುಡಿಯಲ್ಲಿ ಘೋಷಿಸಿದ ಕಲಾತತ್ತ್ವಗಳನ್ನು ಗೋಟ್ಯಾ ತನ್ನ ಕವನಗಳಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದಾನೆ. ಇಲ್ಲಿ ಭಾವಕ್ಕಾಗಲೀ ವಿಚಾರಗಳಿಗಾಗಲೀ ಎಡೆಯಿಲ್ಲ. ಎಚ್ಚರಿಕೆಯಿಂದ ಉಜ್ಜಿ ಉಜ್ಜಿ ಹೊಳಪಿಸಿದ ಮಾತಿನ ಚೂಪುಗಾರಿಕೆ, ವರ್ಣನೆಗಳ ಸಮೃದ್ಧಿ, ಅಭಿವ್ಯಕ್ತಿಯ ಕಲಾವಂತಿಕೆ-ಇವಕ್ಕೆ ಹೆಚ್ಚು ಪ್ರಾಧಾನ್ಯ. ನಿಲೆ, ಸಂಗೀತ, ಕಾವ್ಯಗಳೆಲ್ಲವನ್ನು ಕರಗತ ಮಾಡಿಕೊಂಡಿದ್ದರಿಂದ ಕೋಟ್ಯಾ ಅವೆಲ್ಲವನ್ನೂ ಇಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದ್ದಾನೆ. ಸಿಂಫನಿ ಇನ್ ವೈಟ್ ಮೇಜರ್ ಎಂಬುದು ಒಂದು ಅಪೂರ್ವ ಕವನ. ಆರ್ಟ್ ಎನ್ನುವ ಇನ್ನೊಂದು ಕವನದಲ್ಲಿ ತನ್ನ ಎಲ್ಲ ತತ್ತ್ವಗಳನ್ನೂ ಕೆವಿ ನವುರಾಗಿ ಅಡಗಿಸಿದ್ದಾನೆ. ಕೈಗೆ ಎಟುಕದೆ ನುಣುಚಿಕೊಂಡು ಹೋಗುವ ಪ್ರಕಾರಗಳನ್ನೂ ಹಿಡಿದು ಬಗ್ಗಿಸಲಾಗದ ಕಾವ್ಯ ಸಾಮಗ್ರಿಗಳನ್ನೂ ಪಳಗಿಸಿ ಅವುಗಳೊಂದಿಗೆ ಕಸರತ್ತು ಮಾಡುವುದರಲ್ಲೇ ಕವಿ ತನ್ನ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾನೆ ಎಂಬ ಟೀಕೆಗೆ ಪಕ್ಕಾಗಿರುವ ಈತ ಈ ಕವನದಲ್ಲಿ ಬಲು ಕ್ಲಿಷ್ಟಪದ್ಯರೂಪವೊಂದನ್ನು ಎಷ್ಟೊಂದು ಸುಲಲಿತವಾಗಿ ನಿರ್ವಹಿಸಿ ತನ್ನ ಸೂತ್ರಗಳನ್ನು ಉದಾಹರಿಸಿದ್ದಾನೆ ಎಂಬುದನ್ನು ನೋಡಬಹುದು. ಕಲೆಗೆ, ಹೊರಗಿನ ಏನೊಂದು ಉಪಾಧಿಯೂ ಬೇಕಿಲ್ಲ ಅದು ತನ್ನನ್ನು ತಾನೇ ಸಮರ್ಥಿಸಿಕೊಳ್ಳುವಂಥದು. ಮಾನವ ನಿರ್ಮಿತಿಗಳಲ್ಲಿ ಅದು ಬಹುಕಾಲ ಬೆಲೆಬಾಳುವಂಥದು - ನಗರವೊಂದು ನಾಶವಾಗಿ ಹೋದ ಮೇಲೂ ಅದರ ನಡುವಣ ಶಿಲ್ಪಾಕೃತಿ ನಿಂತೇ ಇರುತ್ತದೆ. ದೇವಾಧಿದೇವತೆಗಳೆಲ್ಲ ಸತ್ತರೂ ಕಂಚಿನಾಕೃತಿಗಿಂತ ಕಾವ್ಯ ಹೆಚ್ಚು ಕಾಲ ಬದುಕಿರಬಲ್ಲದು- ಗೋಟ್ಯಾನ ಈ ಮಾತುಗಳು ಈತ ಪ್ರಾರಂಭಿಸಿದ ಚಳವಳಿಯ ಬೀಜಮಂತ್ರ ಎಂಬುದಾಗಿ ವಿಮರ್ಶಕರ ಅಭಿಮತ. (ಎಚ್.ಕೆ.ಆರ್.) ಗೋಡಂಬಿ : ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ (ಕ್ಯಾಷ್ಟೂ). ಗೇರು, ಕಾಜು, ಮುಂದಿರಿಪಪ್ಪು ಪರ್ಯಾಯನಾಮಗಳು, ಅನಕಾರ್ಡಿಯಮ್ ಆಕ್ಸಿಡೆಂಟೇಲ್ ಇದರ ವೈಜ್ಞಾನಿಕ ಹೆಸರು. ಗೋಡಂಬಿಯ ತವರು ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್. 16ನೆಯ ಶತಮಾನದಲ್ಲಿ ಪೋರ್ಚುಗೀಸರು ಬ್ರೆಜಿಲಿನಿಂದ ಗೋಡಂಬಿಯನ್ನು ಭಾರತಕ್ಕೂ ಆಫ್ರಿಕಕ್ಕೂ ತಂದರು. ಭಾರತದಲ್ಲಿ ಮೊಟ್ಟಮೊದಲು ಗೋವೆಯ ಕಡಲತೀರಗಳಲ್ಲಿ ಇದರ ಬೆಳೆ ಆರಂಭವಾಯಿತು. ಕಾಲಕ್ರಮೇಣ ಭಾರತದ ಸಮುದ್ರ ತೀರಪ್ರದೇಶಗಳಲ್ಲೆಲ್ಲ ಹರಡಿದ ಇದು ಮಲಯ ಮುಂತಾದ ದೇಶಗಳಿಗೂ ಕಾಲಿಟ್ಟಿತು. ಭಾರತದಲ್ಲಿ ಮಹಾರಾಷ್ಟ್ರ ಕೇರಳ, ಕರ್ನಾಟಕ, ಗೋವ, ತಮಿಳುನಾಡು, ಆಂಧ್ರರಾಜ್ಯಗಳಲ್ಲಿ ಅಧಿಕ ಪ್ರಮಾಣಗಳಲ್ಲೂ ಒರಿಸ್ಸ ಮತ್ತು ಬಂಗಾಲಗಳಲ್ಲಿ ಅಲ್ಪ ಪ್ರಮಾಣದಲ್ಲೂ ಗೋಡಂಬಿಯ ಬೇಸಾಯ ಇದೆ. ಗೋಡಂಬಿ ಬೆಳೆಗೆ ಹೆಸರಾಗಿರುವ ಇನ್ನಿತರ ದೇಶಗಳು ಪೂರ್ವ ಆಫ್ರಿಕ, ಬ್ರೆಜಿಲ್ ಮತ್ತು ಪೋರ್ಚುಗಲ್, ಗೋಡಂಬಿ ಹಣ್ಣು-ಎಲೆ ಗೋಡಂಬಿ ಮರ ಮಧ್ಯಮ ಗಾತ್ರದ್ದು; 5-10 ಮೀ ಎತ್ತರಕ್ಕೆ ಬೆಳೆಯುತ್ತದೆ. ಅನೇಕ ಕವಲುಗಳಿಂದ ಕೂಡಿ ಹರಡಿಕೊಂಡು ಚೆಲುವಾಗಿ ಕಾಣುತ್ತದೆ. ಎಲೆಗಳು ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವುಗಳ ಉದ್ದ 6-20 ಸೆಂಮೀ, ಅಗಲ 4-15 ಸೆಂಮೀ. ತುದಿ ಗುಂಡಾಗಿರುತ್ತದೆ. ಕೆಲವೊಮ್ಮೆ ತುದಿಯಲ್ಲಿ ಕಚ್ಚು ಇರಬಹುದು; ಎಲೆಯ ಬುಡ ಕ್ರಮೇಣ ಕಿರಿದಾಗುತ್ತ ಬಂದು ತೊಟ್ಟಿನೊಡನೆ ಸೇರುತ್ತದೆ. ಎಲೆಯ ಆಕಾರ ದೀರ್ಘ ಅಂಡದಂತೆ, ಮೇಲೆ ರೋಮರಹಿತವೂ ತುಸು ಹೊಳಪುಳ್ಳದ್ದೂ ಆಗಿ